Tag: police

  • ವ್ಯಕ್ತಿಗೆ ಅರ್ಧ ತಲೆ ಬೋಳಿಸಿ, ಲಂಗ ಹಾಕಿ, ಅರೆ ಬೆತ್ತಲು ಮಾಡಿ ಊರೆಲ್ಲಾ ಮೆರವಣಿಗೆ

    ವ್ಯಕ್ತಿಗೆ ಅರ್ಧ ತಲೆ ಬೋಳಿಸಿ, ಲಂಗ ಹಾಕಿ, ಅರೆ ಬೆತ್ತಲು ಮಾಡಿ ಊರೆಲ್ಲಾ ಮೆರವಣಿಗೆ

    ವಿಜಯಪುರ: ಯುವತಿವೊಬ್ಬಳನ್ನು ಚೂಡಾಯಿಸಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರು ಮತ್ತು ಯುವತಿಯ ಕುಟುಂಬದವರು ಸೇರಿ ಅರಬೆತ್ತಲೆಗೊಳಿಸಿ ಮೆರವಣಿಗೆ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಸಿಂದಗಿ ತಾಲೂಕಿನ ಹಿಟ್ನಳ್ಳಿ ತಾಂಡಾದಲ್ಲಿ ಈ ಘಟನೆ ನಡೆದಿದೆ. ಶಂಕರ್(43) ಎಂಬಾತ ತಾಂಡಾದಲ್ಲಿರುವ ಯವತಿನ್ನು ಚೂಡಾಯಿಸುತ್ತಿದ್ದ. ಹೀಗಾಗಿ ಅಲ್ಲಿಯ ಗ್ರಾಮಸ್ಥರು ಮತ್ತು ಯುವತಿಯ ಕುಟುಂಬದವರು ಸೇರಿ ಶಂಕರ್‍ಗೆ ಲಂಗ ತೊಡಿಸಿ, ಅರ್ಧ ತಲೆ ಬೋಳಿಸಿ ಊರು ತುಂಬ ಮೆರವಣಿಗೆ ಮಾಡಿದ್ದಾರೆ.

    ಈ ಘಟನೆ ಜುಲೈ 11 ರಂದು ನಡೆದಿದದ್ದು ತಡವಾಗಿ ಬೆಳಕಿಗೆ ಬಂದಿದೆ. ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಆರೋಪಿ ಶಂಕರ್‍ನನ್ನು ಬಂಧಿಸಿದ್ದು ಪೊಲೀಸರು ತನಿಖೆ ಮಂದುವರೆಸಿದ್ದಾರೆ.

    https://youtu.be/E56QglLzlbM

  • ಯಾದಗಿರಿ: ಹೆತ್ತ ತಾಯಿಯನ್ನೇ ಕೊಲೆಗೈದ ಪಾಪಿ ಮಗ

    ಯಾದಗಿರಿ: ಹೆತ್ತ ತಾಯಿಯನ್ನೇ ಕೊಲೆಗೈದ ಪಾಪಿ ಮಗ

    ಯಾದಗಿರಿ: ಮಗನೊಬ್ಬ ತನ್ನ ಹೆತ್ತತಾಯಿಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಚಟ್ನಳ್ಳಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ತಿಪ್ಪಮ್ಮ ಎಂಬವರೇ ಮಗನಿಂದ ಕೊಲೆಯಾದ ತಾಯಿ. ತಿಪ್ಪಮ್ಮರ ಮಗ ಈಶ್ವರಪ್ಪ ಈ ಕೃತ್ಯವೆಸಗಿದ್ದಾನೆ. ಜುಲೈ 7ರಂದು ಈಶ್ವರಪ್ಪ ತಾಯಿಯನ್ನು ಕೊಲೆ ಮಾಡಿದ್ದು, ಕೆಳಗೆ ಬಿದ್ದು ಅಮ್ಮ ಮೃತಪಟ್ಟಿದ್ದಾರೆಂದು ಸಂಬಂಧಿಕರಿಗೆ ತಿಳಿಸಿ ಅಂತ್ಯಸಂಸ್ಕಾರ ಸಹ ಮಾಡಿದ್ದ.

    ಈಶ್ವರಪ್ಪನ ನಡುವಳಿಕೆಯಿಂದ ಅನುಮಾನಗೊಂಡ ತಿಪ್ಪಮ್ಮರ ಸಹೋದರ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈಶ್ವರಪ್ಪ ತಾಯಿಯನ್ನು ಸಾಕಲಾಗದೇ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.

    ಇದನ್ನೂ ಓದಿ: ಅಣ್ಣನ ಗುಂಡೇಟಿಗೆ ತಮ್ಮ ಬಲಿ: ಕೊಡಗಿನಲ್ಲಿ ಅಮಾನವೀಯ ಘಟನೆ

    ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಸಹಾಯಕ ಆಯುಕ್ತ ಡಾ.ಜಗದೀಶ ಹಾಗೂ ಶಹಾಪುರ ಪೊಲೀಸರ ನೇತೃತ್ವದಲ್ಲಿ ಹೂತಿರುವ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

    ಈ ಸಂಬಂಧ ಆರೋಪಿ ಈಶ್ವರಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

     

     

  • ನನಗೆ ಮಾತ್ರ ನೋಟಿಸ್ ನೀಡಿ ಟಾರ್ಗೆಟ್ ಮಾಡಿದ್ದು ಯಾಕೆ: ಸಿಎಂಗೆ ರೂಪಾ ಪ್ರಶ್ನೆ

    ನನಗೆ ಮಾತ್ರ ನೋಟಿಸ್ ನೀಡಿ ಟಾರ್ಗೆಟ್ ಮಾಡಿದ್ದು ಯಾಕೆ: ಸಿಎಂಗೆ ರೂಪಾ ಪ್ರಶ್ನೆ

    ಬೆಂಗಳೂರು: ಪರಪ್ಪನ ಅಗ್ರಹಾರದ ಅವ್ಯವಹಾರವನ್ನು ಬಯಲು ಮಾಡಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿರುವ ಡಿಐಜಿ ರೂಪಾ ಅವರು ನನಗೆ ಮಾತ್ರ ನೋಟಿಸ್ ನೀಡಿದ್ದು ಯಾಕೆ ಎಲ್ಲರ ಬಗ್ಗೆಯೂ ತನಿಖೆ ನಡೆಯಲಿ ಎಂದು ಆಗ್ರಹಿಸಿದ್ದಾರೆ.

    ಈ ಹಿಂದೆ ಐಪಿಎಸ್ ಅಧಿಕಾರಿಯಾಗಿದ್ದ ಸೋನಿಯಾ ನಾರಂಗ್ ಮೇಲೆ ಗಣಿಗಾರಿಕೆ ಆರೋಪದ ಬಂದಿತ್ತು. ಈ ವೇಳೆ ಅವರೇ ಮಾಧ್ಯಮಗಳ ಮುಂದೆ ಬಂದು ನನ್ನ ಮೇಲಿನ ಆರೋಪ ಸುಳ್ಳು ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ಸಿಎಂ ಈ ರೀತಿಯ ಆರೋಪ ಮಾಡುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಈಗ ನಾನು ಮಾಧ್ಯಮದ ಮುಂದೆ ಬಂದಿದ್ದೆ ತಪ್ಪಾಯ್ತು ಎನ್ನುವ ಹಾಗೆ ಸಿಎಂ ಮಾತನಾಡ್ತಿದ್ದಾರೆ ಎಂದು ಹೇಳಿದರು.

    ಮಾಧ್ಯಮ ಮುಂದೆ ನಾನು ಯಾವುದೇ ವರದಿ ಕೊಟ್ಟಿಲ್ಲ. ಅನ್ಯಾಯ ನಡೆಯುತ್ತಿದೆ ಅಂತ ಅಷ್ಟೇ ಹೇಳಿದ್ದೆ. ಆದ್ರೆ ನನ್ನನ್ನೇ ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಎಲ್ಲರ ಬಗ್ಗೆಯೂ ತನಿಖೆಗೆ ಆದೇಶ ಮಾಡಲಿ ಎಂದು ಸವಾಲು ಹಾಕಿದರು.

    ಮಾಧ್ಯಮದ ಮುಂದೆ ನಾನು ಹೋಗಿಲ್ಲ. ಅಷ್ಟೇ ಅಲ್ಲದೇ ವರದಿ ಬಗ್ಗೆ ನಾನು ಮಾತನಾಡಿಲ್ಲ, ವರದಿ ಕೊಟ್ಟಿದ್ದೇನೆ ಎಂದು ಹೇಳಿದ್ದೇನೆ. ಆದರೆ ವರದಿ ಬಗ್ಗೆ ಮಾತನಾಡಿದ್ದು ಡಿಜಿ ಅವರು. ತನಿಖೆಗೆ ಆದೇಶ ನೀಡಿದ್ದನ್ನು ಸ್ವಾಗತ ಮಾಡುತ್ತೇನೆ. ನನ್ನನ್ನ ಸೇರಿದಂತೆ ಎಲ್ಲಾ ಅಧಿಕಾರಿಗಳನ್ನ ತನಿಖೆಗೆ ಒಳಪಡಿಸಿ. ಈ ವಿಚಾರಕ್ಕೆ ನನ್ನನ್ನು ಮಾತ್ರ ಟಾರ್ಗೆಟ್ ಮಾಡುವುದು ಸರಿಯಲ್ಲ ಎಂದು ಹೇಳಿದರು.

    ಇದನ್ನೂ ಓದಿ: ಪದೇ ಪದೇ ಮಾಧ್ಯಮಗಳ ಮುಂದೆ ಹೋಗುವ ಅಧಿಕಾರಿಗಳಿಗೆ ನೋಟಿಸ್: ಸಿಎಂ

     

    https://youtu.be/VUvHqCfFg0E

     

    https://youtu.be/5NYUIeTEy-8

  • ಇಂಡಿಯ ಮಾಜಿ ಶಾಸಕ ರವಿಕಾಂತ ಪಾಟೀಲ್ ಹಾಗೂ ಸಹಚರರ ಬಂಧನ

    ಇಂಡಿಯ ಮಾಜಿ ಶಾಸಕ ರವಿಕಾಂತ ಪಾಟೀಲ್ ಹಾಗೂ ಸಹಚರರ ಬಂಧನ

    ವಿಜಯಪುರ: ಮರಳುಗಾರಿಕೆ ಸಂಬಂಧ ತಪ್ಪಾಗಿ ತಿಳಿದು ಬೇರೊಬ್ಬ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಇಂಡಿಯ ಮಾಜಿ ಶಾಸಕ ರವಿಕಾಂತ ಪಾಟೀಲ ಮತ್ತು ಆತನ ಮೂರು ಸಹಚರರನ್ನು ಪೊಲೀಸರು ಬಂಧಿಸಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

    ಇಂಡಿ ತಾಲೂಕಿನ ರೇವತಗಾಂವ ಗ್ರಾಮದ ಕಾಮೇಶ ಪಾಟೀಲ್ ಮತ್ತು ಸ್ನೇಹಿತರಾದ ಮಳಸಿದ್ದಯ್ಯಾ ಹಿರೇಮಠ ಹಾಗೂ ಶಿವಾನಂದ ವಡ್ಡರ ಮೇಲೆ ಮಾರಣಾಂತಿಕವಾಗಿ ಗುರುವಾರ ತಡರಾತ್ರಿ ಝಳಕಿ-ಧೂಳಖೇಡ ರಾಷ್ಟ್ರೀಯ ಹೆದ್ದಾರಿಯಲ್ಲಿ ರವಿಕಾಂತ ಪಾಟೀಲ ಮತ್ತು ಸಹಚರರು ಹಲ್ಲೆ ಮಾಡಿದ್ದಾರೆ.

    ಅಲ್ಲದೆ ಹಲ್ಲೆ ಬಳಿಕ ಕಾಮೇಶ ಹಾಗೂ ಆತನ ಗೆಳೆಯರ ದುಡ್ಡು ಮತ್ತು ಬಂಗಾರ ಕಿತ್ತುಕೊಂಡು ಹೋಗಿದ್ದಾರೆಂದು ಕಾಮೇಶ ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿ ಮಾಜಿ ಶಾಸಕ ರವಿಕಾಂತ ಪಾಟೀಲ ಸೇರಿದಂತೆ ಮೂವರನ್ನು ಝಳಕಿ ಪೊಲೀಸರು ಬಂಧಿಸಿ ವಿಜಯಪುರದ ದರ್ಗಾ ಕೇಂದ್ರ ಕಾರಾಗೃಹಕ್ಕೆ ಕಳಿಸಿದ್ದಾರೆ.

    ಮರಳುಗಾರಿಕೆ ಸಂಬಂಧ ರವಿಕಾಂತ ಪಾಟೀಲ್ ಮತ್ತು ಮಹಾರಾಷ್ಟ್ರದ ಪಿಂಟೂಗೌಡ ಎಂಬವರ ಮಧ್ಯೆ ವೈಷಮ್ಯವಿತ್ತು. ಈ ಹಿನ್ನೆಲೆಯಲ್ಲಿ ಸ್ಕಾರ್ಪಿಯೊದಲ್ಲಿ ತೆರಳುತ್ತಿದ್ದ ಕಾಮೇಶ ಪಾಟೀಲ್ ಅವರನ್ನು ಪಿಂಟೂಗೌಡ ಎಂದು ತಿಳಿದು ಕಾಮೇಶಗೌಡಾ ಸ್ನೇಹಿತರ ಮೇಲೆ ಮಾರಣಾಂತಿಕ ಹಲ್ಲೆಯನ್ನು ಮಾಜಿ ಶಾಸಕ ರವಿಕಾಂತ ಪಾಟೀಲ್ ಮತ್ತು ಸಹಚರರು ಮಾಡಿದ್ದಾರೆ.

    ಈ ಕುರಿತು ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರೌಡಿಶೀಟರ್‍ನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ 6 ಆರೋಪಿಗಳ ಬಂಧನ

    ರೌಡಿಶೀಟರ್‍ನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ 6 ಆರೋಪಿಗಳ ಬಂಧನ

    ರಾಮನಗರ: ರೌಡಿಶೀಟರ್‍ನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಆರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

    ಎರಡು ದಿನದ ಹಿಂದೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಸೋಲೂರು ಸಮೀಪ ಈ ಘಟನೆ ನಡೆದಿತ್ತು. ಬೆಂಗಳೂರಿನ ನಂದಿನಿ ಲೇಔಟ್ ನ ಇಮ್ರಾನ್‍ನನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಕುದೂರು ಪೊಲೀಸರು ಆರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪ್ರೇಮ್ ಕುಮಾರ್, ಜಮೀರ್ ಪಾಷಾ, ಇಮ್ರಾನ್ ಖಾನ್, ಬಾಜಿ, ಬಾಬು, ಇನಾಯತ್ ಖಾನ್ ಬಂಧಿತ ಆರೋಪಿಗಳು. ಕೊಲೆಯಾದ ರೌಡಿಶೀಟರ್ ಕಿರುಕುಳ ತಾಳಲಾರದೆ ಕೊಲೆ ಮಾಡಿರುವುದಾಗಿ ಆರೋಪಿಗಳು ಬಾಯ್ ಬಿಟ್ಟಿದ್ದಾರೆ.

    ಮಾಗಡಿ ತಾಲೂಕಿನ ಕುದೂರು ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ಮಾರಕಾಸ್ತ್ರಗಳನ್ನ ವಶಪಡಿಸಿಕೊಂಡಿದ್ದು, ವಿಚಾರಣೆ ಮುಂದುವರೆಸಿದ್ದಾರೆ. ಈ ಆರೋಪಿಗಳು ಇಮ್ರಾನ್‍ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಕುದೂರು-ಸೋಲೂರು ರಸ್ತೆಯ ಭೈರವೇಶ್ವರ ಫಾರ್ಮ್ ಹೌಸ್ ಬಳಿ ಶವವನ್ನು ನಿರ್ಜನ ಪ್ರದೇಶದಲ್ಲಿ ಬಿಸಾಡಿದ್ದರು.

    ಕೊಲೆಯಾದ ಇಮ್ರಾನ್ ಮೇಲೆ 2014 ರಲ್ಲಿ ರೌಡಿಶೀಟ್ ತೆರೆಯಲಾಗಿತ್ತು ಎಂದು ತಿಳಿದುಬಂದಿದೆ.

  • ಅತ್ಯಾಚಾರಕ್ಕೊಳಗಾದ ಬಾಲಕಿಯ ಕುಟುಂಬಕ್ಕೆ ದರ್ಗಾ ಸಮಿತಿಯಿಂದ ಬಹಿಷ್ಕಾರ

    ಅತ್ಯಾಚಾರಕ್ಕೊಳಗಾದ ಬಾಲಕಿಯ ಕುಟುಂಬಕ್ಕೆ ದರ್ಗಾ ಸಮಿತಿಯಿಂದ ಬಹಿಷ್ಕಾರ

    ಬೀದರ್: ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿಯ ಕುಟುಂಬಕ್ಕೆ ದರ್ಗಾ ಸಮಿತಿ ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನಲ್ಲಿ ನಡೆದಿದೆ.

    ತಾಲೂಕಿನ ಹಳ್ಳಿಖೇಡ್ ಬಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅತ್ಯಾಚಾರ ಮಾಡಿದವರಿಗೆ ಶಿಕ್ಷೆ ನೀಡುವುದನ್ನು ಬಿಟ್ಟು ಅತ್ಯಾಚಾರಕ್ಕೆ ಒಳಗಾದ ಕುಟುಂಬಕ್ಕೆ ಬಹಿಷ್ಕಾರ ಹಾಕಿ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಲಾಗಿದೆ.

    ಅತ್ಯಾಚಾರದ ವಿರುದ್ಧ ಪೊಲೀಸರಿಗೆ ನೀಡಿದ ದೂರು ವಾಪಸ್ ತೆಗೆದುಕೊಳ್ಳಿ ಎಂದು ಮೌಲಾಲಿ ಮತ್ತು ದರ್ಗಾ ಸಮಿತಿ ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಕುಟುಂಬಕ್ಕೆ ಒತ್ತಡ ಹೇರಿದ್ದು, 20 ದಿನಗಳಿಂದ ಕುಟುಂಬವನ್ನ ಗ್ರಾಮದಿಂದ ಬಹಿಷ್ಕಾರ ಹಾಕಿದೆ.

    ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಬಳಿಕ ಆರೋಪಿ ಅಕ್ರಮ್ ಶಾ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕುವ ಬೆದರಿಕೆಯೊಡ್ಡಿದ್ದ. ನಂತರ ಪೋಷಕರು ಮದುವೆಗೆ ಬಾರದೆ ಇದ್ದರೂ ದರ್ಗಾ ಸಮಿತಿಯಲ್ಲಿ ಮದುವೆ ಮಾಡಲಾಗಿತ್ತು. ನಂತರ ಆರೋಪಿ ಅಕ್ರಮ್ ಶಾ ಬಾಲಕಿಯನ್ನು ಗರ್ಭಿಣಿ ಮಾಡಿ, ನಿನಗೆ ಅಡುಗೆ ಬರಲ್ಲ ಎಂದು ಹೇಳಿ ಹೊರಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

    4 ತಿಂಗಳ ಹಿಂದೆ ಈ ಕುರಿತು ಹಳ್ಳಿಖೇಡ್ ಬಿ ಪೊಲೀಸ್ ಠಾಣೆಯಲ್ಲಿ ಅಕ್ರಮ್ ಹಾಗೂ ಮದುವೆಗೆ ಸಹಕರಿಸಿದವರ ವಿರುದ್ಧ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆದ್ರೆ ಅಕ್ರಮ್‍ನನ್ನು ಮಾತ್ರ ಬಂಧಿಸಿದ್ದು ಇನ್ನುಳಿದ ಆರೋಪಿಗಳನ್ನು ಬಂಧಿಸಿಲ್ಲ. ಅಲ್ಲದೆ ಮೌಲಾಲಿ ಸುಲೇಮಾನ್ ಹಮ್ಮದ್ ಬಾಲಕಿಯ ಕುಟುಂಬಸ್ಥರಿಂದ ಒತ್ತಾಯ ಪೂರ್ವಕವಾಗಿ ಸಹಿ ಮಾಡಿಸಿಕೊಂಡು, ಅವಾಚ್ಯ ಶಬ್ಧಗಳಿಂದ ನಿಂದಿಸಿ ಗ್ರಾಮದಿಂದ ಬಹಿಷ್ಕಾರ ಹಾಕಿದ್ದಾರೆ.

    ಹೀಗಾಗಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯ ಇದೆಯೋ ಅಥವಾ ಸತ್ತಿದೆಯೋ ಎಂದು ಅಖಿಲ ಕರ್ನಾಟಕ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆಎಸ್ ಲಕ್ಷ್ಮಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

     

  • ಶಾಲೆಗೆ ಹೋಗುತ್ತಿದ್ದ ವೇಳೆ ಟ್ರ್ಯಾಕ್ಟರ್ ನಿಂದ ಬಿದ್ದು ಬಾಲಕಿ ಸಾವು

    ಶಾಲೆಗೆ ಹೋಗುತ್ತಿದ್ದ ವೇಳೆ ಟ್ರ್ಯಾಕ್ಟರ್ ನಿಂದ ಬಿದ್ದು ಬಾಲಕಿ ಸಾವು

    ಹಾವೇರಿ: ಶಾಲೆಗೆ ತೆರಳುತ್ತಿದ್ದ ವೇಳೆ ಟ್ರ್ಯಾಕ್ಟರ್ ನಿಂದ ಬಿದ್ದು ಬಾಲಕಿ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ಬಳಿ ನಡೆದಿದೆ.

    ಮೃತ ಬಾಲಕಿಯನ್ನ ಕಾಕೋಳ ತಾಂಡಾದ ನಿವಾಸಿ ಕಾವ್ಯಾ ಲಮಾಣಿ(16) ಎಂದು ಗುರುತಿಸಲಾಗಿದೆ. ಬೆಳಗ್ಗೆ ತಾಂಡಾದಿಂದ ರಾಣೇಬೆನ್ನೂರು ನಗರದ ರಾಜರಾಜೇಶ್ವರಿ ಶಾಲೆ ಗೆ ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

    ಬಾಲಕಿ ಕಾವ್ಯಾ ರಾಜರಾಜೇಶ್ವರಿ ಹೈಸ್ಕೂಲ್ ನಲ್ಲಿ 10 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಕಾಕೋಳ ತಾಂಡಾದಿಂದ ಟ್ರ್ಯಾಕ್ಟರ್ ನಲ್ಲಿ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದ್ದು, ಘಟನೆಯ ಸ್ಥಳದಿಂದ ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದಾರೆ.

    ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಜೋಳವನ್ನ ಸರಿಯಾಗಿ ಬೇಯಿಸಿ ಕೊಡ್ಲಿಲ್ಲವೆಂದು ಬಾಲಕನ ಮೇಲೆ ಪೊಲೀಸ್ ಪೇದೆ ಹಲ್ಲೆ

    ಜೋಳವನ್ನ ಸರಿಯಾಗಿ ಬೇಯಿಸಿ ಕೊಡ್ಲಿಲ್ಲವೆಂದು ಬಾಲಕನ ಮೇಲೆ ಪೊಲೀಸ್ ಪೇದೆ ಹಲ್ಲೆ

    ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಪೇದೆ ಮತ್ತು ಹೆಂಡತಿ ಅಮಾಯಕ ಸಣ್ಣ ವ್ಯಾಪಾರಸ್ಥನ ಮೇಲೆ ಹಲ್ಲೆ ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ.

    ನಗರದ ಗಾಂಧಿ ಚೌಕ ಬಳಿ ಅಪ್ರಾಪ್ತ ಬಾಲಕ ಶೋಹೆಲ್ ಹುಸೇನ್ ರಾಮಪುರ್ ಎಂಬಾತನ ಮೇಲೆ ಹಲ್ಲೆ ಮಾಡಿದ್ದಾರೆ. ಮೆಕ್ಕೆತೆನೆ(ಜೋಳ)ವನ್ನ ಸರಿಯಾಗಿ ಬೇಯಿಸಿ ಕೊಡಲಿಲ್ಲ ಅನ್ನೋ ಕಾರಣಕ್ಕೆ ಬಾಲಕನ ಮೇಲೆ ಗಾಂಧಿಚೌಕ ಪೊಲೀಸ್ ಪೇದೆ ಎಸ್‍ಎಸ್ ಸಾಲೋಡ್ಗಿ ಮತ್ತು ಪತ್ನಿ ಸೇರಿ ಹಲ್ಲೆ ನಡೆಸಿದ್ದಾರೆ.

    ಸದ್ಯ ಹಲ್ಲೆಗೊಳಗಾದ ಬಾಲಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆದ್ರೆ ಹಲ್ಲೆ ಮಾಡಿದ ಪೇದೆ ಮೇಲೆ ದೂರು ದಾಖಲಿಸಲು ಹೋದರೆ ಗಾಂಧಿ ಚೌಕ ಪೊಲೀಸರು ಮಾತ್ರ ದೂರು ದಾಖಲಿಸದೆ ಬಾಲಕನ ಕುಟುಂಬಸ್ಥರನ್ನು ನಿಂದಿಸಿ ಕಳಿಸಿದ್ದಾರೆ ಎನ್ನಲಾಗಿದೆ. ಇದರಿಂದ ನ್ಯಾಯಕ್ಕಾಗಿ ಹಲ್ಲೆಗೊಳಗಾದ ಬಾಲಕ ಮತ್ತು ಕುಟುಂಬಸ್ಥರು ಗೋಗರೆಯುತ್ತಿದ್ದಾರೆ.

     

  • ದಕ್ಷಿಣ ಕನ್ನಡಕ್ಕೆ ಪೊಲೀಸ್ ಮುಖ್ಯಸ್ಥ ಆರ್‍ಕೆ ದತ್ತಾ ಭೇಟಿ

    ದಕ್ಷಿಣ ಕನ್ನಡಕ್ಕೆ ಪೊಲೀಸ್ ಮುಖ್ಯಸ್ಥ ಆರ್‍ಕೆ ದತ್ತಾ ಭೇಟಿ

    ಮಂಗಳೂರು: ಕೋಮು ಗಲಭೆಗೆ ಸಾಕ್ಷಿಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಪೊಲೀಸ್ ಮಹಾನಿರ್ದೇಶಕ ಆರ್‍ಕೆ ದತ್ತಾ ಭೇಟಿ ನೀಡಿದ್ದಾರೆ.

    ಗುರುವಾರ ರಾತ್ರಿಯೇ ಡಿಜಿಪಿ ದತ್ತಾ ಮಂಗಳೂರಿಗೆ ಆಗಮಿಸಿದ್ದಾರೆ. ಜುಲೈ 10ರಂದು ಬೆಂಗಳೂರಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಡಿಜಿಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಜಿಲ್ಲೆಗೆ ಭೇಟಿ ನೀಡುವಂತೆ ಸೂಚಿಸಿದ್ದರು. ಪಶ್ಚಿಮ ವಲಯ ಐಜಿಪಿ ಹರಿಶೇಖರನ್, ಎಸ್‍ಪಿ ಸುಧೀರ್ ಕುಮಾರ್ ರೆಡ್ಡಿ, ಮಂಗಳೂರು ಪೊಲೀಸ್ ಆಯುಕ್ತ ಸುರೇಶ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಡಿಜಿಪಿ ಆರ್‍ಕೆ ದತ್ತಾ ಸಭೆ ನಡೆಸಲಿದ್ದಾರೆ.

    ಕೊಲೆಯಾಗಿರುವ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ನಿವಾಸಕ್ಕೂ ದತ್ತಾ ಅವರು ಭೇಟಿ ನೀಡುವ ಸಾಧ್ಯತೆ ಇದೆ. ಬಂಟ್ವಾಳ ತಾಲೂಕಿನ ಸಜಿಪದಲ್ಲಿರುವ ಶರತ್ ನಿವಾಸಕ್ಕೆ ಭೇಟಿ ನೀಡಿ ಪೋಷಕರಿಂದ ಮಾಹಿತಿ ಪಡೆಯೋ ನಿರೀಕ್ಷೆ ಇದೆ. ಜೊತೆಗೆ ಕಲ್ಲು ತೂರಾಟ ನಡೆದ ಕೈಕಂಬ, ಬಿ.ಸಿ ರೋಡ್‍ಗೂ ಡಿಜಿ ಭೇಟಿ ನೀಡಲಿದ್ದಾರೆ.

  • ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು

    ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು

    ಉಡುಪಿ: ಒಂದೇ ಕುಟುಂಬದ ನಾಲ್ವರು ಸೈನೈಡ್ ಸೇವಿಸಿ ತಿಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉಡುಪಿಯ ಪಡುಬೆಳ್ಳೆಯಲ್ಲಿ ನಡೆದಿದೆ.

    ಶಂಕರ ಆಚಾರ್ಯ (50) ನಿರ್ಮಲಾ ಆಚಾರ್ಯ(44) ಅವರ ಮಕ್ಕಳಾದ ಶ್ರೇಯಾ( 22) ಶೃತಿ (23) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು.

    ಶಂಕರ್ ಆಚಾರ್ಯ ಅವರು ಕಳೆದ 30 ವರ್ಷದದಿಂದ ಪಡುಬೆಳ್ಳೆಯಲ್ಲಿ ಜ್ಯುವೆಲ್ಲರಿ ಶಾಪ್ ನಡೆಸುತ್ತಿದ್ದರು. ಶ್ರೇಯಾ ಮಣಿಪಾಲದಲ್ಲಿ ಎಂಬಿಎ ವ್ಯಾಸಂಗ ಮಾಡುತಿದ್ದು, ಶೃತಿ ಮೂಡುಬಿದರೆಯಲ್ಲಿ ಎಂಬಿಎ ಪೂರ್ಣಗೊಳಿಸಿ, ಸಿಎ ಪರೀಕ್ಷೆ ಪಾಸಾಗಿದ್ದು, ಹೈದರಾಬಾದ್‍ನಲ್ಲಿ ಉದ್ಯೋಗದಲ್ಲಿರುವ ಕಾರ್ಕಳ ನಿವಾಸಿಯೊಂದಿದೆ ಆಗಸ್ಟ್ ನಲ್ಲಿ ಮದುವೆ ನಿಶ್ಚಿತವಾಗಿತ್ತು. ಆದರೆ ಈ ಕುಟುಂಬದ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

    ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.