Tag: police

  • ಪೊಲೀಸರಿಗೆ ಸರಿಯಾದ ಊಟ, ಮಲಗೋಕೆ ಜಾಗ ಇಲ್ಲ – ಇದು ದಕ್ಷಿಣ ಕನ್ನಡದ ಗಲಭೆ ಎಫೆಕ್ಟ್

    ಪೊಲೀಸರಿಗೆ ಸರಿಯಾದ ಊಟ, ಮಲಗೋಕೆ ಜಾಗ ಇಲ್ಲ – ಇದು ದಕ್ಷಿಣ ಕನ್ನಡದ ಗಲಭೆ ಎಫೆಕ್ಟ್

    ಮಂಗಳೂರು: ಕಳೆದೆರಡು ತಿಂಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಬೂದಿಮುಚ್ಚಿದ ಕೆಂಡದಂತಾಗಿತ್ತು. ಗಲಭೆ ನಿಯಂತ್ರಣಕ್ಕೆ ಸರ್ಕಾರವೇನೋ ಕಳೆದ 58 ದಿನಗಳಿಂದ ನಿಷೇಧಾಜ್ಞೆ ಹೇರಿದೆ. ಆದ್ರೆ ತಮ್ಮ ಮನೆ, ಕುಟುಂಬ ಎಲ್ಲವನ್ನೂ ಬಿಟ್ಟು ಕಾರ್ಯನಿರ್ವಹಿಸುತ್ತಿರುವ ಪೊಲೀಸರ ಪರಿಸ್ಥಿತಿ ನೋಡಿದ್ರೆ ಅಯ್ಯೋ ಪಾಪ ಎನ್ನುವಂತಿದೆ.

    ಹೌದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 58 ದಿನಗಳಿಂದ ನಿಷೇಧಾಜ್ಞೆ ಹೇರಲಾಗಿದೆ. ಕೆಎಸ್‍ಆರ್‍ಪಿ ಜೊತೆಗೆ ಬಳ್ಳಾರಿ, ದಾವಣಗೆರೆ ಸೇರಿ 12 ಜಿಲ್ಲೆಗಳ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರು ಕಾವಲು ಕಾಯುತ್ತಿದ್ದಾರೆ. ಕಳೆದೆರಡು ತಿಂಗಳಿಂದ ಹೆಂಡತಿ, ಮಕ್ಕಳನ್ನೂ ನೋಡದೇ ಕಾರ್ಯನಿರ್ವಹಿಸುತ್ತಿರೋ ಇವರಿಗೆ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ. ಜೊತೆಗೆ ಇವರಿಗೆ ಕೊಡ್ತಿರೋದು ಕೇವಲ ಅನ್ನ, ಸಾರು ಮಾತ್ರ.

    ಮೊದಲು 4 ತಾಲೂಕು ವ್ಯಾಪ್ತಿಯಲ್ಲಿದ್ದ ನಿಷೇಧಾಜ್ಞೆಯನ್ನು ಈಗ ಬಂಟ್ವಾಳಕ್ಕೆ ಸೀಮಿತಗೊಳಿಸಲಾಗಿದೆ. ಆದ್ರೆ ನಿಷೇಧಾಜ್ಞೆ ನಡುವೆಯೇ 2 ಕೊಲೆಗಳು ನಡೆದಿವೆ. ಈಗಲೂ ಬಂಟ್ವಾಳದ ಪರಿಸ್ಥಿತಿ ಸುಧಾರಣೆ ಆಗಿಲ್ಲ.

    ಗಲಭೆ ಎಬ್ಬಿಸಿ ಶಾಂತಿಗಾಗಿ ಸೆಕ್ಷನ್ ಜಾರಿಮಾಡಿರುವ ಜನನಾಯಕರು ಇನ್ನಾದ್ರೂ ಈ ಬಗ್ಗೆ ಗಮಹರಿಸಬೇಕಿದೆ. ಶಾಂತಿಗಾಗಿ ಕಾಯುವ ಪೊಲೀಸರಿಗೆ ಕನಿಷ್ಠ ಸೌಲಭ್ಯವನ್ನಾದ್ರೂ ಒದಗಿಸಬೇಕಿದೆ.

  • ಅಕ್ರಮ ಕಟ್ಟಡ ತೆರವು- ಪಿಎಸ್‍ಐ, ಪುರಸಭೆ ಸಿಬ್ಬಂದಿ ಮೇಲೆ ಕಲ್ಲಿನಿಂದ ಹಲ್ಲೆ

    ಅಕ್ರಮ ಕಟ್ಟಡ ತೆರವು- ಪಿಎಸ್‍ಐ, ಪುರಸಭೆ ಸಿಬ್ಬಂದಿ ಮೇಲೆ ಕಲ್ಲಿನಿಂದ ಹಲ್ಲೆ

    ಕೋಲಾರ: ರಸ್ತೆ ಅಗಲೀಕರಣಕ್ಕಾಗಿ ಅಂಗಡಿ ತೆರವುಗೊಳಿಸುವ ವೇಳೆ ಪುರಸಭೆ ಸಿಬ್ಬಂದಿ ಹಾಗೂ ನಿವೃತ್ತ ಪಿಎಸ್‍ಐ ನಡುವೆ ಮಾರಾಮರಿ ನಡೆದಿದ್ದು, ಘಟನೆಯಲ್ಲಿ ಬಂದೋಬಸ್ತ್ ಮಾಡುತ್ತಿದ್ದ ಪಿಎಸ್‍ಐ ಹಾಗೂ ಓರ್ವ ಪೌರ ಕಾರ್ಮಿಕನಿಗೆ ಗಾಯವಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಹೊಸ ಬಸ್ ನಿಲ್ದಾಣ ಮುಂಭಾಗದಲ್ಲಿ ನಿವೃತ್ತ ಪಿಎಸ್‍ಐ ರಘುರಾಮ್ ರೆಡ್ಡಿ ಎಂಬವರಿಗೆ ಸೇರಿದ ಅಕ್ರಮ ಕಟ್ಟಡವನ್ನು ತೆರವುಗೊಳಿಸಲು ಪುರಸಭೆ ಸಿಬ್ಬಂದಿ ಮುಂದಾಗಿದ್ದರು. ಈ ವೇಳೆ ಸ್ಥಳಕ್ಕೆ ಬಂದ ರಘುರಾಮ್ ರೆಡ್ಡಿ ಹಾಗು ಕುಟುಂಬಸ್ಥರು ವಿರೋಧಿಸಿದ್ದಾರೆ. ಪುರಸಭೆ ಸಿಬ್ಬಂದಿ ಮತ್ತು ರಘುರಾಮ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಕಲ್ಲು ತೂರಾಟ ಸಹ ನಡೆದಿದೆ.

    ಕಲ್ಲು ತೂರಾಟದಲ್ಲಿ ಪುರಸಭೆ ಸಿಬ್ಬಂದಿ ಶಿವ ಹಾಗೂ ಬಂಗಾರಪೇಟೆ ಪಿಎಸ್‍ಐ ರವಿಕುಮಾರ್‍ಗೆ ಎಂಬವರಿಗೆ ಗಾಯವಾಗಿದೆ. ಗಾಯಾಳುಗಳನ್ನು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ನಿವೃತ್ತ ಪಿಎಸ್‍ಐ ರಘುರಾಮ ರೆಡ್ಡಿ ಅವರ ಮಕ್ಕಳಾದ ಕಿರಣ್ ಕುಮಾರ್, ವಿಕ್ರಮ್ ಹಾಗು ಸಂಬಂಧಿಗಳಾದ ಸಂಪಂಗಿ ರೆಡ್ಡಿ, ಕೃಷ್ಣಪ್ಪ ಐದು ಜನ ಅರೋಪಿಗಳನ್ನ ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ.

    ಮುಂಜಾಗ್ರತೆ ಕ್ರಮವಾಗಿ ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಹೆಚ್ಚಿನ ಪೊಲೀಸರನ್ನ ನಿಯೋಜನೆ ಮಾಡಲಾಗಿದ್ದು, ಬಂಗಾರಪೇಟೆ ಪಟ್ಟಣಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಮಧ್ಯ ವಿವಿಧ ಸಂಘಟನೆಗಳ ಮುಖಂಡರು ಅರೋಪಿಗಳನ್ನ ಬಂಧಿಸುವಂತೆ ಒತ್ತಾಯಿಸಿ ಪಟ್ಟಣದ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ಮಾಡಿದರು.

    ಸ್ಥಳಕ್ಕೆ ಬಂದ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ತಹಶೀಲ್ದಾರ್ ಸತ್ಯಪ್ರಕಾಶ್, ಪಿಎಸ್‍ಐ ರವಿಕುಮಾರ್ ಪ್ರತಿಭಟನಾಕಾರರ ಮನ ಮನವೊಲಿಸಿ, ಪ್ರತಿಭಟನೆಯನ್ನು ಹಿಂಪಡೆಯುವಂತೆ ಮನವಿ ಮಾಡಿಕೊಂಡ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ. ಆದರೆ ಪಟ್ಟಣದ ವಿವಿಧ ಸಂಘಟನೆಗಳು ಸೋಮವಾರ ಬಂಗಾರಪೇಟೆ ಬಂದ್‍ಗೆ ಕರೆ ನೀಡಿದ್ದಾರೆ.

  • ಹೆಲ್ಮೆಟ್ ಧರಿಸದಿದ್ರೆ ದಂಡದ ಜೊತೆ 2 ಗಂಟೆ ಪೊಲೀಸ್ ಠಾಣೆಯಲ್ಲಿ ಕೂತಿರಬೇಕು!

    ಹೆಲ್ಮೆಟ್ ಧರಿಸದಿದ್ರೆ ದಂಡದ ಜೊತೆ 2 ಗಂಟೆ ಪೊಲೀಸ್ ಠಾಣೆಯಲ್ಲಿ ಕೂತಿರಬೇಕು!

    ಚೆನ್ನೈ: ಬೈಕ್ ಸವಾರರು ಹೆಲ್ಮೆಟ್ ಧರಿಸದೇ ಚಾಲನೆ ಮಾಡಿದಾಗ ದಂಡ ಹಾಕುವುದರಿಂದ ಹೆಚ್ಚಿನ ಪ್ರಯೋಜನವಾಗುತ್ತಿಲ್ಲದ ಕಾರಣ ತಮಿಳುನಾಡು ಪೊಲೀಸರು ಇನ್ಮುಂದೆ ಹೆಲ್ಮೆಟ್ ರಹಿತ ವಾಹನ ಸವಾರರನ್ನು ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ದು ರಸ್ತೆ ಸುರಕ್ಷತೆ ಬಗ್ಗೆ ಪಾಠ ಮಡಲಿದ್ದಾರೆ.

    ಎಲ್ಲಾ ಪೊಲೀಸ್ ಠಾಣೆಗಳನ್ನ ತರಬೇತಿ ಕೇಂದ್ರಗಳನ್ನಾಗಿ ಘೋಷಿಸಲಾಗಿದೆ. ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ ಮಾಡಿ ಸಿಕ್ಕಿಬಿದ್ದವರಿಗೆ ಎರಡು ಗಂಟೆಗಳ ಕಾಲ ಟ್ರಾಫಿಕ್ ನಿಯಮದ ಬಗ್ಗೆ ಪಾಠ ಮಾಡಲಾಗುತ್ತದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮರೇಶ್ ಪೂಜಾರಿ ತಿಳಿಸಿದ್ದಾರೆ.

    ಶುಕ್ರವಾರದಂದು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಆಯೋಜಿಸಿದ್ದ ರಸ್ತೆ ಸುರಕ್ಷತೆ ಮತ್ತು ವೆಹಿಕಲ್ ಎಮಿಷನ್ ರೆಗ್ಯೂಲೆಷನ್ಸ್ ಮೇಲಿನ ಕಾನ್ಫರೆನ್ಸ್ ನಲ್ಲಿ ಅಮರೇಶ್ ಪೂಜಾರಿ ಈ ಬಗ್ಗೆ ಮಾತನಾಡಿದ್ರು. ಅಲ್ಲದೆ ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ಹಾಗೆ ಮಾಡಿದವರಿಗೆ ದಂಡ ವಿಧಿಸುವುದಲ್ಲದೆ ಅವರನ್ನು ಬಂಧಿಸಲಾಗುತ್ತದೆ ಎಂದು ಹೇಳಿದ್ರು.

    ಈ ಮೇಲಿನ ಎರಡು ನಿಯಮಗಳನ್ನ ರಸ್ತೆ ನಿಯಮಾವಳಿಗಳಿಗೆ ಸಂಬಂಧಪಟ್ಟ ನ್ಯಾ. ಕೆಎಸ್ ರಾಮಕೃಷ್ಣ ನೇತೃತ್ವದ ಸುಪ್ರೀಂ ಕೋರ್ಟ್ ಕಮಿಟಿ ಮಾಡಿರುವ ಶಿಫಾರಸುಗಳ ಪಟ್ಟಿಯಲ್ಲಿ ಹೇಳಲಾಗಿದೆ.

    ಮೋಟಾರ್ ವಾಹನ ಕಾಯ್ದೆಯ ಸೆಕ್ಷನ್ 19ನ್ನು ಉಲ್ಲಂಘಿಸಿದವರಿಗೆ ಸ್ಥಳದಲ್ಲೇ ದಂಡ ಹಾಕುವುದಲ್ಲದೆ ಅವರ ಡ್ರೈವಿಂಗ್ ಲೈಸನ್ಸ್ ರದ್ದುಗೊಳಿಸಲು ಪ್ರಕರಣವನ್ನ ಆರ್‍ಟಿಓಗೆ ವರ್ಗಾಯಿಸಲಾಗ್ತಿದೆ ಎಂದು ಪೂಜಾರಿ ತಿಳಿಸಿದ್ರು.

    ಬಳಿಕ ತಮಿಳುನಾಡಿನ ಸಾರಿಗೆ ಸಚಿವ ಎಮ್‍ಆರ್ ವಿಜಯಭಾಸ್ಕರ್ ತಮುಳುನಾಡು ರಾಜ್ಯ ಸಾರಿಗೆಯ ನಷ್ಟದ ಬಗ್ಗೆ ಪ್ರತಿಕ್ರಿಯಿಸಿ, ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ತಮಿಳುನಾಡಿನಲ್ಲಿ ಇಂಧನ ಬೆಲೆ ಏರಿಕೆ ನಡುವೆಯೂ ಬಸ್ ಟಿಕೆಟ್ ದರ ಕಡಿಮೆ ತೆಗೆದುಕೊಳ್ಳಲಾಗ್ತಿದೆ. ಇದನ್ನ ಸಾರ್ವಜನಿಕರಿಗೆ ಸೇವೆಯೆಂದು ಮಾಡಲಾಗ್ತಿದೆ ಅಂದ್ರು.

     

  • ಕುಡಿದ ಅಮಲಿನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಲೆಗೈದು ಪೊಲೀಸರಿಗೆ ಶರಣಾದ

    ಕುಡಿದ ಅಮಲಿನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಲೆಗೈದು ಪೊಲೀಸರಿಗೆ ಶರಣಾದ

    ಚಿಕ್ಕಬಳ್ಳಾಪುರ: ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ ನಂತರ ತಾನೇ ಪೊಲೀಸರಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ನಾಗರಾಜು ತನ್ನ ಪತ್ನಿ ಗಾಯತ್ರಿ (24) ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಗುಡಿಬಂಡೆ ಮೂಲದ ಗಾಯತ್ರಿ ಹಾಗೂ ನಾಗರಾಜುಗೆ ಮದುವೆಯಾಗಿ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಟಾಟಾ ಏಸ್ ಚಾಲಕನಾಗಿದ್ದ ನಾಗರಾಜು, ತನ್ನ ಪತ್ನಿ ಗಾಯತ್ರಿ ಮೇಲೆ ಅನೈತಿಕ ಸಂಬಂಧದ ಆರೋಪ ಹೊರಿಸಿ ದಿನನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ.

    ಗಂಡನ ಕಾಟ ತಾಳಲಾರದೆ ಗಾಯತ್ರಿ ಕೂಡ ತವರು ಮನೆ ಸೇರಿದ್ದಳು. ಆದರೆ ಶುಕ್ರವಾರ ರಾಜೀ ಪಂಚಾಯತಿ ಮಾಡಿ ಗಾಯತ್ರಿ ಮನೆಯವರು ಗಂಡನ ಮನೆಗೆ ಕಳುಹಿಸಿದ್ರು. ರಾತ್ರಿ ಪತಿ ಕುಡಿದು ಬಂದು ಗಾಯತ್ರಿ ಮೇಲೆ ಗಲಾಟೆ ಮಾಡಿದ್ದು, ಈ ವೇಳೆ ಗಾಯತ್ರಿಯ ಕತ್ತು ಹಿಸುಕಿ ಕೊಲೆ ಮಾಡಿ ತದನಂತರ ತಾನೇ ಬಂದು ಗೌರಿಬಿದನೂರು ಗ್ರಾಮಾಂತರ ಪೊಲೀಸರಿಗೆ ಶರಣಾಗಿದ್ದಾನೆ.

     

  • ಎಂ ಸ್ಯಾಂಡ್ ಡಂಪ್ ಮಾಡುವಾಗ ಲಾರಿಯಿಂದ ಹೊರಬಂತು ಶವ- ಚಿಕ್ಕಬಳ್ಳಾಪುರದಲ್ಲಿ ವಿಚಿತ್ರ ಆತ್ಮಹತ್ಯೆ ಪ್ರಕರಣ

    ಎಂ ಸ್ಯಾಂಡ್ ಡಂಪ್ ಮಾಡುವಾಗ ಲಾರಿಯಿಂದ ಹೊರಬಂತು ಶವ- ಚಿಕ್ಕಬಳ್ಳಾಪುರದಲ್ಲಿ ವಿಚಿತ್ರ ಆತ್ಮಹತ್ಯೆ ಪ್ರಕರಣ

    ಚಿಕ್ಕಬಳ್ಳಾಪುರ: ಎಂ ಸ್ಯಾಂಡ್ ಮರಳು ಡಂಪ್ ಮಾಡುತ್ತಿದ್ದ ವೇಳೆ ಟಿಪ್ಪರ್ ಲಾರಿಯಿಂದ ಮೃತದೇಹವೊಂದು ಹೊರ ಬಂದಿರುವ ವಿಚಿತ್ರ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ನಂದಿ ಕ್ರಾಸ್ ಬಳಿಯ ನಿರ್ಮಾಣ ಹಂತದ ಮೆಗಾ ಡೈರಿಯಲ್ಲಿ ನಡೆದಿದೆ.

    ಮೆಗಾ ಡೈರಿ ಕಾಮಗಾರಿಗೆ ದೇವನಹಳ್ಳಿ ತಾಲೂಕಿನ ಮುದ್ದನಾಯಕನಹಳ್ಳಿ ಬಳಿಯ ಮಂಜುನಾಥ ಕ್ರಷರ್‍ನಿಂದ ಎಂ ಸ್ಯಾಂಡ್ ತುಂಬಿಕೊಂಡು ಟಿಪ್ಪರ್ ಲಾರಿ ಬಂದಿತ್ತು. ನಿರ್ಮಾಣ ಹಂತದ ಮೆಗಾ ಡೈರಿಯಲ್ಲಿ ಟಿಪ್ಪರ್ ನಿಂದ ಎಂ ಸ್ಯಾಂಡ್ ಡಂಪ್ ಮಾಡುತ್ತಿದ್ದ ವೇಳೆ ಏಕಾಏಕಿ ಮೃತದೇಹ ಹೊರಬಂದಿದೆ. ಇದನ್ನ ಕಂಡು ಅಲ್ಲಿದ್ದವರೆಲ್ಲಾ ಕಕ್ಕಾಬಿಕ್ಕಯಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ಬಂದ ಚಿಕ್ಕಬಳ್ಳಾಪುರ ಪೊಲೀಸರು ಟಿಪ್ಪರ್ ಲಾರಿಯಿಂದ ಮೃತದೇಹವನ್ನ ಹೊರತೆಗೆದು ಪರಿಶೀಲನೆ ನಡೆಸಿದಾಗ ಇದರ ಹಿಂದಿನ ರಹಸ್ಯ ಬಯಲಾಗಿದೆ. ಮೃತ ವ್ಯಕ್ತಿಯ ಜೇಬಿನಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಪೊಲೀಸರನ್ನು ಉಲ್ಲೇಖಿಸಿ ಈ ಪತ್ರ ಬರೆದಿದ್ದು, ತನ್ನ ಹೆಸರು ಪ್ರಶಾಂತ್. ನಾನು ಸಾಯಲು ಕಾರಣ ನಾಗರತ್ನ, ನಾರಾಯಣ, ಗಾಯತ್ರಿ ಹಾಗೂ ಶಾರದ ಅಂತ ಡೆತ್‍ನೋಟ್ ನಲ್ಲಿ ಬರೆದಿದ್ದಾರೆ. ಇವರ ಕಿರುಕುಳವೇ ನನ್ನ ಸಾವಿಗೆ ಕಾರಣ. ಇವರನ್ನ ಕರೆಸಿ ವಿಚಾರಣೆ ನಡೆಸಿ, ಅವರನ್ನ ಬಿಡಬೇಡಿ ಅಂತ ಪೊಲೀಸರಿಗೆ ಮನವಿ ಮಾಡಿದ್ದಾರೆ.

    ಆದರೆ ಡೆತ್‍ನೋಟ್‍ನಲ್ಲಿ ವಿಳಾಸ ಬರೆದಿಲ್ಲ. ಹೀಗಾಗಿ ಪೊಲೀಸರು ಮೃತ ವ್ಯಕ್ತಿಯ ವಿಳಾಸ ಪತ್ತೆ ಮಾಡಲು ಕಾರ್ಯನಿರತರಾಗಿದ್ದಾರೆ.

     

     

  • ಲವ್ ಫೇಲಾಗಿದ್ದಕ್ಕೆ ಸಾಯೋಕೆ ಈತ ಏನ್ಮಾಡಿದ ಗೊತ್ತಾ?

    ಲವ್ ಫೇಲಾಗಿದ್ದಕ್ಕೆ ಸಾಯೋಕೆ ಈತ ಏನ್ಮಾಡಿದ ಗೊತ್ತಾ?

    ಹೈದರಾಬಾದ್: ಪ್ರೇಮ ವೈಫಲ್ಯದಿಂದ ಬೇಸತ್ತ ಯುವಕನೊಬ್ಬ ತನಗೆ ತಾನೇ ಉಸಿರುಗಟ್ಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಕಟಪಲ್ಲಿಯಲ್ಲಿ ನಡೆದಿದೆ.

    ಕುಕಟಪಲ್ಲಿ ಹೌಸಿಂಗ್ ಬೋರ್ಡ್ ಕಾಲೋನಿಯ ಮಲೇಷ್ಯನ್ ಟೌನ್ ಶಿಪ್ ನಿವಾಸಿ ದಿನೇಶ್ ಮೃತ ದುರ್ದೈವಿ. ತನ್ನ ಕಾರಿನಲ್ಲೇ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೇಮ ವೈಫಲ್ಯದಿಂದ ನೊಂದಿದ್ದ ದಿನೇಶ್ ಕಾರಿನ ಹಿಂಭಾಗದ ಸೀಟಿನಲ್ಲಿ ಕೂತು ಮೊದಲು ತನ್ನ ಮುಖಕ್ಕೆ ಪ್ಲಾಸ್ಟಿಕ್ ಕವರ್ ಹಾಕಿಕೊಂಡಿದ್ದಾನೆ. ಬಳಿಕ ಕಾರಿನ ಗಾಜುಗಳನ್ನೆಲ್ಲಾ ಕ್ಲೋಸ್ ಮಾಡಿ ಗ್ಯಾಸ್ ಪೈಪ್ ಕತ್ತರಿಸಿಕೊಂಡಿದ್ದಾನೆ. ಇದರಿಂದಾಗಿ ಉಸಿರುಗಟ್ಟಿ ದಿನೇಶ್ ಸಾವನ್ನಪ್ಪಿದ್ದಾನೆ.

    ಕಾರಿನಲ್ಲೇ ಸೂಸೈಡ್ ನೋಟ್ ಪತ್ತೆಯಾಗಿದ್ದು ಪ್ರೇಮ ವೈಫಲ್ಯದಿಂದಲೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

     

  • ಧಾರವಾಡ: ಆಯ ತಪ್ಪಿ ಆಳವಾದ ಗುಂಡಿಗೆ ಬಿದ್ದ ಬೈಕ್ ಸವಾರ

    ಧಾರವಾಡ: ಆಯ ತಪ್ಪಿ ಆಳವಾದ ಗುಂಡಿಗೆ ಬಿದ್ದ ಬೈಕ್ ಸವಾರ

    ಧಾರವಾಡ: ಹುಬ್ಬಳ್ಳಿ ಧಾರವಾಡ ಅವಳಿನಗರ ಮಧ್ಯೆ ಬಿಆರ್‍ಟಿಸಿಎಸ್ ಕಾಮಗಾರಿ ವಿಳಂಬದ ಹಿನ್ನೆಲೆಯಲ್ಲಿ ಬೈಕ್ ಸವಾರರೊಬ್ಬರು ಆಯ ತಪ್ಪಿ ಆಳವಾದ ಗುಂಡಿಯೊಳಗೆ ಬಿದ್ದಿರುವ ಘಟನೆ ನಡೆದಿದೆ.

    ಹುಬ್ಬಳ್ಳಿ ಧಾರವಾಡ ಮಧ್ಯೆ ಇರುವ ಸನಾ ಕಾಲೇಜ್ ಎದುರಿನಲ್ಲಿ ಬಿಆರ್‍ಟಿಎಸ್ ಕಾಮಗಾರಿ ನಡೆಯುತ್ತಿದ್ದು, ಮಾರ್ಗ ಮಧ್ಯೆ ಫ್ಲೈ ಓವರ್ ಮಾಡುವ ಸಲುವಾಗಿ ಆಳವಾದ ಗುಂಡಿ ತೋಡಲಾಗಿದೆ.ಆಯ ತಪ್ಪಿ ಬೈಕ್ ಸವಾರರೊಬ್ಬರು ಬೈಕ್ ಸಮೇತ ಈ ಗುಂಡಿಯಲ್ಲಿ ಬಿದ್ದಿದ್ದಾರೆ.

    ಬೈಕ್ ಸವಾರನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಪರವಾನಿಗೆ ಪಡೆದು ಎಮ್ಮೆ, ಕರು ಸಾಗಿಸುತ್ತಿದ್ದವರನ್ನ ಥಳಿಸಿದ ಬಜರಂಗದಳ ಕಾರ್ಯಕರ್ತರು

    ಪರವಾನಿಗೆ ಪಡೆದು ಎಮ್ಮೆ, ಕರು ಸಾಗಿಸುತ್ತಿದ್ದವರನ್ನ ಥಳಿಸಿದ ಬಜರಂಗದಳ ಕಾರ್ಯಕರ್ತರು

    ಉಡುಪಿ: ಗೋವು ರಕ್ಷಣೆಯ ಹೆಸರಿನಲ್ಲಿ ಅಟ್ಟಹಾಸ ಸಲ್ಲದು ಎಂದು ಪ್ರಧಾನಿ ನರೇಂದ್ರ ಮೋದಿ ಕೆಲ ದಿನಗಳ ಹಿಂದೆ ಕಟು ಟೀಕೆ ಮಾಡಿದ್ದರು. ಆದ್ರೆ ಗೋರಕ್ಷಣೆಯ ನೆಪದಲ್ಲಿ ಮಾಡುವ ದಾಳಿಗಳ ಸಂಖ್ಯೆ ಕಮ್ಮಿಯಾಗಿಲ್ಲ. ಎಮ್ಮೆಗಳನ್ನು ಸಾಗಿಸುತ್ತಿದ್ದ ಇಬ್ಬರನ್ನ ಬಜರಂಗದಳ ಕಾರ್ಯಕರ್ತರು ಅಡ್ಡಗಟ್ಟಿ ಮನಬಂದಂತೆ ಥಳಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

    ಉಡುಪಿಯ ಬೆಳ್ಮಣ್ಣು ಸಮೀಪದ ಮುಂಡ್ಕೂರಿನಲ್ಲಿ ಎರಡು ದಿನದ ಹಿಂದೆ ಈ ಘಟನೆ ನಡೆದಿದೆ. ಸಾಧು ಪೂಜಾರಿ ಎಂಬವರು ಪಂಚಾಯತ್ ಪರವಾನಿಗೆ ಪಡೆದು, ಪಶುವೈದ್ಯರ ಸರ್ಟಿಫಿಕೇಟ್ ತೆಗೆದುಕೊಂಡು ಎಮ್ಮೆ ಮತ್ತು ಕರುವನ್ನು ಸಾಗಾಟ ಮಾಡುತ್ತಿದ್ದರು. ರಾಜೇಶ್ ಮೆಂಡೋನ್ಸ ಎಂಬವರ ಟೆಂಪೋದಲ್ಲಿ ಮೂಲ್ಕಿ ಕಡೆ ಹೋಗುತ್ತಿದ್ದಾಗ ಎಂಟತ್ತು ಮಂದಿ ಅಡ್ಡಗಟ್ಟಿದ್ದಾರೆ. ಪಂಚಾಯತ್ ಪರವಾನಿಗೆ ಇದೆ, ಇದನ್ನು ಕಸಾಯಿಖಾನೆಗೆ ತೆಗೆದುಕೊಂಡು ಹೋಗುತ್ತಿಲ್ಲ ಎಂದು ಹೇಳಿದರೂ ಇಬ್ಬರಿಗೂ ಮನಬಂದಂತೆ ಥಳಿಸಿದ್ದಾರೆ.

    ಎಮ್ಮೆ ಮತ್ತು ಕರುವನ್ನು ಮೂಲ್ಕಿಯ ಚಂದ್ರ ಶೆಟ್ಟಿ ಎಂಬವರಿಗೆ ಮಾರಾಟ ಮಾಡಲು ಸಾಧು ಪೂಜಾರಿ ಹೊರಟಿದ್ದರು. ಇದನ್ನು ಕೇಳದೆ ಅವರಿಗೆ ಥಳಿಸಿದ ಬಜರಂಗದಳ ಕಾರ್ಯಕರ್ತರು ಕಾರ್ಕಳ ಗ್ರಾಮಾಂತರ ಪೊಲೀಸರನ್ನು ಕರೆಸಿ ಒಪ್ಪಿಸಿದ್ದಾರೆ.

    ಆದ್ರೆ ಪರವಾನಿಗೆ ಇದ್ದರೂ ಸಾಧು ಪೂಜಾರಿ ಮತ್ತು ರಾಜೇಶ್ ಮೆಂಡೋನ್ಸಾ ಮೇಲೆಯೇ ಪೊಲೀಸರು ಕೇಸು ದಾಖಲು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಧು ಪೂಜಾರಿ ಮತ್ತು ರಾಜೇಶ್ ಮೆಂಡೋನ್ಸಾ ಮನೆಯವರು ಉಡುಪಿ ಎಸ್.ಪಿ ಕಚೇರಿಗೆ ಬಂದು ಸಂಘಟನೆಯ ಕಾರ್ಯಕರ್ತರ ವಿರುದ್ಧ ದೂರು ದಾಖಲು ಮಾಡುವಂತೆ, ನಿರಪರಾಧಿಗಳ ವಿರುದ್ಧದ ಕೇಸು ವಾಪಾಸ್ ಪಡೆಯುವಂತೆ ಒತ್ತಾಯಿಸಿದ್ದಾರೆ. ಇದರ ಹಿಂದೆ ರಾಜಕೀಯ ಕೈವಾಡವಿದೆ ಎಂದು ದೂರು ನೀಡಿದವರು ಆರೋಪ ಮಾಡಿದ್ದಾರೆ.

    ಈ ಸಂದರ್ಭ ಸ್ಥಳೀಯ ಶುಭದ್ ರಾವ್ ಎಂಬವರು ಮಾತನಾಡಿ, ಪೊಲೀಸ್ ಇಲಾಖೆ ಸರಿಯಾಗಿ ತನಿಖೆ ಮಾಡಬೇಕು. ಅಮಾಯಕರ ಮೇಲೆ ದಾಖಲಿಸಿರುವ ಕೇಸನ್ನು ವಾಪಾಸ್ ಪಡೆಯಬೇಕು. ಗ್ರಾಮಪಂಚಾಯತ್ ಪರವಾನಿಗೆ ಇದ್ದರೂ ಪೊಲೀಸರು ಮತ್ತು ಸಂಘಟನೆಯ ಕಾರ್ಯಕರ್ತರು ಕಾನೂನನ್ನು ಮೀರಿದ್ದಾರೆ ಎಂದು ಆರೋಪಿಸಿದರು.

  • ಗಂಡನ ಮರ್ಮಾಂಗ ಕತ್ತರಿಸಿ ಪರ್ಸಲ್ಲಿ ಹಾಕಿ ತವರು ಮನೆಗೆ ಹೋಗ್ತಿದ್ದ ಪತ್ನಿ!

    ಗಂಡನ ಮರ್ಮಾಂಗ ಕತ್ತರಿಸಿ ಪರ್ಸಲ್ಲಿ ಹಾಕಿ ತವರು ಮನೆಗೆ ಹೋಗ್ತಿದ್ದ ಪತ್ನಿ!

    ವೆಲ್ಲೂರು: ಪತಿಯ ಅಕ್ರಮ ಸಂಬಂಧ ಆರೋಪದಿಂದ ಬೇಸತ್ತ ಪತ್ನಿಯೊಬ್ಬಳು ಪತಿಯ ಮರ್ಮಾಂಗವನ್ನೇ ಕತ್ತರಿಸಿದ ಘಟನೆ ತಮಿಳುನಾಡಿನ ಗುಡಿಯಾಟ್ಟಂ ಎಂಬಲ್ಲಿ ನಡೆದಿದೆ.

    ಪತ್ನಿ ಸರಸುವನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಆಕೆಯ ಪರ್ಸ್ ನಲ್ಲಿ ಪತಿಯ ಕಟ್ ಆಗಿದ್ದ ಮರ್ಮಾಂಗ ಪತ್ತೆಯಾಗಿದೆ. ಘಟನೆ ಬಳಿಕ ಸರಸು ತನ್ನ ತವರು ಮನೆಗೆ ಹೊರಟಿದ್ದಳು. ಆದರೆ ಮಾರ್ಗ ಮಧ್ಯೆಯೇ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ಇನ್ಸ್ ಪೆಕ್ಟರ್ ಎಂ.ಟಿ.ಇರುಧ್ಯರಾಜ್ ಹೇಳಿದ್ದಾರೆ.

    ಏನಿದು ಘಟನೆ?: ವಾಣಿಯಾರ್ ಪಂಗಡಕ್ಕೆ ಸೇರಿದ ಸರಸು ಎಸ್.ಸಿ ಸಮುದಾಯದ ಜಗದೀಶನ್ ಎಂಬಾತನ ಜೊತೆ 14 ವರ್ಷದ ಹಿಂದೆ ಮದುವೆಯಾಗಿತ್ತು. ಇವರಿಬ್ಬರಿಗೂ ಗುಡಿಯಾಟ್ಟಂನಲ್ಲಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವ ವೇಳೆ ಲವ್ ಆಗಿತ್ತು. ಇವರಿಗೆ ಓರ್ವ ಪುತ್ರ ಹಾಗೂ ಮೂವರು ಪುತ್ರಿಯರಿದ್ದಾರೆ.

    ಆದರೆ ಕಳೆದ ವರ್ಷ ಪತಿ ಪತ್ನಿ ನಡುವೆ ಜಗಳವಾಗಿದೆ. ಬಳಿಕ ಸರಸು ತನ್ನ ತವರು ಮನೆ ಸೇರಿದ್ದಳು. ಆದರೆ ಜುಲೈ 17ರಂದು ತನ್ನ ಬರ್ತ್ ಡೇಗೆ ಬರುವಂತೆ ಹಿರಿಯ ಪುತ್ರ ಸರಸುಗೆ ಮನವಿ ಮಾಡಿದ್ದ. ಈ ಬೇಡಿಕೆಗೊಪ್ಪಿ ಆಕೆ ಮನೆಗೆ ಬಂದಿದ್ದಳು. ಇದಾದ ಬಳಿಕ ಬುಧವಾರ ಕುಡಿದು ಮನೆಗೆ ಬಂದಿದ್ದ ಜಗದೀಶನ್ ಸರಸು ಜೊತೆ ವಿನಾಕಾರಣ ಜಗಳ ಶುರು ಮಾಡಿದ್ದ. ಈ ವೇಳೆ ಆತ ಆಕೆಯ ಶೀಲ ಶಂಕಿಸಿ ಮಾತನಾಡಿದ್ದ. ತವರು ಮನೆಯಲ್ಲಿದ್ದ ವೇಳೆ ಯಾವುದಾದರೂ ಸಂಬಂಧವಿಟ್ಟುಕೊಂಡಿದ್ದೀಯಾ ಎಂದು ಕೇಳಿದ್ದಾನೆ. ಜೊತೆಗೆ ನಿನಗೀಗ ವಯಸ್ಸಾಗಿದೆ. ಹೀಗಾಗಿ ನಾನು ಬೇರೊಬ್ಬಳನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದಾನೆ ಎಂದು ಆಕೆ ಹೇಳಿಕೆ ನೀಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

    ಇದರಿಂದ ಸಿಟ್ಟಿಗೆದ್ದ ಸರಸು ಗಂಡನಿಗೆ ಎದುರುತ್ತರ ಕೊಟ್ಟಿದ್ದಾಳೆ. ನಾನಿಲ್ಲದ ವೇಳೆ ಈ ಮನೆಯಲ್ಲಿ ನೀನು ಅಕ್ರಮ ಸಂಬಂಧವಿಟ್ಟುಕೊಂಡಿದ್ದೀಯಾ ಎಂದು ಹೇಳಿದ್ದಾಳೆ. ಈ ಗಲಾಟೆ ರಾತ್ರಿ ಸುಮಾರು 2 ಗಂಟೆಯವರೆಗೆ ಮುಂದುವರೆದಿದೆ. ಗುರುವಾರ ಬೆಳಗಿನ ಜಾವ 3 ಗಂಟೆ ವೇಳೆಗೆ ಸರಸು ಅಡುಗೆ ಕೋಣೆಯಲ್ಲಿದ್ದ ಹರಿತವಾದ ಚಾಕುವನ್ನು ತಂದು ಮರ್ಮಾಂಗವನ್ನು ಕಟ್ ಮಾಡಿದ್ದಾಳೆ. ಈ ಕೃತ್ಯ ನಡೆಸಿದ ತಕ್ಷಣ ಆಕೆ ಅಲ್ಲಿಂದ ಪರಾರಿಯಾಗಿದ್ದಾಳೆ. ಜೊತೆಗೆ ಗಂಡನ ಕತ್ತರಿಸಿದ ಮರ್ಮಾಂಗವನ್ನು ಆಕೆಯ ಪರ್ಸ್ ನಲ್ಲಿಟ್ಟುಕೊಂಡಿದ್ದಳು ಎಂದು ಸಬ್ ಇನ್ಸ್ ಪೆಕ್ಟರ್ ಎ.ಕೃಷ್ಣಮೂರ್ತಿ ಹೇಳಿದ್ದಾರೆ.

    ಜಗದೀಶ್ ಕಿರುಚಾಟ ಕೇಳಿಸಿಕೊಂಡ ನೆರೆ ಮನೆಯವರು ಹಾಗೂ ಸ್ಥಳೀಯರು ಗುಡಿಯಾಟ್ಟಂ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಆತನನ್ನು ವೆಲ್ಲೂರು ಮೆಡಿಕಲ್ ಕಾಲೇಜಿಗೆ ದಾಖಲಿಸಿ ಆಪರೇಷನ್ ಮಾಡಿದ್ದಾರೆ. ಸತ್ಯ ಜಗದೀಶ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಂಧಿತ ಸರಸುವಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.

  • ಕಾರು ಚಲಾಯಿಸಿ ರೌಡಿ ಶೀಟರ್‍ನಿಂದ ಮಂಗಳೂರಿನ ಎಎಸ್‍ಐ ಹತ್ಯೆಗೆ ಯತ್ನ

    ಕಾರು ಚಲಾಯಿಸಿ ರೌಡಿ ಶೀಟರ್‍ನಿಂದ ಮಂಗಳೂರಿನ ಎಎಸ್‍ಐ ಹತ್ಯೆಗೆ ಯತ್ನ

    ಮಂಗಳೂರು: ಎಎಸ್‍ಐಯೊಬ್ಬರ ಮೇಲೆ ರೌಡಿ ಶೀಟರ್ ಓರ್ವ ಕಾರು ಚಲಾಯಿಸಿ ಕೊಲೆಗೆ ಯತ್ನಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ರೌಡಿಶೀಟರ್ ಹ್ಯಾರಿಸ್ ಈ ಕೃತ್ಯ ಎಸಗಿದ್ದು, ಅಪಘಾತದಲ್ಲಿ ಪಣಂಬೂರು ಠಾಣೆ ಎಎಸ್‍ಐ ಪುರಂದರ ಗೌಡ ಗಾಯಗೊಂಡಿದ್ದಾರೆ. ದರೋಡೆಗೆ ಸಂಚು ರೂಪಿಸಿದ್ದ ವಿಚಾರ ತಿಳಿದ ಪಣಂಬೂರು ಪೊಲೀಸರು ಎರಡು ತಂಡಗಳಾಗಿ ಮಂಗಳೂರಿನ ಕಸಬಾ ಬೆಂಗ್ರೆಯಲ್ಲಿ ರೌಂಡಪ್ ಮಾಡಿದ್ದರು.

    ಈ ವೇಳೆ ಸಾಗಿಬಂದ ಹ್ಯಾರಿಸ್ ಕಾರನ್ನು ನಿಲ್ಲಿಸಲು ಸೂಚಿಸಿದಾಗ ಆತ ನೇರವಾಗಿ ಎಎಸ್‍ಐ ಅವರಿಗೆ ಡಿಕ್ಕಿ ಹೊಡಿದಿದ್ದಾನೆ. ಪುರಂದರ ಗೌಡ ಅವರು ಅಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಹದಿನೈದಕ್ಕೂ ಹೆಚ್ಚು ಪ್ರಕರಣದಲ್ಲಿ ಆರೋಪಿಯಾಗಿರುವ ಹ್ಯಾರಿಸ್ ವಿರುದ್ಧ ಪಣಂಬೂರು ಠಾಣೆಯಲ್ಲಿ ಕೊಲೆಯತ್ನ ದೂರು ದಾಖಲಾಗಿದೆ.

    https://www.youtube.com/watch?v=V-qsWdZUIPY