Tag: police

  • ಹಣಕ್ಕೆ ಹೆಣ್ಣು: ಗುಜ್ಜರ್ ಕೀ ಶಾದಿಯನ್ನು ನಿಲ್ಲಿಸಿದ ಅಧಿಕಾರಿಗಳು

    ಹಣಕ್ಕೆ ಹೆಣ್ಣು: ಗುಜ್ಜರ್ ಕೀ ಶಾದಿಯನ್ನು ನಿಲ್ಲಿಸಿದ ಅಧಿಕಾರಿಗಳು

    ಕಲಬುರಗಿ: ಜಿಲ್ಲೆಯಲ್ಲಿ ಮತ್ತೊಂದು ಗುಜ್ಜರ್ ಕೀ ಶಾದಿ ಪ್ರಕರಣ ಬೆಳಕಿಗೆ ಬಂದಿದೆ. ಮಕ್ಕಳ ಸಹಾಯವಾಣಿ ಕೇಂದ್ರ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ತಂಡದವರು ಬಂದು ದಾಳಿ ನಡೆಸಿ ಮದುವೆಯನ್ನು ತಪ್ಪಿಸಿದ್ದಾರೆ.

    ಚಿತ್ತಾಪೂರ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಗುಜರಾತ್ ಮೂಲದ ಜಾಮ್‍ನಗರ ನಿವಾಸಿ 22 ವರ್ಷದ ಜಿತೇಂದ್ರ ಜೊತೆ 16 ವರ್ಷದ ಬಾಲಕಿಯ ಮದುವೆಗೆ ಸಿದ್ಧತೆ ನಡೆದಿತ್ತು. ಈ ವಿಚಾರ ತಿಳಿದು ವಿವಿಧ ಇಲಾಖೆಯ ಅಧಿಕಾರಿಗಳು ಬಂದು ದಾಳಿ ನಡೆಸಿ ಶಾದಿಯನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ಕುರಿತಾಗಿ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಈ ರೀತಿಯ ಮದುವೆಯಾಗುವುದು ಹೊಸದೆನಲ್ಲ ಈ ಹಿಂದೆಯೂ ನಡೆದಿತ್ತು. ಬಡ ಕುಟುಂಬಗಳಿಗೆ ಹಣದ ಆಸೆಯನ್ನು ತೋರಿಸಿ ಅವರ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಮದುವೆಯಾಗುವ ದಂಧೆ ಜಿಲ್ಲೆಯಲ್ಲಿ ಕೆಲ ವರ್ಷಗಳಿಂದ ನಡೆದುಕೊಂಡು ಬಂದಿದೆ.

  • ರೈಲ್ವೇ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ವಂಚಕರ ಬಂಧನ

    ರೈಲ್ವೇ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ವಂಚಕರ ಬಂಧನ

    ಧಾರವಾಡ: ನೈರುತ್ಯ ರೈಲ್ವೇಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ  ಯುವಕರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪದ ಮೇಲೆ ನಾಲ್ವರು ವಂಚಕರನ್ನು ಇಲ್ಲಿನ ರೈಲ್ವೇ ಪೊಲೀಸರು ಬಂಧಿಸಿದ್ದಾರೆ.

    16 ಯುವಕರಿಂದ ತಲಾ ಮೂರು ಲಕ್ಷ ರೂ. ಪಡೆದು ಹುಬ್ಬಳ್ಳಿಯಲ್ಲಿ ದೈಹಿಕ ಹಾಗೂ ಮೌಖಿಕ ಪರೀಕ್ಷೆ ನಕಲಿ ಪರೀಕ್ಷೆ ನಡೆಸುತ್ತಿದ್ದ ರೈಲ್ವೇ ನೌಕರ ಸೇರಿ ನಾಲ್ವರನ್ನು ರೈಲ್ವೇ ರಕ್ಷಣಾ ದಳ (ಆರ್‍ಪಿಎಫ್) ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

    ಚಾಮರಾಜ ನಗರ ಜಿಲ್ಲೆಯ ಕೊಳ್ಳೇಗಾಲದ ಮೂಲದ ವಂಚಕರಾದ ಆನಂದ ಪಿ (36), ರಮೇಶ್ (42) ಹಾಗೂ ಮನೋಜ್ (24) ಮತ್ತು ಸಚಿನ್ (32) ಬಂಧಿತರು. ಇದರಲ್ಲಿ ಆನಂದ ಪಿ ಹಾಗೂ ರಮೇಶ ಇಬ್ಬರೂ ರೈಲ್ವೇ ಇಲಾಖೆಯ ಸಿಬ್ಬಂದಿಗಳಾಗಿದ್ದರು.

    ಹಲವು ವರ್ಷಗಳಿಂದ ಅಭ್ಯರ್ಥಿಗಳಿಗೆ ದೈಹಿಕ ಹಾಗೂ ಮೌಖಿಕ ಪರೀಕ್ಷೆ ನಡೆಸಿದ್ದರು. ನೈಋತ್ಯ ರೈಲ್ವೇ ಮುಖ್ಯ ಕಚೇರಿ ಹುಬ್ಬಳ್ಳಿಯಲ್ಲಿ ಸೋಮವಾರ ಆರೋಗ್ಯ ತಪಾಸಣೆ ನಡೆಯಲಿದೆ ಎಂದು ಯುವಕರಿಗೆ ತಿಳಿಸಿದ್ದರು. ಹೀಗಾಗಿ ರೈಲ್ವೇ ಆಸ್ಪತ್ರೆಯ ಒಂದು ಕೋಣೆಯಲ್ಲಿ ನಕಲಿ ವೈದ್ಯಕೀಯ ತಪಾಸಣೆ ಏರ್ಪಾಟು ಮಾಡಿದ್ದರು. ಖಚಿತ ಮಾಹಿತಿ ಮೇರೆಗೆ ಆರ್‍ಪಿಎಫ್ ಸಿಬ್ಬಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಆರೋಪಿಗಳಿಗೆ ರೈಲ್ವೇ ಆಸ್ಪತ್ರೆಯಲ್ಲೇ ನಕಲಿ ವೈದ್ಯಕೀಯ ಪರೀಕ್ಷೆ ಮಾಡಿಸುವಷ್ಟು ಧೈರ್ಯ ಇದೆ ಎಂದರೆ ಪ್ರಕರಣದಲ್ಲಿ ಮೇಲಾಧಿಕಾರಿಗಳೂ ಶಾಮೀಲಾಗಿದ್ದಾರೆಯೇ ಎಂಬ ಶಂಕೆ ಮೂಡುತ್ತಿದೆ. ಪ್ರಕರಣದಲ್ಲಿ ಇನ್ನೂ ಹಲವರು ವಂಚನೆಗೊಳಗಾಗಿರುವ ಸಾಧ್ಯತೆಗಳಿದ್ದು, ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.

    ಈ ನಡುವೆ ಬಂಧಿತ ನಾಲ್ವರು ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ವಿಚಾರಣೆ ನೆಡೆಸುತ್ತಿದ್ದಾರೆ.

  • ನೆಲಮಂಗಲದಲ್ಲಿ 25 ಕ್ಕೂ ಹೆಚ್ಚು ಕೆಎಸ್‍ಆರ್‍ಟಿಸಿ ಬಸ್‍ಗಳನ್ನ ತಡೆದ ವಿದ್ಯಾರ್ಥಿಗಳು

    ನೆಲಮಂಗಲದಲ್ಲಿ 25 ಕ್ಕೂ ಹೆಚ್ಚು ಕೆಎಸ್‍ಆರ್‍ಟಿಸಿ ಬಸ್‍ಗಳನ್ನ ತಡೆದ ವಿದ್ಯಾರ್ಥಿಗಳು

    ಬೆಂಗಳೂರು: ತುಮಕೂರು-ಬೆಂಗಳೂರು ರಸ್ತೆಯಲ್ಲಿ ಸಂಚರಿಸುವ ಬಹುತೇಕ ಕೆಎಸ್‍ಆರ್‍ಟಿಸಿ ಬಸ್‍ಗಳು ಸರ್ವೀಸ್ ರಸ್ತೆಗೆ ಬರದೇ ಹೆದ್ದಾರಿಯ ಟೋಲ್ ರಸ್ತೆಯಲ್ಲಿ ಸಂಚರಿಸುತ್ತಿರುವುದನ್ನ ವಿರೋಧಿಸಿ ವಿದ್ಯಾರ್ಥಿಗಳು ಹಾಗೂ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

    ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಕುಣಿಗಲ್ ಬೈಪಾಸ್ ಬಳಿ ಸುಮಾರು 25 ಕ್ಕೂ ಹೆಚ್ಚು ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ವೇಳೆ ಪ್ರತಿಭಟನಕಾರರು ಹಾಗೂ ಬಸ್ ಚಾಲಕರ ನಡುವೆ ಮಾತಿನ ಚಕಮುಖಿ ನಡೆದು ಓರ್ವ ನಿರ್ವಾಹಕನಿಗೆ ಥಳಿಸಿರುವ ಘಟನೆ ಕೂಡ ನಡೆದಿದೆ. ಹೀಗಾಗಿ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಕೆಲಕಾಲ ಪರದಾಡುವಂತಾಗಿತ್ತು.

    ಕೂಡಲೇ ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಲ್ಲಾ ಬಸ್‍ಗಳನ್ನ ಸರ್ವೀಸ್ ರಸ್ತೆಯಲ್ಲಿ ಸಂಚಾರ ಮಾಡುವಂತೆ ಅನುವು ಮಾಡುವಂತೆ ಪ್ರತಿಭಟನಕಾರರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ನೆಲಮಂಗಲ ಪಟ್ಟಣ ಹಾಗೂ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನ ತಿಳಿಗೊಳಿಸಿದ್ದಾರೆ.

     

     

  • 7 ಮಂದಿ ಯುವಕರಿಂದ ಇಬ್ಬರು ಯುವತಿಯರ ಮೇಲೆ ಹಲ್ಲೆ

    7 ಮಂದಿ ಯುವಕರಿಂದ ಇಬ್ಬರು ಯುವತಿಯರ ಮೇಲೆ ಹಲ್ಲೆ

    ಚಿಕ್ಕೋಡಿ:  ಭಾನುವಾರ ರಾತ್ರಿ  7 ಜನ ಯುವಕರ ಗುಂಪೊಂದು ಮನೆಗೆ ನುಗ್ಗಿ ಇಬ್ಬರು ಯುವತಿಯರ ಮೇಲೆ ಹಲ್ಲೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

    ಚಿಕ್ಕೋಡಿ ತಾಲೂಕಿನ ನಾಯಿಂಗ್ಲಾಜ್ ಗ್ರಾಮದ ಯುವತಿಯರ ಮೇಲೆ ಹಲ್ಲೆ ನಡೆಸಲಾಗಿದೆ. ಅಪ್ಪಾಸಾಬ್ ಸಾವಿತ್ರಿಗೋಳ, ವಿನಾಯಕ ಕಾಂಬಳೆ, ತಳೆಪ್ಪಾ ಕಾಂಬಳೆ, ಶಂಕರ ಕಾಂಬಳೆ, ರಣದೀಶ ಕಾಂಬಳೆ ಎಂಬವರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಯುವತಿಯಯರು ದೂರು ನೀಡಿದ್ದಾರೆ.

    ಕಳೆದ 6 ತಿಂಗಳಿನಿಂದ ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ಈ ಯುವಕರ ಗುಂಪು ಚುಡಾಯಿಸುತಿದ್ದರು ಹಾಗೂ ನೀವು ಹೇಗೆ ಬೇರೆ ಮದುವೆ ಮಾಡಿಕೊಳ್ಳುತ್ತೀರಿ? ನಾವು ನೋಡುತ್ತೇವೆ ನೀನು ನನ್ನನ್ನೇ ಪ್ರೀತಿಸಬೇಕು ಎಂಬುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಯುವತಿಯರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಚಿಕ್ಕೋಡಿ ಪಟ್ಟಣದ ಮಹಿಳಾ ಕಾಲೇಜ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಈ ಯುವತಿಯರು ಇವರ ಕಾಟವನ್ನು ತಾಳಲಾರದೇ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಕಳೆದ ವರ್ಷ ಅಕ್ಟೋಬರ್ 14 ರಂದೇ ಪ್ರಕರಣ ದಾಖಲಿಸಿದ್ದರು. ಆದರೆ ಅವರ ಮೇಲೆ ಕ್ರಮ ಕೈಗೊಂಡಿರಲಿಲ್ಲ.

    ಈ ಹಿನ್ನೆಲೆಯಲ್ಲಿ ಮತ್ತೆ ರವಿವಾರ ಸಾಯಂಕಾಲ ಮನೆಯಲ್ಲಿ ಯಾರು ಇಲ್ಲದನ್ನು ನೋಡಿ ಹಲ್ಲೆ ನಡೆಸಿದ್ದಾರೆ. ಇದನ್ನು ವಿರೋಧಿಸಿದ ಯುವತಿಯರ ತಮ್ಮನ ಮೇಲೆಯೂ ಯುವಕರು ಹಲ್ಲೆ ನಡೆಸಿದ್ದಾರೆ. ಇದೀಗ ಚಿಕ್ಕೋಡಿ ತಾಲೂಕ ಆಸ್ಪತ್ರೆಯಲ್ಲಿ ಯುವತಿಯರು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಖಡಕಲಾಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

  • ಮಹದಾಯಿ ಹೋರಾಟಗಾರರಿಗೆ ಸಮನ್ಸ್- ಅಂಬ್ಯುಲೆನ್ಸ್ ಸಿಬ್ಬಂದಿ, ಸೈನಿಕ, ಎಂಜಿನೀಯರ್‍ಗೂ ನೋಟಿಸ್

    ಮಹದಾಯಿ ಹೋರಾಟಗಾರರಿಗೆ ಸಮನ್ಸ್- ಅಂಬ್ಯುಲೆನ್ಸ್ ಸಿಬ್ಬಂದಿ, ಸೈನಿಕ, ಎಂಜಿನೀಯರ್‍ಗೂ ನೋಟಿಸ್

    ಗದಗ: ಕಳಸಾ ಬಂಡೂರಿ, ಮಹದಾಯಿ ಹೋರಾಟಗಾರರಿಗೆ ಮತ್ತೆ ನರಗುಂದ ಜೆಎಮ್‍ಎಫ್‍ಸಿ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ನರಗುಂದ ತಾಲೂಕಿನ 32 ರೈತರು ಇಂದೇ ಜೆಎಮ್‍ಎಫ್‍ಸಿ ಕೋರ್ಟ್‍ಗೆ ಹಾಜರಾಗುವಂತೆ ಆದೇಶ ಹೊರಡಿಸಿದೆ.

    ವಿಪರ್ಯಾಸವೆಂದರೆ ಹೊರಾಟದಲ್ಲಿ ಇಲ್ಲದೆ ಇರುವವರ ಮೇಲೆಯೂ ಕೇಸ್ ದಾಖಲಿಸಿ ಸಮನ್ಸ್ ಜಾರಿ ಮಾಡಲಾಗಿದೆ. 108 ಸಿಬ್ಬಂದಿ, ಸೈನಿಕ ಹಾಗೂ ಎಂಜಿನೀಯರ್ ಮೇಲೆ ಸಮನ್ಸ್ ಜಾರಿ ಮಾಡಲಾಗಿದೆ.

    ನರಗುಂದ ತಾಲೂಕಿನ ಜಗಾಪೂರ ಗ್ರಾಮದ ಸೈನಿಕ ಶಂಕರಗೌಡ ಸಿದ್ದನಗೌಡ್ರ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅದೇ ಗ್ರಾಮದ ಕುಮಾರ ಬಾರಕೇರ್ ಉಡಪಿಯಲ್ಲಿ 108 ಸಿಬ್ಬಂದಿಯಾಗಿ ಕೆಲಸ ಮಾಡ್ತಿದ್ದಾರೆ. ಇನ್ನು ರೋಣ ಮೂಲದ ಚರಣ್ ರಾಜ್ ಜಾಣಮಟ್ಟಿ ತೊರಣಗಲ್ ನಲ್ಲಿ ಎಂಜನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೂ ಸಮನ್ಸ್ ಜಾರಿಯಾಗಿರುವುದು ದುರದೃಷ್ಟಕರ.

    ಹೋರಾಟಗಾರರ ಮೇಲೆ ಐಪಿಸಿ ಕಲಂ 143, 147, 323, 353, 427, 436, 504, 506, 149 ರ ಕೇಸ್ ದಾಖಲು ಮಾಡಿದೆ. ಹಿಂದೆ ಸಿಎಂ ಸಿದ್ದರಾಮಯ್ಯನವರು ರೈತ ಹೋರಾಟಗಾರರ ಮೇಲಿನ ಕೇಸ್ ಹಿಂಪಡೆದುಕೊಳ್ಳುವುದಾಗಿ ಹೇಳಿದ್ದರು. ಆದರೆ ಮತ್ತೆ ನೋಟೀಸ್ ನೀಡಿ ಇಂದೇ ಕೋರ್ಟ್ ಗೆ ಹಾಜರಾಗುವಂತೆ ಆದೇಶಿಸಿದ್ದು, ಸರ್ಕಾರದ ನಡಾವಳಿಗಳನ್ನ ಖಂಡಿಸಿ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಯುವತಿಯನ್ನ ಚುಡಾಯಿಸಿದನೆಂದು ಯುವಕನಿಗೆ ಮಲ ತಿನ್ನಿಸಿ ಥಳಿಸಿದ್ರು!

    ಯುವತಿಯನ್ನ ಚುಡಾಯಿಸಿದನೆಂದು ಯುವಕನಿಗೆ ಮಲ ತಿನ್ನಿಸಿ ಥಳಿಸಿದ್ರು!

    ಭೋಪಾಲ್: ಯುವತಿಯನ್ನು ಚುಡಾಯಿಸಿದ್ದಾನೆ ಎಂದು ಆರೋಪಿಸಿ ಯುವತಿಯ ಮನೆಯವರು ಯುವಕನೋರ್ವನನ್ನು ಹಿಗ್ಗಾಮುಗ್ಗಾ ಥಳಿಸಿ ಮಲವನ್ನು ತಿನ್ನಿಸಿರುವ ಅಮಾನವೀಯ ಘಟನೆ ಮಧ್ಯಪ್ರದೇಶ ಶಿವಪುರ ಜಿಲ್ಲೆಯ ವಿನೇಗಾ ಎಂಬ ಗ್ರಾಮದಲ್ಲಿ ನಡೆದಿದೆ.

    ವಿನೇಗಾ ಗ್ರಾಮದ ನಿವಾಸಿ ಕಲ್ಲು ದಾಕಡ್ ಹಲ್ಲೆಗೊಳಗಾದ ಯುವಕ. ಆದ್ರೆ ನಾನು ಯುವತಿಗೆ ಯಾವುದೇ ರೀತಿಯ ಕಿರುಕುಳ ನೀಡಿಲ್ಲ. ಅವಳು ಮತ್ತು ನಾನು ಪ್ರೀತಿಸುತ್ತಿದ್ದೆವು. ಆದ್ರೆ ಯುವತಿಯ ಮನೆಯವರು ಆಕೆಯನ್ನ ಬೇರೆ ಕಡೆ ಮದುವೆ ಮಾಡಿಕೊಡಬೇಕೆಂದಿದ್ದರು ಎಂದು ಕಲ್ಲು ದಾಕಡ್ ಹೇಳಿದ್ದಾರೆ.

    ಯುವತಿ ನನಗೆ ತೋಟದ ಮನೆಯ ಹತ್ತಿರ ಬರಲು ಹೇಳಿದ್ದಳು. ಅಂತೆಯೇ ನಾನು ಸಹ ಆಕೆಯನ್ನು ಭೇಟಿಯಾಗಲು ಹೋಗಿದ್ದೆ. ಈ ವೇಳೆ ನಮ್ಮಿಬ್ಬರನ್ನು ನೋಡಿದ ಯುವತಿಯ ಸಹೋದರ ಮನೆಯಲ್ಲಿ ವಿಷಯ ತಿಳಿಸಿದ್ದಾನೆ. ನಂತರ ಈ ಘಟನೆ ನಡೆಯಿತು ಎಂದು ಕಲ್ಲು ದಾಕಡಾ ತಿಳಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಅಧಿಕಾರಿ ಸತನ್‍ವಾಡ್ ಜೈ ಸಿಂಗ್, ದಾಕಡ್ ಮತ್ತು ಯುವತಿ ಅಕ್ಕಪಕ್ಕದ ನೆರೆಹೊರೆಯವರು. ದಾಕಡ್ ತುಂಬಾ ದಿನಗಳಿಂದ ಯುವತಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಪೋಷಕರು ಪೊಲೀಸರಿಗೆ ಹೇಳಿದ್ದಾರೆ. ಗುರುವಾರದಂದು ದಾಕಡ್ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಆತನ ವಿರುದ್ಧ ಪ್ರಕರಣ ದಖಲಾಗಿದೆ. ಯುವಕನಿಗೆ ಮಲ ತಿನ್ನಿಸಿ ಥಳಿಸಿರುವ ವಿಡಿಯೋ ವೈರಲ್ ಆದ ಬಳಿಕ ಹುಡುಗಿಯ ಪೋಷಕರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    https://www.facebook.com/cnnnews18/videos/10156426453619202/

  • ಅಪರಿಚಿತ ವಾಹನ ಡಿಕ್ಕಿ: ಸ್ಥಳದಲ್ಲಿಯೇ ಪಾದಚಾರಿ ಸಾವು

    ಅಪರಿಚಿತ ವಾಹನ ಡಿಕ್ಕಿ: ಸ್ಥಳದಲ್ಲಿಯೇ ಪಾದಚಾರಿ ಸಾವು

    ಧಾರವಾಡ: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಪಾದಚಾರಿ ಮೃತಪಟ್ಟ ಘಟನೆ ಕಲಘಟಗಿ ತಾಲೂಕಿನ ಮಡಕಿಹೊನ್ನಿಹಳ್ಳಿ ರಸ್ತೆಯ ವಿಶ್ವಚೇತನ ಶಾಲೆಯ ಎದುರು ನಡೆದಿದೆ.

    ಮಡಕಿಹೊನ್ನಿಹಳ್ಳಿ ಗ್ರಾಮದ ಯಲ್ಲಪ್ಪ ಪುಟ್ಟಪ್ಪ ತಳವಾರ (55) ಮೃತ ವ್ಯಕ್ತಿ. ಮನೆಯಿಂದ ಕಲಘಟಗಿ ಪಟ್ಟಣಕ್ಕೆ ನಡೆದಕೊಂಡು ಹೋಗುವಾಗ ತಲೆಯ ಮೇಲೆ ಅಪರಿಚಿತ ವಾಹನ ಹರಿದ ಪರಿಣಾಮ ಸ್ಥಳದಲ್ಲಿಯೇ ವೃತಪಟ್ಟಿದ್ದಾರೆ.

    ಈ ಬಗ್ಗೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕ್ರೂಸರ್ ಪಲ್ಟಿಯಾಗಿ 6 ಜನರಿಗೆ ಗಂಭೀರ ಗಾಯ

    ಕ್ರೂಸರ್ ಪಲ್ಟಿಯಾಗಿ 6 ಜನರಿಗೆ ಗಂಭೀರ ಗಾಯ

    ಹಾವೇರಿ: ಕ್ರೂಸರ್ ವಾಹನ ಪಲ್ಟಿಯಾಗಿ ಇಬ್ಬರಿಗೆ ಗಾಯವಾಗಿದ್ದು, ಆರು ಜನರಿಗೆ ಸಣ್ಣಪುಟ್ಟ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಯಲವಗಿ ಗ್ರಾಮದ ಬಳಿ ಘಟನೆ ನಡೆದಿದೆ.

    ಘಟನೆಯಲ್ಲಿ ಗಾಯಗೊಂಡ ಚಾಲಕರನನ್ನ ಚಿತ್ರದುರ್ಗದ ಹನುಮಂತಪ್ಪ ಕರ್ಜಗಿ(36) ಅನ್ಸರ್ ಅಬ್ದುಲ್(45), ಹನೀಫ್ (46), ಹೈದರಲಿ ಶಬ್ಬಿರ್ (16) ಎಂದು ಗುರುತಿಸಲಾಗಿದೆ.

    ಕ್ರೂಸರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ನಾಲ್ಕು ಜನರನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

    ಇನ್ನೂ ಘಟನೆಯಲ್ಲಿ ಆರು ಜನ ಗಾಯಾಳುಗಳನ್ನ ಸವಣೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕ್ರೂಸರ್ ವಾಹನ ಸವಣೂರಿನಿಂದ ಗದಗ ಜಿಲ್ಲೆಯ ಲಕ್ಷಮೇಶ್ವರ ಗ್ರಾಮದ ಬಳಿ ಇರುವ ದುದ್ ಪೀರ್ ದರ್ಗಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

    ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಶಾಲೆಯ ಬಾತ್‍ರೂಂನಲ್ಲೇ ಮಗುವಿಗೆ ಜನ್ಮ ನೀಡಿದ 10ನೇ ತರಗತಿ ವಿದ್ಯಾರ್ಥಿನಿ!

    ಶಾಲೆಯ ಬಾತ್‍ರೂಂನಲ್ಲೇ ಮಗುವಿಗೆ ಜನ್ಮ ನೀಡಿದ 10ನೇ ತರಗತಿ ವಿದ್ಯಾರ್ಥಿನಿ!

    ನವದೆಹಲಿ: 15 ವರ್ಷದ ವಿದ್ಯಾರ್ಥಿನಿಯೊಬ್ಬಳು ಅವಧಿಗೂ ಮುನ್ನವೇ ಶಾಲೆಯ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆಯೊಂದು ದೆಹಲಿಯಲ್ಲಿ ಬೆಳಕಿಗೆ ಬಂದಿದೆ.

    ಮಗುವಿಗೆ ಜನ್ಮ ನೀಡಿದ ಬಾಲಕಿ ದೆಹಲಿಯ ಮುಖರ್ಜಿ ನಗರದಲ್ಲಿರೋ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಾಳೆ. ಸದ್ಯ ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

    ಏನಿದು ಪ್ರಕರಣ?: ಗುರುವಾರ ವಿದ್ಯಾರ್ಥಿನಿಗೆ ಶಾಲೆಯಲ್ಲಿ ಪರೀಕ್ಷೆ ಇತ್ತು. ಪರೀಕ್ಷೆ ಬರೆಯುತ್ತಿದ್ದ ವೇಳೆ ಆಕೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಹೀಗಾಗಿ ಶೌಚಾಲಯಕ್ಕೆ ತೆರಳಿದ್ದಾಳೆ. ಈ ವೇಳೆ ವಿದ್ಯಾರ್ಥಿನಿ ಬಾತ್ ರೂಮ್ ನಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ಕೂಡಲೇ ಆಕೆಯನ್ನು ಶಾಲಾ ಅಧಿಕಾರಿಗಳು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಘಟನೆಯ ಸಂಬಂಧ ಪೊಲೀಸರು ವಿದ್ಯಾರ್ಥಿನಿಯನ್ನು ವಿಚಾರಿಸಿದಾಗ, ನೆರೆಮನೆಯ ಆಟೋ ಚಾಲಕನೊಬ್ಬ ಒಂದು ವರ್ಷದಿಂದ 5 ಬಾರಿ ಅತ್ಯಾಚಾರವೆಸಗಿದ್ದಾನೆ ಎಂಬ ಸತ್ಯ ಹೊರಬಿದ್ದಿದೆ. ನೆರೆಮನೆಯ 51 ವರ್ಷದ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದು ಅಲ್ಲದೇ ಈ ವಿಷಯವನ್ನು ಯಾರಿಗೂ ತಿಳಿಸಿದಂತೆ ಒತ್ತಡ ಹೇರಿ ಆಕೆಗೆ ಹಣವನ್ನು ಕೊಡುತ್ತಿದ್ದ ಎಂಬುವುದಾಗಿ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.

    ಬಾಲಕಿಯ ಮಾಹಿತಿಯಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈತ ಮೂಲತಃ ಬಿಹಾರದವನಾಗಿದ್ದು, ದೆಹಲಿಯಲ್ಲಿ ಆಟೋ ರಿಕ್ಷಾ ಓಡಿಸುತ್ತಿದ್ದಾನೆ ಅಂತ ಪೊಲೀಸರು ತಿಳಿಸಿದ್ದಾರೆ. ವಿಚಾರಣೆಯ ವೇಳೆ ವಿದ್ಯಾರ್ಥಿನಿ ಗರ್ಭಿಣಿಯಾಗಿರೋ ವಿಚಾರ ತಿಳಿದು ಆಕೆಗೆ ಗರ್ಭಪಾತವಾಗಲು ಮಾತ್ರೆಯನ್ನು ನೀಡಿದ್ದೆ ಎನ್ನುವ ವಿಚಾರವನ್ನು ಪೊಲೀಸ್ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ.

    ವಿದ್ಯಾರ್ಥಿನಿಗೆ ತಾನು ಗರ್ಭಿಣಿಯಾಗಿರೋ ವಿಚಾರ ತಿಳಿದಿರಲಿಲ್ಲ. ಹೀಗಾಗಿ ಆಕೆಯ ಪೋಷಕರು ಈ ಬಗ್ಗೆ ಯೋಚನೆ ಮಾಡಿರಲಿಲ್ಲ. ಮಗಳು ಆವಾಗವಾಗ ಹೊಟ್ಟೆ ನೋವು ಅಂತ ಹೇಳುತ್ತಿದ್ದಳು. ಆಸಿಡಿಟಿಯಿಂದಾಗಿ ಹೀಗೆ ಆಗುತ್ತಿರಬಹುದುದೆಂದು ವಿದ್ಯಾರ್ಥಿನಿ ಪೋಷಕರು ನಿರ್ಲಕ್ಷ್ಯ ತೋರಿದ್ದರು. ಇದೀಗ ಬಾಲಕಿ ಆರೂವರೆ ತಿಂಗಳಿಗೆ ಮಗುವಿಗೆ ಜನ್ಮ ನೀಡಿದ್ದು, ಸದ್ಯ ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಇದೇ ವೇಳೆ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ಅಕ್ರಮವಾಗಿ 19 ಜಾನುವಾರು ಸಾಗಾಟ: ನಾಲ್ವರು ಅರೆಸ್ಟ್, ಲಾರಿ ಜಪ್ತಿ

    ಅಕ್ರಮವಾಗಿ 19 ಜಾನುವಾರು ಸಾಗಾಟ: ನಾಲ್ವರು ಅರೆಸ್ಟ್, ಲಾರಿ ಜಪ್ತಿ

    ಕಾರವಾರ: ಅಕ್ರಮವಾಗಿ ಲಾರಿಯೊಂದರಲ್ಲಿ ಸಾಗಿಸಲಾಗುತ್ತಿದ್ದ 19 ಜಾನುವಾರುಗಳನ್ನು ವಶಕ್ಕೆ ಪಡೆದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಪಟ್ಟಣದ ಜೋಡುಕೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಚಿತ ಮಾಹಿತಿ ಮೇರೆಗೆ ಶನಿವಾರ ಸಂಜೆ ಹುಬ್ಬಳ್ಳಿ ಕಡೆಯಿಂದ ಬರುತ್ತಿದ್ದ ಲಾರಿಯನ್ನು ತಪಾಸಣೆಗೊಳಪಡಿಸಿದಾಗ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಜಾನುವಾರು ಸಾಗಿಸುತ್ತಿರುವುದು ಕಂಡು ಬಂದಿದೆ.

    ಕೇರಳದ ಕಾಸರಗೋಡು ಮೂಲದವರಾದ ಚಾಲಕ ಬಿ.ಎಮ್. ಅಬುಬಕ್ಕರ್ ಮಹಮ್ಮದ್ (47) ಸುನೀಲ್ ಕೃಷ್ಣ ನಾಯರ್ (35) ಶಸಿ ಸೋಮಾ (35) ಹಾಸನ ತಾಲೂಕಿನ ಮಂಜೇಗೌಡ ಜವರೆಗೌಡ (35) ಬಂಧಿತ ಆರೋಪಿಗಳು.

    ಜಾನುವಾರು ಹಾಗೂ ಲಾರಿಯ ಮೌಲ್ಯ 9.5 ಲಕ್ಷ ರೂ ಗಳೆಂದು ಅಂದಾಜಿಸಲಾಗಿದೆ. ಪೊಲೀಸ್ ನಿರೀಕ್ಷಕ ಮಂಜುನಾಥ ನಾಯಕ ನಿರ್ದೇಶನದಲ್ಲಿ ಪಿಎಸ್‍ಐ ಶ್ರೀಧರ್ ಎಸ್. ಆರ್ ಮಾರ್ಗದರ್ಶನ ಮಾಡಿದ್ದರು. ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.