Tag: police

  • ನಿಂತಿದ್ದ ಲಾರಿಗೆ ಓಲಾ ಕ್ಯಾಬ್ ಡಿಕ್ಕಿ- ಇಬ್ಬರು ಸ್ಥಳದಲ್ಲೇ ಸಾವು

    ನಿಂತಿದ್ದ ಲಾರಿಗೆ ಓಲಾ ಕ್ಯಾಬ್ ಡಿಕ್ಕಿ- ಇಬ್ಬರು ಸ್ಥಳದಲ್ಲೇ ಸಾವು

    ಬೆಂಗಳೂರು: ನಿಂತಿದ್ದ ಲಾರಿಗೆ ಓಲಾ ಕ್ಯಾಬ್ ಡಿಕ್ಕಿಯಾದ ಪರಿಣಾಮ ಚಾಲಕ ಹಾಗೂ ಓರ್ವ ಪ್ಯಾಸೆಂಜರ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ನಡೆದಿದೆ.

    ನಗರದ ಏರ್‍ಪೋರ್ಟ್ ರಸ್ತೆಯ ಜಿಕೆವಿಕೆ ಮೇಲ್ಸೇತುವೆ ಬಳಿ ಈ ದುರ್ಘಟನೆ ಸಂಭವಿಸಿದೆ. ದೆಹಲಿ ಮೂಲದ ಉಮೇಶ್ ಕುಮಾರ್ ಮಿಶ್ರ ಮೃತ ಪ್ಯಾಸೆಂಜರ್ ಎನ್ನಲಾಗಿದೆ. ಓಲಾ ಕ್ಯಾಬ್ ಚಾಲಕನ ಗುರುತು ಇನ್ನೂ ಪತ್ತೆಯಾಗಿಲ್ಲ.

    ಈ ಅಪಘಾತವಾದ ಹಿನ್ನೆಲೆಯಲ್ಲಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್ ಆಗಿತ್ತು. ಯಲಹಂಕ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಸಿಮೆಂಟ್ ಕಂಪೆನಿಗೆ ಬೆಂಕಿ- ಅಪಾರ ಪ್ರಮಾಣದ ಖಾಲಿ ಸಿಮೆಂಟ್ ಚೀಲ, ಮಷೀನ್ ಸುಟ್ಟು ಭಸ್ಮ

    ಸಿಮೆಂಟ್ ಕಂಪೆನಿಗೆ ಬೆಂಕಿ- ಅಪಾರ ಪ್ರಮಾಣದ ಖಾಲಿ ಸಿಮೆಂಟ್ ಚೀಲ, ಮಷೀನ್ ಸುಟ್ಟು ಭಸ್ಮ

    ಕೊಪ್ಪಳ: ಅಲ್ಟ್ರಾಟೆಕ್ ಸಿಮೆಂಟ್ ಕಂಪೆನಿಗೆ ಬೆಂಕಿ ಹೊತ್ತಿಕೊಂಡ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ತಾಲೂಕಿನ ಗಿಣಗೇರಿ ಬಳಿ ಇರೋ ಅಲ್ಟ್ರಾಟೆಕ್ ಸಿಮೆಂಟ್ ಕಂಪೆನಿಗೆ ಶುಕ್ರವಾರ ತಡರಾತ್ರಿ ಬೆಂಕಿ ಹೊತ್ತಿಕೊಂಡಿದೆ. ಶಾರ್ಟ್ ಸರ್ಕ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ಅಗ್ನಿ ಅವಘಡದಿಂದ ಅಪಾರ ಪ್ರಮಾಣದ ಖಾಲಿ ಸಿಮೆಂಟ್ ಚೀಲ ಮತ್ತು ಮಷೀನ್ ಸುಟ್ಟು ಭಸ್ಮವಾಗಿದೆ.

    ಇಂದು ಮುಂಜಾನೆ ಕೊಪ್ಪಳ, ಬಳ್ಳಾರಿ, ಗದಗ, ಹೊಸಪೇಟೆ ಅಗ್ನಿ ಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸೋ ಕಾರ್ಯ ನಡೆದಿದೆ. ಸುಮಾರು ಒಂದು ಕೋಟಿ ಮೌಲ್ಯದಷ್ಟು ಸಿಮೆಂಟ್ ಚೀಲ ಮತ್ತು ಮಷೀನ್‍ಗಳು ಸುಟ್ಟು ಕರಕಲಾಗಿವೆ.

    ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ವಿಡಿಯೋ: ಯುವತಿಯನ್ನು ಚುಡಾಯಿಸ್ತಿದ್ದ ಯುವಕರಿಗೆ ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಗೂಸ

    ವಿಡಿಯೋ: ಯುವತಿಯನ್ನು ಚುಡಾಯಿಸ್ತಿದ್ದ ಯುವಕರಿಗೆ ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಗೂಸ

    ಬೆಂಗಳೂರು: ಕೆಲ ದಿನಗಳಿಂದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಯುವತಿಯೊಬ್ಬಳಿಗೆ ಚುಡಾಯಿಸುತ್ತಿದ್ದ ಯುವಕರು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಹಿಗ್ಗಾಮುಗ್ಗಾ ಗೂಸ ತಿಂದಿದ್ದಾರೆ.

    ಹಿಗ್ಗಾಮುಗ್ಗಾ ಥಳಿಸುತ್ತಿರುವ ದೃಶ್ಯ ಕಂಡುಬಂದಿದ್ದು ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬನ್ನೇರುಘಟ್ಟ ರಸ್ತೆಯ ರಾಗಿಹಳ್ಳಿ ಗ್ರಾಮದಲ್ಲಿ. ಇದೇ ಗ್ರಾಮದ ಯುವತಿಯನ್ನು ನಾಲ್ವರು ಯುವಕರು ಕೆಲ ದಿನಗಳಿಂದ ಹಿಂಬಾಲಿಸಿಕೊಂಡು ಚುಡಾಯಿಸುತ್ತಿದ್ದರು.

    ಆದರೆ ಆ ಯುವಕರ ಗ್ರಹಚಾರ ಕೆಟ್ಟಿತ್ತು. ಈ ಇಬ್ಬರು ಯುವಕರು ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಈ ವೇಳೆ ಯುವತಿಯನ್ನು ಚುಡಾಯಿಸಿದ್ದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ನಡುರಸ್ತೆಯಲ್ಲಿ ಹಗ್ಗದಿಂದ ಕಟ್ಟಿ ಥಳಿಸಿದ್ದಾರೆ. ರಾಗಿಹಳ್ಳಿ ಗ್ರಾಮದಿಂದ ಬನ್ನೇರುಘಟ್ಟ ಪೊಲೀಸ್ ಠಾಣೆವರೆಗೂ ಥಳಿಸಿಕೊಂಡು ಬಂದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಈ ಯುವಕರು ಕಳೆದ ಕೆಲವು ದಿನಗಳಿಂದ ಕಾಲೇಜು ಬಳಿ ಹಾಗೂ ಬಸ್ಸಿನಲ್ಲಿ ಯುವತಿಗೆ ಕಿರುಕುಳ ನೀಡುತ್ತಿದ್ದು ತನ್ನನ್ನು ಪ್ರೀತಿಸು ಎಂದು ಹಿಂದೆ ಬಿದ್ದಿದ್ದರು ಎಂದು ತಿಳಿದುಬಂದಿದೆ. ಇದರಿಂದ ಮನನೊಂದ ಯುವತಿ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಪೋಷಕರು ಹಾಗೂ ಸ್ನೇಹಿತರು ಶುಕ್ರವಾರ ಬಸ್ ಸ್ಟ್ಯಾಂಡ್ ಬಳಿ ಹೋಗುತ್ತಿದ್ದಾಗ ಮತ್ತೆ ಇದೇ ಯುವಕರು ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ನೇರವಾಗಿ ಸಿಕ್ಕಿಬಿದ್ದಿದ್ದು ಇದೀಗ ಪೊಲೀಸರ ಅಥಿತಿಯಾಗಿದ್ದಾರೆ.

    https://youtu.be/DlGlUvR0VPE

  • ವಿವಾಹಿತನ ಪ್ರೀತಿ ಮಾಡಿದ ತಪ್ಪಿಗೆ ಯುವತಿ ಆತ್ಮಹತ್ಯೆ

    ವಿವಾಹಿತನ ಪ್ರೀತಿ ಮಾಡಿದ ತಪ್ಪಿಗೆ ಯುವತಿ ಆತ್ಮಹತ್ಯೆ

    ಶಿವಮೊಗ್ಗ: ವಿವಾಹಿತನ ಪ್ರೀತಿ ಮಾಡಿದ ತಪ್ಪಿಗೆ ಯುವತಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಶಿಕಾರಿಪುರದಲ್ಲಿ ನಡೆದಿದೆ.

    ಮೂಲತಃ ದಾವಣಗೆರೆಯ ಸಂಧ್ಯಾ ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ನರ್ಸಿಂಗ್ ಓದುತ್ತಿದ್ದಳು. ಶಿಕಾರಿಪುರದಲ್ಲಿದ್ದ ಸಂಬಂಧಿಗಳ ಮನೆಗೆ ಹೋದಾಗ ಪರಿಚಯ ಆದ ಗೋಣಿ ಸಂದೀಪ ಎಂಬಾತನ ಜೊತೆ ಲವ್ ಶುರು ಆಗಿತ್ತು.

    ಮದುವೆ ಆಗಿ ಇಬ್ಬರು ಮಕ್ಕಳಿದ್ದ ಸಂದೀಪ ಈ ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿ ಇವಳನ್ನು ಬಳಸಿಕೊಂಡದ್ದ. ಮೂರು ದಿನಗಳ ಹಿಂದೆ ಶಿಕಾರಿಪುರದ ರಾಜಲಕ್ಷ್ಮಿಲಾಡ್ಜ್ ನಲ್ಲಿ ರೂಮ್ ಮಾಡಿ ಅವಳ ಜೊತೆ ಇದ್ದ.

    ಗುರುವಾರ ಸಂಜೆ ಮದುವೆ ವಿಷಯದ ಬಗ್ಗೆ ಇಬ್ಬರಿಗೂ ವಾಗ್ವಾದ ನಡೆದಿದೆ. ಸಂದೀಪ ಲಾಡ್ಜ್ ಕೊಠಡಿಯಿಂದ ಹೊರ ಹೋದ ನಂತರ ಸಂಧ್ಯಾ ಅದೇ ಕೊಠಡಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಘಟನೆಯ ನಂತರ ಗೋಣಿ ಸಂದೀಪ್ ತಲೆ ಮರೆಸಿಕೊಂಡಿದ್ದಾನೆ. ಶಿಕಾರಿಪುರದ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಆತ್ಮಹತ್ಯೆಗಳಿಗೆ ಹೆದರಿ ಕ್ವಾಟರ್ಸ್ ನಲ್ಲಿ ಪೊಲೀಸ್ ಸಿಬ್ಬಂದಿಯಿಂದ ಹೋಮ!

    ಆತ್ಮಹತ್ಯೆಗಳಿಗೆ ಹೆದರಿ ಕ್ವಾಟರ್ಸ್ ನಲ್ಲಿ ಪೊಲೀಸ್ ಸಿಬ್ಬಂದಿಯಿಂದ ಹೋಮ!

    ಚಾಮರಾಜನಗರ: ಪೊಲೀಸ್ ಕ್ವಾಟರ್ಸ್ ನಲ್ಲಿ ಆತ್ಮಹತ್ಯೆಗಳನ್ನು ತಡೆಗಟ್ಟಿ ಶಾಂತಿ ನೆಲೆಸಲು ಪೊಲೀಸ್ ಸಿಬ್ಬಂದಿ ಕುಟುಂಬ ಸದಸ್ಯರು ಈಗ ಹೋಮ ಹವನದ ಮೊರೆ ಹೋಗಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರಿನ ಪೊಲೀಸ್ ಕ್ವಾಟ್ರಸ್ ನಲ್ಲಿ ಹೆಚ್ಚುತ್ತಿದ್ದ ಆತ್ಮಹತ್ಯೆಗಳನ್ನು ತಡೆಗಟ್ಟಲು ಹೋಮ ಹವನವನ್ನು ಮಾಡಿಸಲಾಗಿದೆ.

    ಕೆಲ ದಿನಗಳ ಹಿಂದೆ ಅಷ್ಟೆ ಈ ಕ್ವಾಟರ್ಸ್ ನಲ್ಲಿ ಇಬ್ಬರು ಪೊಲೀಸ್ ಪೇದೆಗಳು ಆತ್ಮಹತ್ಯೆಗೆ ಶರಣಾಗಿದ್ದರು. ಹೀಗಾಗಿ ಮುಂದಿನ ದಿನಗಳಲ್ಲಿ ಇಲ್ಲಿ ಈ ರೀತಿಯ ಪ್ರಕರಣಗಳು ನಡೆಯದೇ ಇರಲು ಹೋಮ ಮಾಡಿಸಿದ್ದಾರೆ.

    ಈ ಕ್ವಾಟರ್ಸ್ ನ್ನು ಉದ್ಘಾಟಿಸಿದ ಸಂಧರ್ಭದಲ್ಲಿ ಇಲ್ಲಿ ಯಾವುದೇ ರೀತಿಯ ಹೋಮವನ್ನು ಮಾಡಿಸಿಲ್ಲದ ಕಾರಣ ಈ ರೀತಿಯ ಅವಘಡಗಳು ಸಂಭವಿಸುತ್ತಿವೆ. ಹೀಗಾಗಿ ಹೋಮ ಮಾಡಿಸಲಾಗಿದೆ ಎಂದು ಇಲ್ಲಿ ನೆಲೆಸಿರುವ ಜನರ ಹೇಳಿದ್ದಾರೆ.

    ಆತ್ಮಹತ್ಯೆ ಪ್ರಕರಣಗಳು ಬೆಳಕಿಗೆ ಬಂದ ಬಳಿಕ ಸಿಬ್ಬಂದಿ ಕುಟುಂಬ ಇಲ್ಲಿ ವಾಸಿಸಲು ಹಿಂದೇಟು ಹಾಕುತ್ತಿದ್ದವು. ಹೀಗಾಗಿ ಇಲ್ಲಿ ವಿಶೇಷ ಪೂಜೆ ಹಾಗೂ ಹೋಮ ಮಾಡಿಸಿ ಕ್ವಾಟರ್ಸ್ ಗೆ ಶಾಂತಿ ಮಾಡಿಸಲಾಯಿತು. ಹಾಗೆ ಸಾರ್ವಜನಿಕರಿಗೆ ಅನ್ನದಾನ ಮಾಡುವ ಮೂಲಕ ಕ್ವಾಟರ್ಸ್ ನಲ್ಲಿ ಮುಂದೆ ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ದೇವರಿಗೆಲ್ಲ ಪ್ರಾರ್ಥನೆ ಮಾಡಲಾಯಿತು.

  • ಪೊಲೀಸರ ಮುಂದೆಯೇ ಕೇರಳ ಬಿಜೆಪಿಯ ರಾಜ್ಯ ಕಚೇರಿಯ ಮೇಲೆ ಕಲ್ಲು ತೂರೋದನ್ನು ನೋಡಿ

    ಪೊಲೀಸರ ಮುಂದೆಯೇ ಕೇರಳ ಬಿಜೆಪಿಯ ರಾಜ್ಯ ಕಚೇರಿಯ ಮೇಲೆ ಕಲ್ಲು ತೂರೋದನ್ನು ನೋಡಿ

    ತಿರುವನಂತಪುರಂ: ಕೇರಳ ಬಿಜೆಪಿಯ ರಾಜ್ಯ ಕಚೇರಿ ಮೇಲೆ ಸಿಪಿಐ(ಎಂ) ಕಾಯಕರ್ತರು ದಾಳಿ ಮಾಡಿರುವ ಘಟನೆ ಶುಕ್ರವಾರ ಬೆಳಗ್ಗೆ ತಿರುವನಂತಪುರಂನಲ್ಲಿ ನಡೆದಿದೆ.

    ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನನ್ ರಾಜಶೇಖರ್ ಕಚೇರಿಯಲ್ಲಿರುವ ವೇಳೆ ಈ ದಾಳಿ ನಡೆದಿದೆ. ಆ ಸ್ಥಳದಲ್ಲಿ ಪೊಲೀಸರಿದ್ದರೂ ಕೂಡ ದುಷ್ಕರ್ಮಿಗಳು ಕೈಗೆ ಸಿಕ್ಕಿದ್ದನ್ನು ತೂರಿ ಬಿಜೆಪಿ ಕಚೇರಿಯ ಕಿಟಕಿ ಗಾಜುಗಳನ್ನ ಪುಡಿ ಪುಡಿ ಮಾಡಿ ಅಲ್ಲೇ ನಿಂತಿದ್ದ ವಾಹಗಳ ಮೇಲೂ ಕಲ್ಲುತೂರಾಟ ನಡೆಸಿದ್ದಾರೆ.

    ಬಿಜೆಪಿ ನಾಯಕರು ಸಿಪಿಐ(ಎಂ) ಕಾರ್ಯಕರ್ತರು ಈ ಕೃತ್ಯದ ಹಿಂದೆ ಇದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

    ರಾಜಶೇಖರ್ ಅವರ ಕಾರು ಸೇರಿದಂತೆ ಸ್ಥಳದಲ್ಲಿ ಪಾರ್ಕ್ ಮಾಡಿದ್ದ 6 ಕಾರುಗಳು ಮೇಲೆ ದಾಳಿ ನಡೆಸಲಾಗಿದೆ.

  • ಮಂಗ್ಳೂರಿನ ಆಳ್ವಾಸ್ ನಲ್ಲಿ SSLC ವಿದ್ಯಾರ್ಥಿನಿ ನಿಗೂಢ ಸಾವು- ಕೊಲೆ ಎಂದು ಪೋಷಕರ ಆರೋಪ

    ಮಂಗ್ಳೂರಿನ ಆಳ್ವಾಸ್ ನಲ್ಲಿ SSLC ವಿದ್ಯಾರ್ಥಿನಿ ನಿಗೂಢ ಸಾವು- ಕೊಲೆ ಎಂದು ಪೋಷಕರ ಆರೋಪ

    ಮಂಗಳೂರು: ನ್ಯಾಶನಲ್ ಲೆವಲ್ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದ ವಿದ್ಯಾರ್ಥಿನಿಯೊಬ್ಬಳು ಮಂಗಳೂರಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು, ಇದು ಕೊಲೆ ಅಂತ ಈಗ ಪೋಷಕರು ಆರೋಪಿಸಿದ್ದಾರೆ.

    ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಯಾಗಿದ್ದ ಕಾವ್ಯ(15) ಜುಲೈ 20ರಂದು ಹಾಸ್ಟೆಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಶಾಲೆಯಿಂದ ತಿಳಿಸಲಾಗಿತ್ತು. ಆದರೆ ಹೆತ್ತವರು ಅಲ್ಲಿಗೆ ತೆರಳುವಷ್ಟರಲ್ಲಿ ವಿದ್ಯಾರ್ಥಿನಿಯ ಶವವನ್ನು ಆಳ್ವಾಸ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು.

    ಇದೀಗ ಹೆತ್ತವರು ಕಾವ್ಯ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಪ್ರಕರಣವನ್ನು ಮುಚ್ಚಿ ಹಾಕಲು ಸಂಸ್ಥೆಯ ಆಡಳಿತ ಮಂಡಳಿ ಪ್ರಯತ್ನಿಸುತ್ತಿದೆ. ನಮ್ಮ ಹುಡುಗಿ ಕ್ರೀಡಾಪಟುವಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವಂಥವಳಲ್ಲ. ಆಕೆಯನ್ನು ಶಾಲೆಯವರೇ ಕಿರುಕುಳ ಕೊಟ್ಟು ಕೊಲೆಗೈದಿರುವ ಸಂಶಯ ಇದೆ ಎಂದು ವಿದ್ಯಾರ್ಥಿನಿಯ ತಾಯಿ ಬೇಬಿ ಆರೋಪಿಸಿದ್ದಾರೆ.

    ಘಟನೆ ನಡೆದ ರಾತ್ರಿ ಎಂಟು ಗಂಟೆಗೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಾಲೆಯ ದೈಹಿಕ ಶಿಕ್ಷಕರು ತಿಳಿಸಿದ್ದಾರೆ. ಆದರೆ ನಾವು ಅಲ್ಲಿಗೆ ತಲುಪುವ ಮುನ್ನವೇ ಶವವನ್ನು ಶವಾಗಾರದಲ್ಲಿರಿಸಿದ್ದಲ್ಲದೆ ತಮಗೆ ಸರಿಯಾಗಿ ನೋಡುವುದಕ್ಕೂ ಅವಕಾಶ ಮಾಡಿಲ್ಲ. ಹೀಗಾಗಿ ನಮ್ಮ ಹುಡುಗಿ ಹೇಗೆ ಸಾವನ್ನಪ್ಪಿದ್ದಾಳೆ ಅನ್ನೋದು ಗೊತ್ತಾಗಬೇಕು. ಪೊಲೀಸರು ಸೂಕ್ತ ತನಿಖೆ ನಡೆಸಿ ನ್ಯಾಯ ದೊರಕಿಸಬೇಕೆಂದು ಪೊಲೀಸ್ ಆಯುಕ್ತರಿಗೆ ಪೋಷಕರು ದೂರು ನೀಡಿದ್ದಾರೆ.

    ಕಟೀಲು ಬಳಿಯ ದೇವರಗುಡ್ಡ ಎಂಬಲ್ಲಿನ ನಿವಾಸಿಗಳಾದ ಲೋಕೇಶ್ ಮತ್ತು ಬೇಬಿ ದಂಪತಿಯ ಏಕೈಕ ಪುತ್ರಿಯಾಗಿರುವ ಕಾವ್ಯ ಚಿಕ್ಕಂದಿನಿಂದಲೇ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದಳು. ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿಯೂ ಪಾಲ್ಗೊಂಡಿದ್ದು ಕಟೀಲು ಶಾಲೆಗೆ ಕೀರ್ತಿ ತಂದಿದ್ದಳು. ಅದರಂತೆ ಆಳ್ವಾಸ್ ಹೈಸ್ಕೂಲಿನ ದೈಹಿಕ ಶಿಕ್ಷಕರೇ ಕಾವ್ಯಾ ಹೆತ್ತವರನ್ನು ಸಂಪರ್ಕಿಸಿ, ತಮ್ಮ ಶಾಲೆಗೆ ಕಳಿಸಿಕೊಡಿ ಕ್ರೀಡಾ ಕೋಟಾದಲ್ಲಿ ಉಚಿತವಾಗಿ ಶಿಕ್ಷಣ ಕೊಡಿಸುತ್ತೇವೆಂದು ಹೇಳಿ ಕರೆಸಿಕೊಂಡಿದ್ದರು.

    ಇದೇ ಜುಲೈ ಆರಂಭದಲ್ಲಿ ಕಟೀಲು ಶಾಲೆಯಿಂದ ಆಳ್ವಾಸ್ ಹೈಸ್ಕೂಲು ಸೇರಿದ್ದ ಕಾವ್ಯಾ ಇದೀಗ ನಿಗೂಢವಾಗಿ ಸಾವನ್ನಪ್ಪಿರುವುದು ಹೆತ್ತವರನ್ನು ಆತಂಕಕ್ಕೀಡುಮಾಡಿದೆ.

     

    ಒಂದು ಸಾವು, ಹಲವು ಪ್ರಶ್ನೆ:
    1. ಹಾಸ್ಟೆಲ್‍ನೊಳಗೆ ನೇಣು ಹಾಕಲು ಸೀರೆ ಸಿಕ್ಕಿದ್ದು ಎಲ್ಲಿಂದ?
    2. ಹೆತ್ತವರು ಬರುವ ಮೊದಲೇ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದು ಯಾಕೆ?
    3. ಸತ್ತ ಸುದ್ದಿ ನೀಡಿದ ಅರ್ಧಗಂಟೆಯೊಳಗೆ ಹೆತ್ತವರು ತಲುಪಿದ್ದರೂ ಶವಾಗಾರದಲ್ಲಿ ಇರಿಸಿದ್ಯಾಕೆ?
    4. ಮುಂಜಾನೆ 4 ಗಂಟೆಗೆ ದೈಹಿಕ ಶಿಕ್ಷಕ ತರಬೇತಿಗೆಂದು ಕರೆದದ್ದು ಯಾಕೆ?
    5. ಸಾಯುವ ಮೊದಲ ದಿನ ಹೆತ್ತವರಲ್ಲಿ ಸಂತೋಷದಿಂದಲೇ ಮಾತನಾಡಿದ್ದಾಕೆ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?
    6. ಟ್ರಾಕ್ ಸೂಟ್‍ನಲ್ಲೇ ಮೃತದೇಹ ಇದ್ದದ್ದು ಯಾಕೆ?

  • ಅನುಮಾನಸ್ಪದ ರೀತಿಯಲ್ಲಿ ಸಾವು- ಇಬ್ಬರು ವ್ಯಕ್ತಿಗಳ ಶವ ಪತ್ತೆ

    ಅನುಮಾನಸ್ಪದ ರೀತಿಯಲ್ಲಿ ಸಾವು- ಇಬ್ಬರು ವ್ಯಕ್ತಿಗಳ ಶವ ಪತ್ತೆ

    ಕೋಲಾರ: ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಇಬ್ಬರು ವ್ಯಕ್ತಿಗಳ ಶವ ಪತ್ತೆಯಾದ ಘಟನೆ ಜಿಲ್ಲೆಯ ಮಾಲೂರು ಪಟ್ಟಣದ ಮಾಸ್ತಿ ವೃತ್ತದ ಔಷಧಿ ಅಂಗಡಿ ಬಳಿ ನಡೆದಿದೆ.

    ಪಟ್ಟಣದ ಸಮತಾನಗರ ನಿವಾಸಿಗಳಾದ ಗೋಪಾಲ್ (44) ಹಾಗೂ ರಾಜಪ್ಪ (40) ಅವರ ಶವಗಳು ಪತ್ತೆಯಾಗಿವೆ. ಕಳೆದ ರಾತ್ರಿ ಕಂಠಪೂರ್ತಿ ಮದ್ಯಪಾನ ಮಾಡಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

    ಇವರಿಬ್ಬರೂ ಪಟ್ಟಣದಲ್ಲಿ ಚಿಂದಿ ಪೇಪರ್ ಆಯುವ ಕೆಲಸ ಮಾಡುತ್ತಿದ್ದರು. ಸ್ಥಳಕ್ಕೆ ಮಾಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಬೆಂಕಿಯಲ್ಲಿ ಹೊತ್ತಿ ಉರಿದ ಲಾರಿ- 8 ಲಕ್ಷ ರೂ. ಜೋಳ ಸುಟ್ಟು ಭಸ್ಮ

    ಬೆಂಕಿಯಲ್ಲಿ ಹೊತ್ತಿ ಉರಿದ ಲಾರಿ- 8 ಲಕ್ಷ ರೂ. ಜೋಳ ಸುಟ್ಟು ಭಸ್ಮ

    ಮೈಸೂರು: ಜೋಳ ತುಂಬಿಕೊಂಡು ಸಾಗುತ್ತಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಲಾರಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

    ನಂಜನಗೂಡು ತಾಲೂಕಿನ ಕವಲಂದೆ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ. ಈ ಜೋಳ ರೈತ ಮಂಜುನಾಥ್ ಮತ್ತು ಜಗದೀಶ್ ಎಂಬವರಿಗೆ ಸೇರಿದ್ದು, ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ಜೋಳ ಬೆಂಕಿಗಾಹುತಿಯಾಗಿದೆ.

    ಕವಲಂದೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • ದರ್ಗಾಕ್ಕೆ ಬಂದ ಗೃಹಿಣಿಯನ್ನ ಅತ್ಯಾಚಾರಗೈದ ಕಾಮುಕರು

    ದರ್ಗಾಕ್ಕೆ ಬಂದ ಗೃಹಿಣಿಯನ್ನ ಅತ್ಯಾಚಾರಗೈದ ಕಾಮುಕರು

    ಬಳ್ಳಾರಿ: ಉರುಸಿನ ವೇಳೆ ದರ್ಗಾಕ್ಕೆ ದೇವರ ದರ್ಶನಕ್ಕಾಗಿ ಆಗಮಿಸಿದ ಗೃಹಿಣಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಬಳ್ಳಾರಿ ತಾಲೂಕಿನ ರೂಪನಗುಡಿ ಸಮೀಪದ ದರ್ಗಾ ಬಳಿ ನಡೆದಿದೆ.

    ರಾಯಚೂರು ಮೂಲದ ಮಹಿಳೆಯೊಬ್ಬರು ದರ್ಗಾ ಉರುಸಿನ ಪ್ರಯುಕ್ತ ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ಮಹಿಳೆ ಬರ್ಹಿದೆಸೆಗೆ ತೆರಳಿದ್ದಾಗ ನಾಲ್ವರು ಕಾಮುಕರು ಆಕೆಯನ್ನು ಕಿಡ್ನ್ಯಾಪ್ ಮಾಡಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಅಲ್ಲದೇ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೂ ಯತ್ನಿಸಿದ್ದಾರೆ. ಅದೃಷ್ಟವಶಾತ್ ಮಹಿಳೆ ಬದುಕುಳಿದಿದ್ದಾರೆ.

    ಅರೆಪ್ರಜ್ಞಾವಸ್ಥೆಯಲ್ಲಿದ್ದ ಮಹಿಳೆಯನ್ನು ಸ್ಥಳೀಯರು ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಬಗ್ಗೆ ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

    ಘಟನೆಯನ್ನು ಖಂಡಿಸಿ ಸ್ಥಳೀಯರು ಬಳ್ಳಾರಿ ರೂಪನಗುಡಿ ರಸ್ತೆಯನ್ನು ತಡೆದು ರಾತ್ರಿ ಪ್ರತಿಭಟನೆ ನಡೆಸಿ, ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.