Tag: police

  • ಸುಂದರ ಹುಡ್ಗೀರನ್ನ ತೋರಿಸಿ ಹಣ ಪೀಕ್ತಿದ್ದ ಪಿಂಪ್‍ಗಳ ಬಂಧನ

    ಸುಂದರ ಹುಡ್ಗೀರನ್ನ ತೋರಿಸಿ ಹಣ ಪೀಕ್ತಿದ್ದ ಪಿಂಪ್‍ಗಳ ಬಂಧನ

    ಬೆಂಗಳೂರು: ಸುಂದರ ಹುಡುಗಿಯರನ್ನು ತೋರಿಸಿ ಜನರಿಂದ ಸಾವಿರಾರು ರೂಪಾಯಿ ಹಣ ಪೀಕ್ತಾಯಿದ್ದ ಮೂವರು ಪಿಂಪ್‍ಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಪ್ರಮುಖ ಆರೋಪಿ ಮೋಹಿತ್ ಗೌಡ ಸೇರಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ನಗರದ ಮಡಿವಾಳದ ಸಿಲ್ಕ್ ಬೋರ್ಡ್ ಸಿಗ್ನಲ್ ಬಳಿಯ ಮನೆಯೊಂದರ ಮನೆ ಮೇಲೆ ದಾಳಿ ನಡೆಸಿದ್ರು. ದಾಳಿ ವೇಳೆ ಪೊಲೀಸರು ಇಬ್ಬರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

    ಆರೋಪಿಗಳು ಮೈಸೂರು ಹಾಗೂ ಬೆಂಗಳೂರಲ್ಲಿ ಹುಡುಗಿಯರನ್ನು ತೋರಿಸಿ ಹಣ ಪಡೆದು ನಾಮ ಹಾಕುತ್ತಿದ್ದರು. ಈ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪೊಲೀಸರು ಬಂಧಿತ ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.

  • ಕುಡಿದ ಮತ್ತಲ್ಲಿ ಅಪರಿಚಿತನಿಂದ ವ್ಯಕ್ತಿಗೆ ಚಾಕು ಇರಿತ

    ಕುಡಿದ ಮತ್ತಲ್ಲಿ ಅಪರಿಚಿತನಿಂದ ವ್ಯಕ್ತಿಗೆ ಚಾಕು ಇರಿತ

    ಬೆಂಗಳೂರು: ಕುಡಿದ ಮತ್ತಿನಲ್ಲಿ ಅಪರಿಚಿತನೊಬ್ಬ ವ್ಯಕ್ತಿಗೆ ಚಾಕು ಇರಿದು ಸ್ಥಳದಿಂದ ಪರಾರಿಯಾಗಿರುವ ಘಟನೆ ನಡೆದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಟಿ.ಬೇಗೂರಿನ ಭೈರನಹಳ್ಳಿ ಕ್ರಾಸ್ ಬಳಿ ಕಳೆದ ರಾತ್ರಿ ಈ ಘಟನೆ ಸಂಭವಿಸಿದೆ. ಚಾಕು ಇರಿತಕ್ಕೊಳಗಾದ ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿ ಪರಮೇಶ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಪರಮೇಶ್ ತನ್ನ ಸ್ನೇಹಿತರಾದ ನರಸಿಂಹಮೂರ್ತಿ ಹಾಗೂ ಕಿರಣ ಜೊತೆಗೆ ಪಾರ್ಟಿ ಮಾಡಲು ಬಂದ ವೇಳೆ ಘಟನೆ ನಡೆದಿದೆ.

    ಭೈರಸಂದ್ರ ಕ್ರಾಸ್ ಬಳಿಯ ಬಾರ್‍ವೊಂದರಲ್ಲಿ ಎಣ್ಣೆ ಪಾರ್ಟಿ ಮಾಡಿ ಹೊರಗಡೆ ಬಂದು ಪರಮೇಶ್ ಮೊಬೈಲ್ ನಲ್ಲಿ ಮಾತಾಡುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿ ಬಂದು ಚಾಕುವಿನಿಂದ ಇರಿದಿದ್ದಾನೆ.

    ಈ ಬಗ್ಗೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  • ಮಾನಸಿಕ ಅಸ್ವಸ್ಥನ ಮೇಲೆ ಸಲಿಂಗ ಕಾಮ ನಡೆಸಿದ್ದ ಕಾಮುಕ ಅರೆಸ್ಟ್

    ಮಾನಸಿಕ ಅಸ್ವಸ್ಥನ ಮೇಲೆ ಸಲಿಂಗ ಕಾಮ ನಡೆಸಿದ್ದ ಕಾಮುಕ ಅರೆಸ್ಟ್

    ಮೈಸೂರು: ಮಾನಸಿಕ ಅಸ್ವಸ್ಥನೊಬ್ಬನ ಜೊತೆ ಸಲಿಂಗ ಕಾಮ ನಡೆಸಿದ್ದ ಕಾಮುಕನನ್ನು ಜಿಲ್ಲೆಯ ಎಚ್.ಡಿ.ಕೋಟೆಯ ಪೊಲೀಸರು ಬಂಧಿಸಿದ್ದಾರೆ.

    ಎಚ್.ಡಿ.ಕೋಟೆ ತಾಲೂಕಿನ ನಂಜಯ್ಯನ ಕಾಲೋನಿ ಗ್ರಾಮದ ಮಣಿ (26) ಬಂಧಿತ ಆರೋಪಿ. ಮಣಿ ಅದೇ ಗ್ರಾಮದ ಮಾನಸಿಕ ಅಸ್ವಸ್ಥನಾದ 28 ವರ್ಷದ ದೇವಪ್ಪ (ಹೆಸರು ಬದಲಾಯಿಸಿದೆ) ಕೂಲಿ ಕೆಲಸಕ್ಕೆ ಹೋದಾಗ ಆತನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದ.

    ಇದನ್ನೂ ಓದಿ: ಹುಡುಗರೇ ಬೀ ಕೇರ್‍ಫುಲ್.. ಫೇಸ್‍ಬುಕ್‍ನಲ್ಲಿದೆ ಹೋಮೊ ಸೆಕ್ಸ್ ಪೇಜ್!

    ಘಟನೆ ನಡೆದು ಐದು ದಿನಗಳ ಬಳಿಕ ದೇವಪ್ಪ ನೋವಿನಿಂದ ಬಳಲುತ್ತಾ ತಾಯಿಗೆ ವಿಷಯ ತಿಳಿಸಿದ್ದಾನೆ. ವಿಷಯ ತಿಳಿದ ತಾಯಿ ಮಣಿ ವಿರುದ್ಧ ದೂರು ದಾಖಲಿಸಿದ್ದಾರೆ. ಮಣಿಯ ಪೈಶಾಚಿಕ ಕೃತ್ಯಕ್ಕೆ ಒಳಗಾದ ದೇವಪ್ಪನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ವಿಡಿಯೋ: ಹೆಲ್ಮೆಟ್, ಲೈಸನ್ಸ್ ಇಲ್ಲದಿದ್ರೂ ಪರ್ವಾಗಿಲ್ಲ 50ರೂ. ಕೊಡಿ- ಬಳ್ಳಾರಿ ಪೊಲೀಸರ ಲಂಚ ಬಯಲು

    ವಿಡಿಯೋ: ಹೆಲ್ಮೆಟ್, ಲೈಸನ್ಸ್ ಇಲ್ಲದಿದ್ರೂ ಪರ್ವಾಗಿಲ್ಲ 50ರೂ. ಕೊಡಿ- ಬಳ್ಳಾರಿ ಪೊಲೀಸರ ಲಂಚ ಬಯಲು

    ಬಳ್ಳಾರಿ: ಹೆಲ್ಮೆಟ್ ಹಾಗೂ ಲೈಸನ್ಸ್ ಇಲ್ಲದಿದ್ದರೂ ಪರವಾಗಿಲ್ಲ. 50 ರೂ. ಲಂಚ ಕೊಟ್ಟರೆ ಸಾಕು ನಿಮ್ಮನ್ನೂ ಬಿಟ್ಟು ಬಿಡ್ತಾರೆ ನಮ್ಮ ಪೊಲೀಸರು.

    ಹೌದು. ಬೈಕ್ ಸವಾರರ ದಾಖಲೆಗಳನ್ನು ಪರಿಶೀಲನೆ ಮಾಡೋ ನೆಪದಲ್ಲಿ ಬಳ್ಳಾರಿ ಪೊಲೀಸರು ಹಣ ವಸೂಲಿಗೆ ಇಳಿದುಬಿಟ್ಟಿರೋ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಬೈಕ್ ಸವಾರರೊಬ್ಬರಿಂದ 50 ರೂಪಾಯಿ ಲಂಚ ವಸೂಲಿ ಮಾಡುತ್ತಿರುವ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

    ಹೊಸಪೇಟೆ ತಾಲೂಕಿನ ಕಮಲಾಪುರ ಪೊಲೀಸ್ ಠಾಣೆಯ ಮುಖ್ಯ ಪೇದೆ ತಿಪ್ಪೇಸ್ವಾಮಿ ದಿನನಿತ್ಯ ಬೈಕ್ ಸವಾರರರಿಂದ ಲಂಚ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಹೆಲ್ಮೆಟ್ ಧರಿಸದೆ ಪ್ರಯಾಣಿಸುತ್ತಿದ್ದ ಬೈಕ್ ಸವಾರ ತಪ್ಪಾಯ್ತು ಸರ್ ಇನ್ನೂ ಮುಂದೆ ಹಾಗೆ ಮಾಡಲ್ಲ ಅಂದಿದ್ದಾರೆ. ಆದರೂ 50 ರೂ. ಲಂಚ ವಸೂಲಿ ಮಾಡುತ್ತಿರುವುದನ್ನು ಸ್ಥಳೀಯರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

    https://youtu.be/w8VymLlNG6U

  • ಮೂವರಿಂದ ಮಾರಣಾಂತಿಕ ಹಲ್ಲೆ: ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವು

    ಮೂವರಿಂದ ಮಾರಣಾಂತಿಕ ಹಲ್ಲೆ: ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವು

    ವಿಜಯಪುರ: ವ್ಯಕ್ತಿಯೊಬ್ಬರ ಮೇಲೆ ಮೂವರು ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ತಬ್ರೇಜ್ ಬೇಪಾರಿ(28) ಎಂಬವರೇ ಕೊಲೆಯಾದ ಯುವಕ.

    ಜಿಲ್ಲೆಯ ಉಪ್ಪಲಿ ಬುರ್ಜ್ ಬಳಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ತಬ್ರೇಜ್ ನನ್ನು ಅಲ್ಲಿಯ ಸ್ಥಳೀಯರು ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಬ್ರೇಜ್ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನೆ ನಂತರ ಹಲ್ಲೆಕೋರರು ಪರಾರಿಯಾಗಿದ್ದಾರೆ.

    ತಬ್ರೇಜ್ ಮೇಲೆ ಆತನ ಪರಿಚಯಸ್ಥರೇ ಕುಡಿದ ಮತ್ತಿನಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ ಹಲ್ಲೆ ಮಾಡಿದ ಕಾರಣ ಇನ್ನೂ ತಿಳಿದುಬಂದಿಲ್ಲ. ಗಾಂಧಿಚೌಕ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ನಂದಿಹಿಲ್ಸ್ ಗೆ  ವಿದ್ಯಾರ್ಥಿಗಳ ಜಾಲಿ ರೈಡ್- ಬೈಕ್‍ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ದುರ್ಮರಣ

    ನಂದಿಹಿಲ್ಸ್ ಗೆ ವಿದ್ಯಾರ್ಥಿಗಳ ಜಾಲಿ ರೈಡ್- ಬೈಕ್‍ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ದುರ್ಮರಣ

    ಬೆಂಗಳೂರು: ಬೈಕ್ ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.

    ದೇವನಹಳ್ಳಿ ತಾಲೂಕಿನ ಕುಂದಾಣ-ಚಪ್ಪರಕಲ್ಲು ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಇಂದು ಬೆಳಗ್ಗೆ 6 ವಿದ್ಯಾರ್ಥಿಗಳು 3 ಬೈಕ್‍ಗಳಲ್ಲಿ ನಂದಿ ಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ಒಂದು ಬೈಕಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಅಪಘಾತದ ಬಳಿಕ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾರೆ. ವೀಕೆಂಡ್ ಅಂತ ನಂದಿಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ವಿಶ್ವನಾಥಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ಸ್ಪರ್ಶಿಸಿ ಇಬ್ಬರ ಸಾವು

    ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ಸ್ಪರ್ಶಿಸಿ ಇಬ್ಬರ ಸಾವು

    ಬೆಳಗಾವಿ: ಜಮೀನಿನಲ್ಲಿ ಪಂಪ್ ಸೆಟ್‍ಗೆ ಅಳವಡಿಸಲಾಗಿದ್ದ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ತಂತಿ ತಗುಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ನಡೆದಿದೆ.

    ಪಾಂಡುರಂಗ ಡೊಂಗರೆ (50) ಹಾಗೂ ಮುಕ್ತಾಬಾಯಿ ಪೂಜೇರಿ(34) ಸ್ಥಳದಲ್ಲಿಯೇ ಮೃತ ಪಟ್ಟ ದುರ್ದೈವಿಗಳು. ಜಮೀನಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಪಂಪಸೆಟ್ ಗೆ ಅಳವಡಿಸಿದ್ದ ತಂತಿ ತುಂಡಾಗಿ ಬಿದ್ದದನ್ನು ಗಮನಿಸದೆ ಮೊದಲು ಪಾಂಡುರಂಗ ಅವರಿಗೆ ಸ್ಪರ್ಶವಾಗಿ ವಿದ್ಯುತ್ ತಗುಲಿದೆ. ಇದನ್ನು ಗಮನಿಸಿ ವಿದ್ಯುತ್ ತಂತಿಯನ್ನು ಬಿಡಿಸಲು ಹೋಗಿ ಮುಕ್ತಾದೇವಿಗೂ ಸಹ ವಿದ್ಯುತ್ ಸ್ಪರ್ಶಿಸಿ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

    ಸ್ಥಳಕ್ಕೆ ಸದಲಗಾ ಪೊಲೀಸರು ಹಾಗೂ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಸದಲಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಹಿಳೆ ಜೊತೆ ಅಕ್ರಮ ಸಂಬಂಧ, ಆಕೆಯ ಅಪ್ರಾಪ್ತ ಮಗಳ ಮೇಲೂ ಪೇದೆಯಿಂದ ನಿರಂತರ ಅತ್ಯಾಚಾರ

    ಮಹಿಳೆ ಜೊತೆ ಅಕ್ರಮ ಸಂಬಂಧ, ಆಕೆಯ ಅಪ್ರಾಪ್ತ ಮಗಳ ಮೇಲೂ ಪೇದೆಯಿಂದ ನಿರಂತರ ಅತ್ಯಾಚಾರ

    ತುಮಕೂರು: ಪೊಲೀಸ್ ಮುಖ್ಯಪೇದೆಯೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ ಘಟನೆ ತೂಮಕೂರಿನಲ್ಲಿ ನಡೆದಿದೆ.

    ನಗರದ ಜಯನಗರ ಠಾಣೆಯ ಮುಖ್ಯ ಪೇದೆ ಮೋಹನ್ ಅತ್ಯಾಚಾರ ನಡೆಸಿದ ಆರೋಪಿ. ಈ ಸಂಬಂಧ ಪೋಕ್ಸೋ ಅಡಿ ಕೇಸ್ ದಾಖಲಾಗಿದೆ. ಮುಖ್ಯ ಪೇದೆಯನ್ನು ವಶಕ್ಕೆ ಪಡೆದು ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಎಸ್‍ಪಿ ದಿವ್ಯಾ ಗೋಪಿನಾಥ್ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಖಚಿತಪಡಿಸಿದ್ದಾರೆ.

    ವ್ಯಕ್ತಿಯೊಬ್ಬರ ಮನೆಗೆ ಊಟ ಮಾಡಲು ಹೋದ ಪೇದೆ ಮೋಹನ್ ಆತನ ಪತ್ನಿಯೊಂದಿಗೆ ಸಂಬಂಧ ಬೆಳೆಸಿದ್ದ. ಕಳೆದ 6 ವರ್ಷಗಳಿಂದ ಈ ಅನೈತಿಕ ಸಂಬಂಧ ನಡೆದುಕೊಂಡು ಬಂದಿದೆ. ಇವರ ಅನೈತಿಕ ಸಂಬಂಧ ಗೊತ್ತಾಗಿ ಆ ವ್ಯಕ್ತಿ ಪತ್ನಿಯನ್ನು ಬಿಟ್ಟು ದೂರ ಉಳಿದಿದ್ರು.

    ಮಹಿಳೆಗೆ 15 ವರ್ಷದ ಮಗಳು ಕೂಡಾ ಇದ್ದು, ಪೇದೆ ಮೋಹನ್ ಆಕೆಯ ಮೇಲೂ ಕೂಡ ಅತ್ಯಾಚಾರ ನಡೆಸಿದ್ದಾನೆ. ಇದು ತಾಯಿಗೆ ಗೊತ್ತಾದಾಗ ಮನೆಗೆ ಬರದಂತೆ ಮೋಹನ್‍ಗೆ ತಾಕೀತು ಮಾಡಿದ್ದರು. ಆಗ ಇಬ್ಬರ ನಡುವೆ ಜಗಳ ನಡೆದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

     

  • ತಾಯಿಯನ್ನ ಕಾಪಾಡಲು ಹೋಗಿ ಪ್ರಾಣ ಕಳೆದುಕೊಂಡ ಮಗಳು

    ತಾಯಿಯನ್ನ ಕಾಪಾಡಲು ಹೋಗಿ ಪ್ರಾಣ ಕಳೆದುಕೊಂಡ ಮಗಳು

    ರಾಯಚೂರು: ಬಟ್ಟೆ ತೊಳೆಯಲು ಹೋಗಿದ್ದ ತಾಯಿ ಮಗಳು ಕಲ್ಲು ಕ್ವಾರಿಯ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿರೋ ಘಟನೆ ಮಾನ್ವಿಯಲ್ಲಿ ನಡೆದಿದೆ.

    ಮಾನ್ವಿ ಪಟ್ಟಣದ ಅಕ್ಬರ್ ಸಾಬ್ ಕಂಕರ್ ಮಿಲ್ ಹತ್ತಿರ ಈ ದುರ್ಘಟನೆ ನಡೆದಿದೆ. ಪಟ್ಟಣದ ಬೆಳಗಂಪೇಟೆ ನಿವಾಸಿಗಳಾದ ಲಕ್ಷ್ಮಿ(41) ಹಾಗು ಮಗಳು ಮಲ್ಲಮ್ಮ(12) ಸಾವನ್ನಪ್ಪಿದ್ದಾರೆ. ಬಾವಿಯಂತೆ ಬಳಸುತ್ತಿದ್ದ ಕಲ್ಲು ಕ್ವಾರಿಯ ಗುಂಡಿಯಲ್ಲಿ ತಾಯಿ ಲಕ್ಷ್ಮಿ ಕಾಲು ಜಾರಿ ಬಿದ್ದಿದ್ದರು. ತಾಯಿಯನ್ನ ಕಾಪಾಡಲು ಹೋಗಿ ಮಗಳು ಸಹ ಪ್ರಾಣ ಬಿಟ್ಟಿದ್ದಾಳೆ.

    ಸದ್ಯ ಮೃತ ದೇಹಗಳನ್ನ ಹೊರಗೆ ತೆಗೆಯಲಾಗಿದೆ.ಈ ಬಗ್ಗೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಧ್ಯರಾತ್ರಿ ಡಿವೈಡರ್‍ಗೆ ಕಾರ್ ಡಿಕ್ಕಿ ಹೊಡೆದ್ಲು- ಕೇಳಲು ಬಂದ ಪೊಲೀಸ್‍ಗೆ ಕಿಸ್ ಮಾಡಿದ್ಲು!

    ಮಧ್ಯರಾತ್ರಿ ಡಿವೈಡರ್‍ಗೆ ಕಾರ್ ಡಿಕ್ಕಿ ಹೊಡೆದ್ಲು- ಕೇಳಲು ಬಂದ ಪೊಲೀಸ್‍ಗೆ ಕಿಸ್ ಮಾಡಿದ್ಲು!

    ಕೋಲ್ಕತ್ತಾ: ಮದ್ಯದ ಅಮಲಿನಲ್ಲಿ ರಸ್ತೆಯ ಡಿವೈಡರ್ ಗೆ ಕಾರ್ ಡಿಕ್ಕಿ ಹೊಡೆದಿದ್ದು, ಕೇಳಲು ಬಂದ ಪೊಲೀಸ್ ಪೇದೆಯೊಬ್ಬರಿಗೆ ಮಹಿಳೆಯೊಬ್ಬರು ಮುತ್ತಿಟ್ಟ ವಿಚಿತ್ರ ಘಟನೆಯೊಂದು ಕೋಲ್ಕತ್ತಾದಲ್ಲಿ ನಡೆದಿದೆ.

    ಈ ಘಟನೆ ಜುಲೈ 26ರಂದು ಚಿಂಗ್ರಿಘಾಟಾ ಸಮೀಪದ ಇಎಮ್ ಬೈಪಾಸ್ ಬಳಿ ರಾತ್ರಿ ನಡೆದಿದೆ. ಸದ್ಯ ಮಹಿಳೆ ಹಾಗೂ ಆಕೆಯ ಜೊತೆಗಿದ್ದ ಮತ್ತೊಬ್ಬ ಮಹಿಳೆ ಹಾಗೂ ಓರ್ವ ಪುರುಷನನ್ನು ಪೊಲೀಸರು ಬಂಧಿಸಿದ್ದಾರೆ.

    ಏನಿದು ಘಟನೆ?: 38 ವರ್ಷದ ಮಹಿಳೆಯೊಬ್ಬರು ತನ್ನ ಕಾರಿನಲ್ಲಿ ಇಬ್ಬರನ್ನು ಕೂರಿಸಿಕೊಂಡು ಹೋಗುತ್ತಿದ್ದರು. ಮದ್ಯದ ಅಮಲಿನಲ್ಲಿದ್ದ ಪರಿಣಾಮ ನಿಯಂತ್ರಣ ತಪ್ಪಿ ಕಾರ್ ರಸ್ತೆ ಪಕ್ಕದ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯನ್ನು ಕಣ್ಣಾರೆ ಕಂಡ ಟ್ಯಾಕ್ಸಿ ಡರೈವರ್‍ವೊಬ್ಬರು ಮಹಿಳೆಗೆ ಸಹಾಯ ಮಾಡಲು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದ್ರೆ ನಶೆಯಲ್ಲಿದ್ದ ಮಹಿಳೆ ಸಹಾಯ ಮಾಡಲು ಬಂದ ವ್ಯಕ್ತಿಯನ್ನೇ ಥಳಿಸಿದ್ದಾರೆ. ಅದೇ ಸಂದರ್ಭದಲ್ಲಿ ಬಿಧಾನಗರ್ ಪೊಲೀಸ್ ಠಾಣೆಯ ಪೇದೆಯೊಬ್ಬರು ಬಂದು ಆಕೆಯನ್ನು ಕಾರಿನಿಂದ ಹೊರಗೆ ತರಲು ಪ್ರಯತ್ನಿಸಿದ್ದಾರೆ. ಆಗ ಆಕೆ ಪೇದೆಯನ್ನು ಎಳೆದು ತಬ್ಬಿಕೊಂಡು ಬಲವಂತವಾಗಿ ಮುತ್ತಿಟ್ಟಿದ್ದಾಳೆ.

    ಬಳಿಕ ಆ ಪೇದೆ ಮಹಿಳಾ ಪೇದೆಯೊಬ್ಬರ ಸಹಾಯ ಪಡೆದು ಕಾರ್ ಚಾಲಕಿ ಮತ್ತು ಆಕೆಯ ಕಾರಿನಲ್ಲಿದ್ದ ಇಬ್ಬರನ್ನು ಠಾಣೆಗೆ ಕರೆದೊಯ್ದಿದ್ದಾರೆ.

    ಈ ಮೂವರು ಉತ್ತರ ಕೋಲ್ಕತ್ತಾದ ಕಾಲೇಜ್ ಸ್ಟ್ರೀಟ್ ನಿವಾಸಿಗಳಾಗಿದ್ದು, ಕುಡಿದು ವಾಹನ ಚಾಲನೆ ಹಾಗೂ ವೇಗವಾದ ಚಾಲನೆ ಆರೋಪದ ಮೇಲೆ ಇವರ ವಿರುದ್ಧ ಪ್ರಕರಣ ದಾಖಲಾಗಿದೆ.