Tag: police

  • ಲಾರಿ & ಟಾಟಾ ಏಸ್ ನಡುವೆ ಭೀಕರ ಅಪಘಾತ: ಮೂವರ ಸಾವು, ನಾಲ್ವರಿಗೆ ಗಂಭೀರ ಗಾಯ

    ಲಾರಿ & ಟಾಟಾ ಏಸ್ ನಡುವೆ ಭೀಕರ ಅಪಘಾತ: ಮೂವರ ಸಾವು, ನಾಲ್ವರಿಗೆ ಗಂಭೀರ ಗಾಯ

    ಮೈಸೂರು: ಲಾರಿ ಮತ್ತು ಟಾಟಾ ಏಸ್ ನಡುವೆ ಭೀಕರ ಅಪಘಾತವಾಗಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.

    ಜಿಲ್ಲೆಯ ಟಿ. ನರಸೀಪುರ ಮುಖ್ಯ ರಸ್ತೆಯ ಕೆಂಪಯ್ಯನಹುಂಡಿ ಬಳಿ ಅಪಘಾತ ಸಂಭವಿಸಿದೆ. ಟಿ. ನರಸೀಪುರ ಪಟ್ಟಣದ ನಿವಾಸಿ ರಘು(25), ಮಹದೇವಮ್ಮ(45), ಬಸಮ್ಮ(36) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ಉಳಿದಂತೆ ನಾಲ್ವರಿಗೆ ಗಂಭೀರ ಗಾಯಾಗಳಾಗಿದ್ದು, ಗಾಯಾಳುಗಳನ್ನು ಕೆ.ಆರ್.ಅಸ್ಪತ್ರೆಗೆ ದಾಖಲಿಸಲಾಗಿದೆ.

    ಮೃತರೆಲ್ಲರೂ ತರಕಾರಿ ತರುವುದಕ್ಕಾಗಿ ಮೈಸೂರಿಗೆ ಹೊರಟಿದ್ದರು. ಈ ವೇಳೆ ನಿದ್ರೆ ಮಂಪರಿನಲ್ಲಿ ಟಾಟಾ ಏಸ್ ಚಾಲಕ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.

    ಈ ಸಂಬಂಧ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಕಲಬುರಗಿ: ಮೊರಾರ್ಜಿ ವಸತಿ ನಿಲಯದಲ್ಲಿ ಬಾಲಕಿ ನೇಣಿಗೆ ಶರಣು

    ಕಲಬುರಗಿ: ಮೊರಾರ್ಜಿ ವಸತಿ ನಿಲಯದಲ್ಲಿ ಬಾಲಕಿ ನೇಣಿಗೆ ಶರಣು

    ಕಲಬುರಗಿ: ಮೊರಾರ್ಜಿ ವಸತಿ ನಿಲಯದಲ್ಲಿ ಬಾಲಕಿ ನೇಣಿಗೆ ಶರಣಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿರುವ ಹಾಸ್ಟೆಲ್ ನಲ್ಲಿ ಈ ಘಟನೆ ಸಂಭವಿಸಿದೆ. ಪ್ರಿಯಾಂಕ(16) ಮೃತಪಟ್ಟ ವಿದ್ಯಾರ್ಥಿನಿ. ಈಕೆ ಜೇವರ್ಗಿ ಪಟ್ಟಣದ ಶಾಂತನಗರ ನಿವಾಸಿ ಎಂದು ತಿಳಿದುಬಂದಿದೆ.

    ವಸತಿ ನಿಲಯದಲ್ಲಿ ಯಾರೂ ಇಲ್ಲದ ವೇಳೆ ಡಬಲ್ ಸ್ಟೆಪ್ ಮಂಚಕ್ಕೆ ವೇಲ್‍ನಿಂದ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

    ಸ್ಥಳಕ್ಕೆ ಜೇವರ್ಗಿ ಪೊಲೀಸರು ದೌಡಾಯಿಸಿದ್ದಾರೆ.

  • ತಂಗಿಯ ತಲೆಗೆ ಕತ್ತಿಯಿಂದ ಹೊಡೆದ ಅಣ್ಣ ಪರಾರಿ

    ತಂಗಿಯ ತಲೆಗೆ ಕತ್ತಿಯಿಂದ ಹೊಡೆದ ಅಣ್ಣ ಪರಾರಿ

    ಕಾರವಾರ: ಬೇರೊಬ್ಬನನ್ನು ಪ್ರೀತಿಸಿದ್ದ ಕಾರಣಕ್ಕೆ ತಂಗಿಯ ಮೇಲೆ ಅಣ್ಣನೊಬ್ಬ ಕತ್ತಿಯಿಂದ ತಲೆ ಹಾಗೂ ಬೆನ್ನಿನ ಭಾಗಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಉಲ್ಲಾಪುರ ತಾಲೂಕಿನ ಅರೆಬೈಲ್ ನಲ್ಲಿ ನೆಡೆದಿದೆ.

    ದಾಮೋದರ್ ಸುಬ್ರಹ್ಮಣ್ಯ ಶಟ್ಟಿ ಸಹೋದರಿಯಾದ ಮೇನಕಾ ಶಿವರಾಮ್ ಶಟ್ಟಿ (24) ಮೇಲೆ ಹಲ್ಲೆ ಮಾಡಿದ್ದಾನೆ.

    ಅರೆಬೈಲ್ ಗ್ರಾಮದ ನಾಯ್ಡು ಎಂಬುವರನ್ನ ಮೇನಕಾ ತುಂಬಾ ಪ್ರೀತಿಸುತ್ತಿದ್ದಳು. ಹೀಗಾಗಿ ಈಕೆಯ ಚಿಕ್ಕಪ್ಪನ ಮಗನಾದ ದಾಮೋದರ್ ಆ ವ್ಯಕ್ತಿಯನ್ನ ನೀನು ಪ್ರೀತಿ ಮಾಡಬಾರದು ಎಂದು ಹೇಳಿದ್ದ. ಈ ವಿಚಾರದ ಬಗ್ಗೆ ಶುಕ್ರವಾರ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

    ಮೇನಕ ತನ್ನ ಮಾತಿಗೆ ವಿರೋಧ ವಕ್ತಪಡಿಸಿದ್ದಕ್ಕೆ ಕೋಪಗೊಂಡು ಈಕೆಯ ಮೇಲೆ ಕತ್ತಿಯಿಂದ ತಲೆ ಹಾಗೂ ಬೆನ್ನಿನ ಭಾಗಕ್ಕೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

    ತೀವ್ರ ಗಾಯಗೊಂಡಿದ್ದ ಮೇನಕಾನನ್ನ ಯಲ್ಲಾಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹುಬ್ಬಳ್ಳಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 30 ಅಡಿ ಆಳದ ತೊರೆಗೆ ಬಿದ್ದು ಬೈಕ್ ಸವಾರ ಸಾವು

    30 ಅಡಿ ಆಳದ ತೊರೆಗೆ ಬಿದ್ದು ಬೈಕ್ ಸವಾರ ಸಾವು

    ಬೆಂಗಳೂರು: ನಿಯಂತ್ರಣ ತಪ್ಪಿ ಬೈಕ್ ಸುಮಾರು ಮೂವತ್ತು ಅಡಿ ಆಳದ ರಸ್ತೆ ಪಕ್ಕದ ತೊರೆಗೆ ಬಿದ್ದು ಸವಾರರೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತೊರೆ ಮೂಡಲಪಾಳ್ಯದ ಬಳಿ ನಡೆದಿದೆ.

    ತಿಮ್ಮಸಂದ್ರ ಗ್ರಾಮದ ನಿವಾಸಿ ಹನುಮಂತರಾಜು ಮೃತ ದುರ್ದೈವಿ. ಬೈಕ್ ಚಕ್ರಕ್ಕೆ ಕಲ್ಲು ಸಿಲುಕಿದ ಪರಿಣಾಮ ಬೈಕ್ ರಸ್ತೆಯಿಂದ ಹಳ್ಳಕ್ಕೆ ಬಿದ್ದಿದೆ.

    ಗಂಭೀರ ಗಾಯಗೊಂಡಿದ್ದ ಹನುಮಂತರಾಜು ತೀವ್ರ ರಕ್ತ ಸ್ರಾವದಿಂದಾಗಿ ಮೃತಪಟ್ಟಿದ್ದಾರೆ. ಈ ಕುರಿತು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ವರ್ಶಿಸಿ ವ್ಯಕ್ತಿ ಸಾವು

    ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ವರ್ಶಿಸಿ ವ್ಯಕ್ತಿ ಸಾವು

    ಕಾರವಾರ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನ ಸ್ಪರ್ಶಿಸಿ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅಗ್ರಹಾರ ಗ್ರಾಮದಲ್ಲಿ ನಡೆದಿದೆ.

    ದೇವಿದಾಸ್ (65) ವಿದ್ಯುತ್ ತಂತಿ ಸ್ವರ್ಶಿಸಿ ಮೃತಪಟ್ಟ ವ್ಯಕ್ತಿ. ಮನೆಯ ಬಳಿ ಹೂವನ್ನ ಕೀಳುವಾಗ ತುಂಡಾಗಿ ಬಿದ್ದಿದ್ದ ತಂತಿ ಸ್ವರ್ಶಿಸಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ.

    ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಖಾಸಗಿ ಬಸ್ ಪಲ್ಟಿ- 12 ಜನರಿಗೆ ಗಾಯ

    ಖಾಸಗಿ ಬಸ್ ಪಲ್ಟಿ- 12 ಜನರಿಗೆ ಗಾಯ

    ಕಾರವಾರ: ಖಾಸಗಿ ಬಸ್‍ವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಹನ್ನೆರಡು ಜನರಿಗೆ ಗಾಯವಾದ ಘಟನೆ ನಡೆದಿದೆ.

    ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕಂಚಿನಬಾಗಿಲು ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ. ಖಾಸಗಿ ಬಸ್ಸು ಬೆಂಗಳೂರಿನಿಂದ ಪಣಜಿ ಕಡೆಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಗಾಯಗೊಂಡವರನ್ನ ಅಂಕೋಲಾ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ರಸ್ತೆ ಮಧ್ಯೆ ಬಸ್ಸು ಬಿದ್ದ ಪರಿಣಾಮ ಹೆದ್ದಾರಿ ಸಂಚಾರ ಅಸ್ಥವ್ಯಸ್ತವಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ರಸ್ತೆ ಸಂಚಾರ ಸರಿಪಡಿಸುವ ಪ್ರಯತ್ನ ಮಾಡಿದ್ದಾರೆ. ಈ ಬಗ್ಗೆ ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಪ್ರಾಪ್ತ ಬಾಲಕಿಯರಿಗೆ ಅಶ್ಲೀಲ ವಿಡಿಯೋ ಕಳಿಸ್ತಿದ್ದ ಕಂಪ್ಯೂಟರ್ ಎಂಜಿನಿಯರ್ ಅರೆಸ್ಟ್

    ಅಪ್ರಾಪ್ತ ಬಾಲಕಿಯರಿಗೆ ಅಶ್ಲೀಲ ವಿಡಿಯೋ ಕಳಿಸ್ತಿದ್ದ ಕಂಪ್ಯೂಟರ್ ಎಂಜಿನಿಯರ್ ಅರೆಸ್ಟ್

    ಹಾವೇರಿ: ಅಪ್ರಾಪ್ತ ಬಾಲಕಿಯರಿಗೆ ಅಶ್ಲೀಲ ವಿಡಿಯೋ ಕಳಿಸುತ್ತಿದ್ದ ಕಂಪ್ಯೂಟರ್ ಎಂಜನಿಯರ್‍ನನ್ನು ಹಾವೇರಿಯಲ್ಲಿ ಬಂಧಿಸಲಾಗಿದೆ.

    ದಾವಣಗೆರೆ ಜಿಲ್ಲೆ ಹರಿಹರ ಮೂಲದ ಮಹ್ಮದ್ ಖಾಸಿ (28) ಬಂಧಿತ ಆರೋಪಿ. ಈತ ಹಿರೇಕೆರೂರು ಸಾರಿಗೆ ಡಿಪೋದಲ್ಲಿ ಕಂಪ್ಯೂಟರ್ ಎಂಜನಿಯರ್ ಆಗಿ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಡಿಪೋದಲ್ಲಿನ ನೌಕರರ ಅಪ್ರಾಪ್ತ ಮಕ್ಕಳು ಮತ್ತು ಅವರ ಗೆಳತಿಯರ ಮೊಬೈಲ್ ನಂಬರ್ ಪಡೆದು ಅಶ್ಲೀಲ ವಿಡಿಯೋ ಕಳಿಸುತ್ತಿದ್ದ ಎನ್ನಲಾಗಿದೆ. ನೌಕರರೊಬ್ಬರು ಮೊಬೈಲ್ ರಿಪೇರಿ ಮಾಡಿಸಿಕೊಳ್ಳಲು ಆರೋಪಿ ಬಳಿ ಮೊಬೈಲ್ ನೀಡಿದ್ದರು. ಈ ವೇಳೆ ಆತ ಅಪ್ರಾಪ್ತ ಬಾಲಕಿಯರ ನಂಬರ್ ಪಡೆದುಕೊಂಡಿದ್ದ ಎನ್ನಲಾಗಿದೆ.

    ಡಿಪೋದಲ್ಲಿನ ನೌಕರರ ವಾಟ್ಸಪ್ ಹ್ಯಾಕ್ ಮಾಡಿ ಈ ಕೃತ್ಯ ಎಸಗುತ್ತಿದ್ದ. ವಾಟ್ಸಪ್ ಮೂಲಕ ಬಾಲಕಿಯರಿಗೆ ಅಶ್ಲೀಲ ವಿಡಿಯೋ ಕಳಿಸುತ್ತಿದ್ದ.

    ಈ ಬಗ್ಗೆ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೈಸೂರಿನಿಂದ ಬಾಗಲಕೋಟೆಗೆ ಹೋಗಿ ವಿಷ ಕುಡಿದ ಪ್ರೇಮಿಗಳು

    ಮೈಸೂರಿನಿಂದ ಬಾಗಲಕೋಟೆಗೆ ಹೋಗಿ ವಿಷ ಕುಡಿದ ಪ್ರೇಮಿಗಳು

    ಬಾಗಲಕೋಟೆ: ಮನೆಯವರು ಒಪ್ಪಲಿಲ್ಲ ಅನ್ನೋ ಕಾರಣಕ್ಕೆ ಪ್ರೇಮಿಗಳಿಬ್ಬರು ಊರು ಬಿಟ್ಟು ಬಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ನಡೆಸಿರುವ ಘಟನೆ ಜಿಲ್ಲೆಯಲ್ಲಿ ನೆಡೆದಿದೆ.

    ನವೀನ್ ಕುಮಾರ್ ಹಾಗೂ ಮಾರಿಯಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಪ್ರೇಮಿಗಳು. ಮೂಲತಃ ಮೈಸೂರು ಜಿಲ್ಲೆಯ ಅಶೋಕಪುರಂ ನಗರದ ನಿವಾಸಿಗಳಾದ ನವೀನ್ ಕುಮಾರ್ ಹಾಗೂ ಮಾರಿಯಾ ಕಳೆದ ನಾಲ್ಕು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಈ ವಿಷಯ ಇಬ್ಬರ ಮನೆಯಲ್ಲೂ ಗೊತ್ತಾದಾಗ ಮನೆಯವ್ರು ಇವರ ಪ್ರೀತಿಯನ್ನ ಒಪ್ಪಿರಲಿಲ್ಲ. ಹೀಗಾಗಿ ಮನನೊಂದ ಪ್ರೇಮಿಗಳು ಟ್ರೇನ್ ಮೂಲಕ ಮೈಸೂರಿನಿಂದ ಬಾಗಲಕೋಟೆ ನಗರಕ್ಕೆ ಬಂದಿಳಿದಿದ್ದಾರೆ.

    ಬೆಳಗಿನ ಜಾವ ಬಾಗಲಕೋಟೆ ನಗರಕ್ಕೆ ಆಗಮಿಸಿದ್ದ ಪ್ರೇಮಿಗಳು ಹಳೇ ಕೋರ್ಟ್ ಆವರಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ವಿಷಯ ತಿಳಿದು ಸುತ್ತಮುತ್ತಲಿನ ಜನರ ಸಹಾಯದಿಂದ ಈ ಪ್ರೇಮಿಗಳನ್ನ 108 ಮೂಲಕ ಜಿಲ್ಲಾ ಆಸ್ಪತ್ರೆಗೆ ರವಾನಿಸಿಲಾಗಿದೆ.

    ಸದ್ಯ ಈ ಪ್ರೇಮಿಗಳು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈಗ ಚೇತರಿಸಿಕೊಂಡಿದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • 16 ವರ್ಷದ ಹುಡುಗನ ಮೇಲೆ 15 ಬಾಲಕರಿಂದ ರೇಪ್

    16 ವರ್ಷದ ಹುಡುಗನ ಮೇಲೆ 15 ಬಾಲಕರಿಂದ ರೇಪ್

    ಮುಂಬೈ: 15 ಜನ ಬಾಲಕರು ಕಳೆದ ಒಂದು ವರ್ಷದಿಂದ ನಿರಂತರವಾಗಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮುಂಬೈನ 16 ವರ್ಷದ ಬಾಲಕನೊಬ್ಬ ಆರೋಪಿಸಿದ್ದಾನೆ.

    ನಗರದ ಪಶ್ಚಿಮ ಅಂಧೇರಿಯಲ್ಲಿ ವಾಸವಾಗಿರುವ ಬಾಲಕ ಈ ಬಗ್ಗೆ ಡಿ.ಎನ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಜೂನ್ 26 ರಂದು ಬಾಲಕ ಕೊನೆಯ ಬಾರಿ ಅತ್ಯಾಚಾರಕ್ಕೆ ಒಳಪಟ್ಟಿದ್ದು, ಇದರಿಂದ ಆತ ತೀವ್ರ ನೋವಿನಿಂದ ಬಳಲಿದ್ದಾನೆ. ಇದ್ರಿಂದ ಬೇಸತ್ತ ಬಾಲಕ ತನ್ನ ಗೆಳೆಯನೊಂದಿಗೆ ವಿಷಯವನ್ನ ಹಂಚಿಕೊಂಡಿದ್ದಾಗಿ ಪೊಲೀಸರಿಗೆ ಹೇಳಿದ್ದಾನೆ.

    ಈ ಸಂಬಂಧ 15 ರಿಂದ 17 ವರ್ಷ ವಯಸ್ಸಿನ ಎಲ್ಲಾ 15 ಆರೋಪಿಗಳ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಈಗಾಗಲೇ 7 ಜನರನ್ನು ವಶಕ್ಕೆ ಪಡೆದಿದ್ದಾರೆ.

    ಅತ್ಯಾಚಾರಕ್ಕೆ ಒಳಗಾದ ಬಾಲಕನಿಗೆ ಈ 15 ಜನರು ಬ್ಲ್ಯಾಕ್ ಮೇಲ್ ಮಾಡುವ ಮೂಲಕ ದೈಹಿಕವಾಗಿ ಹಿಂಸೆ ಕೊಡುತ್ತಿದ್ದರು. ಬಾಲಕನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಆಗಿದ್ದೇನು?: 2016ರಲ್ಲಿ ಮೊದಲ ಬಾರಿಗೆ ನೆರೆಮನೆಯವನಿಂದ ಬಾಲಕನ ಮೇಲೆ ಅತ್ಯಾಚಾರ ನಡೆದಿದೆ. ಇದನ್ನ ಆತ ವಿಡಿಯೋ ಮಾಡಿಕೊಂಡಿದ್ದು ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾನೆ. ಸಂತ್ರಸ್ತ ಬಾಲಕ ಭಯದಿಂದ ಈ ವಿಷಯವನ್ನ ಕುಟುಂಬದವರ ಬಳಿ ಹೇಳಿಕೊಂಡಿರಲಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

    ನಂತರದ ದಿನಗಳಲ್ಲಿ ಪಕ್ಕದ ಮನೆಯವನು ಈ 9ನೇ ತರಗತಿಯ ಬಾಲಕನಿಗೆ ಬ್ಲಾಕ್‍ಮೇಲ್ ಮಾಡಿ ತನ್ನ ಗೆಳಯರೊಂದಿಗೂ ಸೆಕ್ಸ್ ಮಾಡುವಂತೆ ಒತ್ತಾಯಿಸಿದ್ದಾನೆ.

    ಬಾಲಕನನ್ನು ಸರ್ಕಾರಿ ಶಾಲೆಯೊಂದರ ನಿರ್ಜನ ಮೈದಾನಕ್ಕೆ ಕರೆದುಕೊಂಡು ಹೋಗಿ 15 ಬಾಲಕರು ಒಬ್ಬರ ನಂತರ ಒಬ್ಬರಾಗಿ ಬಾಲಕನ ಮೇಲೆ ಅತ್ಯಾಚಾರವೆಸಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದು ಇಷ್ಟಕ್ಕೇ ನಿಲ್ಲಲಿಲ್ಲ: ಎರಡು ತಿಂಗಳಿನಿಂದ ಬಾಲಕರಲ್ಲಿ ಒಬ್ಬ ರೆಸ್ಟೋರೆಂಟ್ ನಲ್ಲಿ ಊಟ ಮಾಡಲು 1100 ರೂ. ಕೇಳಿದ್ದಾನೆ. ಬಾಲಕ ನನ್ನ ಬಳಿ ಹಣವಿಲ್ಲವೆಂದು ಹೇಳಿದಾಗ ಕೋಪದಿಂದ ಆತನನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಮತ್ತೊಮ್ಮೆ ರೇಪ್ ಮಾಡಿದ್ದಾರೆ. ಇದಲ್ಲದೆ ನನ್ನ ಮೇಲೆ ಇನ್ನೂ 4 ಬಾರಿ ಅತ್ಯಾಚಾರ ನಡೆದಿತ್ತು ಎಂದು ಬಾಲಕ ಹೇಳಿಕೊಂಡಿದ್ದಾನೆ. ದೌರ್ಜನ್ಯವನ್ನು ವಿರೋಧಿಸಿದಾಗ ಅವರೆಲ್ಲ ಹಲ್ಲೆ ಮಾಡುತ್ತಿದ್ದರು ಎಂದು ಬಾಲಕ ದೂರಿನಲ್ಲಿ ಉಲ್ಲೇಖಿಸಿದ್ದಾನೆ.

    ಸತತ ಲೈಂಗಿಕ ದೌರ್ಜನ್ಯದಿಂದಾಗಿ ಸೋಮವಾರದಂದು ಬಾಲಕ ತೀವ್ರ ನೋವಿನ ಬಗ್ಗೆ ಹೇಳಿಕೊಂಡಿದ್ದಾನೆ. ಬಾಲಕನನ್ನು ನಗರದ ಕೂಪರ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಆತನ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ.

    15 ಜನ ಬಾಲಕರ ವಿರುದ್ಧ ಅಸಹಜ ಲೈಂಗಿಕ ಕ್ರಿಯೆ ಆರೋಪದಡಿ ಹಾಗೂ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲಾಗಿದೆ. ಈ ಸಂಬಂಧ ವಿಚಾರಣೆ ನಡೆಯುತ್ತಿದೆ ಎಂದು ಮುಂಬೈ ಡೆಪ್ಯೂಟಿ ಕಮೀಷನರ್ ರಶ್ಮಿ ಕರಂದಿಕಾರ್ ತಿಳಿಸಿದ್ದಾರೆ.

     

  • ಚಾಮರಾಜನಗರ: ಹಾಡಹಗಲೇ ಪೊಲೀಸ್ ಠಾಣೆ ಪಕ್ಕದಲ್ಲೇ ಕುಡಿದರೂ ಕೇಳೋರಿಲ್ಲ

    ಚಾಮರಾಜನಗರ: ಹಾಡಹಗಲೇ ಪೊಲೀಸ್ ಠಾಣೆ ಪಕ್ಕದಲ್ಲೇ ಕುಡಿದರೂ ಕೇಳೋರಿಲ್ಲ

    ಚಾಮರಾಜನಗರ: ಪೊಲೀಸ್ ಠಾಣೆಗಳ ಮಗ್ಗುಲಲ್ಲೇ ಹಗಲು ಕುಡುಕರ ಹಾವಳಿ ಹೆಚ್ಚುತ್ತಿದ್ದರೂ ಪೊಲೀಸರು ಮಾತ್ರ ಕಣ್ಣು ಮುಚ್ಚಿ ಕುಳಿತಿರುವ ಪರಿಸ್ಥಿತಿ ನಗರದಲ್ಲಿ ನಿರ್ಮಾಣವಾಗಿದೆ.

    ಹಗಲು ಕುಡುಕರ ಹಾವಳಿಯನ್ನು ತಡೆಯಲು ಪೊಲೀಸರು ವಿಫಲರಾಗಿದ್ದು, ಇದರಿಂದ ಮಹಿಳೆಯರು ಹಾಗೂ ಜನ ಸಾಮಾನ್ಯರು ಪರಿತಪಿಸುವಂತಹ ಸ್ಥಿತಿ ಎದುರಾಗಿದೆ.

    ನಗರದ ಮಧ್ಯ ಭಾಗದಲ್ಲಿ ಹಾಡ ಹಗಲೇ ಕುಡುಕರ ಹಾವಳಿ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ವೈನ್ ಸ್ಟೋರ್ ನಿಂದ ಮದ್ಯವನ್ನು ತಂದು ರಸ್ತೆ ಬದಿಯಲ್ಲಿ ಹಾಗೂ ಖಾಲಿ ನಿವೇಶನಗಳಲ್ಲಿ ಕುಡಿದು ರಸ್ತೆಯಲ್ಲಿ ಚಲಿಸುವವರಿಗೆ ಮುಜುಗರ ಉಂಟು ಮಾಡುತ್ತಿದ್ದಾರೆ.

    ಈ ಭಾಗದಲ್ಲಿ ಖಾಸಗಿ ಬಸ್ ನಿಲ್ದಾಣ ಹಾಗೂ ಮಹಿಳಾ ವಿದ್ಯಾರ್ಥಿನಿಲಯಗಳು ಇದ್ದು, ಇದರಿಂದ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಇಲ್ಲಿ ಸಂಚರಿಸಲು ಭಯ ಪಡುತ್ತಿದ್ದಾರೆ. ಇದಲ್ಲದೇ 100 ಮೀಟರ್ ಅಂತರದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ, ಹಾಗೆ 200 ಮೀಟರ್ ಅಂತರದಲ್ಲಿ ಟೌನ್ ಪೊಲೀಸ್ ಠಾಣೆ ಇದೆ. ಹೀಗಿದ್ದರೂ ಸಹ ಕುಡುಕರು ಹಗಲು ವೇಳೆಯಲ್ಲಿ ಕುಡಿದು ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದಾರೆ.

    ಕುಡುಕರ ಸಂತೆಯಾಗಿರುವ ಈ ಪ್ರದೇಶವನ್ನ ಕೂಡಲೇ ಸರಿ ದಾರಿಗೆ ಕೊಂಡೊಯ್ಯಬೇಕು ಎಂದು ಜನ ಸಾಮಾನ್ಯರು ಆಗ್ರಹಪಡಿಸುತ್ತಿದ್ದಾರೆ.