Tag: police

  • ಪೊಲೀಸ್ ಠಾಣೆಯಿಂದ ಬಂದ ಗೃಹಿಣಿ ಆತ್ಮಹತ್ಯೆಗೆ ಶರಣು

    ಪೊಲೀಸ್ ಠಾಣೆಯಿಂದ ಬಂದ ಗೃಹಿಣಿ ಆತ್ಮಹತ್ಯೆಗೆ ಶರಣು

    ಮೈಸೂರು: ಮಹಿಳೆಯೊಬ್ಬರು ಭಾನುವಾರ ಪೊಲೀಸ್ ಠಾಣೆಯಿಂದ ಬಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಟಿ.ಕೆ.ಲೇಔಟ್‍ನಲ್ಲಿ ನಡೆದಿದೆ.

    ಲೇಖನಾ(25) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಲೇಖನಾ ಒಂದು ವರ್ಷದ ಹಿಂದೆ ನಗರದ ನಿವಾಸಿ ಬಸವರಾಜ್ ಎಂಬವರನ್ನು ಸಂಪ್ರದಾಯಬದ್ಧವಾಗಿ ವಿವಾಹವಾಗಿದ್ದರು. ಆದರೆ ಬಸವರಾಜ್ ಕೈವಲ್ಯ ಎಂಬ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ರು ಎಂದು ಹೇಳಲಾಗುತ್ತಿದೆ. ಗಂಡನ ಅಕ್ರಮ ಸಂಬಂಧ ಹೊಂದಿದ್ದರಿಂದ ಬೇಸತ್ತ ಲೇಖನಾ ಭಾನುವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಠಾಣೆಗೆ ಹೋಗಿದ್ದು ಯಾಕೆ?
    ಬಸವರಾಜ್ ಗೆಳತಿ ಕೈವಲ್ಯ ನಗರದ ನಜರ್‍ಬಾದ್ ಪೊಲೀಸ್ ಠಾಣೆಯಲ್ಲಿ ಲೇಖನಾ ವಿರುದ್ಧ ದೂರು ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ಭಾನುವಾರ ಲೇಖನಾರನ್ನು ಕರೆಸಿ ವಿಚಾರಣೆ ನಡೆಸಿದ್ದರು. ಪೊಲೀಸ್ ಠಾಣೆಯಿಂದ ಮನೆಗೆ ಬಂದ ಲೇಖನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಸ್ಥಳದಲ್ಲಿ ಲೇಖನಾರ ಪೋಷಕರು ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಸರಸ್ವತಿಪುರಂ ಪೊಲೀಸ್ ಠಾಣೆಯ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

  • ವಿದೇಶಿ ಹುಡುಗಿಯರ ಫೋಟೋ ತೋರಿಸಿ ವಂಚನೆ: ಮಂಗಳೂರಿನ ಇಬ್ಬರು ಅರೆಸ್ಟ್

    ವಿದೇಶಿ ಹುಡುಗಿಯರ ಫೋಟೋ ತೋರಿಸಿ ವಂಚನೆ: ಮಂಗಳೂರಿನ ಇಬ್ಬರು ಅರೆಸ್ಟ್

    ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ವಿದೇಶಿ ಹುಡುಗಿಯರ ಫೋಟೋ ತೋರಿಸಿ ವಂಚಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು ಇಬ್ಬರನ್ನು ಮಂಗಳೂರಿನ ಪೊಲೀಸರು ಬಂಧಿಸಿದ್ದಾರೆ.

    ಎಕ್ಕೂರಿನ ಕುಲದೀಪ್, ಫರಂಗಿಪೇಟೆಯ ಕೀರ್ತನ್ ಬಂಧಿತ ಆರೋಪಿಗಳು. ಸಾಮಾಜಿಕ ಜಾಲತಾಣದಲ್ಲಿ ವಿದೇಶಿ ಹುಡುಗಿಯರ ಫೋಟೋ ತೋರಿಸಿ ಆಮಿಷ ಒಡ್ಡುತ್ತಿದ್ದ ಎನ್‍ಆರ್‍ಐ ತಂಡವು ಹೆಚ್ಚಾಗಿ ಶ್ರೀಮಂತರನ್ನು ಟಾರ್ಗೆಟ್ ಮಾಡುತ್ತಿದ್ದರು.

    ಮುಂಗಡವಾಗಿ ಆಗಿ 300 ಡಾಲರ್(ಅಂದಾಜು 31 ಸಾವಿರ ರೂ.) ಪೂರೈಸಿದರೆ ಸಪ್ಲೈಮಾಡುವ ಭರವಸೆ ನೀಡುತ್ತಿದ್ದರಿಂದ ಕೆಲವರು ಹಣ ಕಳಿಸುತ್ತಿದ್ದರು. ಹೀಗಾಗಿ ಈ ತಂಡದ ಸದಸ್ಯರು ತಾವು ಫಾರಿನ್ ಏಜನ್ಸಿ ಅಂತಾ ಹೇಳಿಕೊಂಡು ಆನ್ ಲೈನಲ್ಲಿ ಹಣ ಕಳುಹಿಸಲು ಹೇಳುತ್ತಿದ್ದರು. ಒಂದಷ್ಟು ಹಣ ಪಾವತಿಸಿದ ಬಳಿಕ ಸಂಪರ್ಕ ಕಡಿತಗೊಳಿಸಿ ಮೋಸ ಮಾಡುತ್ತಿದ್ದರು.

    ಒಂದೂವರೆ ವರ್ಷದಿಂದ ಈ ಮೋಸದ ಜಾಲ ನಡೆಯುತ್ತಿದ್ದರೂ ಮರ್ಯಾದೆಗೆ ಅಂಜಿ ಯಾರೂ ದೂರು ನೀಡಿರಲಿಲ್ಲ. ಹೀಗಾಗಿ ಈ ತಂಡದಲ್ಲಿ ಇನ್ನೂ ಮೂವರಿದ್ದು ತಲೆಮರೆಸಿಕೊಂಡಿದ್ದಾರೆ. ಮಂಗಳೂರಿನ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೂತ್ರ ವಿಸರ್ಜನೆಗೆಂದು ರಸ್ತೆ ದಾಟೋ ವೇಳೆ ಕಾರು ಡಿಕ್ಕಿ ಹೊಡೆದು ವೃದ್ಧ ಸಾವು

    ಮೂತ್ರ ವಿಸರ್ಜನೆಗೆಂದು ರಸ್ತೆ ದಾಟೋ ವೇಳೆ ಕಾರು ಡಿಕ್ಕಿ ಹೊಡೆದು ವೃದ್ಧ ಸಾವು

    ಚಿಕ್ಕಬಳ್ಳಾಪುರ: ಬೆಂಗಳೂರು ಉತ್ತರ ತಾಲೂಕಿನ ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷನಿಗೆ ಸೇರಿದ ಕಾರು ವೃದ್ಧನಿಗೆ ಡಿಕ್ಕಿ ಹೊಡೆದ ಪರಿಣಾಮ ವೃದ್ಧ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚದಲಪುರದ ಎಸ್‍ಪಿ ಕಚೇರಿ ಬಳಿ ನಡೆದಿದೆ.

    ಗೌರಿಬಿದನೂರು ತಾಲೂಕು ಕಾಟನಕಲ್ಲು ಗ್ರಾಮದ ಖಾಜಾಬೇಗ್(75) ಮೃತಪಟ್ಟ ವೃದ್ಧ. ಬಾಗೇಪಲ್ಲಿ-ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರಿನತ್ತ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸಿಂಗನಾಕನಹಳ್ಳಿಯ ಗ್ರಾಪಂ ಅಧ್ಯಕ್ಷ ಲೋಕೇಶ್ ಎಂಬವರ ಕಾರು ಎನ್ನಲಾಗಿದ್ದು, ರಸ್ತೆ ದಾಟುತ್ತಿದ್ದ ವೇಳೆ ವೃದ್ಧ ಖಾಜಾಬೇಗ್ ಗೆ ಡಿಕ್ಕಿ ಹೊಡೆದಿದೆ.

    ಕೂಡಲೇ ಆಸ್ಪತ್ರೆಗೆ ಕರೆದೊಕೊಂಡು ಹೋಗುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಮೃತ ಖಾಜಾಬೇಗ್ ಕಣ್ಣಿನ ಆಸ್ಪತ್ರೆಗೆ ಸೇರಿದ ಬಸ್ ನಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಅಂತ ತೆರಳಿದ್ದರು. ಆದರೆ ಮಾರ್ಗಮಧ್ಯೆ ಮೂತ್ರ ವಿಸರ್ಜನೆ ಮಾಡಲು ಬಸ್ ನಿಂದ ಕೆಳಗೆ ಇಳಿದು ರಸ್ತೆ ದಾಟುತ್ತಿದ್ದ ಈ ವೇಳೆ ಅಪಘಾತ ಸಂಭವಿಸಿದೆ.

    ಈ ಕುರಿತು ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಾಕಲೇಟ್ ಆಸೆ ತೋರಿಸಿ ಅಪ್ರಾಪ್ತ ಬಾಲಕರನ್ನ ಲೈಂಗಿಕವಾಗಿ ಬಳಸಿಕೊಂಡ ಕಾಮುಕ ಅರೆಸ್ಟ್!

    ಚಾಕಲೇಟ್ ಆಸೆ ತೋರಿಸಿ ಅಪ್ರಾಪ್ತ ಬಾಲಕರನ್ನ ಲೈಂಗಿಕವಾಗಿ ಬಳಸಿಕೊಂಡ ಕಾಮುಕ ಅರೆಸ್ಟ್!

    ಮುಂಬೈ: ವ್ಯಕ್ತಿಯೊಬ್ಬ ಅಪ್ರಾಪ್ತ ವಯಸ್ಸಿನ ಇಬ್ಬರು ಬಾಲಕರಿಗೆ ಚಾಕಲೇಟ್ ಆಸೆ ತೋರಿಸಿ ಅವರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಮುಂಬೈನ ವಿಲೆ ಪಾರ್ಲೆಯಲ್ಲಿ ಪೋಷಕರೊಂದಿಗೆ ವಾಸವಾಗಿರುವ 10 ಹಾಗೂ 12 ವರ್ಷದ ಸಹೋದರರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ವಾಹನಗಳ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ತನ್ನ ನೆರೆಯ ಮನೆಯಲ್ಲಿ ವಾಸವಿದ್ದ ಈ ಬಾಲಕರ ಮನೆಗೆ ತೆರಳಿ, ಚಾಕಲೇಟ್ ನೀಡುವ ಮೂಲಕ ಮಕ್ಕಳನ್ನು ಆಕರ್ಷಿಸಿ ಲೈಂಗಿಕವಾಗಿ ದುರುಪಯೋಗ ಪಡಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: 16 ವರ್ಷದ ಹುಡುಗನ ಮೇಲೆ 15 ಬಾಲಕರಿಂದ ರೇಪ್

    ಈ ಪ್ರಕರಣ ಶುಕ್ರವಾರ ಬೆಳಕಿಗೆ ಬಂದಿದ್ದು, ನಗರದ ಪಶ್ಚಿಮ ಸಂತಾಕ್ರೂಜ್ ನ ಶಾಲೆಯೊಂದರಲ್ಲಿ ಓದುತ್ತಿರುವ ಬಾಲಕರು ಶಾಲೆಯ ಶಿಕ್ಷಕರ ಬಳಿ ಈ ವಿಚಾರ ತಿಳಿಸಿದ್ದಾರೆ. ವಿಷಯ ತಿಳಿದ ಶಿಕ್ಷಕರು ಸಂತಾಕ್ರೂಜ್‍ನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾದ ನಂತರ ಕೇಸನ್ನು ವಿಲೆ ಪಾರ್ಲೆ ಪೊಲೀಸ್ ಠಾಣಾ ವ್ಯಾಪ್ತಿಗೆ ವರ್ಗಾವಣೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಲಕ್ಷ್ಮಣ್ ಚವಾಣ್ ತಿಳಿಸಿದ್ದಾರೆ.

    ಇದನ್ನೂ ಓದಿ: ಸೆಕ್ಸ್ ಗೆ ಅಂತಾ ಕರೆದ್ರೆ, 10 ಲಕ್ಷ ರೂ. ಮೌಲ್ಯದ ಕಾರನ್ನೇ ಕದ್ದಳು!

    ಆರೋಪಿಯು ಮಕ್ಕಳಿಗೆ ಚಾಕಲೇಟ್ ಆಸೆ ತೋರಿಸಿ ತಮ್ಮ ಮನೆಗೆ ಕರೆದುಕೊಂಡು ಹೋಗಿ ಒಬ್ಬನ ನಂತರ ಮತ್ತೊಬ್ಬನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಆದರೆ ಮಕ್ಕಳು ತಮ್ಮ ಪೋಷಕರ ಬಳಿ ಈ ವಿಚಾರ ತಿಳಿಸಿಲ್ಲ. ಪೊಲೀಸರು ಐಪಿಸಿ ಸೆಕ್ಷನ್ 377 ಲೈಂಗಿಕ ಅಪರಾಧದಿಂದ ಮಕ್ಕಳನ್ನು ರಕ್ಷಣೆ ಅನ್ವಯದಡಿ ಕೇಸನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

     

     

  • ಕರ್ನಾಟಕದ ಐಎಎಸ್ ಅಧಿಕಾರಿಯ ತಂಗಿ ಅನುಮಾನಾಸ್ಪದ ಸಾವು

    ಕರ್ನಾಟಕದ ಐಎಎಸ್ ಅಧಿಕಾರಿಯ ತಂಗಿ ಅನುಮಾನಾಸ್ಪದ ಸಾವು

    ಕಲಬುರಗಿ: ಕರ್ನಾಟಕ ಐಎಎಸ್ ಕೇಡರ್ ಅಧಿಕಾರಿ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸಿಇಓ ಹೆಪ್ಸಿಬಾ ರಾಣಿ ಸಹೋದರಿ ಡಾ.ಸೂರ್ಯಕುಮಾರಿ ಅನುಮಾನಾಸ್ಪದವಾಗಿ ಆಂಧ್ರದ ವಿಜಯವಾಡಾದಲ್ಲಿ ಸಾವನಪ್ಪಿದ್ದಾರೆ.

    ಕಳೆದ ಮೂರು ದಿನಗಳ ಹಿಂದೆ ಸೂರ್ಯಕುಮಾರಿ ನಾಪತ್ತೆಯಾಗಿದ್ದು ಇಂದು ಅವರ ಶವ ವಿಜಯವಾಡದ ರೋಶಾ ಕ್ಯಾನಲ್ ನಲ್ಲಿ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಕಳೆದ ಮೂರು ದಿನಗಳ ಹಿಂದೆ ಕೋರ್ಲಪಾಟಿ ಅವರ ಪೋಷಕರು ಟಿಡಿಪಿ ಮಾಜಿ ಶಾಸಕ  ಜಯರಾಜನ್ ಅವರ ಮಗ ವಿದ್ಯಾಸಾಗರ ಕಿಡ್ನಾಪ್ ಮಾಡಿದ್ದಾರೆ  ಅಂತಾ ಆರೋಪಿಸಿದ್ದರು. ಆದರೆ ಸಾವಿಗೂ ಮುನ್ನ ಡಾ.ಸೂರ್ಯಕುಮಾರಿ ತಮ್ಮ ಮೊಬೈಲ್ ನಿಂದ ಶಾಸಕರ ಪುತ್ರ ವಿದ್ಯಾಸಾಗರ ಮೊಬೈಲ್‍ಗೆ “ನಿನ್ನ ಬಿಟ್ಟು ನನಗೆ ಇರಲು ಸಾಧ್ಯವಿಲ್ಲ ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಅಂತಾ ಮೇಸೆಜ್ ಮಾಡಿದ್ದಾರೆ.

    ಸದ್ಯ ಈ ಕುರಿತು ಮಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ತುಮಕೂರಿನಲ್ಲಿ ಮರಕ್ಕೆ ಗುದ್ದಿದ ಕಾರ್- ಪತಿ ಸಾವು, ಪತ್ನಿಯ 2 ಕಾಲು ಕಟ್

    ತುಮಕೂರಿನಲ್ಲಿ ಮರಕ್ಕೆ ಗುದ್ದಿದ ಕಾರ್- ಪತಿ ಸಾವು, ಪತ್ನಿಯ 2 ಕಾಲು ಕಟ್

    ತುಮಕೂರು: ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಗುದ್ದಿದ ಪರಿಣಾಮ ಪತಿ ಸ್ಥಳದಲ್ಲೇ ಸಾವನ್ನಪ್ಪಿ, ಪತ್ನಿ ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಹುಳಿಯಾರಿನಲ್ಲಿ ಈ ಭೀಕರವಾದ ಅಪಘಾತ ಸಂಭವಿಸಿದೆ. ಹುಳಿಯಾರಿನ ಬಸವೇಶ್ವರ ಜ್ಯುವೆಲ್ಲರಿ ಮಾಲೀಕ ಮಲ್ಲಿಕಾರ್ಜುನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಗೂ ಅವರ ಪತ್ನಿ ಸಂಧ್ಯಾ ಅವರ ಎರಡು ಕಾಲು ಮುರಿದಿವೆ.

    ಶನಿವಾರ ಹೊಸದುರ್ಗಕ್ಕೆ ಸ್ನೇಹಿತನ ಮದುವೆ ಹೋಗಿ ವಾಪಸ್ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ಸಂಬಂಧ ಕುರಿತು ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಭೂಗತ ಪಾತಕಿ ಛೋಟಾ ರಾಜನ್ ಸಹಚರ ಉಡುಪಿಯ ವಿನೇಶ್ ಶೆಟ್ಟಿ ಬಂಧನ

    ಭೂಗತ ಪಾತಕಿ ಛೋಟಾ ರಾಜನ್ ಸಹಚರ ಉಡುಪಿಯ ವಿನೇಶ್ ಶೆಟ್ಟಿ ಬಂಧನ

    ಮಂಗಳೂರು: ಭೂಗತ ಪಾತಕಿ ಛೋಟಾ ರಾಜನ್ ಸಹಚರ ವಿನೇಶ್ ಶೆಟ್ಟಿ ಎಂಬಾತನನ್ನು ಮಂಗಳೂರಿನ ಕೋಣಾಜೆ ಪೊಲೀಸರು ಮುಂಬೈನ ಥಾಣೆಯಲ್ಲಿ ಬಂಧಿಸಿದ್ದಾರೆ.

    ಮಂಗಳೂರು ಮುಡಿಪು ಬಳಿ ನಡೆದಿದ್ದ ಜೋಡಿ ಕೊಲೆ ಪ್ರಕರಣದಲ್ಲಿ ವಿನೇಶ್ ಶೆಟ್ಟಿ ಆರೋಪಿಯಾಗಿದ್ದನು. 2003 ರಲ್ಲಿ ವೇಣುಗೋಪಾಲ್ ನಾಯಕ್ ಮತ್ತು ಸಂತೋಷ್ ಶೆಟ್ಟಿ ಎಂಬವರ ಕೊಲೆ ನಡೆದಿತ್ತು. ಪ್ರಕರಣದಲ್ಲಿ ಬಂಧಿತನಾಗಿ ವಿನೇಶ್ ಮಂಗಳೂರು ನ್ಯಾಯಾಲಯಕ್ಕೆ ಹಾಜರಾಗಿದ್ದನು. 2005ರಲ್ಲಿ ಜಾಮೀನು ಪಡೆದ ವಿನೇಶ್ ಶೆಟ್ಟಿ ತಲೆಮರೆಸಿಕೊಂಡಿದ್ದನು. ವಿನೇಶ್ ಛೋಟಾ ರಾಜನ್ ಗ್ಯಾಂಗ್ ನಲ್ಲಿ ಸಕ್ರೀಯನಾಗಿದ್ದ ಎಂದು ಹೇಳಲಾಗುತ್ತಿದೆ.

    ಉಡುಪಿ ಜಿಲ್ಲೆಯ ಶಿರ್ವ ಮೂಲದ ನಿವಾಸಿಯಾಗಿರುವ ವಿನೇಶ್ ಶೆಟ್ಟಿಯ ಬಂಧನಕ್ಕಾಗಿ ಪೊಲೀಸರು ಮಂಗಳೂರು ಕೋರ್ಟಿನಿಂದ ವಾರೆಂಟ್ ಪಡೆದು ಅರೆಸ್ಟ್ ಮಾಡಿದ್ದಾರೆ. ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಥಾಣೆ ನ್ಯಾಯಾಲಯಕ್ಕೆ ಹಾಜರಾಗಿದ್ದ ವೇಳೆ ಪೊಲೀಸರು ಆರೋಪಿ ವಿನೇಶ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ.

     

  • ಲಾರಿ ಪಲ್ಟಿ: ಚಾಲಕ, ಕ್ಲೀನರ್ ಸ್ಥಳದಲ್ಲೇ ಸಾವು

    ಲಾರಿ ಪಲ್ಟಿ: ಚಾಲಕ, ಕ್ಲೀನರ್ ಸ್ಥಳದಲ್ಲೇ ಸಾವು

    ರಾಯಚೂರು: ಜಿಲ್ಲೆಯ ಹೆಗ್ಗಸನಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

    ಲಾರಿ ಚಾಲಕ ಹಾಗೂ ಕ್ಲೀನರ್ ಸಾವನ್ನಪ್ಪಿದ್ದು, ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಕಲಬುರಗಿಯಿಂದ ರಾಯಚೂರು ಕಡೆಗೆ ಬರುತ್ತಿದ್ದ ಲಾರಿ ಬೆಳಗಿನ ಜಾವ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

    ಮೃತರು ಕಲಬುರಗಿಯ ಆಳಂದ ಮೂಲದವರು ಎನ್ನಲಾಗಿದೆ. ಈ ಕುರಿತು ಜಿಲ್ಲೆಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಟೋ, ಖಾಸಗಿ ಬಸ್ ನಡುವೆ ಡಿಕ್ಕಿ: ನಾಲ್ವರು ಸಾವು, ಇಬ್ಬರಿಗೆ ಗಾಯ

    ಆಟೋ, ಖಾಸಗಿ ಬಸ್ ನಡುವೆ ಡಿಕ್ಕಿ: ನಾಲ್ವರು ಸಾವು, ಇಬ್ಬರಿಗೆ ಗಾಯ

    ಶಿವಮೊಗ್ಗ: ತುಮಕೂರು ಜಿಲ್ಲೆಯ ಸಿರಾದಿಂದ ಸಿಗಂದೂರಿನ ಚೌಡೇಶ್ವರಿ ದೇವಿಯ ದರ್ಶನ ಪಡೆದು ವಾಪಸ್ ಬರುವಾಗ ಆಟೋ ಮತ್ತು ಖಾಸಗಿ ಬಸ್ ನಡುವೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟು ಇಬ್ಬರಿಗೆ ಗಾಯವಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಶಿವಮೊಗ್ಗ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಆಚಾಪುರದಲ್ಲಿ ಈ ಘಟನೆ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡಿರುವ ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

    ತುಮಕೂರಿನ ಶಿರಾ ತಾಲೂಕಿನ ಭುವನಹಳ್ಳಿ-ಸುರಗಂಟೆ ಗ್ರಾಮದಿಂದ ಸಿಗಂದೂರಿನ ದೇವಸ್ಥಾನಕ್ಕೆ ಒಂದೇ ಆಟೋದಲ್ಲಿ ಏಳು ಜನ ಬಂದಿದ್ದರು. ಸಿಗಂದೂರಿನಿಂದ ಚೌಡೇಶ್ವರಿ ದೇವಿಯ ದರ್ಶನ ಪಡೆದು ವಾಪಸ್ ಬರುವಾಗ ಎದುರಿಗೆ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ.

    ಈ ಕುರಿತು ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪ್ರೀತಿಸಿ ಓಡಿ ಹೋಗಿದ್ದ ಪ್ರೇಮಿಗಳು ಮತ್ತೆ ಮರಳಿ ಗೂಡಿಗೆ

    ಪ್ರೀತಿಸಿ ಓಡಿ ಹೋಗಿದ್ದ ಪ್ರೇಮಿಗಳು ಮತ್ತೆ ಮರಳಿ ಗೂಡಿಗೆ

    ವಿಜಯಪುರ: ಯುವಕ-ಯುವತಿ ಪರಸ್ಪರ ಪ್ರೀತಿಸಿ ಓಡಿ ಹೋಗಿದ್ದ ಪ್ರೇಮಿಗಳು ಈಗ ಕಲಬುರಗಿಯ ಬುದ್ಧ ವಿಹಾರದಲ್ಲಿ ಮದುವೆಯಾಗಿ ನಗರಕ್ಕೆ ಮರಳಿದ್ದಾರೆ.

    ಹೌದು, ಪ್ರೇಮಿಗಳಾದ ನಿಂಗಪ್ಪ ಮತ್ತು ಮಾಶಾಬಿ ಪರಸ್ಪರ ಪ್ರೀತಿಸಿ ಓಡಿ ಹೋದ ಹಿನ್ನೆಲೆಯಲ್ಲಿ ಯುವಕನ ತಂದೆ ಮತ್ತು ತಮ್ಮನನ್ನು ಗಿಡಕ್ಕೆ ಕಟ್ಟಿ ಯುವತಿಯ ತಂದೆ ಹಾಗೂ ಅಣ್ಣಂದಿರು ಥಳಿಸಿದ್ದರು. ಹೀಗಾಗಿ ಇದರ ವರದಿಯನ್ನು ಪಬ್ಲಿಕ್ ಟಿವಿಗೆ ಜೂನ್ 28 ರಂದು ಬಹಿರಂಗ ಪಡಿಸಿತ್ತು. ಆಗ ಎಚ್ಚೆತ್ತುಕೊಂಡ ಜಿಲ್ಲಾ ಪೊಲೀಸ್ ಇಲಾಖೆ ಹಲ್ಲೆ ಮಾಡಿದ ಯುವತಿಯ ತಂದೆ ಸೇರಿದಂತೆ ಅಣ್ಣಂದಿರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದರು.

    ಓಡಿ ಹೋಗಿದ್ದ ಪ್ರೇಮಿಗಳು ನಿಂಗಪ್ಪ ಮತ್ತು ಮಾಶಾಬಿ ಕಲಬುರಗಿಯ ಬುದ್ಧವಿಹಾರದಲ್ಲಿ ಮದುವೆಯಾಗಿ ಮರಳಿದ್ದಾರೆ. ಆದರೆ ಅವರಿಗೆ ಗ್ರಾಮಕ್ಕೆ ಬಂದರೆ ಥಳಿಸುವುದಾಗಿ ಮಾಶಾಬಿ ತಂದೆ ಮತ್ತು ಕುಟುಂಬಸ್ಥರು ಬೆದರಿಕೆ ಹಾಕಿದ್ದಾರಂತೆ. ಹೀಗಾಗಿ ಭಯಗೊಂಡು ಪ್ರೇಮಿಗಳು ಸೂಕ್ತ ರಕ್ಷಣೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊರೆ ಹೋಗಿದ್ದಾರೆ.

    ಮನವಿಯ ಹಿನ್ನೆಲೆಯಲ್ಲಿ ಎಸ್‍ಪಿ ಕುಲದೀಪಕುಮಾರ್ ಜೈನ್ ಅವರು ಪ್ರೇಮಿಗಳಿಗೆ ಸೂಕ್ತ ಭದ್ರತೆ ನೀಡುವ ಭರವಸೆಯನ್ನು ನೀಡಿದ್ದಾರೆ.