Tag: police

  • ಮಂಡ್ಯದಲ್ಲಿ ಖತರ್ನಾಕ್ ಕಳ್ಳನ ಬಂಧನ

    ಮಂಡ್ಯದಲ್ಲಿ ಖತರ್ನಾಕ್ ಕಳ್ಳನ ಬಂಧನ

    ಮಂಡ್ಯ: ಬೀಗ ಹಾಕಿರುವ ಮನೆಯನ್ನು ಟಾರ್ಗೆಟ್ ಮಾಡಿ ಚಿನ್ನಾಭರಣ ದೋಚುತ್ತಿದ್ದ ಖತರ್ನಾಕ್ ಕಳ್ಳನನ್ನು ಮಂಡ್ಯ ಜಿಲ್ಲೆಯ ಹಲಗೂರು ಪೊಲೀಸರು ಬಂಧಿಸಿದ್ದಾರೆ.

    ಆರೀಫ್ ಪಾಷಾ(65) ಬಂಧಿತ ಆರೋಪಿ. ಜಿಲ್ಲೆಯ ವಿವಿಧ ಕಡೆಗಳಲ್ಲಿ ಕಳ್ಳತನ ಮಾಡಿದ್ದರಿಂದ ಈತನ ಮೇಲೆ ಆರು ಪ್ರಕರಣ ದಾಖಲಾಗಿತ್ತು. ಆ.7ರಂದು ಬೆಳಗ್ಗೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಈತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕಳ್ಳತನದ ಪ್ರಕರಣಗಳು ಬೆಳಕಿಗೆ ಬಂದಿದೆ.

    ಬಂಧಿತನಿಂದ ಸುಮಾರು 13 ಲಕ್ಷ ರೂಪಾಯಿ ಮೌಲ್ಯದ 450 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಬಂಧಿಸಿದ ಡಿವೈಎಸ್ಪಿ ಮಲ್ಲಿಕ್, ಸಿಪಿಐ ಶಿವಮಲ್ಲವಯ್ಯ, ಪಿಎಸ್‍ಐ ಶ್ರೀಧರ್ ನೇತೃತ್ವದ ತಂಡವನ್ನು ಮಂಡ್ಯ ಜಿಲ್ಲಾ ಎಸ್ಪಿ ರಾಧಿಕಾ ಅವರು ಶ್ಲಾಘಿಸಿದ್ದಾರೆ.

  • ಬೈಕಿಗೆ ಶಾಲಾ ವಾಹನ ಡಿಕ್ಕಿ: 7 ವರ್ಷದ ಮಗು ಬಲಿ

    ಬೈಕಿಗೆ ಶಾಲಾ ವಾಹನ ಡಿಕ್ಕಿ: 7 ವರ್ಷದ ಮಗು ಬಲಿ

    ಹಾವೇರಿ: ಶಾಲಾ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ 7 ವರ್ಷದ ಮಗು ಸಾವನ್ನಪ್ಪಿದ್ದು, ತಂದೆ ಗಾಯಗೊಂಡ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಂಸಬಾವಿ ಗ್ರಾಮದಲ್ಲಿ ಘಟನೆ ನಡೆದಿದೆ.

    ವಿನಯಕುಮಾರ ಚಲವಾದಿ(7) ಮೃತಪಟ್ಟ ಬಾಲಕ. ತಂದೆಯೊಂದಿಗೆ ಬಾಲಕ ಬೈಕಿನಲ್ಲಿ ಶಾಲೆಗೆ ತೆರಳುತ್ತಿದ್ದ ವೇಳೆ ಹಂಸಭಾವಿ ಗ್ರಾಮದಲ್ಲಿರೋ ನ್ಯಾಶನಲ್ ಪಬ್ಲಿಕ್ ಸ್ಕೂಲ್ ಗೆ ಸೇರಿದ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.

    ಬೈಕ್ ಓಡಿಸುತ್ತಿದ್ದ ಮೃತ ಬಾಲಕನ ತಂದೆ ಕೊಟ್ರೇಶಪ್ಪ ಗಾಯಗೊಂಡಿದ್ದು ಹಂಸಭಾವಿ ಪ್ರಾಥಮಿಕ ಆರೋಗ್ಯ ಕೇಂದ್ರ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಂಸಬಾವಿ ಠಾಣೆ  ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಕುರಿತು ಹಂಸಭಾವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಯುವತಿಯ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ಅತ್ಯಾಚಾರಕ್ಕೆ ಯತ್ನ- ಇಬ್ಬರ ಬಂಧನ

    ಯುವತಿಯ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ಅತ್ಯಾಚಾರಕ್ಕೆ ಯತ್ನ- ಇಬ್ಬರ ಬಂಧನ

    ಮೈಸೂರು: ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆಸಿದ ಇಬ್ಬರು ಯುವಕರನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ.

    ಗಾಯತ್ರಿ ಪುರಂನ ಸುಹೇಲ್(27) ಹಾಗೂ ಅಕ್ಮಲ್(25) ಬಂಧಿತ ಆರೋಪಿಗಳು. ಈ ಇಬ್ಬರೂ ಮೈಸೂರಿನ ಗಾಯತ್ರಿಪುರಂನ ಯುವತಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದಾರೆ.

    ಯುವತಿ ಬರುತ್ತಿದ್ದ ದ್ವಿಚಕ್ರವಾಹನಕ್ಕೆ ಆರೋಪಿಗಳು ಡಿಕ್ಕಿ ಹೊಡೆದಿದ್ದಾರೆ. ನಂತರ ಯುವತಿಯೊಂದಿಗೆ ಅನಗತ್ಯವಾಗಿ ಜಗಳ ತೆಗೆದಿದ್ದು, ಆಕೆಯ ಬಟ್ಟೆಗಳನ್ನ ಹರಿದುಹಾಕಿ ಅನುಚಿತವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.

    ಈ ಬಗ್ಗೆ ಉದಯಗಿರಿ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದು, ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

  • ನಕಲಿ ಛಾಪಾಕಾಗದ ಮಾರಾಟ ಜಾಲ ಪತ್ತೆಹಚ್ಚಿದ ಪೊಲೀಸರು- ಓರ್ವನ ಬಂಧನ

    ನಕಲಿ ಛಾಪಾಕಾಗದ ಮಾರಾಟ ಜಾಲ ಪತ್ತೆಹಚ್ಚಿದ ಪೊಲೀಸರು- ಓರ್ವನ ಬಂಧನ

    ದಾವಣಗೆರೆ: ನಕಲಿ ಛಾಪಾಕಾಗದ ಮಾರಾಟ ಜಾಲವನ್ನು ಪೊಲೀಸರು ಪತ್ತೆ ಹಚ್ಚಿ ಅರೋಪಿಗಳನ್ನು ಬಂಧಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ನಗರದ ಮಧ್ಯ ಕರ್ನಾಟಕ ಕೋಳಿ ಸಾಕಣೆದಾರರ ಸಹಕಾರ ಸಂಘದಲ್ಲಿ ಸಾವಿರಾರು ನಕಲಿ ಇ-ಸ್ಟ್ಯಾಂಪ್ ಪೇಪರ್ ಸೃಷ್ಟಿಸಿ ಮಾರಾಟ ಮಾಡುತ್ತಿದ್ದರು. ಹಸಿರು ಸೇನೆ ರೈತ ಸಂಘದ ಜಿಲ್ಲಾಧ್ಯಕ್ಷ ದೇವರಾಜ್ ಮಲ್ಲಾಪುರ ಎಂಬವರಿಗೆ ಸೇರಿದ ಇ-ಸ್ಟ್ಯಾಂಪ್ ಪೇಪರ್ ವಿತರಣಾ ಕೇಂದ್ರದಲ್ಲಿ ಅಕ್ರಮವಾಗಿ ನಕಲಿ ಛಾಪಾಕಾಗದಗಳನ್ನು ಮಾರಾಟ ಮಾಡುತ್ತಿದ್ದರು. ಅಲ್ಲದೇ ನಿತ್ಯ 30 ರಿಂದ 50 ನಕಲಿ ಇ- ಸ್ಟ್ಯಾಂಪ್ ಸೃಷ್ಟಿಸಿ ಸಾರ್ವಜನಿಕರಿಗೆ ಹಾಗೂ ಸರ್ಕಾರಕ್ಕೆ ಮೋಸ ಮಾಡುತ್ತಿದ್ದರು.

    ಸಹಕಾರ ಸಂಘದಲ್ಲಿ ನಕಲಿ ಛಾಪಾಕಾಗದ ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಎಸ್‍ಪಿ ಗಮನಕ್ಕೆ ತಂದಿದ್ರು. ಇದರಿಂದ ಎಸ್‍ಪಿ ಭೀಮಾಶಂಕರ ಗುಳೇದ್ ರವರ ನೇತೃತ್ವದಲ್ಲಿ ಬಡಾವಣೆ ಪೊಲೀಸ್ ಸಿಬ್ಬಂದಿ ಸ್ವಯಂಪ್ರೇರಿತ ದಾಳಿ ನಡೆಸಿ ಕಂಪ್ಯೂಟರ್ ಮತ್ತು ನಕಲಿ ಛಾಪಾಕಾಗದ ವಶಕ್ಕೆ ಪಡೆದಿದ್ದಾರೆ.

    ನಕಲಿ ಸ್ಟ್ಯಾಂಪ್ ಸೃಷ್ಟಿ ಹಿಂದೆ ಬೃಹತ್ ಜಾಲ ಕಾರ್ಯನಿರ್ವಹಿಸುತ್ತಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ರು. ಅಲ್ಲದೇ ಪೊಲೀಸರು ಸಹಕಾರ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಂಪ್ಯೂಟರ್ ಆಪರೇಟರ್ ರಮೇಶ್‍ನನ್ನು ಬಂಧನ ಮಾಡಿದ್ದಾರೆ. ಆದ್ರೆ ಇ-ಸ್ಟ್ಯಾಂಪ್ ವಿತರಣಾ ಕೇಂದ್ರದ ಮಾಲೀಕನ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ.

    ದಾವಣಗೆರೆಯಲ್ಲಿ ಸಾಕಷ್ಟು ಅಕ್ರಮಗಳನ್ನು ಬಯಲಿಗೆಳೆದಿದ್ದ ರೈತ ಮುಖಂಡ ದೇವರಾಜ್ ಅಕ್ರಮವನ್ನ ಈಗ ಪಬ್ಲಿಕ್ ಟಿವಿ ಬಯಲಿಗೆಳೆದಿದೆ.

  • ನಾವು ನೀವೆಲ್ಲಾ ಮನೆ ಕಟ್ತಿರೋದು ಫಿಲ್ಟರ್ ಮರಳಲ್ಲೇ – ಖಾಕಿ ಲಂಚಬಾಕತನಕ್ಕೆ ಸಿಕ್ತು ಸಾಕ್ಷಿ

    ನಾವು ನೀವೆಲ್ಲಾ ಮನೆ ಕಟ್ತಿರೋದು ಫಿಲ್ಟರ್ ಮರಳಲ್ಲೇ – ಖಾಕಿ ಲಂಚಬಾಕತನಕ್ಕೆ ಸಿಕ್ತು ಸಾಕ್ಷಿ

    ಕೋಲಾರ: ಖಡಕ್ ರಾಜಕಾರಣಿ ಆರೋಗ್ಯ ಸಚಿವ ರಮೇಶ್ ಕುಮಾರ್ ತವರಲ್ಲೇ ಕೆರೆಗಳ ಕಗ್ಗೊಲೆ ನಡೆಯುತ್ತಿದೆ. ಕೋಲಾರದ ಮಾಲೂರಿನಲ್ಲಿರುವ ಬಹುತೇಕ ಕೆರೆಗಳಲ್ಲಿ ಫಿಲ್ಟರ್ ಮರಳು ಮಾಫಿಯಾ ಎಗ್ಗಿಲ್ಲದೇ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

    ಮುಂಗಾರು ಕೊರತೆಯ ನಡುವೆಯೂ ಕೆರೆಗಳಲ್ಲಿ ಸಂಗ್ರಹವಾಗಿರುವ ಅಲ್ಪಸ್ವಲ್ಪ ನೀರನ್ನು ಫಿಲ್ಟರ್ ದಂಧೆಗೆ ಬಳಸಲಾಗುತ್ತಿದೆ. ಇದೇ ಮರಳನ್ನು ರಾತ್ರೋರಾತ್ರಿ ಮಹಾನಗರಿ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಸರಬರಾಜು ಮಾಡಲಾಗ್ತಿದೆ. ಮರಳು ದಂಧೆಕೋರ ಪ್ರಭಾಕರ್‍ನಿಂದ ಮಾಲೂರು ಠಾಣೆಗೆ ತಿಂಗಳಿಗೆ 50 ಸಾವಿರ ರೂಪಾಯಿ ಸಂದಾಯವಾಗಿದೆ ಎಂದು ತಿಳಿದುಬಂದಿದೆ.

    ದಂಧೆ ಬಗ್ಗೆ ಪ್ರಶ್ನೆ ಮಾಡಿದವರನ್ನೇ ಪೊಲೀಸರು ಬೆದರಿಸ್ತಿದ್ದಾರಂತೆ. ಯಾವುದಾದರೊಂದು ಕೇಸ್ ಹಾಕಿ ಸಿಲುಕಿಸೋ ಧಮ್ಕಿ ಹಾಕ್ತಿದ್ದಾರೆ ಎನ್ನಲಾಗಿದೆ. ಮಾಲೂರು ಪೊಲೀಸ್ ಠಾಣೆಯ ಮುಖ್ಯಪೇದೆ ವೆಂಕಟರಾಮೇಗೌಡ ಮರಳು ದಂಧೆಯಲ್ಲಿ ಭಾಗಿಯಾಗಿರುವ ಸೋಮಶೇಖರ್ ನಡೆಸಿರುವ ಆಡಿಯೋ ತುಣುಕು ಕೂಡ ಲಭ್ಯವಾಗಿದೆ. ಆದ್ರೆ ಡಿಸಿ ಮಾತ್ರ ಫಿಲ್ಟರ್ ಮರಳು ದಂಧೆಯನ್ನು ಸುತಾರಂ ಒಪ್ಪಿಕೊಳ್ಳುತ್ತಿಲ್ಲ ಎನ್ನಲಾಗಿದೆ.

    https://www.youtube.com/watch?v=yWyalvTLt-E

  • ಟ್ಯಾಂಕರ್‍ಗೆ ಡಿಕ್ಕಿಯಾಗಿ ಮೃತಪಟ್ಟ ಮಹಿಳೆ-ಶಾಲಾ ಬಸ್ ಹರಿದು ಜೀವಬಿಟ್ಟ ಹಸುಳೆ

    ಟ್ಯಾಂಕರ್‍ಗೆ ಡಿಕ್ಕಿಯಾಗಿ ಮೃತಪಟ್ಟ ಮಹಿಳೆ-ಶಾಲಾ ಬಸ್ ಹರಿದು ಜೀವಬಿಟ್ಟ ಹಸುಳೆ

    ಬೆಂಗಳೂರು: ಬೈಕ್ ಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಓಡಿಸುತ್ತಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ನಗರದ ಚನ್ನಸಂದ್ರ ಬಳಿಯ ನಾಗೊಂಡಹಳ್ಳಿ ನಡೆದಿದೆ.

    37 ವರ್ಷದ ಕವಿತಾ ಮೃತ ದುರ್ದೈವಿ. ಅತಿವೇಗವಾಗಿ ಬಂದ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಕವಿತಾರ ತಲೆಗೆ ತೀವ್ರವಾದ ಪೆಟ್ಟಾಗಿದ್ದು, ಕವಿತಾರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ರು, ಚಿಕಿತ್ಸೆ ಫಲಿಸಿದೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟ್ಯಾಂಕರ್ ಚಾಲಕನನ್ನ ಪೊಲೀಸ್ರು ವಶಕ್ಕೆ ಪಡೆದಿದ್ದಾರೆ.

    ಬಸ್ ಮತ್ತು ಟ್ಯಾಂಕರ್ ಚಾಲಕ

    ಆಟವಾಡುತ್ತಾ ಇದ್ದಕಿಂದಂತೆ ಬಸ್‍ನತ್ತ ಓಡಿ ಬಂದ ನತದೃಷ್ಟ ಕ್ರಿಸ್ಟೀನಾ ಜೇಸ್ ಎಂಬ ಮಗು ಅಪಘಾತದಿಂದ ಗಂಭೀರ ಗಾಯಗೊಂಡಿತ್ತು. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ರು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದೆ.

    ಘಟನೆ ಬಳಿಕ ಬಸ್ ಚಾಲಕ ವಿರೂಪಾಕ್ಷನಿಗೆ ಸಾರ್ವಜನಿಕರು ಥಳಿಸಿದ್ದು, ಚಾಲಕನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪಂಪ್‍ಸೆಟ್‍ಗಳನ್ನು ಕೊಡಲಿಯಿಂದ ಕಡಿದು ರೈತರ ಮೇಲೆ ಕೇಸ್ ಹಾಕಿದ ಆಂಧ್ರ ಅಧಿಕಾರಿಗಳು!

    ಪಂಪ್‍ಸೆಟ್‍ಗಳನ್ನು ಕೊಡಲಿಯಿಂದ ಕಡಿದು ರೈತರ ಮೇಲೆ ಕೇಸ್ ಹಾಕಿದ ಆಂಧ್ರ ಅಧಿಕಾರಿಗಳು!

    ಬಳ್ಳಾರಿ: ಕಾವೇರಿ ನೀರು ತಮಿಳುನಾಡು ಪಾಲಾಯ್ತು. ಇದೀಗ ತುಂಗಭದ್ರಾ ಜಲಾಶಯದ ನೀರು ಸದ್ದಿಲ್ಲದೇ ಆಂಧ್ರದ ಪಾಲಾಗುತ್ತಿದೆ. ಅಷ್ಟೇ ಅಲ್ಲ ರಾಜ್ಯದ ರೈತರ ಮೇಲೆ ಆಂಧ್ರದ ಅಧಿಕಾರಿಗಳು ದಬ್ಬಾಳಿಕೆ ಮಾಡಿ ರೈತರ ಮೇಲೆ ಕೇಸ್ ಹಾಕಿ ನೀರು ತೆಗೆದುಕೊಂಡಿದ್ದಾರೆ.

    ಬಳ್ಳಾರಿ ತಾಲೂಕಿನ ಗೋನಾಳ ಮೋಕಾ ಭಾಗದ ರೈತರ ಮೇಲೆ ಟಿಬಿ ಬೋರ್ಡ್ ಅಧಿಕಾರಿಗಳು ದರ್ಪ ತೋರಿದ್ದಾರೆ . ಪಂಪ್‍ಸೆಟ್‍ಗಳನ್ನು ಕೊಡಲಿಯಿಂದ ಕಡಿದು ಹಾಕಿ ನಾಶಪಡಿಸಿದ್ದಾರೆ.

    ವಿಪರ್ಯಾಸವೆಂದರೆ ಎಲ್‍ಎಲ್‍ಸಿ ಕಾಲುವೆಯಲ್ಲಿ ನಿಂತ ನೀರನ್ನೂ ಜಮೀನುಗಳಿಗೆ ಬಳಸಿಕೊಳ್ಳುವ ರೈತರ ಪಂಪ್‍ಸೆಟ್‍ಗಳನ್ನು ಟಿಬಿ ಬೋರ್ಡ್ ಅಧಿಕಾರಿಗಳು ಕೊಡಲಿಯಿಂದ ಕಡಿದು ಹಾಕಿ ನಾಶಪಡಿಸಿದ್ದಾರೆ. ಈ ವೇಳೆ ರೈತರು ಎಷ್ಟೇ ಬೇಡಿಕೊಂಡರೂ ರೈತರ ಮೇಲೆ ದಬ್ಬಾಳಿಕೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿ ಪಂಪ್‍ಸೆಟ್‍ಗಳನ್ನು ಕಿತ್ತು ಹಾಕಿದ್ದಾರೆ.

    ಅಷ್ಟೇ ಅಲ್ಲ ಟಿಬಿ ಬೋರ್ಡ್ ಅಧಿಕಾರಿಗಳು ಅಲ್ಲಿಯ ರೈತರ ಮೇಲೆ ಕೇಸ್ ಸಹ ದಾಖಲಿಸಿದ್ದಾರೆ. ಮೋಕಾ ಪೊಲೀಸ್ ಠಾಣೆಯಲ್ಲಿ 14 ರೈತರ ಮೇಲೆ ದೂರು ದಾಖಲಾಗಿದೆ. ಹೀಗಾಗಿ ನಮ್ಮ ನೀರೂ ನಮಗಿಲ್ವಾ? ನಿಂತ ನೀರನ್ನೂ ಬಳಸಿಕೊಳ್ಳಲು ದೊಣ್ಣೆ ನಾಯಕನ ಅಪ್ಪಣೆ ಬೇಕಾ ಅಂತ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಸಿಗ್ನಲ್ ನಲ್ಲಿ ನಿಂತಿದ್ದ ಬೈಕಿಗೆ ತಮಿಳ್ನಾಡು ಬಸ್ ಡಿಕ್ಕಿ: ಸವಾರನ ಸ್ಥಿತಿ ಗಂಭೀರ

    ಸಿಗ್ನಲ್ ನಲ್ಲಿ ನಿಂತಿದ್ದ ಬೈಕಿಗೆ ತಮಿಳ್ನಾಡು ಬಸ್ ಡಿಕ್ಕಿ: ಸವಾರನ ಸ್ಥಿತಿ ಗಂಭೀರ

    ಬೆಂಗಳೂರು: ಸಿಗ್ನಲ್ ನಲ್ಲಿ ನಿಂತಿದ್ದ ಬೈಕಿಗೆ ತಮಿಳುನಾಡು ಬಸ್ಸೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನ ಸ್ಥಿತಿ ಚಿಂತಾಜನಕವಾಗಿರುವ ಘಟನೆ ನಗರದ ಸಿದ್ದಾಪುರ ಜಂಕ್ಷನ್ ಬಳಿ ನಡೆದಿದೆ.

    ಘಟನೆಯಲ್ಲಿ ಗಾಯಗೊಂಡವರನ್ನು ನದೀಮ್ ಎನ್ನಲಾಗಿದ್ದು, ಇವರು ಸೋಮವಾರ ರಾತ್ರಿ ವಿನೋಬ್ ನಗರದಲ್ಲಿ ಕೆಲಸ ಮುಗಿಸಿ ಸಿದ್ದಾಪುರ ಬಳಿಯಿರುವ ಚಿಕ್ಕಮ್ಮನ ಮನೆಯಲ್ಲಿ ಊಟ ಮುಗಿಸಿಕೊಂಡು ತಮ್ಮ ಬೈಕಿನಲ್ಲಿ ಹಿಂದಿರುಗುತ್ತಿದ್ದ ವೇಳೆ ಸಿದ್ದಾಪುರದ ಗೋರಿ ಪಾಳ್ಯ ಬಳಿ ಈ ಅವಘಡ ಸಂಭವಿಸಿದೆ.

    ಕೂಡಲೇ ಸ್ಥಳೀಯರು ಗಾಯಗೊಂಡ ನದೀಮ್ ನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದ್ರೆ ಈ ಭೀಕರ ಅಪಘಾತದ ಬಳಿಕ ಬಸ್ ಚಾಲಕ ಮತ್ತು ನಿರ್ವಾಹಕ ಸ್ಥಳಸದಿಂದ ಪರಾರಿಯಾಗಿದ್ದಾರೆ.

    ಈ ಘಟನೆ ಕುರಿತು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

     

  • ರಾಖಿ ಖರೀದಿಸಲು ಪತಿ ಹಣ ಕೊಡಲಿಲ್ಲವೆಂದು ಪತ್ನಿ ಆತ್ಮಹತ್ಯೆ

    ರಾಖಿ ಖರೀದಿಸಲು ಪತಿ ಹಣ ಕೊಡಲಿಲ್ಲವೆಂದು ಪತ್ನಿ ಆತ್ಮಹತ್ಯೆ

    ಬೆಳಗಾವಿ: ಸಹೋದರನಿಗೆ ರಾಖಿ ಖರೀದಿಸಲು ಪತಿ ಹಣ ಕೊಡಲಿಲ್ಲ ಎಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

    ಜಿಲ್ಲೆಯ ಮಲಪ್ರಭಾ ನಗರದಲ್ಲಿ ಈ ಘಟನೆ ಸಂಭವಿಸಿದ್ದು, ಮಹಾದೇವಿ ಗೊಲ್ಲರ(23) ನೇಣಿಗೆ ಶರಣಾದ ಮಹಿಳೆ. ಮಹಾದೇವಿ ತನ್ನ ಸಹೋದರನಿಗೆ ರಾಖಿ ಕಟ್ಟಲು ಪತಿಯ ಬಳಿ 10 ರೂ. ಕೇಳಿದ್ದಳು. ಆದರೆ ಪತಿ ಕೊಡಲಿಲ್ಲ ಎಂಬ ಕಾರಣಕ್ಕೆ ಪತ್ನಿ ನೇಣಿಗೆ ಶರಣಾಗಿದ್ದಾರೆ.

    ಅಶೋಕ್ ಮತ್ತು ಮಹಾದೇವಿ ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ಸದ್ಯ ಪತಿ ಅಶೋಕ್ ಗೊಲ್ಲರ ವಿರುದ್ಧ ಕೊಲೆ ಯತ್ನ ಎಂದು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಶೋಕನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ಸೀರೆ ಧರಿಸಿ ಭಿಕ್ಷೆ ಬೇಡಲು ಒಪ್ಪದಕ್ಕೆ ಮಂಗಳಮುಖಿಯ ಬರ್ಬರ ಹತ್ಯೆ!

    ಸೀರೆ ಧರಿಸಿ ಭಿಕ್ಷೆ ಬೇಡಲು ಒಪ್ಪದಕ್ಕೆ ಮಂಗಳಮುಖಿಯ ಬರ್ಬರ ಹತ್ಯೆ!

    ಬಳ್ಳಾರಿ: ಸೀರೆ ಉಟ್ಟು ಭಿಕ್ಷೆ ಬೇಡಲು ಒಪ್ಪದ ಮಂಗಳಮುಖಿಯನ್ನ ಭೀಕರವಾಗಿ ಕೊಲೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.

    ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು ಇಂದು ಮಧ್ಯಾಹ್ನ ಬಳ್ಳಾರಿಯ ಕೌಲಬಜಾರ ಪ್ರದೇಶದ ಮೊದಲನೇ ಗೇಟ್ ಬಳಿಯ ರಾಜಕಾಲುವೆಯಲ್ಲಿ ಶವ ಪತ್ತೆಯಾಗಿದೆ.

    ಸೀರೆ ಧರಿಸಿ ಭಿಕ್ಷೆ ಬೇಡುವಂತೆ ನಿತ್ಯ ಹಿಂಸಿಸುತ್ತಿದ್ದ ಹಿಜಡಾಗಳ ತಂಡ ಮಂಗಳಮುಖಿ ಇಮ್ತಿಯಾಜ್ ಅಲಿಯಾಸ್ ಇಂನ್ತೂನನ್ನೂ ಕೊಲೆ ಮಾಡಿ ಚರಂಡಿಯಲ್ಲಿ ಬಿಸಾಕಿದ್ದಾರೆ ಎಂದು ಇಮ್ತಿಯಾಜ್ ಸಂಬಂಧಿಕರು ಕೌಲಬಜಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಈ ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಳ್ಳಾರಿ ಎಸ್‍ಪಿ ಆರ್ ಚೇತನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.