Tag: police

  • ಗಂಡನನ್ನು ಕೊಲ್ಲದಿದ್ರೆ ಆತ್ಮಹತ್ಯೆ ಮಾಡ್ಕೋತಿನಿ – ಪ್ರಿಯಕರನನ್ನು ಬ್ಲ್ಯಾಕ್‍ಮೇಲ್ ಮಾಡಿ ಕೊಲೆ ಮಾಡಿಸಿದ್ದ ಲೇಡಿ ಅಂದರ್

    ಗಂಡನನ್ನು ಕೊಲ್ಲದಿದ್ರೆ ಆತ್ಮಹತ್ಯೆ ಮಾಡ್ಕೋತಿನಿ – ಪ್ರಿಯಕರನನ್ನು ಬ್ಲ್ಯಾಕ್‍ಮೇಲ್ ಮಾಡಿ ಕೊಲೆ ಮಾಡಿಸಿದ್ದ ಲೇಡಿ ಅಂದರ್

    ಬೆಳಗಾವಿ: ಗಂಡನನ್ನು (Husband) ಕೊಲ್ಲದಿದ್ರೆ ಆತ್ಮಹತ್ಯೆ ಮಾಡ್ಕೋತಿನಿ ಅಂತ ಬ್ಲ್ಯಾಕ್‍ಮೇಲ್ ಮಾಡಿ ಪ್ರಿಯಕರನಿಂದ ಪತಿಯನ್ನು ಕೊಲೆ ಮಾಡಿಸಿದ್ದ ಪಾಪಿ ಪತ್ನಿ (Wife) ಸೇರಿ ಹಾಗೂ ಮೂವರು ಆರೋಪಿಗಳನ್ನು ರಾಮದುರ್ಗ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ಕಮಲವ್ವ, ಪ್ರಿಯಕರ ಸಾಬಪ್ಪ ಮಾದರ್ ಆತನ ಸ್ನೇಹಿತ ಫಕ್ಕೀರಪ್ಪ ಕಣವಿ ಎಂದು ಗುರುತಿಸಲಾಗಿದೆ. ರಾಮದುರ್ಗ ತಾಲೂಕಿನ ಜುನಿಪೇಟೆ ಗ್ರಾಮದ ಹರ್ಲಾಪುರದಿಂದ ರಾಮಾಪುರಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಮಹಿಳೆಯ ಪತಿ ಈರಪ್ಪ ಆಡಿನ್ ಕೊಲೆಯಾಗಿತ್ತು. ವಾರದ ಹಿಂದೆ ಕತ್ತು ಹಿಸುಕಿ ಕೊಂದು ಶವ ಬಿಸಾಕಿ ಪತ್ನಿ ತವರುಮನೆ ಸೇರಿದ್ದಳು. ಇದನ್ನೂ ಓದಿ: ಬಿಷ್ಣೋಯ್ ಹೆಸರಲ್ಲಿ ಬೆದರಿಕೆ ಹಾಕಿ ಒಂದು ಕೋಟಿಗೆ ಡಿಮ್ಯಾಂಡ್ – ತಿಹಾರ್‌ ಜೈಲಲ್ಲಿ ಫ್ರೆಂಡ್ಸ್‌ ಆಗಿದ್ದ ಗ್ಯಾಂಗ್‌ ಅಂದರ್‌!

    ಕ್ಯಾಂಟಿನ್‍ನಲ್ಲಿ ಕೆಲಸ ಮಾಡ್ತಿದ್ದ ಕಮಲವ್ವಗೆ ಪರಿಚಯವಾಗಿದ್ದ ವಿಕಲಾಂಗ ಸಾಬಪ್ಪ ಮಾದರ್ ಜೊತೆ ಅನೈತಿಕ ಸಂಬಂಧವಿತ್ತು. ಆತನ ಬಳಿ, ಗಂಡನ ಕಿರುಕುಳಕ್ಕೆ ಬೇಸತ್ತು, ಆತನ ಕೊಲೆಗೆ ಕಮಲವ್ವ ಸೂಚಿಸಿದ್ದಳು. ಕೊಲೆಗೂ ಮುನ್ನಾ ದಿನ 30ಬಾರಿ ಕರೆ ಮಾಡಿದ್ದ ಕಮಲವ್ವ. ಗಂಡನನ್ನ ಕೊಲೆ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಳು.

    ಜು.7ರಂದು ಗಂಡನಿಗೆ ಕುಡಿಸಿ ಬಳಿಕ ನಿರ್ಜನ ಪ್ರದೇಶಕ್ಕೆ ಕಮಲವ್ವ ಕರೆದುಕೊಂಡು ಹೋಗಿದ್ದಳು. ಬಳಿಕ ಪ್ರಿಯಕರ ಹಾಗೂ ಆತನ ಸ್ನೇಹಿತ ಸೇರಿ ಈರಪ್ಪನ ಕತ್ತಿಗೆ ಟವೆಲ್ ಬಿಗಿದು ಸಾಯಿಸಿದ್ದರು.

    ಶವ ಪತ್ತೆಯಾಗುತ್ತಿದ್ದಂತೆ ಕೊಲೆ ಕೇಸ್ ದಾಖಲಿಸಿಕೊಂಡಿದ್ದ ರಾಮದುರ್ಗ ಠಾಣೆ ಪೊಲೀಸರು, ಹೆಂಡತಿ ಫೋನ್ ಹಿಸ್ಟರಿ ಚೆಕ್ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಇದನ್ನೂ ಓದಿ: ಯುಎಇಯಲ್ಲಿ ಕೇರಳದ ಮಹಿಳೆ ಆತ್ಮಹತ್ಯೆ; ಪತಿ, ಅತ್ತೆ-ಮಾವ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ

  • ವಿದ್ಯಾರ್ಥಿನಿ ಮೇಲೆ ರೇಪ್‌,ಬ್ಲ್ಯಾಕ್‌ಮೇಲ್‌ – ಮೂಡುಬಿದಿರೆ ಕಾಲೇಜಿನ ಇಬ್ಬರು ಉಪನ್ಯಾಸಕರು, ಸ್ನೇಹಿತ ಅರೆಸ್ಟ್‌

    ವಿದ್ಯಾರ್ಥಿನಿ ಮೇಲೆ ರೇಪ್‌,ಬ್ಲ್ಯಾಕ್‌ಮೇಲ್‌ – ಮೂಡುಬಿದಿರೆ ಕಾಲೇಜಿನ ಇಬ್ಬರು ಉಪನ್ಯಾಸಕರು, ಸ್ನೇಹಿತ ಅರೆಸ್ಟ್‌

    – ಬೆಂಗಳೂರಿಗೆ ಕರೆತಂದು ಸ್ನೇಹಿತನ ಮನೆಯಲ್ಲಿ ಕೃತ್ಯ
    – ವಿಡಿಯೋ ಇದೆ ಎಂದು ಬೆದರಿಕೆ ಹಾಕಿದ್ದ ದುರುಳರು

    ಬೆಂಗಳೂರು: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ (Rape) ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಬಿದಿರೆಯ (Moodabidri) ಪ್ರತಿಷ್ಠಿತ ಕಾಲೇಜಿನ ಇಬ್ಬರು ಉಪನ್ಯಾಸಕರು ಮತ್ತು ಅವರ ಸ್ನೇಹಿತನನ್ನು ಮಾರತಹಳ್ಳಿ ಪೊಲೀಸರು (Marathahalli Police) ಬಂಧಿಸಿದ್ದಾರೆ.

    ಕಾಲೇಜಿನ ಹಳೆ ವಿದ್ಯಾರ್ಥಿನಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಳು. ದೂರಿನ ಆಧಾರದಲ್ಲಿ ಎಫ್‌ಐಆರ್‌ ದಾಖಲಿಸಿದ ಪೊಲೀಸರು ಉಪನ್ಯಾಸಕರಾದ ನರೇಂದ್ರ, ಸಂದೀಪ್ ಮತ್ತು ಸ್ನೇಹಿತ ಅನೂಪ್‌ನನ್ನು ಬಂಧಿಸಿದ್ದಾರೆ.

    ಏನಿದು ಕೇಸ್‌?
    ಮೊದಲು ವಿದ್ಯಾರ್ಥಿನಿಗೆ ನೋಟ್ಸ್ ನೀಡುವ ವಿಚಾರದಲ್ಲಿ ಭೌತಶಾಸ್ತ್ರ ಉಪನ್ಯಾಸಕ ನರೇಂದ್ರ ಪರಿಚಯವಾಗಿದ್ದ. ಹಂತ ಹಂತವಾಗಿ ಚಾಟ್ ಮಾಡಿ ನೋಟ್ಸ್ ನೀಡುವುದಾಗಿ ಮತ್ತು ಸಹಾಯ ಮಾಡುವುದಾಗಿ ಹೇಳಿದ್ದ. ವಿದ್ಯಾರ್ಥಿನಿ ಬೆಂಗಳೂರಿಗೆ ಬಂದ ನಂತರವೂ ಸಲುಗೆ ಬೆಳೆಸಿದ್ದ. ಇದೆ ನೆಪದಲ್ಲಿ ವಿದ್ಯಾರ್ಥಿನಿಯನ್ನು ಬೆಂಗಳೂರಿನ ಮಾರತ್‌ಹಳ್ಳಿಯಲ್ಲಿರುವ ಗೆಳೆಯನ ರೂಮ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ರೇಪ್‌ ಮಾಡಿದ ಬಳಿಕ ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ. ಇದನ್ನೂ ಓದಿ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಟೆಕ್ಕಿ ಗಿರೀಶ್‌ ಹತ್ಯೆ ಕೇಸ್‌ ಶುಭಾಗೆ ಕ್ಷಮಾದಾನ ಅವಕಾಶ ನೀಡಿದ ಸುಪ್ರೀಂ

     

    ಸ್ನೇಹಿತ ನರೇಂದ್ರ ಈ ಕೃತ್ಯ ಎಸಗಿದ್ದ ವಿಚಾರ ತಿಳಿದು ಜೀವಶಾಸ್ತ್ರ ಉಪನ್ಯಾಸಕ ಸಂದೀಪ್‌ ವಿದ್ಯಾರ್ಥಿನಿಯನ್ನು ಸಂಪರ್ಕಿಸಿದ್ದಾನೆ. ಈ ವೇಳೆ ವಿದ್ಯಾರ್ಥಿನಿ ವಿರೋಧ ವ್ಯಕ್ತಪಡಿಸಿದ್ದಾಳೆ. ಈ ಸಂದರ್ಭದಲ್ಲಿ ಸಂದೀಪ್‌, ನರೇಂದ್ರ ಜೊತೆಗೆ ಇರುವ ಫೋಟೋ, ವಿಡಿಯೋ ತನ್ನ ಬಳಿ ಇದೆ ಎಂದು ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ಎಸಗಿದ್ದಾನೆ.

    ಸಂದೀಪ್‌ ಕರೆದುಕೊಂಡು ಹೋಗಿ ಅನೂಪ್‌ ರೂಮಿನಲ್ಲಿ ಅತ್ಯಾಚಾರ ಎಸಗಿದ್ದ. ನಂತರ ಅನೂಪ್‌ ಆಕೆಯನ್ನು ಸಂರ್ಪಕಿಸಿ ನೀನು ನನ್ನ ರೂಮಿಗೆ ಬಂದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಷ್ಟೇ ಅಲ್ಲದೇ ನನ್ನ ರೂಮ್​​ನಲ್ಲಿ ಸಿಸಿಟಿವಿ ಇದೆ ಎಂದು ಬೆದರಿಕೆ ಹಾಕಿದ್ದ. ನಂತರ ಅನೂಪ್‌ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ.

    ಉಪನ್ಯಾಸಕ ಸ್ನೇಹಿತರ ಕಿರುಕುಳ ತಾಳಲಾರದೇ ಆರಂಭದಲ್ಲಿ ಸುಮ್ಮನಿದ್ದ ವಿದ್ಯಾರ್ಥಿನಿ ಸಮಸ್ಯೆ ಹೆಚ್ಚಾದ ಬಳಿಕ ನಡೆದ ನಡೆದ ಘಟನೆಗಳನ್ನು ಬೆಂಗಳೂರಿಗೆ ಬಂದಿದ್ದ ಪೋಷಕರ ಬಳಿ ತಿಳಿಸಿದ್ದಾಳೆ. ಪೋಷಕರು ಆಕೆಯನ್ನು ಮಹಿಳಾ ಆಯೋಗಕ್ಕೆ ಕರೆದುಕೊಂಡು ಹೋಗಿದ್ದಾರೆ. ಮಹಿಳಾ ಆಯೋಗದಲ್ಲಿ ಕೌನ್ಸಿಲಿಂಗ್‌ ಮಾಡಿದ ಬಳಿಕ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

    ಮೂಡಬಿದಿರೆಯಲ್ಲಿ ಓದು ಮುಗಿಸಿದ್ದ ವಿದ್ಯಾರ್ಥಿನಿ ಈಗ ರಾಮನಗರದಲ್ಲಿ ಎಂಜಿನಿಯರಿಂಗ್‌ ಓದುತ್ತಿದ್ದಾಳೆ. ಉಪನ್ಯಾಸಕರು ಇನ್‌ಸ್ಟಾ ಮೂಲಕ ಆಕೆಯನ್ನು ಸಂಪರ್ಕಿಸಿ ಚಾಟ್‌ ಮಾಡುತ್ತಿದ್ದರು.

  • ಮಗಳ ಆತ್ಮಹತ್ಯೆ ಕಣ್ಣಾರೆ ಕಂಡ ತಾಯಿ –  ಶವ ಇಳಿಸಿ ಅದೇ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವು

    ಮಗಳ ಆತ್ಮಹತ್ಯೆ ಕಣ್ಣಾರೆ ಕಂಡ ತಾಯಿ –  ಶವ ಇಳಿಸಿ ಅದೇ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವು

    • ಪತಿಗೆ ಕರೆ ಮಾಡಿ ನೇಣಿಗೆ ಶರಣಾದ ಮಹಿಳೆ

    ಬೆಂಗಳೂರು: ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕಂಡ ತಾಯಿಯೊಬ್ಬಳು ತನ್ನ ಗಂಡನಿಗೆ ಕರೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಳ್ತೀನಿ ಅಂತ ಹೇಳಿ ನೇಣಿಗೆ ಶರಣಾಗಿರುವ ಘಟನೆ ವೈಟ್‌ಫೀಲ್ಡ್ (Whitefield) ಪೊಲೀಸ್ ಠಾಣಾ ವ್ಯಾಪ್ತಿಯ ನಾಗಗೊಂಡನಹಳ್ಳಿಯಲ್ಲಿ ನಡೆದಿದೆ.

    ನನ್ನ ಸಾವಿಗೆ ನಾನೇ ಕಾರಣ ಅಂತ ಡೆತ್ ನೋಟ್ ಬರೆದ ಶ್ರೀಜಾ ರೆಡ್ಡಿ (24) ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಗಳ ಆತ್ಮಹತ್ಯೆ ನೋಡಿ ಪತಿಗೆ ಫೋನ್ ಮಾಡಿದ್ದ ತಾಯಿ ರಕ್ಷಿತಾ (48) ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನನಗೂ ಬದುಕಲು ಇಷ್ಟವಿಲ್ಲ ಎಂದು ಕರೆ ಕಟ್ ಮಾಡಿ‌, ಮಗಳ ಮೃತದೇಹವವನ್ನು ಕೆಳಗಿಳಿಸಿ ಅದೇ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವನ್ನಪಿದ್ದಾರೆ. ಇದನ್ನೂ ಓದಿ: ಅಸ್ಸಾಂ ಯುವತಿ ಫೋಟೋ ಮಾರ್ಫ್ – ಸೆಕ್ಸ್‌ ಚಿತ್ರೋದ್ಯಮಕ್ಕೆ ಎಂಟ್ರಿಯಾಗಿರೋದಾಗಿ ಪ್ರಚಾರ ಮಾಡ್ತಿದ್ದ ಭಗ್ನ ಪ್ರೇಮಿ ಅರೆಸ್ಟ್‌

    ಇವರು ಆಂದ್ರಪ್ರದೇಶ (Andhra Pradesh) ಮೂಲದವರಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದರು. ಶ್ರೀಜಾ ರೆಡ್ಡಿ ಖಾಸಗಿ ಕಂಪನಿಯಲ್ಲಿ ಡೇಟಾ ಅನಾಲಿಸ್ಟ್ ಆಗಿ ಕೆಲಸ ನಿರ್ವಹಿಸ್ತಿದ್ದಳು. ಖಿನ್ನತೆಗೆ ಒಳಗಾಗಿದ್ದಳು ಎಂದು ತಿಳಿದು ಬಂದಿದೆ.

    ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ವೈಟ್ ಫೀಲ್ಡ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮಿನಿ ಟ್ರಕ್ ಮೇಲೆ ಉರುಳಿ ಬಿದ್ದ ಮಾವು ತುಂಬಿದ್ದ ಲಾರಿ – 9 ಮಂದಿ ಸಾವು, 11 ಜನರಿಗೆ ಗಾಯ

  • ಹೈದರಾಬಾದ್‌ | ಆಟ ಆಡುವಾಗ ಹಾಳು ಮನೆಯೊಳಗೆ ಬಿದ್ದ ಚೆಂಡು, ತರಲು ಹೋದಾಗ ಕಂಡ ಅಸ್ಥಿಪಂಜರ!

    ಹೈದರಾಬಾದ್‌ | ಆಟ ಆಡುವಾಗ ಹಾಳು ಮನೆಯೊಳಗೆ ಬಿದ್ದ ಚೆಂಡು, ತರಲು ಹೋದಾಗ ಕಂಡ ಅಸ್ಥಿಪಂಜರ!

    ಹೈದರಾಬಾದ್‌: ಇಲ್ಲಿನ (Hyderabad) ನಾಂಪಲ್ಲಿಯಲ್ಲಿ ಆಟ ಆಡುವಾಗ ಹಾಳು ಮನೆಯೊಳಗೆ ಬಿದ್ದ ಚೆಂಡನ್ನು ತರಲು ಹೋದ ವ್ಯಕ್ತಿಗೆ ಅಸ್ಥಿಪಂಜರವೊಂದು (Skeleton) ಕಾಣಿಸಿದೆ. ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದು, ವಿಡಿಯೋ ವೈರಲ್‌ ಆಗಿದೆ.

    ನಾಂಪಲ್ಲಿ ಮಾರುಕಟ್ಟೆಯ ಬಳಿ ಇರುವ ಹಾಳು ಮನೆಗೆ ಏಳು ವರ್ಷಗಳಿಗೂ ಹೆಚ್ಚು ಕಾಲ ಬೀಗ ಹಾಕಲಾಗಿತ್ತು. ಈ ಮನೆಯ ಅಡುಗೆಮನೆಯಂತೆ ಕಾಣುವ ನೆಲದ ಮೇಲೆ ಅಸ್ಥಿಪಂಜರವೊಂದು ಬಿದ್ದಿತ್ತು. ಈ ಅವಶೇಷಗಳ ಸುತ್ತಲೂ ಹಲವಾರು ಪಾತ್ರೆಗಳು ಬಿದ್ದಿದ್ದವು. ಇದನ್ನೂ ಓದಿ: ಕಲಬುರಗಿ ಚಿನ್ನದಂಗಡಿ ದರೋಡೆ ಕೇಸ್; ಖದೀಮರ ಸುಳಿವು ಪತ್ತೆ – ಇಬ್ಬರು ಅಂದರ್

    ನೈಋತ್ಯ ವಲಯದ ಉಪ ಪೊಲೀಸ್ ಆಯುಕ್ತ ಚಂದ್ರಮೋಹನ್ ಸೇರಿದಂತೆ ಹಬೀಬ್ ನಗರ ಪೊಲೀಸರ ತಂಡ ಅಸ್ಥಿಪಂಜರ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಬಾಗಿಲು ಒಡೆದು, ಅವಶೇಷಗಳನ್ನು ವಶಪಡಿಸಿಕೊಂಡು ಪರೀಕ್ಷೆಗೆ ಕಳುಹಿಸಿದ್ದಾರೆ.

    ಈ ಮನೆಯ ಮಾಲೀಕರು ವಿದೇಶದಲ್ಲಿ ವಾಸಿಸುತ್ತಿದ್ದಾರೆ. ಈ ಆಸ್ತಿ ಏಳು ವರ್ಷಗಳಿಗೂ ಹೆಚ್ಚು ಕಾಲ ಖಾಲಿಯಾಗಿ ಉಳಿದುಕೊಂಡಿದೆ ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.

    ಎಸಿಪಿ ಕಿಶನ್ ಕುಮಾರ್ ಮಾತನಾಡಿ, ಈ ಮನೆ ಮುನೀರ್ ಖಾನ್ ಎಂಬುವವರಿಗೆ ಸೇರಿದ್ದು, ಅವರಿಗೆ 10 ಮಕ್ಕಳಿದ್ದರು. ಅವರ ನಾಲ್ಕನೇ ಮಗ ಇಲ್ಲಿ ವಾಸಿಸುತ್ತಿದ್ದರು. ಉಳಿದವರು ಬೇರೆಡೆ ವಾಸಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಅಸ್ಥಿಪಂಜರ ಸುಮಾರು 50 ವರ್ಷ ವಯಸ್ಸಿನವರಾಗಿರಬಹುದು. ಒಂಟಿಯಾಗಿದ್ದವರು ಅಥವಾ ಮಾನಸಿಕ ಅಸ್ವಸ್ಥರಾಗಿದ್ದವರು ಆಗಿರಬಹುದು. ಸತ್ತು ಕೆಲವು ವರ್ಷಗಳೇ ಕಳೆದಿವೆ, ಮೂಳೆಗಳು ಸಹ ಹಾಳಾಗಿವೆ. ನಮಗೆ ಯಾವುದೇ ರೀತಿಯ ಹೋರಾಟ ನಡೆದು ಸಾವನ್ನಪ್ಪಿದ ಲಕ್ಷಣಗಳು ಕಂಡುಬಂದಿಲ್ಲ. ಇದು ನೈಸರ್ಗಿಕ ಸಾವು ಆಗಿರಬಹುದು. ಹೆಚ್ಚಿನದನ್ನು ಕಂಡುಹಿಡಿಯುವ ಪ್ರಯತ್ನದಲ್ಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಿಸ್ ಪುದುಚೆರಿ ಖ್ಯಾತಿಯ ಮಾಡೆಲ್ ಸ್ಯಾನ್ ರೆಚಲ್ ಆತ್ಮಹತ್ಯೆ

  • ತಮಿಳುನಾಡು ಲಾಕಪ್‌ ಡೆತ್‌ ಕೇಸ್‌ – ಹಲ್ಲೆ ನಡೆಸಿದ್ದ ಪೊಲೀಸರ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಸಿಬಿಐ

    ತಮಿಳುನಾಡು ಲಾಕಪ್‌ ಡೆತ್‌ ಕೇಸ್‌ – ಹಲ್ಲೆ ನಡೆಸಿದ್ದ ಪೊಲೀಸರ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಸಿಬಿಐ

    ಚೆನ್ನೈ: ತಮಿಳುನಾಡಿನ ಶಿವಗಂಗೈ ಜಿಲ್ಲೆಯ ಮಾದಾಪುರಂ ದೇವಸ್ಥಾನದ ಭದ್ರತಾ ಸಿಬ್ಬಂದಿ ಅಜಿತ್ ಕುಮಾರ್ (27) ಲಾಕಪ್‌ ಡೆತ್‌ (Tamil Nadu Custodial Death) ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (CBI) ಪೊಲೀಸ್ (Police )ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿದೆ.

    ಲಾಕಪ್‌ ಡೆತ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುಪ್ಪುವನಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಬಳಿಕ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸರ್ಕಾರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತ್ತು. ಈ ವೇಳೆ, ಮಧ್ಯ ಪ್ರವೇಶಿಸಿದ್ದ ನ್ಯಾಯಾಲಯ ಹೆಚ್ಚಿನ ತನಿಖೆಗೆ ಆದೇಶಿಸಿ, ಸಿಬಿಐಗೆ ತನಿಖಾಧಿಕಾರಿ ನೇಮಿಸುವಂತೆ ಸೂಚಿಸಿತ್ತು. ಇದೀಗ ಹಲ್ಲೆ ನಡೆಸಿದ್ದ ಪೊಲೀಸರ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿದೆ. ಇದನ್ನೂ ಓದಿ: Custodial Death Case | ದೇಹದ ಮೇಲೆ 44 ಗಾಯದ ಗುರುತು, ಮೆದುಳಿನಲ್ಲಿ ರಕ್ತಸ್ರಾವ – ಮರಣೋತ್ತರ ಪರೀಕ್ಷಾ ವರದಿ ಔಟ್‌

    ನಿಕಿತಾ ಎಂಬ ಮಹಿಳೆ ನೀಡಿದ್ದ ಆಭರಣ ಕಳ್ಳತನದ ದೂರಿನ ಮೇರೆಗೆ ಅಜಿತ್‌ ಅವರನ್ನು ವಿಚಾರಣೆಗಾಗಿ ಪೊಲೀಸರು ಕರೆದುಕೊಂಡು ಹೋಗಿದ್ದರು. ಅವರಿಗೆ ಪೊಲೀಸ್‌ ಠಾಣೆಯಲ್ಲಿ ಚಿತ್ರಹಿಂಸೆ ನೀಡಲಾಗಿತ್ತು. ಇದರಿಂದ ಅವರು ಸಾವನ್ನಪ್ಪಿದ್ದರು. ಅವರ ಮರಣೋತ್ತರ ಪರೀಕ್ಷೆಯಲ್ಲಿ 40 ಕ್ಕೂ ಹೆಚ್ಚು ಗಾಯಗಳು ಪತ್ತೆಯಾಗಿತ್ತು.

    ನ್ಯಾಯಾಂಗ ತನಿಖಾ ವರದಿಯಲ್ಲೂ ಅಜಿತ್‌ಗೆ ಚಿತ್ರಹಿಂಸೆ ನೀಡಲಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಇದಾದ ಬಳಿಕ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ, ಇದು ಅಕ್ರಮ ಬಂಧನ ಮತ್ತು ಕಸ್ಟಡಿಯಲ್ಲಿ ನಡೆದ ಹಿಂಸಾಚಾರದ ಸ್ಪಷ್ಟ ಪ್ರಕರಣವಾಗಿದೆ ಎಂದು ಹೇಳಿತ್ತು. ಇದೇ ವೇಳೆ, ಒಂದು ವಾರದೊಳಗೆ ತನ್ನ ತನಿಖಾ ತಂಡವನ್ನು ನೇಮಿಸಿ ಆಗಸ್ಟ್ 20 ರೊಳಗೆ ಅಂತಿಮ ವರದಿಯನ್ನು ಸಲ್ಲಿಸುವಂತೆ ಸಿಬಿಐಗೆ ನಿರ್ದೇಶಿಸಿತ್ತು.

    ಪ್ರಕರಣ ಸಂಬಂಧ ತಮಿಳುನಾಡು (Tamil Nadu) ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಶಂಕರ್ ಜಿವಾಲ್ ಶುಕ್ರವಾರ ಕ್ಷಮೆಯಾಚಿಸಿದ್ದರು. ಇದನ್ನೂ ಓದಿ: ತಮಿಳುನಾಡು ಲಾಕಪ್ ಡೆತ್ ಪ್ರಕರಣ – ಕ್ಷಮೆಯಾಚಿಸಿದ ಪೊಲೀಸ್ ಮುಖ್ಯಸ್ಥ

  • ಪ್ರೀತಿಸಿ ಮದುವೆಯಾದ ಜೋಡಿಗೆ ನೇಗಿಲು ಕಟ್ಟಿ ಎತ್ತುಗಳಂತೆ ಉಳುಮೆ ಮಾಡಿಸಿ ಚಿತ್ರಹಿಂಸೆ

    ಪ್ರೀತಿಸಿ ಮದುವೆಯಾದ ಜೋಡಿಗೆ ನೇಗಿಲು ಕಟ್ಟಿ ಎತ್ತುಗಳಂತೆ ಉಳುಮೆ ಮಾಡಿಸಿ ಚಿತ್ರಹಿಂಸೆ

    ಭುವನೇಶ್ವರ: ಪ್ರೀತಿಸಿ (Love) ಮದುವೆಯಾದ (Marriage) ಜೋಡಿಗೆ ನೇಗಿಲು ಕಟ್ಟಿ ಎತ್ತುಗಳಂತೆ ಉಳುಮೆ ಮಾಡಿಸಿ ಚಿತ್ರಹಿಂಸೆ ನೀಡಿದ ಘಟನೆ ಒಡಿಶಾದ (Odisha) ರಾಯಗಡ ಜಿಲ್ಲೆಯ ಕಂಜಮಝಿರಾ ಗ್ರಾಮದಲ್ಲಿ ನಡೆದಿದೆ.

    ಯುವಕ ಹಾಗೂ ಯುವತಿ ಸ್ಥಳೀಯ ಪದ್ಧತಿಗೆ ವಿರುದ್ಧವಾಗಿ ಮದುವೆಯಾಗಿದ್ದಾರೆ ಎಂದು ಗ್ರಾಮಸ್ಥರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಸಮಾಜದ ಮುಂದೆ ಶಿಕ್ಷಿಸುವ ಉದ್ದೇಶದಿಂದ ನೇಗಿಲು ಕಟ್ಟಿ ಉಳುಮೆ ಮಾಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಕಿರುತೆರೆ ನಟಿ ಶ್ರುತಿಗೆ ಮನೆಯಲ್ಲೇ ಚಾಕು ಇರಿದು ಕೊಲೆಗೆ ಯತ್ನ, ಪತಿ ಅರೆಸ್ಟ್‌

    ಯುವಕ ಮತ್ತು ಯುವತಿ ಇತ್ತೀಚೆಗೆ ಪ್ರೀತಿಸಿ ಮದುವೆಯಾಗಿದ್ದರು. ಇದಕ್ಕೆ ಕೆಲವು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಆ ಯುವಕ ಮದುವೆಯಾದ ಯುವತಿಯ ತಂದೆಯ ಚಿಕ್ಕಮ್ಮನ ಮಗನಾಗಿದ್ದು, ಸ್ಥಳೀಯ ಪದ್ಧತಿಗಳ ಪ್ರಕಾರ ಇಂತಹ ಮದುವೆ ನಿಷಿದ್ಧವೆಂದು ಪರಿಗಣಿಸಲಾಗುತ್ತದೆ ಎನ್ನಲಾಗಿದೆ. ಇದನ್ನೂ ಮೀರಿಯೂ ಮದುವೆಯಾಗಿದ್ದಕ್ಕೆ ಗ್ರಾಮಸ್ಥರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

    ಉಳುಮೆಯ ನಂತರ ಜೋಡಿಯನ್ನು ಗ್ರಾಮದ ದೇವಾಲಯಕ್ಕೆ ಕರೆದೊಯ್ದು, ಅವರ ಪಾಪ ಶುದ್ಧೀಕರಿಸಲು, ಶುದ್ಧೀಕರಣ ವಿಧಿಗಳನ್ನು ಮಾಡಲಾಯಿತು. ಗ್ರಾಮಸ್ಥರ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ತನಿಖೆ ನಡೆಸಲು ಪೊಲೀಸರ ತಂಡವೊಂದು ಗ್ರಾಮಕ್ಕೆ ಭೇಟಿ ನೀಡಿದೆ. ಈ ಸಂಬಂಧ ಶೀಘ್ರದಲ್ಲೇ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಎಸ್. ಸ್ವಾತಿ ಕುಮಾರ್ ತಿಳಿಸಿದ್ದಾರೆ.

    ಜನವರಿಯಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ರಾಯಗಡ ಜಿಲ್ಲೆಯ ಒಂದು ಕುಟುಂಬದ ಸದಸ್ಯರು ಬೇರೆ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ  ‘ಶುದ್ಧೀಕರಣ’ ಎಂದು ತಲೆ ಬೋಳಿಸಲಾಗಿತ್ತು. ಇದನ್ನೂ ಓದಿ: ಟೆನ್ನಿಸ್‌ ತಾರೆಯ ಕೊಲೆಗೆ ಸ್ಫೋಟಕ ಟ್ವಿಸ್ಟ್‌ – ಮ್ಯೂಸಿಕ್‌ ಆಲ್ಬಂಗೆ ಸಿಟ್ಟಾಗಿ ಮಗಳ ಹತ್ಯೆ?

  • ತಮಿಳುನಾಡು ಲಾಕಪ್ ಡೆತ್ ಪ್ರಕರಣ – ಕ್ಷಮೆಯಾಚಿಸಿದ ಪೊಲೀಸ್ ಮುಖ್ಯಸ್ಥ

    ತಮಿಳುನಾಡು ಲಾಕಪ್ ಡೆತ್ ಪ್ರಕರಣ – ಕ್ಷಮೆಯಾಚಿಸಿದ ಪೊಲೀಸ್ ಮುಖ್ಯಸ್ಥ

    – ಕೆಲವು ಪ್ರಕರಣಗಳಿಂದ ಪೊಲೀಸರ ಬಗ್ಗೆ ನಿರ್ಣಯಿಸಬೇಡಿ

    ಚೆನ್ನೈ: ಇತ್ತೀಚೆಗೆ ದೇವಾಲಯದ ಭದ್ರತಾ ಸಿಬ್ಬಂದಿ ಅಜಿತ್ ಕುಮಾರ್ ಅವರ ಲಾಕಪ್‌ ಡೆತ್‌ (Custodial Death) ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡು (Tamil Nadu) ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಶಂಕರ್ ಜಿವಾಲ್ ಕ್ಷಮೆಯಾಚಿಸಿದ್ದಾರೆ.

    ಅಜಿತ್ ಸಾವಿನ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆ ಶಂಕರ್ ಜಿವಾಲ್ ಅವರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ, ಕೆಲವು ಕಸ್ಟಡಿ ಹಿಂಸೆಯಂತಹ ಪ್ರಕರಣಗಳನ್ನು ಆಧರಿಸಿ ಇಡೀ ಪೊಲೀಸ್‌ (Police) ಪಡೆಯ ಬಗ್ಗೆ ಏನನ್ನೂ ನಿರ್ಣಯಿಸಬೇಡಿ. ಲಾಕಪ್‌ ಡೆತ್‌ ಪ್ರಕರಣದಲ್ಲಿ ನಾವು ಕ್ರಮಕೈಗೊಂಡಿದ್ದೇವೆ. ಇದೊಂದು ದುರಾದೃಷ್ಟ ಘಟನೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: Tamil Nadu Custodial Death | ಕೊಲೆಗಾರರು ಹೀಗೆ ದಾಳಿ ಮಾಡಲ್ಲ – ಹೈಕೋರ್ಟ್‌ ಛೀಮಾರಿ; ಐವರು ಪೊಲೀಸರು ಅರೆಸ್ಟ್‌

    99.9% ರಷ್ಟು ಪೊಲೀಸ್ ಪಡೆಗಳು ವೃತ್ತಿಪರವಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಇಂತಹ ಘಟನೆಗಳು ಇಡೀ ಸಂಸ್ಥೆಯ ಪ್ರತಿಷ್ಠೆಗೆ ಕಳಂಕ ತರಬಾರದು. ನಾನು ಅಂಕಿಅಂಶಗಳ ಆಧಾರದ ಮೇಲೆ ಹೇಳುವುದಾದರೆ, ತಮಿಳುನಾಡು ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪೊಲೀಸರ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡಿದ್ದಾರೆ.

    ಏನಿದು ಪ್ರಕರಣ?
    ಜೂ.27ರಂದು ತಿರುಪುವನಂ ಮಾದಾಪುರಂ ಭದ್ರಕಾಳಿಯಮ್ಮನ್ ದೇವಸ್ಥಾನದಲ್ಲಿ ತಮ್ಮ ಕಾರಿನಿಂದ 10 ಗ್ರಾಂ. ಚಿನ್ನ ಕಾಣೆಯಾಗಿದೆ ಎಂದು ತಾಯಿ-ಮಗಳು ದೂರು ನೀಡಿದ್ದರು. ಪ್ರಕರಣದ ತನಿಖೆಗೆ ರಚಿಸಲಾಗಿದ್ದ ವಿಶೇಷ ಪೊಲೀಸ್ ತಂಡ, ದೇವಸ್ಥಾನ ಭದ್ರತಾ ಸಿಬ್ಬಂದಿ ಅಜಿತ್‍ನನ್ನು ಠಾಣೆಗೆ ಕರೆದೊಯ್ದು ಚಿತ್ರಹಿಂಸೆ ಕೊಟ್ಟಿದ್ದರು. ಬಾಯಿಗೆ ಖಾರದ ಪುಡಿ ಹಾಕಿ ಅಮಾನುಷವಾಗಿ ಹಲ್ಲೆ ಮಾಡಿದ್ದರು. ಪೊಲೀಸರು ಹಲ್ಲೆ ಮಾಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ತೀವ್ರ ಹಲ್ಲೆಗೊಳಗಾಗಿದ್ದ ಅಜಿತ್‌ ಸಾವನ್ನಪ್ಪಿದ್ದರು.

    ಈ ಬೆನ್ನಲ್ಲೇ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ತನಿಖೆಯಲ್ಲಿ ಹಿಂಸೆಯಿಂದಲೇ ಸಾವನ್ನಪ್ಪಿದ್ದಾರೆ ಎಂಬುದು ದೃಢಪಟ್ಟಿತ್ತು. ಈ ಸಂಬಂಧ ಐವರು ಪೊಲೀಸರನ್ನು ಬಂಧಿಸಲಾಗಿತ್ತು.

    ಇದೆಲ್ಲ ಬೆಳವಣಿಗೆಯ ನಡುವೆ, ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ತನಿಖೆಯನ್ನು ಮುಂದುವರಿಸುವಂತೆ ಆದೇಶಿಸಿತ್ತು. ಅಲ್ಲದೇ ವಾರದೊಳಗೆ ತನಿಖಾ ಅಧಿಕಾರಿಯನ್ನು ನೇಮಿಸುವಂತೆ ಕೇಂದ್ರ ತನಿಖಾ ದಳದ (ಸಿಬಿಐ) ನಿರ್ದೇಶಕರಿಗೆ ನಿರ್ದೇಶನ ನೀಡಿತ್ತು. ಆಗಸ್ಟ್ 20 ರೊಳಗೆ ತನಿಖೆಯನ್ನು ಪೂರ್ಣಗೊಳಿಸಿ, ಅಂತಿಮ ವರದಿಯನ್ನು ಸಲ್ಲಿಸುವಂತೆ ಕೋರ್ಟ್‌ ಸೂಚಿಸಿದೆ. ಇದನ್ನೂ ಓದಿ: Custodial Death Case | ದೇಹದ ಮೇಲೆ 44 ಗಾಯದ ಗುರುತು, ಮೆದುಳಿನಲ್ಲಿ ರಕ್ತಸ್ರಾವ – ಮರಣೋತ್ತರ ಪರೀಕ್ಷಾ ವರದಿ ಔಟ್‌

  • ಕಿರುತೆರೆ ನಟಿ ಶ್ರುತಿಗೆ ಮನೆಯಲ್ಲೇ ಚಾಕು ಇರಿದು ಕೊಲೆಗೆ ಯತ್ನ, ಪತಿ ಅರೆಸ್ಟ್‌

    ಕಿರುತೆರೆ ನಟಿ ಶ್ರುತಿಗೆ ಮನೆಯಲ್ಲೇ ಚಾಕು ಇರಿದು ಕೊಲೆಗೆ ಯತ್ನ, ಪತಿ ಅರೆಸ್ಟ್‌

    ಬೆಂಗಳೂರು: ಕಿರುತೆರೆ ನಟಿ ಹಾಗೂ ಖಾಸಗಿ ವಾಹಿನಿಯ ನಿರೂಪಕಿಗೆ ಪತಿಯೇ (Husband) ಚಾಕು ಇರಿದ ಘಟನೆ ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಲೇಔಟ್‌ನಲ್ಲಿ ನಡೆದಿದೆ.

    ಮಂಜುಳ @ಶ್ರುತಿ ಚಾಕು ಇರಿತಕ್ಕೊಳಗಾದ ಕಿರುತೆರೆ ನಟಿ. ಅಮೃತಧಾರೆ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ (Serials) ಶ್ರುತಿ ನಟಿಸಿದ್ದಾರೆ. ಜುಲೈ 4 ರಂದು ಚೂರಿ ಇರಿದಿದ್ದು ತಡವಾಗಿ ಘಟನೆ ಬೆಳಕಿಗೆ ಬಂದಿದೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶ್ರುತಿ (Actress Shruti) ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಅಕಾಡೆಮಿ ಮುಚ್ಚಲು ನಿರಾಕರಿಸಿದ ಟೆನ್ನಿಸ್ ಆಟಗಾರ್ತಿಯನ್ನ ಗುಂಡಿಕ್ಕಿ ಕೊಂದ ತಂದೆ

    ಏನಿದು ಘಟನೆ?
    20 ವರ್ಷದ ಹಿಂದೆ ಅಂಬರೀಶ್ ಎಂಬಾತನ ಪ್ರೀತಿಸಿ ಶ್ರುತಿ ಮದುವೆಯಾಗಿದ್ದರು. ಮದುವೆಯಾಗಿ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಹನುಮಂತ ನಗರದಲ್ಲಿ ಲೀಸ್‌ಗೆ ಮನೆ ಪಡೆದು ದಂಪತಿ ವಾಸವಾಗಿದ್ದರು. ಕೆಲ ತಿಂಗಳಿನಿಂದ ಶ್ರುತಿ ನಡವಳಿಕೆ ಗಂಡ ಅಂಬರೀಶ್‌ಗೆ ಇಷ್ಟವಾಗುತ್ತಿರಲಿಲ್ಲ. ಶೀಲ ಶಂಕಿಸಿ ಜಗಳ ಮಾಡುತ್ತಿದ್ದ.

    ಇಬ್ಬರ ಮಧ್ಯೆ ಲೀಸ್‌ ಹಣಕ್ಕೆ ಸಂಬಂಧಿಸಿದಂತೆ ಆಗಾಗ ಜಗಳ ನಡೆಯುತ್ತಿತ್ತು. ಈ ಸಂಬಂಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಹಿಂದೆ ಶ್ರುತಿ ದೂರು ನೀಡಿದ್ದರು. ಇಬ್ಬರ ನಡುವೆ ಹೊಂದಾಣಿಕೆ ಸರಿ ಇಲ್ಲದ ಕಾರಣ ಕಳೆದ ಏಪ್ರಿಲ್‌ನಲ್ಲಿ ಪತಿಯಿಂದ ದೂರವಾಗಿ ಅಣ್ಣನ ಮನೆಯಲ್ಲಿ ಶ್ರುತಿ ನೆಲೆಸಿದ್ದರು.

    ಜುಲೈ 3 ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಪತಿ, ಪತ್ನಿ ರಾಜಿಯಾಗಿ ಒಂದಾಗಿದ್ದರು. ಆದರೆ ಜುಲೈ 4 ರಂದು ಮಕ್ಕಳು ಕಾಲೇಜಿಗೆ ಹೋಗಿದ್ದಾಗ ಪೆಪ್ಪರ್ ಸ್ಪ್ರೇ ಮಾಡಿ ಪತ್ನಿಯ ಕೊಲೆಗೆ ಅಂಬರೀಶ್‌ ಯತ್ನಿಸಿದ್ದಾನೆ.

    ಪಕ್ಕೆಲುಬು, ತೊಡೆ ಹಾಗೂ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಸಿನಿಮಾ ಸ್ಟೈಲ್ ನಲ್ಲಿ ತಲೆ ಕೂದಲು ಹಿಡಿದು ಗೋಡೆ ತಲೆ ಗುದ್ದಿಸಿ ಕೊಲೆಗೆ ಅಂಬರೀಶ್‌ ಯತ್ನಿಸಿದ್ದಾನೆ.

    ಸಂಸಾರ ಮತ್ತು ಹಣಕಾಸು ವಿಚಾರಕ್ಕೆ ಕೊಲೆ ಯತ್ನ ಮಾಡಿರುವುದಾಗಿ ಶ್ರುತಿ ದೂರು ನೀಡಿದ್ದು ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಕೊಲೆಯತ್ನ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿ ಅಂಬರೀಶ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

  • ಗಾಂಜಾ ಮತ್ತಿನಲ್ಲಿ ಬಾಲಕಿಯ ರೇಪ್ ಮಾಡಿ ಹತ್ಯೆ – ಕಾಮುಕ ಅರೆಸ್ಟ್

    ಗಾಂಜಾ ಮತ್ತಿನಲ್ಲಿ ಬಾಲಕಿಯ ರೇಪ್ ಮಾಡಿ ಹತ್ಯೆ – ಕಾಮುಕ ಅರೆಸ್ಟ್

    ರಾಮನಗರ: ಗಾಂಜಾ ಮತ್ತಿನಲ್ಲಿ 14 ವರ್ಷದ ಬಾಲಕಿಯ ಮೇಲೆ ಆತ್ಯಚಾರವೆಸಗಿ ಹತ್ಯೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿ ರಾಯಚೂರು (Raichur) ಮೂಲದವನು ಎಂದು ತಿಳಿದು ಬಂದಿದೆ. ಬೆಂಗಳೂರು ದಕ್ಷಿಣದ (Bengaluru South) ತಾವರೆಕೆರೆ  ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಈ ಪ್ರಕರಣ ನಡೆದಿತ್ತು. ಬಾಲಕಿಯ ಮನೆಯಲ್ಲಿ ಒಬ್ಬಳೇ ಇದ್ದಾಗ ಆರೋಪಿ ಮನೆಗೆ ಬಂದು, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಬಳಿಕ ಸಿಲಿಂಡರ್​​ನಿಂದ ಮುಖಕ್ಕೆ ಹೊಡೆದು ಕೊಲೆ ಮಾಡಿ, ಸಿಲಿಂಡರ್‌ನ್ನು ಹೊತ್ತೊಯ್ದು ಪಕ್ಕದ ಗ್ರಾಮದಲ್ಲಿ ಮಾರಾಟ ಮಾಡಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಅಡ್ಡಿ – ಪತಿಯನ್ನು ಕೊಂದು ಅಪಘಾತದಂತೆ ಬಿಂಬಿಸಿದ್ದ ಪತ್ನಿ, ಪ್ರಿಯಕರ ಅರೆಸ್ಟ್

    ಕೊಪ್ಪಳದಿಂದ (Koppal) ಹೊಟ್ಟೆಪಾಡಿಗಾಗಿ ಕೆಲಸಕ್ಕಾಗಿ ಬಾಲಕಿಯ ಕುಟುಂಬ ತಾವರೆಕೆರೆಗೆ ಬಂದು ನೆಲೆಸಿತ್ತು. ಬಾಲಕಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಬುಧವಾರ ಶಾಲೆಗೆ ಹೋಗದೇ ಮನೆಯಲ್ಲೇ ಇದ್ದಳು. ಬಾಲಕಿಯ ತಂದೆ, ತಾಯಿ, ಸಹೋದರ ಕೆಲಸಕ್ಕೆ ಹೋಗಿದ್ದ ವೇಳೆ ಆರೋಪಿ ಕೃತ್ಯ ಎಸಗಿ ಪರಾರಿಯಾಗಿದ್ದ.

    ಈ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಕಲಿ ಚಿನ್ನ ಕೊಟ್ಟು 35 ಲಕ್ಷ ವಂಚನೆ – ಇಬ್ಬರು ಅರೆಸ್ಟ್

  • ಬೇರೆ ಹೆಣ್ಣಿನ ಸಹವಾಸ, ಪತ್ನಿಗೆ ಕಿರುಕುಳ – ಡಿವೈಎಸ್‌ಪಿ ವಿರುದ್ಧ ಎಫ್‌ಐಆರ್‌

    ಬೇರೆ ಹೆಣ್ಣಿನ ಸಹವಾಸ, ಪತ್ನಿಗೆ ಕಿರುಕುಳ – ಡಿವೈಎಸ್‌ಪಿ ವಿರುದ್ಧ ಎಫ್‌ಐಆರ್‌

    ಬೆಂಗಳೂರು: ಬೇರೊಂದು ಹೆಣ್ಣಿಗಾಗಿ ಪತ್ನಿಗೆ (Wife) ಕಿರುಕುಳ ನೀಡಿ ಹಲ್ಲೆ ನಡೆಸಿದ ಆರೋಪದ ಮೇಲೆ ಐಎಸ್‍ಡಿ ಡಿವೈಎಸ್‍ಪಿ ಮೇಲೆ ಎಫ್‍ಐಆರ್ ದಾಖಲಾಗಿದೆ.

    ಡಿವೈಎಸ್‍ಪಿ ಶಂಕ್ರಪ್ಪ ವಿರುದ್ಧ ಅವರ ಪತ್ನಿ ದೂರು ನೀಡಿದ್ದು, ನಗರದ (Bengaluru) ಈಶಾನ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಕಾಲೇಜ್‍ಗೆ ಹೋಗುತ್ತಿರುವ ಮಗನಿದ್ದು ಅನ್ಯ ಹೆಣ್ಣಿನ ಸಂಪರ್ಕ ಮಾಡಿ ಹಲ್ಲೆ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾರೆ. ವರದಕ್ಷಿಣೆ ಹಣಕ್ಕಾಗಿ ಪೀಡಿಸಿದ್ದಾರೆ. ಅಕ್ರಮವಾಗಿ ಆ ಹೆಣ್ಣಿನ ಜೊತೆ ಮದುವೆಯಾಗಿದ್ದಾರೆ. ನನಗೆ ನ್ಯಾಯ ಕೊಡಿಸಬೇಕೆಂದು ಡಿಜಿ & ಐಜಿಪಿಗೂ ಡಿವೈಎಸ್‍ಪಿ ಪತ್ನಿ ದೂರು ನೀಡಿದ್ದಾರೆ. ಇದನ್ನೂ ಓದಿ: ಒಂದೂವರೆ ತಿಂಗಳ ಗಂಡು ಮಗುವನ್ನು ನೀರಿನ ಹಂಡೆಯಲ್ಲಿ ಮುಳುಗಿಸಿ ಕೊಂದ ಪಾಪಿ ತಾಯಿ

    ನನ್ನ ಸಂಸಾರ ಹಾಳು ಮಾಡಬೇಡ ಎಂದು ಆ ಮಹಿಳೆಗೆ ಡಿವೈಎಸ್‍ಪಿ ಪತ್ನಿ ಪರಿಪರಿಯಾಗಿ ಕೇಳಿಕೊಂಡ್ರೂ ಜೀವ ಬೆದರಿಕೆ ಹಾಕಿದ್ದಾರಂತೆ. ಸದ್ಯ ಇಬ್ಬರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಅಧಿಕಾರದ ಪ್ರಭಾವದಿಂದ ಪೊಲೀಸರು ಕ್ರಮಕೈಗೊಂಡಿಲ್ಲ ಎಂದು ಡಿವೈಎಸ್‍ಪಿ ಪತ್ನಿ ಆರೋಪಿಸಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ; ಇಬ್ಬರು ಮಹಿಳೆಯರು ಸೇರಿ 6 ಜನ ವಶಕ್ಕೆ