Tag: police

  • 10,000 ಕೊಡ್ತೀನಿ ಬಾ –  ಯುವತಿಯನ್ನು ಮಂಚಕ್ಕೆ ಕರೆದ ಕಾಮುಕ ಪ್ರಿನ್ಸಿಪಾಲ್ ಅರೆಸ್ಟ್

    10,000 ಕೊಡ್ತೀನಿ ಬಾ – ಯುವತಿಯನ್ನು ಮಂಚಕ್ಕೆ ಕರೆದ ಕಾಮುಕ ಪ್ರಿನ್ಸಿಪಾಲ್ ಅರೆಸ್ಟ್

    ತುಮಕೂರು: ಹತ್ತು ಸಾವಿರ ಕೊಡ್ತೀನಿ ಬಾ ಎಂದು ಯುವತಿಯನ್ನು ಮಂಚಕ್ಕೆ ಕರೆದ ಪ್ರಿನ್ಸಿಪಾಲ್‍ನನ್ನು ತುಮಕೂರು (Tumakur) ಮಹಿಳಾ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಯೋಗೇಶ್ ಎಂದು ಗುರುತಿಸಲಾಗಿದೆ. ಆರೋಪಿ ತುಮಕೂರಿನ ಜಯನಗರದಲ್ಲಿರುವ ಖಾಸಗಿ ಕಾಲೇಜೊಂದರಲ್ಲಿ ಕೆಲಸ ಮಾಡುತ್ತಿದ್ದ. ಇದಕ್ಕೂ ಮುನ್ನ 2019ರಲ್ಲಿ ತುಮಕೂರು ನಗರದ ಬಾರ್ ಲೈನ್ ರಸ್ತೆಯಲ್ಲಿರುವ ಖಾಸಗಿ ಕಾಲೇಜೊಂದರಲ್ಲಿ ಇಂಗ್ಲಿಷ್ ಪ್ರಾದ್ಯಾಪಕನಾಗಿದ್ದ. ಈ ಸಮಯದಲ್ಲಿ ಆರೋಪಿ ವಿದ್ಯಾರ್ಥಿನಿಯೊಬ್ಬಳ ನಂಬರ್ ಪಡೆದು ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರಳಿದ ಸಾರಿಗೆ ಬಸ್ – ಪ್ರಯಾಣಿಕರು ಸೇಫ್

    ಸಂತ್ರಸ್ತೆ ಕಾಲೇಜು ಬಿಟ್ಟರೂ, ಯೋಗೇಶ್ ಸಂದೇಶ ಕಳುಹಿಸುವುದನ್ನು ಬಿಟ್ಟಿರಲಿಲ್ಲ. ಇದರಿಂದ ಸಂತ್ರಸ್ತೆ ಬೇಸತ್ತು ಆತನ ನಂಬರ್ ಬ್ಲಾಕ್ ಮಾಡಿದ್ದಳು. ಇದಾದ ಬಳಿಕ ಒಂದು ವರ್ಷದಿಂದ ಸೈಲೆಂಟ್ ಆಗಿದ್ದ ಯೋಗೇಶ್, ಜು.22 ರಂದು ರಸ್ತೆಯಲ್ಲಿ ಯುವತಿಯನ್ನು ಕಂಡು, ಮತ್ತೊಂದು ನಂಬರ್‌ನಿಂದ ಸಂದೇಶ ಕಳುಹಿಸಿ ಕಿರುಕುಳ ನೀಡಲು ಆರಂಭಿಸಿದ್ದ. ಅಲ್ಲದೇ ಈ ಬಾರಿ ನನಗೆ ನೀನು ಬೇಕು, 10 ಸಾವಿರ ಹಣ ಕೊಡ್ತೀನಿ ಎಂದು ಪೀಡಿಸಿದ್ದ.

    ಈ ವಿಚಾರವನ್ನು ಸಂತ್ರಸ್ತೆ ತಂದೆಗೆ ತಿಳಿಸಿದ್ದಳು. ಬಳಿಕ ಈ ಸಂಬಂಧ ತುಮಕೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಇದೀಗ ಲೈಂಗಿಕ ಕಿರುಕುಳ ಹಾಗೂ ಅಟ್ರಾಸಿಟಿ ಕೇಸ್ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿಕೊಂಡು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಪತಿ ಜೊತೆ ಜಗಳ| ಚಹಾಗೆ ಇಲಿ ಪಾಷಾಣ ಬೆರೆಸಿ ಮಗು ಜೊತೆ ಕುಡಿದ್ಳು – ಪುತ್ರಿ ಸಾವು, ತಾಯಿ ಗಂಭೀರ

  • ಚಾಮರಾಜನಗರ | ಉದ್ಯಮಿಯನ್ನು ಲಾಡ್ಜ್‌ಗೆ ಕರೆಸಿ ರೈಡ್‌ – 3.70 ಲಕ್ಷ ದೋಚಿ ಪರಾರಿಯಾದ ಪಿಎಸ್ಐಗಾಗಿ ಶೋಧ

    ಚಾಮರಾಜನಗರ | ಉದ್ಯಮಿಯನ್ನು ಲಾಡ್ಜ್‌ಗೆ ಕರೆಸಿ ರೈಡ್‌ – 3.70 ಲಕ್ಷ ದೋಚಿ ಪರಾರಿಯಾದ ಪಿಎಸ್ಐಗಾಗಿ ಶೋಧ

    ಚಾಮರಾಜನಗರ: ಇಲ್ಲಿನ (Chamarajanagar) ಸೈಬರ್ ಕ್ರೈಂ ಠಾಣೆಯ ಪಿಎಸ್ಐ ಹಾಗೂ ಟೀಂ ಸೇರಿ ಹಣ (Money) ಡಬ್ಬಲ್‌ ಮಾಡುವುದಾಗಿ  ತಮಿಳುನಾಡು ಉದ್ಯಮಿಯೊಬ್ಬರಿಗೆ 3.70 ಲಕ್ಷ ರೂ. ವಂಚಿಸಿ, ಬಂಧನ ಭೀತಿಯಲ್ಲಿ ತಲೆ ಮರೆಸಿಕೊಂಡಿದ್ದಾರೆ.

    ಚಾಮರಾಜನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪಿಎಸ್ಐ ಅಯ್ಯನಗೌಡ ಅದೇ ಠಾಣೆಯ ಕಾನ್ಸ್‌ಟೇಬಲ್‌ ಮೋಹನ್, ಮಹೇಶ್ ಹಾಗೂ ಚಾಮರಾಜನಗರ ಟೌನ್ ಠಾಣೆಯ ಕಾನ್ಸ್‌ಟೇಬಲ್ ಬಸವಣ್ಣರ ಮೇಲೆ ಈ ಸಂಬಂಧ ಎಫ್ಐಆರ್ ದಾಖಲಾಗಿದೆ. ನಾಲ್ಕು ಮಂದಿ ಆರೋಪಿಗಳು ಈಗ ತಲೆ ಮರೆಸಿಕೊಂಡಿದ್ದಾರೆ. ಮಾಹಿತಿ ಖಚಿತವಾಗುತ್ತಿದ್ದಂತೆ ಎಸ್‌ಪಿ ಡಾ.ಬಿ.ಟಿ ಕವಿತಾ ಅವರು ನಾಲ್ಕು ಮಂದಿ ಪೊಲೀಸರನ್ನು ಅಮಾನತು ಮಾಡಿದ್ದಾರೆ.

    ಜು.26 ರಂದು ತಮಿಳುನಾಡು ಮೂಲದ ಉದ್ಯಮಿ ಸಚ್ಚಿದಾನಂದ ಮೂರ್ತಿಗೆ ಕರೆ ಮಾಡಿ, ಸೈಯದ್ ಅನ್ಸಾರಿ ಹಾಗೂ ಇಮ್ರಾನ್ 3 ಲಕ್ಷ ರೂ. ತನ್ನಿ ಆ ಹಣವನ್ನ ಒಂದು ತಿಂಗಳ ಒಳಗಾಗಿ ಡಬಲ್ ಮಾಡಿ ಕೊಡ್ತೀವಿ ಎಂದು ನಂಬಿಸಿದ್ದಾರೆ. ಈ ವಿಚಾರ ನಂಬಿ ಉದ್ಯಮಿ ಚಾಮರಾಜನಡರದ ಹೋಟೆಲ್ ಗೆ ಬಂದಿದ್ರು. ಈ ವೇಳೆ ಮೊದಲೇ ಪಕ್ಕಾ ಪ್ಲ್ಯಾನ್ ಮಾಡಿದ ರೀತಿ ಅನ್ಸಾರಿ ಹಾಗೂ ಸೈಯದ್ ಸಿಇಎನ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅಯ್ಯನ ಗೌಡಗೆ ವಿಷಯ ತಿಳಿಸುತ್ತಾರೆ. ತಕ್ಷಣವೇ ಅಯ್ಯನಗೌಡ ಮೂರು ಜನ ಕಾನ್ಸ್‌ಟೇಬಲ್ ಜೊತೆ ಸೇರಿ ಹೋಟೆಲ್ ಮೇಲೆ ದಾಳಿ ಮಾಡಿ ಧಮ್ಕಿ ಹಾಕಿ, ಕೇಸ್ ರಿಜಿಸ್ಟರ್ ಆಗ್ಬಾರ್ದು ಅಂದ್ರೆ 4 ಲಕ್ಷ ರೂ. ಕೊಡಿ ಎಂದು ಧಮ್ಕಿ ಹಾಕ್ತಾರೆ. ಬಳಿಕ ಉದ್ಯಮಿ ಬಳಿಯಿದ್ದ 3 ಲಕ್ಷ ಹಣ ಕಸಿದುಕೊಂಡು, 70 ಸಾವಿರ ರೂ. ಹಣವನ್ನು ಫೋನ್ ಪೇ ಮೂಲಕ ಅನ್ಸಾರಿ ಎಂಬ ಮತ್ತೊಬ್ಬ ಆರೋಪಿಯ ಖಾತೆಗೆ ಹಾಕಿಸಿ ಕೊಂಡಿದ್ದರು.

    ಉದ್ಯಮಿ ಸಚ್ಚಿದಾನಂದ ಸೀದಾ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಆರೋಪಿಗಳಾದ ಅನ್ಸಾರಿ ಹಾಗೂ ಸೈಯದ್ ಬಂಧನ ಆಗುತ್ತಿದ್ದಂತೆ ಪಿಎಸ್ಐ ಅಯ್ಯನಗೌಡ, ಬಸವಣ್ಣ, ರಮೇಶ್ ಹಾಗೂ ಮೋಹನ್ ಈಗ ತಲೆ ಮರೆಸಿಕೊಂಡಿದ್ದಾರೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.

  • ಚಿಕ್ಕಮಗಳೂರು | ಡೆತ್‌ನೋಟ್‌ ಬರೆದಿಟ್ಟು ಗುಪ್ತಚರ ಇಲಾಖೆ ಪೇದೆ ಆತ್ಮಹತ್ಯೆ

    ಚಿಕ್ಕಮಗಳೂರು | ಡೆತ್‌ನೋಟ್‌ ಬರೆದಿಟ್ಟು ಗುಪ್ತಚರ ಇಲಾಖೆ ಪೇದೆ ಆತ್ಮಹತ್ಯೆ

    ಚಿಕ್ಕಮಗಳೂರು: ಅನಾರೋಗ್ಯದ ಸಮಸ್ಯೆ ಹಿನ್ನೆಲೆ ಗುಪ್ತಚರ ಇಲಾಖೆಯ (Intelligence Bureau) ಪೇದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ಕರ್ತಿಕೆರೆ ಗ್ರಾಮದಲ್ಲಿ ನಡೆದಿದೆ.

    ಮೃತನನ್ನ ಮಧು (28 ) ಎಂದು ಗುರುತಿಸಲಾಗಿದೆ. ಮೂಲತಃ ಚಿಕ್ಕಮಗಳೂರು ತಾಲೂಕಿನ ಕರ್ತಿಕೆರೆ ಗ್ರಾಮದ ಮಧು ಕಳೆದೊಂದು ವರ್ಷದಿಂದ ಶಿವಮೊಗ್ಗದಲ್ಲಿ ಸೇವೆ‌ ಸಲ್ಲಿಸುತ್ತಿದ್ದರು. ಕಳೆದ ಒಂದು ತಿಂಗಳ ಹಿಂದಷ್ಟೆ ಚಿಕ್ಕಮಗಳೂರು ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಂಡು ಬಂದಿದ್ದರು.

    ತಮ್ಮ ಮನೆಯಲ್ಲೇ ಅನಾರೋಗ್ಯದ ಸಮಸ್ಯೆ ಎಂದು ಚೀಟಿ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಟಿ.ನರಸೀಪುರ ಪುರಸಭೆಯಲ್ಲಿ 40 ಕೋಟಿ ತೆರಿಗೆ ವಂಚನೆ ಆರೋಪ – ಆಡಿಯೋ ಸ್ಫೋಟ

    ಟಿ.ನರಸೀಪುರ ಪುರಸಭೆಯಲ್ಲಿ 40 ಕೋಟಿ ತೆರಿಗೆ ವಂಚನೆ ಆರೋಪ – ಆಡಿಯೋ ಸ್ಫೋಟ

    ಮೈಸೂರು: ಜಿಲ್ಲೆಯ ಟಿ.ನರಸೀಪುರ ಪುರಸಭೆಯಲ್ಲಿ (T Narasipura Municipality) 40 ಕೋಟಿ ರೂ. ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಆಡಿಯೋ ಬಹುದೊಡ್ಡ ತಿರುವು ಕೊಟ್ಟಿದೆ. ಆರೋಪಿ ನಂಜುಂಡಸ್ವಾಮಿಯು 30ರಿಂದ 40 ಕೋಟಿ ರೂ. ವಂಚನೆ ಮಾಡಿದ್ದಾನೆ ಎಂದು ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರಿ ಹೇಳಿದ್ದಾರೆ ಎನ್ನಲಾದ ಆಡಿಯೋವೊಂದು ಬಯಲಾಗಿದೆ.

    ಗ್ರಾಮ ಪಂಚಾಯಿತಿಯಿಂದ ಪುರಸಭೆ ವರೆಗೆ 4 ಸಾವಿರ ಖಾತೆ ಮಾಡಲಾಗಿದೆ. ಅದರಲ್ಲಿ ಟಿ.ಎಂ.ನಂಜುಂಡಸ್ವಾಮಿಯೇ 1000 ಖಾತೆ ಮಾಡಿದ್ದಾನೆ. ಪ್ರತಿನಿತ್ಯ 10ರಿಂದ 20 ಖಾತೆ ಮಾಡಿದ್ದಾನೆ ಎಂದು ಅಧಿಕಾರಿ ಆಡಿಯೋದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: Exclusive: ಸರ್ಕಾರದ ಅಧಿಕಾರಿಗಳ ನಡುವೆಯೇ ಬೀದಿ ಕಾಳಗ – ಸಿಎಂ & ಡಿಸಿಎಂ ವಿಶೇಷಾಧಿಕಾರಿಗಳ ಮಧ್ಯೆ ಜಗಳ

    ಸದ್ಯ ನಂಜುಂಡಸ್ವಾಮಿ ಬಂಧಿಸಿರುವ ಪೊಲೀಸರು, ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆದಿದ್ದಾರೆ.

  • ಪಾಟ್ನಾ | ಐಸಿಯುಗೆ ನುಗ್ಗಿ ಗ್ಯಾಂಗ್‌ಸ್ಟರ್ ಹತ್ಯೆ – ಇಬ್ಬರು ಆರೋಪಿಗಳ ಮೇಲೆ ಫೈರಿಂಗ್

    ಪಾಟ್ನಾ | ಐಸಿಯುಗೆ ನುಗ್ಗಿ ಗ್ಯಾಂಗ್‌ಸ್ಟರ್ ಹತ್ಯೆ – ಇಬ್ಬರು ಆರೋಪಿಗಳ ಮೇಲೆ ಫೈರಿಂಗ್

    ಪಾಟ್ನಾ: ಇಲ್ಲಿನ ಆಸ್ಪತ್ರೆಯ ಐಸಿಯುಗೆ ನುಗ್ಗಿ ಪೆರೋಲ್ ಮೇಲೆ ಬಂದಿದ್ದ ಖೈದಿಯನ್ನ ಕೊಲೆ ಮಾಡಿದ ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

    ಬಿಹಿಯಾ ಪೊಲೀಸ್ (Bihia police) ಠಾಣೆ ವ್ಯಾಪ್ತಿಯ ಕಟಿಯಾ ರಸ್ತೆಯಲ್ಲಿ ಮುಂಜಾನೆ 5 ಗಂಟೆ ಸುಮಾರಿಗೆ ಈ ಎನ್‌ಕೌಂಟರ್ ನಡೆದಿದೆ. ವಿಶೇಷ ಕಾರ್ಯಪಡೆ (STF) ಮತ್ತು ಸ್ಥಳೀಯ ಪೊಲೀಸರ ಜಂಟಿ ತಂಡ ಮೂವರು ಮೂವರು ಆರೋಪಿಗಳನ್ನು ಬಂಧಿಸಲು ತೆರಳಿದ್ದರು. ಈ ವೇಳೆ, ಆರೋಪಿಗಳು ಪೋಲೀಸರ ಮೇಲೆಯೇ ಗುಂಡು ಹಾರಿಸಲು ಯತ್ನಿಸಿದ್ದರು. ಇದನ್ನೂ ಓದಿ: ಬಾಂಗ್ಲಾದೇಶದ ವಾಯುಪಡೆ ವಿಮಾನ ದುರಂತ – ಸಾವಿನ ಸಂಖ್ಯೆ 27ಕ್ಕೆ ಏರಿಕೆ

    ಶರಣಾಗುವಂತೆ ಸೂಚಿಸಿದರು, ಆರೋಪಿಗಳು ದಾಳಿ ನಡೆಸಿದರು. ಈ ವೇಳೆ, ಪೊಲೀಸರು ಆತ್ಮರಕ್ಷಣೆಗಾಗಿ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದು, ಮತ್ತೋರ್ವನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ರಾಯಚೂರು | ಫುಡ್ ಪಾಯಿಸನ್‌ನಿಂದ ತಂದೆ, ಇಬ್ಬರು ಮಕ್ಕಳು ಸಾವು

    ಇಬ್ಬರು ಆರೋಪಿಗಳಾದ ಬಲ್ವಂತ್ ಕುಮಾರ್ ಸಿಂಗ್ ಮತ್ತು ರವಿರಂಜನ್ ಕುಮಾರ್ ಸಿಂಗ್‌ಗೆ ಕಾಲಿಗೆ ಗುಂಡು ತಗುಲಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೋರ್ವ ಆರೋಪಿ ಅಭಿಷೇಕ್ ಕುಮಾರ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಪೆರೋಲ್ ಮೇಲೆ ಹೊರಗಿದ್ದ ದರೋಡೆಕೋರ ಚಂದನ್ ಮಿಶ್ರಾನನ್ನ (Chandan Mishtra) ಪಾಟ್ನಾದ (Patna) ಆಸ್ಪತ್ರೆಯ ಐಸಿಯುನಲ್ಲೇ ಗುಂಡು ಹಾರಿಸಿ ಐವರು ದುಷ್ಕರ್ಮಿಗಳು ಕೊಂದಿದ್ದರು. ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ಗ್ಯಾಂಗ್‌ಸ್ಟಾರ್ ಚಂದನ್ ಮಿಶ್ರಾನನ್ನು ವೈದ್ಯಕೀಯ ಚಿಕಿತ್ಸೆಗಾಗಿ ಪೆರೋಲ್ ಮೇಲೆ ಪಾಟ್ನಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ದರ್ಶನ್‌ ಕೇಸ್‌ – ಸುಪ್ರೀಂ ಕೋರ್ಟ್‌ಗೆ ಹಿರಿಯ ವಕೀಲ ಕಪಿಲ್ ಸಿಬಲ್ ಗೈರು

    ಇದನ್ನರಿತ ಎದುರಾಳಿ ಗ್ಯಾಂಗ್‌ನವರು ಗನ್ ಸಮೇತ ಆಸ್ಪತ್ರೆಗೆ ನುಗ್ಗಿ ಮನಸೋ ಇಚ್ಛೆ ಗುಂಡಿನ ಸುರಿಮಳೆಗೈದಿದ್ದರು. ಚಂದನ್ ಮಿಶ್ರಾ ದೇಹಕ್ಕೆ 12 ಬುಲೆಟ್ ಹೊಕ್ಕಿದ್ದು, ಆಸ್ಪತ್ರೆಯಲ್ಲೆ ಹತನಾಗಿದ್ದ. ಫೈರಿಂಗ್ ಬಳಿಕ ದಾಳಿಕೋರರು ಎಸ್ಕೇಪ್ ಆಗಿದ್ದರು. ಪಾಟ್ನಾದಿಂದ ಪರಾರಿಯಾಗಿ ಕೋಲ್ಕತ್ತಾದ ನ್ಯೂ ಟೌನ್ ವಸತಿ ಪ್ರದೇಶದಲ್ಲಿ ಅಡಗಿಕೊಂಡಿದ್ದರು. ಇತ್ತ ಪ್ರಕರಣ ದಾಖಲಿಸಿಕೊಂಡಿದ್ದ ಬಿಹಾರ ಪೊಲೀಸರು ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನಾಧರಿಸಿ ತನಿಖೆ ಆರಂಭಿಸಿದ್ದರು.

    ಈ ಮಧ್ಯೆ ಎಲ್ಲಾ ಆರೋಪಿಗಳು ಕೋಲ್ಕತ್ತಾದ ನ್ಯೂ ಟೌನ್ ಪ್ರದೇಶದ ವಸತಿ ಸಂಕೀರ್ಣದ ಫ್ಲಾಟ್‌ನಲ್ಲಿ ಅಡಗಿರುವುದಾಗಿ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಬಳಿಕ ಬಂಗಾಳ ಪೊಲೀಸರ ಸಹಾಯ ಪಡೆದು ದಾಳಿ ನಡೆಸಿದ ಪೊಲೀಸರು ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

  • ನಮ್ಮ ಹುಡ್ಗಿ ತಂಟೆಗೆ ಬಂದ್ರೆ ಮುಗ್ಸಿ ಬಿಡ್ತೀನಿ – ಲಾಂಗ್ ಹಿಡಿದು ರೌಡಿಶೀಟರ್ ಪುಂಡಾಟ

    ನಮ್ಮ ಹುಡ್ಗಿ ತಂಟೆಗೆ ಬಂದ್ರೆ ಮುಗ್ಸಿ ಬಿಡ್ತೀನಿ – ಲಾಂಗ್ ಹಿಡಿದು ರೌಡಿಶೀಟರ್ ಪುಂಡಾಟ

    ಬೆಂಗಳೂರು: ರೌಡಿಶೀಟರೊಬ್ಬ ಸಿಕ್ಕಸಿಕ್ಕವರ ಮೇಲೆ ಲಾಂಗ್ ಬೀಸಿರುವ ಪ್ರಕರಣ ಬ್ಯಾಡರಹಳ್ಳಿಯಲ್ಲಿ (Byadarahalli) ನಡೆದಿದೆ.

    ಭಾನುವಾರ ಮುಂಜಾನೆ ರೌಡಿಶೀಟರ್ ಸನ್ನಿ ಎಂಬಾತ ನಗರದ ರಸ್ತೆಯಲ್ಲಿ ಲಾಂಗ್ ಹಿಡಿದು ತಿರುಗಾಡಿದ್ದಾನೆ. ಈ ವೇಳೆ, ನಮ್ಮ ಹುಡ್ಗಿ ತಂಟೆಗೆ ಬಂದ್ರೆ ಮುಗ್ಸಿ ಬಿಡ್ತೀನಿ ಅಂತ ಕಂಡಕಂಡವರ ಮೇಲೆ ಲಾಂಗ್ ಬೀಸಿದ್ದಾನೆ. ಆತನ ಅಟ್ಟಹಾಸದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ರೌಡಿಶೀಟರ್ ಬಿಕ್ಲು ಶಿವ ಕೊಲೆ ಕೇಸ್ – ಮತ್ತೆ ಮೂವರು ಅರೆಸ್ಟ್

    ವಿಘ್ನೇಶ್ವರ ನಗರದ ಹುಲಿಯೂರಮ್ಮ ದೇವಸ್ತಾನದ ಬಳಿ ಈ ಘಟನೆ ನಡೆದಿದೆ. ಪುಡಿರೌಡಿಗಳ ಅಟ್ಟಹಾಸದಿಂದ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ. ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ | ಅಬ್ಬಿ ಫಾಲ್ಸ್‌ನಲ್ಲಿ ಬೆಂಗಳೂರಿನ ಯುವಕ ನೀರುಪಾಲು – ವಿಡಿಯೋ ವೈರಲ್‌

  • ಉತ್ತರ ಪ್ರದೇಶ| 8ರ ಬಾಲಕಿಯ ರೇಪ್‌ & ಕೊಲೆ ಕೇಸ್‌ – ಆರೋಪಿ ಎನ್‌ಕೌಂಟರ್‌ಗೆ ಬಲಿ

    ಉತ್ತರ ಪ್ರದೇಶ| 8ರ ಬಾಲಕಿಯ ರೇಪ್‌ & ಕೊಲೆ ಕೇಸ್‌ – ಆರೋಪಿ ಎನ್‌ಕೌಂಟರ್‌ಗೆ ಬಲಿ

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಫರೂಕಾಬಾದ್‌ನಲ್ಲಿ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ (Rape) ಎಸಗಿ ಕೊಲೆಗೈದ ಆರೋಪಿಯನ್ನು ಪೊಲೀಸರು ಎನ್‌ಕೌಂಟರ್‌ (Encounter) ನಡೆಸಿ ಹತ್ಯೆ ಮಾಡಿದ್ದಾರೆ.

    ಈ ಹಿಂದೆ ಕೊಲೆ, ಸುಲಿಗೆ, ಅಪಹರಣ ಎಸಗಿದ್ದ ಆರೋಪ ಹೊಂದಿದ್ದ ಮನು(55) ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ. ಆರೋಪಿ ಪ್ಲಾಸ್ಟಿಕ್ ಹೆಕ್ಕುವ ಕೆಲಸ ಮಾಡುತ್ತಿದ್ದ ಮನು ಜೂನ್‌ 27 ರಿಂದ ನಾಪತ್ತೆಯಾಗಿದ್ದ. ಈತನ ಬಗ್ಗೆ ಸುಳಿವು ನೀಡಿದವರಿಗೆ 50 ಸಾವಿರ ರೂ. ಬಹುಮಾನವನ್ನು ಘೋಷಿಸಲಾಗಿತ್ತು.

    ಮೊಹಮ್ಮದಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ಬಂಧನಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಆತ ಪೊಲೀಸರ ಮೇಲೆ ದೇಶೀಯ ನಿರ್ಮಿತ ಪಿಸ್ತೂಲಿನಿಂದ ದಾಳಿ ನಡೆಸಿದ್ದಾನೆ. ಈ ವೇಳೆ ಪೊಲೀಸರು ಸ್ವಯಂ ರಕ್ಷಣೆಗೆ ಗುಂಡು ಹಾರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ಸಮಯದಲ್ಲಿ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.

    ಏನಿದು ಕೇಸ್?
    ಜೂನ್ 28 ರಂದು, ಮೈನ್‌ಪುರಿಯ ಭೋಗಾಂವ್ ಪೊಲೀಸ್ ಠಾಣೆ ಪ್ರದೇಶದ ಅಲಿಪುರ್ ಖೇಡಾ ಬಳಿಯ ಹೊಲದಲ್ಲಿ 8 ವರ್ಷದ ಬಾಲಕಿಯ ಶವ ಪತ್ತೆಯಾಗಿತ್ತು. ಇದನ್ನೂ ಓದಿ: ಯುಪಿಯಲ್ಲಿ ಯೋಗಿ ಆದಿತ್ಯನಾಥ್‌ ಸಿಎಂ ಆದ ನಂತರ 15,000 ಎನ್‌ಕೌಂಟರ್‌ 238 ಮಂದಿ ಹತ್ಯೆ

    ಮೃತ ಬಾಲಕಿ ಮೊಹಮ್ಮದಾಬಾದ್ ಪೊಲೀಸ್ ಠಾಣೆ ಪ್ರದೇಶದ ನೀವ್ಕರೋರಿ ಬಳಿಯ ತನ್ನ ಚಿಕ್ಕಮ್ಮನ ಮನೆಗೆ ಬಂದಿದ್ದಳು. ಜೂನ್‌ 27 ರಂದು ಬಾಲಕಿ ಮಾವಿನ ಹಣ್ಣು ತಿನ್ನಲು ತೋಟಕ್ಕೆ ಹೋಗಿದ್ದಳು. ತೋಟಕ್ಕೆ ಹೋಗಿದ್ದ ಬಾಲಕಿ ಮರಳಿ ಮನೆಗೆ ಬಂದಿರಲಿಲ್ಲ.

    ನಾಪತ್ತೆ ದೂರು ದಾಖಲಾದ ನಂತರ ಪೊಲೀಸರು ತನಿಖೆಗೆ ಇಳಿದಾಗ 55 ವರ್ಷದ ವ್ಯಕ್ತಿ ಸೈಕಲ್‌ನಲ್ಲಿ ಹೋಗುತ್ತಿರುವುದನ್ನು ಮತ್ತು ಆತನ ಹಿಂದೆ ಬಾಲಕಿ ನಡೆದುಕೊಂಡು ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮರುದಿನ ಮೈನ್‌ಪುರಿ ಜಿಲ್ಲೆಯ ಭೋಗಾಂವ್ ಪೊಲೀಸ್ ಠಾಣೆ ಪ್ರದೇಶದ ದೇವಿಪುರದ ಹೊಲದಲ್ಲಿ ಸುಮಾರು 35 ಕಿ.ಮಿ. ದೂರದಲ್ಲಿರುವ ಕಾಲುವೆಯ ದಡದಲ್ಲಿ ಹುಡುಗಿಯ ಶವ ಪತ್ತೆಯಾಗಿತ್ತು.

    ಮೈನ್‌ಪುರಿ ಪೊಲೀಸರು ಫರೂಕಾಬಾದ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೋಷಕರು ಪತ್ತೆಯಾದ ಶವ ಕಾಣೆಯಾದ ತಮ್ಮ ಮಗಳು ಎಂದು ಗುರುತಿಸಿತ್ತು. ಮೃತದೇಹವನ್ನು ಗ್ರಾಮಕ್ಕೆ ಕರೆ ತಂದಾಗ ಗ್ರಾಮಸ್ಥರು ಭಾರೀ ಪ್ರತಿಭಟನೆ ನಡೆಸಿದ್ದರು. ಫರೂಕಾಬಾದ್-ದೆಹಲಿ ರಸ್ತೆಯನ್ನು ನಿರ್ಬಂಧಿಸಲಾಗಿತ್ತು. ಪ್ರಕರಣ ದಾಖಲಾದ ನಂತರ ಆರೋಪಿ ಮನು ನಾಪತ್ತೆಯಾಗಿದ್ದ. ನಾಪತ್ತೆಯಾದ ಬೆನ್ನಲ್ಲೇ ಪೊಲೀಸರು ಈತನ ಬಗ್ಗೆ ಸುಳಿವು ನೀಡಿದವರಿಗೆ 50 ಸಾವಿರ ರೂ. ನಗದು ಬಹುಮಾನ ಘೋಷಿಸಿದ್ದರು.

  • ಆರ್‌ಸಿಬಿ ಜೊತೆ ಬೆಂಗಳೂರು ಪೊಲೀಸರು ಶಾಮೀಲು: ಮೈಕೆಲ್ ಡಿ ಕುನ್ಹಾ ವರದಿಯಲ್ಲಿ ಏನಿದೆ?

    ಆರ್‌ಸಿಬಿ ಜೊತೆ ಬೆಂಗಳೂರು ಪೊಲೀಸರು ಶಾಮೀಲು: ಮೈಕೆಲ್ ಡಿ ಕುನ್ಹಾ ವರದಿಯಲ್ಲಿ ಏನಿದೆ?

    ಬೆಂಗಳೂರು: ಆರ್‌ಸಿಬಿಯ ಜೊತೆ ಬೆಂಗಳೂರು ಪೊಲೀಸರು (Bengaluru Police) ಶಾಮೀಲಾಗಿರುವ ಕಾರಣ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಬಳಿ ಕಾಲ್ತುಳಿತ ಸಂಭವಿಸಿದೆ ಎಂದು ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ (John Michael D’Cunha) ನೇತೃತ್ವದ ಏಕಸದಸ್ಯ ತನಿಖಾ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

    ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ನೇತೃತ್ವದ ಏಕಸದಸ್ಯ ತನಿಖಾ ಆಯೋಗವು ಐಪಿಎಲ್ ವಿಜಯೋತ್ಸವದ ಸಮಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಜುಲೈ 12 ರಂದು ಸರ್ಕಾರಕ್ಕೆ ಸಲ್ಲಿಸಿತ್ತು. ಇದನ್ನೂ ಓದಿ: ಡಿವೈಎಸ್‌ಪಿ ವಿಜಯಕ್ರಾಂತಿ ವರ್ಗಾವಣೆಯಲ್ಲಿ ಬದಲಾವಣೆ ಮಂಗಳೂರು ದಕ್ಷಿಣಕ್ಕೆ ಟ್ರಾನ್ಸ್‌ಫರ್‌

     

    ವರದಿಯಲ್ಲಿ ಏನಿದೆ?
    ಪೊಲೀಸರು ಸಂಪೂರ್ಣವಾಗಿ ಕರ್ತವ್ಯಲೋಪ ಎಸಗಿದ್ದಾರೆ. ಆರ್‌ಸಿಬಿ (RCB) ಕಾನೂನಿನ ದುರ್ಬಳಕೆ ಮಾಡಿಕೊಂಡಿದೆ. ಕಾರ್ಯಕ್ರಮದ ನಡೆಸಲು 7 ದಿನ ಮುಂಚಿತವಾಗಿ ಅನುಮತಿ ಕೋರಬೇಕಿತ್ತು. ಅನುಮತಿ ಕೊಡದೇ ಇದ್ದರೂ ಕೂಡ ಕಾರ್ಯಕ್ರಮ ನಡೆಸಿದೆ. ಕಾರ್ಯಕ್ರಮಕ್ಕೆ ಅನುಮತಿ ನೀಡದೇ ಪೊಲೀಸರು ಬಂದೋಬಸ್ತ್ ಮಾಡಿದ್ದಾರೆ. ದುರಂತ ನಡೆಯಬಹುದು ಎನ್ನುವ ವಿಚಾರ ತಿಳಿದಿದ್ದರೂ ತಡೆಯುವ ಪ್ರಯತ್ನ ಮಾಡಲಿಲ್ಲ. ಹೀಗಾಗಿ ಆರ್‌ಸಿಬಿಯ ಜೊತೆ ಪೊಲೀಸರು ಶಾಮೀಲಾಗಿದ್ದಾರೆ.

    ಆರ್‌ಸಿಬಿ ತನ್ನ ಅಧಿಕೃತ ಹ್ಯಾಂಡಲ್‌ನಲ್ಲಿ ಬೆಳಗ್ಗೆ ಎರಡು ಪೋಸ್ಟ್‌ ಮಾಡಿದ ನಂತರ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರೂ ಕ್ರೀಡಾಂಗಣಕ್ಕೆ ಪ್ರವೇಶದ ವಿಧಾನದ ವಿವರಗಳನ್ನು ನಿರ್ದಿಷ್ಟವಾಗಿ ತಿಳಿಸಿರಲಿಲ್ಲ.

    ಗೇಟ್‌ಗಳ ಪ್ರವೇಶವನ್ನು ನಿಯಂತ್ರಿಸದಿರುವುದು ಮತ್ತು ಕ್ರೀಡಾಂಗಣದ ಪ್ರವೇಶಕ್ಕೆ ಸಂಬಂಧಿಸಿದಂತೆ ಸರಿಯಾದ ವಿವರಣೆ ನೀಡದ ಕಾರಣ ಆಯೋಜಕರೇ ಕಾಲ್ತುಳಿತಕ್ಕೆ ಕಾರಣರಾಗಿದ್ದಾರೆ. ಸರಿಯಾಗಿ ಪೊಲೀಸರಿಂದ ಅನುಮತಿ ಪಡೆಯದೇ ಆತುರದ ನಿರ್ಧಾರ ಕೈಗೊಂಡಿದ್ದರಿಂದ ಈ ದುರಂತ ಸಂಭವಿಸಿದೆ.

  • ಭೀಮಾತೀರದ ಹಂತಕನ ಮಾಜಿ ಶಿಷ್ಯ ಸುಶೀಲ್ ಕಾಳೆ ಹತ್ಯೆ ಕೇಸ್ – ಪರಾರಿಯಾಗಿದ್ದ ನಾಲ್ವರು ಅರೆಸ್ಟ್

    ಭೀಮಾತೀರದ ಹಂತಕನ ಮಾಜಿ ಶಿಷ್ಯ ಸುಶೀಲ್ ಕಾಳೆ ಹತ್ಯೆ ಕೇಸ್ – ಪರಾರಿಯಾಗಿದ್ದ ನಾಲ್ವರು ಅರೆಸ್ಟ್

    ವಿಜಯಪುರ: ಭೀಮಾತೀರದ ಹಂತಕ ಬಾಗಪ್ಪ ಹರಿಜನ ಮಾಜಿ ಶಿಷ್ಯ ಸುಶೀಲ್ ಕಾಳೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಪರಾರಿಯಾಗಿದ್ದ ನಾಲ್ವರನ್ನು ಬಂಧಿಸಿದ್ದಾರೆ.

    ಗೌತಮ್ ಆಲಮೇಲಕರ, ನಾರಾಯಣ ಜಾಧವ್, ಬಸವರಾಜ್ ಮುನ್ನಾಳ, ಪ್ರಜ್ವಲ ಹಳಿಮನಿ ಬಂಧಿತ ಆರೋಪಿಗಳು. ಇದಕ್ಕೂ ಮುನ್ನ ಪೊಲೀಸರು ಅಪ್ರಾಪ್ತ ಸೇರಿ ಇಬ್ಬರನ್ನು ಬಂಧಿಸಿದ್ದರು.ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಕೇಸ್‌ – ಆರ್‌ಸಿಬಿ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಲು ಕ್ಯಾಬಿನೆಟ್‌ನಲ್ಲಿ ತೀರ್ಮಾನ

    ಈ ಕುರಿತು ಎಸ್ಪಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಹತ್ಯೆಯ ಬಳಿಕ ಪರಾರಿಯಾಗಿದ್ದ ಆರೋಪಿಗಳ ಪೈಕಿ ಅಪ್ರಾಪ್ತ ಸೇರಿ ಇಬ್ಬರನ್ನು ಇತ್ತೀಚಿಗೆ ಬಂಧಿಸಲಾಗಿತ್ತು. ಇದೀಗ ಇನ್ನುಳಿದಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಜೊತೆಗೆ ಬಂಧಿತರಿಂದ ಒಂದು ಕಂಟ್ರಿ ಮೇಡ್ ಪಿಸ್ತೂಲ್, ನಾಲ್ಕು ಜೀವಂತ ಗುಂಡುಗಳು, ಮೂರು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಏನಿದು ಘಟನೆ?
    ಜು.14ರಂದು ವಿಜಯಪುರ ನಗರದ ಎಸ್‌ಎಸ್ ಕಾಂಪ್ಲೆಕ್ಸ್‌ನಲ್ಲಿ ಭೀಮಾತೀರದ ಹಂತಕ ಬಾಗಪ್ಪ ಹರಿಜನ ಶಿಷ್ಯ ಸುಶೀಲ್ ಕಾಳೆಯನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಹತ್ಯೆಯ ದೃಶ್ಯಗಳು ಸ್ಥಳದಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೃಶ್ಯದಲ್ಲಿ ಸುಶೀಲ್ ಕಾಳೆಯನ್ನು ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು, ಎಲ್ಲಿಗೂ ತಪ್ಪಿಸಿಕೊಂಡು ಹೋಗದಂತೆ ಬಿಡದೇ ಕೊನೆಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಎಳನೀರು ಕೊಚ್ಚುವ ಮಚ್ಚಿನಿಂದ ಬೆನ್ನು, ತಲೆ, ಕುತ್ತಿಗೆ ಸೇರಿ ಹಲವೆಡೆ ಕೊಚ್ಚಿದ್ದರು. ಕೊನೆಗೆ ಮಚ್ಚನ್ನು ಸುಶೀಲ್ ಕಾಳೆ ದೇಹದ ಮೇಲೆ ಬಿಟ್ಟು ಪರಾರಿಯಾಗಿದ್ದರು.ಇದನ್ನೂ ಓದಿ: India’s Cleanest City: ದೇಶದ ‘ಸ್ವಚ್ಛ ನಗರ’ ಪಟ್ಟಿಯಲ್ಲಿ ಇಂದೋರ್‌ ನಂ.1 – ಮೈಸೂರಿಗೆ 3ನೇ ಸ್ಥಾನ

  • ರೌಡಿಶೀಟರ್ ಶಿವಪ್ರಕಾಶ್ ಕೊಲೆ ಕೇಸ್‌ – ಮಾಜಿ ಸಚಿವ ಬೈರತಿ ಬಸವರಾಜ್ A5 ಆರೋಪಿ

    ರೌಡಿಶೀಟರ್ ಶಿವಪ್ರಕಾಶ್ ಕೊಲೆ ಕೇಸ್‌ – ಮಾಜಿ ಸಚಿವ ಬೈರತಿ ಬಸವರಾಜ್ A5 ಆರೋಪಿ

    ಬೆಂಗಳೂರು: ಭಾರತಿನಗರ ರೌಡಿಶೀಟರ್ ಶಿವಪ್ರಕಾಶ್ (Shivaprakash) ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ,  ಕೆಆರ್‌ ಪುರಂನ ಬಿಜೆಪಿ ಶಾಸಕ ಬೈರತಿ ಬಸವರಾಜ್ (Byrathi Basavaraj) ಹೆಸರು ತಳುಕು ಹಾಕಿಕೊಂಡಿದೆ.

    ಕೊಲೆ ಸಂಬಂಧ ಶಿವಪ್ರಕಾಶ್‌ ತಾಯಿ ವಿಜಯಕ್ಷ್ಮಿ ಭಾರತಿನಗರ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಬೈರತಿ ಬಸವರಾಜ್‌ ಎ5 ಆರೋಪಿಯಾಗಿದ್ದು ಜಗದೀಶ್ ಎ1 , ಕಿರಣ್ ಎ2 ವಿಮಲ್ ಎ3, ಅನಿಲ್ ಎ4 ಆರೋಪಿಗಳಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಹತ್ಯೆ

     

    ತಾಯಿ ನೀಡಿದ ದೂರಿನಲ್ಲಿ ಏನಿದೆ?
    ಕಿತ್ತಕನೂರು ಜಾಗದ ವಿಚಾರವಾಗಿ ಕೊಲೆ ಮಾಡಲಾಗಿದೆ. ಬಿಳಿ ಬಣ್ಣದ ಸ್ಕಾರ್ಪಿಯೋದಲ್ಲಿ 8 ರಿಂದ 9 ಮಂದಿ ಬಂದು ಮಚ್ಚಿನಿಂದ ಹೊಡೆದಿದ್ದಾರೆ. ಕೊಲೆ ಮಾಡಿರುವ ಆರೋಪಿಗಳು ಹಲವು ಬಾರಿ ಮಗನಿಗೆ ಬೆದರಿಕೆ ಹಾಕಿದ್ದರು. ಮಾಜಿ ಸಚಿವ ಬೈರತಿ ಬಸವರಾಜ್ , ಜಗದೀಶ್ ಮತ್ತು ಇತರರಿಂದ ನನಗೆ ಪ್ರಾಣ ಬೆದರಿಕೆಯಿದೆ ಎಂದು ಹಲವು ಬಾರಿ ಮಗ ಹೇಳಿದ್ದ. ಬಸವರಾಜ್ ಕುಮ್ಮಕ್ಕಿನಿಂದಲೇ ಕೊಲೆ ನಡೆದಿದೆ ಎಂದು ಆರೋಪಿಸಿದ್ದಾರೆ.

    ದೂರು ನೀಡಿದ್ದ ಶಿವಪ್ರಕಾಶ್‌:
    ಈ ಫೆಬ್ರವರಿ 21 ರಂದು ಶಿವಪ್ರಕಾಶ್‌ ಜಗದೀಶ್‌ ಮತ್ತು ಇತರರ ವಿರುದ್ಧ ಭಾರತಿ ನಗರ ಠಾಣೆಯಲ್ಲಿ ದೂರು ನೀಡಿದ್ದ. ಕಿತ್ತಕನೂರು ಬಳಿ ನಾನು ಜಾಗವನ್ನು ಖರೀದಿಸಿದ್ದೆ. ಈ ಜಾಗವನ್ನು ಮಾರಾಟ ಮಾಡಬೇಕೆಂದು ಜಗದೀಶ್‌ ಮತ್ತು ಇತರರು ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರು ನೀಡಿದ್ದ. ಈ ಸಂಬಂಧ ಜಗದೀಶ್‌ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು.