Tag: police uniform

  • ಕಾಲಭೈರವನಿಗೆ ಪೊಲೀಸ್ ಸಮವಸ್ತ್ರ – ಫೋಟೋ ವೈರಲ್

    ಕಾಲಭೈರವನಿಗೆ ಪೊಲೀಸ್ ಸಮವಸ್ತ್ರ – ಫೋಟೋ ವೈರಲ್

    ಲಕ್ನೋ: ಕಾಲಭೈರವನಿಗೆ ಪೊಲೀಸ್ ಸಮವಸ್ತ್ರ ತೊಡಿಸಿದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ದೇವರನ್ನು ಕಣ್ತುಂಬಿಕೊಳ್ಳಲು ಭಕ್ತರು ದೇವಸ್ಥಾನದತ್ತ ಆಗಮಿಸುತ್ತಿರುವ ದೃಶ್ಯ ವಾರಣಾಸಿಯಲ್ಲಿ ನಡೆದಿದೆ.

    ವಾರಣಾಸಿಯ ಕಾಶಿಯ ಕೊತ್ವಾಲಾ ಎಂದೂ ಕರೆಯಲಾಗುವ ಭೈರವನ ಈ ಸಮವಸ್ತ್ರದ ಸುದ್ದಿ ಭಾರೀ ವೈರಲ್ ಆಗುತ್ತಿದೆ. ಇದೇ ಮೊದಲ ಬಾರಿಗೆ ಕಾಶಿಯ ಪ್ರಸಿದ್ಧ ದೇವರು ಬಾಬಾ ಕಾಲ ಭೈರವನಿಗೆ ಪೊಲೀಸ್ ಸಮವಸ್ತ್ರ ತೊಡಿಸಲಾಗಿದೆ. ದೇವರ ಮೂರ್ತಿಯ ತಲೆಯ ಮೇಲೆ ಪೊಲೀಸ್ ಕ್ಯಾಪ್ ಹಾಗೂ ಎದೆ ಮೇಲೆ ಬ್ಯಾಡ್ಜ್‍ನ್ನು ಹಾಕಲಾಗಿದ್ದು, ಕಾಲಭೈರವನ ಬಲಗೈಯಲ್ಲಿ ಲಾಠಿ ಸಹ ಇದೆ.

    ಈ ದೇಗುಲಕ್ಕೆ ಬರುತ್ತಿರುವ ಭಕ್ತರು ಕಾಲಭೈರವ ತನ್ನ ಈ ಅವತಾರದಲ್ಲಿ ಪೊಲೀಸ್ ಆಗಿ, ತಪ್ಪು ಮಾಡಿದವರಿಗೆ ಶಿಕ್ಷೆ ನೀಡುತ್ತಾನೆ. ಬಾಬಾ ಕಾಲ ಭೈರವ ಕಾಶಿಯ ಕೊತ್ವಾಲ್ ಆಗಿದ್ದಾನೆ. ಈಗ ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದಾನೆ. ಇದರಿಂದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ನೀಡುತ್ತಾನೆ ಎಂದು ನಂಬಿದ್ದಾರೆ. ಇದನ್ನೂ ಓದಿ: ‌ಉತ್ತರ ಪ್ರದೇಶ, ಉತ್ತರಾಖಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ

    ಭಕ್ತರೆಲ್ಲರೂ ಸೇರಿ ಕೊರೊನಾ ಸೋಂಕಿನಿಂದ ದೇಶದ ಜನರನ್ನು ರಕ್ಷಿಸಲು ಕಾಲಭೈರವನಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ರಾಜ್ಯ ಮತ್ತು ದೇಶದಲ್ಲಿ ಸುಖ, ಸಮೃದ್ಧಿ ಜೊತೆಗೆ ಜನರು ಆರೋಗ್ಯವಾಗಿರಲಿ ಎಂದು ಪ್ರಾರ್ಥಿಸಲಾಗಿದೆ ಎಂದು ಇಲ್ಲಿನ ಭಕ್ತರೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: Mekedatu Padyatra: ಮಕ್ಕಳನ್ನು ಭೇಟಿ ಮಾಡಿದ್ದ ಡಿಕೆ ಶಿವಕುಮಾರ್‌ ವಿರುದ್ಧ ಕೇಸ್‌

  • ಸಮವಸ್ತ್ರದಲ್ಲೇ ಡಾಬಾಗೆ ನುಗ್ಗಿ ಮದ್ಯಪಾನ ಮಾಡಿದ ಎಎಸ್‍ಐ

    ಸಮವಸ್ತ್ರದಲ್ಲೇ ಡಾಬಾಗೆ ನುಗ್ಗಿ ಮದ್ಯಪಾನ ಮಾಡಿದ ಎಎಸ್‍ಐ

    ಬಳ್ಳಾರಿ: ಎಎಸ್‍ಐವೊಬ್ಬರು ಪೊಲೀಸ್ ಸಮವಸ್ತ್ರದಲ್ಲೇ ಡಾಬಾಗೆ ನುಗ್ಗಿ ಮದ್ಯಪಾನ ಮಾಡಿದ ಪ್ರಕರಣ ಇದೀಗ ಬಯಲಾಗಿದೆ.

    ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯ ಎಎಸ್‍ಐ ಮೋಹನಕುಮಾರ ಕಳೆದ ರಾತ್ರಿ ಹಗರಿಬೊಮ್ಮನಹಳ್ಳಿ ಹೊರವಲಯದ ಡಾಬಾ ಪರಿಶೀಲನೆ ಮಾಡೋ ನೆಪದಲ್ಲಿ ಅಡುಗೆ ಮನೆಗೆ ನುಗ್ಗಿ ಅಲ್ಲೆ ಗಡದ್ದಾಗಿ ಕಂಠಪೂರ್ತಿ ಕುಡಿದಿರುವ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಎಎಸ್‍ಐ ಮೋಹನಕುಮಾರ ಡಾಬಾ ಮೇಲೆ ಕೇಸ್ ಮಾಡೋದಾಗಿ ಬೆದರಿಸಿ ಅವರಿಂದಲೇ ಎಣ್ಣೆ ತರಿಸಿಕೊಂಡು ಸಮವಸ್ತ್ರದಲ್ಲೆ ಎಣ್ಣೆ ಏರಿಸುವುದು ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದ್ರೂ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.