Tag: Police training school

  • ಪೊಲೀಸ್ ತರಬೇತಿ ಶಾಲೆಯಲ್ಲಿ ಮಹಿಳಾ ಪ್ರಶಿಕ್ಷಣಾರ್ಥಿಗಳಿಗೆ ಅಭದ್ರತೆ – ರಜೆ ನೀಡಲು ಹಣ, ಮದ್ಯ ವಸೂಲಿ

    ಪೊಲೀಸ್ ತರಬೇತಿ ಶಾಲೆಯಲ್ಲಿ ಮಹಿಳಾ ಪ್ರಶಿಕ್ಷಣಾರ್ಥಿಗಳಿಗೆ ಅಭದ್ರತೆ – ರಜೆ ನೀಡಲು ಹಣ, ಮದ್ಯ ವಸೂಲಿ

    ರಾಮನಗರ: ಸಮಾಜದ ಸ್ವಾಸ್ಥ್ಯ ಕಾಪಾಡಲು ಹಾಗೂ ಜನರಿಗೆ ರಕ್ಷಣೆ ನೀಡಲು ಪೊಲೀಸ್ (Police) ಇಲಾಖೆಗೆ ಸೇರುವ ಪ್ರಶಿಕ್ಷಣಾರ್ಥಿಗಳಿಗೆ ಇದೀಗ ಅಭದ್ರತೆ ಕಾಡುತ್ತಿದೆ. ಪೊಲೀಸ್ ತರಬೇತಿ ಶಾಲೆಯ (Police Training School) ಪ್ರಾಂಶುಪಾಲರೇ ಪ್ರಶಿಕ್ಷಣಾರ್ಥಿಗಳನ್ನು ಬೆದರಿಸಿ ಹಣ ವಸೂಲಿ ಮಾಡ್ತಿದ್ದಾರೆಂಬ ಆರೋಪ (Alligation) ಕೇಳಿಬಂದಿದೆ.

    ಚನ್ನಪಟ್ಟಣ (Channapatna) ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ವಿ.ಶೈಲೇಂದ್ರ ವಿರುದ್ಧ ಇಂತಹದ್ದೊಂದು ಅರೋಪ ಕೇಳಿಬಂದಿದೆ. ತರಬೇತಿ ಶಾಲೆಯಲ್ಲಿ ಮಹಿಳಾ ಪ್ರಶಿಕ್ಷಣಾರ್ಥಿಗಳಿಗೆ ಅಭದ್ರತೆ ಕಾಡುತ್ತಿದ್ದು, ಪ್ರಾಂಶುಪಾಲರ ನಡವಳಿಕೆಯಿಂದ ಆತಂಕದ ವಾತಾವರಣ ನಿರ್ಮಾಣ ಆಗಿದೆ ಪ್ರಶಿಕ್ಷಣಾರ್ಥಿಗಳು ಪಬ್ಲಿಕ್ ಟಿವಿಗೆ ಪತ್ರ ಬರೆದು ಅಳಲು ತೋಡಿಕೊಂಡಿದ್ದಾರೆ. ಪ್ರಾಂಶುಪಾಲರ ವಿಶ್ರಾಂತಿ ಗೃಹದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ತರಬೇತಿ ಶಾಲೆಯ ವಿಶ್ರಾಂತಿ ಗೃಹವನ್ನು ದುರ್ಬಳಕೆ ಮಾಡಿಕೊಳ್ಳಲಾಗ್ತಿದೆ. ಇದಕ್ಕೆ ತರಬೇತಿ ಶಾಲೆಯ ಕರಾಟೆ ಮಾಸ್ಟರ್ ದಿಲೀಪ್ ಮತ್ತು ಮೈಸೂರಿನ ಕುಮಾರ್ ಎಂಬುವವರು ಸಾಥ್ ನೀಡ್ತಿದ್ದಾರೆ ಎಂದು ಮಹಿಳಾ ಪ್ರಶಿಕ್ಷಣಾರ್ಥಿಗಳು ಪಬ್ಲಿಕ್ ಟಿವಿಗೆ ಪತ್ರ ಬರೆದು ಅಸಾಹಯಕತೆ ತೋಡಿಕೊಂಡಿದ್ದಾರೆ. ಇದನ್ನೂ ಓದಿ: PHD ಸಂಶೋಧಕನನ್ನ ಕೊಂದು ಕಾಲುವೆಗೆ ಎಸೆದಿದ್ದ ಸೈಕೋ ಕಿಲ್ಲರ್ – 2 ತಿಂಗಳ ನಂತರ ಕೇಸ್ ಪತ್ತೆ

    ಅಲ್ಲದೇ ತರಬೇತಿ ಪಡೆಯುತ್ತಿರುವ ಪ್ರಶಿಕ್ಷಣಾರ್ಥಿಗಳ ಬೆದರಿಸಿ ಪ್ರಾಂಶುಪಾಲ ವಿ.ಶೈಲೇಂದರ್ ಹಣ ವಸೂಲಿ ಮಾಡಿತ್ತಿರುವುದಾಗಿಯೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಪ್ರಶಿಕ್ಷಣಾರ್ಥಿಗಳಿಗೆ ರಜೆ ನೀಡಲು ಹಣ ನೀಡಬೇಕಂತೆ. ತರಬೇತಿ ಪಡೆಯುತ್ತಿರುವ ಮಾಜಿ ಸೈನಿಕರು ತಿಂಗಳಿಗೆ ಎರಡು ಬಾಟಲ್ ಮದ್ಯ ಹಾಗೂ 3,500 ರೂ. ಹಣ ನೀಡುವಂತೆಯೂ ತಾಕೀತು ಮಾಡುತ್ತಿದ್ದಾರೆ. ಮುಖ್ಯಪೇದೆಗಳಾದ ನಾಗೇಶ್ ಮತ್ತು ನಟರಾಜ್ ಎಂಬುವವರನ್ನು ಬಳಸಿಕೊಂಡು ಪ್ರಾಂಶುಪಾಲರು ಭ್ರಷ್ಟಾಚಾರ ಮಾಡ್ತಿದ್ದಾರೆಂದು ಪ್ರಶಿಕ್ಷಣಾರ್ಥಿಗಳು ಪತ್ರದ ಮೂಲಕ ಗಂಭೀರ ಆರೋಪ ಮಾಡಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಗನಿಂದಲೇ ತಾಯಿಗೆ ಮಹಾಮೋಸ – ಮಂಚದ ಮೇಲೆ ಮಲಗಿಸಿಕೊಂಡು ಕೋರ್ಟ್‍ಗೆ ಕರೆತಂದ ಮಗಳು

    ಪೊಲೀಸ್ ಇಲಾಖೆ ಸೇರುವ ಯುವ ಸಮೂಹಕ್ಕೆ ನೈತಿಕ ಪಾಠ ಮಾಡಬೇಕಾದ ಪ್ರಾಂಶುಪಾಲರೇ ಈ ರೀತಿಯ ನಡವಳಿಕೆ ಪ್ರದರ್ಶನ ಮಾಡ್ತಿರೋದು ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ವ್ಯವಸ್ಥೆಯಲ್ಲಿ ತರಬೇತಿ ಪಡೆಯುವ ಪ್ರಶಿಕ್ಷಣಾರ್ಥಿಗಳು ಸಮಾಜಕ್ಕೆ ಯಾವ ರೀತಿ ಕೊಡುಗೆ ನೀಡಬಹುದು ಎಂಬ ಪ್ರಶ್ನೆ ಎದುರಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪೊಲೀಸ್ ತರಬೇತಿ ಶಾಲೆಯಲ್ಲಿ ಯುವಕ ಆತ್ಮಹತ್ಯೆ

    ಪೊಲೀಸ್ ತರಬೇತಿ ಶಾಲೆಯಲ್ಲಿ ಯುವಕ ಆತ್ಮಹತ್ಯೆ

    ಧಾರವಾಡ: ಪೊಲೀಸ್ ತರಬೇತಿ ಶಾಲೆಯಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ನಡೆಡಿದೆ.

    ಬೋರಗಿ ಗ್ರಾಮದ ನಿವಾಸಿ ಮನೋಹರ ಕೊಟಾರಗಸ್ತಿ(24) ನೇಣಿಗೆ ಶರಣಾದ ಯುವಕ. ಮನೋಹರ ಪೊಲೀಸ್ ತರಬೇತಿ ಶಾಲೆಯಲ್ಲಿ ಪ್ರಶಿಕ್ಷಣಾರ್ಥಿಯಾಗಿದ್ದನು. ಗುರುವಾರದಂದು ಶಾಲೆಯ ಆವರಣದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಆತ್ಮಹತ್ಯೆಗೂ ಮುನ್ನ ಮನೋಹರ್ ಡೇತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೆ ಇಬ್ಬರ ಪ್ರೀತಿ ವಿಷಯ ತಿಳಿದು ಯುವತಿಯ ಮನೆಯವರು ಮನೋಹರ್ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಡೆತ್‍ನೋಟ್‍ನಲ್ಲಿ ಪ್ರಸ್ತಾಪಿಸಿದ್ದಾನೆ. ಅಲ್ಲದೆ ಯುವತಿಯ ಹೆಸರಿನಲ್ಲೇ 22 ಪುಟಗಳ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಈ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv