Tag: police staion

  • ವ್ಯಕ್ತಿಗೆ ಚಾಕು ಇರಿತ – ರಕ್ತಸಿಕ್ತ ಪರಿಸ್ಥಿತಿಯಲ್ಲೇ ಠಾಣೆಗೆ ಬಂದ

    ವ್ಯಕ್ತಿಗೆ ಚಾಕು ಇರಿತ – ರಕ್ತಸಿಕ್ತ ಪರಿಸ್ಥಿತಿಯಲ್ಲೇ ಠಾಣೆಗೆ ಬಂದ

    ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವನಿಗೆ ಚಾಕು ಇರಿತವಾಗಿದ್ದು, ಹಲ್ಲೆಗೊಳಗಾದ ವ್ಯಕ್ತಿ ರಕ್ತಸಿಕ್ತ ಪರಿಸ್ಥಿತಿಯಲ್ಲೇ ಹಳೆ ಹುಬ್ಬಳ್ಳಿ ಪೊಲೀಸ್‌ ಠಾಣೆಗೆ ಬಂದ ಘಟನೆ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ.

    ಕರ್ಜಗಿ ಓಣಿಯ ನಿವಾಸಿ ಮಹಮ್ಮದ್ ಹಲ್ಲೆಗೊಳಗಾಗಿದ್ದು, ಇರ್ಫಾನ್ ಎಂಬಾತನಿಂದ ಚಾಕು ಇರಿತವಾಗಿದೆ. ಕಸಬಾ ಠಾಣಾ ವ್ಯಾಪ್ತಿಯ ಕೊತಂಬರಿ ಆಟೋ ಸ್ಟ್ಯಾಂಡ್ ಬಳಿ ಈ ಘಟನೆ ನಡೆದಿದೆ. ಆಟೋ ಸ್ಟ್ಯಾಂಡ್ (Auto Stand) ಬಳಿ ಮಹಮ್ಮದ್ ನಿಂತಿದ್ದಾಗ ಜಗಳ ತೆಗೆದ ಇರ್ಫಾನ್ ಮಹಮ್ಮದ್ ಎದೆಗೆ ಚಾಕು ಇರಿದು ಪರಾರಿಯಾಗಿದ್ದಾನೆ. ಇದನ್ನೂ ಓದಿ: ಸಿದ್ದರಾಮೋತ್ಸವಕ್ಕೆ ದುಡ್ಡನ್ನು ಸಿದ್ದರಾಮಯ್ಯ ಅವರ ಅಪ್ಪನ ಮನೆಯಿಂದ ತಂದ್ರಾ: ಕಟೀಲ್ ಪ್ರಶ್ನೆ

    ಘಟನೆ ಬಳಿಕ ಸೀದಾ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ (Police Station) ಮಹಮ್ಮದ್ ಬಂದಿದ್ದಾನೆ. ಮಹಮ್ಮದ್ ಎದೆಯಿಂದ ರಕ್ತ ಸುರಿಯುತ್ತಿದ್ದ ಹಿನ್ನೆಲೆ ಮಾಹಿತಿ ಪಡೆದ ಪೊಲೀಸರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಕಸಬಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಸಾವಿರಾರು ಪಿಎಫ್‌ಐ ಉಗ್ರರಿಗೆ ಸಿದ್ದರಾಮಯ್ಯ ಸರ್ಕಾರದಿಂದ ಕ್ಷಮಾದಾನ: ಸುನಿಲ್ ಕುಮಾರ್

    Live Tv
    [brid partner=56869869 player=32851 video=960834 autoplay=true]

  • 7 ಮಕ್ಕಳ ತಾಯಿ ಜೊತೆ ಲವ್ – 22ರ ಯುವಕನ ಮೇಲೆ ಬಿತ್ತು ಕೇಸ್

    7 ಮಕ್ಕಳ ತಾಯಿ ಜೊತೆ ಲವ್ – 22ರ ಯುವಕನ ಮೇಲೆ ಬಿತ್ತು ಕೇಸ್

    – 60 ವರ್ಷದ ಮಹಿಳೆಯ ಜೊತೆ ಪ್ರೇಮಾಂಕುರ
    – ನಾನು ಯುವಕನನ್ನು ಮದ್ವೆ ಆಗ್ತೀನಿ ಎಂದ ಮಹಿಳೆ
    – ಪತಿ, ಮಕ್ಕಳಿಂದ ಯುವಕನ ವಿರುದ್ಧ ದೂರು

    ಲಕ್ನೋ: ಪ್ರೀತಿ ಯಾರ ಮೇಲೆ ಹೇಗೆ ಬೇಕಾದರೂ ಆಗಬಹುದು. ಆದರೆ ಹೀಗೂ ಪ್ರೀತಿ ಆಗುತ್ತಾ ಎಂದು ಕೇಳಿದರೆ ನಿಮಗೆ ಶಾಕ್ ಆಗಬಹುದು. 7 ಮಕ್ಕಳ ತಾಯಿಗೆ 22 ವರ್ಷದ ಯುವಕನ ಮೇಲೆ ಪ್ರೀತಿಯಾಗಿದೆ. ಪ್ರೀತಿ ವಿಚಾರ ತಿಳಿಯುತ್ತಿದ್ದಂತೆ ಮನೆಯಲ್ಲಿ ಹೈಡ್ರಾಮಾ ನಡೆದಿದ್ದು ಪ್ರಕರಣ ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

    22 ವರ್ಷದ ಯುವಕ 7 ಮಕ್ಕಳು ಹಾಗೂ 7 ಮೊಮ್ಮಕ್ಕಳು ಇರುವ ಮಹಿಳೆಯನ್ನು ಪ್ರೀತಿಸುತ್ತಿದ್ದನು. ಮಹಿಳೆಯ ಪತಿ ಹಾಗೂ ಆಕೆಯ ಮಗ ಉತ್ತರ ಪ್ರದೇಶದ ಆಗ್ರಾದ ಪೊಲೀಸ್ ಠಾಣೆಗೆ ಬಂದು ಯುವಕನ ವಿರುದ್ಧ ಪ್ರಕರಣ ದಾಖಲಾದಾಗ ಪ್ರೀತಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: ವಧುವಿನ ತಾಯಿಯ ಜೊತೆ ವರನ ತಂದೆ ಪರಾರಿ- ಯುವ ಪ್ರೇಮಿಗಳ ಮದುವೆ ರದ್ದು

    ಪೊಲೀಸ್ ಠಾಣೆಗೆ ಯುವಕ ತನ್ನ ಕುಟುಂಬಸ್ಥರೊಂದಿಗೆ ಬಂದಿದ್ದನು. ಈ ವೇಳೆ ಯುವಕನ ಕುಟುಂಬಸ್ಥರಿಗೂ ಹಾಗೂ ಮಹಿಳೆಯ ಕುಟುಂಬಸ್ಥರಿಗೂ ವಾಗ್ವಾದ ನಡೆದಿದೆ. ಬಳಿಕ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. ಮಹಿಳೆ ಹಾಗೂ ಯುವಕ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ಇಷ್ಟಪಟ್ಟಿದ್ದಾರೆ. ಇದನ್ನೂ ಓದಿ: 60ರ ವೃದ್ಧೆ ಜೊತೆ 20ರ ಯುವಕನ ಮದುವೆ

    ಪೊಲೀಸರು ಯುವಕನಿಗೆ, ಈ ಪ್ರೀತಿಯನ್ನು ಯಾರು ಒಪ್ಪುವುದಿಲ್ಲ. ನಿನ್ನ ನಿರ್ಧಾರವನ್ನು ಬದಲಿಸಿಕೋ ಎಂದು ಹೇಳಿ ಇಬ್ಬರಿಗೆ ಪ್ರೀತಿಯನ್ನು ಮುಂದುವರಿಸಬೇಡಿ ಎಂದು ಬುದ್ಧಿವಾದ ಹೇಳಿದ್ದಾರೆ. ಆದರೆ ಮಹಿಳೆ ಹಾಗೂ ಯುವಕ ಪೊಲೀಸರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿ ವಿರೋಧ ವ್ಯಕ್ತಪಡಿಸಿ ನಾವಿಬ್ಬರು ಮದುವೆ ಆಗುತ್ತೇವೆ ಎಂದು ಹಠ ಹಿಡಿದಿದ್ದಾರೆ. ಇದನ್ನೂ ಓದಿ: ಹನಿಮೂನ್ ಮುಗಿಸಿ ಬಂದ ಮಗ್ಳ ಪತಿಯನ್ನೇ ಮದ್ವೆಯಾದ ತಾಯಿ

    ಮಹಿಳೆ ಹಾಗೂ ಯುವಕ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಪೊಲೀಸರು ಯುವಕನ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಬಳಿಕ ಮಹಿಳೆ ಯುವಕನನ್ನು ಜಾಮೀನಿನ ಮೂಲಕ ಪೊಲೀಸ್ ಠಾಣೆಯಿಂದ ಹೊರ ಕರೆದುಕೊಂಡು ಬಂದಿದ್ದಾರೆ. ಪ್ರೇಮಿಗಳ ಈ ನಡೆಯನ್ನು ನೋಡಿದ ಪೊಲೀಸರು ಶಾಕ್ ಆಗಿದ್ದಾರೆ. ಇಷ್ಟೆಲ್ಲ ಪ್ರಸಂಗ ನಡೆದು ಮುಂದೆ ಏನಾಯ್ತು ಎನ್ನುವುದರ ಬಗ್ಗೆ ವರದಿ ಪ್ರಕಟವಾಗಿಲ್ಲ.

  • ರಾಯಚೂರಿನ ಗಬ್ಬೂರು ಪೊಲೀಸ್ ಠಾಣೆ ಈಗ ರಾಜ್ಯದಲ್ಲೇ ನಂ. 1

    ರಾಯಚೂರಿನ ಗಬ್ಬೂರು ಪೊಲೀಸ್ ಠಾಣೆ ಈಗ ರಾಜ್ಯದಲ್ಲೇ ನಂ. 1

    -ದೇಶದ ಅತ್ಯುತ್ತಮ ಪೊಲೀಸ್ ಠಾಣೆ ಪಟ್ಟಿಯಲ್ಲಿ 17ನೇ ಸ್ಥಾನ
    -ಕೇಂದ್ರ ಗೃಹ ಸಚಿವಾಲಯ ಸಮೀಕ್ಷೆಯಲ್ಲಿ ಅತ್ಯುತ್ತಮ ರ‌್ಯಾಂಕ್

    ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಪೊಲೀಸ್ ಠಾಣೆ ಈಗ ರಾಜ್ಯದಲ್ಲೇ ಅತ್ಯುತ್ತಮ ಪೊಲೀಸ್ ಠಾಣೆ ಎನ್ನುವ ಹೆಗ್ಗಳಿಕೆಯನ್ನ ಗಳಿಸಿದೆ. ಕೇಂದ್ರ ಗೃಹ ಸಚಿವಾಲಯ ಈ ವರ್ಷ ನಡೆಸಿದ ಸಮೀಕ್ಷೆಯಲ್ಲಿ ಗಬ್ಬೂರು ಠಾಣೆಗೆ ಉತ್ತಮ ರ‌್ಯಾಂಕ್ ಸಿಕ್ಕಿದೆ. ರಾಜ್ಯಕ್ಕೆ ನಂ. 1 ಆದರೆ ದೇಶಕ್ಕೆ 17ನೇ ಅತ್ಯುತ್ತಮ ಜನ ಸ್ನೇಹಿ ಪೊಲೀಸ್ ಠಾಣೆ ಎನ್ನುವ ಗರಿಮೆ ಪಡೆದಿದೆ.

    ಬ್ಯೂರೋ ಆಫ್ ಪೊಲೀಸ್ ರೀಸರ್ಚ್ ಆ್ಯಂಡ್ ಡೆವೆಲಪ್ಮೆಂಟ್ ನೀಡಿದ ಮಾನದಂಡಗಳ ಆಧಾರದ ಮೇಲೆ 2019ರ ಅಕ್ಟೋಬರ್ ನಲ್ಲಿ ಗ್ರ್ಯಾಂಟ್ ತೋರಟನ್ ಇಂಡಿಯಾ ಲಿಮಿಟೆಡ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಗಬ್ಬೂರು ಠಾಣೆ ರ‌್ಯಾಂಕ್ ಪಡೆದಿದೆ. 2015ರಲ್ಲಿ ಗುಜರಾತಿನ ಕಚ್‍ನಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಪ್ರಧಾನ ಮಂತ್ರಿಗಳ ನಿರ್ದೇಶನದಂತೆ ಕಾರ್ಯಕ್ಷಮತೆ ಆಧಾರದ ಮೇಲೆ ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಸಮೀಕ್ಷೆ ನಡೆದಿದೆ.

    ಅಪರಾಧ ತಡೆ, ಮಹಿಳಾ ಮತ್ತು ಮಕ್ಕಳ ಸುರಕ್ಷತೆ, ತನಿಖೆಯ ಗುಣಮಟ್ಟ, ಕಾನೂನು ಸುವ್ಯವಸ್ಥೆ, ಸಾರ್ವಜನಿಕರಿಗೆ ಪೊಲೀಸ್ ಲಭ್ಯತೆ, ಪೊಲೀಸ್ ಸಿಬ್ಬಂದಿ ವರ್ತನೆ, ರಸ್ತೆ ಸುರಕ್ಷತೆ ಕ್ರಮಕ್ಕೆ ಸಂಬಂಧಿಸಿದ ಸಮೀಕ್ಷೆಗೆ ಶೇ. 80 ಅಂಕ. ಸಾರ್ವಜನಿಕರ ಅಭಿಪ್ರಾಯ ಠಾಣೆಯಲ್ಲಿನ ವ್ಯವಸ್ಥೆ, ಸ್ವಚ್ಛತೆಗೆ ಶೇ. 20 ಅಂಕ ನಿಗದಿ ಮಾಡಲಾಗಿರುತ್ತದೆ.

    ದೇಶದ 15, 579 ಠಾಣೆಗಳ ಪೈಕಿ ಮೊದಲ ಹಂತದ ಸಮೀಕ್ಷೆ ನಡೆಸಿ ರಾಜ್ಯದ ಮೂರು ಠಾಣೆಗಳಂತೆ 79 ಪೊಲೀಸ್ ಠಾಣೆಗಳನ್ನು ಗುರುತಿಸಿ ಅವುಗಳ ಕಾರ್ಯಕ್ಷಮತೆ, ಕಟ್ಟಡ ಸೌಲಭ್ಯ, ಸಾರ್ವಜನಿಕರೊಂದಿಗಿನ ಸಂಪರ್ಕದ ಆಧಾರದ ಮೇಲೆ ಗಬ್ಬೂರು ಪೊಲೀಸ್ ಠಾಣೆಯನ್ನು ರಾಜ್ಯದ ನಂ. 1 ಠಾಣೆ ಎಂದು ರ‌್ಯಾಂಕ್ ನೀಡಲಾಗಿದೆ.

    ಗಬ್ಬೂರು ಪೊಲೀಸ್ ಠಾಣೆಗೆ ನಂ. 1 ಗರಿ ಬಂದಿದ್ದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ, ಠಾಣೆ ಪಿಎಸ್ ಐ ರಂಗಯ್ಯ ಖುಷಿ ವ್ಯಕ್ತಪಡಿಸಿದ್ದಾರೆ.