Tag: police raid

  • ಮೈಸೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ; ಇಬ್ಬರು ಮಹಿಳೆಯರು ಸೇರಿ 6 ಜನ ವಶಕ್ಕೆ

    ಮೈಸೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ; ಇಬ್ಬರು ಮಹಿಳೆಯರು ಸೇರಿ 6 ಜನ ವಶಕ್ಕೆ

    – 30 ದಿನಗಳಿಗೊಮ್ಮೆ ಮನೆ ಬದಲಿಸಿ ವೇಶ್ಯಾವಾಟಿಕೆ

    ಮೈಸೂರು: ವೇಶ್ಯಾವಾಟಿಕೆ (Prostitution) ನಡೆಯುತಿದ್ದ ಮನೆಯ ಮೇಲೆ ಪೊಲೀಸರು ದಾಳಿ ಮಾಡಿ 6 ಜನ ಪುರುಷರು, ಇಬ್ಬರು ಮಹಿಳೆಯರನ್ನ ವಶಕ್ಕೆ ಪಡೆದಿರುವ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ.

    ಮೈಸೂರು ತಾಲೂಕಿನ ದಾಸನಕೊಪ್ಪಲು ಗ್ರಾಮದ ಮನೆಯಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ (Police Raid) ನಡೆಸಿದ್ದಾರೆ. ಈ ವೇಳೆ 6 ಜನ ಪುರುಷರು ಇಬ್ಬರು ಮಹಿಳೆಯರು ಸಿಕ್ಕಿಬಿದ್ದಿದ್ದಾರೆ. ಮತ್ತೊಬ್ಬ ಮುಖ್ಯ ಆರೋಪಿ ಮಂಜು ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಕಾಂತಾರ ಚಾಪ್ಟರ್‌-1 ಪೋಸ್ಟರ್‌ ವಿಶೇಷತೆ ಏನು? – ರಿಷಬ್ ಶೆಟ್ಟಿ ಹುಟ್ಟುಹಬ್ಬಕ್ಕೆ ಬಿಗ್‌ ಅಪ್ಡೇಟ್‌

    ಬಂಧಿತರು ಇಬ್ಬರು ಹೆಣ್ಣು ಮಕ್ಕಳನ್ನು ಕರೆದಂದು ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಆರೋಪಿಗಳು 30 ದಿನಗಳಿಗೆ ಒಮ್ಮೆ ಮನೆ ಬದಲಾಯಿಸಿ ವೇಶ್ಯಾವಾಟಿಗೆ ದಂಧೆ ನಡೆಸುತ್ತಿದ್ದರು. ಬೇರೆ ಬೇರೆ ಕಡೆಗಳಿಂದ ಯುವತಿಯರಿಗೆ ಹಣ ಕೊಟ್ಟು ಕರೆಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಇದನ್ನೂ ಓದಿ: ರೀಲ್ಸ್ ಹುಚ್ಚು ಹೃದಯಕ್ಕೆ ತರ್ತಿದ್ಯಾ ಕುತ್ತು? – ಮೊಬೈಲ್ ವಿಕಿರಣದಿಂದಲೂ ಹೃದಯಕ್ಕೆ ಘಾಸಿ ಆಗ್ತಿದ್ಯಾ?

    ಪೊಲೀಸರು ಖಚಿತ ಮಾಹಿತಿ ತಿಳಿದು ದಾಳಿ ಮಾಡಿದ ವೇಳೆ ರೆಡ್ ಹ್ಯಾಂಡ್ ಆಗಿ ಇಬ್ಬರು ಯುವತಿಯರು 6 ಪುರುಷರು ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: 100 ವರ್ಷಗಳಲ್ಲಿ ಇದೇ ಮೊದಲು – ಟೆಕ್ಸಾಸ್‌ನಲ್ಲಿ ಭೀಕರ ಪ್ರವಾಹಕ್ಕೆ 78 ಮಂದಿ ಬಲಿ, 41 ಜನ ಮಿಸ್ಸಿಂಗ್‌

  • ಬೆಂಗಳೂರಿನ 17ಕ್ಕೂ ಹೆಚ್ಚು ಡ್ಯಾನ್ಸ್‌ ಬಾರ್‌ಗಳ ಮೇಲೆ ಪೊಲೀಸರ ದಿಢೀರ್‌ ದಾಳಿ

    ಬೆಂಗಳೂರಿನ 17ಕ್ಕೂ ಹೆಚ್ಚು ಡ್ಯಾನ್ಸ್‌ ಬಾರ್‌ಗಳ ಮೇಲೆ ಪೊಲೀಸರ ದಿಢೀರ್‌ ದಾಳಿ

    ಬೆಂಗಳೂರು: ನಗರದ (Bengaluru) ಹಲವು ಡ್ಯಾನ್ಸ್ ಬಾರ್‌ಗಳಲ್ಲಿ (Dance Bars) ನಿಯಮ ಉಲ್ಲಂಘನೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರು (Police) ದಿಢೀರ್‌ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

    ನಗರದ್ಯಾಂತ ಸುಮಾರು 17ಕ್ಕೂ ಹೆಚ್ಚು ಡ್ಯಾನ್ಸ್ ಬಾರ್‌ಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಉಪ್ಪಾರಪೇಟೆ, ಕಬ್ಬನ್ ಪಾರ್ಕ್ , ಅಶೋಕ ನಗರ, ಎಸ್.ಜೆ.ಪಾರ್ಕ್ ಸೇರಿ ಅನೇಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಲಾಗಿದೆ. ಯುವತಿಯರು ಅರೆಬರೆ ಬಟ್ಟೆ ತೊಟ್ಟು ಡ್ಯಾನ್ಸ್, ಸಮಯ ಮೀರಿ ಓಪನ್, ಸೇರಿದಂತೆ ಹಲವು ನಿಯಮಗಳ ಉಲ್ಲಂಘನೆ ಆರೋಪ ಕೇಳಿ ಬಂದ ಹಿನ್ನೆಲೆ ಈ ದಾಳಿ ನಡೆದಿದೆ. ಇದನ್ನೂ ಓದಿ: ಮಗುವಿಗೆ ಜನ್ಮ ನೀಡಿ ರಕ್ತಸ್ರಾವದಿಂದ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಯುವತಿ ಸಾವು

    ದಾಳಿ ನಡೆದ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ: ಇಸ್ರೇಲ್-ಇರಾನ್ ಸಂಘರ್ಷ; 18 ಕನ್ನಡಿಗರು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್

  • ಅಕ್ರಮ ಹಣ ಸಾಗಾಟ ಆರೋಪ – ಸಚಿವ ಜಮೀರ್‌ ಇದ್ದ ಹೋಟೆಲ್ ಮೇಲೆ ಹೈದರಾಬಾದ್‌ ಪೊಲೀಸ್‌ ದಾಳಿ!

    ಅಕ್ರಮ ಹಣ ಸಾಗಾಟ ಆರೋಪ – ಸಚಿವ ಜಮೀರ್‌ ಇದ್ದ ಹೋಟೆಲ್ ಮೇಲೆ ಹೈದರಾಬಾದ್‌ ಪೊಲೀಸ್‌ ದಾಳಿ!

    ಬೆಂಗಳೂರು: ಸಚಿವ ಜಮೀರ್‌ ಅಹ್ಮದ್‌ ಖಾನ್‌ (Zameer Ahmed Khan )ಇದ್ದ ಹೋಟೆಲ್‌ ಮೇಲೆ ಹೈದರಾಬಾದ್‌ ಪೊಲೀಸರು (Hyderabad Police) ದಾಳಿ ನಡೆಸಿರುವ ಘಟನೆ ತಡರಾತ್ರಿ ನಡೆದಿದೆ.

    ಅಕ್ರಮವಾಗಿ ಹಣ ಸಾಗಾಟ ಆರೋಪದ ಹಿನ್ನೆಲೆಯಲ್ಲಿ ಜಮೀರ್‌ ವಾಸ್ತವ್ಯವಿದ್ದ ಹೈದರಾಬಾದ್‌ ನಗರದ ಪಾರ್ಕ್‌ ಹಯಾತ್‌ ಹೋಟೆಲ್‌ (Park Hyatt Hotel) ಮೇಲೆ ಪೊಲೀಸರು ಇದ್ದಕ್ಕಿದ್ದಂತೆ ದಾಳಿ ನಡೆಸಿದ್ದಾರೆ. ಮಧ್ಯರಾತ್ರಿ ದಾಳಿ ನಡೆಸಿ ಜಮೀರ್ ಕೊಠಡಿ ಮತ್ತು ಬೆಂಬಲಿಗರ ಕೊಠಡಿಗಳನ್ನ ಪರಿಶೀಲಿಸಿದ್ದಾರೆ.

    ಈ ದಾಳಿ ಕುರಿತು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ಸಚಿವ ಜಮೀರ್‌, ನಾನು ಉಳಿದುಕೊಂಡಿರುವ ಹೈದರಾಬಾದ್‌ ನಗರದ ಪಾರ್ಕ್‌ ಹಯಾತ್‌ ಹೋಟೆಲ್‌ ಮೇಲೆ ಪೊಲೀಸರು ದಾಳಿ ನಡೆಸಿದರು. ಆದ್ರೆ ಯಾವುದೇ ಸಾಕ್ಷ್ಯಗಳೂ ಸಿಗದೇ ಹಿಂದಿರುಗಿದರು. ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದೆ. ಇದರಿಂದ ಕೇಂದ್ರ ಬಿಜೆಪಿ (BJP) ಮತ್ತು ರಾಜ್ಯದ ಬಿಆರ್‌ಎಸ್‌ (BRS) ಸರ್ಕಾರ ಹತಾಶೆಗೊಂಡಿದ್ದು, ಜಂಟಿ ರಾಜಕೀಯ ದಾಳಿ ನಡೆಸಿವೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಉಗ್ರರ ವಿರುದ್ಧ ಎನ್‌ಕೌಂಟರ್‌ – ಕರ್ನಾಟಕ ಮೂಲದ ಕ್ಯಾಪ್ಟನ್‌ ಸೇರಿ ನಾಲ್ವರು ಯೋಧರು ಹುತಾತ್ಮ

    ಈ ದಾಳಿಯು ನಮ್ಮನ್ನು ಹೆದರಿಸಿ ಹಿಮ್ಮೆಟ್ಟಿಸುವ ಕುತಂತ್ರವಾಗಿದೆ, ಇದಕ್ಕೆಲ್ಲ ನಾವು ಹೆದರಲ್ಲ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಸುರಂಗದಲ್ಲಿ ಸಿಲುಕಿದವರ ಹೊರತರಲು ಕ್ಷಣಗಣನೆ – ಆರೈಕೆಗೆ ಆಸ್ಪತ್ರೆ ರೆಡಿ 

  • ಮಿಡ್‌ನೈಟ್ ಆಪರೇಷನ್, ವೇಶ್ಯಾವಾಟಿಕೆಯಲ್ಲಿ ಭಾಗಿ ಶಂಕೆ – ಸಿನಿಮಿಯ ರೀತಿಯಲ್ಲಿ ವಿದೇಶಿಗರ ಬಂಧನ

    ಮಿಡ್‌ನೈಟ್ ಆಪರೇಷನ್, ವೇಶ್ಯಾವಾಟಿಕೆಯಲ್ಲಿ ಭಾಗಿ ಶಂಕೆ – ಸಿನಿಮಿಯ ರೀತಿಯಲ್ಲಿ ವಿದೇಶಿಗರ ಬಂಧನ

    ಬೆಂಗಳೂರು: ವಾರಾಂತ್ಯದಲ್ಲಿ ಬೆಂಗಳೂರಿನ (Bengaluru) ವಿವಿಧೆಡೆ ಮಿಡ್‌ನೈಟ್ ಆಪರೇಷನ್ ನಡೆಸಿದ ಖಾಕಿ ಪಡೆ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿದ್ದ ವಿದೇಶಿಗರನ್ನು ಸಿನಿಮಿಯ ರೀತಿಯಲ್ಲಿ ಬಂಧಿಸಿರುವ ಘಟನೆ ನಡೆಸಿದೆ.

    ಎಂ.ಜಿ ರಸ್ತೆ, ಬ್ರಿಗೆಡ್ ರಸ್ತೆಯಲ್ಲಿ (Brigade Road) ದಾಳಿ ಮಾಡಿದ ಕೇಂದ್ರ ವಿಭಾಗದ ಪೊಲೀಸರು (Police) ಆಫ್ರಿಕನ್ ಪ್ರಜೆಗಳ ಆಟಟೋಪಕ್ಕೆ ಬ್ರೇಕ್ ಹಾಕಿದ್ದಾರೆ. ವೇಶ್ಯಾವಾಟಿಕೆ, ಡ್ರಗ್ಸ್‌ ದಂದೆ ಸೇರಿದಂತೆ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾದ ಶಂಕೆ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದು ಹಲವರನ್ನ ಬಂಧಿಸಲಾಗಿದೆ. ಇದನ್ನೂ ಓದಿ: ಹೆಡ್‍ಕಾನ್ಸ್ಟೇಬಲ್ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಲೆಗೈದಿದ್ದ ಆರೋಪಿ ಕಾಲಿಗೆ ಗುಂಡು ಹಾರಿಸಿದ ಪೊಲೀಸರು

    ಎಂ.ಜಿ ರಸ್ತೆ, ಬ್ರಿಗೆಡ್ ರಸ್ತೆಯಲ್ಲಿ ನಿಂತು ಗ್ರಾಹಕರನ್ನ ಸೆಳೆಯುತ್ತಿದ್ದವರನ್ನ ಸಿನಿಮಿಯು ರೀತಿಯಲ್ಲಿ ಅಟ್ಟಾಡಿಸಿ ಖಾಕಿ ಪಡೆ ಲಾಕ್ ಮಾಡಿದೆ. ಒಟ್ಟು 55 ವಿದೇಶಿ ಪ್ರಜೆಗಳನ್ನ ಬಂಧಿಸಿದ್ದು, ಅವರಲ್ಲಿ 25ಕ್ಕೂ ಹೆಚ್ಚು ಮಂದಿ ಮಹಿಳೆಯರು (Foreign Women) ಇದ್ದಾರೆ. ಬಂಧಿಸಿದ ಬಳಿಕ ಆಫ್ರಿಕನ್ ಪ್ರಜೆಗಳಿಗೆ ಮೆಡಿಕಲ್ ಮತ್ತು ನಾರ್ಕೊಟಿಕ್ ಟೆಸ್ಟ್ ಮಾಡಿಸಲಾಗಿದೆ. ಇದನ್ನೂ ಓದಿ: 15 ದಿನಗಳ ಹಿಂದಷ್ಟೇ ಡಿವೋರ್ಸ್- ಪತ್ನಿಯನ್ನು ಕೊಲ್ಲಲು ಪಿಸ್ತೂಲ್ ಖರೀದಿಸಿ ಅರೆಸ್ಟ್ ಆದ!

    ಆಫ್ರಿಕನ್ ಮಹಿಳೆಯರ ಹೈಡ್ರಾಮಾ:
    ಪೊಲೀಸರು ವಶಕ್ಕೆ ಪಡೆಯುವ ವೇಳೆ ವಿದೇಶಿ ಯುವತಿಯರು ಭಾರೀ ಹೈಡ್ರಾಮಾ ಕ್ರಿಯೇಟ್ ಮಾಡಿದ್ದಾರೆ. ಮದ್ಯದ ನಶೆಯಲ್ಲಿ ಪಬ್‌ನಿಂದ ಹೊರ ಬರ್ತಿದ್ದಂತೆ ಕೆಲ ಯುವತಿಯರು ಖಾಕಿ ಜೊತೆಗೆ ಕಿರಿಕ್ ತೆಗೆದಿದ್ದಾರೆ. ಬಾಯಿ ಬಡಿದುಕೊಂಡು ಚೀರಾಟ ನಡೆಸಿದ್ದಾರೆ. ಕುಡಿದ ಅಮಲಿನಲ್ಲಿ ಕ್ಯಾಮೆರಾ ಚಿತ್ರೀಕರಣಕ್ಕೂ ಅಡ್ಡಿಪಡಿಸಿದ್ದಾರೆ. ಇನ್ನೂ ಕೆಲವರು ಪೊಲೀಸರು ಹತ್ತಿರ ಬರುತ್ತಿದ್ದಂತೆ ದಿಕ್ಕಾಪಾಲಾಗಿ ಓಡಲು ಯತ್ನಿಸಿದ್ದು, ಬೆರಳೆಣಿಕೆಯಷ್ಟು ಮಹಿಳೆಯರು ಎಸ್ಕೇಪ್ ಆಗಿದ್ದಾರೆ. ಉಳಿದ ಮಹಿಳೆಯರನ್ನ ಸಮಾಧಾನ ಮಾಡಿ ವಶಕ್ಕೆ ಪಡೆಯುವಷ್ಟರಲ್ಲಿ ಪೊಲೀಸರು ಹೈರಾಣಾಗಿದ್ದಾರೆ.

    60 ಮಂದಿ ಖಾಕಿ ಪಡೆ ಕಾರ್ಯಾಚರಣೆ:
    ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ ಗೌಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಕಾರ್ಯಚರಣೆಯಲ್ಲಿ ಓರ್ವ ಡಿಸಿಪಿ, ಇಬ್ಬರು ಎಸಿಪಿ, 6 ಮಂದಿ ಇನ್ಸ್ಪೆಕ್ಟರ್, 10 ಮಂದಿ ಪಿಎಸ್‌ಐ, 20 ಮಹಿಳಾ ಸಿಬ್ಬಂದಿ, 20 ಪುರುಷ ಸಿಬ್ಬಂದಿಯಿAದ ಯಶಸ್ವಿ ಕಾರ್ಯಾಚರಣೆ ನಡೆದಿದೆ. ಡಿಸಿಪಿ ಶ್ರೀನಿವಾಸಗೌಡ ನೇತೃತ್ವದ ತಂಡ ಏಕಕಾಲದಲ್ಲಿ ಮೂರು ಕಡೆಗಳಿಂದ ದಾಳಿ ನಡೆಸಿದೆ. ಎಂ.ಜಿ ರಸ್ತೆಯಿಂದ ಒಂದು ತಂಡ, ಚರ್ಚ್ ಸ್ಟ್ರೀಟ್ ನಿಂದ ಒಂದು ತಂಡ, ಬ್ರಿಗೇಡ್ ರಸ್ತೆ ಜಂಕ್ಷನ್ ನಿಂದ ಫೀಲ್ಡಿಗಿಳಿದು ಆಪರೇಷನ್ ನಡೆಸಿ, ವಿದೇಶಿಗರನ್ನ ಬಂಧಿಸುವಲ್ಲಿ ತಂಡ ಯಶಸ್ವಿಯಾಗಿದೆ.

  • ಬೆಳ್ಳಂಬೆಳಗ್ಗೆ ಹಾಸನ ಕಾರಾಗೃಹದ ಮೇಲೆ ಪೊಲೀಸರಿಂದ ದಾಳಿ – ಮೊಬೈಲ್ ಫೋನ್, ಗಾಂಜಾ ಪತ್ತೆ

    ಬೆಳ್ಳಂಬೆಳಗ್ಗೆ ಹಾಸನ ಕಾರಾಗೃಹದ ಮೇಲೆ ಪೊಲೀಸರಿಂದ ದಾಳಿ – ಮೊಬೈಲ್ ಫೋನ್, ಗಾಂಜಾ ಪತ್ತೆ

    ಹಾಸನ: ಗುರುವಾರ ಬೆಳ್ಳಂಬೆಳಗ್ಗೆ ಜಿಲ್ಲಾ ಕಾರಾಗೃಹದ (Hassan Prison) ಮೇಲೆ ಪೊಲೀಸರು ದಾಳಿ (Police Raid) ನಡೆಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಪೊಲೀಸರಿಂದ ದಾಳಿ ನಡೆಸಲಾಗಿದ್ದು, ಈ ವೇಳೆ ಮೊಬೈಲ್ ಫೋನ್, ಗಾಂಜಾ ಪತ್ತೆಯಾಗಿದೆ.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಎಎಸ್‌ಪಿ ತಮ್ಮಯ್ಯ, ಡಿವೈಎಸ್‌ಪಿ ಉದಯ್‌ಭಾಸ್ಕರ್ ನೇತೃತ್ವದಲ್ಲಿ 15 ಜನ ಪೊಲೀಸ್ ಅಧಿಕಾರಿಗಳು, 100ಕ್ಕೂ ಹೆಚ್ಚು ಪೊಲೀಸರು ಮುಂಜಾನೆ 5:45ರ ಸುಮಾರಿನಲ್ಲಿ ದಾಳಿ ನಡೆಸಿದ್ದಾರೆ.

    ಜಿಲ್ಲಾ ಕಾರಾಗೃಹದಲ್ಲಿ 328 ಪುರುಷ ವಿಚಾರಣಾಧೀನ ಖೈದಿಗಳು, 17 ಮಹಿಳಾ ವಿಚಾರಣಾಧೀನ ಖೈದಿಗಳಿದ್ದು ಒಂದೂವರೆ ಗಂಟೆಗೂ ಹೆಚ್ಚು ಕಾಲ ಜೈಲಿನೊಳಗೆ ಶೋಧಕಾರ್ಯ ನಡೆಸಿದ್ದಾರೆ. ವಿಚಾರಣಾಧೀನ ಖೈದಿಗಳ ಕೊಠಡಿಗಳ ತಪಾಸಣೆ ವೇಳೆ 2 ಮೊಬೈಲ್, ಗಾಂಜಾ ಪ್ಯಾಕೇಟ್‌ಗಳು ಪತ್ತೆಯಾಗಿವೆ. ಇದನ್ನೂ ಓದಿ: ರಾಜ್ಯಕ್ಕೆ ತಟ್ಟಲಿದೆ ಇನ್ನೂ 10 ದಿನ ಕೊರೆಯುವ ಚಳಿ

    ಹಾಸನದ ರಿಂಗ್ ರಸ್ತೆಯಲ್ಲಿ ನಡೆದಿದ್ದ ಯುವಕನ ಕೊಲೆ ಪ್ರಕರಣದ ಆರೋಪಿಗಳು ಹಾಗೂ ಚಿತ್ರದುರ್ಗದ ಕಳ್ಳತನ ಪ್ರಕರಣದ ಆರೋಪಿಗಳ ಬಳಿ ಗಾಂಜಾ ಪ್ಯಾಕೆಟ್ ಪತ್ತೆಯಾಗಿವೆ.

    ಜೈಲಿನೊಳಗಿದ್ದ ವಿಚಾರಣಾಧೀನ ಖೈದಿಯೊಬ್ಬ ಯುವತಿಗೆ ಫೊನ್ ಮಾಡಿ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದುದಲ್ಲದೇ ಬೆದರಿಕೆ ಹಾಕುತ್ತಿದ್ದ. ಈ ವಿಚಾರವನ್ನು ಯುವತಿ ಪೊಲೀಸರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಪೊಲೀಸರು ದಾಳಿ ನಡೆಸಿದ್ದಾರೆ. ಜೈಲಿನ ಮೂಲೆ ಮೂಲೆಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕದಲ್ಲಿ ಮೋದಿ ಮತ ಭೇಟೆ – ಏನಿದು ಬಿಜೆಪಿ ರಣತಂತ್ರ?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಮನೆಗಳ ಮೇಲೆ ಪೊಲೀಸರ ದಾಳಿ

    ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಮನೆಗಳ ಮೇಲೆ ಪೊಲೀಸರ ದಾಳಿ

    ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ರೌಡಿಶೀಟರ್ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ.

    ಪಶ್ಚಿಮ ವಿಭಾಗದ 6 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮಾಗಡಿ ರೋಡ್ ಮತ್ತು ಕೆಪಿ ಅಗ್ರಹಾರ, ಬ್ಯಾಟರಾಯನ ಪುರ, ಕಾಟನ್ ಪೇಟೆ, ಜೆಜೆ ನಗರ, ಚಾಮರಾಜಪೇಟೆ ಹಾಗೂ ಕೆಂಗೇರಿ, ವಿಜಯನಗರದಲ್ಲಿ ವಾಸವಾಗಿರುವ ರೌಡಿಶೀಟರ್ ಹಾಗೂ ಗಾಂಜಾ ಪೆಡ್ಲರ್‌ಗಳ ಮನೆಗಳ ಮೇಲೆ ಡಿಸಿಪಿ, ಎಸಿಪಿ, ಇನ್ಸ್‌ಪೆಕ್ಟರ್‌ ದಾಳಿ ನಡೆಸಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದಂತೆ ಬಿಸಿ ಮುಟ್ಟಿಸಿದ್ದಾರೆ. ಇದನ್ನೂ ಓದಿ: ನಾಳೆ ಪುನೀತ್ 11ನೇ ದಿನದ ಪುಣ್ಯಾರಾಧನೆ – ಅಪ್ಪು ಕುಟುಂಬಸ್ಥರಿಂದ ಭಾರೀ ಸಿದ್ಧತೆ

    ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಪೆಡ್ಲರ್ ಗಳು, ಜೊತೆಗೆ ನ್ಯಾಯಲಯದಿಂದ ಸಮನ್ಸ್ ಇದ್ದರೂ ಕೂಡ ಹಾಜರಾಗದೇ ತಲೆ ಮರೆಸಿಕೊಂಡ ಆರೋಪಿಗಳು, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದಂತಹ ರೌಡಿಶೀಟರ್‍ಗಳನ್ನು ಕರೆತಂದು ಪೊಲೀಸ್ ಠಾಣೆಯಲ್ಲಿ ಎಚ್ಚರಿಕೆ ನೀಡಲಾಗಿದೆ.

    ಒಟ್ಟು 180 ರೌಡಿಶೀಟರ್ ಮನೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದ್ದು, 123 ಮಂದಿ ರೌಡಿಗಳು ಮತ್ತು ಡ್ರಗ್ ಪೆಡ್ಲರ್‍ಗಳನ್ನ ಠಾಣೆಗೆ ಕರೆತಂದು ಎಚ್ಚರಿಕೆ ನೀಡಿದೆ. ಇನ್ನೂ 600 ಮಂದಿ ಪೊಲೀಸರಿಂದ ಈ ಕಾರ್ಯಚರಣೆ ನಡೆಸಲಾಗಿದೆ. ಇದನ್ನೂ ಓದಿ: ಸ್ಪೆಷಲ್‌ ಚಿಕನ್ ಸೂಪ್ ಸಖತ್ ಟೇಸ್ಟಿ

  • ಕೊರೊನಾ ವೇಳೆ ಸಹಾಯ – ರಾಷ್ಟ್ರೀಯ ಯೂಥ್ ಕಾಂಗ್ರೆಸ್ ಅಧ್ಯಕ್ಷರ ಕಚೇರಿ ಮೇಲೆ ಪೊಲೀಸರ ದಾಳಿ

    ಕೊರೊನಾ ವೇಳೆ ಸಹಾಯ – ರಾಷ್ಟ್ರೀಯ ಯೂಥ್ ಕಾಂಗ್ರೆಸ್ ಅಧ್ಯಕ್ಷರ ಕಚೇರಿ ಮೇಲೆ ಪೊಲೀಸರ ದಾಳಿ

    ನವದೆಹಲಿ: ಕೊರೊನಾ ಸಂಕಷ್ಟ ಕಾಲದಲ್ಲಿ ಕಷ್ಟದಲ್ಲಿದ್ದ ವ್ಯಕ್ತಿಗಳಿಗೆ ಸಹಾಯ ಮಾಡುತ್ತಿದ್ದ ರಾಷ್ಟ್ರೀಯ ಯೂಥ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ಅವರನ್ನು ದೆಹಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

    ಇಂದು ಬೆಳಗ್ಗೆ ದೆಹಲಿಯ ರೈಸಿನಾ ರಸ್ತೆಯಲ್ಲಿರುವ ಯೂಥ್ ಕಾಂಗ್ರೆಸ್ ಕಚೇರಿ ಮೇಲೆ ಧಿಡೀರ್ ದಾಳಿ ನಡೆಸಿದ ಪೊಲೀಸರು ಕಚೇರಿ ಪರಿಶೀಲನೆ ನಡೆಸಿ ಶ್ರೀನಿವಾಸ್ ಬಿ.ವಿ ಅವರನ್ನು ವಿಚಾರಣೆ ನಡೆಸಿದ್ದಾರೆ.

    ಶ್ರೀನಿವಾಸ್ ಕಳೆದೊಂದು ತಿಂಗಳಿನಿಂದ ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುತ್ತಿದ್ದು ಇದಕ್ಕಾಗಿ ಅವರು ವಾರ್ ರೂಂ ರಚಿಸಿಕೊಂಡಿದ್ದಾರೆ. ಆನ್ಲೈನ್ ಮೂಲಕ ಬರುವ ಮನವಿಗಳಿಗೆ ಸ್ಪಂದಿಸಿ ಕೊರತೆಯಲ್ಲಿರುವ ಆಮ್ಲಜನಕ, ರೆಮ್ಡೆಸಿವಿರ್ ಪೂರೈಕೆ ಮಾಡುತ್ತಿದ್ದರು. ಅಲ್ಲದೇ ಬೀದಿ ಬದಿಯ ಜನರಿಗೆ ಊಟೋಪಚಾರ ವಿತರಿಸುತ್ತಿದ್ದರು.

    ಕೊರತೆಯಲ್ಲಿರುವ ಆಮ್ಲಜನಕ ಮತ್ತು ರೆಮ್ಡೆಸಿವಿರ್ ವಿತರಣೆಯಿಂದ ಅನುಮಾನಗೊಂಡ ಪೊಲೀಸರು ದಿಢೀರನೆ ಯೂಥ್ ಕಾಂಗ್ರೆಸ್ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು ಮತ್ತು ಹಂಚಿಕೆಯಾಗುತ್ತಿರುವ ಆಮ್ಲಜನಕ ಮತ್ತು ರೆಮ್ಡೆಸಿವಿರ್ ಮೂಲದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

    ವಿಚಾರಣೆ ಬಳಿಕ ಮಾತನಾಡಿದ ಶ್ರೀನಿವಾಸ ಬಿ.ವಿ, ನಮ್ಮಲ್ಲಿ ಮುಚ್ಚಿಡುವಂಥದ್ದು ಏನಿಲ್ಲ, ವಿಚಾರಣೆ ಮಾಡಲಿ ವಿಚಾರಣೆಯಿಂದ ನಮ್ಮಿಂದ ಯಾವ ತಪ್ಪು ಆಗಿಲ್ಲ ಎಂಬುದು ಸಾಬೀತಾಗಿದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದನ್ನು ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.

    ಶ್ರೀನಿವಾಸ್, ಕರ್ನಾಟಕದ ಭದ್ರಾವತಿ ಮೂಲದವರು ಸದ್ಯ ಆಲ್ ಇಂಡಿಯಾ ಯೂಥ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಕಳೆದೊಂದು ತಿಂಗಳಿನಿಂದ ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ಆಕ್ಸಿಜನ್ ರೆಮ್ಡೆಸಿವಿರ್ ಪೂರೈಕೆ ಮಾಡುವ ಮೂಲಕ ವ್ಯಾಪಕ ಸುದ್ದಿಯಲ್ಲಿದ್ದಾರೆ.

    ಗಂಭೀರ್ ಪ್ರತಿಕ್ರಿಯೆ: ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ, ದೆಹಲಿಯ ಸಂಸದ ಗೌತಮ್ ಗಂಭೀರ್ ಪ್ರತಿಕ್ರಿಯಿಸಿ, ಕೆಲ ದಿನಗಳ ಹಿಂದೆ ಕೊರೊನಾ ಸಹಾಯ ಮಾಡುತ್ತಿರುವ ಹಿನ್ನೆಲೆಯಲ್ಲಿ ನಮ್ಮನ್ನು ದೆಹಲಿ ಪೊಲೀಸರು ಪ್ರಶ್ನಿಸಿದ್ದರು. ವಿಚಾರಣೆಯ ಸಂದರ್ಭದಲ್ಲಿ ನಾವು ಪೊಲೀಸರಿಗೆ ವಿವರಣೆ ನೀಡಿದ್ದೆವು. ಆದರೆ ಕಾಂಗ್ರೆಸ್ ಪ್ರಚಾರಕ್ಕಾಗಿ ಈ ದಾಳಿಯನ್ನು ಬಳಸುತ್ತಿದೆ ಎಂದು ಹೇಳಿದ್ದಾರೆ.

  • ಮಂಗಳೂರಿನ ಜಿಲ್ಲಾ ಕಾರಾಗೃಹಕ್ಕೆ ಪೊಲೀಸ್ ರೈಡ್-ಸಿಕ್ಕಿದ್ದೇನು ಗೊತ್ತಾ?

    ಮಂಗಳೂರಿನ ಜಿಲ್ಲಾ ಕಾರಾಗೃಹಕ್ಕೆ ಪೊಲೀಸ್ ರೈಡ್-ಸಿಕ್ಕಿದ್ದೇನು ಗೊತ್ತಾ?

    ಮಂಗಳೂರು: ನಗರದ ಜಿಲ್ಲಾ ಕಾರಾಗೃಹಕ್ಕೆ ಬೆಳ್ಳಂಬೆಳಗ್ಗೆ ಪೊಲೀಸರು ದಾಳಿ ನಡೆಸಿದ್ದಾರೆ. ಜೈಲಿನೊಳಗೆ ಶಸ್ತ್ರಾಸ್ತ್ರ ರವಾನೆಯಾಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಡಿಸಿಪಿ ಹನುಮಂತರಾಯ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.

    ದಾಳಿ ವೇಳೆ ಗಾಂಜಾ ಪ್ಯಾಕೆಟ್, ಹುಕ್ಕಾ, ಎರಡು ರಾಡ್, ಎರಡು ಚೂರಿ, ಎರಡು ಮೊಬೈಲ್ ಮತ್ತು ಡ್ರಗ್ಸ್ ಸೇವಿಸುವ ಸಿರಿಂಜ್ ಪತ್ತೆಯಾಗಿದೆ. ದಾಳಿ ವೇಳೆ 50 ಪೊಲೀಸ್ ಅಧಿಕಾರಿಗಳು ಮತ್ತು 129 ಮಂದಿ ಪೊಲೀಸ್ ಪೇದೆಗಳು ಭಾಗಿಯಾಗಿದ್ದರು.

    ಮಂಗಳೂರು ಜೈಲಿನಲ್ಲಿ ಈ ಹಿಂದೆ ಹಲವು ಬಾರಿ ಹೊಡೆದಾಟ, ಹಲ್ಲೆ ಪ್ರಕರಣಗಳು ನಡೆದಿರುವುದರಿಂದ ಪೊಲೀಸರು ಹೆಚ್ಚಿನ ನಿಗಾ ಇಟ್ಟಿದ್ದಾರೆ. ಎರಡು ವರ್ಷದ ಹಿಂದೆ ಇದೇ ಜೈಲಿನ ಒಳಗೆ ಕೈದಿಗಳಿಬ್ಬರ ಹತ್ಯೆಯೂ ನಡೆದಿತ್ತು.

  • ಕಳ್ಳಬಟ್ಟಿ ಅಡ್ಡೆ ಮೇಲೆ ದಾಳಿ- 4 ಲೀಟರ್ ಸಾರಾಯಿ ವಶ

    ಕಳ್ಳಬಟ್ಟಿ ಅಡ್ಡೆ ಮೇಲೆ ದಾಳಿ- 4 ಲೀಟರ್ ಸಾರಾಯಿ ವಶ

    ಬಾಗಲಕೋಟೆ: ಒಂದೆಡೆ ಹೆದ್ದಾರಿ ಪಕ್ಕದಲ್ಲಿದ್ದ ಬಾರ್ ಗಳನ್ನು ಬಂದ್ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಇನ್ನೊಂದೆಡೆ ಅಕ್ರಮ ಮದ್ಯ ತಯಾರಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಂತೆಯೇ ಜಿಲ್ಲೆಯಲ್ಲಿ ಕಳ್ಳಬಟ್ಟಿ ಸಾರಾಯಿ ಅಡ್ಡೆಯ ಮೇಲೆ ಪೊಲಿಸರು ದಾಳಿ ನಡೆಸಿದ ಘಟನೆ ನಡೆದಿದೆ.

    ಈ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಗೋಠೆ ಗ್ರಾಮದಲ್ಲಿ ನಡೆದಿದೆ. ಸಾವಳಗಿ ಪಿ.ಎಸ್.ಐ. ಲಕ್ಷ್ಮಿಕಾಂತ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

    ಮಾಹಿತಿ ತಿಳಿದ ಪೊಲೀಸರು ಅಡ್ಡೆಯ ಮೇಲೆ ದಾಳಿ ನಡೆಸುತ್ತಿದ್ದಂತೆಯೇ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಹೀಗಾಗಿ ಪೊಲೀಸರು ಅಂದಾಜು 4 ಲೀಟರಿನಷ್ಟು ಕಳ್ಳಬಟ್ಟಿ ಸಾರಾಯಿಯನ್ನು ವಶಕ್ಕೆ ಪಡೆದಿದ್ದಾರೆ. ಹಾಗೆಯೇ ರಸ್ತೆ ಬದಿ ಹೂತಿಟ್ಟಿದ್ದ 17 ಕೊಡ ರಾ ಮೆಟಿರಿಯಲ್‍ಗಳನ್ನು ನಾಶ ಮಾಡಿದ್ದಾರೆ.

    ಈ ಸಂಬಂಧ ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.