Tag: police. publictv

  • 26ರ ಯುವಕನನ್ನು ಕೊಲೆಗೈದು, ಪೀಸ್‍ಪೀಸ್ ಮಾಡಿ ಫ್ರಿಡ್ಜ್ ನಲ್ಲಿಟ್ಟು ಪರಾರಿಯಾದ!

    26ರ ಯುವಕನನ್ನು ಕೊಲೆಗೈದು, ಪೀಸ್‍ಪೀಸ್ ಮಾಡಿ ಫ್ರಿಡ್ಜ್ ನಲ್ಲಿಟ್ಟು ಪರಾರಿಯಾದ!

    ನವದೆಹಲಿ: 26 ವರ್ಷದ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆಗೈದು ಬಳಿಕ ಆತನ ದೇಹವನ್ನು ಪೀಸ್ ಪೀಸ್ ಮಾಡಿ ಫ್ರಿಜ್ ನಲ್ಲಿ ಹುದುಗಿಸಿಟ್ಟ ಆಘಾತಕಾರಿ ಘಟನೆಯೊಂದು ನಡೆದಿದೆ.

    ಈ ಘಟನೆ ದಕ್ಷಿಣ ದೆಹಲಿಯ ಸೈದುಲಾಜಬ್ ಪ್ರದೇಶದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೃತ ದುರ್ದೈವಿ ಯುವಕನನ್ನು ಉತ್ತಾರಖಂಡ್ ಮೂಲದ ವಿಪಿನ್ ಜೋಶಿ ಎಂಬುವುದಾಗಿ ಗುರುತಿಸಲಾಗಿದೆ. ಬಾರ್ ಟೆಂಡರ್ ಆಗಿ ಕೆಲಸ ಮಾಡುತ್ತಿರೋ ಈತ ಕಳೆದ ಸೋಮವಾರ ರಾತ್ರಿಯಿಂದ ನಾಪತ್ತೆಯಾಗಿದ್ದನು.

    ಮಗ ಜೋಶಿ ಕಾಣೆಯಾಗಿರುವ ಕುರಿತು ಆತನ ಪೋಷಕರು ಸ್ಥಳೀಯ ಪೊಲೀಸ್ ಟಾಣೆಯಲ್ಲಿ ಕೇಸು ದಾಖಲಿಸಿ, ಮಗನನ್ನು ಹುಡುಕಿಕೊಡುವಂತೆ ಬೇಡಿಕೊಂಡಿದ್ದಾರೆ. ಅಂತೆಯೇ ಪೊಲೀಸರು ಹುಡುಕಾಟ ಆರಂಭಿಸಿದ್ದರು.

    ಪ್ರಾಥಮಿಕ ತನಿಖೆಯ ಪ್ರಕಾರ, ಮೃತ ಯುವಕ ಜೋಶಿ ಹಾಗೂ ಆರೋಪಿ ಮಂದಲ್ ಕೆಲಸ ಮುಗಿಸಿ ಸೋಮವಾರ ಮನೆಗೆ ಬಂದಿದ್ದಾರೆ. ನಂತ್ರ ಇಬ್ಬರೂ ಸೇರಿ ಮದ್ಯಪಾನ ಮಾಡಿದ್ದಾರೆ. ಆ ಬಳಿಕ ಮಂದಲ್ ಈ ಕೃತ್ಯ ಎಸಗಿರಬಹುದು. ಮೃತ ಯುವಕ ಹಾಗೂ ಆರೋಪಿ ಇಬ್ಬರೂ ಬೇರೆ ಬೇರೆಯಾಗಿಯೇ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇವರಿಬ್ಬರ ಮನೆಗಳು ಅಷ್ಟೇನೂ ಹತ್ತಿರವೂ ಇಲ್ಲ ಅಂತ ಪೊಲೀಸರು ತಿಳಿಸಿದ್ದಾರೆ.

    ಮಗನಿಗಾಗಿ ಪೊಲೀಸರೊಂದಿಗೆ ಜೋಶಿ ಹೆತ್ತವರು ಹುಡುಕಾಟ ಆರಂಭಿಸಿದ್ದಾರೆ. ಹೀಗೆ ಮಗನ ಹುಡುಕಾಟದಲ್ಲಿ ತಲ್ಲೀನರಾಗಿದ್ದ ಹೆತ್ತವರು ಜೋಶಿ ಗೆಳೆಯ ಮಂದಲ್ ಮನೆಗೆ ತೆರಳಿದ್ದರು. ಈ ವೇಳೆ ಆತನ ಮನೆಯ ಬಾಗಿಲು ಮುಚ್ಚಿತ್ತು. ಅಲ್ಲದೇ ಮನೆಯೊಳಗಿನಿಂದ ದುರ್ನಾತ ಇವರ ಮೂಗಿಗೆ ಬಡಿಯುತ್ತಿತ್ತು. ಇದರಿಂದ ಅನುಮಾನಗೊಂಡ ಪೋಷಕರು ಪೊಲಿಸರಿಗೆ ಮಾಹಿತಿ ನೀಡಿದ್ದಾರೆ.

    ಅಂತೆಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಮನೆಯ ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಜೋಶಿಯನ್ನು ಬರ್ಬರವಾಗಿ ಕೊಂದು ಬಳಿಕ ಆತನ ದೇಹವನ್ನು ತುಂಡು ತುಂಡುಗಳನ್ನಾಗಿ ಮಾಡಿ ಫ್ರಿಡ್ಜ್ ನೊಳಗೆ ಹುದುಗಿಸಿಟ್ಟಿರುವುದು ಬೆಳಕಿಗೆ ಬಂದಿದೆ.

    ಸದ್ಯ ಘಟನೆಯ ಬಳಿಕ ತಲೆಮರೆಸಿಕೊಂಡಿರೋ ಮಂದಲ್ ಗಾಗಿ ಪೊಲೀಸರು ತೀವ್ರ ಹುಡುಕಾಟ ಆರಂಭಿಸಿದ್ದಾರೆ.