Tag: Police Protest

  • ಚಿಕ್ಕಬಳ್ಳಾಪುರ ಎಸ್ಪಿ ಕಚೇರಿ ಎದುರು ಪೊಲೀಸ್ ಪೇದೆಗಳಿಂದಲೇ ಪ್ರತಿಭಟನೆ – ಕಾರಣ ಏನು?

    ಚಿಕ್ಕಬಳ್ಳಾಪುರ ಎಸ್ಪಿ ಕಚೇರಿ ಎದುರು ಪೊಲೀಸ್ ಪೇದೆಗಳಿಂದಲೇ ಪ್ರತಿಭಟನೆ – ಕಾರಣ ಏನು?

    – ಹೆಂಡತಿ‌ ಮಕ್ಕಳೊಂದಿಗೆ ಅಂಬೇಡ್ಕರ್‌ ಫೋಟೋ ಹಿಡಿದು ಪ್ರೊಟೆಸ್ಟ್‌

    ಚಿಕ್ಕಬಳ್ಳಾಪುರ: ಪೊಲೀಸ್ ಇಲಾಖೆಯ (Police Department) ಇಬ್ಬರು ಪೇದೆಗಳು ತಮ್ಮದೇ ಇಲಾಖೆಯ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ (Chikkaballapur) ನಡೆದಿದೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ (Chikkaballapur Police Station) ಪೇದೆ ಆಶೋಕ್ ಹಾಗೂ ಚೇಳೂರು ಪೊಲೀಸ್ ಠಾಣಾ ಪೇದೆ ನರಸಿಂಹಮೂರ್ತಿ ತಮ್ಮ ಹೆಂಡತಿ ಮಕ್ಕಳೊಂದಿಗೆ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಐಸ್‌ಕ್ರೀಂ ತಿನ್ನಬೇಡಿ, ಕೂಲ್ ಡ್ರಿಂಕ್ಸ್ ಕುಡಿಯಬೇಡಿ – ಲಾ ಕಾಲೇಜ್‌ ಸೂಚನಾ ಪತ್ರ ವೈರಲ್‌ ಬೆನ್ನಲ್ಲೇ ಆರೋಗ್ಯ ಇಲಾಖೆಯಿಂದ ನೋಟಿಸ್‌

    2023ರ ಆಗಸ್ಟ್ ನಲ್ಲಿ ಮನಿ ಡಬ್ಲಿಂಗ್ ಪ್ರಕರಣವೊಂದರಲ್ಲಿ ಪೇದೆಗಳಾದ ಆಶೋಕ್ ಹಾಗೂ ನರಸಿಂಹಮೂರ್ತಿ ವಿರುದ್ದ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮನಿ ಡಬ್ಲಿಂಗ್ ಪ್ರಕರಣದಲ್ಲಿ ಆರೋಪಿತರು ಶಾಮೀಲಾಗಿರುವ ಆರೋಪ ಇದ್ದುದರಿಂದ, ಇಬ್ಬರನ್ನು ಅಮಾನತುಗೊಳಿಸಿ ವಿಚಾರಣೆ ನಡೆಸಲಾಗುತ್ತಿತ್ತು. ತದನಂತರ ಅಮಾನತು ಆದೇಶ ರದ್ದು ಮಾಡಿ ಮಂಚೇನಹಳ್ಳಿ ಹಾಗೂ ಚೇಳೂರು ಠಾಣೆಗೆ ಕರ್ತವ್ಯಕ್ಕೆ ನಿಯೋಜನೆ ಸಹ ಮಾಡಲಾಗಿತ್ತು. ಇದನ್ನೂ ಓದಿ: Lok Sabha Elections 2024: ಒಂದೇ ಕುಟುಂಬದ 85 ಮಂದಿಯಿಂದ ಏಕಕಾಲದಲ್ಲಿ ಮತದಾನ!

    ಈ ನಡುವೆ ಇಲಾಖೆಯ ವಿಚಾರಣೆಗೆ ಹಾಜರಾಗದೇ ಕಾಲಹರಣ ಮಾಡಿದ್ದ ಪೇದೆಗಳು ನಿನ್ನೆ ವಿಚಾರಣೆಗೆ ತಡವಾಗಿ ಹಾಜರಾಗಿ ಮತ್ತೆ ಕಾಲಾವಾಕಾಶ ಕೋರಿದ್ದರು. ಈ ವಿಚಾರದಲ್ಲಿ ವಿಚಾರಾಣಾಧೀನ ಅಧಿಕಾರಿ ಸಮಪರ್ಕವಾಗಿ ಸ್ಪಂಸಿಲ್ಲ ಹಾಗೂ ಎಸ್ಪಿ ಡಿ.ಎಲ್ ನಾಗೇಶ್ ಪ್ರಕರಣದಲ್ಲಿ ನಮ್ಮ ವಾದ ಕೇಳದೇ ನೇರವಾಗಿ ಅಮಾನತು ಮಾಡಿ ಮಾನಸಿಕ ಕಿರುಕುಳ ನೀಡಿದ್ದು ಕೆಳ ಜಾತಿ ಅಂತ ಜಾತಿ ತಾರತಮ್ಮ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ.

    ಇಂದು (ಮೇ 11) ಎಸ್ಪಿ ಕಚೇರಿ ಎದುರು ಹೆಂಡತಿ‌ ಮಕ್ಕಳ ಸಮೇತ ಆಗಮಿಸಿ ಅಂಬೇಡ್ಕರ್ ಪೋಟೋ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎಎಸ್ಪಿ ಖಾಸೀಂ ಸಾಬ್ ಪ್ರತಿಭಟನಾ ನಿರತ ಪೇದೆಗಳ ಮನವೊಲಿಸಿ ಅಹವಾಲು ಸ್ವೀಕಾರ ಮಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿ ನಿರ್ಮಿಸಲು ಮುಂದಾದ ಮದ್ರಾಸ್ ಐಐಟಿ – ಆನಂದ್ ಮಹೀಂದ್ರಾ ಮೆಚ್ಚುಗೆ

  • ಚಿಕ್ಕಮಗಳೂರಲ್ಲಿ ಪೊಲೀಸರು-ವಕೀಲರ ಗಲಾಟೆ ಪ್ರಕರಣ; ರಸ್ತೆ ತಡೆದು 200 ಕ್ಕೂ ಹೆಚ್ಚು ಪೊಲೀಸರಿಂದ ಪ್ರತಿಭಟನೆ

    ಚಿಕ್ಕಮಗಳೂರಲ್ಲಿ ಪೊಲೀಸರು-ವಕೀಲರ ಗಲಾಟೆ ಪ್ರಕರಣ; ರಸ್ತೆ ತಡೆದು 200 ಕ್ಕೂ ಹೆಚ್ಚು ಪೊಲೀಸರಿಂದ ಪ್ರತಿಭಟನೆ

    ಚಿಕ್ಕಮಗಳೂರು: ಯುವ ವಕೀಲನ ಮೇಲೆ ಪೊಲೀಸರು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ (Chikkamagaluru) ವಕೀಲರು ಮತ್ತು ಪೊಲೀಸರ ನಡುವಿನ ವಿವಾದ ತಾರಕಕ್ಕೇರಿದೆ. 6 ಪೊಲೀಸರ ಅಮಾನತು ಮತ್ತು ಗಲಾಟೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದ್ದ ಒಬ್ಬ ಪೊಲೀಸ್ ಬಂಧನ ಖಂಡಿಸಿ ಪೊಲೀಸರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

    ಕಾಫಿನಾಡ ಪೊಲೀಸರು ರಾಷ್ಟ್ರೀಯ ಹೆದ್ದಾರಿ-173 ತಡೆದು 200 ಕ್ಕೂ ಹೆಚ್ಚು ಪೊಲೀಸರು ತಡರಾತ್ರಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಪಶ್ಚಿಮ ವಲಯ ಐಜಿ ಚಂದ್ರಗುಪ್ತ ಅವರ ಮನವಿಗೂ ಬಗ್ಗದ ಪೋಲೀಸರು ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

    ಚಿಕ್ಕಮಗಳೂರು ನಗರದ 6 ಠಾಣೆ ಪೊಲೀಸರು ಕೆಲಸ ನಿಲ್ಲಿಸಿ, ನಾವ್ಯಾರು ಕೆಲಸ ಮಾಡಲ್ಲ ಅಂತ ಠಾಣೆ ಬಳಿ ಜಮಾಯಿಸಿದರು. ಕೆಲಸ ಬಿಟ್ಟು ಬಂದ 100 ಕ್ಕೂ ಹೆಚ್ಚು ಪೊಲೀಸರು, ಕುಟುಂಬಗಳ ಜೊತೆ ಠಾಣೆ ಮುಂದೆ ಜಮಾಯಿಸಿದರು. ಪೊಲೀಸರಿಗೆ ರಕ್ಷಣೆ ಇಲ್ಲ ಎಂದು ಪೊಲೀಸರು ಹಾಗೂ ಕುಟುಂಬಗಳು ಆರೋಪ ಮಾಡಿದ್ದಾರೆ.

    ಈ ವೇಳೆ ಎಸ್ಪಿ ಎದುರು ಪೊಲೀಸ್ ಪೇದೆ ಕಣ್ಣೀರಿಟ್ಟಿದ್ದಾರೆ. ನಾವು ಕಾನೂನು ಗೌರವಿಸುತ್ತೇವೆ. ಅವರು ನಿಮಗೇನು ಗೌರವ ಕೊಟ್ಟರು ಸರ್. ಮಾತಾಡೋದಾದ್ರೆ ಇಲ್ಲೇ ಮಾತಾಡಿ ಸರ್, ಒಳಗೆ ಬರಲ್ಲ ಎಂದು ಹಠ ಹಿಡಿದರು.

    ಪ್ರಕರಣ ಏನು?
    ಹೆಲ್ಮೆಟ್ ಹಾಕದ ವಕೀಲರ ಮೇಲೆ ಪೊಲೀಸರು ನಡೆಸಿದ ಹಲ್ಲೆ ಖಂಡಿಸಿ ವಕೀಲರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ್ದರು. ವಕೀಲ ಪ್ರೀತಂ ಮೇಲೆ ಹಲ್ಲೆ ನಡೆಸಿರುವ ಪೊಲೀಸರನ್ನು ಕೂಡಲೇ ಬಂಧಿಸಬೇಕು ಎಂದು ಕಲಾಪಕ್ಕೂ ಹಾಜರಾಗದೇ ಪಟ್ಟು ಹಿಡಿದಿದ್ದರು.

    ಪ್ರಕರಣ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಪಿಎಸ್‌ಐ ಮಹೇಶ್ ಪೂಜಾರಿ ಸೇರಿ 6 ಪೊಲೀಸರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಇದನ್ನು ಖಂಡಿಸಿ ಪೊಲೀಸರು ಬೀದಿಗಿಳಿದಿದ್ದಾರೆ.