Tag: Police personnel

  • ವರ್ಗಾವಣೆ ಕೋರಿ ಪತ್ರ ಬರೆದ ಒಂದೇ ಠಾಣೆಯ 35 ಪೊಲೀಸ್ ಸಿಬ್ಬಂದಿ

    ವರ್ಗಾವಣೆ ಕೋರಿ ಪತ್ರ ಬರೆದ ಒಂದೇ ಠಾಣೆಯ 35 ಪೊಲೀಸ್ ಸಿಬ್ಬಂದಿ

    ಬೆಂಗಳೂರು: ಒಂದೇ ಠಾಣೆಯ 35 ಪೊಲೀಸ್ ಸಿಬ್ಬಂದಿ ಸಾಮೂಹಿಕ ವರ್ಗಾವಣೆ ಕೋರಿ ಮನವಿ ಮಾಡಿಕೊಂಡಿದ್ದಾರೆ. ಆಡಳಿತ ವಿಭಾಗಕ್ಕೆ ಪತ್ರ ಬರೆದು ವರ್ಗಾವಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

    ಕಬ್ಬನ್ ಪಾರ್ಕ್ (Cubbon Park Police) ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 35 ಸಿಬ್ಬಂದಿ ವರ್ಗಾವಣೆ ಮೊರೆ ಹೋಗಿದ್ದಾರೆ. ಆಡಳಿತ ವಿಭಾಗಕ್ಕೆ ಪತ್ರ ಬರೆದು ವರ್ಗಾವಣೆ ಮಾಡಿಕೊಡುವಂತೆ ಸಾಮೂಹಿಕವಾಗಿ ಮನವಿ ಮಾಡಿಕೊಂಡಿರೋ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಾಮೂಹಿಕ ವರ್ಗಾವಣೆ ಹಿಂದಿನ ಕಾರಣ ಠಾಣಾಧಿಕಾರಿಯ ಕಡೆ ಬೆರಳು ಮಾಡಲಾಗುತ್ತಿದೆ. ಇದನ್ನೂ ಓದಿ: ನಿದ್ದೆ ಬಿಟ್ಟು ಲೋಕಸಭೆಯ 28 ಸೀಟ್ ಗೆಲ್ಲಿಸಲು ರಾಜ್ಯಾದ್ಯಂತ ಓಡಾಡುವೆ: ಎಂ.ಪಿ.ರೇಣುಕಾಚಾರ್ಯ

    ವರ್ಗಾವಣೆಗೆ ಮನವಿ ಮಾಡಿರುವವರಲ್ಲಿ 12 ಮಂದಿ ಎಎಸ್‌ಐ, 23 ಮಂದಿ ಹೆಡ್ ಕಾನ್‌ಸ್ಟೇಬಲ್‌ಗಳಿದ್ದಾರೆ. ಆಡಳಿತ ವಿಭಾಗಕ್ಕೆ ಎಲ್ಲರೂ ವೈಯಕ್ತಿಕ ಕಾರಣಗಳನ್ನ ನೀಡಿ ಮನವಿ ಮಾಡಿಕೊಂಡಿದ್ದಾರಾದರು ಕೂಡ ಇಲಾಖೆಯಲ್ಲಿ, ಠಾಣೆಯಲ್ಲಿ ಹಲವು ರೀತಿಯಲ್ಲಿ ಚರ್ಚೆ ಆಗುತ್ತಿದೆ.

    ಒಂದು ಠಾಣಾಧಿಕಾರಿಯ ಕೈ ಕೆಳಗಡೆ ಕೆಲಸ ಮಾಡೋದಕ್ಕೆ ಕಷ್ಟವಾಗುತ್ತಿರುವ ಕಾರಣದಿಂದ ಎಲ್ಲರೂ ಸಾಮೂಹಿಕವಾಗಿ ವರ್ಗಾವಣೆ ಮಾಡಿಸಿಕೊಂಡು ಹೋಗಲು ತೀರ್ಮಾನ ಮಾಡಿಕೊಂಡಿದ್ದಾರೆ ಎಂದು ಚರ್ಚೆ ಆಗುತ್ತಿದೆ. ಠಾಣಾಧಿಕಾರಿ ಹಾಗೂ ಸಿಬ್ಬಂದಿ ನಡುವೆ ಸಾಮ್ಯತೆ ಇಲ್ಲದೇ ಇರುವುದೇ ಸಾಮೂಹಿಕ ವರ್ಗಾವಣೆಗೆ ಪ್ರಮುಖ ಕಾರಣವಾಗಿರಬಹುದು ಎನ್ನಲಾಗಿದೆ. ಇದನ್ನೂ ಓದಿ: ಗುಂಡ್ಲುಪೇಟೆಯ 7 ಗ್ರಾಮಗಳಿಗಿಲ್ಲ ದೀಪಾವಳಿಯ ಸಂಭ್ರಮ

    ವರ್ಗಾವಣೆಗೆ ಮನವಿ ಮಾಡಿಕೊಂಡಿರುವ 35 ಸಿಬ್ಬಂದಿಯಲ್ಲಿ ಕೆಲವರು ವರ್ಗಾವಣೆ ಆಗಿದ್ದಾರೆ. ಉಳಿದ ಒಂದಷ್ಟು ಸಿಬ್ಬಂದಿ ಕೂಡ ವರ್ಗಾವಣೆ ಪತ್ರ ಕೈಯಲ್ಲಿ ಹಿಡಿದುಕೊಂಡು ತುದಿಗಾಲಿನಲ್ಲಿ ನಿಂತಿದ್ದಾರೆ.

  • ಸೌಂದರ್ಯ ಸ್ಪರ್ಧೆಯಲ್ಲಿ ರ‍್ಯಾಂಪ್ ವಾಕ್ – ಐವರು ಪೊಲೀಸರ ವರ್ಗಾವಣೆ

    ಸೌಂದರ್ಯ ಸ್ಪರ್ಧೆಯಲ್ಲಿ ರ‍್ಯಾಂಪ್ ವಾಕ್ – ಐವರು ಪೊಲೀಸರ ವರ್ಗಾವಣೆ

    ಚೆನ್ನೈ: ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದಕ್ಕೆ ವಿಶೇಷ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ ಐವರು ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.

    ಸೌಂದರ್ಯ ಸ್ಪರ್ಧೆಯಲ್ಲಿ ಪೊಲೀಸ್ ಸಿಬ್ಬಂದಿ ರ‍್ಯಾಂಪ್ ವಾಕ್ ಮಾಡಿದ ಹಿನ್ನೆಲೆ ನಾಗಪಟ್ಟಣಂ ಪೊಲೀಸ್ ವರಿಷ್ಠಾಧಿಕಾರಿ ವರ್ಗಾವಣೆ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಅಮೃತ ಮಹೋತ್ಸವಕ್ಕೆ 750 ಗ್ರಾಮೀಣ ಹೆಣ್ಣುಮಕ್ಕಳೇ ತಯಾರಿಸಿದ ಆಜಾದಿ ಉಪಗ್ರಹ ಉಡಾವಣೆ – ಏನಿದರ ವಿಶೇಷತೆ?

    ಕಳೆದ ಭಾನುವಾರ ಮೈಲಾಡುತುರೈ ಜಿಲ್ಲೆಯ ಸೆಂಬನಾರ್ಕೋವಿಲ್‍ನಲ್ಲಿ ಖಾಸಗಿ ಸಂಸ್ಥೆಯೊಂದು ಸೌಂದರ್ಯ ಸ್ಪರ್ಧೆಯನ್ನು ಏರ್ಪಡಿಸಿತ್ತು. ಇದರಲ್ಲಿ ನಟಿ ಯಶಿಕಾ ಆನಂದ್ ವಿಶೇಷ ಅಥಿತಿಯಾಗಿ ಭಾಗವಹಿಸಿ, ಸ್ಪರ್ಧೆಯನ್ನು ಉದ್ಘಾಟಿಸಿದರು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ವೈರಲ್ ಆಗಿತ್ತು. ಇದನ್ನೂ ಓದಿ: ರಾಜಕುಮಾರ್ ಟಾಕಳೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾ

    ನಾಗಪಟ್ಟಣಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜವಗರ್ ಅವರು, ಪ್ರಸ್ತುತ ಸೆಂಬನಾರ್ಕೋವಿಲ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶೇಷ ಸಹಾಯಕ ಇನ್ಸ್‌ಪೆಕ್ಟರ್ ಸುಬ್ರಮಣಿಯನ್ ಸೇರಿದಂತೆ ರೇಣುಕಾ, ಅಶ್ವಿನಿ, ನಿತ್ಯಶೀಲಾ ಮತ್ತು ಶಿವನೇಸನ್ ಅನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪೊಲೀಸ್ ಮೇಲೆ ಹಲ್ಲೆ ಮಾಡಿ ಸಭೆಗೆ ನುಗ್ಗಿದ ‘ಕೈ’ ಮುಖಂಡ- ವಿಡಿಯೋ ನೋಡಿ

    ಪೊಲೀಸ್ ಮೇಲೆ ಹಲ್ಲೆ ಮಾಡಿ ಸಭೆಗೆ ನುಗ್ಗಿದ ‘ಕೈ’ ಮುಖಂಡ- ವಿಡಿಯೋ ನೋಡಿ

    ಭೋಪಾಲ್: ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡ ಸನ್ನಿ ರಾಜ್‍ಪಾಲ್ ಅವರು ಪೊಲೀಸ್ ಮೇಲೆ ಹಲ್ಲೆ ಮಾಡಿ ಸಚಿವರ ಸಭೆಗೆ ನುಗ್ಗಿದ ಘಟನೆ ಇಂದೋರ್ ನಲ್ಲಿ ಇಂದು ನಡದಿದೆ.

    ಮಧ್ಯಪ್ರದೇಶದ ಲೋಕೋಪಯೋಗಿ ಹಾಗೂ ಪರಿಸರ ಸಚಿವ ಸಜ್ಜನ್ ಸಿಂಗ್ ವರ್ಮಾ ಅವರು ಸಭೆ ನಡೆಸಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ಸನ್ನಿ ರಾಜ್‍ಪಾಲ್ ಅವರನ್ನು ಪೊಲೀಸರು ತಡೆದು, ಸಭೆ ನಡೆದಿದೆ ಒಳಗೆ ಬಿಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಆದರೆ ಪೊಲೀಸರ ಮಾತಿಗೆ ಕ್ಯಾರೆ ಎನ್ನದ ಸನ್ನಿ ರಾಜ್‍ಪಾಲ್ ಹಲ್ಲೆ ಮಾಡಿ, ಸಭೆಗೆ ನುಗ್ಗಿದ್ದಾರೆ.

    ಕಾಂಗ್ರೆಸ್ ಮುಖಂಡ ಸನ್ನಿ ರಾಜ್‍ಪಾಲ್ ವರ್ತನೆಯನ್ನು ಸ್ಥಳದಲ್ಲಿದ್ದ ಕೆಲವರು ಹಾಗೂ ಮಾಧ್ಯಮದವರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮುಖಂಡರ ನಡೆಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.