Tag: Police Officers

  • ಉದಯಪುರ ಟೈಲರ್‌ ಹತ್ಯೆ ಪ್ರಕರಣ – ಟೀಕೆ ಬೆನ್ನಲ್ಲೇ 32 ಪೊಲೀಸ್‌ ಅಧಿಕಾರಿಗಳ ವರ್ಗಾವಣೆ

    ಉದಯಪುರ ಟೈಲರ್‌ ಹತ್ಯೆ ಪ್ರಕರಣ – ಟೀಕೆ ಬೆನ್ನಲ್ಲೇ 32 ಪೊಲೀಸ್‌ ಅಧಿಕಾರಿಗಳ ವರ್ಗಾವಣೆ

    ಜೈಪುರ: ಟೈಲರ್ ಕನ್ಹಯ್ಯ ಲಾಲ್ ಅವರ ಭೀಕರ ಹತ್ಯೆಯ ಹಿನ್ನೆಲೆಯಲ್ಲಿ ಉದಯಪುರದ ಇನ್ಸ್‌ಪೆಕ್ಟರ್ ಜನರಲ್ ಮತ್ತು ಪೊಲೀಸ್ ಸೂಪರಿಂಟೆಂಡೆಂಟ್ ಸೇರಿದಂತೆ ಭಾರತೀಯ ಪೊಲೀಸ್ ಸೇವೆಯ (ಐಪಿಎಸ್) 32 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

    ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಉಚ್ಚಾಟಿತ ನಾಯಕಿ ನೂಪುರ್ ಶರ್ಮಾರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಾಕಿದ್ದಕ್ಕೆ ಕನ್ಹಯ್ಯ ಲಾಲ್‌ಗೆ ಬೆದರಿಕೆ ಕರೆಗಳು ಬಂದಿದ್ದವು. ಈ ಕುರಿತು ದೂರು ನೀಡಿದರೂ ಭದ್ರತೆ ಒದಗಿಸಿಲ್ಲ ಉದಯಪುರ ಪೊಲೀಸರ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದನ್ನೂ ಓದಿ: ಉದಯಪುರ ಕೊಲೆಗಡುಕರಿಂದ ಸರಣಿ ಸ್ಫೋಟಕ್ಕೆ ಸ್ಕೆಚ್!

    ಪ್ರವಾದಿ ಮೊಹಮ್ಮದ್‌ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್‌ ಶರ್ಮಾರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿವಾದಾತ್ಮಕ ಪೋಸ್ಟ್‌ ಹಾಕಿಕೊಂಡಿದ್ದರು ಎಂಬ ಕಾರಣಕ್ಕೆ ರಾಜಸ್ಥಾನದ ಉದಯಪುರದಲ್ಲಿ ಟೈಲರ್‌ ಕನ್ಹಯ್ಯ ಲಾಲ್‌ ಎಂಬುವವರನ್ನು ಇಬ್ಬರು ದುಷ್ಕರ್ಮಿಗಳು ಮಂಗಳವಾರ ಕತ್ತು ಸೀಳಿ ಹತ್ಯೆ ಮಾಡಿದ್ದರು. ಈ ಘಟನೆಯಿಂದ ರಾಜಸ್ಥಾನದ ಜತೆಗೆ ದೇಶದ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿವೆ.

    ಆರೋಪಿ ರಿಯಾಜ್‌, ಕನ್ನಯ್ಯಲಾಲ್‌ ಅವರ ಕತ್ತನ್ನು ಕತ್ತರಿಸಿದ್ದು, ಮತ್ತೊಬ್ಬ ಆರೋಪಿ ಈ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ಈ ಕೊಲೆಯನ್ನು ತಾವೇ ಮಾಡಿದ್ದಾಗಿ ಹೇಳಿರುವ ವಿಡಿಯೊಯೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. ಇಬ್ಬರನ್ನೂ ಬಂಧಿಸಲಾಗಿದೆ. ಇದನ್ನೂ ಓದಿ: ಕನ್ಹಯ್ಯ ಲಾಲ್ ಕುಟುಂಬಕ್ಕೆ ನೆರವು – 24 ಗಂಟೆಯಲ್ಲಿ ಬಂತು 1 ಕೋಟಿ

    ಹಂತಕರು ಪಾಕಿಸ್ತಾನ ಮೂಲದ ದಾವತ್-ಎ-ಇಸ್ಲಾಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದರು. ಒಬ್ಬ 2014 ರಲ್ಲಿ ಕರಾಚಿಗೆ ಹೋಗಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

    Live Tv

  • ಹೊರಗಡೆ ನಾಯಿಗಳಿದೆ ಎಂದು ಮಕ್ಕಳನ್ನು ಆಚೆ ಬಿಡದೇ ಇರಬೇಕೇ: ಎಚ್.ಕೆ.ಕುಮಾರಸ್ವಾಮಿ

    ಹೊರಗಡೆ ನಾಯಿಗಳಿದೆ ಎಂದು ಮಕ್ಕಳನ್ನು ಆಚೆ ಬಿಡದೇ ಇರಬೇಕೇ: ಎಚ್.ಕೆ.ಕುಮಾರಸ್ವಾಮಿ

    ಹಾಸನ: ಹೊರಗಡೆ ನಾಯಿಗಳು ಇದೆ ಎಂದು ಮಕ್ಕಳನ್ನು ಆಚೆ ಬಿಡದೇ ಇರಬೇಕೇ? ಹಾಗಂತ ಮಕ್ಕಳನ್ನು ತಡೆಯುವುದೋ, ನಾಯಿಗಳನ್ನೋ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮೈಸೂರಿನಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣ ಅತ್ಯಂತ ಖಂಡನೀಯವಾದದ್ದು ವೈಯಕ್ತಿಕವಾಗಿ ಪಕ್ಷದ ಪರವಾಗಿ ಉಗ್ರವಾಗಿ ಖಂಡಿಸುತ್ತೇನೆ. ನೈತಿಕತೆ ಇದ್ದರೆ ಗೃಹ ಸಚಿವರು ಪ್ರಕರಣ ಸಂಬಂಧ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದ್ದಾರೆ.

    ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಯ ಹೊಣೆಯನ್ನು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಹೊರಬೇಕಾಗುತ್ತದೆ. ಪೊಲೀಸ್ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ದೆಹಲಿಯಲ್ಲಿ ಕೆಲ ವರ್ಷಗಳ ಹಿಂದೆ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ರೀತಿ ನಡೆದಿದೆ. ಈ ಘಟನೆ ರಾಜ್ಯಕ್ಕೆ ಹಾಗೂ ಮೈಸೂರಿಗೆ ದೊಡ್ಡ ಕಪ್ಪುಚುಕ್ಕೆ ಎಂದ ಅವರು ಪ್ರಕರಣ ಸಂಬಂಧ ಪೊಲೀಸರನ್ನು ಗೃಹಸಚಿವರು ಸಮರ್ಥಿಸಿಕೊಳ್ಳುತ್ತಿರುವುದು ಹೇಸಿಗೆ ತರುತ್ತಿದೆ ಅವರ ವೈಯಕ್ತಿಕ ಲಾಭಕ್ಕಾಗಿ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಅವರ ವ್ಯಕ್ತಿತ್ವಕ್ಕೆ ಕಳಂಕ ತರುವಂತಹದ್ದು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:ಅರಗ ಜ್ಞಾನೇಂದ್ರ ನೆಗೆಟಿವ್ ಆಗಿ ಹೇಳಿಕೆ ಕೊಟ್ಟಿಲ್ಲ: ಪೂರ್ಣಿಮಾ ಶ್ರೀನಿವಾಸ್

    ಹೆಣ್ಣುಮಕ್ಕಳು ಸಂಜೆ 7 ಮೇಲೆ ಹೊರಬರಬಾರದು ಎಂದಾದರೆ, ಸಂಜೆ 6:00 ರ ಮೇಲೆ ಹೆಣ್ಣು ಮಕ್ಕಳು ಹೊರ ಬಾರದಂತೆ ಆದೇಶ ಹೊರಡಿಸಲಿ. ಈಗಾಗಲೇ ಪೊಲೀಸ್ ಅಧಿಕಾರಿಗಳನ್ನು ಸರ್ಕಾರ ಅಮಾನತ್ತಿನಲ್ಲಿ ಇಡಬೇಕಿತ್ತು ಘಟನೆ ನಡೆದ ಸ್ಥಳ ನಗರ ಪ್ರದೇಶದಿಂದ ಆರೇಳು ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಪೊಲೀಸರ ಗಸ್ತು ಮಾಡುವುದು ಕಷ್ಟಕರವಲ್ಲ ಎಂದಿದ್ದಾರೆ.

    ಈ ಘಟನೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕುಡಿದು ತಿಂದು ಅನಾಗರಿಕವಾಗಿ ವರ್ತಿಸುತ್ತಿದ್ದಾರೆ. ಪೊಲೀಸರು ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು ಹಾಗೂ ಬಿಜೆಪಿ ಸರ್ಕಾರ ಬಂದ ಮೇಲೆ ದಲಿತರು ಮಹಿಳೆಯರು ಮಕ್ಕಳು ಅಸಹಾಯಕರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿದೆ. ನಿರ್ಭಯಾ ಪ್ರಕರಣದಲ್ಲಿ ದೆಹಲಿ ಸರ್ಕಾರ ಹೇಗೆ ವಿಶೇಷ ನ್ಯಾಯಾಲಯ ಸ್ಥಾಪಿಸಿ ಶಿಕ್ಷೆ ನೀಡಿತು. ಅದೇ ರೀತಿ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ:ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು

  • ಬಂಧಿಸಲು ಹೋದಾಗ ಕ್ರಿಮಿನಲ್ ಗ್ಯಾಂಗ್‍ನಿಂದ ಫೈರಿಂಗ್- 8 ಮಂದಿ ಪೊಲೀಸರು ದುರ್ಮರಣ

    ಬಂಧಿಸಲು ಹೋದಾಗ ಕ್ರಿಮಿನಲ್ ಗ್ಯಾಂಗ್‍ನಿಂದ ಫೈರಿಂಗ್- 8 ಮಂದಿ ಪೊಲೀಸರು ದುರ್ಮರಣ

    ಕಾನ್ಪುರ: ಉತ್ತರಪ್ರದೇಶದ ಕಾನ್ಪುರದಲ್ಲಿ 8 ಮಂದಿ ಪೊಲೀಸರನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಡಿವೈಎಸ್ಪಿ, ಮೂವರು ಸಬ್ ಇನ್ಸ್ ಪೆಕ್ಟರ್‍ಗಳು ಹಾಗೂ ನಾಲ್ಕು ಮಂದಿ ಕಾನ್ಸ್ ಸ್ಟೇಬಲ್ ಗಳನ್ನು ಕಾನ್ಪುರದ ಡಿಕ್ರು ಗ್ರಾಮದಲ್ಲಿ ಕ್ರಿಮಿನಲ್ ಗ್ಯಾಂಗ್ ಹತ್ಯೆ ಮಾಡಿದೆ. ಈ ಘಟನೆ ಉತ್ತರಪ್ರದೇಶ ರಾಜಧಾನಿ ಲಕ್ನೋದಿಂದ 150 ಕಿ.ಮಿ ದೂರದಲ್ಲಿ ನಡೆದಿದೆ.

    ಮೃತರನ್ನು ಸಿಒ ದೇವೇಂದ್ರ ಕುಮಾರ್ ಮಿಶ್ರಾ, ಎಸ್‍ಒ ಮಹೇಶ್ ಯಾದವ್, ಅನೂಪ್ ಕುಮಾರ್, ಸಬ್ ಇನ್ಸ್ ಪೆಕ್ಟರ್ ನೆಬುಲಾಲ್, ಕಾನ್ ಸ್ಟೇಬಲ್ ಸುಲ್ತಾನ್ ಸಿಂಗ್, ರಾಹುಲ್, ಜಿತೇಂದ್ರ ಹಾಗೂ ಬಬ್ಲು ಎಂದು ಗುರುತಿಸಲಾಗಿದೆ.

    ಮೂರು ಪೊಲೀಸ್ ಠಾಣೆಯ ಈ ಪೊಲೀಸರ ತಂಡ ಗ್ರಾಮಕ್ಕೆ ತೆರಳಿ 60 ಪ್ರಕರಣ ದಾಖಲಾಗಿದ್ದ ವಿಕಾಸ್ ದುಬೆಯನ್ನು ಬಂಧಿಸಲು ತೆರಳಿತ್ತು. ಇತ್ತೀಚೆಗೆ ವಿಕಾಸ್ ವಿರುದ್ಧ ಕೊಲೆ ಯತ್ನ ಪ್ರಕರಣವೊಂದು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲಿಸರ ತಂಡ ಗ್ರಾಮಕ್ಕೆ ದಾಳಿ ನಡೆಸಿತ್ತು.

    ಆತನನ್ನು ಬಂಧಿಸುವುದೇ ಪೊಲೀಸರ ಉದ್ದೇಶವಾಗಿತ್ತು. ಆದರೆ ಈ ವೇಳೆ ಆರೋಪಿ ಬೆಂಬಲಿಗರು ಹೊಂಚು ಹಾಕಿ ಮೂರು ಕಡೆಗಳಿಂದ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಒಟ್ಟಿನಲ್ಲಿ ಗ್ಯಾಂಗ್ ಪ್ಲಾನ್ ಮಾಡಿಯೇ ಈ ಕೊಲೆಗಳನ್ನು ನಡೆಸಿದ್ದಾರೆ ಎಂದು ಕಾನ್ಪುರದ ಪೊಲೀಸ್ ಅಧಿಕಾರಿ ದಿನೇಶ್ ಕುಮಾರ್ ತಿಳಿಸಿದ್ದಾರೆ.

    ಪೊಲೀಸರು ಗ್ರಾಮಕ್ಕೆ ತೆರಳಿರುವ ಸುಳಿವು ಸಿಗುತ್ತಿದ್ದಂತೆಯೇ ದುಬೆ ಬೆಂಬಲಿಗರು ರಸ್ತೆ ಬ್ಲಾಕ್ ಮಾಡಿದ್ದಾರೆ. ಅಲ್ಲದೆ ಪೊಲೀಸರು ಗ್ರಾಮದೊಳಗೆ ತೆರಳುತ್ತಿದ್ದಂತೆಯೇ ಇತ್ತ ರಸ್ತೆ ಬ್ಲಾಕ್ ಮಾಡಿದ್ದಾರೆ. ನಂತರ ಪೊಲೀಸರ ಮೇಲೆ ಗುಂಡಿನ ಸುರಿಮಳೆಗೈದಿದ್ದಾರೆ ಎಂದು ಅಲ್ಲಿನ ಡಿಜಿಪಿ ಹೇಳಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿ, ತನಿಖೆಗೆ ಆದೇಶಿಸಿದ್ದಾರೆ.

  • ಪುಣೆಯಲ್ಲಿ ಸಾವನ್ನಪ್ಪಿದ ಮಂಡ್ಯದ ಟೆಕ್ಕಿ – ಕರ್ನಾಟಕ, ಮಹರಾಷ್ಟ್ರ ಗಡಿಯಲ್ಲಿ ಅಂತ್ಯಕ್ರಿಯೆ

    ಪುಣೆಯಲ್ಲಿ ಸಾವನ್ನಪ್ಪಿದ ಮಂಡ್ಯದ ಟೆಕ್ಕಿ – ಕರ್ನಾಟಕ, ಮಹರಾಷ್ಟ್ರ ಗಡಿಯಲ್ಲಿ ಅಂತ್ಯಕ್ರಿಯೆ

    ಬೆಳಗಾವಿ(ಚಿಕ್ಕೋಡಿ): ಪುಣೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದ ಮಂಡ್ಯ ಜಿಲ್ಲೆಯ ಮಹಿಳೆಯ ಅಂತ್ಯಸಂಸ್ಕಾರ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

    ಪುಣೆಯಲ್ಲಿ ಟೆಕ್ಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಮಂಡ್ಯ ಜಿಲ್ಲೆಯ ಮುದ್ದೂರು ತಾಲೂಕಿನ ತೈಲೂರು ಗ್ರಾಮದ ನಿವಾಸಿ ಸೌಮ್ಯ ಟಿ.ಎ ಎರಡು ದಿನಗಳ ಹಿಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತ ದೇಹವನ್ನು ಆಕೆಯ ಪತಿ ಶರತ್ ತನ್ನೂರಿಗೆ ತೆಗೆದುಕೊಂದು ಬರಲು ಮಂಡ್ಯ ಜಿಲ್ಲಾಡಳಿತಕ್ಕೆ ಅನುಮತಿ ಕೇಳಿದ್ದಾರೆ. ಆದರೆ ಮೃತ ಸೌಮ್ಯಾಳನ್ನು ಕೊರೊನಾ ವೈರಸ್ ಟೆಸ್ಟ್ ಗೆ ಒಳಪಡಿಸದ ಹಿನ್ನೆಲೆ ಮಂಡ್ಯ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಆದರೂ ಪತಿ ಶರತ್ ಪತ್ನಿ ಮೃತದೇಹವನ್ನು ಕರ್ನಾಟಕ ಮಹಾರಾಷ್ಟ್ರ ಗಡಿಯವರೆಗೆ ತೆಗೆದುಕೊಂಡು ಬಂದಿದ್ದರು.

    ಮಂಡ್ಯ ಜಿಲ್ಲಾಡಳಿತ ಅನುಮತಿ ನೀಡದ ಹಿನ್ನೆಲೆ ಗಡಿಯಲ್ಲೂ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಇದರಿಂದ ಭಾನುವಾರ ಪತಿ ಶರತ್, ಮಗಳು ಯುಕ್ತಾ(5) ಹಾಗೂ ನಿವೃತ್ತ ಪಿಎಸ್‍ಐ ತಂದೆ ಅಪ್ಪಯ್ಯ ಆಕಡೆ ಪುನಃ ಪುಣೆಗೂ ಹೋಗಲು ಆಗದೆ ಸುಮಾರು 24 ಘಂಟೆಗಳ ಕಾಲ ರಾಜ್ಯ ಪ್ರವೇಶ ಅನುಮತಿಗಾಗಿ ಕಾದು ಕುಳಿತ್ತಿದ್ದರು. ಘಟನೆಯ ಸಂಪೂರ್ಣ ಮಾಹಿತಿ ತಿಳಿದ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ, ಚಿಕ್ಕೋಡಿ ಉಪವಿಭಾಗಾಧಿಕಾರಿ ರವೀಂದ್ರ ಕರಿಲಿಂಗಣ್ಣವರ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರ ನೆರವಿಗೆ ನಿಂತಿರು.

    ರಾತ್ರಿ 12 ಘಂಟೆಗೆ ಸ್ವತಃ ಅಧಿಕಾರಿಗಳು ಕುಟುಂಬಸ್ಥರ ಜೊತೆ ಸೇರಿ ಚೆಕ್‍ಪೋಸ್ಟ್ ಬಳಿಯ ಸರ್ಕಾರಿ ಗೋಮಾಳದಿಂದ ಕಟ್ಟಿಗೆ ವ್ಯವಸ್ಥೆ ಮಾಡಿ, ಧೂದಗಂಗಾ ನದಿ ದಡದಲ್ಲಿ ಮೃತ ಸೌಮ್ಯರ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಕುಟುಂಬಸ್ಥರ ಜೊತೆ ಸೇರಿ ಸೌಮ್ಯ ಆತ್ಮಕ್ಕೆ ಮೋಕ್ಷ ಕೊಡುವ ಕೆಲಸವನ್ನು ಮಾಡಿದ್ದಾರೆ. ಕುಟುಂಬಸ್ಥರ ಕಷ್ಟದ ಸಮಯದಲ್ಲಿ ಮಾನವೀಯತೆ ಮೆರೆದ ಅಧಿಕಾರಿಗಳ ಕಾರ್ಯವೈಖರಿಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

  • ನಾಪತ್ತೆಯಾಗಿದ್ದ ಪೊಲೀಸ್ ಅಧಿಕಾರಿಗಳು ಸೇಫ್?

    ನಾಪತ್ತೆಯಾಗಿದ್ದ ಪೊಲೀಸ್ ಅಧಿಕಾರಿಗಳು ಸೇಫ್?

    ಕಾರವಾರ: ನಾಪತ್ತೆಯಾಗಿದ್ದ ಪೊಲೀಸ್ ಅಧಿಕಾರಿಗಳು ಸೇಫ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಭಾನುವಾರ ಸಂಜೆ ಪ್ರಕರಣವೊಂದರ ಮಾಹಿತಿ ಕಲೆ ಹಾಕಲೆಂದು ಡಿವೈಎಸ್ಪಿ ಶಂಕರ್ ಮಾರಿಯಾಳ್ ಹಾಗೂ ಕೆಲವು ಪೊಲೀಸ್ ಅಧಿಕಾರಿಗಳು ತೆರಳಿದ್ದರು. ಹೀಗೆ ತೆರಳಿದ್ದವರು ಕೈಗಾ ಬಾರೆ ರಸ್ತೆ ಸಮೀಪ ನಾಪತ್ತೆಯಾಗಿದ್ದರು.

    ಬಳಿಕ ಅವರ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಯಿತು. ಅಧಿಕಾರಿಗಳ ತಂಡವೊಂದು ಫೋನ್ ಕಾಲ್ ಒಂದರ ಪತ್ತೆಗಾಗಿ ಕೂಂಬಿಂಗ್ ನಡೆಸಿತ್ತು. ಹೀಗಾಗಿ ಇಂದು ಬೆಳಗ್ಗೆ ಪೋನ್ ಸಂಪರ್ಕಕ್ಕೆ ಸಿಕ್ಕಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸದ್ಯ ಪೊಲೀಸ್ ಅಧಿಕಾರಿಗಳ ತಂಡ ಶೋಧ ಕಾರ್ಯಾಚರಣೆ ಮುಂದುವರಿಸಿದೆ. ಇದನ್ನೂ ಓದಿ: ಪ್ರಕರಣದ ಮಾಹಿತಿ ಕಲೆಹಾಕಲು ಹೋಗಿದ್ದ ಕಾರವಾರದ ಡಿವೈಎಸ್‍ಪಿ ನಾಪತ್ತೆ

  • ಸತ್ತ ಸೋಗಿನಲ್ಲಿ ಐವರು ಯೋಧರನ್ನು ಕೊಂದ ಉಗ್ರ

    ಸತ್ತ ಸೋಗಿನಲ್ಲಿ ಐವರು ಯೋಧರನ್ನು ಕೊಂದ ಉಗ್ರ

    ಶ್ರೀನಗರ: ಇಡೀ ದೇಶಕ್ಕೆ ದೇಶವೇ ಅಭಿನಂದನ್ ಸ್ವಾಗತಕ್ಕೆ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದರು. ಆದರೆ ಕಣಿವೆ ನಾಡಿನಲ್ಲಿ ಉಗ್ರರು ತಮ್ಮ ಕುತಂತ್ರಿ ಬುದ್ಧಿ ಮುಂದುವರಿಸಿದ್ದು, ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಐವರು ಸೇನಾ ಅಧಿಕಾರಿಗಳು ಹುತಾತ್ಮರಾಗಿದ್ದಾರೆ.

    ಉಗ್ರರು ಮತ್ತು ಸೇನಾಪಡೆಗಳ ನಡುವೆ ಗಡಿ ನಿಯಂತ್ರಣ ರೇಖೆಯ ಕುಪ್ವಾರದ ಹಂದ್ವಾರದಲ್ಲಿ ಗುಂಡಿನ ಕಾಳಗ ನಡೆದಿದೆ. ಈ ಘಟನೆಯಲ್ಲಿ ಐವರು ಸೇನಾಧಿಕಾರಿಗಳು ಹುತಾತ್ಮರಾಗಿದ್ದು, ಓರ್ವ ನಾಗರಿಕ ಕೂಡ ಸಾವನ್ನಪ್ಪಿದ್ದಾರೆ.

    ಗುಂಡಿನ ದಾಳಿಯಲ್ಲಿ ಉಗ್ರಗಾಮಿಯೋರ್ವ ಸತ್ತಂತೆ ನಟಿಸಿದ್ದು, ಹತ್ತಿರ ಬರುತ್ತಿದ್ದ ಸೇನಾಪಡೆ ಮೇಲೆ ಏಕಾಏಕಿ ಗುಂಡಿನ ದಾಳಿ ಮಾಡಿದ್ದಾನೆ. ಈ ವೇಳೆ ಸಿಆರ್‍ಪಿಎಫ್ ಇನ್ಸ್ ಪೆಕ್ಟರ್ ಹಾಗೂ ನಾಲ್ವರು ಪೊಲೀಸ್ ಅಧಿಕಾರಿಗಳು ಹುತಾತ್ಮರಾಗಿದ್ದಾರೆ. ಇತ್ತ ಸತ್ತಂತೆ ನಟಿಸಿ ಯೋಧರನ್ನು ಕೊಂದ ಉಗ್ರ ಕೂಡ ಫಿನೀಶ್ ಆಗಿದ್ದಾನೆ ಎಂದು ಹೇಳಲಾಗುತ್ತಿದೆ.

    ಭಾರತ ಮತ್ತು ಪಾಕ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾಗುತ್ತಿದ್ದರೂ ಪಾಕಿಸ್ತಾನ ತನ್ನ ಕುತಂತ್ರಿ ಬುದ್ಧಿ ಬಿಟ್ಟಿಲ್ಲ. ಉಗ್ರರ ಮೂಲಕ ಗಡಿ ನಿಯಂತ್ರಣ ರೇಖೆಯ ಕುಪ್ವಾರದ ಹಂದ್ವಾರದಲ್ಲಿ ಶಾಂತಿ ಕದಡುತ್ತಿದೆ.

    ಗಡಿಯಲ್ಲಿನ ಕೊನೆಯ ಹಳ್ಳಿಗಳಲ್ಲಿ ವಾಸವಾಗಿರುವವರ ಭದ್ರತೆಗಾಗಿ ಪೂಂಚ್ ಸೆಕ್ಟರ್‍ನಲ್ಲಿ ಸೇನಾ ಬಂಕರ್‍ಗಳನ್ನು ಸ್ಥಾಪಿಸಲಾಗುತ್ತಿದೆ. ಸೇನೆ ನಮ್ಮ ಸುತ್ತಮುತ್ತಲೇ ಇರುವುದರಿಂದ ನಮಗೆ ಪಾಕಿಸ್ತಾನ ನೀಡುತ್ತಿದ್ದ ಭೀತಿ ದೂರಾಗಿದೆ ಅಂತ ಸ್ಥಳೀಯರು ಹೇಳುತ್ತಿದ್ದಾರೆ. ಈ ಮಧ್ಯೆ ಗಡಿಯಲ್ಲಿ ಸೇನಾ ಹೆಲಿಕಾಪ್ಟರ್ ಪತನವಾಗಿ ಹುತಾತ್ಮರಾದ ಇಬ್ಬರು ಪೈಲಟ್‍ಗಳ ಅಂತ್ಯಕ್ರಿಯೆ ಹುಟ್ಟೂರುಗಳಲ್ಲಿ ಸೇನಾ ಗೌರವದೊಂದಿಗೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಣ್ಣಾ ಮಲೈ ಸೇರಿ ನಾಲ್ವರು ಖಡಕ್ ಪೊಲೀಸ್ ಅಧಿಕಾರಿಗಳು ಬೆಂಗ್ಳೂರಿಗೆ ವರ್ಗಾವಣೆ

    ಅಣ್ಣಾ ಮಲೈ ಸೇರಿ ನಾಲ್ವರು ಖಡಕ್ ಪೊಲೀಸ್ ಅಧಿಕಾರಿಗಳು ಬೆಂಗ್ಳೂರಿಗೆ ವರ್ಗಾವಣೆ

    ಬೆಂಗಳೂರು: ಅಲೋಕ್ ಕುಮಾರ್ ಮತ್ತು ಗಿರೀಶ್ ಅವರಂತಹ ಖಡಕ್ ಪೊಲೀಸ್ ಅಧಿಕಾರಿಗಳನ್ನು ಸಿಸಿಬಿಗೆ ಹಾಕಿ, ದಂಧೆಕೋರರಿಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಬಿಸಿ ಮುಟ್ಟಿಸಿದ್ದಾರೆ. ಇದರ ಬೆನ್ನಲ್ಲೇ ಐವರು ಖಡಕ್ ಆಫೀಸರ್ ಗಳನ್ನು ವರ್ಗಾವಣೆ ಮಾಡಿದ್ದಾರೆ.

    ಭೂ ಮಾಫಿಯಾ ಮಟ್ಟ ಹಾಕಲು ಬೆಂಗಳೂರು ದಕ್ಷಿಣ ಡಿಸಿಪಿಯಾಗಿ ಅಣ್ಣಾ ಮಲೈ ಹಾಗೂ ಪೂರ್ವ ವಿಭಾಗ ಡಿಸಿಪಿಯಾಗಿ ರಾಹುಲ್ ಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದಾರೆ. ಬೆಂಗಳೂರು ವಿಭಾಗದ ಹೆಚ್ಚುವರಿ ಸಂಚಾರ ಆಯುಕ್ತರಾಗಿ ಹರಿಶೇಖರನ್, ಕೆಎಸ್‍ಆರ್‍ಪಿ 1ನೇ ಬೆಟಾಲಿಯನ್ ಕಮಾಂಡೆಂಟ್‍ಗೆ ಅಜಯ್ ಹಿಲೋರಿ ಹಾಗೂ ಚಿಕ್ಕಮಗಳೂರು ಎಸ್‍ಪಿಯಾಗಿ ಹರೀಶ್ ಪಾಂಡೆ ಅವರು ವರ್ಗಾವಣೆಯಾಗಿದ್ದಾರೆ. ಇದನ್ನು ಓದಿ: ಭೂಕಳ್ಳರನ್ನು ಮಟ್ಟ ಹಾಕಲು ಬೆಂಗ್ಳೂರಿಗೆ ಬರ್ತಿದ್ದಾರೆ ಎಸ್‍ಪಿ ಅಣ್ಣಾ ಮಲೈ

    ಈ ಮೂಲಕ ಮತ್ತೆ ನಾಲ್ವರು ಖಡಕ್ ಪೊಲೀಸ್ ಅಧಿಕಾರಿಗಳಿಗೆ ಬೆಂಗಳೂರಿನಲ್ಲಿ ಮಣೆ ಹಾಕಿ, ಕಳ್ಳರಿಗೆ ಹಾಗೂ ನಿಯಮ ಉಲ್ಲಂಘನೆ ಮಾಡುವವರಲ್ಲಿ ನಡುಕ ಹುಟ್ಟಿಸಲು ಎಚ್.ಡಿ.ಕುಮಾರಸ್ವಾಮಿ ಅವರು ತಂತ್ರ ಹೆಣೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೈಗೆ ಕೋಳ ಹಾಕದೆ ಕೈದಿಗಳಿಂದ ವಸತಿ ಗೃಹದ ಸ್ವಚ್ಛತೆ

    ಕೈಗೆ ಕೋಳ ಹಾಕದೆ ಕೈದಿಗಳಿಂದ ವಸತಿ ಗೃಹದ ಸ್ವಚ್ಛತೆ

    ಮಂಗಳೂರು: ಮಂಗಳೂರಿನ ಜೈಲು ಅಪರಾಧಿಗಳ ಪಾಲಿನ ನರಕ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದಕ್ಕೆ ಸಾಕ್ಷಿ ಜೈಲಿನ ಎದುರುಗಡೆ ಇರುವ ಜೈಲರ್ ವಸತಿಗೃಹವನ್ನು ಕೈದಿಗಳಿಂದಲೇ ಕ್ಲೀನ್ ಮಾಡಿಸಿದ್ದಾರೆ.

    ವಿಚಾರಣಾಧೀನ ಕೈದಿಗಳಿಗೆ ಕೈಗೆ ಕೊಳ ಹಾಕದೆ ಸ್ವತಂತ್ರವಾಗಿ ಬಿಟ್ಟು ವಸತಿಗೃಹ ಕ್ಲೀನ್ ಮಾಡಿಸಿದ್ದಾರೆ. ಇದು ಜೈಲಿನ ಮತ್ತೊಂದು ಅಕ್ರಮಕ್ಕೆ ಸಾಕ್ಷಿಯಾಗಿದೆ. ಸುಮಾರು 7 ರಿಂದ 8 ಕೈದಿಗಳು ಕ್ಲೀನ್ ಮಾಡುತ್ತಿದ್ದರೆ ಪೊಲೀಸರು ಮಾತ್ರ ಕೈದಿಗಳನ್ನು ದೂರದಲ್ಲೇ ಬಿಟ್ಟು ತಮ್ಮಷ್ಟಕ್ಕೆ ಹರಟೆ ಹೊಡೆಯುತ್ತಾ ಕುಳಿತಿದ್ದರು. ಈ ಮೂಲಕ ಜೈಲಿನ ಅಕ್ರಮಗಳಿಗೆ ಪರೋಕ್ಷವಾಗಿ ಭಾಗಿಯಾಗಿದ್ದಾರೆ. ಈ ಎಲ್ಲಾ ದೃಶ್ಯಗಳು ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಜೈಲಿನ ಒಳಭಾಗದಲ್ಲಿ ಕೈದಿಗಳಿಂದ ಕೆಲಸ ಮಾಡಿಸುವುದು ಸಾಮಾನ್ಯವಾಗಿದೆ. ಆದರೆ ಜೈಲಿನ ಹೊರಗೆ ಸಾರ್ವಜನಿಕ ಪ್ರದೇಶದಲ್ಲೂ ಕೈದಿಗಳನ್ನು ಸ್ವತಂತ್ರವಾಗಿ ಬಿಟ್ಟು ಕೆಲಸ ಮಾಡಿಸಿರುವುದು ಮಂಗಳೂರು ಜೈಲಿನಲ್ಲಿ ಮಾತ್ರ. ಅಧಿಕಾರಿಗಳ ಸೂಚನೆಯಂತೆ ಕೆಲಸಕ್ಕೆಂದು ಹೊರಗೆ ಬಂದ ಕೈದಿಗಳು ಅಲ್ಲಿಂದಲೇ ತಪ್ಪಿಸಿಕೊಂಡು ಹೋಗಿ ಮತ್ತೊಂದು ದುಷ್ಕೃತ್ಯ ಎಸಗಿದರೆ ಯಾರು ಹೊಣೆ ಎಂಬ ಮಾತು ಸಾರ್ವಜನಿಕವಾಗಿ ವ್ಯಕ್ತವಾಗಿದೆ.

    ಈ ಹಿಂದೆ ಜೈಲಿನ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜೈಲಿನೊಳಗೇ ಒಂದೇ ದಿನ ಇಬ್ಬರು ಪಾತಕಿಗಳ ಹತ್ಯೆ ನಡೆದಿದೆ. ಗುಂಡು ಪಾರ್ಟಿ ನಡೆಸಿರೋದು, ತಪಾಸಣೆಗೆ ತೆರಳಿದ್ದ ಸ್ಥಳೀಯ ಪೊಲೀಸರಿಗೆ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಇಲ್ಲಿ ಸ್ಮರಿಸಬಹುದು. ಈ ಹಿಂದೆ ಇದೇ ರೀತಿ ಕೈದಿಗಳಿಂದ ವಸತಿಗೃಹ ಕ್ಲೀನ್ ಮಾಡಿಸಿದ್ದ ವರದಿಯನನ್ನ ಪಬ್ಲಿಕ್ ಟಿವಿಯಲ್ಲಿ ಪ್ರಸಾರ ಮಾಡಿದ ಬಳಿಕ ಅಂದಿನ ಜೈಲು ಅಧೀಕ್ಷಕರನ್ನು ಅಮಾನಾತು ಮಾಡಲಾಗಿತ್ತು.

  • ಸಿಎಂ ಗೃಹಕಚೇರಿ ಕೃಷ್ಣಾದಲ್ಲಿಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ

    ಸಿಎಂ ಗೃಹಕಚೇರಿ ಕೃಷ್ಣಾದಲ್ಲಿಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ

    ಬೆಂಗಳೂರು: ಮುಂಬರುವ ಚುನಾವಣೆಗೆ ಬಿಜೆಪಿಯಿಂದ ಹಿಂದುತ್ವ ಅಜೆಂಡಾ ಘೋಷಣೆ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಮಹತ್ವದ ಸಭೆ ಕರೆದಿದ್ದಾರೆ. ಗೃಹ ಕಚೇರಿ ಕೃಷ್ಣದಲ್ಲಿ ಇಂದು ಬೆಳಗ್ಗೆ 11 ಗಂಟೆಯಿಂದ ಸಭೆ ನಡೆಯಲಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು, ಎಸ್.ಪಿ.ಗಳು, ಪೊಲೀಸ್ ಆಯುಕ್ತರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

    ಪ್ರಮುಖವಾಗಿ ಬಿಜೆಪಿ ಹಿಂದುತ್ವ ಅಜೆಂಡಾ ಮುಂದಿಟ್ಟಿಕೊಂಡು ಚುನಾವಣೆ ಅಖಾಡಕ್ಕೆ ಧುಮುಕುವ ಮುನ್ಸೂಚನೆ ನೀಡಿದೆ. ಹೀಗಾಗಿ ಕಾನೂನು ಸುವ್ಯವಸ್ಥೆ ಬಗ್ಗೆ ಎಚ್ಚರ ವಹಿಸುವಂತೆ ಸಿಎಂ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡುವ ಸಾಧ್ಯತೆ ಇದೆ. ಇದಲ್ಲದೆ ಇಂದಿನಿಂದ ಪ್ರಾರಂಭವಾಗುವ ಬಿಜೆಪಿ ಪರಿವರ್ತನಾ ಯಾತ್ರೆಯ ಸಂಬಂಧ ಭದ್ರತೆ, ಸಭೆಗೆ ಅನುಮತಿ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡುವ ಸಾಧ್ಯತೆ ಇದೆ.

    ಉಳಿದಂತೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕೇಸ್, ಮಂಗಳೂರು ಕೋಮು ಗಲಭೆ ವಿಚಾರಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಚರ್ಚೆ ನಡೆಸಲಿದ್ದು, ಕಾನೂನು ಸುವ್ಯವಸ್ಥೆಯ ಬಗ್ಗೆ ಸಿಎಂ ಹಿರಿಯ ಪೊಲೀಸ್ ಅಧಿಕಾರಿಗಳ ಖಡಕ್ ಸೂಚನೆ ನೀಡುವ ಸಾಧ್ಯತೆ ಇದೆ.