Tag: Police Investigation System

  • ಪೊಲೀಸ್ ತನಿಖೆ ವ್ಯವಸ್ಥೆಯಲ್ಲಿ ಹೆಚ್ಚಿನ ತಾಂತ್ರಿಕ ಬದಲಾವಣೆ ಅಗತ್ಯ: ಜಗದೀಶ್ ಶೆಟ್ಟರ್

    ಪೊಲೀಸ್ ತನಿಖೆ ವ್ಯವಸ್ಥೆಯಲ್ಲಿ ಹೆಚ್ಚಿನ ತಾಂತ್ರಿಕ ಬದಲಾವಣೆ ಅಗತ್ಯ: ಜಗದೀಶ್ ಶೆಟ್ಟರ್

    ಹುಬ್ಬಳ್ಳಿ: ಪೊಲೀಸ್ ತನಿಖೆ ವ್ಯವಸ್ಥೆಯಲ್ಲಿ ಇನ್ನೂ ತಾಂತ್ರಿಕ ಬದಲಾವಣೆ ತಂದು ಅಪರಾಧಿಗಳಿಗೆ ಶೀಘ್ರವಾಗಿ ಶಿಕ್ಷೆ ಆಗುವಂತಾಗಬೇಕೆಂದು ಮಾಜಿ ಸಿಎಂ ಶಾಸಕ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.

    ಹುಬ್ಬಳ್ಳಿ ಗೋಕುಲ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಪ್ರಾದೇಶಿಕ ನ್ಯಾಯವಿಜ್ಞಾನ ಪ್ರಯೋಗಾಲಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಹಿಂದೆ ವಿಧಿವಿಜ್ಞಾನ ಪ್ರಯೋಗಲಾಯದ ವರದಿಗಳು ವಿಳಂಬವಾಗುತ್ತಿದ್ದ ಕಾರಣಕ್ಕೆ ಅನೇಕ ಕ್ರಿಮಿನಲ್ ಪ್ರಕರಣಗಳಲ್ಲಿ ನ್ಯಾಯದಾನ ಮಾಡುವುದು ಕಷ್ಟವಾಗುತ್ತಿತ್ತು. ಸೂಕ್ತ ಸಾಕ್ಷ್ಯಾಧಾರಗಳಿಲ್ಲದೇ ಅನೇಕ ಪ್ರಕರಣಗಳು ವಿಲೇಯಾದ ಉದಾಹರಣೆಗಳಿವೆ. ಪೊಲೀಸ್ ಹಾಗೂ ತನಿಖೆ ವ್ಯವಸ್ಥೆ ಬಲಪಡಿಸಲು ಇನ್ನಷ್ಟು ಸುಧಾರಣಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು. ಇದನ್ನೂ ಓದಿ: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮುಖ್ಯಸ್ಥ ಪಾಣಕ್ಕಾಡ್ ತಂಙಳ್ ನಿಧನ

    ಪೊಲೀಸ್ ಠಾಣೆಗಳು, ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ಸ್ಥಾಪನೆಗೆ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು ಉದಾರವಾಗಿ ಭೂಮಿ ನೀಡಬೇಕು ಎಂದರು. ಇನ್ನೂ ಮುಖ್ಯಮಂತ್ರಿಯವರು ಬಜೆಟ್‍ನಲ್ಲಿ ಧಾರವಾಡದಲ್ಲಿ ವಿಶೇಷ ಹೂಡಿಕೆ ಪ್ರದೇಶ ಹಾಗೂ ಎಫ್.ಎಂ.ಸಿ.ಜಿ.ಕ್ಲಸ್ಟರ್ ಸ್ಥಾಪನೆಗೆ ಅಧಿಕೃತ ಘೋಷಣೆ ಮಾಡಿರುವುದನ್ನು ಅಭಿನಂದಿಸಿದರು. ಇದನ್ನೂ ಓದಿ: ಉಕ್ರೇನ್‍ನಿಂದ ವಾಪಸ್ಸಾದ ವಿದ್ಯಾರ್ಥಿನಿಯನ್ನು ಬರ ಮಾಡಿಕೊಂಡ ಬೊಮ್ಮಾಯಿ