Tag: police force

  • ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ – ಪೊಲೀಸರ ಮೇಲೆಯೇ ಗುಂಡಿನ ದಾಳಿ, ಶಸ್ತ್ರಾಸ್ತ್ರ ಧ್ವಂಸ

    ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ – ಪೊಲೀಸರ ಮೇಲೆಯೇ ಗುಂಡಿನ ದಾಳಿ, ಶಸ್ತ್ರಾಸ್ತ್ರ ಧ್ವಂಸ

    ಇಂಪಾಲ: ಸಂಘರ್ಷ ಪೀಡಿತ ಪ್ರದೇಶವಾದ ಮಣಿಪುರದಲ್ಲಿ (Manipur) ಶುಕ್ರವಾರ ರಾತ್ರಿ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಪೊಲೀಸ್ (Police) ಪಡೆಯ ಮೇಲೆ ಗುಂಡಿನ ದಾಳಿ ನಡೆಸಿದ್ದು, ಶನಿವಾರ ಮುಂಜಾನೆಯವರೆಗೂ ಗುಂಡಿನ ದಾಳಿ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಣಿಪುರದ ಬಿಷ್ಣುಪುರ್ ಜಿಲ್ಲೆಯ ಕ್ವಾಕ್ಟಾ ಮತ್ತು ಚುರಾಚಂದ್‌ಪುರ್ ಜಿಲ್ಲೆಯ ಕಾಂಗ್ವಾಯ್‌ನಲ್ಲಿ ಗುಂಡಿನ ದಾಳಿ ನಡೆಸಿದ್ದು, ಗುಂಪು ಗುಂಪಾಗಿ ಸೇರಿಕೊಂಡು ಅಲ್ಲಲ್ಲಿ ಬೆಂಕಿ ಹಚ್ಚುವ ವಿದ್ವಂಸಕ ಕೃತ್ಯಗಳು ನಡೆದಿವೆ. ಭಾರತೀಯ ಸಶಸ್ತ್ರ ಪಡೆ, ಅಸ್ಸಾಂ ರೈಫಲ್ಸ್, ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್ (RAF) ಮತ್ತು ರಾಜ್ಯ ಪೊಲೀಸರ ಜಂಟಿ ಪಡೆಗಳು ಇಂಪಾಲದ ಪೂರ್ವ ಜಿಲ್ಲೆಯಲ್ಲಿ ಮಧ್ಯರಾತ್ರಿಯವರೆಗೆ ಧ್ವಜ ಮೆರವಣಿಗೆ (Flag March) ಕೈಗೊಂಡಿದ್ದ ಸಂದರ್ಭ ಅಡ್ವಾನ್ಸ್ ಆಸ್ಪತ್ರೆ ಬಳಿಯ ಅರಮನೆ ಕಾಂಪೌಂಡ್‌ನಲ್ಲಿ ಬೆಂಕಿ ಹಚ್ಚುವ ಪ್ರಯತ್ನ ನಡೆದಿದೆ. ಇದನ್ನೂ ಓದಿ: Biparjoy ಸೈಕ್ಲೋನ್‌ನಿಂದ ತೊಂದರೆಗೆ ಸಿಲುಕಿದ್ದ ಮಗುವನ್ನು ಸಿಮೆಂಟ್ ಚೀಲದಲ್ಲಿ ಸಾಗಿಸಿದ ಸಿಬ್ಬಂದಿ

    ಶುಕ್ರವಾರ ಸಂಜೆ ಸುಮಾರು 1,000 ಜನರ ಗುಂಪು ಸೇರಿಕೊಂಡು ಈ ದುಷ್ಕೃತ್ಯ ಎಸಗಿದ್ದಾರೆ. ಈ ಗುಂಪನ್ನು ಚದುರಿಸುವ ಸಲುವಾಗಿ ಆರ್‌ಎಎಫ್ ಆಶ್ರವಾಯು ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ವಿಸ್ಕಿ ಬಾಟ್ಲಿಯಲ್ಲಿ 13 ಕೋಟಿ ರೂ. ಮೌಲ್ಯದ ಕೊಕೇನ್- ಕೀನ್ಯಾ ಮಹಿಳೆ ಅರೆಸ್ಟ್

    ಮಣಿಪುರ ವಿಶ್ವವಿದ್ಯಾನಿಲಯದ ಬಳಿ ಗುಂಪೊಂದು ನಿರ್ಮಾಣವಾಗಿದ್ದು, ರಾತ್ರಿ 10:40ರ ಸುಮಾರಿಗೆ 200ರಿಂದ 300 ಮಂದಿ ಸೇರಿಕೊಂಡು ಶಾಸಕರ ಮನೆಗೆ ಬೆಂಕಿ ಹಚ್ಚುವ ಪ್ರಯತ್ನ ಮಾಡಿದ್ದಾರೆ. ಆರ್‌ಎಎಫ್ ತಂಡವು ಈ ಗುಂಪನ್ನು ಚದುರಿಸುವಲ್ಲಿ ಯಶಸ್ವಿಯಾಗಿದೆ. ಅದೇ ರಾತ್ರಿ ಮತ್ತೊಂದು ಗುಂಪು ಇಂಪಾಲದ ಪಶ್ಚಿಮ ಜಿಲ್ಲೆಯ ಇರಿಂಗ್‌ಬಾಮ್ (Iringbam) ಪೊಲೀಸ್ ಠಾಣೆಯ ಶಸ್ತ್ರಾಸ್ತ್ರಗಳನ್ನು ಧ್ವಂಸಗೊಳಿಸಲು ಪ್ರಯತ್ನಿಸಿದೆ. ಸುಮಾರು 300ರಿಂದ 400 ಮಂದಿ ಪೊಲೀಸ್ ಠಾಣೆಯ ಒಳಗೆ ನುಗ್ಗಿದ್ದು, ಆರ್‌ಎಎಫ್ ತಂಡ ಗುಂಪನ್ನು ಚದುರಿಸಿದೆ. ಅಲ್ಲದೇ 200ರಿಂದ 300 ಜನರ ಗುಂಪೊಂದು ಬಿಜೆಪಿ ಕಚೇರಿಗೆ ಸುತ್ತುವರೆದಿದ್ದು, ಸೇನಾ ಪಡೆಯು ಅದನ್ನು ಚದುರಿಸಿದೆ ಎಂದು ಸೇನಾ ಮೂಲಗಳು ತಿಳಿಸಿದೆ. ಇದನ್ನೂ ಓದಿ: Cyclone Biparjoy: ಗುಜರಾತ್‍ನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ ಸೈಕ್ಲೋನ್

    ಪಶ್ಚಿಮ ಇಂಪಾಲದಲ್ಲಿರುವ ಬಿಜೆಪಿ ಅಧ್ಯಕ್ಷ ಅಧಿಕಾರಿಮಯುಮ್ ಶಾರದಾ ದೇವಿಯವರ ನಿವಾಸವನ್ನೂ ಧ್ವಂಸಗೊಳಿಸಲು ಪ್ರಯತ್ನ ಪಟ್ಟಿದ್ದು, ಅದನ್ನು ಸೇನೆ ಮತ್ತು ಆರ್‌ಎಎಫ್ ತಡೆದಿದೆ. 1,200 ಜನರ ಗುಂಪೊಂದು ಕೇಂದ್ರ ಸಚಿವ ಆರ್‌ಕೆ ರಂಜನ್ ಸಿಂಗ್ (R.K.Ranjan Singh) ಅವರ ಮನೆಯನ್ನು ಸುಟ್ಟುಹಾಕಿದ ಬಳಿಕ ಈ ಘಟನೆ ನಡೆದಿದೆ. ಇದನ್ನೂ ಓದಿ: ಟ್ಯೂಷನ್ ಮುಗಿಸಿ ಬರುತ್ತಿದ್ದಾಗ 10ನೇ ಕ್ಲಾಸ್ ವಿದ್ಯಾರ್ಥಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ರು

    ಕಳೆದ ಕೆಲವು ದಿನಗಳಿಂದ ಮಣಿಪುರ ಕೋಮು ಸಂಘರ್ಷವು ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು, ರಾಜಕಾರಣಿಗಳ ಮನೆ ಹಾಗೂ ಆಸ್ತಿಪಾಸ್ತಿಗಳನ್ನು ಧ್ವಂಸ ಮಾಡುವ ಗುರಿಯನ್ನು ಕೆಲ ಗುಂಪುಗಳು ಹೊಂದಿವೆ. ಈ ಹಿನ್ನೆಲೆ ಅಲ್ಲಲ್ಲಿ ಬೆಂಕಿ ಹಚ್ಚುವ ಕಾರ್ಯಗಳು ನಡೆಯುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಕೇಂದ್ರ ಸರ್ಕಾರ ಶ್ರಮಿಸಬೇಕಿದೆ. ಇದನ್ನೂ ಓದಿ: ವರದಕ್ಷಿಣೆ ಕೇಳಿದ್ದಕ್ಕೆ ವರನನ್ನೇ ಮರಕ್ಕೆ ಕಟ್ಟಿ ಹಾಕಿದ ವಧುವಿನ ಕಡೆಯವ್ರು

  • ತಂತ್ರಜ್ಞಾನ ಈಗ ಭದ್ರತಾ ವ್ಯವಸ್ಥೆಯಲ್ಲಿ ಸಂಭಾವ್ಯ ಅಸ್ತ್ರವಾಗಿದೆ: ಮೋದಿ

    ತಂತ್ರಜ್ಞಾನ ಈಗ ಭದ್ರತಾ ವ್ಯವಸ್ಥೆಯಲ್ಲಿ ಸಂಭಾವ್ಯ ಅಸ್ತ್ರವಾಗಿದೆ: ಮೋದಿ

    ನವದೆಹಲಿ: ತಂತ್ರಜ್ಞಾನ ಈಗ ಭದ್ರತಾ ವ್ಯವಸ್ಥೆಯಲ್ಲಿ ಸಂಭಾವ್ಯ ಅಸ್ತ್ರವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

    ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಶನಿವಾರ ಬೆಳಗ್ಗೆ ಗಾಂಧಿನಗರದ ಲಾವಡ್ ಪ್ರದೇಶದ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಾತನಾಡಿದರು. ಭದ್ರತಾ ಪಡೆಗಳನ್ನು ಶ್ಲಾಘಿಸಿದರು ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ಹೋರಾಟಕ್ಕೆ ಅವರ ಕೊಡುಗೆಯನ್ನು ಸ್ಮರಿಸಿದರು.

    ದೇಶದ ಭದ್ರತೆಯಲ್ಲಿ ತಂತ್ರಜ್ಞಾನದ ಪಾತ್ರವನ್ನು ಒತ್ತಿ ಹೇಳಿದ ಅವರು, ತಂತ್ರಜ್ಞಾನವು ಈಗ ಭದ್ರತಾ ವ್ಯವಸ್ಥೆಯಲ್ಲಿ ಸಂಭಾವ್ಯ ಅಸ್ತ್ರವಾಗಿದೆ. ಭದ್ರತಾ ಪಡೆಗಳಲ್ಲಿರಲು ಕೇವಲ ದೈಹಿಕ ತರಬೇತಿ ಸಾಕಾಗುವುದಿಲ್ಲ. ಈಗ ವಿಶೇಷ ಸಾಮಥ್ರ್ಯವುಳ್ಳ ಹಾಗೂ ದೈಹಿಕವಾಗಿ ಸದೃಢರಾಗದಿದ್ದರೂ ಸಹ ಭದ್ರತೆಗೆ ಕೊಡುಗೆ ನೀಡಬಹುದು ಎಂದರು. ಇದನ್ನೂ ಓದಿ: ಭಾರತದ ರಫೇಲ್ ಯುದ್ಧ ವಿಮಾನ ಎದುರಿಸಲು ಚೀನಾದ ಜೆ-10ಸಿ ಫೈಟರ್ ಜೆಟ್ ಖರೀದಿಸಿದ ಪಾಕಿಸ್ತಾನ

    ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ನಾವು ನೋಡಿದ್ದೇವೆ. ಲಾಕ್‍ಡೌನ್ ಸಮಯದಲ್ಲಿ ಸಮವಸ್ತ್ರದಲ್ಲಿ ಅನೇಕ ಪೊಲೀಸರು ಅಗತ್ಯವಿರುವವರಿಗೆ ಆಹಾರ ಮತ್ತು ಔಷಧಿಗಳನ್ನು ನೀಡಿದರು. ಜನರು ಪೊಲೀಸರ ಮಾನವೀಯ ಮುಖವನ್ನು ನೋಡಿದ್ದಾರೆ ಎಂದು ಹೇಳಿದರು.

    ಪೊಲೀಸರ ಬಗ್ಗೆ ಜನರಲ್ಲಿರುವ ಗ್ರಹಿಕೆಯನ್ನು ಬದಲಾಯಿಸುವ ರೀತಿಯಲ್ಲಿ ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಬೇಕು. ಪೊಲೀಸ್ ಬಗ್ಗೆ ಜನರಲ್ಲಿ ಒಂದು ಕೆಟ್ಟ ಗ್ರಹಿಕೆ ಇದೆ. ಜನರೊಂದಿಗೆ ಸೌಹಾರ್ದಯುತವಾಗಿರುವ ರೀತಿಯಲ್ಲಿ ಪೊಲೀಸ್ ಪಡೆಯನ್ನು ತರಬೇತುಗೊಳಿಸುವುದು ಕಡ್ಡಾಯವಾಗಿದೆ ಎಂದು ಸಲಹೆ ನೀಡಿದರು. ಇದನ್ನೂ ಓದಿ: ನೆದರ್‌ಲ್ಯಾಂಡ್‌ನ ಅಮೆರಿಕ ರಾಯಭಾರಿಯಾಗಿ ಭಾರತ ಮೂಲದ ಮಹಿಳೆ ನಾಮನಿರ್ದೇಶನ

    ಭದ್ರತಾ ಪಡೆಗಳಲ್ಲಿನ ನೇಮಕಾತಿಯಲ್ಲಿನ ಸುಧಾರಣೆಗಳ ಅಗತ್ಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸ್ವಾತಂತ್ರ್ಯದ ನಂತರ, ಕಾನೂನು ಮತ್ತು ಸುವ್ಯವಸ್ಥೆಯಲ್ಲಿನ ನೇಮಕಾತಿಯಲ್ಲಿ ಸುಧಾರಣೆಗಳ ಅಗತ್ಯವಿತ್ತು. ದುರದೃಷ್ಟವಶಾತ್ ನಾವು ಹಿಂದುಳಿದಿದ್ದೇವೆ ಎಂದು ಹೇಳಿದರು.

    ಪ್ರಧಾನಿ ಮೋದಿಯವರ ಎರಡು ದಿನಗಳ ಗುಜರಾತ್ ಭೇಟಿ ಶುಕ್ರವಾರ ಪ್ರಾರಂಭವಾಯಿತು. ಅಲ್ಲಿ ಅವರು ವಿಮಾನ ನಿಲ್ದಾಣದಿಂದ ಬಿಜೆಪಿ ಕಚೇರಿ ಕಮಲಂವರೆಗೆ ರೋಡ್‍ಶೋ ನಡೆಸಿದರು. ನಂತರ ಅಹಮದಾಬಾದ್‍ನಲ್ಲಿ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿದರು. ಇದಲ್ಲದೆ ಅಹಮದಾಬಾದ್‍ನ ಜಿಎಂಡಿಸಿ ಮೈದಾನದಲ್ಲಿ ಮಹಾ ಪಂಚಾಯತ್ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು.

    ನಂತರ ಗಾಂಧಿನಗರದಲ್ಲಿರುವ ಅವರ ನಿವಾಸದಲ್ಲಿ ಅವರ ತಾಯಿ ಹೀರಾಬೆನ್ ಮೋದಿ ಅವರನ್ನು ಭೇಟಿ ಮಾಡಿ ಅವರ ಜೊತೆ ಕುಳಿತು ಭೋಜನ ಸ್ವೀಕರಿಸಿದರು.

  • ತೃತೀಯಲಿಂಗಿಗಳನ್ನು ಪೊಲೀಸ್ ಪಡೆಗೆ ಸೇರಿಸಲು ಕೇರಳ ಸರ್ಕಾರ ಚಿಂತನೆ

    ತೃತೀಯಲಿಂಗಿಗಳನ್ನು ಪೊಲೀಸ್ ಪಡೆಗೆ ಸೇರಿಸಲು ಕೇರಳ ಸರ್ಕಾರ ಚಿಂತನೆ

    ತಿರುವನಂತಪುರಂ: ಕೇರಳದಲ್ಲಿ ಶೀಘ್ರವೇ ತೃತೀಯಲಿಂಗಿ ಪೊಲೀಸ್ ಅಧಿಕಾರಿಗಳನ್ನು ನೇಮಕಗೊಳಿಸುವ ಸಾಧ್ಯತೆ ಇದೆ. ತೃತೀಯ ಲಿಂಗಿಗಳನ್ನು ರಾಜ್ಯ ಪೊಲೀಸ್ ಪಡೆಗೆ ಸೇರಿಸಿಕೊಳ್ಳಲು ಕೇರಳ ಸರ್ಕಾರ ಚಿಂತನೆ ನಡೆಸಿದೆ.

    ಕೇರಳ ಪೊಲೀಸ್ ಅಧಿಕಾರಿಗಳ ಸಂಘ ತೃತೀಯಲಿಂಗಿಗಳನ್ನು ಪೊಲೀಸ್ ಪಡೆಗೆ ಸೇರಿಸುವ ಕ್ರಮವನ್ನು ಬೆಂಬಲಿಸುತ್ತಿರುವುದು ಗಮನಾರ್ಹ. ಮಹಿಳೆಯರನ್ನು ಶೇಕಡಾವಾರು ನೇಮಕಾತಿ ಮಾಡಲಾಗುತ್ತದೆ. ಆದರೆ ಈ ಕಾನೂನು ಸರಿಯಲ್ಲ. ತೃತೀಯಲಿಂಗಿಗಳನ್ನು ಪೊಲೀಸ್ ಪಡೆಗೆ ಸೇರಿಸಿಕೊಳ್ಳುವ ನಿರ್ಧಾರದಿಂದ ಲಿಂಗ ಭೇದ ಕಡಿಮೆಯಾಗಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಆರ್. ಬಿಜು ತಿಳಿಸಿದರು. ಇದನ್ನೂ ಓದಿ: ಒಂದು ವರ್ಷದಲ್ಲಿ 11 ಬಾರಿ ಕೊರೊನಾ ಲಸಿಕೆ ಪಡೆದ ವೃದ್ಧನ ವಿರುದ್ಧ FIR

    ತೃತೀಯ ಲಿಂಗಿಗಳನ್ನು ಪೊಲೀಸ್ ಪಡೆಗೆ ಸೇರಿಸುವ ಮೊದಲು ಹಲವು ಅಂಶಗಳನ್ನು ಪರಿಗಣಿಸಬೇಕಿದೆ. ಅವರನ್ನು ಹೇಗೆ ನೇಮಕ ಮಾಡಲಾಗುತ್ತದೆ, ತರಬೇತಿ ಹೇಗೆ ನೀಡಬೇಕು ಹಾಗೂ ಅವರನ್ನು ಯಾವೆಲ್ಲಾ ಕ್ಷೇತ್ರಗಳಲ್ಲಿ ನೇಮಿಸಬಹುದು ಎಂದು ಎಡಿಜಿಪಿಗಳ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು. ಇದನ್ನೂ ಓದಿ: ಬಜೆಟ್‌ ಅಧಿವೇಶನಕ್ಕೂ ಮುನ್ನ ಪಾರ್ಲಿಮೆಂಟ್‌ನ 402 ಸಿಬ್ಬಂದಿಗೆ ಕೊರೊನಾ ಪಾಸಿಟಿವ್‌

    ತೃತೀಯ ಲಿಂಗಿಗಳನ್ನು ಪೊಲೀಸ್ ಪಡೆಗಳಲ್ಲಿ ನೇಮಿಸಲು ಕಾನೂನು ಹಾಗೂ ಸುವ್ಯವಸ್ಥೆ ಅಡಿಯಲ್ಲಿ ಪರಿಶೀಲಿಸುವ ಸಾಧ್ಯತೆಗಳಿವೆ. ನಂತರ ಎಲ್ಲಾ ಅಭಿಪ್ರಾಯಗಳನ್ನು ಒಟ್ಟುಗೂಡಿಸಿ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸಲ್ಲಿಸಲಾಗುವುದು ಎಂದರು.