Tag: Police Enquiry

  • ಬಿಕ್ಲು ಶಿವ ಕೊಲೆ ಕೇಸ್‌ – ಇಂದು ಮತ್ತೆ ವಿಚಾರಣೆ, FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಬೈರತಿ ಬಸವರಾಜ್

    ಬಿಕ್ಲು ಶಿವ ಕೊಲೆ ಕೇಸ್‌ – ಇಂದು ಮತ್ತೆ ವಿಚಾರಣೆ, FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಬೈರತಿ ಬಸವರಾಜ್

    ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್‌ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ (Biklu Shiva Murder case) 5ನೇ ಆರೋಪಿಯಾಗಿರುವ ಮಾಜಿ ಸಚಿವ ಬೈರತಿ ಬಸವರಾಜ್ (Byrathi Basavaraj) ಇಂದು 2ನೇ ಬಾರಿಗೆ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.

    ಈ ನಡುವೆ ತಮ್ಮ ವಿರುದ್ಧದ ಎಫ್‌ಐಆರ್‌ ರದ್ದು ಕೋರಿ ಶುಕ್ರವಾರವೇ (ಜು.18) ಹೈಕೋರ್ಟ್‌ಗೆ (Karnataka Highcourt) ಅರ್ಜಿ ಸಲ್ಲಿಸಿದ್ದರು. ಶನಿವಾರ (ಜು.19) ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್‌ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ, ಇಂದಿಗೆ ಮುಂದೂಡಿಕೆ ಮಾಡಿತ್ತು. ಇದನ್ನೂ ಓದಿ: ಒಂದೇ ಬೈಕ್‌ನಲ್ಲಿ ನಾಲ್ವರು ಪ್ರಯಾಣ – ಓವರ್ ಸ್ಪೀಡ್‌ನಿಂದ ಡಿವೈಡರ್‌ಗೆ ಡಿಕ್ಕಿ; ಓರ್ವ ಸಾವು

    ಈಗಾಗಲೇ ಈ ಪ್ರಕರಣದಲ್ಲಿ ಹನ್ನೊಂದು ಜನ ಆರೋಪಿಗಳು ಅರೆಸ್ಟ್ ಆಗಿದ್ದು, ಇವರಲ್ಲಿ ಹಲವರು ಬೈರತಿ ಬಸವರಾಜ್‌ಗೆ ಆಪ್ತರು ಎನ್ನಲಾಗಿದೆ. ಆರೋಪಿಗಳ ವಿಚಾರಣೆಯಲ್ಲಿ ಸಿಕ್ಕ ಮಾಹಿತಿ ಆಧಾರದ ಮೇಲೆ ಪೊಲೀಸರು ವಿಚಾರಣೆ ನಡೆಸಲಿದ್ದಾರೆ‌‌. ನಡುವೆ ಜಗದೀಶ್ ಪತ್ತೆಯಾಗದ ಹಿನ್ನೆಲೆ ಇಂದು ಬೈರತಿ ಬಸವರಾಜ್ ರನ್ನು ಬಂಧಿಸುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಬ್ಯಾಂಗಲ್ ಸ್ಟೋರ್, ಬೇಕರಿಗೆ ನುಗ್ಗಿದ ಲಾರಿ – ಮೂವರು ಸಾವು, ಐವರಿಗೆ ಗಾಯ

    ಸತತ ಮೂರುವರೆಗಂಟೆ ಗ್ರಿಲ್‌
    ಇನ್ನೂ ಕಳೆದ ಶನಿವಾರ ಭಾರತಿನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದ ಮಾಜಿ ಸಚಿವ ಬೈರತಿ ಬಸವರಾಜ್‌ ಸತತ ಮೂರುವರೆಗಂಟೆಗಳ ಕಾಲ ವಿಚಾರನೆ ಎದುರಿಸಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಕೊಲೆ ಪ್ರಕರಣದಲ್ಲಿ ವಿಚಾರಣೆಗೆ ಕರೆದಿದ್ರು, ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೀನಿ. ಇದರಲ್ಲಿ ನನ್ನ ಪಾತ್ರ ಇಲ್ಲ ಅಂತಾ ಹೇಳಿದ್ದೇನೆ. ನನಗೂ ಕೊಲೆಗೂ ಸಂಬಂಧವಿಲ್ಲ, ಯಾವ ಜಗ್ಗನೂ ನನಗೆ ಗೊತ್ತಿಲ್ಲ. ಬುಧವಾರ ಮತ್ತೆ ವಿಚಾರಣೆಗೆ ಬರಬೇಕೆಂದು ಹೇಳಿದ್ದಾರೆ. ಬರುತ್ತೇನೆ. ತನಿಖೆಗೆ ಎಲ್ಲ ರೀತಿಯಿಂದಲೂ ಸಹಕಾರ ಕೊಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಹಾವೇರಿ | ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ – ಐವರಿಗೆ ಗಾಯ

  • ಕೊಲೆ ಕೇಸಲ್ಲಿ ಮೂರೂವರೆ ಗಂಟೆ ಪೊಲೀಸರಿಂದ ಗ್ರಿಲ್ – ಹೊರ ಬರ್ತಿದ್ದಂತೆ ಬೆಂಬಲಿಗರಿಂದ ಜೈಕಾರ

    ಕೊಲೆ ಕೇಸಲ್ಲಿ ಮೂರೂವರೆ ಗಂಟೆ ಪೊಲೀಸರಿಂದ ಗ್ರಿಲ್ – ಹೊರ ಬರ್ತಿದ್ದಂತೆ ಬೆಂಬಲಿಗರಿಂದ ಜೈಕಾರ

    – ಬುಧವಾರ ಮತ್ತೆ ವಿಚಾರಣೆಗೆ ಹಾಜರಾಗಲು ಸೂಚನೆ
    – ಕೊಲೆಗೂ ನನಗೂ ಸಂಬಂಧವಿಲ್ಲ ಎಂದ ಮಾಜಿ ಸಚಿವ

    ಬೆಂಗಳೂರು: ರೌಡಿಶೀಟರ್ ಬಿಕ್ಲಶಿವ ಕೊಲೆ ಪ್ರಕರಣದಲ್ಲಿ (Murder Case) ಎ5 ಆರೋಪಿ ಆಗಿರುವ ಕೆ.ಆರ್‌ ಪುರ ಬಿಜೆಪಿ ಶಾಸಕ ಬೈರತಿ ಬಸವರಾಜ್ (Byrathi Basavaraj) ಭಾರತಿನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಸತತ ಮೂರುವರೆಗಂಟೆಗಳ ಕಾಲ ವಿಚಾರಣೆ ಎದುರಿಸಿದರು.

    ಬಂಧನ ಭೀತಿಯಿಂದ ಮಧ್ಯಾಹ್ನದವರೆಗೂ ವಿಚಾರಣೆಗೆ ಬಂದಿರಲಿಲ್ಲ. ಹೆಚ್ಚಿನ ಪೊಲೀಸ್ ಭದ್ರತೆಯೊಂದಿಗೆ ತನಿಖಾಧಿಕಾರಿ (Investigation Officer) ಕಾದು ಕುಳಿತಿದ್ದರು. ಮಧ್ಯಾಹ್ನ 2:30ರ ಸುಮಾರಿಗೆ ಬಂದ ಮಾಜಿ ಸಚಿವರಿಗೆ ಸುಮಾರು ಮೂರುವರೆ ಗಂಟೆಗಳ ಕಾಲ ತನಿಖಾಧಿಕಾರಿ ಗ್ರಿಲ್ ಮಾಡಿದರು. 100ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದಾರೆ ಅಂತ ತಿಳಿದು ಬಂದಿದೆ.

    ಅಲ್ಲದೇ ಬುಧವಾರ ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ. ವಿಚಾರಣೆ ಬಳಿಕ ಮಾತಾಡಿದ ಬಸವರಾಜ್, ನನ್ನ ಪಾತ್ರ ಇಲ್ಲ ಅಂತ ಹೇಳಿದ್ದೇನೆ. ಬುಧವಾರ ಬರೋಕೆ ಹೇಳಿದ್ದಾರೆ, ಬರ್ತೇನೆ ಅಂದರು. ಇನ್ನೂ ಬೈರತಿ ಬಸರವಾಜ್‌ರನ್ನ ರಾಜಕೀಯವಾಗಿ ಮುಗಿಸೋ ಷಡ್ಯಂತ್ರ ಅಂತ ಬಿಜೆಪಿಗರು ಆರೋಪಿಸಿದ್ರೆ, ದೂರಿನಲ್ಲಿ ಇವರ ಹೆಸರಿದೆ ಅಂತ ಗೃಹ ಸಚಿವ ಪರಮೇಶ್ವರ್ ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ಕಲಬುರಗಿ ಜ್ಯುವೆಲರಿ ಶಾಪ್ ದರೋಡೆ ಕೇಸ್ – 30 ರೂ. ಫೋನ್ ಪೇ ಮಾಡಿ ಸಿಕ್ಕಿಬಿದ್ದ ಖದೀಮರು

    ಬೈರತಿ ಬಸವರಾಜ್‌ ಹೇಳಿದ್ದೇನು?
    ಇನ್ನೂ ಸತತ ಮೂರುವರೆಗಂಟೆಗಳ ಕಾಲ ವಿಚಾರಣೆ ಎದುರಿಸಿದ ಬೈರತಿ ಬಸವರಾಜ್‌, ಭಾರತಿ ನಗರ ಠಾಣೆಯಿಂದ ಹೊರ ಬರುತ್ತಿದ್ದಂತೆ ಮಾಧ್ಯಮಗಳೊಂದಿಗೆ ಮಾತನಾಡಿದರು. ಇದನ್ನೂ ಓದಿ: ಪ್ರಾಧ್ಯಾಪಕರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

    ಕೊಲೆ ಪ್ರಕರಣದಲ್ಲಿ ವಿಚಾರಣೆಗೆ ಕರೆದಿದ್ರು, ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೀನಿ. ಇದರಲ್ಲಿ ನನ್ನ ಪಾತ್ರ ಇಲ್ಲ ಅಂತಾ ಹೇಳಿದ್ದೇನೆ. ನನಗೂ ಕೊಲೆಗೂ ಸಂಬಂಧವಿಲ್ಲ, ಯಾವ ಜಗ್ಗನೂ ನನಗೆ ಗೊತ್ತಿಲ್ಲ. ಬುಧವಾರ ಮತ್ತೆ ವಿಚಾರಣೆಗೆ ಬರಬೇಕೆಂದು ಹೇಳಿದ್ದಾರೆ. ಬರುತ್ತೇನೆ. ತನಿಖೆಗೆ ಎಲ್ಲ ರೀತಿಯಿಂದಲೂ ಸಹಕಾರ ಕೊಡುತ್ತೇನೆ ಎಂದು ಹೇಳಿದರು.

    ವಿಚಾರಣೆ ಮುಗಿಸಿ ಹೊರಬರ್ತಿದ್ದಂತೆ ಬೆಂಬಲಿಗರು ಜೈಕಾರ ಕೂಗಿ ಸಂಭ್ರಮಿಸಿದರು. ಇದನ್ನೂ ಓದಿ: ಅಪ್ರಾಪ್ತನ ಜೊತೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ – ಇಬ್ಬರು ಬಾಲಕರು ಅರೆಸ್ಟ್‌

  • ಕಳ್ಳತನ ಮಾಡುವಾಗ ಚೆನ್ನಾಗಿತ್ತು – ತಪ್ಪೊಪ್ಪಿಕೊಂಡ ಕಳ್ಳ

    ಕಳ್ಳತನ ಮಾಡುವಾಗ ಚೆನ್ನಾಗಿತ್ತು – ತಪ್ಪೊಪ್ಪಿಕೊಂಡ ಕಳ್ಳ

    ರಾಯಪುರ: ದೇಶದಲ್ಲಿ ನಿತ್ಯ ಒಂದಿಲ್ಲೊಂದು ಕಳ್ಳತನ ಪ್ರಕರಣಗಳನ್ನು ನೋಡುತ್ತಲೇ ಇದ್ದೇವೆ. ಕೆಲವು ಸಂದರ್ಭಗಳಲ್ಲಿ ಕಳ್ಳತನ ಮಾಡುವಾಗ ಕೊಲೆಗಳೂ (Murder) ನಡೆದಿವೆ. ಆದರೆ ಇಲ್ಲೊಬ್ಬ ಕಳ್ಳ, ಪೊಲೀಸರಿಗೆ (Police) ಸಿಕ್ಕಿಬಿದ್ದ ನಂತರ ಪ್ರಾಮಾಣಿಕವಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

    ಛತ್ತೀಸ್‌ಗಢದ ದುರ್ಗ್‌ನ ಪೊಲೀಸ್ ಠಾಣೆಯೊಂದರಲ್ಲಿ (Chhattisgarh Police) ಕಳ್ಳನೊಬ್ಬ ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ವೀಡಿಯೋ ಜಾಲತಾಣಗಳಲ್ಲಿ (Social Media) ಸದ್ದು ಮಾಡುತ್ತಿದೆ. ವೀಡಿಯೋನಲ್ಲಿ ಕಳ್ಳನ ಹೇಳಿಕೆ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ನೆಟ್ಟಿಗರು ಆತನಿಗೆ `ಕ್ರಾಂತಿಕಾರಿ ಕಳ್ಳ’ ಎಂದು ಬಿರುದು ನೀಡಿದ್ದಾರೆ. ಇದನ್ನೂ ಓದಿ: ತನ್ನಿಂದಲೇ ವಂಶ ಬೆಳೆಯಲೆಂದು ಸೊಸೆಯ ಮೇಲೆ ಕಣ್ಣಿಟ್ಟ ಮಾವನ ಕೊಲೆ

    ವಿಚಾರಣೆ (Police Enquiry) ವೇಳೆ ನಾನು ಕೇವಲ 10 ಸಾವಿರ ರೂ. ಕದ್ದಿದ್ದೇನೆ. ಕಳ್ಳತನ ಮಾಡಿದ್ದನ್ನು ದನಕರುಗಳ ಆಹಾರಕ್ಕಾಗಿ ಖರ್ಚು ಮಾಡುತ್ತಿದ್ದೆ, ಕದ್ದ ಹಣದಿಂದಲೇ ಬಡವರಿಗೆ ಕಂಬಳಿ ಹಂಚಿದ್ದೇನೆ. ನನಗೆ ಕಳ್ಳತನ ಮಾಡುವಾಗ ಚೆನ್ನಾಗಿಯೇ ಇತ್ತು. ಆದರೆ ಈಗ ವಿಷಾದಿಸುತ್ತೇನೆ. ನನಗೆ ನನ್ನ ತಪ್ಪಿನ ಅರಿವಾಗಿದೆ ಎಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ಕಳ್ಳತನವನ್ನೇ ವೃತ್ತಿ ಮಾಡ್ಕೊಂಡಿದ್ದ ದಂಪತಿ ಅರೆಸ್ಟ್ – ಬಂಧಿತರಿಂದ 5 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ವಶಕ್ಕೆ

    ಛತ್ತಿಸ್‌ಗಢದ ದುರ್ಗ್ ಎಸ್ಪಿ ಡಾ. ಅಭಿಷೇಕ್ ಪಲ್ಲವ ಕಳ್ಳನನ್ನು ವಿಚಾರಣೆ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪೊಲೀಸ್ ವಿಚಾರಣೆಗೆ ಹೆದರಿ 3 ವರ್ಷದ ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಟೆಕ್ಕಿ

    ಪೊಲೀಸ್ ವಿಚಾರಣೆಗೆ ಹೆದರಿ 3 ವರ್ಷದ ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಟೆಕ್ಕಿ

    ಕೋಲಾರ: ಬೆಂಗಳೂರಿನಲ್ಲಿ (Bengaluru) ಬಂದು ನೆಲೆಸಿದ್ದ ಗುಜರಾತ್ (Gujarat) ವ್ಯಕ್ತಿಯೊಬ್ಬ ಪೊಲೀಸ್ ವಿಚಾರಣೆಗೆ (Police Enquiry) ಹೆದರಿ ತನ್ನ ಮೂರು ವರ್ಷದ ಮಗಳನ್ನೂ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.

    ಕೋಲಾರ ತಾಲ್ಲೂಕು ಕೆಂದಟ್ಟಿ ಗ್ರಾಮದ ಕೆರೆಯಲ್ಲಿ ಕಳೆದ ರಾತ್ರಿ 3 ವರ್ಷದ ಮಗುವಿನ ಶವ ಪತ್ತೆಯಾಗಿದೆ. ಜೊತೆಗೆ ಕೆರೆಯ ದಡದಲ್ಲೇ ನೀಲಿ ಬಣ್ಣದ I-20 ಕಾರು ಸಹ ಪತ್ತೆಯಾಗಿದೆ. ಇದರಿಂದ ಅನುಮಾನಗೊಂಡ ಸ್ಥಳೀಯರು ಕೋಲಾರ ಗ್ರಾಮಾಂತರ ಠಾಣಾ ಪೊಲೀಸರಿಗೆ (Kolar Rural Police) ಮಾಹಿತಿ ನೀಡಿದ್ದಾರೆ. ಪರಿಶೀಲನೆ ನಡೆಸಿದ ಬಳಿಕ ಬೆಂಗಳೂರಿನ ಬಾಗಲೂರು ರಾಗಾ ಅಪಾರ್ಟ್ಮೆಂಟ್‌ನಲ್ಲಿ ವಾಸವಿರುವ, ಗುಜರಾತ್ ಮೂಲದ ಕುಟುಂಬ ಅನ್ನೋದು ಮಾಹಿತಿ ತಿಳಿದು ಬಂದಿದೆ. ಇದನ್ನೂ ಓದಿ: ಅಲೆಮಾರಿ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪಡೆದುಕೊಳ್ಳಲಿ: ಈಶ್ವರಪ್ಪ

    ಸ್ಥಳಕ್ಕೆ ಬಂದ ಪತ್ನಿ ಭವ್ಯ, ಪತಿ ರಾಹುಲ್ ಹಾಗೂ ಮೂರು ವರ್ಷದ ಮಗು ಜಿಯಾ ಎಂಬುದಾಗಿ ಗುರುತಿಸಿದ್ದಾರೆ. ನಿನ್ನೆ ಬೆಳಗ್ಗೆ ಮಗುವನ್ನು ಶಾಲೆಗೆ (School) ಬಿಟ್ಟು ಬರೋದಾಗಿ ರಾಹುಲ್ ಹೇಳಿ ಹೋಗಿದ್ದರು. ಬಳಿಕ ಫೋನ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈಗ ಶವವಾಗಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ: ಕ್ರೈಸ್ತ ಧರ್ಮಕ್ಕೆ ಮತಾಂತರವಾದ್ರೆ ಮಾತ್ರ ಸಂಸಾರ – ಪತ್ನಿ ವಿರುದ್ಧ ಠಾಣೆಯ ಮೆಟ್ಟಿಲೇರಿದ ಪತಿ

    ಏನಿದು ಘಟನೆ?
    2-3 ವರ್ಷಗಳ ಹಿಂದೆಯಷ್ಟೇ ರಾಹುಲ್ – ಭವ್ಯ ದಂಪತಿ ಗುಜರಾತ್‌ನಿಂದ (Gujarat) ಬೆಂಗಳೂರಿನಲ್ಲಿ ಬಂದು ನೆಲೆಸಿದ್ದರು. ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಕಳೆದ 6 ತಿಂಗಳಿನಿಂದ ರಾಹುಲ್ ಕೆಲಸವಿಲ್ಲದೆ ಮನೆಯಲ್ಲೇ ಇದ್ದರು. ಇದರಿಂದ ಸಾಲದ ಹೊರೆ ಹೆಚ್ಚಾಯಿತು. ಇದೇ ವಿಚಾರಕ್ಕೆ ರಾಹುಲ್ ತುಂಬಾ ಬೇಸರ ಮಾಡಿಕೊಂಡಿದ್ದರು.

    ಇತ್ತೀಚೆಗೆ ರಾಹುಲ್ ತಮ್ಮ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿದೆ ಎಂದು ಬಾಗಲೂರು ಪೊಲೀಸ್ ಠಾಣೆಗೆ (Bagaluru Police Station) ದೂರು ನೀಡಿದ್ದರು. ಪದೇ-ಪದೇ ಪೊಲೀಸ್ ಠಾಣೆಗೆ ಹೋಗಿ ವಿಚಾರಿಸಿ ಬರುತ್ತಿದ್ದರು. ಪೊಲೀಸರು ದೂರಿನ ಅನ್ವಯ ತನಿಖೆ ನಡೆಸಿದಾಗ, ಮನೆಯಲ್ಲಿ ಇದ್ದ ಒಡವೆಯನ್ನು ರಾಹುಲ್ ತಾನೇ ಕದ್ದು ಚೆಮ್ಮನೂರ್ ಜ್ಯುವೆಲರ್ಸ್‌ನಲ್ಲಿ ಅಡವಿಟ್ಟು, ಬಳಿಕ ಕಳ್ಳತನದ ನಾಟಕವಾಡಿ ಸುಳ್ಳು ದೂರು ನೀಡಿದ್ದ ವಿಚಾರ ತಿಳಿದು ಬಂದಿದೆ. ಇದರಿಂದ ಪೊಲೀಸರು ರಾಹುಲ್ ಮೇಲೆ ಕೋಪಗೊಂಡು ಠಾಣೆಗೆ ಬರುವಂತೆ ತಾಕೀತು ಮಾಡಿದ್ದಾರೆ. ಮನೆಗೂ ಬಂದು ಹೇಳಿ ಹೋಗಿದ್ದಾರೆ. ಇದೇ ವಿಚಾರಕ್ಕೆ ಭಯ ಪಟ್ಟು ರಾಹುಲ್ ಏನಾದ್ರೂ ಮಾಡಿಕೊಂಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

    ರಾಹುಲ್ ಬಳಿಯಿದ್ದ ಪರ್ಸ್, ಮೊಬೈಲ್ ಎಲ್ಲವೂ ಕಾರ್‌ನಲ್ಲೇ ಇದೆ. ಕೋಲಾರ ಗ್ರಾಮಾಂತರ ಪೊಲೀಸರು ಹಾಗೂ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸುತ್ತಿದ್ದು, ಕೆಂದಟ್ಟಿ ಕೆರೆಯಲ್ಲಿ ರಾಹುಲ್ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]