Tag: police department

  • ಮುಂಬೈ ರೇಪ್, ಮಹಿಳೆ ಸಾವು- ಸೆ.21ರವರೆಗೆ ಆರೋಪಿಗೆ ನ್ಯಾಯಾಂಗ ಬಂಧನ

    ಮುಂಬೈ ರೇಪ್, ಮಹಿಳೆ ಸಾವು- ಸೆ.21ರವರೆಗೆ ಆರೋಪಿಗೆ ನ್ಯಾಯಾಂಗ ಬಂಧನ

    ಮುಂಬೈ: ಅತ್ಯಾಚಾರಕ್ಕೊಳಗಾಗಿ ಸಾವು- ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದ ಮಹಿಳೆ ಸಾವನ್ನಪ್ಪಿದ್ದು, ಇದೀಗ ಕಾಮುಕ ಆರೋಪಿಯನ್ನು ಸೆಪ್ಟೆಂಬರ್ 21ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಆರೋಪಿಯನ್ನು ಮೋಹನ್ ಚೌಹಾಣ್ ಎಂದು ಗುರುತಿಸಲಾಗಿದೆ. ಈತ 30 ವರ್ಷದ ಮಹಿಳೆಯನ್ನು ನಿಂತಿದ್ದ ಟೆಂಪೋದೊಳಗೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾನೆ. ಅಲ್ಲದೆ ಮಹಿಳೆಯ ಖಾಸಗಿ ಅಂಗಕ್ಕೆ ರಾಡ್ ತುರುಕಿ ದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಪ್ರಕರಣದಂತೆ ವಿಕೃತಿ ಮೆರೆದಿದ್ದಾನೆ.  ಇದನ್ನೂ ಓದಿ: ಮುಂಬೈ ಅತ್ಯಾಚಾರ ಪ್ರಕರಣ- ಚಿಕಿತ್ಸೆ ಫಲಿಸದೆ ಮೃತಪಟ್ಟ ಸಂತ್ರಸ್ತೆ

    ಅಲ್ಲದೆ ತನ್ನ ಕಾಮತೃಷೆ ತೀರಿಸಿಕೊಂಡ ಕಾಮುಕ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇತ್ತ ಘಟನೆಯಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ನೋಡಿ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ಪೊಲೀಸರು ಮಹಿಳೆಯನ್ನು ಚಿಕಿತ್ಸೆಗಾಗಿ ರಾಜವಾಡಿ ಆಸ್ಪತ್ರೆಗೆ ಸೇರಿಸಿದ್ದರು. ಆದರೆ 33 ಗಂಟೆಗಳ ಹೋರಾಟದ ನಂತರ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಕೊನೆಯುಸಿರೆಳೆದಿದ್ದಾರೆ.  ಇದನ್ನೂ ಓದಿ: ಹಿಂದೂ ಹುಡುಗಿಯರ ತಂಟೆಗೆ ಬಂದ್ರೆ ಸುಮ್ನಿರಲ್ಲ: ಗುಜರಾತ್ ಸಿಎಂ

    ಸಂತ್ರಸ್ತೆ ಸಾವಿನ ಬಳಿಕ ಆರೋಪಿ ಮೋಹನ್ ಚೌಹಾಣ್ ನನ್ನು ಪೊಲೀಸರು ಬಾಂದ್ರಾ ನ್ಯಾಯಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಯನ್ನು ಸೆಪ್ಟೆಂಬರ್ 21ರ ತನಕ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮಹಿಳೆಯ ಸಾವಿಗೂ ಮುನ್ನ ಪೊಲೀಸರು ಆರೋಪಿಯ ಮಾನಭಂಗ, ಕೊಲೆ ಯತ್ನ ಎಂಬಿತ್ಯಾದಿ ಕೇಸ್ ಗಳನ್ನು ಹಾಕಿದ್ದರು. ಮಹಿಳೆಯ ಸಾವಿನ ನಂತರ ಕೊಲೆ ಎಂದು ಬದಲಾಯಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

     

  • ಸರ್ಕಾರದಿಂದ ಆದೇಶ ಹೊರಡಿಸಿ ಪುಣ್ಯ ಕಟ್ಟಿಕೊಳ್ಳಿ- ಮಾಜಿ ಸ್ಪೀಕರ್ ವಿರುದ್ಧ ಪೊಲೀಸರ ಆಕ್ರೋಶ

    ಸರ್ಕಾರದಿಂದ ಆದೇಶ ಹೊರಡಿಸಿ ಪುಣ್ಯ ಕಟ್ಟಿಕೊಳ್ಳಿ- ಮಾಜಿ ಸ್ಪೀಕರ್ ವಿರುದ್ಧ ಪೊಲೀಸರ ಆಕ್ರೋಶ

    ಕೋಲಾರ: ಸರ್ಕಾರದಿಂದ ಆದೇಶ ಹೊರಡಿಸಿ ಪುಣ್ಯಕಟ್ಟಿಕೊಳ್ಳಿ ರಮೇಶ್ ಸರ್ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಕೋಲಾರದ ಪೊಲೀಸ್ ಇಲಾಖೆ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದ ವೀಕ್ಷಕರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ.

    ಪೊಲೀಸರು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಅವರ ಕಾರ್ಯವೈಖರಿಯ ಬಗ್ಗೆ ರಮೇಶ್ ಕುಮಾರ್ ಅವರು ತರಾಟೆಗೆ ತೆಗೆದುಕೊಂಡಿದ್ದರು. ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಈ ವಿಚಾರವಾಗಿ ಮಾಜಿ ಸ್ವೀಕರ್ ವಿರುದ್ಧ ಪೊಲೀಸ್ ಇಲಾಖೆಯಲ್ಲಿ ಆಕ್ರೋಶ ಭುಗಿಲೆದಿದೆ.ಇದನ್ನೂ ಓದಿ: ಮಂಗಳೂರು ಏರ್ ಪೋರ್ಟ್ ರ್‍ಯಾಪಿಡ್ ಪಿಸಿಆರ್ ಟೆಸ್ಟ್ – ಅನಿವಾಸಿಗಳ ಬೇಡಿಕೆಗೆ ಸ್ಪಂದಿಸಿದ ದ.ಕ. ಡಿಸಿ

    ಪೊಲೀಸರು ಯಾವುದೇ ವಾಹನಗಳನ್ನು ತಪಾಸಣೆ ಮಾಡುವಂತಿಲ್ಲ, ದಂಡ ಹಾಕುವಂತಿಲ್ಲ ಎಂದು ಸರ್ಕಾರದಿಂದ ಆದೇಶ ಹೊರಡಿಸಿ ಪುಣ್ಯಕಟ್ಟಿಕೊಳ್ಳಿ ರಮೇಶ್ ಕುಮಾರ್ ಸರ್. ಈ ನಿಮ್ಮ ಒಳ್ಳೆಯತನಕ್ಕಾದರು ಪೊಲೀಸರಿಗೆ ಬಿಪಿ, ಶುಗರ್ ಮಾಯವಾಗಲಿ. ಸಾರ್ವಜನಿಕರಿಗೆ ತಪ್ಪು ಸಂದೇಶವನ್ನು ನೀಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ರಮೇಶ್ ಅವರಿಗೆ ಟಕ್ಕರ್ ಕೊಡುತ್ತಿದ್ದಾರೆ. ಸ್ಟೇಟಸ್ ಹಾಗೂ ಫೇಸ್ಬುಕ್‍ನಲ್ಲಿ ರಮೇಶ್ ಅವರ ವಿರುದ್ಧ ಇಲಾಖೆಯ ಸಿಬ್ಬಂದಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ನಮಗೆ ಅಧಿಕಾರ ಕೊಟ್ಟವರು ನೀವೇ ಅದನ್ನು ಪ್ರಶ್ನೆ ಮಾಡುವವರು ನೀವೇ ಎಂದು ಟಾಂಗ್ ಕೊಟ್ಟಿದ್ದಾರೆ.ಇದನ್ನೂ ಓದಿ:ಲಾಲ್‍ಬಾಗ್, ಕಬ್ಬನ್ ಪಾರ್ಕ್ ಮಾದರಿಯಲ್ಲಿ ಮತ್ತೊಂದು ಉದ್ಯಾನವನ: ತೋಟಗಾರಿಕೆ ಸಚಿವ ಮುನಿರತ್ನ

    ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಇದರ ಪರ ವಿರೋಧದ ಚರ್ಚೆ ನಡೆಯುತ್ತಿದೆ.ಇದನ್ನೂ ಓದಿ:ರಮೇಶ್ ಕುಮಾರ್ ವಿರುದ್ಧ ಜೆ.ಪಿ ನಗರ ಎಎಸ್‍ಐ ಗರಂ

  • ಪೊಲೀಸರಿಗೆ ಒತ್ತಡ ಇದೆ, ಬೆಳಗ್ಗೆಯಿಂದ ರಾತ್ರಿಯವರೆಗೂ ಕೆಲಸ ಮಾಡ್ತಾರೆ: ಸತೀಶ್ ಜಾರಕಿಹೊಳಿ

    ಪೊಲೀಸರಿಗೆ ಒತ್ತಡ ಇದೆ, ಬೆಳಗ್ಗೆಯಿಂದ ರಾತ್ರಿಯವರೆಗೂ ಕೆಲಸ ಮಾಡ್ತಾರೆ: ಸತೀಶ್ ಜಾರಕಿಹೊಳಿ

    – ಇನ್ನೇನು ಮಾಡೋದು ಬಿಜೆಪಿ ಹಣೆಬರಹ ಅಷ್ಟೇ

    ಬೆಳಗಾವಿ: ಪೊಲೀಸರಿಗೆ ಒತ್ತಡ ಇದೆ, ಬೆಳಗ್ಗೆಯಿಂದ ರಾತ್ರಿಯವರೆಗೂ ಕೆಲಸ ಮಾಡುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

    ಮೈಸೂರಿನ ಗ್ಯಾಂಗ್‍ರೇಪ್ ಆರೋಪಿಗಳ ಬಂಧನ ವಿಚಾರ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದೆ ಈ ರೀತಿ ಘಟನೆ ಆಗದಂತೆ ಕ್ರಮ ಕೈಗೊಳ್ಳಬೇಕು. ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಹೊಸ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಗಮನ ಹರಿಸಬೇಕು. ಪೊಲೀಸ್ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ.ಇದನ್ನೂ ಓದಿ: ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ಗಂಡು ಮಕ್ಕಳಿಗೆ ಮನೆಯಲ್ಲಿ ಹೇಳಬೇಕು: ಪೂಜಾಗಾಂಧಿ

    ಒಂದೊಂದು ಪೊಲೀಸ್ ಠಾಣೆಯಲ್ಲಿ ಹತ್ತತ್ತು ಸಿಬ್ಬಂದಿ ಕೊರತೆ ಇದೆ. ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಯಾರಿಗೆ ಏನೇ ಆದರೂ ಪೊಲೀಸರು ಬರಲೇಬೇಕು. ಅವರು ಬೆಳಗ್ಗೆಯಿಂದ ರಾತ್ರಿಯವರೆಗೂ ಒತ್ತಡದಲ್ಲಿ ಕೆಲಸ ಮಾಡ್ತಾರೆ. ಹೀಗಾಗಿ ಪೊಲೀಸ್ ಇಲಾಖೆಯಲ್ಲಿ ಸಮಗ್ರ ಬದಲಾವಣೆ ಆಗಬೇಕು ಎಂದು ಪೊಲೀಸರ ಪರವಾಗಿ ನಿಂತಿದ್ದಾರೆ.ಇದನ್ನೂ ಓದಿ:ಕಾಲೇಜಿಗೆಂದು ಹೋದ ವಿದ್ಯಾರ್ಥಿನಿ ಶವವಾಗಿ ಪತ್ತೆ

    ನಮ್ಮಲ್ಲಿ ಯಾವುದೇ ಹೊಸ ತಂತ್ರಜ್ಞಾನವಿಲ್ಲ, ನಾವು ಇನ್ನೂ ಹಳೆಯ ವ್ಯವಸ್ಥೆಯಲ್ಲಿ ಇದ್ದೇವೆ. ಸಮಗ್ರವಾಗಿ ಪೊಲೀಸ್ ಇಲಾಖೆಯಲ್ಲಿ ಬದಲಾವಣೆ ಆಗಬೇಕು. ಹೊಯ್ಸಳ ಹೋಯ್ತು, ಗರುಡ ಹೋಯ್ತು ಈಗ 112 ಟೀಮ್ ಬಂದಿದೆ. ವಾಹನ ಬದಲಾಗುವುದು ಮಾತ್ರವಲ್ಲ ವ್ಯವಸ್ಥೆಯೂ ಬದಲಾಗಬೇಕು. ಎಲ್ಲ ಇಲಾಖೆಯಲ್ಲಿ ಬದಲಾವಣೆ ಆಗಬೇಕು. ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಆಗಬೇಕು ಎಂದು ಸಿಎಂಗೆ ಆಗ್ರಹಿಸಿದ್ದಾರೆ.

    ಗೃಹಸಚಿವ ಅರಗ ಜ್ಞಾನೇಂದ್ರ ರೇಪ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಹಿಂದಿನಿಂದಲೂ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ಇನ್ನೇನು ಮಾಡೋದು ಅವರ ಹಣೆಬರಹ ಅಷ್ಟೇ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅದರ ಬಗ್ಗೆ ಏನೇನೋ ಹೇಳಿಕೊಳ್ಳುತ್ತಾರೆ. ಮಂತ್ರಿಗಳ ಈ ರೀತಿ ಹೇಳಿಕೆಯಿಂದ ಅವರಿಗೆ ವ್ಯತಿರಿಕ್ತ ಆಗೋ ಸಾಧ್ಯತೆ ಇದೆ. ಕೇಂದ್ರ ಸಚಿವರು, ರಾಜ್ಯದ ಸಚಿವರು ಸಾಕಷ್ಟು ಬಾರಿ ಈ ಕುರಿತು ಹೇಳಿಕೆ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

  • ಅರಗ ಜ್ಞಾನೆಂದ್ರಗೆ ತಾವು ಸಚಿವರು ಅಂತ ಜ್ಞಾನವಿರಲಿ: ಎಚ್. ಕೆ. ಪಾಟೀಲ್

    ಅರಗ ಜ್ಞಾನೆಂದ್ರಗೆ ತಾವು ಸಚಿವರು ಅಂತ ಜ್ಞಾನವಿರಲಿ: ಎಚ್. ಕೆ. ಪಾಟೀಲ್

    ಗದಗ: ಗೃಹ ಸಚಿವ ಅರಗ ಜ್ಞಾನೇಂದ್ರರವರಿಗೆ ತಾವು ಒಬ್ಬರು ಸಚಿವರು ಎಂಬ ಜ್ಞಾನವಿರಲಿ ಎಂದು ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

    ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು ಇನ್ನೂ ಬಿಜೆಪಿ ಕಾರ್ಯಕರ್ತರಂತೆ ಆಡಯವ ಅವರ ಮಾತು ಹಾಗೂ ವರ್ತನೆ ಸರಿಯಲ್ಲ. ತಾವು ಒಬ್ಬರು ಸಚಿವರು ಎಂಬುದು ಜ್ಞಾನೆಂದ್ರವರಿಗೆ ಜ್ಞಾನವಿರಲಿ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ:ಸಚಿವೆಯಾದರೂ ಹೆಣ್ಣು ಹೆಣ್ಣೇ ಅಲ್ವಾ? ಅವರ ಮನೆಯಲ್ಲೇ ಹಾಗಾದ್ರೆ?: ಹೆಚ್.ಎಂ.ರೇವಣ್ಣ

    ನಿಮ್ಮ ಮೊದಲ ಹೇಳಿಕೆಯೇ ಪೊಲೀಸ್ ಇಲಾಖೆಗೆ ತಪ್ಪು ಸಂದೇಶವಾಗಿದೆ. ಕೆಟ್ಟ ಶಕ್ತಿಗಳಲ್ಲಿ ಭಯ ಹುಟ್ಟಿಸುವ ಕೆಲಸ ಗೃಹ ಸಚಿವರು ಮಾಡಬೇಕು. ಅದನ್ನು ಬಿಟ್ಟು ಹೆಣ್ಣುಮಕ್ಕಳು ಅಲ್ಲಿ ಹೋಗಿದ್ದು ತಪ್ಪು, ಹಾಗೇ ಹೀಗೆ ಅಂತ ಹೆಣ್ಣು ಮಕ್ಕಳ ಬಗ್ಗೆ ಹಗುರವಾದ ಮಾತುಗಳು ಸರಿಯಲ್ಲ. ಅಲ್ಲದೇ ಆರೋಪಿಗಳ ಬಗ್ಗೆಯೂ ಸಚಿವರ ಹೇಳಿಕೆಗಳು ಬೇಸರ ಮೂಡಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಜಗಳವಾಡಿ ಕ್ಷಮೆ ಕೇಳುವುದರೊಳಗೆ ತಂದೆ ಹೆಣವಾಗಿದ್ದರು: ಅಭಿನವ್

    24 ಗಂಟೆನಲ್ಲಿ ಆರೋಪಿ ಬಂಧಿಸುವಂತೆ ಅಧಿಕಾರಿಗಳಿಗೆ ಹೇಳಬೇಕು. ಅದನ್ನು ಬಿಟ್ಟು ತಾವೇ ತಡವಾಗುತ್ತೆ, ನೋಡೋಣ, ಮಾಡೋಣ ಎಂಬ ಹಾರಿಕೆ ಉತ್ತರ ಶೋಭೆ ತರುವಂತಹದಲ್ಲ. ಅತ್ಯಾಚಾರ ಬಗ್ಗೆ ನಿಮ್ಮ ಹಗುರ ಮಾತುಗಳನ್ನು ನಿಲ್ಲಿಸಿ. ನಿಮ್ಮಯ ಹಗುರ ಮಾತು ಮಹಿಳೆಯರಿಗೆ ನಾವು ಅವಮಾನ ಮಾಡಿದಂತಾಗುತ್ತದೆ ಎಂದು ಕಿಡಿಕಾರಿದ್ದಾರೆ.

  • ಮೈಸೂರಲ್ಲಿ ಗ್ಯಾಂಗ್‍ರೇಪ್ ನಡೆದು 4 ದಿನ – ಕಾಮುಕರ ಅರೆಸ್ಟ್ ಯಾವಾಗ?

    ಮೈಸೂರಲ್ಲಿ ಗ್ಯಾಂಗ್‍ರೇಪ್ ನಡೆದು 4 ದಿನ – ಕಾಮುಕರ ಅರೆಸ್ಟ್ ಯಾವಾಗ?

    – ಪ್ರಕರಣದಲ್ಲಿ ಪೊಲೀಸರಿಗೆ ಸವಾಲಾಗಿದ್ದೇನು?

    ಮೈಸೂರು: ಅರಮನಮೆ ನಗರಿ ಮೈಸೂರಿನಲ್ಲಿ ಗ್ಯಾಂಗ್ ರೇಪ್ ನಡೆದು 4 ದಿನಗಳೇ ಕಳೆದು ಹೋಗಿದೆ. 80 ಗಂಟೆ ಕಳೆದ್ರೂ ಇನ್ನೂ ಆರೋಪಿಗಳ ಸುಳಿವಿಲ್ಲ. ಆದರೆ ಇದುವರೆಗೂ ಆರೋಪಿಗಳ ಪತ್ತೆಯಾಗದೇ ಇರುವುದು ಜನಸಾಮಾನ್ಯರು ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣ ಬೇಧಿಸಲು ಪೊಲೀಸರಿಗೆ ಆಗ್ತಿಲ್ವಾ? ಯಾಕೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ: ಮೈಸೂರು ಪ್ರಕರಣದ ಬಗ್ಗೆ ಸುಳಿವು ಸಿಕ್ಕಿದ್ದರೂ, ಈ ಪರಿಸ್ಥಿತಿಯಲ್ಲಿ ಹೇಳಲು ಸಾಧ್ಯವಿಲ್ಲ: ಪ್ರವೀಣ್ ಸೂದ್

    ಪೊಲೀಸರಿಗೆ ಎದುರಾದ ಸವಾಲುಗಳೇನು?
    ಪ್ರಕರಣದ ಸಂಪೂರ್ಣ ಮಾಹಿತಿ ಪೊಲೀಸರಿಗೆ ಲಭ್ಯವಿಲ್ಲ. ಈವರೆಗೂ ಘಟನೆ ಬಗ್ಗೆ ಸಂತ್ರಸ್ತೆ ಹೇಳಿಕೆ ನೀಡಿಲ್ಲ. ಘಟನಾ ಸ್ಥಳದ ಐದಾರು ಕಿ.ಮೀ.ವ್ಯಾಪ್ತಿಯಲ್ಲಿ ಸಿಸಿಟಿವಿಗಳೇ ಇಲ್ಲ. ಕಾಮುಕರ ಮುಖಚರ್ಯೆ, ಹಾವಭಾವ, ಬಳಸುತ್ತಿದ್ದ ಭಾಷೆ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಸ್ಥಳದಲ್ಲಿ ಸಿಕ್ಕಿರೋ ಮದ್ಯದ ಬಾಟಲ್‍ಗಳಿಂದ ಆರೋಪಿಗಳ ಪತ್ತೆ ದುಸ್ತರವಾಗಿದ್ದು, ಪ್ರಕರಣ ಬೇಧಿಸಲು ಪೊಲೀಸರಿಗೆ ಸವಾಲಾಗಿದೆ. ಇದನ್ನೂ ಓದಿ: ಈ ಸರ್ಕಾರದಲ್ಲಿ ಹೆಣ್ಮಕ್ಕಳು ಮಾತ್ರವಲ್ಲ ಗಂಡು ಮಕ್ಕಳೂ ಸೇಫ್ ಅಲ್ಲ ಡಿಕೆಶಿ

    ಖಾಕಿ ಮುಂದಿನ ನಡೆ ಏನು?
    ಸಂತ್ರಸ್ತೆ ಮಾಹಿತಿ ನೀಡದಿದ್ರೂ ತನಿಖೆ ವಿಳಂಬ ಮಾಡುವಂತಿಲ್ಲ. ಹಳೆಯ ಪ್ರಕರಣಗಳ ತನಿಖೆಯನ್ನು ಆಧರಿಸಿ ಈ ಕೇಸ್ ತನಿಖೆ ನಡೆಸುವುದು. ಸ್ಥಳದಲ್ಲಿ ಸಿಕ್ಕಿರೋ ಮದ್ಯದ ಬಾಟಲ್ ಮಾರಾಟವಾಗಿದ್ದೆಲ್ಲಿ ಎಂಬ ಬಗ್ಗೆ ತನಿಖೆ ಮಾಡುವುದು. ಬಾಟಲ್ ಮಾರಾಟವಾದ ಅಂಗಡಿ ಗೊತ್ತಾದ್ರೆ ಅಲ್ಲಿನ ಸಿಸಿಟಿವಿ ಪರಿಶೀಲನೆ ನಡೆಸುವುದು. ಮೊಬೈಲ್ ಟವರ್ ಲೊಕೇಶನ್ ಮೂಲಕ ಕರೆಗಳ ಸಂಪೂರ್ಣ ಪರಿಶೀಲನೆ ಮಾಡುವುದು. ಹಾಗೂ ಪ್ರಕರಣ ನಡೆದ ಜಾಗದಲ್ಲಿ ಈ ಹಿಂದೆ ಆಗಿರುವ ಅಪರಾಧ ಕೇಸ್ ಪರಿಶೀಲನೆ ನಡೆಸುವುದಾಗಿದೆ. ಇದನ್ನೂ ಓದಿ:  ಮಹಿಳೆಯರಿಗೆ ಬಂದೂಕು ಲೈಸೆನ್ಸ್ ಕೊಡಿ – ತಮ್ಮದೇ ಸರ್ಕಾರಕ್ಕೆ ಆನಂದ್ ಸಿಂಗ್ ಪುಕ್ಕಟ್ಟೆ ಸಲಹೆ

    ಪ್ರಕರಣ ಸಂಬಂಧ ಡಿಜಿಪಿ ಪ್ರವೀಣ್ ಸೂದ್ ಸುದ್ದಿಗೋಷ್ಠಿ ನಡೆಸಿ, ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಸುಳಿವು ಸಿಕ್ಕರೂ ಸದ್ಯ ನಾವು ಅದನ್ನು ಹೇಳುವ ಪರಿಸ್ಥಿತಿಯಲ್ಲಿ ಇಲ್ಲ. ಆರೋಪಿಗಳು ಪತ್ತೆಯಾದ ತಕ್ಷಣ ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ನೀಡುತ್ತೇವೆ. ಈ ಪ್ರಕರಣದ ಕುರಿತು ಗಂಭೀರ ತನಿಖೆ ನಡೆಯುತ್ತಿದೆ. ಘಟನಾ ಸ್ಥಳದಿಂದ ಎಲ್ಲ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂತ್ರಸ್ತೆ ಮಾನಸಿಕ ಸ್ಥಿತಿ ಸರಿ ಇಲ್ಲ. ಹುಷಾರಾದ ಬಳಿಕ ಮಾಹಿತಿ ನೀಡುವುದಾಗಿ ಸಂತ್ರಸ್ತೆ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

  • ಯಾದಗಿರಿ ಪೊಲೀಸ್ ಇಲಾಖೆಯಲ್ಲಿ ಸೀನಿಯರ್, ಜೂನಿಯರ್ ಅಧಿಕಾರಿಗಳಲ್ಲಿ ಹೊಂದಾಣಿಕೆ ಕೊರತೆ

    ಯಾದಗಿರಿ ಪೊಲೀಸ್ ಇಲಾಖೆಯಲ್ಲಿ ಸೀನಿಯರ್, ಜೂನಿಯರ್ ಅಧಿಕಾರಿಗಳಲ್ಲಿ ಹೊಂದಾಣಿಕೆ ಕೊರತೆ

    – ಸಣ್ಣ ಪುಟ್ಟ ಕಾರಣ ಹೇಳಿ ಜೂನಿಯರ್ ಅಧಿಕಾರಿಗಳಿಗೆ ಶಿಕ್ಷೆ
    – ಮಾನಸಿಕವಾಗಿ ಕುಗ್ಗುತ್ತಿರುವ ಅಧಿಕಾರಿಗಳು

    ಯಾದಗಿರಿ: ಜಿಲ್ಲೆಯಲ್ಲಿ ಜನರ ನಿರ್ಲಕ್ಷ್ಯದಿಂದ ಕೊರೊನಾ ತಾಂಡವಾಡುತ್ತಿದೆ. ಈ ಮಧ್ಯೆ ಮರಳು ಮಾರಾಟ ದಂಧೆ, ಮದ್ಯ ಮಾರಾಟ, ಇಸ್ಪೀಟು, ಮಟ್ಕಾ ಮಾಫಿಯಾಗಳು ಯಾರ ಭಯವಿಲ್ಲದೆ ನಡೆಯುತ್ತಿದೆ. ಆದರೆ ಇವುಗಳನ್ನು ತಡೆಯಬೇಕಾದ ಪೊಲೀಸ್ ಇಲಾಖೆ ಜಾಣ ನಿದ್ದೆಗೆ ಜಾರಿರುವುದು ಹಲವಾರು ಅನುಮಾನಗಳನ್ನು ಹುಟ್ಟು ಹಾಕಿದೆ.

    ಇನ್ನೊಂದೆಡೆ ಯಾದಗಿರಿ ಜಿಲ್ಲೆಯಲ್ಲಿ ಜೂನಿಯರ್ ಮತ್ತು ಸೀನಿಯರ್ ಅಧಿಕಾರಿಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಹಿರಿಯ ಅಧಿಕಾರಿ ಮಾತಿಗೆ ಸೊಪ್ಪು ಹಾಕದ ಜೂನಿಯರ್ ಆಫೀಸರ್ ಗಳನ್ನು ಸಸ್ಪೆಂಡ್, ವರ್ಗಾವಣೆ, ಶಿಕ್ಷೆ ಕೊಡೆಸುವುದ್ರಲ್ಲಿ ಹಿರಿಯ ಅಧಿಕಾರಿಗಳು ಮಗ್ನರಾಗಿ ಬಿಟ್ಟಿದ್ದಾರೆ. ಇದು ಸಾರ್ವಜನಿಕರ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಎಷ್ಟೋ ಪ್ರಕರಣಗಳು ಇತ್ಯರ್ಥವಾಗದೇ ಉಳಿದು ಬಿಟ್ಟಿವೆ.

    ಸಣ್ಣಪುಟ್ಟ ಕಾರಣಗಳಿಗೆ ಮತ್ತು ಕಾರಣವನ್ನು ಸಹ ನೀಡದೆ ಕೊರೊನಾ ಸಮಯದಲ್ಲಿ ಹಗಲು ರಾತ್ರಿ ಕರ್ತವ್ಯ ನಿರ್ವಹಿಸಿದ ಪಿಎಸ್‍ಐ ಗಳನ್ನು ಅಮಾನತು ಮಾಡಿರುವುದು ಹಲವಾರು ಅನುಮಾನಗಳನ್ನು ಹುಟ್ಟು ಹಾಕಿದೆ. ಕಾರಣವಿಲ್ಲದೆ ಗುರುಮಿಠಕಲ್ ಲೇಡಿ ಪಿಎಸ್‍ಐ ಶೀಲಾರನ್ನು ರಾತ್ರೋರಾತ್ರಿ ಮಹಿಳಾ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಆಭರಣಗಳ ಪ್ರಕರಣ ಒಂದರಲ್ಲಿ ಕರ್ತವ್ಯಲೋಪ ಅಂತ ಸೈದಾಪುರ ಲೇಡಿ ಪಿಎಸ್‍ಐ ಸುವರ್ಣ ಅವರನ್ನು ಅಮಾನತು ಮಾಡಲಾಗಿದೆ. ಸುರಪುರ ಪಿಎಸ್‍ಐ ಚೇತನ ಲಾಕ್‍ಡೌನ್ ಸಮಯದಲ್ಲಿ ಹಗಲು ರಾತ್ರಿ ಕಷ್ಟಪಟ್ಟು ಕೆಲಸ ಮಾಡಿ, ಸುರಪುರ ಸಿಂಗಂ ಅಂತ ಹೆಸರು ಪಡೆದಿದ್ದರು. ಅವರನ್ನು ಸಹ ವಿಚಾರಣೆ ನಡೆಸದೆ ಏಕಾಏಕಿ ಅಮಾನತು ಮಾಡಲಾಗಿದೆ.

    ಠಾಣೆಯಲ್ಲಿ ಜನ್ಮದಿನ ಆಚರಿಸಿಕೊಂಡ್ರು ಅಂತ ನಗರ ಠಾಣೆಯ ಪಿಎಸ್ ಐ ಸೌಮ್ಯರನ್ನು ರಾತ್ರೋರಾತ್ರಿ ಬೇರೆ ಠಾಣೆಗೆ ತಾತ್ಕಾಲಿಕವಾಗಿ ವರ್ಗಾವಣೆ ಮಾಡಲಾಗಿತ್ತು. ಈ ಎಲ್ಲಾ ಪಿಎಸ್‍ಐಗಳನ್ನು ಯಾವುದೇ ವಿಚಾರಣೆ ಮಾಡದೆ ಕೇವಲ ಹಿರಿಯ ಅಧಿಕಾರಿಗಳು ನೀಡುವ ವರದಿ ಆಧಾರದ ಮೇಲೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಹೀಗೆ ನೋಡುವುದಾದ್ರೆ ಶಿಕ್ಷೆ ಅನುಭವಿಸಿದವರೆಲ್ಲಾ ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಹಗಲು ರಾತ್ರಿ ಕೆಲಸ ಮಾಡಿ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದವರಾಗಿದ್ದಾರೆ. ಜಿಲ್ಲೆಯ ಪ್ರಮುಖ ವಾಟ್ಸಾಪ್ ಗ್ರೂಪ್ ಗಳಲ್ಲಿ ಇವರ ಬಗ್ಗೆ ಒಳ್ಳೆಯ ಸಂದೇಶಗಳು ಹರಿದಾಡುತ್ತಿದ್ದವು.

    ಹಿರಿಯ ಅಧಿಕಾರಿಗಳು ಕೊರೊನಾ ನಿಯಮ ಪಾಲಿಸದೆ, ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಾರೆ. ಆದರೆ ಅದೇ ಜೂನಿಯರ್ ಆಫೀಸರ್ ಜನ್ಮದಿನ ಆಚರಿಸಿಕೊಂಡ್ರೆ ಶಿಕ್ಷೆ ನೀಡುತ್ತಾರೆ. ಇದು ಯಾವ ನ್ಯಾಯ ಅಂತ ಸಾರ್ವಜನಿಕರು ಪೊಲೀಸ್ ಇಲಾಖೆಯನ್ನು ಪ್ರಶ್ನಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಇಸ್ಪೀಟು ದಂಧೆ ಜೋರಾಗಿದೆ. ಕಳೆದ ಎರಡು ದಿನಗಳ ಹಿಂದೆ ಯರಗೋಳದಲ್ಲಿ ಭಾರೀ ಮೊತ್ತದ ದಾಳಿ ನಡೆದಿದೆ. ಇದರಲ್ಲಿ ಸ್ಥಳೀಯ ಪಿಎಸ್ ಐ ಲೋಪ ಇರುವುದು ಸ್ಪಷ್ಟವಾಗಿದೆ. ಹೀಗಿದ್ದರೂ ಇವರ ಮೇಲೆ ಇನ್ನೂ ಕ್ರಮವಾಗಿಲ್ಲದಿರುವುದು ಹಲವಾರು ಅನುಮಾನಗಳನ್ನು ಮೂಡಿಸುತ್ತಿದೆ.

  • ಮಾನಸಿಕ ಅಸ್ವಸ್ಥ ಮಹಿಳೆಗೆ ಬಟ್ಟೆ ತೊಡಿಸಿ ಮಾನವೀಯತೆ ಮೆರೆದ ಪೊಲೀಸ್ ಇಲಾಖೆ

    ಮಾನಸಿಕ ಅಸ್ವಸ್ಥ ಮಹಿಳೆಗೆ ಬಟ್ಟೆ ತೊಡಿಸಿ ಮಾನವೀಯತೆ ಮೆರೆದ ಪೊಲೀಸ್ ಇಲಾಖೆ

    ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪದಲ್ಲಿ ತಮಿಳುನಾಡು ಮೂಲದ ಮಾನಸಿಕ ಅಸ್ವಸ್ಥ ಮಹಿಳೆ ಬಟ್ಟೆ ಧರಿಸದೆ ವಿವಸ್ತ್ರವಾಗಿ ಓಡಾಡುತ್ತಿದ್ದರು. ಇದನ್ನು ಗಮನಿಸಿದ ಪೊಲೀಸ್ ಇಲಾಖೆ ಮಹಿಳೆಗೆ ಬಟ್ಟೆ ತೊಡಿಸುವ ಮೂಲಕ ಮಾನವೀಯತೆ ಮೆರೆದಿದೆ.

    ಬಕ್ರೀದ್ ಹಬ್ಬದ ಪ್ರಯುಕ್ತ ಸಾಗರ ಗ್ರಾಮಾಂತರ ಠಾಣೆಯ ಎಎಸ್‍ಐ ಮೀರಾಬಾಯಿ ತಾಳಗುಪ್ಪದಲ್ಲಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸಲು ಆಗಮಿಸಿದ್ದರು. ಆಗ ವಿವಸ್ತ್ರದಲ್ಲಿ ಓಡಾಡುತ್ತಿದ್ದ ಮಹಿಳೆಯನ್ನು ಗಮನಿಸಿ ಕೂಡಲೇ ಇತರೆ ಸಿಬ್ಬಂದಿಯ ಸಹಾಯದಿಂದ ಮಹಿಳೆಗೆ ಬಟ್ಟೆ ತೊಡಿಸಿದ್ದಾರೆ.

    ಜೊತೆಗೆ ಹಸಿವಿನಿಂದ ಬಳಲುತ್ತಿದ್ದ ಮಹಿಳೆಗೆ ತಿಂಡಿ, ನೀರು ನೀಡಿ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ನಂತರ ಮಹಿಳೆಯನ್ನು ಸಾಗರದಿಂದ ಬೆಂಗಳೂರಿಗೆ ಬಸ್ ಹತ್ತಿಸಿ ಆಕೆಯ ಊರಿಗೆ ಕಳುಹಿಸುವ ಪ್ರಯತ್ನ ಸಹ ಮಾಡಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಸೋಂಕಿತನ ಅಂತ್ಯಕ್ರಿಯೆಗೆ ವಿರೋಧ – ಸತತ 6 ಗಂಟೆಗಳ ನಂತ್ರ ಮಧ್ಯರಾತ್ರಿ 1ಕ್ಕೆ ಅಂತ್ಯಸಂಸ್ಕಾರ

    ಸೋಂಕಿತನ ಅಂತ್ಯಕ್ರಿಯೆಗೆ ವಿರೋಧ – ಸತತ 6 ಗಂಟೆಗಳ ನಂತ್ರ ಮಧ್ಯರಾತ್ರಿ 1ಕ್ಕೆ ಅಂತ್ಯಸಂಸ್ಕಾರ

    ಕೊಪ್ಪಳ: ರಾಜ್ಯದಲ್ಲಿ ಕೊರೊನಾ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಕೊರೊನಾದಿಂದ ಸಾವು ಮಾತ್ರ ಬರೋದು ಬೇಡ. ಬೇರೆ ಯಾವುದೇ ರೀತಿಯಾದರೂ ಸಾವು ಬರಲಿ ಅನ್ನೋ ಸ್ಥಿತಿ ನಿರ್ಮಾಣವಾಗಿದೆ. ಕೊಪ್ಪಳದಲ್ಲಿ ಒಂದೇ ದಿನ ಕೊರೊನಾ ಮಹಾಮಾರಿಗೆ ಇಬ್ಬರು ಬಲಿಯಾಗಿದ್ದಾರೆ.

    ಗಂಗಾವತಿ ತಾಲೂಕಿನ ಹಿರೇಜಂತಕಲ್ ಗ್ರಾಮದ ನಿವಾಸಿ 51 ವರ್ಷದ ವ್ಯಕ್ತಿ ಮತ್ತು ಕೊಪ್ಪಳ ತಾಲೂಕಿನ ಮುನಿರಾಬಾದನ 65 ವರ್ಷದ ವ್ಯಕ್ತಿ ಕೊರೊನಾದಿಂದ ಮೃತಪಟ್ಟಿದ್ದರು. 51 ವರ್ಷದ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಹಿರೇಜಂತಕಲ್‍ನ ಸ್ಮಶಾನದಲ್ಲಿ ಮಾಡಲು ತಾಲೂಕಾಡಳಿತ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಗ್ರಾಮಸ್ಥರು ಅಂತ್ಯಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದರು.

    ನಂತರ ತಾಲೂಕಾಧಿಕಾರಿಗಳು ಶವದೊಂದಿಗೆ ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದ ಸ್ಮಶಾನದಲ್ಲಿ ಗುರುವಾರ ರಾತ್ರಿ ಅಂತ್ಯಸಂಸ್ಕಾರಕ್ಕೆ ಆಗಮಿಸಿದರು. ಅಲ್ಲಿಯೂ ಕೂಡ ಗ್ರಾಮಸ್ಥರು ವಿರೋಧಿಸಿದ್ದಾರೆ. ಮೃತ ಸೋಂಕಿತನನ್ನು ಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡದಂತೆ ಎರಡು ಗ್ರಾಮದವರು ಭಾರೀ ವಿರೋಧಿಸಿದರು.

    ಇನ್ನೂ ಗ್ರಾಮಸ್ಥರಿಗೆ ಮಾನವರಿಕೆ ಮಾಡಲು ತಾಲೂಕಾಡಳಿತ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಹರಸಾಹಸ ಪಟ್ಟಿದ್ದಾರೆ. ಆದರು ಜನರು ಮಾತ್ರ ಅಂತ್ಯಸಂಸ್ಕಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಂಗಾಪೂರದಲ್ಲಿ ಗ್ರಾಮಸ್ಥರು ಗುಂಡಿ ತೋಡುತ್ತಿದ್ದ ಜೆಸಿಬಿ ಚಾಲಕನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಜಿಸಿಬಿ ಮೇಲೆ ಕಲ್ಲು ತೂರಾಟ ಮಾಡಿದ್ದರು. ಕೊನೆಗೆ ಸತತ 6 ಗಂಟೆಗಳ ಫಜೀತಿಯ ನಡುವೆ ತಾಲೂಕಾಡಳಿತ ಗುಡ್ಡದಲ್ಲಿ ಮಧ್ಯರಾತ್ರಿ 1ಕ್ಕೆ ಅಂತ್ಯಸಂಸ್ಕಾರ ಮಾಡಬೇಕಾಯ್ತು.

  • ಕೊರೊನಾ ಎಫೆಕ್ಟ್- ಬೆಂಗ್ಳೂರು ಪೊಲೀಸರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

    ಕೊರೊನಾ ಎಫೆಕ್ಟ್- ಬೆಂಗ್ಳೂರು ಪೊಲೀಸರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

    ಬೆಂಗಳೂರು: ರಾಜ್ಯದಲ್ಲಿ ಭಾನುವಾರ ಅತಿ ಹೆಚ್ಚು ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದ್ದು, 1,267 ಮಂದಿಗೆ ಹೆಮ್ಮಾರಿ ಸೋಂಕು ತಗುಲಿದೆ. ಇದೀಗ ಈ ಕೊರೊನಾ ಮಹಾಮಾರಿ ಎಫೆಕ್ಟ್‌ನಿಂದಾಗಿ ಬೆಂಗಳೂರು ಪೊಲೀಸರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.

    ನಗರದಲ್ಲಿ ಪೊಲೀಸರ ಸಂಖ್ಯೆಯೇ ಕಡಿಮೆ ಇರುವ ಪೊಲೀಸರಲ್ಲಿ 130 ಮಂದಿಗೂ ಅಧಿಕ ಸಿಬ್ಬಂದಿಗೆ ಸೋಂಕು ದೃಢವಾಗಿದೆ. ಸೋಂಕು ದೃಢಪಟ್ಟವರ ಪ್ರಾಥಮಿಕ ಸಂಪರ್ಕದಲ್ಲಿದ್ದ 900ಕ್ಕೂ ಹೆಚ್ಚು ಪೊಲೀಸರು ಕ್ವಾರಂಟೈನ್ ಆಗಿದ್ದಾರೆ. ಅಷ್ಟೇ ಅಲ್ಲದೇ 50 ವರ್ಷಕ್ಕೂ ಮೇಲ್ಪಟ್ಟ ಪೊಲೀಸರಿಗೆ ವರ್ಕ್ ಫ್ರಂ ಹೋಂ ವ್ಯವಸ್ಥೆ ಮಾಡಿದ್ದಾರೆ. ಉಳಿದವರಲ್ಲಿ ಸೋಂಕಿಗೆ ಮೇಲಿಂದ ಮೇಲೆ ಬಲಿಯಾಗುತ್ತಿರುವುದಿಂದ ಭಯಗೊಂಡು ಕೆಲಸಕ್ಕೆ ಹಾಜರಾಗಲು ಹಿಂದೇಟು ಹಾಕುತ್ತಿದ್ದಾರೆ.

    ಹೀಗಾಗಿ ಪೊಲೀಸರ ಸಂಖ್ಯೆಯಲ್ಲಿ ಗಣನಿಯವಾಗಿ ಇಳಿಕೆಯಾಗುತ್ತಿದೆ. ಇದರಿಂದ ಪೊಲೀಸರನ್ನು ಆದಷ್ಟು ಹುರಿದುಂಬಿಸಿ ಕೆಲಸ ಮಾಡಿಸುವ ಪರಿಸ್ಥಿತಿ ಪೊಲೀಸ್ ಇಲಾಖೆಗೆ ಬಂದೊದಗಿದೆ. ಮುಂಜಾಗೃತ ಕ್ರಮದ ಜೊತೆ ಕಂಟೈನ್ಮೆಂಟ್ ಝೋನ್ ಹಾಗೂ ಸೀಲ್‍ಡೌನ್ ಪ್ರದೇಶಗಳಲ್ಲಿ ಕೆಲಸ ಮಾಡುವ ಪೊಲೀಸರಿಗೆ ಪಿಪಿಇ ಕಿಟ್ ಕೊಟ್ಟು ಕೆಲಸ ಮಾಡಿಸುವ ಚಿಂತನೆ ಮಾಡಲಾಗಿದೆ.

    ಸೂಕ್ತ ಭದ್ರತೆ ಇರದಿದ್ದರೆ ಮುಂದಿನ ದಿನಗಳಲ್ಲಿ ಯಾರೂ ಕೂಡ ಕರ್ತವ್ಯಕ್ಕೆ ಹಾಜರಾಗುವುದಕ್ಕೆ ಮುಂದೆ ಬರುವುದಿಲ್ಲ ಅನ್ನೋದು ಪೊಲೀಸ್ ಇಲಾಖೆಗೆ ಮನವರಿಕೆ ಆಗಿದೆ. ಹೀಗಾಗಿ ಸೂಕ್ತ ಭದ್ರತೆಯೊಂದಿಗೆ ಕರ್ತವ್ಯಕ್ಕೆ ನೇಮಿಸಿ ಕೊರೊನಾ ವಿರುದ್ಧ ಹೋರಾಡಲು ಪೊಲೀಸ್ ಇಲಾಖೆ ಮುಂದಾಗಿದೆ.

    ಭಾನುವಾರ ಸಿಲಿಕಾನ್ ಸಿಟಿಯಲ್ಲಿ 783 ಪ್ರಕರಣಗಳು ವರದಿಯಾಗಿವೆ. ಡೆಡ್ಲಿ ವೈರಸ್ ವ್ಯೂಹಕ್ಕೆ ಬೆಂಗಳೂರು ಸಿಲುಕಿರೋದು ಖಚಿತವಾಗಿದೆ. ಇನ್ನೂ ಕಳೆದ ದಿನ 16 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.

  • ಇಲಾಖೆ ಮರೆತ ಜಮೀನನ್ನು ವಾಪಸ್ ಪಡೆಯಲು ಮುಂದಾದ ಎಸ್‍ಪಿ ವರ್ತಿಕಾ

    ಇಲಾಖೆ ಮರೆತ ಜಮೀನನ್ನು ವಾಪಸ್ ಪಡೆಯಲು ಮುಂದಾದ ಎಸ್‍ಪಿ ವರ್ತಿಕಾ

    ಧಾರವಾಡ: ಸರ್ಕಾರಿ ಜಾಗಗಳು ಅತಿಕ್ರಮಣವಾದರೆ ಅದನ್ನು ತೆರವುಗೊಳಿಸುವುದಕ್ಕೆ ವಿವಿಧ ಇಲಾಖೆಗಳು ಪೊಲೀಸರ ಸಹಾಯವನ್ನು ಪಡೆಯುತ್ತಾರೆ. ಆದರೆ ಧಾರವಾಡದಲ್ಲೀಗ ಪೊಲೀಸರೇ ಕಂದಾಯ ಮತ್ತು ಭೂ ಮಾಪನ ಇಲಾಖೆ ಸಹಾಯದೊಂದಿಗೆ ತಮ್ಮದೇ ಜಾಗದ ಸರ್ವೆ ಮಾಡಲು ಹೋದ ಘಟನೆ ನಡೆದಿದೆ.

    ಧಾರವಾಡ ಜಿಲ್ಲೆಯ ಮುಗದ ಗ್ರಾಮದಲ್ಲಿ ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆಯ ಒಂದು ಎಕರೆ ಜಾಗ ಇದೆ. ನಾಲ್ಕು ದಶಕಗಳ ಹಿಂದೆ ಇಲ್ಲೊಂದು ಪೊಲೀಸ್ ಠಾಣೆ ಅಲ್ಲದೇ ಪಿಎಸ್‍ಐ ಮತ್ತು 12 ಜನ ಪೊಲೀಸ್ ಪೇದೆಗಳ ವಸತಿ ನಿಲಯಗಳು ಇದ್ದವು. ಅವು ಈಗಲೂ ಇವೆ. ಆದರೆ ಅವುಗಳಲ್ಲಿ ಪೊಲೀಸ್ ಬದಲಿಗೆ ಮುಗದ ಗ್ರಾಮದ ಕೆಲ ಜನ ವಾಸಿಸುತ್ತಿದ್ದಾರೆ.

    ಈ ಠಾಣೆ ಅಳ್ನಾವರ ಪಟ್ಟಣಕ್ಕೆ ಶಿಫ್ಟ್ ಆದ ಬಳಿಕ ಇಲಾಖೆ ಇದನ್ನು ಮರತೇ ಬಿಟ್ಟಿತ್ತು. ಆದರೆ ಈಗ ಧಾರವಾಡ ಎಸ್ಪಿ ಇದನ್ನು ಹುಡುಕಿಕೊಂಡು ಹೋಗಿದ್ದಾರೆ. ಮುಗದ ಗ್ರಾಮದ ಈ ಜಾಗದಲ್ಲಿ ಬ್ರಿಟಿಷ್ ಕಾಲದಿಂದಲೂ ಪೊಲೀಸ್ ಠಾಣೆ ಇತ್ತು. ಇಲಾಖೆಯೂ ಆ ಬಳಿಕ ಇದನ್ನು ಮರತೆ ಹೋಗಿತ್ತು. ದಿನ ಕಳೆದಂತೆ ಕಂದಾಯ ಇಲಾಖೆ ಇಲ್ಲಿ ಗ್ರಾಮ ಪಂಚಾಯ್ತಿ ಸಹ ಕಟ್ಟಿದ್ದಾರೆ. ಅದರ ಪಕ್ಕದಲ್ಲೇ ಅಂಗನವಾಡಿ ಕೇಂದ್ರವನ್ನು ನಿರ್ಮಿಸಲಾಗಿದೆ.

    ಪೊಲೀಸ್ ಪೇದೆಗಳಿಗಾಗಿ ಇದ್ದ 12 ವಸತಿ ಗೃಹಗಳು ಊರಿನ ಜನ ತಮ್ಮ ಮನೆ ಮಾಡಕೊಂಡಿದ್ದಾರೆ. ಸದ್ಯ ಎಸ್‍ಪಿ ವರ್ತಿಕಾ ಕಟಿಯಾರ್ ಈ ಜಾಗ ಹುಡುಕಿಕೊಂಡು ಹೋದ ಬಳಿಕ ಸ್ಥಳೀಯರು ಜಾಗ ಬಿಟ್ಟು ಕೊಡಲು ಮುಂದಾಗಿದ್ದಾರೆ. ಆದರೆ ನಮ್ಮೂರಿನ ಠಾಣೆ ಇಲ್ಲಿಂದ ಹೋಗಿದೆ. ನಾವು ಎಲ್ಲವನ್ನೂ ಕೊಡುವುದಕ್ಕೆ ರೆಡಿ ಇದ್ದೇವೆ. ಆದರೆ ನಮ್ಮೂರಿನ ಠಾಣೆ ನಮಗೆ ವಾಪಸ್ ಕೊಡಿ ಎಂದು ಗ್ರಾಮಸ್ಥರು ಷರತ್ತು ಹಾಕಿದ್ದಾರೆ.