Tag: police department

  • ಅಪರಾಧಿಗಳ ಜೊತೆ ಪೊಲೀಸರು ಸಂಬಂಧ ಇಟ್ಟುಕೊಳ್ಳಬಾರದು – ಸಿದ್ದರಾಮಯ್ಯ

    ಅಪರಾಧಿಗಳ ಜೊತೆ ಪೊಲೀಸರು ಸಂಬಂಧ ಇಟ್ಟುಕೊಳ್ಳಬಾರದು – ಸಿದ್ದರಾಮಯ್ಯ

    ಬೆಂಗಳೂರು: ಅಪರಾಧಿಗಳ ಜೊತೆ ಪೊಲೀಸರು ಸಂಬಂಧ ಇಟ್ಟುಕೊಳ್ಳಬಾರದು. ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಪೊಲೀಸರ ಗುರಿ ಇದೆ ಆಗಿರಬೇಕು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಪೊಲೀಸರಿಗೆ ಕರೆ ನೀಡಿದರು.

    ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಆಯೋಜಿಸಿದ್ದ ಪೊಲೀಸ್ ಸಿಬ್ಬಂದಿಯ ನೂತನ ಪೀಕ್ ಕ್ಯಾಪ್ ವಿತರಣೆ, ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಉದ್ಘಾಟನೆ ಹಾಗೂ ಸನ್ಮಿತ್ರ ಕಾರ್ಯಯೋಜನೆ ಕೈಪಿಡಿಯನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ನಮ್ಮ ಯುವ ಶಕ್ತಿ, ವಿದ್ಯಾರ್ಥಿ, ಯುವಜನರ ಚೈತನ್ಯ ಮತ್ತು ಸಾಮರ್ಥ್ಯ ಮಾದಕ ವಸ್ತುಗಳಿಂದ ಬಲಿ ಆಗಬಾರದು. ಇದಕ್ಕೆ ಪೊಲೀಸ್ ಇಲಾಖೆ ನಿಲುವು ತೆಗೆದುಕೊಳ್ಳಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಘರ್ಷಣೆ, ಅನೈತಿಕ ಪೊಲೀಸ್ ಗಿರಿ ಹೆಚ್ಚಾಗಿತ್ತು. ಹಿಂದಿದ್ದ ಅಧಿಕಾರಿಗಳು ನಿಯಂತ್ರಣ ಮಾಡಲಿಲ್ಲ. ಇಬ್ಬರು ಅಧಿಕಾರಿಗಳನ್ನು ಬದಲಾಯಿಸಿ ಆದೇಶ ಹೊರಡಿಸಿದೆ. ಈಗ ದಕ್ಷಿಣ ಕನ್ನಡ ಜಿಲ್ಲೆ ನಿಯಂತ್ರಣದಲ್ಲಿದೆ. ಈ ಸಾಧನೆ ಮಾಡಿದ್ದೂ ನಮ್ಮದೇ ಅಧಿಕಾರಿಗಳು ಮತ್ತು ಸಿಬ್ಬಂದಿ. ಇವರೇನು ಬೇರೆ ಗ್ರಹದಿಂದ ಬಂದವರಲ್ಲ. ನಿಮ್ಮವರೇ, ನಮ್ಮವರೇ ಆಗಿದ್ದಾರೆ. ಆದ್ದರಿಂದ ನೀವು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯವಿದೆ. ಸಾಧಿಸಿ ತೋರಿಸಿ ಎಂದರು.ಇದನ್ನೂ ಓದಿ: ಬೆಂಗಳೂರು ಟನಲ್ ರಸ್ತೆ ವಿವಾದ; ಡಿಕೆಶಿ ಭೇಟಿಯಾದ ತೇಜಸ್ವಿ ಸೂರ್ಯ

    ಇದೇ ರೀತಿ ಇಡೀ ರಾಜ್ಯದಲ್ಲಿ ಮಾದಕ ವಸ್ತು ಹಾವಳಿ ತಪ್ಪಿಸಲು ನಿಮ್ಮಿಂದ ಸಾಧ್ಯವಿದೆ. ನೀವು ಸಾಧ್ಯ ಮಾಡಿದರೆ ಕರ್ನಾಟಕ ಪೊಲೀಸ್ ಘನತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಾಗುತ್ತದೆ. ಕೆಲವು ಪೊಲೀಸರು ರಿಯಲ್ ಎಸ್ಟೇಟ್ ಮಾಡುವವರ ಜೊತೆ, ಡ್ರಗ್ಸ್ ಜಾಲದ ಜೊತೆ ಶಾಮೀಲಾಗಿರುತ್ತಾರೆ. ರೌಡಿಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕುವುದು ನಿಮ್ಮಿಂದ ಸಾಧ್ಯ. ಪೊಲೀಸರ ಬಗ್ಗೆ ಅಪರಾಧ ಜಗತ್ತಿಗೆ ಭಯ ಕಡಿಮೆಯಾಗಿದೆ. ಯಾಕೆ ಹೀಗಾಯ್ತು ಎಂದು ನಿಮ್ಮನ್ನು ನೀವೇ ಪ್ರಶ್ನಿಸಿಕೊಂಡರೆ ಉತ್ತರ ನಿಮಗೇ ಗೊತ್ತಿರುತ್ತದೆ ಎಂದು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಆತ್ಮಸಾಕ್ಷಿಯನ್ನು ಕೆದಕಿದರು.

    ಡ್ರಗ್ಸ್ ಮಾರುವವರು, ತರುವವರು, ಎಲ್ಲಿಂದ ಡ್ರಗ್ಸ್ ಬರುತ್ತದೆ. ಈ ಜಾಲದ ಏಜೆಂಟರು ಯರ‍್ಯಾರಯ ಎನ್ನುವುದೂ ನಿಮಗೇ ಗೊತ್ತಿರುತ್ತದೆ. ಆದಷ್ಟು ಬೇಗ ರಾಜ್ಯ, “ಡ್ರಗ್ ಮುಕ್ತ ಕರ್ನಾಟಕ” ಆಗಲಿ, ಮಾಡಿ ತೋರಿಸಿ ಎಂದರು.

    ಇಂದು ನಾನೇ ಬಿಡುಗಡೆ ಮಾಡಿದ ಪೀಕ್ ಕ್ಯಾಪ್ ಮಾದರಿಯನ್ನೂ ಆಯ್ಕೆ ಮಾಡಿದ್ದು ನಾನೇ. 1956 ರಿಂದ ಸುಮಾರು 70 ವರ್ಷಗಳಿಂದ ಇದ್ದ ಒಂದೇ ಮಾದರಿಯ ಕ್ಯಾಪ್ ಅನ್ನು ಇಂದು ಬದಲಾಯಿಸಿದ್ದೇವೆ. ಅಧಿಕಾರಿ ಮತ್ತು ಸಿಬ್ಬಂದಿಗೆ ಒಂದೇ ಮಾದರಿ ಕ್ಯಾಪ್ ಒದಗಿಸಲಾಗಿದ್ದು, ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿ. ಕೇವಲ ಕ್ಯಾಪ್ ಬದಲಾಗುವುದಲ್ಲ. ನಿಮ್ಮ ಕಾರ್ಯಕ್ಷಮತೆಯೂ ಬದಲಾಗಲಿ ಎಂದು ತಿಳಿಸಿದರು.

    ಪೊಲೀಸ್ ಇಲಾಖೆಯ ದಕ್ಷತೆಯಿಂದ ಸರ್ಕಾರಕ್ಕೆ ಒಳ್ಳೆ ಹೆಸರು ಬರುತ್ತದೆ. ಇಂಡಿಯಾ ಜಸ್ಟೀಸ್ ವರದಿಯಲ್ಲಿ ಕರ್ನಾಟಕ ಪೊಲೀಸ್ ನಂಬರ್ ಒನ್ ಸ್ಥಾನದಲ್ಲಿದೆ ಎನ್ನುವ ವರದಿ ರಾಜ್ಯದ ಘನತೆ ಹೆಚ್ಚಿಸಿದೆ ಎಂದು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.ಇದನ್ನೂ ಓದಿ: ಯಾವುದೇ ಸರ್ಕಾರ ಬಂದರೂ ಪೊಲೀಸರ ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬಾರದು: ಡಿಕೆಶಿ

     

  • ಡಿಕೆಶಿ ಬೆಂಬಲಿಗರ ಮೇಲಿನ 12 ಪ್ರಕರಣ ಸೇರಿ 62 ಕ್ರಿಮಿನಲ್‌ ಕೇಸ್‌ ವಾಪಸ್ ಪಡೆದ ಸರ್ಕಾರ

    ಡಿಕೆಶಿ ಬೆಂಬಲಿಗರ ಮೇಲಿನ 12 ಪ್ರಕರಣ ಸೇರಿ 62 ಕ್ರಿಮಿನಲ್‌ ಕೇಸ್‌ ವಾಪಸ್ ಪಡೆದ ಸರ್ಕಾರ

    – ಪೊಲೀಸ್, ಕಾನೂನು ಇಲಾಖೆಗಳ ವಿರೋಧದ ನಡುವೆಯೂ ಕೇಸ್‌ ವಾಪಸ್‌

    ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರ ಬೆಂಬಲಿಗರ ವಿರುದ್ಧದ 12 ಪ್ರಕರಣವೂ ಸೇರಿ ಒಟ್ಟು 62 ಕ್ರಿಮಿನಲ್‌ ಪ್ರಕರಣಗಳನ್ನು ವಾಪಸ್ ಪಡೆಯಲು ರಾಜ್ಯ ಸಚಿವ ಸಂಪುಟ ಸಮಿತಿ (Congress Cabinet) ಒಪ್ಪಿಗೆ ಸೂಚಿಸಿದೆ.

    ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು 2019 ರಲ್ಲಿ ಡಿಕೆಶಿವಕುಮಾರ್‌ ಅವರನ್ನು ಬಂಧಿಸಿದಾಗ ದಾಂಧಲೆ ನಡೆಸಿದ ಬೆಂಗಲಿಗರ ವಿರುದ್ಧ ಸಾತನೂರು, ಕೋಡಿಹಳ್ಳಿಸೇರಿ ರಾಮನಗರ ಜಿಲ್ಲೆಯ ನಾನಾ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣ, ರೈತ ಮುಖಂಡರು, ನಾನಾ ಸಂಘಟನೆಗಳ ಮುಖಂಡರ ವಿರುದ್ಧದ ಮೊಕದ್ದಮೆಗಳನ್ನು ಕೈಬಿಡುವ ನಿರ್ಣಯವನ್ನು ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕ್ಯಾಬಿನೆಟ್‌ ತೆಗೆದುಕೊಂಡಿತು.

    ಇದರೊಂದಿಗೆ ಬೇರೆ ಬೇರೆ 62 ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ ಪಡೆಯಲು ಗುರುವಾರದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ‌ ಬ್ಯಾಲೆಟ್ ಪೇಪರ್ ಎಲೆಕ್ಷನ್: ಕಾನೂನು ತರಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ

    ಕೇಸ್‌ ವಾಪಸ್‌ಗೆ ಪೊಲೀಸ್ ಇಲಾಖೆ, ಕಾನೂನು ಇಲಾಖೆ ವಿರೋಧ ವ್ಯಕ್ತಪಡಿಸಿವೆ. ಸಂಪುಟ ಸಭೆಯ ಟಿಪ್ಪಣಿಯಲ್ಲಿ ಎರಡೂ ಇಲಾಖೆಗಳ ಅಭಿಪ್ರಾಯ ಕೇಳಲಾಗಿತ್ತು. ಈ ವೇಳೆ ಇವು ವಾಪಸ್ ಪಡೆಯಲು ಅರ್ಹವಾದ ಪ್ರಕರಣಗಳಲ್ಲ ಎಂದು ಡಿಜಿ ಮತ್ತು ಐಜಿಪಿ ಅಭಿಪ್ರಾಯ ಪಟ್ಟರೆ, ಸಾರ್ವಜನಿಕ ಹಿತಾಸಕ್ತಿ ಇಲ್ಲ, ಕೇಸ್ ಹಿಂದಕ್ಕೆ ಪಡೆಯಲು ಸೂಕ್ತ ಅಲ್ಲ ಎಂದು ಕಾನೂನು ಇಲಾಖೆ ಅಭಿಪ್ರಾಯ ಪಟ್ಟಿದೆ. ಆದಾಗ್ಯೂ ಎರಡೂ ಇಲಾಖೆಯ ಅಭಿಪ್ರಾಯ ಬದಿಗೊತ್ತಿ ಸಂಪುಟ ಸಭೆಯಲ್ಲಿ ಕೇಸ್ ವಾಪಸ್‌ಗೆ ಗ್ರೀನ್‌ ಸಿಗ್ನಲ್‌ ನೀಡಲಾಗಿದೆ.  ಇದನ್ನೂ ಓದಿ: ಸಮೀರ್‌ ವಿಡಿಯೋದಲ್ಲಿ ಬಳಸಿದ್ದ ಒಂದು ಪದಕ್ಕೆ ಸಂಬಂಧಿಸಿದ್ದಂತೆ ಪೊಲೀಸರು ಜಪ್ತಿ ಮಾಡಿದ್ದಾರೆ: ಮಟ್ಟಣ್ಣನವರ್‌

  • ದ್ವೇಷ ಭಾಷಣ ಮಾಡುವವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ಸಿಎಂ ಸೂಚನೆ

    ದ್ವೇಷ ಭಾಷಣ ಮಾಡುವವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ಸಿಎಂ ಸೂಚನೆ

    ಬೆಂಗಳೂರು: ದ್ವೇಷ ಭಾಷಣ ಮಾಡುವವರ ವಿರುದ್ಧ, ಜನರ-ರಾಜ್ಯದ ನೆಮ್ಮದಿ ಕೇಡಿಸುವವರ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸೂಚನೆ ಕೊಟ್ಟಿದ್ದಾರೆ.

    ಪೊಲೀಸರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಸಿಎಂ, ಕೇಸ್‌ ದಾಖಲಿಸಬೇಕು ಅಥವಾ ಯಾರಾದ್ರು ದ್ವೇಷ ಭಾಷಣ ಮಾಡಿರುವವರ ವಿರುದ್ಧ ದೂರು ಕೊಟ್ಟರೂ ದಾಖಲಿಸಿಕೊಂಡು ಕ್ರಮ ಜರುಗಿಸಬೇಕು ಎಂದು ಪೊಲೀಸರಿಗೆ ಖಡಕ್‌ ನಿರ್ದೇಶನ ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ವಿರುದ್ಧ ಸರಿಯಾದ ಕ್ರಮ ಜರುಗಿಸದಕ್ಕೆ ಸಿಎಂ, ಪರಂ ಅಸಮಾಧಾನ

    ನೀವು ಕ್ರಮ‌ ತೆಗೆದುಕೊಳ್ಳದಿದ್ದರೆ ನಾವು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ. ನಾವು ವ್ಯವಸ್ಥೆಯನ್ನು ದೂಷಿಸಿಕೊಂಡು ಕೈ ಕಟ್ಟಿಕೊಂಡು ಕೂರೋದಲ್ಲ ಕೆಲಸ ಮಾಡಬೇಕೆಂದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ 2 ವರ್ಷ 11 ತಿಂಗಳು ಸಿಎಂ ಆಗಿರ್ತಾರೆ, ಇನ್ನೂ ಸ್ಟ್ರಾಂಗ್ ಆಗ್ತಾರೆ: ಬಸವರಾಜ ರಾಯರೆಡ್ಡಿ ಬಾಂಬ್

    ತೆಲಂಗಾಣ ಮಾದರಿಯ ಟೋಪಿಗೆ ಸಿಎಂ ಅನುಮತಿ
    ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕ ಪೊಲೀಸರಿಗೆ ಹೊಸ ಮಾದರಿಯ ಟೋಪಿಗೆ ಸಮ್ಮತಿ ಸೂಚಿಸಿದ್ದಾರೆ. ಐದಾರು ರಾಜ್ಯದ ಟೋಪಿಗಳನ್ನು ಪರಿಶೀಲನೆ ಮಾಡಿದ ಸಿಎಂ ತೆಲಂಗಾಣ ರಾಜ್ಯದ ಟೋಪಿಯನ್ನು ಆಯ್ಕೆ ಮಾಡಿದ್ದಾರೆ. ತೆಲಂಗಾಣ ರಾಜ್ಯದ ಟೋಪಿಯನ್ನ ಹೆಡ್‌ಕಾನ್ಸ್ಟೇಬಲ್‌ಗೆ ಹಾಕಿಸಿ, ಪರಿಶೀಲನೆ ಮಾಡಿ ಅಂತಿಮಗೊಳಿಸಿದ್ದಾರೆ. ಇದನ್ನೂ ಓದಿ: ಜುಲೈ 1 ರಿಂದ ವಿದ್ಯುತ್ ಸಂಪರ್ಕಕ್ಕೆ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ – ಗ್ರಾಹಕರಿಗೆ ಏನು ಅನುಕೂಲ?

    ಕಳೆದ ಅಧಿವೇಶನದಲ್ಲಿ ಶಾಸಕ ಸಿ.ಎನ್ ಮಂಜೇಗೌಡ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಒಂದೇ ರೀತಿಯ ಟೋಪಿ ನೀಡಬೇಕೆಂದು ಪ್ರಶ್ನೆ ಮಾಡಿದ್ದರು. ಇದನ್ನು ಪರಿಶೀಲನೆ ನಡೆಸಿ ವರದಿ ನೀಡುವಂತೆ ಗೃಹ ಸಚಿವ ಡಾ.ಪರಮೇಶ್ವರ್ ಅಂದಿನ ಡಿಜಿಐಜಿಪಿ ಅಲೋಕ್ ಮೋಹನ್‌ಗೆ ಸೂಚಿಸಿದ್ದರು. ಕೆಎಸ್‌ಆರ್‌ಪಿ ಉಮೇಶ್ ಕುಮಾರ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಟೋಪಿ ಬದಲಾವಣೆ ಕುರಿತು ಸಿವಿಲ್, ಕೆಎಸ್‌ಆರ್‌ಪಿ, ಸಿಎಆರ್, ಡಿಎಆರ್, ಹಾಗೂ ಐಎಸ್‌ಡಿ ಸೇರಿ ಪೊಲೀಸ್ ಇಲಾಖೆಯ ಎಲ್ಲಾ ವಿಭಾಗಗಳ ಹೆಡ್‌ಕಾನ್ಸಟೇಬಲ್ ಹಾಗೂ ಕಾನ್ಸಟೇಬಲ್‌ಗಳಿಂದ ಸಮಿತಿ ಅಭಿಪ್ರಾಯ ಸಂಗ್ರಹಿಸಿತ್ತು, ಅಲ್ಲದೆ ಕೇರಳ, ಮಹಾರಾಷ್ಟ್ರ, ಆಂದ್ರಪ್ರದೇಶ, ತಮಿಳುನಾಡು ಸೇರಿ ಹೊರ ರಾಜ್ಯದ ಪೊಲೀಸರ ಟೋಪಿ ಕುರಿತು ಮಾಹಿತಿ ಕಲೆ ಹಾಕಲಾಗಿತ್ತು.

    ಈ ಎಲ್ಲಾ ಅಭಿಪ್ರಾಯ ಬಳಿಕ ಮೂರು ಬಾರಿ ಸಭೆ ಸೇರಿ, ಸಮಾಲೋಚನೆ ನಡೆಸಿ ಅಂತಿಮವಾಗಿ ತೆಲಂಗಾಣ ರಾಜ್ಯದ ಟೋಪಿಯನ್ನು ಸಿಎಂ ಸಿದ್ದರಾಮಯ್ಯ ಅಂತಿಮಗೊಳಿಸಿದ್ದಾರೆ.

  • ಶೀಘ್ರದಲ್ಲೇ 8,000 ಪೊಲೀಸ್ ಪೇದೆಗಳ ಹುದ್ದೆ ಭರ್ತಿ – ಜಿ.ಪರಮೇಶ್ವರ್

    ಶೀಘ್ರದಲ್ಲೇ 8,000 ಪೊಲೀಸ್ ಪೇದೆಗಳ ಹುದ್ದೆ ಭರ್ತಿ – ಜಿ.ಪರಮೇಶ್ವರ್

    -ಈ ವರ್ಷ ನೀರಾವರಿಗೆ 22 ಸಾವಿರ ಕೋಟಿ ರೂ. ಮೀಸಲು

    ಕೊಪ್ಪಳ: ರಾಜ್ಯಾದ್ಯಂತ ಕಳೆದ 5 ವರ್ಷದಲ್ಲಿ 8 ಸಾವಿರ ಪೊಲೀಸ್ ಪೇದೆ ಹುದ್ದೆ ಖಾಲಿ ಆಗಿದ್ದು, ಶೀಘ್ರದಲ್ಲೇ ಭರ್ತಿ ಮಾಡುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ (G Parameshwar) ಹೇಳಿದರು.

    ಕೊಪ್ಪಳದ ಜಿಲ್ಲಾ ಕಾಂಗ್ರೆಸ್ (Congress) ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಸರ್ಕಾರ ಯಾವುದೇ ನೇಮಕಾತಿ ಮಾಡಿಲ್ಲ. ಹೀಗಾಗಿ ಒಂದಷ್ಟು ಕಡೆ ಸಿಬ್ಬಂದಿ ಕೊರತೆಯಿರುವ ಬಗ್ಗೆ ಮಾಹಿತಿ ಇದೆ. ಈ ಹಿಂದಿನ ಸರ್ಕಾರವಿದ್ದಾಗ ನಡೆದ ಪಿಎಸ್‌ಐ ಹಗರಣದಿಂದ ಯಾವುದೇ ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ನಡೆಯಲಿಲ್ಲ. ನಮ್ಮ ಸರ್ಕಾರ ಎಲ್ಲವನ್ನೂ ಸರಿಪಡಿಸಿ, ಈಗಾಗಲೇ 500 ಪಿಎಸ್‌ಐ (PSI) ಹುದ್ದೆಗೆ ನೇಮಕಾತಿ ಮಾಡಿದೆ. ಇನ್ನೂ 500 ಪಿಎಸ್‌ಐ ಹುದ್ದೆಗೆ ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಭರವಸೆ ನೀಡಿದರು.ಇದನ್ನೂ ಓದಿ: ಇದೇ ವಾರ ಮುಗಿಯಲಿದೆ ದರ್ಶನ್ ಡೆವಿಲ್ ಶೂಟಿಂಗ್ !

    ಜಿಲ್ಲಾ ನ್ಯಾಯಾಧೀಶರು ಕೊಪ್ಪಳ ಗಾಜಾಪಟ್ಟಿ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರು ಏನಾದರೂ ಹೇಳಿಕೊಳ್ಳಲಿ. ಅಕ್ರಮ ತಡೆಗೆ ಸರ್ಕಾರದಿಂದ ಎಲ್ಲ ರೀತಿಯ ಸೂಚನೆ ನೀಡಿದ್ದೇವೆ. ರಾಜ್ಯಕ್ಕೆ ಪ್ರತಿದಿನ ಕೋಟ್ಯಂತರ ರೂ. ಡ್ರಗ್ಸ್ ಬರುತ್ತಿದೆ. ಕರ್ನಾಟಕ ಡ್ರಗ್ಸ್ ಮುಕ್ತ ಮಾಡಲು ಸರ್ಕಾರ ಮುಂದಾಗಿದೆ. ಆನೆಗೊಂದಿ ಭಾಗದಲ್ಲಿ ಡ್ರಗ್ಸ್ ತಡೆಯುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದರೆ ಆನೆಗೊಂದಿ ಭಾಗದಲ್ಲಿ ಪ್ರವಾಸಿ ಪೊಲೀಸ್ ಠಾಣೆ ಮಾಡುತ್ತೇವೆ. ರಾಯರೆಡ್ಡಿ ಅವರು ಆನೆಗೊಂದಿ ಕರ್ನಾಟಕದ ಡ್ರಗ್ಸ್ ಹಬ್ ಆಗಿದೆ ಎಂಬ ಸಲಹೆ ಹಾಗೂ ದೂರಿನ ಹಿನ್ನೆಲೆ ತಡೆಗೆ ಕ್ರಮ ಕೈಗೊಳ್ಳಲಾಗುವುದು. ಪೊಲೀಸರು ಮುಕ್ತವಾಗಿ ಕೆಲಸ ಮಾಡಲು ಸೂಚಿಸಿದ್ದೇವೆ ಎಂದರು.

    ರಾಜ್ಯ ಸರ್ಕಾರ ಚುನಾವಣೆ ಪೂರ್ವ ನೀಡಿದ ಭರವಸೆ ಈಡೇರಿಸಿದೆ. ಐದೂ ಗ್ಯಾರಂಟಿ ಅನುಷ್ಠಾನ ಮಾಡಿದ್ದೇವೆ. ಇದರಿಂದ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿನ ಜನರು ಮಧ್ಯಮ ವರ್ಗಕ್ಕೆ ಸೇರಿದ್ದಾರೆ. ಇದಕ್ಕೆ ಗ್ಯಾರಂಟಿ ಯೋಜನೆ ಕಾರಣ. ಚುನಾವಣೆ ವೇಳೆ ನಾವು ಕಣ್ಣು ಮುಚ್ಚಿ ಗ್ಯಾರಂಟಿ ಜಾರಿ ಮಾಡಿಲ್ಲ. ಎಲ್ಲ ಪೂರ್ವ ನಿಯೋಜಿತ ಲೆಕ್ಕಾಚಾರದಿಂದಲೇ ಗ್ಯಾರಂಟಿ ಕೊಡಲಾಗಿದೆ. ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಗ್ಯಾರಂಟಿ ಯೋಜನೆ ತಲುಪುತ್ತಿವೆ ಎಂದರು.

    ಅಭಿವೃದ್ಧಿ ಆಗುತ್ತಿಲ್ಲ ಎಂಬ ಟೀಕೆ ಸರಿಯಲ್ಲ. ಈ ವರ್ಷ ನೀರಾವರಿಗೆ 22 ಸಾವಿರ ಕೋಟಿ ರೂ. ಮೀಸಲು ಇಟ್ಟಿದ್ದೇವೆ. ಅಭಿವೃದ್ಧಿ ಜೊತೆಗೆ ಗ್ಯಾರಂಟಿ ನೀಡುತ್ತಿದ್ದೇವೆ. ಕೃಷಿಗೆ ಎಲ್ಲ ಅಗತ್ಯ ಕೃಷಿ ಉಪಕರಣಗಳನ್ನು ನೀಡುತ್ತಿದ್ದೇವೆ. ಯಾವುದೇ ಅಭಿವೃದ್ಧಿ ಕೆಲಸ ನಿಲ್ಲಿಸಿಲ್ಲ. ಮುಂದಿನ 2027ಕ್ಕೆ ಎತ್ತಿನ ಹೊಳೆ ಯೋಜನೆ ಪೂರ್ಣಗೊಳಿಸಲು ಸಿಎಂ ಘೋಷಿಸಿದ್ದಾರೆ ಎಂದು ಮಾಹಿತಿ ನೀಡಿದರು.ಇದನ್ನೂ ಓದಿ: ಪೆರ್ಡೂರು ಅನಂತಪದ್ಮನಾಭನಿಗೆ ಮುಷ್ಟಿ ಕಾಣಿಕೆ ಅರ್ಪಿಸಿದ ರಕ್ಷಿತ್ ಶೆಟ್ಟಿ

  • ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಸೇರಿ ಮೂವರಿಗೆ ಮುಖ್ಯಮಂತ್ರಿ ಪದಕ

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಸೇರಿ ಮೂವರಿಗೆ ಮುಖ್ಯಮಂತ್ರಿ ಪದಕ

    ಹಾವೇರಿ: ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ನೀಡಲಾಗುವ ಮುಖ್ಯಮಂತ್ರಿ ಪದಕಕ್ಕೆ ಹಾವೇರಿ (Haveri) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಸೇರಿ ಮೂವರು ಭಾಜರಾಗಿದ್ದಾರೆ.

    ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಮುಖ್ಯಮಂತ್ರಿಗಳ ಪದಕ ನೀಡಿ ಗೌರವಿಸಲಾಗುತ್ತದೆ. ಶನಿವಾರ 2024ನೇ ಸಾಲಿನ ಸಿಎಂ ಪದಕ ವಿಜೇತರ ಪಟ್ಟಿಗೆ ಅನುಮೋದನೆ ನೀಡಲಾಗಿದೆ. ಇದನ್ನೂ ಓದಿ: Tumakuru | ಬಸ್, ಬೈಕ್ ನಡುವೆ ಅಪಘಾತ – ಯುಗಾದಿಗೆ ಊರಿಗೆ ತೆರಳುತ್ತಿದ್ದ ಇಬ್ಬರು ಸಾವು

    ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಅವರು 2024 ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿದ್ದಾರೆ. ಜೊತೆಗೆ ಶಿಗ್ಗಾಂವಿ ಪೊಲೀಸ್ ಠಾಣೆಯ ಹೆಚ್.ತಿಪ್ಪೆಸ್ವಾಮಿ, ಸ್ಪೆಷಲ್ ಆರ್‌ಹೆಚ್‌ಸಿ:66, 10ನೇ ಪಡೆ, ಕೆಎಸ್‌ಆರ್‌ಪಿ, ಬಟಾಲಿಯನ್‌ನ ಸಿಬ್ಬಂದಿ ಹಾಗೂ ಸವಣೂರು ಪೊಲೀಸ್ ಠಾಣೆಯ ಬಸವರಾಜ.ಡಿ.ಮಲ್ಲೂರ್, ಸಿಹೆಚ್‌ಸಿ:783 ಸಿಬ್ಬಂದಿಗೂ ಸಿಎಂ ಮೆಡಲ್ ಲಭಿಸಿದೆ. ಇದನ್ನೂ ಓದಿ: ನಾಗ್ಪುರಕ್ಕೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ – ಸ್ಮೃತಿ ಮಂದಿರಕ್ಕೆ ಭೇಟಿ

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಸೇರಿ ಜಿಲ್ಲೆಯ ಮೂವರಿಗೆ ಮುಖ್ಯಮಂತ್ರಿ ಪದಕ ಲಭಿಸಿದ್ದಕ್ಕೆ ಪೊಲೀಸ್ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ. ಒಳಾಡಳಿತ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಈ ಪತ್ರ ಹೊರಡಿಸಿದ್ದಾರೆ. ಇದನ್ನೂ ಓದಿ: ಮಲ್ಪೆ ಸರ್ವಋತು ಮೀನುಗಾರಿಕಾ ಬಂದರು – ಸಿಸಿಟಿವಿ, ಸರಿಯಾದ ಸೆಕ್ಯೂರಿಟಿ ಇಲ್ಲ

  • ಸೋಷಿಯಲ್ ಮೀಡಿಯಾ ಮಾನಿಟರ್‌ಗೆ ಪ್ರತಿ ಠಾಣೆಯಲ್ಲಿ ವಿಶೇಷ ವಿಭಾಗ ಸ್ಥಾಪನೆ: ಪರಮೇಶ್ವರ್

    ಸೋಷಿಯಲ್ ಮೀಡಿಯಾ ಮಾನಿಟರ್‌ಗೆ ಪ್ರತಿ ಠಾಣೆಯಲ್ಲಿ ವಿಶೇಷ ವಿಭಾಗ ಸ್ಥಾಪನೆ: ಪರಮೇಶ್ವರ್

    ಬೆಂಗಳೂರು: ಸಾಮಾಜಿಕ ಜಾಲತಾಣಗಳ ದುರುಪಯೋಗ ನಿಲ್ಲಿಸಲು ದೇಶದಲ್ಲಿ ಮೊದಲ ಬಾರಿಗೆ ವಿಶೇಷ ಪೊಲೀಸ್ ವಿಭಾಗವನ್ನೇ ಕರ್ನಾಟಕ ಸರ್ಕಾರ ಮಾಡಿದೆ ಎಂದು ಗೃಹ ಸಚಿವ ಪರಮೇಶ್ವರ್ (Parameshwar) ತಿಳಿಸಿದರು.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ನವೀನ್ ಪ್ರಶ್ನಿಸಿ, ಸಾಮಾಜಿಕ ಜಾಲತಾಣ ನಿಗಾವಹಿಸಲು ಪೊಲೀಸ್ ಇಲಾಖೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಪೊಲೀಸ್ ಇಲಾಖೆಗೆ ಸರ್ಕಾರ ಮತ್ತಷ್ಟು ಶಕ್ತಿಯನ್ನ ಕೊಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿ ಹೆಚ್ಚು ಗಲಭೆಗಳು ಆಗುತ್ತಿವೆ. ಸಾಮಾಜಿಕ ಜಾಲತಾಣ ನಿಯಂತ್ರಣಕ್ಕಾಗಿ ಗೃಹ ಇಲಾಖೆ ವಿಶೇಷ ಬಜೆಟ್ ನೀಡಬೇಕು. ಸಾಮಾಜಿಕ ಜಾಲತಾಣ ಮಾನಿಟರ್ ಮಾಡಲು ಕ್ರಮವಹಿಸಬೇಕು. ಇದಕ್ಕಾಗಿ ವಿಶೇಷ ಕಾನೂನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ನಾಳೆ ರೀ ರಿಲೀಸ್‌ ಆಗ್ತಿದೆ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಅಪ್ಪು’ ಸಿನಿಮಾ

    ಪ್ರಶ್ನೆಗೆ ಉತ್ತರಿಸಿದ ಸಚಿವ ಪರಮೇಶ್ವರ್ ಅವರು, ಸೋಷಿಯಲ್ ಮೀಡಿಯಾ ಬಹಳ ಉಪಯೋಗ ಆಗುತ್ತಿದೆ. ಅಷ್ಟೇ ದುರುಪಯೋಗವೂ ಸಹ ಆಗುತ್ತಿದೆ. ಟೆಕ್ನಾಲಜಿ ಇಲ್ಲದೆ ಬದುಕಲು ಸಾಧ್ಯವಿಲ್ಲ ಎನ್ನುವ ಸ್ಥಿತಿಗೆ ನಾವು ತಲುಪಿದ್ದೇವೆ. ಫೇಸ್‌ಬುಕ್, ಎಕ್ಸ್, ಯೂಟ್ಯೂಬ್‌ಗಳನ್ನು ದುರುಪಯೋಗ ಮಾಡಿಕೊಂಡು ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಆಗುತ್ತಿದೆ. ಇದನ್ನ ನಿಯಂತ್ರಣ ಮಾಡಲು ದೇಶದಲ್ಲೇ ಮೊದಲ ಬಾರಿಗೆ ಒಂದು ವಿಭಾಗ ಪ್ರಾರಂಭ ಮಾಡಿದ್ದೇವೆ. ಎಡಿಜಿಪಿ ಸೈಬರ್ ಕ್ರೈಮ್‌ ವಿಭಾಗ ನೇಮಕ ಮಾಡಲಾಗಿದೆ. ಪ್ರತಿ ಠಾಣೆಯಲ್ಲಿ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಮಾಡಿದ್ದೇವೆ. 247 ಪೊಲೀಸರು ಮಾನಿಟರ್ ಮಾಡುತ್ತಾರೆ. ಇಂತಹ ಕೇಸ್ ಕಂಡುಬಂದ ಕೂಡಲೇ ಸುಮೋಟೋ ಕೇಸ್ ಹಾಕುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರು ಅರಮನೆ ಕಾಯ್ದೆ ಇಂದಿನಿಂದ ಜಾರಿ

    ಫ್ಯಾಕ್ಟ್ ಚೆಕ್ ಮಾಡುವ ಆ್ಯಪ್ ಮಾಡಿದ್ದೇವೆ. ನಿತ್ಯ ಮಾನಿಟರ್ ಮಾಡುವ ಕೆಲಸ ಮಾಡುತ್ತಿದ್ದೇವೆ. ಸುಳ್ಳು ಸುದ್ದಿ ಬಂದರೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಪೊಲೀಸ್ ಠಾಣೆಯಲ್ಲಿ ಡೆಸ್ಕ್ ಮಾಡಿಕೊಂಡಿದ್ದೇವೆ. ಠಾಣೆಯಲ್ಲಿ ಮೀಡಿಯಾಗಾಗಿ ಒಂದು ಡೆಸ್ಕ್, ಲಾ ಆ್ಯಂಡ್ ಆರ್ಡರ್‌ಗೆ ಒಂದು ಡೆಸ್ಕ್, ವೈಯಕ್ತಿಕ ಡೆಸ್ಕ್, ಸಂಘಟನೆ ಡೆಸ್ಕ್ ಅನ್ನು ಪೊಲೀಸ್ ಠಾಣೆಯಲ್ಲಿ ಮಾಡಿದ್ದೇವೆ ಎಂದು ನುಡಿದರು. ಇದನ್ನೂ ಓದಿ: ಮಲೆ ಮಹದೇಶ್ವರನಿಗೆ ಭರಪೂರ ಆದಾಯ; 20 ದಿನದಲ್ಲಿ 2.85 ಕೋಟಿ ಕಾಣಿಕೆ

    ಡ್ರಗ್ಸ್ ಹಾವಳಿ, ಆರ್ಥಿಕ ಅಪರಾಧ ಜಾಸ್ತಿ ಆಗುತ್ತಿದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಸೈಬರ್ ಕ್ರೈಮ್‌ ಜಾಸ್ತಿ ಆಗಿದ್ದು, ಈ ವರ್ಷ 22,000 ಕೇಸ್ ದಾಖಲಾಗಿದೆ. ಕೊಲೆ, ರೇಪ್, ಫೋಕ್ಸೋ ಕೇಸ್ ಕಡಿಮೆ ಆಗಿದೆ. ಆದರೆ ಸೈಬರ್ ಕ್ರೈಮ್‌ ಕೇಸ್‌ಗಳು ಜಾಸ್ತಿ ಆಗುತ್ತಿದೆ. ಹೀಗಾಗಿ ಸರ್ಕಾರ ಇದೆಲ್ಲವನ್ನೂ ಗಂಭೀರವಾಗಿ ಪರಿಗಣಿಸಿ ಕ್ರಮಕ್ಕೆ ಮುಂದಾಗಿದೆ ಎಂದರು.

  • ಗದಗ | ಮಾದಕ ವ್ಯಸನ ಮುಕ್ತ, ಫಿಟ್ನೆಸ್‌ಗಾಗಿ ಜನಜಾಗೃತಿ ಮ್ಯಾರಥಾನ್

    ಗದಗ | ಮಾದಕ ವ್ಯಸನ ಮುಕ್ತ, ಫಿಟ್ನೆಸ್‌ಗಾಗಿ ಜನಜಾಗೃತಿ ಮ್ಯಾರಥಾನ್

    ಗದಗ: ಕರ್ನಾಟಕ ರಾಜ್ಯ ಹಾಗೂ ಗದಗ (Gadag) ಜಿಲ್ಲೆಯನ್ನು ಮಾದಕ ವ್ಯಸನ ಮುಕ್ತವಾಗಿಸಲು ಪೊಲೀಸ್ ಇಲಾಖೆ ಹಾಗೂ ಎಸ್‌ಬಿಐ (SBI) ನೇತೃತ್ವದಲ್ಲಿ ಜನಜಾಗೃತಿ ಮ್ಯಾರಥಾನ್ ನಡೆಯಿತು.

    ನಗರದ ಕೆ.ಹೆಚ್ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ ಹಸಿರು ನಿಶಾನೆ ತೋರಿಸುವ ಮೂಲಕ ಮ್ಯಾರಥಾನ್‌ಗೆ ಚಾಲನೆ ನೀಡಿದರು. ಸೀನಿಯರ್ ಹಾಗೂ ಜೂನಿಯರ್ 2 ತಂಡ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ 5 ಕಿ.ಮೀ ಹಾಗೂ 10 ಕಿ.ಮೀ ಮ್ಯಾರಥಾನ್ ನಡೆಸಿದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ| ಖಾಸಗಿ ಬಸ್ ಡಿಕ್ಕಿಯಾಗಿ ಹೊತ್ತಿ ಉರಿದ ಕಾರು – ಇಬ್ಬರು ಸಜೀವ ದಹನ

    ನಗರದ ಕೆ.ಸಿ ರಾಣಿ ರೋಡ್, ಮಹಾತ್ಮ ಗಾಂಧಿ ಸರ್ಕಲ್, ಹುಯಿಲಗೋಳ ನಾರಾಯಣರಾವ್ ಸರ್ಕಲ್, ಬನ್ನಿ ಕಟ್ಟಿ, ಕಾರ್ಯಪ್ಪ ಸರ್ಕಲ್, ಎಪಿಎಂಸಿ ಮಾರ್ಗವಾಗಿ ಸ್ಟೇಡಿಯಂ ತಲುಪಿದರು. ಕರ್ನಾಟಕ ಮಾದಕ ವ್ಯಸನ ಮುಕ್ತವಾಗಬೇಕು. ಎಲ್ಲರೂ ಫಿಟ್ ಆಗಿರಬೇಕು ಎಂಬ ಜನಜಾಗೃತಿ ಮೂಡಿಸುವುದು ಮ್ಯಾರಥಾನ್ ಉದ್ದೇಶವಾಗಿತ್ತು. ಇದನ್ನೂ ಓದಿ: ಕನ್ನಡಕ್ಕೆ ಬಾಲಿವುಡ್‌ ಡೈರೆಕ್ಟರ್- ಸುಜಯ್ ಶಾಸ್ತ್ರಿ ನಿರ್ದೇಶನದ ‘8’ ಸಿನಿಮಾದಲ್ಲಿ ಅನುರಾಗ್ ಕಶ್ಯಪ್

    ಮ್ಯಾರಥಾನ್ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಕ್ರೀಡಾ ಇಲಾಖೆ, ಎನ್‌ಎಸ್‌ಎಸ್, ಎನ್.ಸಿ.ಸಿ, ಆರ್.ಡಿ.ಪಿ.ಆರ್. ಯೂನಿವರ್ಸಿಟಿ, ಮೆಡಿಕಲ್, ಇಂಜನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳು, ಲಯನ್ಸ್ ಕ್ಲಬ್, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಭಾಗಿಯಾಗಿದ್ದರು. ಇದನ್ನೂ ಓದಿ: Ramanagara| ಊರಹಬ್ಬದ ದಿನವೇ ಗ್ರಾಮಕ್ಕೆ 4 ಕಾಡಾನೆಗಳ ಎಂಟ್ರಿ – ದಿಕ್ಕಾಪಾಲಾಗಿ ಓಡಿದ ಜನ

  • ಕರ್ನಾಟಕ-ಗೋವಾ ಗಡಿಯಲ್ಲಿ ಅಬಕಾರಿ ಇಲಾಖೆ, ಪೊಲೀಸರ ಮುನಿಸು – 10 ದಿನದಿಂದ ಸಿಬ್ಬಂದಿ ನಿಯೋಜಿಸದ ಪೊಲೀಸ್ ಇಲಾಖೆ

    ಕರ್ನಾಟಕ-ಗೋವಾ ಗಡಿಯಲ್ಲಿ ಅಬಕಾರಿ ಇಲಾಖೆ, ಪೊಲೀಸರ ಮುನಿಸು – 10 ದಿನದಿಂದ ಸಿಬ್ಬಂದಿ ನಿಯೋಜಿಸದ ಪೊಲೀಸ್ ಇಲಾಖೆ

    – ಪ್ರತ್ಯೇಕ ಚೆಕ್‌ಪೋಸ್ಟ್ ತೆರೆಯಲು ಪೊಲೀಸರು ಸಿದ್ಧತೆ

    ಕಾರವಾರ: ರಾಜ್ಯದಲ್ಲಿ ಅಬಕಾರಿ ಕಿಕ್‌ಬ್ಯಾಕ್ ಗಲಾಟೆ ತಣ್ಣಗಾಗುವುದರೊಳಗೆ ಕರ್ನಾಟಕ-ಗೋವಾ ಗಡಿಯಲ್ಲಿ ಜಂಟಿ ಕಾರ್ಯಾಚರಣೆ, ತಪಾಸಣೆ ಮಾಡುತ್ತಿದ್ದ ಪೊಲೀಸ್ ಇಲಾಖೆ ಪ್ರತ್ಯೇಕ ಚೆಕ್‌ಪೋಸ್ಟ್ ತೆರೆಯಲು ಮುಂದಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಗೋವಾ ಗಡಿಯಲ್ಲಿರುವ ಅಬಕಾರಿ ಇಲಾಖೆಯ ನೇತೃತ್ವದ, ಜಿಲ್ಲೆಯ ಎರಡು ಸಂಯುಕ್ತ ತನಿಖಾ ಠಾಣೆಗಳಿಂದ ಪೊಲೀಸ್ ಇಲಾಖೆ ಬೇರ್ಪಟ್ಟಿದೆ. ಒಂದೆಡೆ ರಾಜ್ಯದಲ್ಲಿ ಅಬಕಾರಿ ಕಿಕ್‌ಬ್ಯಾಕ್ ಗಲಾಟೆ ಎದ್ದಿದೆ. ಕಾಕತಾಳೀಯ ಎಂಬಂತೆ ಉತ್ತರ ಕನ್ನಡ ಜಿಲ್ಲೆಯಲ್ಲೂ ಅಬಕಾರಿ, ಪೊಲೀಸ್ ನಡುವೆ ವೈಮನಸ್ಸು ಮೂಡಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರವಾರ ತಾಲೂಕಿನ ಮಾಜಾಳಿ, ರಾಷ್ಟ್ರೀಯ ಹೆದ್ದಾರಿ-4ಎ, ಅನಮೋಡದಲ್ಲಿ ಅಬಕಾರಿ ಸಂಯುಕ್ತ ತನಿಖಾ ಠಾಣೆಗೆ ಪೊಲೀಸ್ ಸಿಬ್ಬಂದಿ ನಿಯೋಜನೆಯನ್ನು ಜಿಲ್ಲಾ ಪೊಲೀಸ್ ಇಲಾಖೆ ಸ್ಥಗಿತ ಮಾಡಿದೆ. ಗೋವಾ ಗಡಿಯ ಮಾಜಾಳಿ ಹಾಗೂ ರಾಮನಗರದ ಅನಮೋಡದಲ್ಲಿ ಅಕ್ರಮ ಗೋವಾ ಮದ್ಯ ಸಾಗಾಟ ಹೆಚ್ಚಾಗಿದೆ. ಅಬಕಾರಿ ಸಿಬ್ಬಂದಿ ಮಾಡುವ ತಪ್ಪುಗಳು ಪೊಲೀಸ್ ಇಲಾಖೆ ಮೇಲೂ ಬರುತ್ತಿದೆ. ಮಾದಕ ವಸ್ತುಗಳ ಬಗ್ಗೆ ಹಾಗೂ ಅಪರಾಧಿಗಳ ವಾಹನ ಟ್ರಾö್ಯಕಿಂಗ್‌ಗೂ ಅಬಕಾರಿ ಇಲಾಖೆಯನ್ನು ಆಶ್ರಯಿಸಬೇಕಿದೆ. ಈ ಕಾರಣ ಹೆಚ್ಚಿನ ತಪಾಸಣೆ ನಿಗಾ ಇಡಲು, ಪೊಲೀಸ್ ಇಲಾಖೆ ಈಗಿರುವ ಚೆಕ್‌ಪೋಸ್ಟ್ನಿಂದ ಪ್ರತ್ತೇಕವಾಗಿ ಇನ್ನೊಂದು ತಿಂಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ಪ್ರತ್ಯೇಕ ತನಿಖೆ ಮತ್ತು ತಪಾಸಣೆ ಕೈಗೊಳ್ಳಲಿದೆ.

    ಕೆಲ ದಿನಗಳ ಹಿಂದೆ ಮಾಜಾಳಿಯ ತನಿಖಾ ಠಾಣೆಯಲ್ಲಿ ಅಕ್ರಮ ಮದ್ಯ ತಪಾಸಣೆಯ ನೆಪದಲ್ಲಿ ಅಬಕಾರಿ ಇನ್‌ಸ್ಪೆಕ್ಟರ್ ಚಾಲಕನೊಬ್ಬನ ಮೇಲೆ ಹಲ್ಲೆ ನಡೆಸಿದ ವೀಡಿಯೋ ವೈರಲ್ ಆಗಿತ್ತು. ಅಬಕಾರಿ ಇನ್‌ಸ್ಪೆಕ್ಟರ್ ಸದಾಶಿವ ಕೊರ್ತಿ ಹಾಗೂ ಸಿಬ್ಬಂದಿ ಹೇಮಚಂದ್ರ ವಿರುದ್ಧ ಚಿತ್ತಾಕುಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಾಜ್ಯ ಲಾರಿ ಮಾಲೀಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಅಬಕಾರಿ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು. ಈ ಘಟನೆಯ ನಂತರ ಮಾಜಾಳಿಯಲ್ಲಿ ಅಬಕಾರಿ, ಪೊಲೀಸರ ನಡುವೆ ವೈಮನಸ್ಸು ಮೂಡಿತ್ತು.

    ದೇಶದ ಇತರ ವಿವಿಧ ರಾಜ್ಯಗಳಿಗೆ ಹೋಲಿಸಿದರೆ ಗೋವಾದಲ್ಲಿ ಮದ್ಯದ ಮೇಲಿನ ಸುಂಕ ಅತಿ ಕಡಿಮೆ ಇದೆ. ಇದರಿಂದ ಗೋವಾದಿಂದ ರಸ್ತೆ, ರೈಲು ಹಾಗೂ ಜಲ ಮಾರ್ಗವಾಗಿ ದೊಡ್ಡ ಪ್ರಮಾಣದಲ್ಲಿ ಮದ್ಯ ಕರ್ನಾಟಕ ಸೇರಿ ಬೇರೆ ರಾಜ್ಯಗಳಿಗೆ ಸಾಗಣೆಯಾಗುತ್ತವೆ. ಪರಿಣಾಮ ಕರ್ನಾಟಕದ ಮದ್ಯದ ಆದಾಯದ ಮೇಲೆ ಭಾರಿ ಹೊಡೆತ ಬೀಳುತ್ತಿರುವ ಆರೋಪವಿದೆ. ಇದರ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ ಅವರು ಎರಡು ಬಾರಿ ಸಭೆ ನಡೆಸಿ ಅಕ್ರಮ ತಡೆಗೆ ಕಟ್ಟುನಿಟ್ಟಿನ ಸೂಚನೆಯನ್ನು ಅಬಕಾರಿ ಅಧಿಕಾರಿಗಳಿಗೆ ನೀಡಿದ್ದರು. ಪ್ರಮುಖವಾಗಿ ರಾಷ್ಟ್ರೀಯ ಹೆದ್ದಾರಿ-66 ಹಾಗೂ 4-ಎದಲ್ಲಿರುವ ಮಾಜಾಳಿ ಹಾಗೂ ಅನಮೋಡ ತನಿಖಾ ಠಾಣೆಗಳಲ್ಲಿ ಅಕ್ರಮ ಗೋವಾ ಮದ್ಯ ತುಂಬಿದ ಲಾರಿ, ಬಸ್‌ಗಳು, ದುಬಾರಿ ಕಾರುಗಳು ಸಿಕ್ಕಿ ಹಾಕಿಕೊಳ್ಳುತ್ತವೆ. ಚೆಕ್‌ಪೋಸ್ಟ್‌ನಲ್ಲಿ ಅಕ್ರಮ ಮದ್ಯ ತಡೆಯುವ ನೆಪದಲ್ಲಿ ಕ್ಯಾಮೆರಾ ಕಣ್ಣು ತಪ್ಪಿಸಿ, ಭಾರಿ ಪ್ರಮಾಣದ ಗೋಲ್‌ಮಾಲ್ ನಡೆಯುತ್ತೆ ಎಂಬ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದೆ. ಈ ತನಿಖಾ ಠಾಣೆಗಳು ಚಿನ್ನದ ಮೊಟ್ಟೆ ಇಡುವ ಕೋಳಿ ಎಂಬ ಸುದ್ದಿ ಪೊಲೀಸ್ ಹಾಗೂ ಅಬಕಾರಿ ಇಲಾಖೆ ವಲಯದಲ್ಲಿದೆ. ಇಲ್ಲಿಗೆ ಕರ್ತವ್ಯಕ್ಕೆ ನೇಮಕ ಮಾಡಿಸಿಕೊಳ್ಳಲು ಎರಡೂ ಇಲಾಖೆಯಲ್ಲಿ ಭಾರಿ ಪೈಪೋಟಿ ನಡೆಯುತ್ತಿತ್ತು. ಆದರೆ, ಇದೀಗ ಈ ಎಲ್ಲಾ ಕಾರಣಗಳು ಅಬಕಾರಿ ಇಲಾಖೆಯಿಂದ ಪೊಲೀಸ್ ಇಲಾಖೆ ಬೇರ್ಪಡಲು ಪ್ರಮುಖ ಕಾರಣವಾಗಿದೆ.

    ಕಳೆದ 10 ದಿನಗಳಿಂದ ಮಾಜಾಳಿ ಹಾಗೂ ಅನಮೋಡ ತನಿಖಾ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ಪೊಲೀಸ್ ಇಲಾಖೆ ನಿಯೋಜಿಸಿಲ್ಲ. ಕಳೆದ ಐದು ವರ್ಷದ ಹಿಂದೆ ಚೆಕ್‌ಪೋಸ್ಟ್ನಲ್ಲಿ ಲಕ್ಷಾಂತರ ಹಣ ವ್ಯಯಿಸಿ, ನವೀಕರಿಸಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿತ್ತು. ಅಬಕಾರಿ, ಅರಣ್ಯ, ಪೊಲೀಸ್, ಗಣಿ ಇಲಾಖೆ ಒಟ್ಟಾಗಿ ಹಿಂದಿನಿಂದ ಇಲ್ಲಿ ಕೆಲಸ ಮಾಡುತ್ತಾ ಬಂದಿವೆ. ಹೀಗಿರುವಾಗ ಇತ್ತೀಚೆಗೆ ನಡೆದ ಬೆಳವಣಿಗೆಯಿಂದ ಪೊಲೀಸ್ ಇಲಾಖೆ ತನ್ನದೇ ಪ್ರತ್ಯೇಕ ತನಿಖಾ ಠಾಣೆ ನಿರ್ಮಿಸಲು ಮುಂದಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

  • ದಸರಾ ಜಂಬೂಸವಾರಿ ಮೆರವಣಿಗೆಗೆ ಪೊಲೀಸ್ ಇಲಾಖೆ ಬಿಗಿ ಭದ್ರತೆ: ಕಮಿಷನರ್ ಸೀಮಾ ಲಾಟ್ಕರ್

    ದಸರಾ ಜಂಬೂಸವಾರಿ ಮೆರವಣಿಗೆಗೆ ಪೊಲೀಸ್ ಇಲಾಖೆ ಬಿಗಿ ಭದ್ರತೆ: ಕಮಿಷನರ್ ಸೀಮಾ ಲಾಟ್ಕರ್

    – 4,000ಕ್ಕೂ ಹೆಚ್ಚು ಪೊಲೀಸರಿಂದ ಕರ್ತವ್ಯ ನಿರ್ವಹಣೆ

    ಮೈಸೂರು: ವಿಜಯದಶಮಿ ಜಂಬೂಸವಾರಿ (Jamboo Savari) ಮೆರವಣಿಗೆಗೆ ಪೊಲೀಸ್ ಇಲಾಖೆಯಿಂದ (Police Department) ಬಿಗಿ ಭದ್ರತೆ ಒದಗಿಸಲಾಗುವುದು ಎಂದು ಮೈಸೂರು ನಗರ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ (Seema Latkar) ಹೇಳಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ಜಂಬೂಸವಾರಿ ಮೆರವಣಿಗೆಯ ಪುಷ್ಪಾರ್ಚನೆ ರಿಹರ್ಸಲ್ ನಡೆದಿದೆ. ಅಂತಿಮ ಹಂತದ ರಿಹರ್ಸಲ್‌ನಲ್ಲಿ ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ, ಅಶ್ವರೋಹಿ ದಳ, ಪೊಲೀಸ್ ಇಲಾಖೆಯ ಎಂಟು ತುಕಡಿಗಳು ಭಾಗಿಯಾಗಿವೆ. ಈ ಬಾರಿಯ ದಸರಾ ಮಹೋತ್ಸವಕ್ಕೆ ಎರಡು ಹಂತದ ಭದ್ರತೆ ಕೈಗೊಳ್ಳಲಾಗಿದೆ. ಜಂಬೂಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಎಫ್‌16 ಯುದ್ಧ ವಿಮಾನ ಹಾರಿಸಿದ್ದ ರತನ್‌ ಟಾಟಾ

    ಮೈಸೂರು ಜಿಲ್ಲೆ ಮಾತ್ರದವಲ್ಲದೇ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿರುವ ನಾಲ್ಕು ಸಾವಿರಕ್ಕೂ ಹೆಚ್ಚು ಪೊಲೀಸರು ಭದ್ರತಾ ಕರ್ತವ್ಯ ನಿರ್ವಹಿಸಲಿದ್ದಾರೆ. ಮಫ್ತಿಯಲ್ಲಿರುವ ಪೊಲೀಸರು ಎಲ್ಲೆಡೆ ನಿಗಾ ವಹಿಸಲಿದ್ದಾರೆ. ಜಂಬೂಸವಾರಿ ಮೆರವಣಿಗೆ ಸಾಗುವ ಮಾರ್ಗ ಸೇರಿದಂತೆ ಆಯಕಟ್ಟಿನ ಜನನಿಬಿಡ ಸ್ಥಳದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ದೇಶ ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ರಕ್ಷಣೆ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಇದನ್ನೂ ಓದಿ: ಮಾಂಸಾಹಾರ ಸೇವನೆಯಿಂದ ಫುಡ್ ಪಾಯಿಸನ್ – 20 ಮಂದಿ ಅಸ್ವಸ್ಥ, 10 ಮಂದಿ ಆಸ್ಪತ್ರೆಗೆ ದಾಖಲು

  • ಹೊಸ ಕಾನೂನಿನಡಿ ಮೊದಲ ದಿನವೇ ರಾಜ್ಯಾದ್ಯಂತ 63 FIR ದಾಖಲು

    ಹೊಸ ಕಾನೂನಿನಡಿ ಮೊದಲ ದಿನವೇ ರಾಜ್ಯಾದ್ಯಂತ 63 FIR ದಾಖಲು

    ಬೆಂಗಳೂರು: ಜುಲೈ 1 ರಿಂದ ದೇಶದಲ್ಲಿ ಹೊಸ ಕ್ರಿಮಿನಲ್‌ ಕಾನೂನುಗಳು (New Criminal Laws) ಜಾರಿಯಾಗಿದೆ. ಭಾರತೀಯ ದಂಡ ಸಂಹಿತೆಯು (IPC) ಭಾರತೀಯ ನ್ಯಾಯ ಸಂಹಿತೆಯಾಗಿ (BSN), ಅಪರಾಧ ಪ್ರಕ್ರಿಯಾ ಸಂಹಿತೆಯು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಾಗಿ ಮತ್ತು ಸಾಕ್ಷ್ಯ ಕಾಯ್ದೆಯು ಭಾರತೀಯ ಸಾಕ್ಷ್ಯ ಕಾಯ್ದೆಯಾಗಿ ಜಾರಿಗೆ ಬಂದಿದೆ. ಹೊಸ ಕಾನೂನು ಜಾರಿಯಾದ ಮೊದಲ ದಿನವೇ ರಾಜ್ಯಾದ್ಯಂತ 63 ಎಫ್‌ಐಆರ್ ದಾಖಲಾಗಿವೆ ಎಂದು ಪೊಲೀಸ್‌ ಇಲಾಖೆ (Police department) ಮಾಹಿತಿ ನೀಡಿದೆ.

    ಭಾರತೀಯ ನ್ಯಾಯ ಸಂಹಿತೆ ಕಾನೂನು ಅಡಿಯಲ್ಲಿ ಸೋಮವಾರ (ಜು.1) ಒಂದೇ ದಿನ ರಾತ್ರಿ 8 ಗಂಟೆ ವರೆಗೆ 63 ಎಫ್‌ಐಆರ್ (FIR) ದಾಖಲಾಗಿದೆ ಎಂದು ಮಾಹಿತಿ ನೀಡಿದೆ.

    ಬ್ರಿಟಿಷ್ ಕಾಲದ ಕಾನೂನಿಗೆ ಗುಡ್‌ಬೈ:
    ಹೊಸ ಕ್ರಿಮಿನಲ್ ಕಾನೂನುಗಳು ದೇಶದ ಅಪರಾಧ ನ್ಯಾಯ ವ್ಯವಸ್ಥೆಯನ್ನು ವಸಾಹತು ಕಾಲದ ಜಡತ್ವದಿಂದ ಹೊರತರುತ್ತದೆ ಎಂಬುದು ಕೇಂದ್ರ ಸರ್ಕಾರದ ಪ್ರತಿಪಾದನೆ. ಹೊಸ ಕಾನೂನು ಪ್ರಯೋಗಕ್ಕೆ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಇನ್ಪೆಕ್ಟರ್‌ಗಳಿಗೆ ತರಬೇತಿ ನೀಡಲಾಗಿದೆ. ಕಾನೂನು ತಜ್ಞರು, ಹಿರಿಯ ಅಧಿಕಾರಿಗಳು, ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಹಾಗೂ ಹಿರಿಯ ವಕೀಲರಿಂದ ತರಬೇತಿ ಕೊಡಿಸಲಾಗಿದೆ. ಸಿವಿಲ್ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಆದ್ಯತೆ ಮೇರೆಗೆ ತರಬೇತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    163 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ದಂಡ ಸಂಹಿತೆ 126 ವರ್ಷಗಳ ಹಿಂದಿನ ಅಪರಾಧ ಪ್ರಕ್ರಿಯಾ ಸಂಹಿತೆ ಮತ್ತು 151 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ಸಾಕ್ಷ್ಯ ಕಾಯ್ದೆಯ ಬದಲಿಗೆ ಈ ಮೂರು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಈ ಕಾನೂನುಗಳಲ್ಲಿ 20 ಹೊಸ ಅಪರಾಧಗಳ ಸೇರ್ಪಡೆಯಾಗಿದೆ. 33 ಅಪರಾಧಗಳಿಗೆ ಶಿಕ್ಷೆ ಪ್ರಮಾಣ ಹೆಚ್ಚಿಸಲಾಗಿದೆ. 83 ಅಪರಾಧಗಳಿಗೆ ಅಧಿಕ ದಂಡ ವಿಧಿಸುವ ಜೊತೆಗೆ 23 ಅಪರಾಧಗಳಿಗೆ ಕಠಿಣ ಶಿಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ.

    ಪ್ರಮುಖ ಸೆಕ್ಷನ್‌ಗಳು ಯಾವುವು?
    420 – ಹಣಕಾಸು ಅಥವಾ ಬೇರೆ ಯಾವುದೇ ಆಮಿಷ ಒಡ್ಡಿ ವಂಚಿಸಿದ ಆರೋಪದ ಅಡಿ ಐಪಿಸಿ ಸೆಕ್ಷನ್ 420ರ ಅಡಿ ಕೇಸ್ ದಾಖಲಾಗುತ್ತಿತ್ತು. ಇದೀಗ ಬಿಎನ್‌ಎಸ್‌ನಲ್ಲಿ ಸೆಕ್ಷನ್ 318 ಆಗಿದೆ.
    302 – ಭಾರತೀಯ ದಂಡ ಸಂಹಿತೆಯಲ್ಲಿ ಕೊಲೆ ಪ್ರಕರಣಕ್ಕೆ ಈ ಸೆಕ್ಷನ್ ಬಳಸಲಾಗುತ್ತಿತ್ತು. ಇದೀಗ ಭಾರತೀಯ ನ್ಯಾಯ ಸಂಹಿತೆಯಲ್ಲಿ 103 ಆಗಿದೆ.
    307 – ಭಾರತೀಯ ದಂಡ ಸಂಹಿತೆಯಲ್ಲಿ ಕೊಲೆ ಯತ್ನಕ್ಕೆ ಬಳಸಲಾಗುತ್ತಿತ್ತು. ಇದೀಗ ಸೆಕ್ಷನ್ 103 ಆಗಿದೆ.
    376 – ಭಾರತೀಯ ದಂಡ ಸಂಹಿತೆಯಲ್ಲಿ ಅತ್ಯಾಚಾರ ಪ್ರಕಣಗಳಿಗೆ ಈ ಸೆಕ್ಷನ್ ಬಲಸಲಾಗುತ್ತಿತ್ತು. ಇದೀಗ 64 ಆಗಿದೆ.
    304(ಬಿ) – ಐಪಿಸಿ ನಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಬಳಸುತ್ತಿದ್ದ ಸೆಕ್ಷನ್ ಈಗ ಬಿಎನ್‌ಎಸ್‌ನಲ್ಲಿ 80 ಆಗಿದೆ.
    304(ಎ) – ಐಪಿಸಿ ನಲ್ಲಿ ನಿರ್ಲಕ್ಷ್ಯದಿಂದ ಮರಣ (ರಸ್ತೆ ಅಪಘಾತ ಅಥವಾ ಇತರೇ ಸಂದರ್ಭ) ವೇಳೆ ಬಳಸಲಾಗುತ್ತಿತ್ತು. ಇದೀಗ ಬಿಎನ್‌ಎಸ್‌ನಲ್ಲಿ 106 ಆಗಿದೆ.
    359 – ವ್ಯಕ್ತಿ ಅಪಹರಣ ಪ್ರಕರಣದಲ್ಲಿ ಐಪಿಸಿ ನಲ್ಲಿ ಈ ಸೆಕ್ಷನ್ ಬಳಕೆಯಾಗುತ್ತಿತ್ತು. ಈಗ ಸೆಕ್ಷನ್ 137 ಆಗಿದೆ.
    309 – ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದರೆ ಆತನ ವಿರುದ್ಧ ಐಪಿಸಿ ಅಡಿ ಈ ಸೆಕ್ಷನ್ ವಿಧಿಸಲಾಗುತ್ತಿತ್ತು. ಈಗ ಬಿಎನ್‌ಎಸ್ ಅಡಿ 226 ಆಗಿದೆ.