Tag: police constables

  • ಚಿಕ್ಕಬಳ್ಳಾಪುರ ಎಸ್ಪಿ ಕಚೇರಿ ಎದುರು ಪೊಲೀಸ್ ಪೇದೆಗಳಿಂದಲೇ ಪ್ರತಿಭಟನೆ – ಕಾರಣ ಏನು?

    ಚಿಕ್ಕಬಳ್ಳಾಪುರ ಎಸ್ಪಿ ಕಚೇರಿ ಎದುರು ಪೊಲೀಸ್ ಪೇದೆಗಳಿಂದಲೇ ಪ್ರತಿಭಟನೆ – ಕಾರಣ ಏನು?

    – ಹೆಂಡತಿ‌ ಮಕ್ಕಳೊಂದಿಗೆ ಅಂಬೇಡ್ಕರ್‌ ಫೋಟೋ ಹಿಡಿದು ಪ್ರೊಟೆಸ್ಟ್‌

    ಚಿಕ್ಕಬಳ್ಳಾಪುರ: ಪೊಲೀಸ್ ಇಲಾಖೆಯ (Police Department) ಇಬ್ಬರು ಪೇದೆಗಳು ತಮ್ಮದೇ ಇಲಾಖೆಯ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ (Chikkaballapur) ನಡೆದಿದೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ (Chikkaballapur Police Station) ಪೇದೆ ಆಶೋಕ್ ಹಾಗೂ ಚೇಳೂರು ಪೊಲೀಸ್ ಠಾಣಾ ಪೇದೆ ನರಸಿಂಹಮೂರ್ತಿ ತಮ್ಮ ಹೆಂಡತಿ ಮಕ್ಕಳೊಂದಿಗೆ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಐಸ್‌ಕ್ರೀಂ ತಿನ್ನಬೇಡಿ, ಕೂಲ್ ಡ್ರಿಂಕ್ಸ್ ಕುಡಿಯಬೇಡಿ – ಲಾ ಕಾಲೇಜ್‌ ಸೂಚನಾ ಪತ್ರ ವೈರಲ್‌ ಬೆನ್ನಲ್ಲೇ ಆರೋಗ್ಯ ಇಲಾಖೆಯಿಂದ ನೋಟಿಸ್‌

    2023ರ ಆಗಸ್ಟ್ ನಲ್ಲಿ ಮನಿ ಡಬ್ಲಿಂಗ್ ಪ್ರಕರಣವೊಂದರಲ್ಲಿ ಪೇದೆಗಳಾದ ಆಶೋಕ್ ಹಾಗೂ ನರಸಿಂಹಮೂರ್ತಿ ವಿರುದ್ದ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮನಿ ಡಬ್ಲಿಂಗ್ ಪ್ರಕರಣದಲ್ಲಿ ಆರೋಪಿತರು ಶಾಮೀಲಾಗಿರುವ ಆರೋಪ ಇದ್ದುದರಿಂದ, ಇಬ್ಬರನ್ನು ಅಮಾನತುಗೊಳಿಸಿ ವಿಚಾರಣೆ ನಡೆಸಲಾಗುತ್ತಿತ್ತು. ತದನಂತರ ಅಮಾನತು ಆದೇಶ ರದ್ದು ಮಾಡಿ ಮಂಚೇನಹಳ್ಳಿ ಹಾಗೂ ಚೇಳೂರು ಠಾಣೆಗೆ ಕರ್ತವ್ಯಕ್ಕೆ ನಿಯೋಜನೆ ಸಹ ಮಾಡಲಾಗಿತ್ತು. ಇದನ್ನೂ ಓದಿ: Lok Sabha Elections 2024: ಒಂದೇ ಕುಟುಂಬದ 85 ಮಂದಿಯಿಂದ ಏಕಕಾಲದಲ್ಲಿ ಮತದಾನ!

    ಈ ನಡುವೆ ಇಲಾಖೆಯ ವಿಚಾರಣೆಗೆ ಹಾಜರಾಗದೇ ಕಾಲಹರಣ ಮಾಡಿದ್ದ ಪೇದೆಗಳು ನಿನ್ನೆ ವಿಚಾರಣೆಗೆ ತಡವಾಗಿ ಹಾಜರಾಗಿ ಮತ್ತೆ ಕಾಲಾವಾಕಾಶ ಕೋರಿದ್ದರು. ಈ ವಿಚಾರದಲ್ಲಿ ವಿಚಾರಾಣಾಧೀನ ಅಧಿಕಾರಿ ಸಮಪರ್ಕವಾಗಿ ಸ್ಪಂಸಿಲ್ಲ ಹಾಗೂ ಎಸ್ಪಿ ಡಿ.ಎಲ್ ನಾಗೇಶ್ ಪ್ರಕರಣದಲ್ಲಿ ನಮ್ಮ ವಾದ ಕೇಳದೇ ನೇರವಾಗಿ ಅಮಾನತು ಮಾಡಿ ಮಾನಸಿಕ ಕಿರುಕುಳ ನೀಡಿದ್ದು ಕೆಳ ಜಾತಿ ಅಂತ ಜಾತಿ ತಾರತಮ್ಮ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ.

    ಇಂದು (ಮೇ 11) ಎಸ್ಪಿ ಕಚೇರಿ ಎದುರು ಹೆಂಡತಿ‌ ಮಕ್ಕಳ ಸಮೇತ ಆಗಮಿಸಿ ಅಂಬೇಡ್ಕರ್ ಪೋಟೋ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎಎಸ್ಪಿ ಖಾಸೀಂ ಸಾಬ್ ಪ್ರತಿಭಟನಾ ನಿರತ ಪೇದೆಗಳ ಮನವೊಲಿಸಿ ಅಹವಾಲು ಸ್ವೀಕಾರ ಮಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿ ನಿರ್ಮಿಸಲು ಮುಂದಾದ ಮದ್ರಾಸ್ ಐಐಟಿ – ಆನಂದ್ ಮಹೀಂದ್ರಾ ಮೆಚ್ಚುಗೆ

  • ಸುಳೇಭಾವಿ ಗ್ರಾಮದಲ್ಲಿ ಡಬಲ್ ಮರ್ಡರ್ ಪ್ರಕರಣ – ಇಬ್ಬರು ಪೊಲೀಸ್ ಪೇದೆಗಳ ಅಮಾನತು

    ಸುಳೇಭಾವಿ ಗ್ರಾಮದಲ್ಲಿ ಡಬಲ್ ಮರ್ಡರ್ ಪ್ರಕರಣ – ಇಬ್ಬರು ಪೊಲೀಸ್ ಪೇದೆಗಳ ಅಮಾನತು

    ಬೆಳಗಾವಿ: ತಾಲೂಕಿನ ಸುಳೇಭಾವಿ (Sulebhavi) ಗ್ರಾಮದಲ್ಲಿ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಮಾರಿಹಾಳ ಠಾಣೆಯ ಇಬ್ಬರು ಪೊಲೀಸರನ್ನು ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಡಾ. ಎಂ.ಬಿ. ಬೋರಲಿಂಗಯ್ಯ ಆದೇಶ ಹೊರಡಿಸಿದ್ದಾರೆ.

    ಮಾರಿಹಾಳ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಬಿ.ಎನ್. ಬಳಗಣ್ಣವರ, ಆರ್.ಎಸ್. ತಳೇವಾಡ ಎಂಬ ಪೇದೆಗಳನ್ನು ಅಮಾನತು ಮಾಡಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಸುಳೇಭಾವಿ ಗ್ರಾಮದಲ್ಲಿ ಗುರುವಾರ ರಾತ್ರಿ ರಣಧೀರ್ ಅಲಿಯಾಸ್ ಮಹೇಶ ರಾಮಚಂದ್ರ ಮುರಾರಿ(26) ಹಾಗೂ ಪ್ರಕಾಶ ನಿಂಗಪ್ಪ ಹುಂಕರಿ ಪಾಟೀಲ(24) ಎಂಬ ಇಬ್ಬರು ಯುವಕರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.  ಇದನ್ನೂ ಓದಿ: ಸೋಮವಾರದಿಂದ ಮತ್ತೆ ಆಪರೇಷನ್ ಬುಲ್ಡೋಜರ್ ಆರಂಭ – ದೊಡ್ಡವರ ಬೇಟೆಗೆ ಜಂಟಿ ಸರ್ವೇ ಅಸ್ತ್ರ

    ಇತ್ತ ಸುಳೇಭಾವಿ ಗ್ರಾಮದ ಬೀಟ್ ಪೊಲೀಸರಾಗಿದ್ದ ಈ ಇಬ್ಬರೂ ಕರ್ತವ್ಯ ಲೋಪ ಎಸಗಿದ್ದಾರೆ. ಗ್ರಾಮದಲ್ಲಿಯ ಆಗುಹೋಗುಗಳ ಬಗ್ಗೆ ಸರಿಯಾಗಿ ಮಾಹಿತಿ ಸಂಗ್ರಹಿಸದೇ ಅದನ್ನು ಹತೋಟಿಗೆ ತರಲು ಪ್ರಯತ್ನಿಸಿಲ್ಲ. ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಕಮಿಷನರ್ ಬೋರಲಿಂಗಯ್ಯ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ ಅಂತಾ ಭಾರತಕ್ಕೆ ಯಾವ ದೇಶವೂ ಹೇಳಿಲ್ಲ: ಹರ್ದೀಪ್ ಸಿಂಗ್ ಪುರಿ

    Live Tv
    [brid partner=56869869 player=32851 video=960834 autoplay=true]

  • ಪೊಲೀಸ್ ಪೇದೆಗಳ ಲವ್ – ಸುಂದರವಾದ ಸರಳ ಮ್ಯಾರೇಜ್ ಕಹಾನಿ

    ಪೊಲೀಸ್ ಪೇದೆಗಳ ಲವ್ – ಸುಂದರವಾದ ಸರಳ ಮ್ಯಾರೇಜ್ ಕಹಾನಿ

    ಮೈಸೂರು: ಪೋಷಕರ ವಿರೋಧದ ನಡುವೆ ಪೊಲೀಸ್ ಪೇದೆಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಪೇದೆಗಳ ರಕ್ಷಣೆಗೆ ಮೈಸೂರಿನ ಒಡನಾಡಿ ಸಂಸ್ಥೆ ನಿಂತಿದೆ.

    ಸಿದ್ದರಾಜು ಮತ್ತು ಶ್ವೇತರಾಣಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪೇದೆಗಳು. ಪೊಲೀಸ್ ಪೇದೆಗಳ ಸರಳ ಮದುವೆಗೆ ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ವೇದಿಕೆ ಕಲ್ಪಿಸುವ ಮೂಲಕ ಪ್ರೇಮಿಗಳ ರಕ್ಷಣೆಗೆ ನಿಂತಿದೆ. ಮೂಲತಃ ಹಾಸನ ಜಿಲ್ಲೆ ಹೊಳೆನರಸೀಪುರದ ತಾತನಹಳ್ಳಿ ಗಂಗೇಗೌಡ ಮತ್ತು ಲಕ್ಷ್ಮಮ್ಮ ದಂಪತಿ ಪುತ್ರಿ ಶ್ವೇತಾ ರಾಣಿ, ಮೈಸೂರು ತಾಲೂಕಿನ ಸಿದ್ಧರಾಮನ ಹುಂಡಿ ಮಹದೇವು ಸುಂದ್ರಮ್ಮ ದಂಪತಿ ಪುತ್ರ ಸಿದ್ದರಾಜು ಪರಸ್ಪರ ಪ್ರೀತಿಸುತ್ತಿದ್ದರು.

    ಬೆಂಗಳೂರಿನ ವಿವೇಕಾನಂದನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿರುವ ಪೇದೆಗಳಾದ ಸಿದ್ದರಾಜು ಮತ್ತು ಶ್ವೇತರಾಣಿ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಈ ಪ್ರೀತಿಗೆ ಶ್ವೇತಾರಾಣಿ ಕುಟುಂಬದಿಂದ ವಿರೋಧ ವ್ಯಕ್ತವಾಗಿತ್ತು. ಇವರ ಪ್ರೀತಿಗೆ ಜಾತಿ ಅಡ್ಡಿ ಬಂದ ಹಿನ್ನೆಲೆಯಲ್ಲಿ ಈ ಜೋಡಿ ರಕ್ಷಣೆಗಾಗಿ ಒಡನಾಡಿ ಸಂಸ್ಥೆಯ ಬಳಿಗೆ ಬಂದಿದ್ದರು.

    ಇಂದು ಒಡನಾಡಿ ಸಂಸ್ಥೆಯಲ್ಲಿ ಕೊಳ್ಳೇಗಾಲದ ಬೌದ್ಧಿಪೀಠದ ಬಂತೇಜಿ ರತ್ನ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ನಾವಿಬ್ಬರು ಸರಳವಾಗಿ ಇದ್ದೆವು. ಹೀಗಾಗಿ ಇಬ್ಬರು ಪರಸ್ಪರ ಇಷ್ಟಪಟ್ಟಿದ್ದು, ಸರಳವಾಗಿ ಮದುವೆಯಾಗಿದ್ದೇವೆ ಎಂದು ವರ ಸಿದ್ದರಾಜು ಸಂತಸದಿಂದ ಹೇಳಿದ್ದಾರೆ.

    ಇದೊಂದು ಮಾನವೀಯ ಮದುವೆಯಾಗಿದೆ. ಮದುವೆಗೆ ಯಾವುದೇ ಜಾತಿ ಮುಖ್ಯವಲ್ಲ, ಬದಲಿಗೆ ಪ್ರೀತಿ ಮುಖ್ಯ. ಆದರೆ ಇನ್ನೂ ಈ ಸಮಾಜದಲ್ಲಿ ಜಾತಿ ವಿಚಾರ ಇರುವುದು ಬೇಸರವಾಗುತ್ತದೆ. ನಾವು ನೂರಾರು ಜೋಡಿಯ ಮದುವೆಯನ್ನು ಮಾಡಿಸಿದ್ದೇವೆ. ನಾವು 21ನೇ ಶತಮಾನದಲ್ಲಿ, ವೈಜ್ಞಾನಿಕವಾದ ಸಮಾಜದಲ್ಲಿ ಇದ್ದೇವೆ. ಇವರ ಮದುವೆ ಮೂಲಕವಾದರೂ ಯುವ ಪೀಳಿಗೆಯಲ್ಲಿ ಪರಿವರ್ತನೆಯಾಗಲಿ ಎಂಬುದು ಆಶಯ ನಮ್ಮದು. ಯಾವುದೇ ಅಡ್ಡಿಯೂ ಬಾರದೆ ಇಬ್ಬರು ಚೆನ್ನಾಗಿರಲಿ ಎಂದು ಒಡನಾಡಿ ಸಂಸ್ಥೆ ಸಂಚಾಲಕ ಸ್ಟ್ಯಾನ್ಲಿ ನವವಧು-ವರನಿಗೆ ಶುಭಾಶಯ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಮಾರಸ್ವಾಮಿ ಲೇಔಟ್ ಠಾಣೆಯ ನಾಲ್ವರು ಪೇದೆಗಳ ಅಮಾನತು!

    ಕುಮಾರಸ್ವಾಮಿ ಲೇಔಟ್ ಠಾಣೆಯ ನಾಲ್ವರು ಪೇದೆಗಳ ಅಮಾನತು!

    ಬೆಂಗಳೂರು: ನಗರದಲ್ಲಿ ರೈಫಲ್ ಕಳ್ಳತನ ಮಾಡಿದ್ದ ನಾಲ್ವರು ಪೇದೆಗಳನ್ನು ಅಮಾನತು ಮಾಡಲಾಗಿದೆ.

    ಆನಂದ್ ಕೊಳೆಕಾರ್, ಪರಮಾನಂದ ಕೋಟಿ, ಅಶೋಕ್ ಬಿರಾದರ್ ಹಾಗೂ ಬಸವರಾಜ್ ಬೆಳಗಾವಿ ಅಮಾನತಾದ ಪೊಲೀಸ್ ಪೇದೆಗಳಾಗಿದ್ದಾರೆ. ಇವರೆಲ್ಲರೂ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯವರಾಗಿದ್ದಾರೆ. ದಕ್ಷಿಣ ವಿಭಾಗ ಡಿಸಿಪಿ ಡಾ.ಶರಣಪ್ಪ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

    ಚುನಾವಣೆ ವೇಳೆ ಸಾರ್ವಜನಿಕರು ರೈಫಲ್ ಗಳನ್ನು ಠಾಣೆಗೆ ಸರೆಂಡರ್ ಮಾಡಿದ್ದರು. ಇದರಲ್ಲಿ ಪೊಲೀಸ್ ಪೇದೆಗಳು ಎರಡು ಡಬಲ್ ಬ್ಯಾರಲ್ ರೈಫಲ್ ಕದ್ದಿದ್ದರು. ರೈಫಲ್ ಗಳು ಕುಮಾರಸ್ವಾಮಿ ಲೇಔಟ್ ಠಾಣೆ ಪಿಎಸ್‍ಐ ಸುಮಾ ಉಸ್ತುವಾರಿಯಲ್ಲಿದ್ದವು. ಪೇದೆಗಳು ಪಿಎಸ್‍ಐ ಸುಮಾ ಇಲ್ಲದಿದ್ದಾಗ ಸ್ಟೇಷನ್ ನಿಂದಲೇ ಕಳ್ಳತನ ಮಾಡಿದ್ದರು. ತಾವು ಕಳ್ಳತನ ಮಾಡಿ ಇನ್ಸ್ ಪೆಕ್ಟರ್ ಹಾಗೂ ಪಿಎಸ್ ಐ ಮೇಲೆ ಆರೋಪ ಬರಲಿ ಎಂದು ಕದ್ದು ಮುಚ್ಚಿಟ್ಟಿದ್ದರು.

    ವಿಚಾರಣೆ ಮಾಡುವ ಸಂದರ್ಭದಲ್ಲಿ ಠಾಣೆಯ ಸಿಬ್ಬಂದಿ ಪೇದೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ಈ ಬಗ್ಗೆ ತೀವ್ರ ವಿಚಾರಣೆ ನಡೆಸಿದಾಗ ಪೇದೆಗಳ ಬಣ್ಣ ಬಯಲಾಗಿದೆ. ಆನಂತರ ತಾವೇ ರೈಫಲ್ ಕದ್ದಿರುವುದಾಗಿ ನಾಲ್ವರು ಪೇದೆಗಳು ತಪ್ಪೊಪ್ಪಿಕೊಂಡಿದ್ದಾರೆ. ಹೀಗಾಗಿ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ನಾಲ್ವರು ಪೇದೆಗಳನ್ನು ಅಮಾನತು ಮಾಡಿ ಡಿಸಿಪಿ ಆದೇಶ ಹೊರಡಿಸಿದ್ದಾರೆ.