Tag: Police Constable

  • ಸಂಬಂಧಿ ಪೊಲೀಸ್ ಕಾನ್‍ಸ್ಟೇಬಲ್‍ನಿಂದಲೇ 2 ವರ್ಷ ನಿರಂತರ ಅತ್ಯಾಚಾರ- ನದಿಗೆ ಹಾರಿ ಯುವತಿ ಆತ್ಮಹತ್ಯೆಗೆ ಯತ್ನ

    ಸಂಬಂಧಿ ಪೊಲೀಸ್ ಕಾನ್‍ಸ್ಟೇಬಲ್‍ನಿಂದಲೇ 2 ವರ್ಷ ನಿರಂತರ ಅತ್ಯಾಚಾರ- ನದಿಗೆ ಹಾರಿ ಯುವತಿ ಆತ್ಮಹತ್ಯೆಗೆ ಯತ್ನ

    ಲಕ್ನೋ: ಸಂಬಂಧಿ ಪೊಲೀಸ್ ಹೆಡ್ ಕಾನ್‍ಸ್ಟೇಬಲ್ ನಿರಂತರವಾಗಿ 2 ವರ್ಷಗಳ ಕಾಲ ಅತ್ಯಾಚಾರ ಹಾಗೂ ಚಿತ್ರಹಿಂಸೆಯನ್ನು ಸಹಿಸಲಾಗದೆ 25 ವರ್ಷದ ಯುವತಿ ಗಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಪೊಲೀಸರು ಹಾಗೂ ಸಾರ್ವಜನಿಕರು ರಕ್ಷಿಸಿದ್ದಾರೆ.

    ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಘಟನೆ ನಡೆದಿದ್ದು, ಯುವತಿ ಗಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಪೊಲೀಸರು ಹಾಗೂ ಸಾರ್ವಜನಿಕರು ರಕ್ಷಿಸಿದ್ದಾರೆ ಎಂದು ಡಿಸಿಪಿ ಪ್ರಮೋದ್ ಕುಮಾರ್ ತಿಳಿಸಿದ್ದಾರೆ. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಕೇಸ್ ಸಹ ದಾಖಲಾಗಿದೆ.

    ಜನವರಿ 2019ರಲ್ಲಿ ನಡೆದ ಕುಂಭ ಮೇಳಕ್ಕೆ ನಮ್ಮ ಚಿಕ್ಕಪ್ಪ ಅಲಹಬಾದ್‍ಗೆ ಆಹ್ವಾನಿಸಿದ್ದರು. ಈ ವೇಳೆ ಹೋಟೆಲ್‍ಗೆ ಕರೆದೊಯ್ದು ಮತ್ತು ಬರುವ ಔಷಧಿ ಬೆರೆಸಿದ ಕೂಲ್ ಡ್ರಿಂಕ್ಸ್ ನೀಡಿದ್ದರು. ಪ್ರಜ್ಞಾಹೀನಳಾದ ಬಳಿಕ ಅತ್ಯಾಚಾರ ಎಸಗಿ, ವೀಡಿಯೋ ರೆಕಾರ್ಡ್ ಮಾಡಿ, ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಯುವತಿ ತನ್ನ ದೂರಿನಲ್ಲಿ ಆರೋಪಿಸಿದ್ದಾಳೆ. ಇದನ್ನೂ ಓದಿ: ಎರಡೂವರೆ ತಿಂಗಳಿಂದ ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ- ಆರೋಪಿ ಬಂಧನ

    ವೀಡಿಯೋ ಮಾಡಿಕೊಂಡ ಬಳಿಕ ಅವರ ಚಿಕ್ಕಪ್ಪ ಬೆದರಿಸಿ ಅಲಹಬಾದ್ ಹಾಗೂ ಖಾನ್‍ಪುರದಲ್ಲಿ ಕಳೆದ ಎರಡು ವರ್ಷಗಳಿಂದ ಹಲವು ಬಾರಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ಮಾತ್ರೆ ನೀಡಿ ಮಗುವನ್ನು ತೆಗೆಯಲು ಹೇಳಿದ್ದಾರೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.

    ಭಾನುವಾರ ಸಹ ಆರೋಪಿ ಹಾಗೂ ಆತನ ಮಗ ಖಾನ್‍ಪುರದ ಚಕೇರಿ ಪ್ರದೇಶಕ್ಕೆ ಯುವತಿಯನ್ನು ಕರೆದೊಯ್ದು ಮತ್ತೆ ವೀಡಿಯೋ ಚಿತ್ರೀಕರಿಸಿ, ಬ್ಲ್ಯಾಕ್‍ಮೇಲ್ ಮಾಡಿದ್ದಾರೆ. ಅಲ್ಲದೆ ಯುವತಿ ಇದಕ್ಕೆ ವಿರೋಧಿಸಿದ್ದಕ್ಕೆ ಹೊಡೆದು ಚಿತ್ರಹಿಂಸೆ ನೀಡಿ, ಕೊಲೆ ಬೆದರಿಕೆ ಹಾಕಿದ್ದಾರೆ. ಇಲ್ಲಿಂದ ತಪ್ಪಿಸಿಕೊಂಡು ಬಂದ ಯುವತಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ, ನದಿಗೆ ಹಾರಿದ್ದಾಳೆ. ಆದರೆ ಪಿಆರ್‍ವಿ ಸಿಬ್ಬಂದಿ ಯುವತಿ ರಕ್ಷಿಸಿದ್ದಾರೆ.

    ಟ್ರಾಫಿಕ್ ಪೊಲೀಸ್ ಕಾನ್‍ಸ್ಟೇಬಲ್ ಹಾಗೂ ಮಗನ ವಿರುದ್ಧ ಸಂಬಂಧಿಸಿದ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಲಾಗಿದೆ. ಆದರೆ ಇಬ್ಬರನ್ನೂ ಇನ್ನೂ ಬಂಧಿಸಲಾಗಿಲ್ಲ. ಈ ಕುರಿತು ಟ್ರಾಫಿಕ್ ವಿಭಾಗದ ಡಿಸಿಪಿ ಮಾಹಿತಿ ನೀಡಿ, ಮಾಜಿಸ್ಟ್ರೇಟ್ ಎದುರು ಮಹಿಳೆ ಹೇಳಿಕೆ ದಾಖಲಿಸುತ್ತಿದ್ದಂತೆ ಆರೋಪಿ ಕಾನ್‍ಸ್ಟೇಬಲ್‍ನನ್ನು ಸಸ್ಪೆಂಡ್ ಮಾಡಲಾಗಿದೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಸಹ ಒಳಪಡಿಸಲಾಗಿದೆ ಎಂದು ಅವರು ಹೇಳಿದರು.

  • ಅನೈತಿಕ ಸಂಬಂಧ- ಕುಟುಂಬಸ್ಥರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಕಾನ್‍ಸ್ಟೇಬಲ್

    ಅನೈತಿಕ ಸಂಬಂಧ- ಕುಟುಂಬಸ್ಥರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಕಾನ್‍ಸ್ಟೇಬಲ್

    – ಕೈಕಾಲು ಕಟ್ಟಿ ಪೇದೆಗೆ ಹಿಗ್ಗಾ ಮುಗ್ಗಾ ಥಳಿಸಿದ ಮಹಿಳೆ ಕುಟುಂಬಸ್ಥರು

    ಯಾದಗಿರಿ: ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪೊಲೀಸ್ ಕಾನ್‍ಸ್ಟೇಬಲ್, ಆಕೆಯ ಕುಟುಂಬಸ್ಥರ ಕೈಗೆ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ಕೈಕಾಲು ಕಟ್ಟಿ ಪೊಲೀಸ್ ಪೇದೆಗೆ ಗ್ರಾಮಸ್ಥರು ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ನಗರದಲ್ಲಿ ನಡೆದಿದೆ.

    ಡಿಆರ್ ಕಾನ್‍ಸ್ಟೇಬಲ್ ಗುರಪ್ಪ ಯಾದಗಿರಿ ಎಸ್ಪಿ ಕಚೇರಿ ಸಮೀಪದಲ್ಲಿ ವಾಸವಾಗಿದ್ದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ನಿನ್ನೆ ಸಂಜೆ ಆಕೆಯೆ ಮನೆಯಲ್ಲಿ ಕಾನ್‍ಸ್ಟೇಬಲ್ ಇದ್ದಿದ್ದನ್ನು ಗಮನಿಸಿದ ಕುಟುಂಬಸ್ಥರು, ಗುರಪ್ಪನ ಮೇಲೆ ದಾಳಿಮಾಡಿ, ಕೈಕಾಲು ಕಟ್ಟಿಹಾಕಿ ಥಳಿಸಿದ್ದಾರೆ. ಈ ವೇಳೆ ಸಹಾಯಕ್ಕೆ ಅಂಗಲಾಚಿದರೂ ಯಾರೂ ಸಹಾಯಕ್ಕೆ ಮುಂದಾಗಿಲ್ಲ. ಇದನ್ನೂ ಓದಿ: ನಟ, ಬಿಗ್ ಬಾಸ್ ವಿಜೇತ ಸಿದ್ಧಾರ್ಥ್ ಶುಕ್ಲಾ ಸಾವು

    ಸುದ್ದಿ ತಿಳಿದ ನಗರ ಠಾಣೆಯ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾನ್‍ಸ್ಟೇಬಲ್ ಗುರಪ್ಪನ್ನನ್ನು ರಕ್ಷಣೆ ಮಾಡಿದ್ದಾರೆ. ಘಟನೆ ನಂತರ ಮಹಿಳೆಯಿಂದ ಪೇದೆ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಗುರಪ್ಪನ್ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ಕಾನ್‍ಸ್ಟೇಬಲ್ ಹುದ್ದೆಗೆ ಅರ್ಜಿ- ವಯೋಮಿತಿ ಹೆಚ್ಚಿಸಲು ಆಗ್ರಹ

    ಕಾನ್‍ಸ್ಟೇಬಲ್ ಹುದ್ದೆಗೆ ಅರ್ಜಿ- ವಯೋಮಿತಿ ಹೆಚ್ಚಿಸಲು ಆಗ್ರಹ

    ಧಾರವಾಡ: ಸರ್ಕಾರ ಕೊವಿಡ್ ನಿಯಂತ್ರಣಕ್ಕೆ ನಿರಂತರ ಲಾಕ್‍ಡೌನ್ ಜಾರಿಗೊಳಿಸಿ, ಪೊಲೀಸ್ ನೇಮಕಾತಿಗಳನ್ನು ವಿಳಂಬ ಮಾಡಿದ್ದರಿಂದ ಕೆಲವು ವಿದ್ಯಾರ್ಥಿಗಳಿಗೆ ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗೆ ಅರ್ಜಿ ಹಾಕುವ ವಯೋಮಿತಿ ಮೀರಿ ಹೋಗಿದೆ. ಹೀಗಾಗಿ ಸರ್ಕಾರ ವಯೋಮಿತಿಯನ್ನು ಹೆಚ್ಚಿಸಬೇಕು ಎಂದು ವಿದ್ಯಾಕಾಶಿ ಕರಿಯರ್ ಅಕಾಡೆಮಿ ಸಿಬ್ಬಂದಿ ಆಗ್ರಹಿಸಿದ್ದಾರೆ.

    ವಯೋಮಿತಿ ಹೆಚ್ಚಿಸುವಂತೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದರು. ವಯೋಮಿತಿ ಹೆಚ್ಚಿಸದಿದ್ದರೆ, ಪೊಲೀಸ್ ಹುದ್ದೆಯನ್ನು ನೆಚ್ಚಿಕೊಂಡು ಕುಳಿತ ಸಾವಿರಾರು ವಿದ್ಯಾರ್ಥಿಗಳ ಕನಸಿಗೆ ಅಡ್ಡಿಯಾಗಲಿದೆ. ಕೆಲವು ರಾಜ್ಯಗಳಲ್ಲಿ ಪೊಲೀಸ್ ಕಾನ್‍ಸ್ಟೆಬಲ್ ಹುದ್ದೆಯ ವಯೋಮಿತಿ ಹೆಚ್ಚಾಗಿದೆ. ಅದೇ ರೀತಿ ರಾಜ್ಯದಲ್ಲೂ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

    ರಾಜ್ಯದಲ್ಲಿ ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳಿಗೆ 27, ಸಾಮಾನ್ಯ ವರ್ಗದವರಿಗೆ 25 ವಯಸ್ಸಿನ ಮಿತಿ ಇದೆ. ಇದರಿಂದ ಸಾವಿರಾರು ಬಡ ವಿದ್ಯಾರ್ಥಿಗಳ ಸರ್ಕಾರಿ ಕೆಲಸದ ಕನಸಿಗೆ ಅಡ್ಡಿಯಾಗಿದೆ. ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ವಯೋಮಿತಿ ಸಡಿಲಿಕೆಗೆ ಅವಕಾಶ ಕಲ್ಪಿಸಬೇಕು ಆಗ್ರಹಿಸಿದರು.

  • ಕೊರೊನಾಗೆ ಗರ್ಭಿಣಿ ಕಾನ್‍ಸ್ಟೇಬಲ್ ನಿಧನ – ರೇಣುಕಾಚಾರ್ಯ ಸಂತಾಪ

    ಕೊರೊನಾಗೆ ಗರ್ಭಿಣಿ ಕಾನ್‍ಸ್ಟೇಬಲ್ ನಿಧನ – ರೇಣುಕಾಚಾರ್ಯ ಸಂತಾಪ

    – ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿ ಅಂತಿಮ ನಮನ ಸಲ್ಲಿಸಿದ ಶಾಸಕರು

    ದಾವಣಗೆರೆ: ಹೊನ್ನಾಳಿ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಮಹಿಳಾ ಪೊಲೀಸ್ ಕಾನ್‍ಸ್ಟೇಬಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ 34 ವರ್ಷದ ಚಂದ್ರಕಲಾ ಕೋವಿಡ್ ಸೋಂಕಿನಿಂದ ನಿಧನರಾಗಿದ್ದಾರೆ. ಚಂದ್ರಕಲಾ ಅವರ ನಿಧನಕ್ಕೆ ಶಾಸಕ ಎಂ.ಪಿ.ರೇಣುಕಾಚಾರ್ಯ ಸಂತಾಪ ಸೂಚಿಸಿದ್ದಾರೆ.

    ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಸಹೋದರಿ ಚಂದ್ರಕಲಾ ಕಳೆದ 20 ದಿನಗಳಿಂದ ಶಿವಮೊಗ್ಗ ನಗರದ ಮೆಗ್ಗನ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಹೋದರಿ ಚಂದ್ರಕಲಾ ಅವರು ಗರ್ಭಿಣಿಯಾಗಿದ್ದರು ಎನ್ನುವುದು ಇನ್ನೂ ದುಃಖದ ವಿಚಾರ.

    ಪತಿ ಬೋಜಪ್ಪ ನವರು ಸಹ ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್‍ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ದಂಪತಿಗೆ ಒಂದು ವರ್ಷದ ಹೆಣ್ಣು ಮಗು ಇದೆ. ವೈಯಕ್ತಿಕ ಜೀವನವನ್ನು ಮರೆತು ಈ ದಂಪತಿ ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಈ ಸಾವಿಗೆ ಪೊಲೀಸ್ ಇಲಾಖೆ ಸೇರಿದಂತೆ ಸಮಾಜವೇ ಕಂಬನಿ ಮಿಡಿಯುತ್ತಿದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

    ಸಹೋದರಿ ಚಂದ್ರಕಲಾ ಅವರ ಚಿಕಿತ್ಸೆ ಕೊಡಿಸುವ ಸಂಪೂರ್ಣ ಜವಾಬ್ದಾರಿಯನ್ನು ಡಿವೈಎಸ್‍ಪಿ ಪ್ರಶಾಂತ್ ಮುನ್ನೂರು ಹಾಗು ಸಿಪಿಐ ಟಿ.ವಿ ದೇವರಾಜ್ ಅವರು ತೆಗೆದುಕೊಂಡಿದ್ದು ಇಂದು ಬೆಳಗ್ಗೆ ಸಿಪಿಐ ದೇವರಾಜ್ ಅವರು ಚಂದ್ರಕಲಾ ಅವರ ಸಾವಿನ ಸುದ್ದಿ ತಿಳಿಸಿದಾಗ ನಾನು ಒಂದು ಕ್ಷಣ ದಿಗ್ಬ್ರಾಂತನಾದೆ. ಕೊರೊನಾ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಹಾಗು ಸಿಬ್ಬಂದಿಗಳು ತಮ್ನ ಜೀವದ ಹಂಗನ್ನು ತೊರೆದು ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದು, ನನ್ನ ಜನಸೇವೆಯನ್ನು ದೇಶ ಹಾಗು ರಾಜ್ಯದ ಜನತೆ ಕೊಂಡಾಡುತ್ತಿದ್ದಾರೆ ಎಂದರೆ ಅದಕ್ಕೆ ಮೂಲ ಕಾರಣ ನನ್ನ ಮತ ಕ್ಷೇತ್ರದ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನ ಪ್ರತಿಯೊಬ್ಬ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಎಂದು ಹೆಮ್ಮೆಯಿಂದ ಹೇಳುತ್ತೇನೆ.

    ಇಂದು ಬೆಳಗ್ಗೆ ದೈವಾಧೀನರಾದ ಹೊನ್ನಾಳಿ ಪೊಲೀಸ್ ಠಾಣೆಯ ಮಹಿಳಾ ಕಾನ್‍ಸ್ಟೇಬಲ್ ಸಹೋದರಿ ಶ್ರೀಮತಿ ಚಂದ್ರಕಲಾ ಅವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡು ಶಾಸಕರು ಅಂತಿಮ ನಮನ ಸಲ್ಲಿಸಿದರು.

  • ಮಂಗಳೂರಿನ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಕೊಲೆ ಯತ್ನ – ಆರು ಮಂದಿ ಆರೋಪಿಗಳ ಬಂಧನ

    ಮಂಗಳೂರಿನ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಕೊಲೆ ಯತ್ನ – ಆರು ಮಂದಿ ಆರೋಪಿಗಳ ಬಂಧನ

    ಮಂಗಳೂರು: ಇಲ್ಲಿನ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಇದೀಗ ಆರು ಮಂದಿಯನ್ನು ಬಂಧಿಸಲಾಗಿದೆ. ಮಂಗಳೂರು ಗೊಲೀಬಾರ್ ಗೆ ಪ್ರತಿಕಾರ ತೀರಿಸಲು ಪೊಲೀಸರ ಹತ್ಯೆಗೆ ಯತ್ನಿಸಿರುವುದಾಗಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ.

    ಕಳೆದ ಡಿಸೆಂಬರ್ 16 ರಂದು ಮಂಗಳೂರಿನ ಕುದ್ರೋಳಿ ಬಳಿಯ ನ್ಯೂ ಚಿತ್ರ ಸರ್ಕಲ್ ನಲ್ಲಿ ಈ ಘಟನೆ ನಡೆದಿತ್ತು. ಕರ್ತವ್ಯ ನಿರತರಾಗಿದ್ದ ಬಂದರು ಠಾಣೆಯ ಹೆಡ್ ಕಾನ್ಸ್‌ಟೇಬಲ್ ಗಣೇಶ್ ಕಾಮತ್ ಎಂಬವರಿಗೆ ಬೈಕ್ ನಲ್ಲಿ ಬಂದ ಇಬ್ಬರ ಪೈಕಿ ಓರ್ವ ಕತ್ತಿಯಿಂದ ಕುತ್ತಿಗೆ ಭಾಗಕ್ಕೆ ಹಲ್ಲೆ ನಡೆಸಿ ಪರಾರಿಯಾಗಿದ್ದ. ಆರೋಪಿಯ ಈ ಕೃತ್ಯ ಸಿಸಿ ಕ್ಯಾಮರಾದಲ್ಲಿ ಬೆಳಕಿಗೆ ಬಂದಿತ್ತು. ಬಳಿಕ ಅಪ್ರಾಪ್ತನಾದ ಆರೋಪಿ ಹಾಗೂ ಆತನ ಜೊತೆ ಬೈಕ್ ಚಲಾಯಿಸಿಕೊಂಡು ಬಂದಿದ್ದ ಇನ್ನೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

    ಇದೀಗ ಈ ವಿಚಾರಕ್ಕೆ ಸಂಬಂಧಸಿದಂತೆ ಕೃತ್ಯ ಎಸಗಲು ಪ್ಲಾನ್ ರೂಪಿಸಿದ್ದ ಆರು ಮಂದಿಯನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಆರೋಪಿಗಳು ಸ್ಪೋಟಕ ಮಾಹಿತಿ ಬಾಯಿ ಬಿಟ್ಟಿದ್ದಾರೆ. ಕಳೆದ 2019 ರ ಡಿಸೆಂಬರ್ 19 ರಂದು ಮಂಗಳೂರಿನಲ್ಲಿ ನಡೆದ ಸಿಎಎ.ಎನ್‍ಆರ್‍ಸಿ ಪ್ರತಿಭಟನೆಯ ವೇಳೆ ನಡೆದ ಗೊಲೀಬಾರ್ ಗೆ ಪ್ರತಿಕಾರ ತೀರಿಸಲು ಈ ಕೃತ್ಯ ಎಸಗಿದ್ದು, ಒಂದು ವರ್ಷದ ಬಳಿಕ 2020 ಡಿಸೆಂಬರ್ 19 ರಂದು ಪೊಲೀಸರನ್ನು ಹತ್ಯೆ ಮಾಡುವ ಪ್ಲಾನ್ ಮಾಡಿಕೊಂಡಿದ್ದರು. ಅದರಂತೆ ಮಾಯಾ ಗ್ಯಾಂಗ್ ಹಾಗೂ ಇನ್ನೊಂದು ಗ್ಯಾಂಗ್ ಸೇರಿ ಈ ಪ್ಲಾನ್ ಮಾಡಿದ್ದು, ಮಾಯಾಗ್ಯಾಂಗ್ ನ ಆರು ಮಂದಿಯನ್ನು ಬಂಧಿಸಲಾಗಿದ್ದು, ಇನ್ನೊಂದು ಗ್ಯಾಂಗ್ ನ ಆರೋಪಿಗಳ ಪತ್ತೆಗೂ ಪೊಲೀಸರು ಬಲೆ ಬೀಸಿದ್ದಾರೆ.

    ಒಟ್ಟಿನಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದವರಿಗೆ ನೂತನ ಪೊಲೀಸ್ ಕಮಿಷನರ್ ಶಶಿಕುಮಾರ್ ತಕ್ಕ ಪಾಠ ಕಲಿಸಿದ್ದು, ಇತರ ಪೊಲೀಸರಿಗೂ ಧೈರ್ಯ ತುಂಬಿದ್ದಾರೆ.

  • ಯುವಕನ ಜೊತೆ ಸಿಕ್ಕ 17ರ ಹುಡುಗಿ – ಪೊಲೀಸ್ ಪೇದೆಗಳಿಂದ ಅತ್ಯಾಚಾರ

    ಯುವಕನ ಜೊತೆ ಸಿಕ್ಕ 17ರ ಹುಡುಗಿ – ಪೊಲೀಸ್ ಪೇದೆಗಳಿಂದ ಅತ್ಯಾಚಾರ

    – ಬೆದರಿಸಿ, ಕರೆಸಿಕೊಂಡು ರೇಪ್
    – ಹುಡುಗಿಯನ್ನ ಕರೆ ತರುತ್ತಿದ್ದ ಚಾಲಕನಿಂದಲೂ ದುಷ್ಕೃತ್ಯ

    ರಾಯ್ಪುರ: 17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಬಿಸಲಾಪುರದ ಪೊಲೀಸ್ ಪೇದೆಗಳನ್ನಿಬ್ಬರನ್ನ ಎರಡು ತಿಂಗಳ ಬಳಿಕ ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಬ್ಬರು ಡೈಲ್ 112ರಲ್ಲಿ ಕೆಲಸ ಮಾಡಿಕೊಂಡಿದ್ದರು.

    ಕೆಲ ತಿಂಗಳ ಹಿಂದೆ ಅಪ್ರಾಪ್ತೆ ಯುವಕನ ಜೊತೆ ಸಿಕ್ಕಿ ಬಿದ್ದಿದ್ದಳು. ಈ ವೇಳೆ ಪೇದೆಗಳು ಆಕೆಯ ಮೊಬೈಲ್ ನಂಬರ್ ಪಡೆದುಕೊಂಡು ಕಳುಹಿಸಿದ್ದರು. ನಂತರ ಅಪ್ರಾಪ್ತೆಯನ್ನ ಬೆದರಿಸಿ ತಮ್ಮ ಬಳಿ ಕರೆಸಿಕೊಂಡು ಅತ್ಯಾಚಾರ ಎಸಗುತ್ತಿದ್ದರು. ಅಪ್ರಾಪ್ತೆಯನ್ನ ಕರೆತರಲು ಆಟೋ ಚಾಲಕನನ್ನು ಸಹ ಪೇದೆಗಳು ನೇಮಿಸಿದ್ದರು.

    ಪೇದೆಗಳಿಂದ ಬೇಸತ್ತ ಅಪ್ರಾಪ್ತೆ ಅಕ್ಟೋಬರ್ ನಲ್ಲಿ ಸರ್ಕಾಂಡ್ ಪೊಲೀಸ್ ಠಾಣೆಯಲ್ಲಿ ದಊರು ದಾಖಲಿಸಿದ್ದಾಳೆ. ಆದ್ರೆ ಪೊಲೀಸರು ಆರಂಭದಲ್ಲಿ ಪೇದೆಗಳನ್ನ ರಕ್ಷಿಸಲು ಪೊಲೀಸರು ಮುಂದಾಗಿದ್ದರಿಂದ, ತನಿಖೆ ನಿಧಾನಗತಿಯಲ್ಲಿ ಸಾಗುವಂತೆ ನೋಡಿಕೊಂಡಿದ್ದರು. ಪೊಲೀಸರ ಮೇಲೆ ಒತ್ತಡ ಹೆಚ್ಚಾಗುತ್ತಿದ್ದಂತೆ ಡಿಸೆಂಬರ್ 6ರಂದು ಇಬ್ಬರು ಪೇದೆಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಎಫ್‍ಬಿ ದೋಸ್ತಿ, ವಾಟ್ಸಪ್ ಚಾಟಿಂಗ್- 40ರ ಮಹಿಳೆ ಮೇಲೆ 30ರ ವ್ಯಕ್ತಿಯಿಂದ ರೇಪ್

    ಆಟೋ ಚಾಲಕನಿಂದಲೂ ರೇಪ್: ಇನ್ನು ಪೇದೆಗಳ ಸೂಚನೆ ಮೇರೆಗೆ ಅಪ್ರಾಪ್ತೆಯನ್ನ ಕರೆ ತರುತ್ತಿದ್ದ ಆಟೋ ಚಾಲಕನನ್ನು ಸಹ ಬಂಧಿಸಲಾಗಿದೆ. ಆಟೋ ಚಾಲಕ ಮಾರ್ಗ ಮಧ್ಯೆ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದನು. ಆರೋಪಿಗಳ ಬಂಧನಕ್ಕೂ ಮುನ್ನ ಪೊಲೀಸರು ಅಪ್ರಾಪ್ತೆ ಜೊತೆ ರಾಜಿಗೆ ಮುಂದಾಗಿದ್ದರು. ಇದನ್ನೂ ಓದಿ: ಗೆಳೆಯನೊಂದಿಗೆ ಸುತ್ತಾಟ, ಸೆಕ್ಸ್ – ಮನೆಗೆ ಬಂದು ರೇಪ್ ಆಯ್ತು ಅಂದ್ಳು!

  • ಉಗ್ರರಿಂದ ಬಿಜೆಪಿ ನಾಯಕನ ರಕ್ಷಿಸಿ ಪೇದೆ ಅಲ್ತಾಫ್ ಹುಸೈನ್ ಹುತಾತ್ಮ

    ಉಗ್ರರಿಂದ ಬಿಜೆಪಿ ನಾಯಕನ ರಕ್ಷಿಸಿ ಪೇದೆ ಅಲ್ತಾಫ್ ಹುಸೈನ್ ಹುತಾತ್ಮ

    -ಗುಂಡು ತಗುಲಿದ್ರೂ ಉಗ್ರನನ್ನ ಹೊಡೆದುರುಳಿಸಿದ ಅಲ್ತಾಫ್

    ಶ್ರೀನಗರ: ಬಿಜೆಪಿ ನಾಯಕ ಗುಲಾಮ್ ಖಾದೀರ್ ಅವರನ್ನು ಉಗ್ರರ ದಾಳಿಯಿಂದ ರಕ್ಷಿಸಿ ಜಮ್ಮು-ಕಾಶ್ಮೀರದ ಪೊಲೀಸ್ ಪೇದೆ ಮೊಹಮ್ಮದ್ ಅಲ್ತಾಫ್ ಹುಸೈನ್ ಹುತಾತ್ಮರಾಗಿದ್ದಾರೆ.

    ಅಲ್ತಾಫ್ ಹುಸೈನ್ ಸ್ಥಳೀಯ ಬಿಜೆಪಿ ಮುಖಂಡ ಗುಲಾಮ್ ಖಾದೀರ್ ಅವರ ರಕ್ಷಣೆಗೆ ನೀಡಿದ ಪೊಲೀಸ್ ತಂಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮಂಗಳವಾರ ಸಂಜೆ ಗುಲಾಮ್ ಖಾದಿರ್ ತಮ್ಮ ಭದ್ರತಾ ಸಿಬ್ಬಂದಿ ಅಲ್ತಾಫ್ ಜೊತೆ ಕಂಗನ್ ನಗರಕ್ಕೆ ಹೊರಟಿದ್ದ ವೇಳೆ ಉಗ್ರರು ದಾಳಿ ನಡೆಸಿದ್ದರು.

    ಈ ವೇಳೆ ಎಚ್ಚೆತ್ತ ಅಲ್ತಾಪ್ ಹುಸೈನ್ ಉಗ್ರರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಗುಂಡು ತಗುಲಿದ್ರೂ ವಿಚಲಿತರಾಗದ ಅಲ್ತಾಫ್ ಓರ್ವ ಉಗ್ರನನ್ನು ಹೊಡೆದುರುಳಿಸಿದ್ದಾರೆ. ಗಾಯಗೊಂಡಿದ್ದ ಅಲ್ತಾಫ್ ಅವರನ್ನ ಕೂಡಲೇ ಶ್ರೀನಗರದ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಅಲ್ತಾಫ್ ಹುಸೈನ್ ಹುತಾತ್ಮರಾಗಿದ್ದಾರೆ. ಮೃತ ಉಗ್ರನನ್ನು ಪುಲ್ವಾಮದ ಶಬ್ಬೀರ್ ಎಂದು ಗುರುತಿಸಲಾಗಿದೆ.

    ಹುತಾತ್ಮ ಅಲ್ತಾಫ್ ಹುಸೈನ್ ಶ್ರೀನಗರದ ನಿವಾಸಿಯಾಗಿದ್ದು, 2011ರಲ್ಲಿ ಪೊಲೀಸ್ ವಿಭಾಗದಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದರು. ಕಳೆದ ಮೂರು ತಿಂಗಳಿನಿಂದ ಬಿಜೆಪಿ ನಾಯಕ ಗುಲಾಮ್ ಖಾದಿರ್ ಭದ್ರತಾ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ತಾಫ್ ಅವರಿಗೆ ಒಂದು ವರ್ಷದ ಮಗ, ಪತ್ನಿ, ತಂದೆ-ತಾಯಿ ಇದ್ದಾರೆ.

  • ಕೊರೊನಾದಿಂದ ಗುಣಮುಖರಾಗಿ ಠಾಣೆಗೆ ಬಂದ ಮುಖ್ಯ ಪೇದೆಯನ್ನ ಸ್ವಾಗತಿಸಿದ ಶ್ವಾನ

    ಧಾರವಾಡ: ಯಾವತ್ತೂ ಧಾರವಾಡದ ಪೊಲೀಸ್ ಠಾಣೆ ಎದುರಲ್ಲೇ ಇರುವ ಶ್ವಾನವೊಂದು, ಕೊರೊನಾ ಸೊಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದ ಕೊರೊನಾ ವಾರಿಯರ್ ಗೆ ಸ್ವಾಗತ ಮಾಡಿಕೊಂಡಿದೆ.

    ಕಳೆದ 15 ದಿನಗಳ ಹಿಂದೆ ನಗರದ ಶಹರ ಪೊಲೀಸ್ ಠಾಣೆಯ ಮಹಿಳಾ ಮುಖ್ಯ ಪೇದೆಗೆ ಕೊರೊನಾ ಸೊಂಕು ತಗುಲಿತ್ತು. ಗುಣಮುಖರಾಗಿ ಇವತ್ತು ಮುಖ್ಯ ಪೇದೆ ಕರ್ತವ್ಯಕ್ಕೆ ಹಾಜರಾಗಲು ಠಾಣೆಗೆ ಬಂದಾಗ ಎಸಿಪಿ ಅನುಷಾ ಮುಖ್ಯ ಪೇದೆಯನ್ನು ಸ್ವಾಗತಿಸಿಕೊಂಡರು. ಇದೇ ವೇಳೆ ಸ್ಥಳದಲ್ಲಿದ್ದ ಈ ಶ್ವಾನ ತನ್ನ ಸ್ನೇಹಿತೆ ಮುಖ್ಯ ಪೇದೆಯನ್ನು ಸ್ವಾಗತ ಮಾಡಿಕೊಂಡಿದೆ. ಹಲವು ವರ್ಷಗಳಿಂದ ಈ ಶ್ವಾನ ಠಾಣೆಯ ಎದುರಲ್ಲೇ ಇರುತ್ತೆ. ಇದಕ್ಕೆ ಸಾಕಿದವರು ಇದೇ ಠಾಣೆಯ ಪೇದೆಗಳು.

    ಈ ಹಿನ್ನೆಲೆ ಪೇದೆಗಳು ಠಾಣೆಗೆ ಬರುತ್ತಿದ್ದಂತೆಯೇ ಅವರ ಅಕ್ಕ ಪಕ್ಕದಲ್ಲೇ ಈ ಶ್ವಾನ ಓಡಾಡಿಕೊಂಡು ಇರುತ್ತೆ. ಕಳೆದ 15 ದಿನಗಳಿಂದ ಈ ಮಹಿಳಾ ಮುಖ್ಯ ಪೇದೆ ಕಂಡಿರಲೇ ಇಲ್ಲ. ಇವತ್ತು ಠಾಣೆಗೆ ಮುಖ್ಯ ಪೇದೆ ಬರುತಿದ್ದಂತೆಯೇ ತನ್ನ ಬಾಲ ಅಲ್ಲಾಡಿಸುತ್ತ ಅಕ್ಕ ಪಕ್ಕಕ್ಕೆ ಬಂದು ನಿಂತಿದೆ. ಅಲ್ಲದೇ ಎಲ್ಲರೂ ಫೋಟೋಗೆ ಪೋಸ್ ಕೊಟ್ಟ ವೇಳೆ ತಾನೂ ಪೋಸ್ ಕೊಟ್ಟು ನಿಂತಿದೆ.

  • ಕೊರೊನಾ ಸೋಂಕಿತ ಪೊಲೀಸ್ ಪತ್ನಿ, ಮಕ್ಕಳು ಸೇರಿ ಕುಟುಂಬದ ಐವರಿಗೆ ಪಾಸಿಟಿವ್

    ಕೊರೊನಾ ಸೋಂಕಿತ ಪೊಲೀಸ್ ಪತ್ನಿ, ಮಕ್ಕಳು ಸೇರಿ ಕುಟುಂಬದ ಐವರಿಗೆ ಪಾಸಿಟಿವ್

    ಸೇನೆಯಿಂದ ರಜೆಗೆ ಬಂದಿದ್ದ ಸೈನಿಕನಿಗೂ ಸೋಂಕು

    ಹಾಸನ: ನಗರದಲ್ಲಿ ಕೊರೊನಾ ಸೋಂಕಿತ ಪೊಲೀಸ್ ಪೇದೆಯ ಪತ್ನಿ, ಮಕ್ಕಳು ಸೇರಿ ಕುಟುಂಬದ ಐವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆತಂಕಕ್ಕೆ ಕಾರಣವಾಗಿದೆ.

    ಜಿಲ್ಲೆಯಲ್ಲಿ ಇಂದು ಒಟ್ಟು 12 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, ಇದರಲ್ಲಿ ಈ ಹಿಂದೆ ಕೊರೊನಾ ಸೋಂಕು ತಗುಲಿದ್ದ ಹಾಸನ ಬಡಾವಣೆ ಪೊಲೀಸ್ ಠಾಣೆಯ ಪೇದೆಯ ಪತ್ನಿ, ಇಬ್ಬರು ಮಕ್ಕಳು, ಅತ್ತೆ, ಮಾವ ಸೇರಿ ಐವರಿಗೆ ಪಾಸಿಟಿವ್ ಬಂದಿರುವುದು ಪೊಲೀಸರ ಆತಂಕಕ್ಕೆ ಕಾರಣವಾಗಿದೆ. ಪೊಲೀಸ್ ಪೇದೆಯ ಕುಟುಂಬದವರಿಗಷ್ಟೇ ಅಲ್ಲದೆ ಬಡಾವಣೆ ಪೊಲೀಸ್ ಠಾಣೆಯ ಮತ್ತೊಬ್ಬ ಪೇದೆಗೂ ಇಂದು ಕೊರೋನಾ ಪಾಸಿಟಿವ್ ಬಂದಿದೆ.

    ಇದೆಲ್ಲದರ ಮಧ್ಯೆ ಭಾರತೀಯ ಸೇನೆಯಿಂದ ರಜೆಗೆಂದು ಬಂದಿದ್ದ ಓರ್ವ ಸೈನಿಕನಿಗೂ ಇಂದು ಪಾಸಿಟಿವ್ ಬಂದಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 312 ಕ್ಕೇರಿದ್ದು, ಪ್ರಸ್ತುತ 81 ಪ್ರಕರಣಗಳು ಸಕ್ರಿಯವಾಗಿವೆ. ಉಳಿದವರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

  • ಬಳ್ಳಾರಿಯಲ್ಲಿ ಪೊಲೀಸ್ ಪೇದೆ ಸೇರಿ ಮತ್ತೆ ಮೂವರಿಗೆ ಕೊರೊನಾ

    ಬಳ್ಳಾರಿಯಲ್ಲಿ ಪೊಲೀಸ್ ಪೇದೆ ಸೇರಿ ಮತ್ತೆ ಮೂವರಿಗೆ ಕೊರೊನಾ

    – ದಾವಣಗೆರೆಯ ಜಗಳೂರಿಗೆ ಹೋಗಿದ್ದ ಪೊಲೀಸ್ ಪೇದೆ

    ಬಳ್ಳಾರಿ: ಜಿಲ್ಲೆಯಲ್ಲಿ ಒಬ್ಬ ಪೊಲೀಸ್ ಪೇದೆಗೆ ಸೇರಿ ಹೊಸದಾಗಿ ಮೂರು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ.

    ಜಿಲ್ಲೆಯ ಕೊಟ್ಟೂರು ಪೊಲೀಸ್ ಠಾಣೆಯ 34 ವರ್ಷದ ಪೇದೆ ಪಕ್ಕದ ದಾವಣಗೆರೆ ಜಿಲ್ಲೆಯ ಜಗಳೂರಿಗೆ ಹೋಗಿಬಂದ ಹಿನ್ನಲೆಯಲ್ಲಿ ಸೋಂಕು ತಗುಲಿದೆ. ಅಲ್ಲದೆ ಹರಪನಹಳ್ಳಿಯ 44 ವರ್ಷ ಹಾಗೂ ಹೊಸಪೇಟೆಯ 88 ಮುದ್ಲಾಪುರ ಮೂಲದ 52 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

    ಈ ಮೂವರ ಟ್ರಾವಲ್ ಹಿಸ್ಟರಿ ಇನ್ನೂ ಪತ್ತೆಯಾಗಿಲ್ಲ. ಹುಡುಕಾಟ ನಡೆದಿದೆ. ಕೊಟ್ಟೂರು ಪೊಲೀಸ್ ಪೇದೆಗೆ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಅಲ್ಲದೆ ಠಾಣೆಯ ಪಿಎಸ್‍ಐ ಸೇರಿದಂತೆ 35 ಜನ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 27 ಮಂದಿ ಗುಣಮುಖರಾಗಿದ್ದು, ಕೇವಲ ಒರ್ವ ವ್ಯಕ್ತಿ ಮಾತ್ರ ಸಾವನ್ನಪ್ಪಿದ್ದಾರೆ. 23 ಮಂದಿ ಐಶೋಲೇಷನ್ ನಲ್ಲಿದ್ದಾರೆ.