ಹಾಸನ: ಮಾರಕಾಸ್ತ್ರಗಳಿಂದ ಕೊಚ್ಚಿ ಪೊಲೀಸ್ ಕಾನ್ಸ್‌ಟೇಬಲ್‌ನನ್ನು (Police Constable) ಬರ್ಬರ ಹತ್ಯೆ ಮಾಡಿರುವ ಘಟನೆ ಹಾಸನ (Hassan) ತಾಲೂಕಿನ ದುದ್ದ ಗ್ರಾಮದಲ್ಲಿ ನಡೆದಿದೆ.
ಅರಸೀಕೆರೆ ತಾಲೂಕಿನ ಬಾಗೇಶಪುರ ಗ್ರಾಮದವರಾದ ಹರೀಶ್.ವಿ (32) ಕೊಲೆಯಾದ ಪೊಲೀಸ್ ಕಾನ್ಸ್‌ಟೇಬಲ್. ಹರೀಶ್ ಬೆಂಗಳೂರಿನ KSISFನಲ್ಲಿ ಕಾನ್ಸ್‌ಟೇಬಲ್ ಆಗಿದ್ದರು. ಇದೇ ತಿಂಗಳು 11 ರಂದು ಹರೀಶ್ ವಿವಾಹ ನಿಶ್ಚಯವಾಗಿತ್ತು. ಸೋಮವಾರ ರಾತ್ರಿ ಮದುವೆ ಆಮಂತ್ರಣ ಪತ್ರ ಹಂಚಿ ಮನೆಗೆ ವಾಪಾಸ್ ಆಗುತ್ತಿದ್ದ ವೇಳೆ ದುದ್ದ ಗ್ರಾಮದ ಹೊರವಲಯದಲ್ಲಿರುವ ಡಾಬಾ ಸರ್ಕಲ್‌ನಲ್ಲಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಇದನ್ನೂ ಓದಿ: ನಾ ಡ್ರೈವರ್ ಖ್ಯಾತಿಯ ಗಾಯಕ ಮಾಳು ನಿಪನಾಳ ಗ್ಯಾಂಗ್‌ನಿಂದ ಹಲ್ಲೆ
ಬೀದರ್: ಕರ್ತವ್ಯ ನಿರತ ಪೊಲೀಸ್ ಪೇದೆ (Police Constable) ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ ಘಟನೆ ಬೀದರ್ (Bidar) ನಗರದ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ರಾಯಚೂರು (Raichur) ಮೂಲದ ಪೇದೆ ಇಂದು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಚಂದ್ರಶೇಖರ್ (29) ಮೃತ ಪೊಲೀಸ್ ಪೇದೆ. ಇವರು ಕಳೆದ ಐದು ವರ್ಷಗಳಿಂದ ಬೀದರ್‌ನಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಮುಡಾ ಆಯುಕ್ತರನ್ನು ಬಂಧಿಸಬೇಕು – ಕೇಂದ್ರ ಸಚಿವ ಹೆಚ್‌ಡಿಕೆ ಆಗ್ರಹ
ನಗರದ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಶೇಖರ್ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಗಾಂಧಿ ಜಯಂತಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಸಂದರ್ಭ ಪೇದೆಗೆ ಹೃದಯಾಘಾತವಾಗಿದ್ದು, ಕೂಡಲೇ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಪೊಲೀಸ್ ಪೇದೆ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: Bihar | ಸೇನೆಯ ಹೆಲಿಕಾಪ್ಟರ್ ಇಂಜಿನ್ ವೈಫಲ್ಯ – ಪ್ರವಾಹದ ನೀರಲ್ಲೇ ತುರ್ತು ಭೂಸ್ಪರ್ಶ
ಕೊಪ್ಪಳ: ರಾತ್ರಿ ಡ್ಯೂಟಿ (Night Shift) ವೇಳೆ ಪೊಲೀಸ್ ಪೇದೆಯೊಬ್ಬರು (Police Constable) ಹಾಲಿನ ಡೈರಿ ಮುಂದೆ ಇಟ್ಟಿದ್ದ ಟ್ರೇನಿಂದ ಹಾಲು ಕದ್ದಿರುವ (Milk Theft) ಘಟನೆ ಕೊಪ್ಪಳದ (Koppal) ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ನಡೆದಿದೆ.
ಶಿವಾನಂದ್ ಸಜ್ಜನ್ ಬೈಕ್ ಮೂಲಕ ಬಂದು ರಾತ್ರಿ ಹಾಲಿನ ಡೈರಿ ಮುಂದೆ ಇಟ್ಟಿದ್ದ ಟ್ರೇನಿಂದ ಹಾಲು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಶಿವಾನಂದ ಸಜ್ಜನ್ ಹಾಲು ಕದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿ ಟಿವಿ ಇರುವುದನ್ನು ಗಮನಿಸಿಯೂ ಶಿವಾನಂದ ಸಜ್ಜನ್ ಹಾಲು ಕಳ್ಳತನ ಮಾಡಿದ್ದು, ಕಾಯುವವರೇ ಕಳ್ಳರಾದರೇ ಹೇಗೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಪೊಲೀಸ್ ಪೇದೆ ಹಾಲು ಕಳ್ಳತನಕ್ಕೆ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ಶಿವಾನಂದ ಸಜ್ಜನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬೀದರ್‌ನಲ್ಲಿ ಭೀಕರ ಅಪಘಾತ – ಗುದ್ದಿದ ರಭಸಕ್ಕೆ ಕಾರಿನ ಮೇಲಿನಿಂದ ಬಿದ್ದ ಸವಾರ
ಬೆಂಗಳೂರು: ಅಮಾನತ್ತಾಗಿದ್ದ ಪೊಲೀಸ್ ಪೇದೆ (Police Constable) ಹೆಸರು ಸಿಎಂ ಪದಕ ಪಟ್ಟಿಯಲ್ಲಿಯಲ್ಲಿ ಪ್ರಕಟವಾಗಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (By Vijayendra) ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಗಳ ಪದಕ ಪಟ್ಟಿಯಲ್ಲಿ ಮೈಸೂರಿನ (Mysuru) ಅಮಾನತ್ತಿಗೊಳಗಾದ ಪೊಲೀಸ್ ಪೇದೆಯೊಬ್ಬರ ಹೆಸರು ಪ್ರಕಟವಾಗಿದೆ. ಸಲೀಂ ಪಾಷಾ ಎಂಬ ಪೇದೆ ಪದಕ ಪಟ್ಟಿಗೆ ಸೇರ್ಪಡೆಗೊಂಡ ಅದೃಷ್ಟವಂತನಾಗಿದ್ದು, ಅಪರಾಧಿಗಳೊಂದಿಗೆ ಕೈಜೋಡಿಸಿ ಕಳ್ಳತನಗಳಿಗೆ ನೆರವಾಗುತ್ತಿದ್ದ ಹಾಗೂ ಇಲಾಖೆಯ ದಾಖಲೆಗಳನ್ನು ಸೋರಿಕೆ ಮಾಡುವ ವಿದ್ರೋಹ ಕೃತ್ಯದ ಆರೋಪದ ಮೇಲೆ ಅಮಾನತಿಗೊಳಗಾಗಿದ್ದುದ್ದೇ ಈತನ ಅರ್ಹತೆಯಾಗಿರುವಂತಿದೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: Tungabhadra Dam | ನನ್ನ ಕಡೆಯಿಂದ ಪ್ರತಿ ಕಾರ್ಮಿಕನಿಗೆ 50 ಸಾವಿರ : ಜಮೀರ್ ಘೋಷಣೆ
ಪೋಸ್ಟ್‌ನಲ್ಲಿ ಏನಿದೆ?
ಕೆಲ ನಾಮಧೇಯಗಳನ್ನು ಕಂಡರೆ ಈ ಕಾಂಗ್ರೆಸ್ ಸರ್ಕಾರ ಕಣ್ಣು ಮುಚ್ಚಿಕೊಳ್ಳುತ್ತದೆ. ಅಪರಾಧಿಯಾಗಿದ್ದರೂ ಸರಿ, ಕಳ್ಳರಾಗಿದ್ದರೂ ಸರಿ, ಕೊನೆಗೆ ಭಯೋತ್ಪಾದಕರಾದರೂ ಸರಿ, ಅವರ ಬಗೆಗಿನ ಕಾಳಜಿಯಲ್ಲಿ ರಾಜೀ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎನ್ನುವುದನ್ನು ಸಾಬೀತುಪಡಿಸುವ ರೀತಿಯಲ್ಲಿ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಕೊಡಮಾಡುವ “ಮುಖ್ಯಮಂತ್ರಿಗಳ ಪದಕ” ಪಟ್ಟಿಯಲ್ಲಿ ಮೈಸೂರಿನ ಅಮಾನತ್ತಿಗೊಳಗಾದ ಪೊಲೀಸ್ ಪೇದೆಯೊಬ್ಬರ ಹೆಸರು ಪ್ರಕಟವಾಗಿದೆ.
ಕೆಲ ನಾಮಧೇಯಗಳನ್ನು ಕಂಡರೆ ಈ ಕಾಂಗ್ರೆಸ್ ಸರ್ಕಾರ ಕಣ್ಣು ಮುಚ್ಚಿಕೊಳ್ಳುತ್ತದೆ. ಅಪರಾಧಿಯಾಗಿದ್ದರೂ ಸರಿ, ಕಳ್ಳರಾಗಿದ್ದರೂ ಸರಿ, ಕೊನೆಗೆ ಭಯೋತ್ಪಾದಕರಾದರೂ ಸರಿ, ಅವರ ಬಗೆಗಿನ ಕಾಳಜಿಯಲ್ಲಿ ರಾಜೀ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎನ್ನುವುದನ್ನು ಸಾಬೀತುಪಡಿಸುವ ರೀತಿಯಲ್ಲಿ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಕೊಡಮಾಡುವ “ಮುಖ್ಯಮಂತ್ರಿಗಳ… pic.twitter.com/uzFDePnSop
ಸಲೀಂ ಪಾಷಾ ಎಂಬ ಪೇದೆ ಪದಕ ಪಟ್ಟಿಗೆ ಸೇರ್ಪಡೆಗೊಂಡ ಅದೃಷ್ಟವಂತನಾಗಿದ್ದು, ಅಪರಾಧಿಗಳೊಂದಿಗೆ ಕೈಜೋಡಿಸಿ ಕಳ್ಳತನಗಳಿಗೆ ನೆರವಾಗುತ್ತಿದ್ದ ಹಾಗೂ ಇಲಾಖೆಯ ದಾಖಲೆಗಳನ್ನು ಸೋರಿಕೆ ಮಾಡುವ ವಿದ್ರೋಹ ಕೃತ್ಯದ ಆರೋಪದ ಮೇಲೆ ಅಮಾನತಿಗೊಳಗಾಗಿದ್ದುದ್ದೇ ಈತನ ಅರ್ಹತೆಯಾಗಿರುವಂತಿದೆ.
ಸಮಾಜಘಾತುಕತನ ಹಾಗೂ ದೇಶದ್ರೋಹಿ ಮನಸ್ಥಿತಿಯ ಪೊಲೀಸ್ ಪೇದೆಯೊಬ್ಬರ ಹೆಸರು ಮುಖ್ಯಮಂತ್ರಿಗಳ ಪದಕ ಪಟ್ಟಿಯಲ್ಲಿ ಪ್ರಕಟವಾಗಿರುವುದು ಗೃಹ ಇಲಾಖೆ ಅಧಃಪತನಕ್ಕೀಡಾಗಿರುವುದಕ್ಕೆ ನಿದರ್ಶನವಾಗಿದೆ.
ಪೊಲೀಸ್ ಇಲಾಖೆಯು ಶಿಸ್ತು ಹಾಗೂ ಪಾರದರ್ಶಕತೆಯ ವ್ಯಾಪ್ತಿಯ ಪರಿಧಿಯ ಸಮತೋಲನವನ್ನು ಕಾಯ್ದುಕೊಳ್ಳದೇ ಇರುವುದನ್ನು ಬಿಜೆಪಿ ಎಚ್ಚರಿಸುತ್ತಲೇ ಇತ್ತು. ಅದು ನಿಜ ಎನ್ನುವುದನ್ನು ದುಷ್ಕೃತ್ಯಗಳ ಆರೋಪದ ಮೇಲೆ ಅಮಾನತಿಗೊಳಗಾಗಿದ್ದ ಪೊಲೀಸ್ ಪೇದೆ ಸಲೀಂ ಪಾಷಾ ಗೆ ಪದಕ ಪ್ರಕಟವಾಗಿರುವುದು ಸಾಕ್ಷೀಕರಿಸಿದೆ.
ಮುಖ್ಯಮಂತ್ರಿಗಳ ಪದಕ ಲಭಿಸಲು ಪೊಲೀಸ್ ಇಲಾಖೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ದಕ್ಷತೆ ಹಾಗೂ ತ್ಯಾಗ ಮನೋಭಾವ ಪ್ರದರ್ಶಿಸುವ ಸಮರ್ಥರನ್ನು ಆಯ್ಕೆ ಮಾಡುವ ಮಾನದಂಡವನ್ನು ಹೊಂದಿರುತ್ತದೆ. ಆದರೆ ಇದೀಗ ಪೊಲೀಸ್ ಇಲಾಖೆಯಲ್ಲಿ ವಿದ್ರೋಹ ಎಸಗುವವರಿಗೂ ಮುಖ್ಯಮಂತ್ರಿಗಳ ಪದಕ ಪಡೆಯಲು ಅರ್ಹತೆಯಾಗಿ ಪರಿಗಣಿಸಿರುವುದು ಕರ್ನಾಟಕ ಎತ್ತ ಸಾಗುತ್ತಿದೆ ಎನ್ನುವುದನ್ನು ಸೂಚಿಸುತ್ತದೆ. ಪೊಲೀಸ್ ಇಲಾಖೆಯನ್ನು ದೇವರೇ ಕಾಪಾಡಬೇಕಿದೆ.
ಲಕ್ನೋ: ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತದಿಂದಾಗಿ ನೂರಾರು ಮಂದಿ ದುರಂತ ಸಾವಿಗೀಡಾಗಿರುವ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿ ಹೆಣಗಳ ರಾಶಿ ಕಂಡು ಪೊಲೀಸ್ ಕಾನ್‌ಸ್ಟೇಬಲ್‌ವೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ರವಿ ಒಂದು ತಿಂಗಳಿನಿಂದ ತನ್ನ ಸಹೋದ್ಯೋಗಿ ಶೇಖರ್ ಪ್ರೇಮಿಯೊಂದಿಗೆ ಕ್ಯೂಆರ್‌ಟಿ ಕರ್ತವ್ಯದ ಮೇಲೆ ಇಟಾಹ್ ನಗರದಲ್ಲಿ ನೆಲೆಸಿದ್ದರು. ಹತ್ರಾಸ್ ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಇಟಾಹ್ ವೈದ್ಯಕೀಯ ಕಾಲೇಜಿಗೆ ಹೋಗುವಂತೆ ಅವರಿಗೆ ಸೂಚಿಸಲಾಗಿತ್ತು.
ಅಲ್ಲಿಗೆ ಬಂದ ಕಾನ್‌ಸ್ಟೇಬಲ್ ರವಿಗೆ ಮೃತದೇಹಗಳನ್ನು ನೋಡಿ ತಲೆ ತಿರುಗತೊಡಗಿತು. ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರೇಮ್ ರಂಜನ್ ಸಿಂಗ್, ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಸಿಂಗ್ ಮತ್ತು ಇತರ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿದರು. ಮೈಬಿಸಿ ಕಾರಣ ರವಿ ತನ್ನ ಶರ್ಟ್ ತೆಗೆದು ಹಾಕಿದರು. ತಕ್ಷಣ ಅಧಿಕಾರಿಗಳು ಹವಾನಿಯಂತ್ರಿತ ಕೋಣೆಗೆ ಅವರನ್ನು ಸ್ಥಳಾಂತರಿಸಿದರು. ಆದರೆ, ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಸ್‍ಪಿ ಡಾ.ಅರುಣ್ ಅವರು ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ರಾಯಚೂರು: ಜಿಲ್ಲೆಯ ಸಿರವಾರದಲ್ಲಿ ಜನವರಿ 30ರ ತಡರಾತ್ರಿ ನಡೆದಿದ್ದ ಟಿಪ್ಪು ಸುಲ್ತಾನ್ (Tipu Sultan) ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದಕ್ಕೆ ಸಿರವಾರ ಠಾಣೆಯ ಇಬ್ಬರು ಕಾನ್ಸಟೇಬಲ್ (Police Constable) ಅವರನ್ನು ಅಮಾನತುಗೊಳಿಸಲಾಗಿದೆ.
ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಪೇದೆಗಳನ್ನು ಅಮಾನತು ಮಾಡಿ ರಾಯಚೂರು ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ ಆದೇಶ ಹೊರಡಿಸಿದ್ದಾರೆ. ರೇವಣಸಿದ್ದಪ್ಪ, ಇಸ್ಮಾಯಿಲ್ ಅಮಾನತಾಗಿರುವ ಪೇದೆಗಳು. ಆರೋಪಿ ಆಕಾಶ್ ಬಂಧನದ ಬೆನ್ನಲ್ಲೇ ಇಬ್ಬರನ್ನು ಅಮಾನತು ಮಾಡಲಾಗಿದೆ. ಇದನ್ನೂ ಓದಿ: ಭಾರೀ ಸಂಖ್ಯೆಯಲ್ಲಿ ಜ್ಞಾನವಾಪಿ ಮಸೀದಿಗೆ ಆಗಮಿಸಿ ನಮಾಜ್ ಮಾಡಿದ ಮುಸ್ಲಿಮರು
ಕುಡಿದ ಮತ್ತಲ್ಲಿ ಟಿಪ್ಪು ಸುಲ್ತಾನ್ ವೃತ್ತದಲ್ಲಿದ್ದ ಟಿಪ್ಪು ಭಾವ ಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ್ದ ಆರೋಪಿ ಆಕಾಶ್‌ನನ್ನು ಘಟನೆ ನಡೆದ 24 ಗಂಟೆಯಲ್ಲಿ ಪೊಲೀಸರು ಬಂಧಿಸಿದ್ದರು.
ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆಯನ್ನು ಖಂಡಿಸಿ ಪಟ್ಟಣದಲ್ಲಿ ಮುಸ್ಲಿಂ ಸಮುದಾಯದವರು ಪ್ರತಿಭಟನೆ ಮಾಡಿದ್ದರು.
ಮುಂಬೈ: ಮಹಿಳೆಯಿಂದ ಪುರುಷನಾಗುವ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಮಹಾರಾಷ್ಟ್ರದ (Maharashtra) ಬೀಡ್ ಜಿಲ್ಲೆಯ ಲಲಿತ್ ಸಾಳ್ವೆ (Lalit Salve) ಎಂಬ ಪೊಲೀಸ್ ಪೇದೆ (Police Constable) ಇದೀಗ ತಂದೆಯಾಗಿದ್ದಾರೆ.
ಲಲಿತ್ ಸಾಳ್ವೆ (36) ಅವರು 2020 ರಲ್ಲಿ ವಿವಾಹವಾಗಿದ್ದರು. ಇದೀಗ ಜನವರಿ 15 ರಂದು ಗಂಡು ಮಗುವಿಗೆ ತಂದೆಯಾದರು. ದಂಪತಿ ತಮ್ಮ ಮಗನಿಗೆ ಆರುಷ್ ಎಂದು ಹೆಸರಿಡಲು ನಿರ್ಧರಿಸಿದ್ದಾರೆ.
ಹೆಣ್ಣಿನಿಂದ ಪುರುಷನಾಗುವ ನನ್ನ ಪ್ರಯಾಣವು ಹೋರಾಟಗಳಿಂದ ತುಂಬಿತ್ತು. ಈ ಸಮಯದಲ್ಲಿ ನನ್ನನ್ನು ಅನೇಕ ಜನ ಬೆಂಬಲಿಸಿದ್ದಾರೆ. ನನ್ನ ಹೆಂಡತಿ ಸೀಮಾ ಮಗುವನ್ನು ಹೊಂದಲು ಬಯಸಿದ್ದಳು. ನಾನು ಈಗ ತಂದೆಯಾಗಿದ್ದೇನೆ ಎಂದು ನನಗೆ ಸಂತೋಷವಾಗಿದೆ. ನನ್ನ ಕುಟುಂಬ ಇದರಿಂದ ಸಂಭ್ರಮದಲ್ಲಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಲಲಿತ್ ಸಾಳ್ವೆ (ಹಿಂದಿನ ಲಲಿತಾ) ಜೂನ್ 1988ರಲ್ಲಿ ಜನಿಸಿದ್ದರು. 2010ರಲ್ಲಿ ಮಹಾರಾಷ್ಟ್ರ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡರು. ಮಹಿಳೆಯಾಗಿ ಬೆಳೆದ ಸಾಲ್ವೆ ಅವರು 2013ರಲ್ಲಿ ತಮ್ಮ ದೇಹದಲ್ಲಿ ಕೆಲವು ಬದಲಾವಣೆಗಳನ್ನು ಕಂಡುಕೊಂಡ ಬಳಿಕ, 2017ರಲ್ಲಿ ಕ್ಯಾರಿಯೋಟೈಪಿಂಗ್ (ಸಂಪೂರ್ಣ ಕ್ರೋಮೋಸೋಮ್ ಪೂರಕ ವಿಶ್ಲೇಷಣೆ) ಎಂಬ ಜೆನೆಟಿಕ್ ಪರೀಕ್ಷೆಗೆ ಒಳಗಾದರು. ಬಳಿಕ ಅವರ ಲಿಂಗವನ್ನು ಪುರುಷ ಎಂದು ರಿಪೋರ್ಟ್ ಗುರುತಾಗಿತ್ತು.
ನವೆಂಬರ್ 2017ರಲ್ಲಿ ಕಾನ್‍ಸ್ಟೆಬಲ್ ಲಿಂಗ ಮರುಹೊಂದಾಣಿಕೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಒಂದು ತಿಂಗಳ ರಜೆ ಕೋರಿ ಬಾಂಬೆ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಬಳಿಕ ಅವರಿಗೆ ಅವಕಾಶ ನೀಡಲಾಯಿತು. ಅವರು 2018 ಮತ್ತು 2020ರ ನಡುವೆ ಮುಂಬೈನ ಫೋರ್ಟ್ ಪ್ರದೇಶದ ಸರ್ಕಾರಿ ಸೇಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಮೂರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದನ್ನೂ ಓದಿ: ಯಾರು ಏನ್ ಬೇಕಿದ್ರೂ ಹೇಳಲಿ, ನಾನು ಅಯೋಧ್ಯೆಗೆ ಹೋಗ್ತೀನಿ: ಹರ್ಭಜನ್ ಸಿಂಗ್
ಕಲಬುರಗಿ: ಪತಿಯೊಂದಿಗೆ ಗಲಾಟೆ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಮಹಿಳೆಯೊಬ್ಬಳಿಗೆ ಠಾಣೆಯ ಕಾನ್ಸ್‌ಟೇಬಲ್ (Police Constable) ಒಬ್ಬ ಲೈಂಗಿಕ ಕಿರುಕುಳ (Sexual Harassment) ನೀಡಿದ ಆರೋಪ ಕೇಳಿಬಂದಿದೆ.
ಕಮಲಾಪುರ ಪೊಲೀಸ್ (Police) ಠಾಣೆಯ ಕಾನ್ಸ್‌ಟೇಬಲ್ ಬಸವರಾಜ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ. ಮಹಿಳೆ ಗಂಡನ ಜೊತೆ ಗಲಾಟೆ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಈ ವೇಳೆ ಠಾಣೆಯ ಎಸ್‍ಬಿ ಡ್ಯೂಟಿಯಲ್ಲಿದ್ದ ಬಸವರಾಜ್, ಮಹಿಳೆಯ ಪತಿಯನ್ನು ಸರಿದಾರಿಗೆ ತರುವುದಾಗಿ ಹೇಳಿ ಸಲುಗೆ ಬೆಳೆಸಿದ್ದಾನೆ. ಬಳಿಕ ಮಹಿಳೆಯ ಮೊಬೈಲ್ ನಂಬರ್ ಪಡೆದು ಆಕೆಗೆ ಕರೆ ಮಾಡಿ ಬಲವಂತವಾಗಿ ತನ್ನ ಜೊತೆ ಒಂದು ರಾತ್ರಿ ಕಳೆಯುವಂತೆ ಪೀಡಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದನ್ನೂ ಓದಿ: ಇಂಟರ್‌ನೆಟ್‌ನಲ್ಲಿ ಹುಡುಕಿ ಪ್ಲ್ಯಾನ್- ರಿಮೂವರ್ ಕುಡಿಸಿ ಮಗು ಹತ್ಯೆಗೈದಿದ್ದ ಮಹಿಳೆ ಅರೆಸ್ಟ್
ಇಷ್ಟೇ ಅಲ್ಲದೇ, ತನ್ನ ಕಾರಿನಲ್ಲಿ ಕರೆದೊಯ್ದು ಬಲವಂತವಾಗಿ ಮುತ್ತಿಟ್ಟು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಿನ್ನನ್ನು ನಾನು ಮದುವೆಯಾಗುತ್ತೇನೆ, ಗಂಡನನ್ನ ಬಿಟ್ಟು ಬರುವಂತೆ ಒತ್ತಡ ಹೇರಿದ್ದಾನೆ. ಮಹಿಳೆ ಒಪ್ಪದೆ ಇದ್ದಾಗ ಆಕೆಯ ಮೇಲೆ ಕೇಸ್ ಹಾಕಿ, ಆಕೆ ಮತ್ತು ಆಕೆಯ ತಂದೆ-ತಾಯಿಯನ್ನ ಜೈಲಿಗೆ ಕಳಿಸುವ ಬೆದರಿಕೆ ಹಾಕಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾಳೆ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕಾನೂನು ಸುವ್ಯವಸ್ಥೆ ನಿಜಕ್ಕೂ ಹದಗೆಟ್ಟಿದೆಯಾ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ನಗರದಲ್ಲಿ ಆರೋಪಿಯೊಬ್ಬನನ್ನು ಹಿಡಿಯಲು ಹೋದ ಪೊಲೀಸ್ ಸಿಬ್ಬಂದಿಗೇ ಚಾಕು ಇರಿದ ಘಟನೆಯಿಂದ ಈ ಪ್ರಶ್ನೆ ಈಗ ಎದ್ದಿದೆ.
ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದವನನ್ನು ಹಿಡಿಯಲು ಹೋದ ಪೊಲೀಸ್ ಸಿಬ್ಬಂದಿಗೆ ಚಾಕು ಇರಿತವಾಗಿರುವ ಘಟನೆ ಶಿವಾಜಿನಗರದಲ್ಲಿ (Shivajinagar) ನಡೆದಿದೆ. ಸದಾಶಿವನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಸೈಯದ್ ಸಮೀವುಲ್ಲಾಗೆ ಚಾಕು ಇರಿತವಾಗಿದ್ದು, ಆರೋಪಿಯ ಕೃತ್ಯದಿಂದ ಅವರ ಕೈಗೆ ಬರೋಬ್ಬರಿ 26 ಹೊಲಿಗೆ ಬಿದ್ದಿದೆ.
ಹಸನ್ ಖಾನ್ ಎಂಬ ಆರೋಪಿಯಿಂದ ಚಾಕು ಇರಿತವಾಗಿದೆ. ಸಿಸಿಬಿ ಒಸಿಡಬ್ಲ್ಯು ಅಧಿಕಾರಿಗಳು ಹಸನ್ ಖಾನ್‌ನನ್ನು ಬಂಧಿಸುವ ಪ್ರಯತ್ನದಲ್ಲಿದ್ದರು. ಹಸನ್ ಖಾನ್ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಈ ಹಿನ್ನೆಲೆ ಸಿಸಿಬಿ ಪೊಲೀಸರು ಶಿವಾಜಿ ನಗರದ ಆರೋಪಿಯ ಮನೆಗೆ ಬಂದಿದ್ದರು. ಅದೇ ಏರಿಯಾದಲ್ಲಿ ವಾಸವಾಗಿದ್ದ ಸದಾಶಿವನಗರ ಹೆಡ್ ಕಾನ್ಸ್‌ಟೇಬಲ್ ಸೈಯದ್ ಸಮೀವುಲ್ಲಾ ಖಾನ್ ಕೂಡಾ ಸಿಸಿಬಿ ಅಧಿಕಾರಿಗಳಿಗೆ ಸಹಾಯ ಮಾಡಲು ಹಾಗೂ ಆರೋಪಿಯನ್ನು ಹಿಡಿಯಲು ಹೋಗಿದ್ದರು. ಇದನ್ನೂ ಓದಿ: ಕೌಟುಂಬಿಕ ಕಲಹ – ಪತ್ನಿಯ ಕತ್ತು ಸೀಳಿ ಕೊಲೆಗೈದ ಪತಿ
ಹೆಚ್‌ಕೆಪಿ ದರ್ಗಾದ ಸರ್ಕಲ್‌ನ ಗೂಡ್ಸ್ ಆಟೋಸ್ಟ್ಯಾಂಡ್ ಬಳಿ ನಿಂತಿದ್ದ ಹಸನ್ ಖಾನ್‌ನನ್ನು ಹಿಡಿಯಲು ಹೋದಾಗ ಸೈಯದ್ ಸಮೀವುಲ್ಲಾಗೆ ಚಾಕುವಿನಿಂದ ಇರಿದಿದ್ದಾನೆ. ಸಾರ್ವಜನಿಕರ ಎದುರೇ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ಕೊಲೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಸಮೀವುಲ್ಲಾ ಸ್ಥಳೀಯರ ನೆರವಿನಿಂದ ಬಚಾವ್ ಆಗಿದ್ದಾರೆ.