Tag: Police Constable

  • ಪೊಲೀಸ್ ಪೇದೆಯ ಅನೈತಿಕ ಸಂಬಂಧದ ಸೆಕ್ಸ್ ವಿಡಿಯೋ ವೈರಲ್

    ಪೊಲೀಸ್ ಪೇದೆಯ ಅನೈತಿಕ ಸಂಬಂಧದ ಸೆಕ್ಸ್ ವಿಡಿಯೋ ವೈರಲ್

    ರಾಮನಗರ: ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಕೆ.ಕೆ ಹಟ್ಟಿ ಗ್ರಾಮಸ್ಥರಿಂದ ಥಳಿತಕ್ಕೆ ಒಳಗಾಗಿದ್ದ ರಾಮನಗರ ಪೊಲೀಸ್ ಪೇದೆಯ ಅನೈತಿಕ ಸಂಬಂಧದ ವೀಡಿಯೋ ಇದೀಗ ರಾಮನಗರ ಜಿಲ್ಲೆಯಾದ್ಯಂತ ವೈರಲ್ ಆಗಿದೆ.

    ರಾಮನಗರ ಟ್ರಾಫಿಕ್ ಪೊಲೀಸ್ ಠಾಣೆಯ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಿಆರ್ ಪೇದೆ ಲೋಕೇಶ್ ಯುವತಿಯೊಬ್ಬಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. ಯುವತಿಯನ್ನ ಚಿತ್ರದುರ್ಗದ ಹಿರಿಯೂರು ತಾಲೂಕಿನ ಕೆಕೆ ಹಟ್ಟಿ ಗ್ರಾಮದ ಯುವಕನ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಇದನ್ನೂ ಓದಿ: ಪೊಲೀಸನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಇನ್ನೋರ್ವ ಪೇದೆಗೆ ಬಿತ್ತು ಗೂಸಾ

    ಮದುವೆಯಾದ ಬಳಿಕವೂ ಪೇದೆ ಲೋಕೇಶ್ ಮಹಿಳೆಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದನು. ಅಲ್ಲದೇ ದಿನಾಂಕ 3 ರಂದು ಮಹಿಳೆಯನ್ನ ನೋಡಲು ಕೆಕೆ ಹಟ್ಟಿಗೆ ಹೋಗಿದ್ದ ವೇಳೆ ಗ್ರಾಮಸ್ಥರೇ ಹಿಡಿದು ಲೋಕೇಶ್ ನನ್ನ ಥಳಿಸಿದ್ದರು. ಇದೀಗ ಲೋಕೇಶ್ ಹಾಗೂ ಮಹಿಳೆಯ ನಡುವಿನ ಅನೈತಿಕ ಸಂಬಂಧದ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿವೆ.

    ಈ ಸಂಬಂಧ ರಾಮನಗರ ಎಸ್‍ಪಿ ರಮೇಶ್ ಭಾನೋತ್ ಮಾತನಾಡಿ, ಚಿತ್ರದುರ್ಗ ಎಸ್.ಪಿ ಜೊತೆ ಈಗಾಗಲೇ ಚರ್ಚೆ ಮಾಡಲಾಗಿದೆ. ಅಲ್ಲಿಂದ ವರದಿ ಬಂದ ನಂತರ ಪೇದೆ ಲೋಕೇಶ್ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ. ವಿಡಿಯೋ ವೈರಲ್ ಆಗಿರುವ ಬಗ್ಗೆ ಮಾಹಿತಿ ಇಲ್ಲ ವರದಿ ಬಂದ ತಕ್ಷಣ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

  • ಬೈಕ್ ನಿಯಂತ್ರಣ ತಪ್ಪಿ ಬಿಎಂಟಿಸಿ ಬಸ್ ಚಕ್ರಕ್ಕೆ ಸಿಲುಕಿ ಪೇದೆ ದುರ್ಮರಣ

    ಬೈಕ್ ನಿಯಂತ್ರಣ ತಪ್ಪಿ ಬಿಎಂಟಿಸಿ ಬಸ್ ಚಕ್ರಕ್ಕೆ ಸಿಲುಕಿ ಪೇದೆ ದುರ್ಮರಣ

    ಬೆಂಗಳೂರು: ಬಿಎಂಟಿಸಿ ಬಸ್ ಹರಿದು ಪೊಲೀಸ್ ಪೇದೆ ಮೃತಪಟ್ಟ ಘಟನೆ ಬೆಂಗಳೂರಿನ ಬನಶಂಕರಿ ಸರ್ಕಲ್ ಬಳಿ ನಡೆದಿದೆ.

    ಸಿದ್ದು ಬೈರವಾಡಿಗೆ ಮೃತ ಪೇದೆಯಾಗಿದ್ದು, ಇವರು ವಿಜಯಪುರ ಮೂಲದವರಾಗಿದ್ದಾರೆ. 2016 ರ ಬ್ಯಾಚ್‍ನ ಸಿದ್ದು ಅವರು ಜಯನಗರದಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು.

    ಎಂದಿನಂತೆ ತನ್ನ ಕೆಲಸ ಮುಗಿಸಿ ಸಾರಕ್ಕಿಯ ಮನೆಗೆ ತೆರಳುತ್ತಿದ್ದಾಗ ಬೈಕ್ ನಿಯಂತ್ರಣ ತಪ್ಪಿದೆ. ಹೀಗಾಗಿ ಬೈಕ್ ನಿಂದ ಕೆಳಗೆ ಬಿದ್ದ ಇವರ ಮೇಲೆ ಬಿಎಂಟಿಸಿ ಬಸ್ ಹರಿದಿದೆ. ಪರಿಣಾಮ ಬಸ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.

    ಈ ಸಂಬಂಧ ಬನಶಂಕರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಹಿಳೆ ಮೇಲಿನ ಅತ್ಯಾಚಾರವನ್ನ ತಪ್ಪಿಸಲು ಚಲಿಸುತ್ತಿರುವ ರೈಲಿನಿಂದ ಜಿಗಿದ ಪೊಲೀಸ್ ಪೇದೆ!

    ಮಹಿಳೆ ಮೇಲಿನ ಅತ್ಯಾಚಾರವನ್ನ ತಪ್ಪಿಸಲು ಚಲಿಸುತ್ತಿರುವ ರೈಲಿನಿಂದ ಜಿಗಿದ ಪೊಲೀಸ್ ಪೇದೆ!

    ಚೆನ್ನೈ: ಮಹಿಳೆಯ ಮೇಲಿನ ಅತ್ಯಾಚಾರವನ್ನು ತಡೆಯಲು ಪೊಲೀಸ್ ಪೇದೆಯೊಬ್ಬರು ತನ್ನ ಪ್ರಾಣದ ಹಂಗನ್ನು ತೊರೆದು ಚಲಿಸುತ್ತಿದ್ದ ರೈಲಿನಿಂದ ಜಿಗಿದು ಸಂತ್ರಸ್ತೆಯನ್ನ ರಕ್ಷಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ರೈಲ್ವೆ ರಕ್ಷಣಾ ಪಡೆಯ 26 ವರ್ಷದ ಶಿವಾಜಿ ಎಂಬವರೇ ಮಹಿಳೆಯನ್ನು ರಕ್ಷಣೆ ಮಾಡಿದ ಕಾನ್ಸ್ ಸ್ಟೇಬಲ್. ಈ ಘಟನೆ ಸೋಮವಾರ ರಾತ್ರಿ ಚೆನ್ನೈನ ಪಾರ್ಕ್ ಟೌನ್ ನಿಲ್ದಾಣದಲ್ಲಿ ನಡೆದಿದೆ. ಸದ್ಯಕ್ಕೆ ಆರೋಪಿಯನ್ನು ಸರ್ಕಾರಿ ರೈಲ್ವೇ ಪೊಲೀಸರು ಬಂಧಿಸಿದ್ದು, ಜೈಲಿಗೆ ಕಳುಹಿಸಿದ್ದಾರೆ.

    ಘಟನೆಯ ವಿವರ?: ಸೋಮವಾರ ರಾತ್ರಿ ಶಿವಾಜಿ ಸೇರಿದಂತೆ ಮತ್ತೊಬ್ಬ ಕಾನ್ಸ್ ಸ್ಟೇಬಲ್ ಮತ್ತು ಸಬ್ ಇನ್ಸ್ ಪೆಕ್ಟರ್ ಎಸ್.ಸುಬ್ಬಯ್ಯ ಅವರು ವೆಲಚೇರಿಯಿಂದ ಚೆನ್ನೈ ಬೀಚ್‍ಗೆ ಗಸ್ತು ಕರ್ತವ್ಯಕ್ಕಾಗಿ ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.

    ಈ ವೇಳೆ ಚಿಂತಾದ್ರಿಪೇಟ್ ನಿಲ್ದಾಣದಿಂದ ರೈಲು ಹೊರಟಾಗ ರಾತ್ರಿ ಸುಮಾರು 11.45ಕ್ಕೆ ಪಕ್ಕದ ಬೋಗಿಯಿಂದ ಮಹಿಳೆಯೊಬ್ಬರ ಚೀರಾಟ ಕೇಳಿಬಂದಿದೆ. ಆದರೆ ಆ ರೈಲಿನಲ್ಲಿ ಒಂದು ಬೋಗಿಯಿಂದ ಇನ್ನೊಂದು ಬೋಗಿಗೆ ಒಳಗಿನಿಂದಲೇ ಹೋಗುವ ವ್ಯವಸ್ಥೆಯಿರಲಿಲ್ಲ. ಆದ್ದರಿಂದ ಶಿವಾಜಿ ಮುಂದಿನ ನಿಲ್ದಾಣ ಪಾರ್ಕ್ ಟೌನ್ ನಲ್ಲಿ ರೈಲು ನಿಧಾನವಾಗುದನ್ನು ಕಾಯುತ್ತಿದ್ದರು. ರೈಲು ನಿಧಾನವಾಗುತ್ತಿದ್ದಂತೆ ಕೂಡಲೇ ಬೋಗಿಯಿಂದ ಪ್ಲಾಟ್‍ಫಾರ್ಮ್ ಗೆ ಶಿವಾಜಿ ಹಾರಿ ವೇಗವಾಗಿ ಮಹಿಳೆ ಇದ್ದ ಬೋಗಿಗೆ ಓಡಿದ್ದಾರೆ.

    ಆ ಬೋಗಿಯಲ್ಲಿ 25 ವರ್ಷದ ಮಹಿಳೆಯ ಮೇಲೆ ಸತ್ಯರಾಜ್ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸುತ್ತಿದ್ದನು. ತಕ್ಷಣ ಆತನನ್ನು ತಳ್ಳಿ ಮಹಿಳೆಯನ್ನ ರಕ್ಷಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈ ವೇಳೆ ಶಿವಾಜಿ ಜೊತೆ ಇದ್ದವರು ಬಂದು, ಪ್ರಜ್ಞಾಹೀನ ಸ್ಥಿಯಲ್ಲಿದ್ದ ಸಂತ್ರಸ್ತೆಯನ್ನು ತಕ್ಷಣ ಆಂಬುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯಕ್ಕೆ ಸಂತ್ರಸ್ತೆ ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

    ಇನ್ನು ಇತರೆ ಪೊಲೀಸರು ಬಂದು ಆರೋಪಿಯನ್ನು ಥಳಿಸಿ ಬಂಧಿಸಿದ್ದು, ಆರೋಪಿ ವಿರುದ್ಧ ಅತ್ಯಾಚಾರಕ್ಕೆ ಯತ್ನದ ದೂರನ್ನು ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

    ಪೇದೆ ಶಿವಾಜಿ ಪ್ರಾಣದ ಹಂಗು ತೊರೆದು ಮಹಿಳೆಯ ರಕ್ಷಿಸಿದ್ದು, ಇದರಿಂದ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಅಷ್ಟೇ ಅಲ್ಲದೇ ರೈಲ್ವೇ ಪೊಲೀಸ್ ಇಲಾಖೆ ಕೂಡ ಶಿವಾಜಿ ಸಾಹಸಕ್ಕೆ ಪ್ರಶಂಸೆ ವ್ಯಕ್ತಪಡಿಸಿ, ಶಿವಾಜಿ ಮತ್ತು ಅವರ ತಂಡಕ್ಕೆ 5 ಸಾವಿರ ನಗದು ಬಹುಮಾನವನ್ನು ಘೋಷಿಸಿದೆ.

  • ಕಾರು ತಪಾಸಣೆ ವೇಳೆ ಗೂಡ್ಸ್ ಲಾರಿ ಡಿಕ್ಕಿ- ಕರ್ತವ್ಯ ನಿರತ ಮುಖ್ಯಪೇದೆ ದುರ್ಮರಣ

    ಕಾರು ತಪಾಸಣೆ ವೇಳೆ ಗೂಡ್ಸ್ ಲಾರಿ ಡಿಕ್ಕಿ- ಕರ್ತವ್ಯ ನಿರತ ಮುಖ್ಯಪೇದೆ ದುರ್ಮರಣ

    ರಾಮನಗರ: ಚುನಾವಣೆ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಿರತ ಮುಖ್ಯಪೇದೆಗೆ ಗೂಡ್ಸ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ರಾಮನಗರ ತಾಲೂಕಿನ ಹೆಜ್ಜಾಲ ಬಳಿ ನಡೆದಿದೆ.

    ಮಹಾಲಿಂಗ(39) ಸಾವನ್ನಪ್ಪಿದ ಪೇದೆಯಾಗಿದ್ದು, ಇವರು ಬಿಡದಿ ಪೊಲೀಸ್ ಠಾಣೆಯ ಮುಖ್ಯಪೇದೆ. ಚುನಾವಣೆ ಹಿನ್ನೆಲೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ರಾತ್ರಿ ಚೆಕ್ ಪೋಸ್ಟ್ ನಲ್ಲಿ ಕಾರು ತಪಾಸಣೆ ನಡೆಸುವ ವೇಳೆ ವೇಗವಾಗಿ ಬಂದ ಗೂಡ್ಸ್ ವಾಹನ ಇವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಪೇದೆ ಮಹಾಲಿಂಗ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ತೆರಳುವ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

    ಇನ್ನೂ ಗೂಡ್ಸ್ ವಾಹನದ ಚಾಲಕ ಪರಾರಿಯಾಗಿದ್ದು, ಬಿಡದಿಯ ಕುಂಬಳಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಪಕ್ಕದ ಮನೆಯ ಗೃಹಿಣಿ ಸ್ನಾನ, ಬಟ್ಟೆ ಬದಲಿಸೋ ವಿಡಿಯೋ ಮಾಡಿ, ಮದ್ವೆ ಆಗ್ತೀನಿ ಅಂದ ಪೋಲಿ ಪೇದೆ!

    ಪಕ್ಕದ ಮನೆಯ ಗೃಹಿಣಿ ಸ್ನಾನ, ಬಟ್ಟೆ ಬದಲಿಸೋ ವಿಡಿಯೋ ಮಾಡಿ, ಮದ್ವೆ ಆಗ್ತೀನಿ ಅಂದ ಪೋಲಿ ಪೇದೆ!

    ಬಳ್ಳಾರಿ: ಪಕ್ಕದ ಮನೆಯ ಗೃಹಿಣಿಯೊಬ್ಬರು ಸ್ನಾನ ಮಾಡುತ್ತಿರುವ ಹಾಗೂ ಬಟ್ಟೆ ಬದಲಾಯಿಸುತ್ತಿರೋ ವಿಡಿಯೋ ಮಾಡಿರುವ ಆರೋಪವೊಂದು ಪೊಲೀಸ್ ಪೇದೆಯ ವಿರುದ್ಧ ಕೇಳಿಬಂದಿದ್ದು, ಇದೀಗ ಪೇದೆ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಹೊಸಪೇಟೆ ಟೌನ್ ಪೊಲೀಸ್ ಠಾಣೆಯ ಪೇದೆಯೊಬ್ಬ, ಹೊಸಪೇಟೆ ಪಟ್ಟಣದ ಪಟೇಲ್ ನಗರದ ನಿವಾಸಿಯಾಗಿರುವ ಗೃಹಿಣಿಯೊಬ್ಬರಿಗೆ ಕಳೆದ 2 ವರ್ಷದಿಂದ ಆಕೆ ಸ್ನಾನ ಮಾಡೋ, ಬಟ್ಟೆ ಬದಲಾಯಿಸುವ ಫೋಟೋ ಹಾಗೂ ವಿಡಿಯೋ ರೆರ್ಕಾಡ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕುರಿತು ಗೃಹಿಣಿ ಪತಿ ಪೊಳಿಸರಿಗೆ ದೂರು ನೀಡಿದ್ದಾರೆ.

    ದೂರಿನಲ್ಲಿ ಏನಿದೆ?: 2 ವರ್ಷದ ಹಿಂದೆ ನಾನು ಮನೆಯಲ್ಲಿ ಇಲ್ಲದ ವೇಳೆ ನನ್ನ ಪತ್ನಿಗೆ ಗೊತ್ತಿಲ್ಲದಂತೆ ಆಕೆ ಬಟ್ಟೆ ಬದಲಾಯಿಸುತ್ತಿರುವ ಮತ್ತು ಸ್ನಾನ ಮಾಡುತ್ತಿರುವ ಫೋಟೋ, ವಿಡಿಯೋವನ್ನು ಪೇದೆ ಮಾಡಿದ್ದಾನೆ. ಬಳಿಕ ಅದನ್ನು ಆಕೆಗೆ ತೋರಿಸಿ ಯಾರಿಗಾದರೂ ಹೇಳಿದರೆ ಸಂಬಂಧಿಕರಿಗೆ, ಸ್ನೇಹಿತರಿಗೆ, ಪೇಸ್ ಬುಕ್ ಮತ್ತು ವಾಟ್ಸಪ್ ಗೆ ಅಪ್ಲೋಡ್ ಮಾಡುತ್ತೇನೆ. ನಾನು ಹೇಳಿದ ಹಾಗೆ ಕೇಳು ಎಂದು ಹೇಳಿದ್ದಾನೆ. ಒಂದು ವೇಳೆ ನಿನ್ನ ಪತಿಗೆ ಹೇಳಿದರೆ ಆತನ ಅಂಗಡಿಯಲ್ಲಿ ಗಾಂಜಾ ಇಟ್ಟು ಕೇಸ್ ಬುಕ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

    ನಿನ್ನ ಗಂಡನನ್ನು ಬಿಟ್ಟು ಬಿಡು, ನಾನು ನಿನ್ನ ಮದವೆ ಮಾಡಿಕೊಳ್ಳುತ್ತೇನೆ. ನಾನು ನಿನ್ನ ಪ್ರೀತಿಸುತ್ತೇನೆ. ಅವನಿಗಿಂತ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಅಸಭ್ಯವಾಗಿ ಸಂದೇಶ ಕಳುಹಿಸಲು ಪ್ರಾರಂಭಿಸಿದನು. ಒಂದು ವೇಳೆ ನೀನು ಬರದಿದ್ದರೆ ನಿನ್ನ ಗಂಡನನ್ನ ಸುಮ್ಮನೆ ಬಿಡುವುದಿಲ್ಲ. ಅಷ್ಟೇ ಅಲ್ಲದೇ ಈ ಫೋಟೋ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡುತ್ತೇನೆ ಎಂದು ಸುಮಾರು 8 ತಿಂಗಳಿಂದ ದೌರ್ಜನ್ಯ ಮಾಡುತ್ತಿದ್ದಾನೆ. ಕೊನೆಗೆ ಪತ್ನಿ ನನಗೆ ವಿಚಾರ ತಿಳಿಸಿದ್ದಳು. ನಂತರ ಆತನ ಬಳಿ ನಾನು ಮಾತನಾಡಿದ್ದೆ. ಆದರೆ ನನ್ನ ಬಳಿ ಹಣ ತೆಗೆದುಕೊಂಡು ಮತ್ತೆ ಅದೇ ರೀತಿ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ಸಂತ್ರಸ್ತೆಯ ಪತಿ ಉಲ್ಲೇಖಿಸಿದ್ದಾರೆ.

    ಈ ಬಗ್ಗೆ ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೇದೆ ವೆಂಕಟೇಶ ವಿರುದ್ಧ ಪ್ರಾಣ ಬೆದರಿಕೆ ಹಾಗೂ ಬ್ಲಾಕಮೇಲ್ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದೆ. ಪೇದೆ ವೆಂಕಟೇಶ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಪೋಲಿ ಪೇದೆ ವೆಂಕಟೇಶ ಪರಾರಿಯಾಗಿದ್ದಾನೆ. ಈ ಘಟನೆಯ ಕುರಿತು ಹೊಸಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಜಯಾ ಸ್ಮಾರಕದ ಮುಂದೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಪೇದೆ!

    ಜಯಾ ಸ್ಮಾರಕದ ಮುಂದೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಪೇದೆ!

    ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸ್ಮಾರಕಕ್ಕೆ ಭದ್ರತೆಗೆಂದು ನಿಯೋಜನೆಗೊಂಡಿದ್ದ ಪೊಲೀಸ್ ಪೇದೆಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

    ಮಧುರೈ ಮೂಲದ ಅರುಣ್ ರಾಜ್(28) ಆತ್ಮಹತ್ಯೆಗೆ ಶರಣಾದ ಪೊಲೀಸ್ ಪೇದೆ. ಮೃತ ಅರುಣ್ ಗ್ರೇಟರ್ ಚೆನ್ನೈ ಸಿಟಿ ಪೊಲೀಸ್ ನ ಶಸ್ತ್ರಾಸ್ತ್ರ ಪಡೆಯ ಪೇದೆಯಾಗಿದ್ದರು. ನಗರದ ಮರೀನಾ ಬೀಚ್‍ನಲ್ಲಿರುವ ಜಯಲಲಿತಾ ಸ್ಮಾರಕದ ಭದ್ರತೆಗೆ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿ ಪೈಕಿ ಅರುಣ್ ಕೂಡ ಒಬ್ಬರಾಗಿದ್ದರು.

    ಇಂದು ಬೆಳಗ್ಗೆ ಸ್ಮಾರಕದಲ್ಲಿ ಕರ್ತವ್ಯಕ್ಕೆ ಬಂದಿದ್ದ ಅರುಣ್ ಏಕಾಏಕಿ ತನ್ನ ‘303’ ಸರ್ವೀಸ್ ಬಂದೂಕಿನಿಂದ ಸ್ಮಾರಕ ಸ್ಥಳದಲ್ಲೇ ಗುಂಡು ಹಾರಿಸಿಕೊಂಡಿದ್ದಾರೆ. ಸ್ಥಳದಲ್ಲೇ ಅವರು ಕುಸಿದು ಬಿದ್ದಿದ್ದು, ತಕ್ಷಣವೇ ನಗರದ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲಿ ಪೇದೆ ಅರುಣ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಪೇದೆ ಅರುಣ್ ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುವುದರ ಬಗ್ಗೆ ಸುಳಿವು ಸಿಕ್ಕಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಗರ ಪೊಲೀಸ್ ಆಯುಕ್ತ ಎ.ಕೆ. ವಿಶ್ವನಾಥನ್ ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮರೀನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಕ್ಸಲ್ ದಮನಕ್ಕೆ ಬೀದರ್ ನ ಪೊಲೀಸ್ ಹುತಾತ್ಮ – ಸರ್ಕಾರ ಗೌರವದೊಂದಿಗೆ ಅಂತ್ಯಕ್ರಿಯೆ

    ನಕ್ಸಲ್ ದಮನಕ್ಕೆ ಬೀದರ್ ನ ಪೊಲೀಸ್ ಹುತಾತ್ಮ – ಸರ್ಕಾರ ಗೌರವದೊಂದಿಗೆ ಅಂತ್ಯಕ್ರಿಯೆ

    ಬೀದರ್: ನಕ್ಸಲ್ ನಿಗ್ರಹ ಪಡೆಯ ಹೆಡ್ ಕಾನ್ ಸ್ಟೇಬಲ್ ಬೀದರ್ ಮೂಲದ ಬಿ.ಸುಶೀಲ್‍ಕುಮಾರ್ ಅವರ ಸಕಲ ಸರ್ಕಾರಿ ಗೌರವದೊಂದಿಗೆ ಇಂದು ಸ್ವಗ್ರಾಮ ಮಂಗಲಪೇಟೆಯಲ್ಲಿರುವ ಮೇಥೋಡಿಯಸ್ ಚರ್ಚ್ ಬಳಿಯಲ್ಲಿ ಅಂತ್ಯಕ್ರಿಯೆ ನಡೆಯಿತು.

    ಶುಕ್ರವಾರ ತಡರಾತ್ರಿ ತೆಲಂಗಾಣ-ಛತ್ತೀಸ್‍ಗಢ ಗಡಿಯಲ್ಲಿ ನಕ್ಸಲ್ ಕಾರ್ಯಾಚರಣೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮಾವೋ ನಕ್ಸಲ್ ದಮನದಲ್ಲಿ ಬೀದರ್‍ನ ಮೂಲದ ಪೊಲೀಸ್ ಪೇದೆ ಬಿ ಸುಶೀಲ್‍ಕುಮಾರ್ ಹುತಾತ್ಮನಾಗಿದ್ದರು. ಕಾರ್ಯಾಚರಣೆಯಲ್ಲಿ ಹುತಾತ್ಮನಾದ ಬಿ. ಸುಶೀಲ್‍ಕುಮಾರ್ ಪಾರ್ಥಿವ ಶರೀರ ವಿಶೇಷ ಆಂಬುಲೆನ್ಸ್ ಮೂಲಕ ಬೀದರ್ ನಗರದ ಗ್ರೇಸ್ ಕಾಲೋನಿಯ ನಿವಾಸಕ್ಕೆ ಬಂದು ತಲುಪಿತ್ತು.

    ಹುತಾತ್ಮನ ಪಾರ್ಥಿವ ಶರೀರ ನಿವಾಸಕ್ಕೆ ಆಗಮಿಸುತ್ತಿದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು ಇಂದು ಬೀದರ್‍ನ ಮಂಗಲಪೇಟೆಯಲ್ಲಿರುವ ಮೇಥೋಡಿಯಸ್ ಚರ್ಚ್ ಬಳಿಯಲ್ಲಿ ಅಂತ್ಯಕ್ರಿಯೆ ನಡೆದಿದೆ. ಅಂತ್ಯಕ್ರಿಯೆಗೆ ತೆಲಂಗಾಣ ಡಿಜಿಪಿ ಮಹೇಂದ್ರಕುಮಾರ್ ರೆಡ್ಡಿ ಬಂದು ಗೌರವ ಸಲ್ಲಿಸಿದ್ದಾರೆ.

    ರಾಜ್ಯ ಹಾಗೂ ತೆಲಂಗಾಣ ಪೊಲೀಸ್ ರಿಂದ ಜಂಟಿ ಸಕಲ ಸರ್ಕಾರಿ ಗೌರವದೊಂದಿದೆ ಅಂತ್ಯಕ್ರಿಯೆ ನಡೆದಿದೆ. ಸಂಬಂಧಿಕರು ಹಾಗೂ ಪೊಲೀಸ್ ಬಾಂಧವರು ಭಾಗಿಯಾಗಿದ್ದರು.

    ಬಿ.ಸುಶೀಲ್‍ಕುಮಾರ್ ತೆಲಂಗಾಣದ ಹೈದರಾವಾದ್ ನ ಗ್ರೇಹಹುಣ್ಸ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಕಾರ್ಯಾಚರಣೆಯಲ್ಲಿ 10 ಜನ ನಕ್ಸಲರನ್ನು ಹತ್ಯೆ ಮಾಡಲಾಗಿದೆ.

  • ಹೆಲ್ಮೆಟ್ ಧರಿಸದಿದ್ದವರಿಗೆ ಉಚಿತವಾಗಿ ಹೆಲ್ಮೆಟ್ ನೀಡುತ್ತಿರುವ ಪೊಲೀಸ್ ಪೇದೆ

    ಹೆಲ್ಮೆಟ್ ಧರಿಸದಿದ್ದವರಿಗೆ ಉಚಿತವಾಗಿ ಹೆಲ್ಮೆಟ್ ನೀಡುತ್ತಿರುವ ಪೊಲೀಸ್ ಪೇದೆ

    ನವದೆಹಲಿ: ಹೆಲ್ಮೆಟ್ ಧರಿಸದಿದ್ದರೆ ಅಡ್ಡ ಹಾಕಿ ದಂಡ ವಿಧಿಸುವ ಪೊಲೀಸರನ್ನು ನೋಡಿದ್ದೇವೆ. ಆದರೆ ಪೊಲೀಸ್ ಅಧಿಕಾರಿಯೊಬ್ಬರು ಹೆಲ್ಮೆಟ್ ಧರಿಸದಿದ್ದವರಿಗೆ ಉಚಿತವಾಗಿ ಹೆಲ್ಮೆಟ್ ನನ್ನು ಉಡುಗೊರೆ ಕೊಡುತ್ತಿದ್ದಾರೆ.

    ದೆಹಲಿಯ ರೋಹಿಣಿ ಪ್ರದೇಶದ ಪೊಲೀಸ್ ಪೇದೆ ಸಂದೀಪ್ ಈ ಕೆಲಸ ಮಾಡುತ್ತಿದ್ದಾರೆ. ಸಂದೀಪ್ ಅವರು ಟ್ರಾಫಿಕ್ ನಿಯಮ ಪ್ರಕಾರ, ನಿಯಮ ಉಲ್ಲಂಘಿಸುವ ಬೈಕ್ ಸವಾರರನ್ನು ತಡೆಡು ಮೊದಲು ದಂಡ ಹಾಕುತ್ತಾರೆ. ನಂತರ ಹೆಲ್ಮೆಟ್ ಹಾಕಬೇಕಾದ ಅಗತ್ಯತೆಯ ಬಗ್ಗೆ ತಿಳಿಸಿ ಹೇಳುತ್ತಾರೆ. ಬಳಿಕ ಒಂದು ಹೆಲ್ಮೆಟ್ ನನ್ನು ಉಚಿತವಾಗಿ ನೀಡುತ್ತಾರೆ.

    ಸಂದೀಪ್ ಅವಸರ ಮಾಡದೇ ಸವಾರರನ್ನು ತಡೆದು ಮಾತನಾಡಿಸುತ್ತಾರೆ. ಏಕೆ ಹೆಲ್ಮೆಟ್ ಧರಿಸುವುದಿಲ್ಲ ಎಂದು ಕೇಳುತ್ತಾರೆ. ಬಳಿಕ ಧರಿಸದೆ ಇರುವುದರಿಂದ ಆಗುವ ಅಪಾಯಗಳು ಮತ್ತು ಧರಿಸುವುದರಿಂದ ಸಿಗುವ ಸುರಕ್ಷತೆಯನ್ನು ವಿವರಿಸುತ್ತಾರೆ. ಕೊನೆಗೆ ಸವಾರರು ಪ್ರಾಮಾಣಿಕವಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡರೆ ತಾವೇ ಉಚಿತ ಹೆಲ್ಮೆಟ್ ಕೊಟ್ಟು ಶುಭ ಹಾರೈಸಿ ಕಳುಹಿಸಿಕೊಡುತ್ತಾರೆ.

    ಇದು ಪೊಲೀಸ್ ಇಲಾಖೆಯ ಕಾರ್ಯಕ್ರಮವಲ್ಲ. ಇದು ನನ್ನ ಯೋಚನೆಯಾಗಿದ್ದು, ನನ್ನ ಹಣವನ್ನೆ ಬಳಸುತ್ತಿದ್ದೇನೆ. ದೆಹಲಿ ಪೊಲೀಸ್ ಇಲಾಖೆ ಸೇರಿದ ಮೇಲೆ ನಾನು ತುಂಬಾ ಅಪಘಾತಗಳನ್ನು ಗಮನಿಸಿದ್ದೇನೆ. ಶೇಕಡ 90 ರಷ್ಟು ಪ್ರಕರಣಗಳು ಬೈಕ್ ಸವಾರರು ಹೆಲ್ಮೆಟ್ ಹಾಕಿಕೊಳ್ಳದಿರುವುದಿಂದ ಸಾವಿಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಆದ್ದರಿಂದ ಜಾಗೃತಿ ಮೂಡಿಸುವ ಉದ್ದೇಶದಿಂದ ಉಚಿತ ಹೆಲ್ಮೆಟ್ ಕೊಡಲು ಆರಂಭಿಸಿದ್ದೇನೆ ಎಂದು ಸಂದೀಪ್ ತಿಳಿಸಿದರು.

    ಪ್ರತಿನಿತ್ಯ ಕೆಲಸದ ವೇಳೆ ಹೆಲ್ಮೆಟ್ ವಿತರಿಸುವುದರ ಜೊತೆಗೆ ಸಂದೀಪ್ ಅವರು ಹಬ್ಬದ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ರಕ್ಷಾ ಬಂಧನ ಮತ್ತು ಭೈಯಾ ದೂಜ್ ಸೇರಿದಂತೆ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳ ಜೊತೆ ಸಮಾಲೋಚನೆ ನಡೆಸುತ್ತಾರೆ. ಸುರಕ್ಷಾ ನಿಯಮದ ಬಗ್ಗೆ ಅವರಿಗೆ ತಿಳಿಸುತ್ತಾರೆ. ಇವರ ಈ ಕಾರ್ಯಕ್ಕೆ ಪೊಲೀಸ್ ಇಲಾಖೆಯಿಂದ ಮತ್ತು ಅವರ ಸಹೊದ್ಯೋಗಿಗಳ ಬೆಂಬಲ ಇದೆ.

    ಸಂದೀಪ್ ಮುಂದಿನ ದಿನಗಳಲ್ಲಿ ವಾಹನ ಚಲಾಯಿಸುವ ವೇಳೆ ಮೊಬೈಲ್ ಬಳಸುವುದು ಮತ್ತು ಸೀಟ್ ಬೆಲ್ಟ್‍ಗಳನ್ನು ಧರಿಸದಿರುವುದರ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಯೋಚನೆಯನ್ನು. ಇವರ ಈ ಸಮಾಜಮುಖಿ ಕೆಲಸಕ್ಕೆ ದೆಹಲಿ ಪೊಲೀಸ್ ಇಲಾಖೆಯು ಅಭಿನಂದಿಸಿ ಪ್ರೋತ್ಸಾಹಿಸಿದೆ.

  • ಹುಡುಗನನ್ನು ಕಿಡ್ನ್ಯಾಪ್ ಮಾಡಿ ಕೊಲೆಗೆ ಯತ್ನಿಸಿದ್ದ ‘ಪೇದೆ’ ಅರೆಸ್ಟ್!

    ಹುಡುಗನನ್ನು ಕಿಡ್ನ್ಯಾಪ್ ಮಾಡಿ ಕೊಲೆಗೆ ಯತ್ನಿಸಿದ್ದ ‘ಪೇದೆ’ ಅರೆಸ್ಟ್!

    ಬೀದರ್: ಹೋಮ್ ಗಾರ್ಡ್ ಒಬ್ಬ ನಾನು ಪೊಲೀಸ್ ಕಾನ್ ಸ್ಟೇಬಲ್ ಎಂದು ಹುಡುಗನನ್ನು ಕಿಡ್ನ್ಯಾಪ್ ಮಾಡಿ ಒಂದು ರೂಮ್ ನಲ್ಲಿ ಕೂಡಿ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಖೇಡ್ ಗ್ರಾಮದ ಸೂರ್ಯಕಾಂತ್ ಎಂಬ ಹೋಮ್ ಗಾರ್ಡ್ ಫೈನಾನ್ಸ್ ಮಾಡಿಕೊಂಡಿದ್ದ ಹುಡುಗನನ್ನು ಕಿಡ್ನ್ಯಾಪ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟು ಲಾಡ್ಜ್ ನ ರೂಮ್‍ ನಲ್ಲಿ ಕೂಡಿ ಹಾಕಿದ್ದನು. ನಂತರ ಫೈನಾನ್ಸ್ ವ್ಯಕ್ತಿಯಿಂದ 50 ಸಾವಿರ ರೂ. ಪಡೆದು ರೈಲ್ವೆ ಟ್ರಾಕ್ ಮೇಲೆ ಹಗ್ಗದಿಂದ ಕಟ್ಟಿ ಹಾಕಿ ಕೊಲೆ ಮಾಡಲು ಯತ್ನಿಸಿದ್ದಾನೆ.

    ಆರೋಪಿಯಿಂದ ತಪ್ಪಿಸಿಕೊಂಡು ಬಂದ ವ್ಯಕ್ತಿ ಮಾರ್ಕೆಟ್ ಪೊಲೀಸರಿಗೆ ವಿಷಯ ತಿಳಿಸಿ ದೂರು ದಾಖಲಿಸಿದ್ದಾನೆ. ದೂರು ದಾಖಲಾಗುತ್ತಿದ್ದಂತೆ ಎಸ್‍ಪಿ ದೇವರಾಜ್ ಡಿ ಮಾರ್ಗದರ್ಶನದಲ್ಲಿ ಬೀದರ್ ಪೊಲೀಸರು ಮಿಂಚಿನ ಕಾರ್ಯಚರಣೆ ಮಾಡಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

    ಹೋಮ್ ಗಾರ್ಡ್ ಆಗಿದ್ದ ಸೂರ್ಯಕಾಂತ್ ನಾನು ಪೊಲೀಸ್ ಕಾನ್ ಸ್ಟೇಬಲ್ ಎಂದು ಹೇಳಿಕೊಂಡು ಹಲವು ವ್ಯಕ್ತಿಗಳನ್ನು ಇದೆ ರೀತಿ ವಂಚಿಸಿದ್ದಾನೆ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ.

  • ಕರ್ತವ್ಯ ನಿರತ ಪೊಲೀಸ್ ಪೇದೆ ಹೃದಯಾಘಾತದಿಂದ ಸಾವು

    ಕರ್ತವ್ಯ ನಿರತ ಪೊಲೀಸ್ ಪೇದೆ ಹೃದಯಾಘಾತದಿಂದ ಸಾವು

    ಕೊಪ್ಪಳ: ಕರ್ತವ್ಯ ನಿರತ ಪೊಲೀಸ್ ಪೇದೆಯೊಬ್ಬರಿಗೆ ಹೃದಯಾಘಾತವಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಕೊಪ್ಪಳದ ಡಿ.ಆರ್ ಪೊಲೀಸ್ ಪೇದೆಯಾಗಿದ್ದ 40 ವರ್ಷದ ಧರ್ಮಣ್ಣ ಪೂಜಾರ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇಂದು ಎಂದಿನಂತೆ ಬೆಳಗಿನ ಜಾವ ಕರ್ತವ್ಯದಲ್ಲಿದ್ದಾಗ ಧರ್ಮಣ್ಣ ಅವರಿಗೆ ಹೃದಯಾಘಾತವಾಗಿತ್ತು. ತಕ್ಷಣ ಸಹಚರ ಪೊಲೀಸ್ ಪೇದೆಗಳು ಅವರನ್ನು ಸಮೀಪದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಅಸುನೀಗಿದ್ದಾರೆ.

    ಮೃತ ಧರ್ಮಣ್ಣ ಅವರು ಹೈವೇ ಪೆಟ್ರೋಲಿಂಗ್ ವಾಹನದ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು.