Tag: Police Constable

  • ಕೋರ್ಟ್ ಆವರಣದಲ್ಲಿಯೇ ಖಾಕಿಯ ಲಂಚಾವತಾರ

    ಕೋರ್ಟ್ ಆವರಣದಲ್ಲಿಯೇ ಖಾಕಿಯ ಲಂಚಾವತಾರ

    -ವಾರೆಂಟ್ ಜಾರಿಯಾದ ಆರೋಪಿಯಿಂದ ಲಂಚ

    ಬಳ್ಳಾರಿ: ವಾರೆಂಟ್ ಜಾರಿಯಾಗಿದ್ದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾದ ಪೊಲೀಸರೇ ಆತನಿಂದಲೇ ಹಣ ಪಡೆದು ನ್ಯಾಯಾಲಯಕ್ಕೆ ಮೋಸ ಮಾಡಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ನಗರದ ಹನುಮಂತ ಎನ್ನುವ ಆರೋಪಿಗೆ ಮಟ್ಕಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ನ್ಯಾಯಾಲಯ ವಾರೆಂಟ್ ಜಾರಿ ಮಾಡಿತ್ತು. ಆದರೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾದ ಪೊಲೀಸರು ಆರೋಪಿ ಹನುಮಂತ ಊರಿನಲ್ಲಿ ಇಲ್ಲ ಅಂತಾ ನ್ಯಾಯಾಲಯಕ್ಕೆ ಹೇಳಲು ಆತನಿಂದ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ.

    ನ್ಯಾಯಾಲಯದ ಆವರಣದಲ್ಲೆ ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆಯ ಪೇದೆಗಳಾದ ಶ್ರೀನಿವಾಸ್ ಹಾಗೂ ಮುಜೀಬ್ ಎಂಬವರು ಆರೋಪಿಯಿಂದ ನ್ಯಾಯಾಲಯದ ಆವರಣದಲ್ಲೆ ಹಣ ಪಡೆದಿದ್ದಾರೆ. ಈ ಎಲ್ಲ ದೃಶ್ಯಗಳು ಮೊಬೈಲಿನಲ್ಲಿ ಸೆರೆಯಾಗಿವೆ.

    ಆರೋಪಿ ಹನುಮಂತ ನಿಂದ ನ್ಯಾಯಲಯದ ಆವರಣದಲ್ಲಿ ಎರಡು ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಪೊಲೀಸ್ ಪೇದೆಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಪೇದೆಗಳ ವಿರುದ್ಧ ಹಿರಿಯ ಅಧಿಕಾರಿಗಳು ಎನೂ ಕ್ರಮ ಕೈಗೊಳ್ಳುತ್ತಾರೆ ಅನ್ನೋದು ಇದೀಗ ಕುತೂಹಲ ಮೂಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಕ್ಸಲರಿಂದ ಹತನಾಗಿದ್ದ ಅಣ್ಣನ ಪ್ರತಿಮೆಗೆ ರಾಕಿ ಕಟ್ಟಿದ ಸಹೋದರಿ!

    ನಕ್ಸಲರಿಂದ ಹತನಾಗಿದ್ದ ಅಣ್ಣನ ಪ್ರತಿಮೆಗೆ ರಾಕಿ ಕಟ್ಟಿದ ಸಹೋದರಿ!

    ರಾಯ್ಪುರ್: ನಕ್ಸಲರ ದಾಳಿಯಿಂದ ವೀರಮರಣವನ್ನಪ್ಪಿದ್ದ ಪೊಲೀಸ್ ಪೇದೆಯ ಪ್ರತಿಮೆಗೆ ಆತನ ತಂಗಿಯು ರಾಕಿ ಕಟ್ಟುವ ಮೂಲಕ ಛತ್ತೀಸಘಡ್‍ದ ದಾಂತೆವಾಡದಲ್ಲಿ ರಕ್ಷಾಬಂಧನವನ್ನು ಆಚರಿಸಿದ್ದಾರೆ.

    ದಾಂತೆವಾಡದ ಶಾಂತಿ ಉದೆ ಅಣ್ಣನ ಪ್ರತಿಮೆಗೆ ರಾಕಿ ಕಟ್ಟಿ ಹಬ್ಬವನ್ನು ಆಚರಿಸಿದ್ದಾರೆ. ಶಾಂತಿಯ ಅಣ್ಣ ರಾಜೇಶ್ ಗಾಯಕ್ವಾಡ್ ಪೊಲೀಸ್ ಪೇದೆಯಾಗಿದ್ದರು. 2014ರ ನಕ್ಸಲರ ಕಾರ್ಯಾಚರಣೆಯಲ್ಲಿ ಗುಂಡಿನ ದಾಳಿಗೆ ಸಿಲುಕಿ ವೀರಮರಣವನ್ನಪ್ಪಿದ್ದರು. ಅಂದಿನಿಂದಲೂ ತಮ್ಮ ಊರಿನಲ್ಲಿರುವ ಅಣ್ಣನ ಪ್ರತಿಮೆಗೆ ರಾಕಿ ಕಟ್ಟುವ ಸಂಪ್ರದಾಯವನ್ನು ಆರಂಭಿಸಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನನ್ನ ಅಣ್ಣನನ್ನು 2014ರ ಮಾರ್ಚ್ 11ರಂದು ನಕ್ಸಲ್ ಕಾರ್ಯಾಚರಣೆಗಾಗಿ ಸುಕ್ಮಾದ ತೊಂಗಾಪಾಲ್ ಪ್ರದೇಶಕ್ಕೆ ನೇಮಕ ಮಾಡಿದ್ದರು. ಆದರೆ ಅವನು ನಕ್ಸಲರ ದಾಳಿಗೆ ಹುತಾತ್ಮನಾದ. ನನ್ನ ಒಬ್ಬನೇ ಒಬ್ಬ ಅಣ್ಣನ ಸಾವಿನಿಂದಾಗಿ ನನಗೆ ತುಂಬಾ ದುಃಖವಾಯಿತು. ಕೊನೆಯವರೆಗೂ ರಾಕಿ ಕಟ್ಟುವ ಆಸೆಯಿಟ್ಟುಕೊಂಡಿದ್ದ ನನಗೆ ನಿರಾಸೆಯಾಯಿತು. ಹೀಗಾಗಿ ನಾನು ಅಂದಿನಿಂದಲೂ ನನ್ನ ಅಣ್ಣನ ಪ್ರತಿಮೆಗೆ ರಾಕಿ ಕಟ್ಟುವ ಮೂಲಕ ಸಂಭ್ರಮಪಡುತ್ತೇನೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಬ್ ಇನ್ಸ್‌ಪೆಕ್ಟರ್‌ನಿಂದ ಹೆಡ್ ಕಾನ್ಸ್‌ಟೇಬಲ್ ಮೇಲೆಯೇ ಹಲ್ಲೆ!

    ಸಬ್ ಇನ್ಸ್‌ಪೆಕ್ಟರ್‌ನಿಂದ ಹೆಡ್ ಕಾನ್ಸ್‌ಟೇಬಲ್ ಮೇಲೆಯೇ ಹಲ್ಲೆ!

    ದಾವಣಗೆರೆ: ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ಅಧಿಕಾರಿಯೊಬ್ಬರು ಹೆಡ್ ಕಾನ್ಸ್‌ಟೇಬಲ್ ಮೇಲೆಯೇ ಹಲ್ಲೆ ನಡೆಸಿದ್ದಲ್ಲದೇ, ಗೂಂಡಾಗಳನ್ನು ಕರೆಸಿ ಹಲ್ಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ವಿದ್ಯಾನಗರ ಪೊಲೀಸ್ ಠಾಣೆಯ ಹನುಮಂತಪ್ಪ ಹಲ್ಲೆಗೊಳಗಾದ ಹೆಡ್‍ ಕಾನ್ಸ್‌ಟೇಬಲ್ ಆಗಿದ್ದಾರೆ. ಅದೇ ಠಾಣೆಯ ಸಬ್ ಇನ್ಸ್‌ಪೆಕ್ಟರ್‌ ಸಿದ್ದೇಶ್ ಹಲ್ಲೆಮಾಡಿದ್ದಾರೆ. ಕಳೆದ ಶುಕ್ರವಾರ ಠಾಣಾಧಿಕಾರಿ ನೇಮಕ ವಿಚಾರದಲ್ಲಿ ಪಿಎಸ್‍ಐ ಹಾಗೂ ಹೆಡ್ ಕಾನ್ಸಟೇಬಲ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದರಿಂದ ಸಿಟ್ಟಿಗೆದ್ದ ಪಿಎಸ್‍ಐ ಕಾನ್ಸಟೇಬಲ್ ಹನುಮಂತಪ್ಪನವರನ್ನು ನಗರದ ಆಫೀಸರ್ಸ್ ಕ್ಲಬ್ ಬಳಿ ಬರಲು ತಿಳಿಸಿದ್ದಾರೆ.

    ಈ ವೇಳೆ ಸ್ಥಳಕ್ಕೆ ಆಗಮಿಸಿದ ಹನುಮಂತಪ್ಪನವರ ಮೇಲೆ ಪಿಎಸ್‍ಐ ನನ್ನ ವಿರುದ್ಧವೇ ಮಾತನಾಡುತ್ತೀಯ ಎಂದು ಏಕಾಏಕಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಹನುಮಂತಪ್ಪನವರ ಮುಖಕ್ಕೆ ಬೂಟುಗಾಲಿನಿಂದಲೂ ಹಲ್ಲೆ ನಡೆಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಪಿಎಸ್‍ಐ ಇಬ್ಬರು ಗೂಂಡಾಗಳನ್ನು ಕರೆಸಿ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ಗಂಭೀರವಾಗಿ ಹಲ್ಲೆಗೊಳಗಾದ ಹನುಮಂತಪ್ಪನವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಪಿಎಸ್‍ಐ ಸಿದ್ದೇಶ್ ವಿರುದ್ಧ ಜಿಲ್ಲಾ ವರಿಷ್ಠಾಧಿಕಾರಿ ಹಾಗೂ ಐಜಿಯವರಿಗೆ ದೂರು ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೊಲೀಸ್ ಪೇದೆಗಳ ಟೋಪಿ ಬದಲಾವಣೆ?

    ಪೊಲೀಸ್ ಪೇದೆಗಳ ಟೋಪಿ ಬದಲಾವಣೆ?

    ಬೆಂಗಳೂರು: ಇನ್ಮುಂದೆ ಪೊಲೀಸ್ ಪೇದೆಗಳ ಟೋಪಿ ಬದಲಾವಣೆಯಾಗುತ್ತಿದ್ದು, ಇನ್ಸ್ಪಕ್ಟರ್ ಗಳಿಗಿದ್ದ ಕ್ಯಾಪ್ ಮಾದರಿಯಲ್ಲಿ ಟೋಪಿ ಕೊಡಲಾಗುತ್ತಿದೆ.

    ಈ ಹಿಂದೆ ಇದ್ದ ಕ್ಯಾಪ್‍ಗಳು ಆರೋಗ್ಯಕರವಾಗಿರಲಿಲ್ಲ. ಅಷ್ಟೇ ಅಲ್ಲದೇ ಕ್ಯಾಪ್‍ಗಳು ಹೆಚ್ಚಿನ ತೂಕ ಇತ್ತು. ಇದರಿಂದಾಗಿ ಕುತ್ತಿಗೆ ನೋವು, ತಲೆ ನೋವು ಕಾಣಿಸಿಕೊಳ್ಳುತ್ತಿತ್ತು. ಹಾಗಾಗಿ ಗೃಹ ಇಲಾಖೆ ಬದಲಾವಣೆ ಮಾಡುವಂತೆ ಮನವಿ ಮಾಡಿಕೊಂಡಿತ್ತು. ಇದನ್ನು ಓದಿ: ಮಹಿಳಾ ಪೊಲೀಸರ ಖಾಕಿ ಸೀರೆ, ಸಲ್ವಾರ್ ಯೂನಿಫಾರ್ಮ್ ಗೆ ಬ್ರೇಕ್!

    ಇದಕ್ಕೆ ಸರ್ಕಾರ ಒಪ್ಪಿದರೆ ಎಲ್ಲಾ ಪೊಲೀಸರಿಗೆ ಟೋಪಿ ಬದಲಾವಣೆ ಮಾಡುವ ಸಾಧ್ಯತೆಗಳಿವೆ. ಹಾಗಾಗಿ ಡಿಜಿ ಐಜಿಪಿ ಕಚೇರಿಯಲ್ಲಿ ಟೋಪಿಯನ್ನು ತೊಟ್ಟು ಬದಲಾವಣೆ ಪ್ರಯೋಗವನ್ನು ನಡೆಸಿದರು. ಇದನ್ನು ಓದಿ: ಡೊಳ್ಳು ಹೊಟ್ಟೆ ಬೆಳೆಸಿಕೊಂಡಿರುವ ಪೊಲೀಸರೇ ಎಚ್ಚರ!

  • ಕೊಟ್ಟೂರೇಶ್ವರ ದೇವರ ವಿರುದ್ಧ ಅವಹೇಳನಕಾರಿ ಪೋಸ್ಟ್ – ಪೊಲೀಸ್ ಪೇದೆ ವಿರುದ್ಧ ಎಫ್‍ಐಆರ್ ದಾಖಲು!

    ಕೊಟ್ಟೂರೇಶ್ವರ ದೇವರ ವಿರುದ್ಧ ಅವಹೇಳನಕಾರಿ ಪೋಸ್ಟ್ – ಪೊಲೀಸ್ ಪೇದೆ ವಿರುದ್ಧ ಎಫ್‍ಐಆರ್ ದಾಖಲು!

    ಬಳ್ಳಾರಿ: ದೇವರ ವಿರುದ್ಧ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಪೇದೆ ವಿರುದ್ಧ ಹೊಸಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ಬೆಂಗಳೂರಿನ ಜಿಲಾ ಶಸ್ತ್ರಸಜ್ಜಿತ (ಡಿಎಆರ್) ಪೊಲೀಸ್ ಪೇದೆಯಾಗಿರುವ ಕೃಷ್ಣ ಕುಮಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪದಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ.

    2017 ರಲ್ಲಿ ಜಿಲ್ಲೆಯ ಕೊಟ್ಟೂರಿನ ಕೊಟ್ಟೂರೇಶ್ವರ ಜಾತ್ರೆಯ ವೇಳೆ ಹಳೆಯ ರಥ ಮುಗುಚಿಬಿದ್ದಿತ್ತು. ಈ ವೇಳೆ ಕೊಟ್ಟೂರೇಶ್ವರ ದೇವರು ವಿರುದ್ಧ ಎಲ್ಲಿದ್ದಾನೆ? ಬರಗಾಲದಲ್ಲೂ ಏಕೆ ರಥ ಎಳೆದಿರಿ? ಒಳ್ಳೆದಾಗಲಿ ಎಂದು ತಾನೇ, ರಥ ಏಕೆ ಮುರಿದು ಬಿತ್ತು? ಕಲ್ಲು ಹೊಡೀರಿ ನಿಮ್ಮ ದೇವರ ಗುಡಿಗೆ. ದೇವರು ಗುಡಿ ಬಿಟ್ಟು ಹೊರಗೆ ಬರಲಿ. ಯಾಕೆ ಜನರನ್ನು ನೋಯಿಸುವ ದೇವರು. ಉಗೀರಿ ನಿಮ್ಮ ದೇವರ ಮುಖಕ್ಕೆ. ಗಾಯಗೊಂಡ ಜನರ ಚಿಕಿತ್ಸೆ ದೇವರು ಹಣ ಕೋಡುತ್ತಾನೆಯೇ, ಉತ್ತರ ನೀಡಿ ನಾಸ್ತಿಕರೇ ಎಂದು ಪ್ರಶ್ನಿಸಿ ಪೇದೆ ಕೃಷ್ಣಕುಮಾರ್ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದರು.

    ಈ ಪೋಸ್ಟ್ ಗೆ ಕೆರಳಿದ್ದ ಕೊಟ್ಟೂರೇಶ್ವರ ನ ಭಕ್ತರು ಪ್ರತಿಭಟನೆ ನಡೆಸಿ ಕೃಷ್ಣಕುಮಾರ್ ವಿರುದ್ಧ ದೂರು ನೀಡಿದ್ದರು. ಆದರೆ ಇದುವರೆಗೂ ಪೇದೆಯ ವಿರುದ್ಧ ಎಫ್‍ಐಆರ್ ದಾಖಲಾಗಿರಲಿಲ್ಲ. ಇದೀಗ ಹೊಸಪೇಟೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾದ ಬಳಿಕ ಪೊಲೀಸರು ಎಫ್‍ಐಆರ್ ದಾಖಲಿಸಿ ಪ್ರಕರಣದ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಾರೆ.

    ಅಂದು ಏನಾಗಿತ್ತು?
    2017ರ ಫೆಬ್ರವರಿ 21 ರಂದು ಜಿಲ್ಲೆಯ ಕೂಡ್ಲಗಿ ತಾಲೂಕಿನ ಕೊಟ್ಟೂರು ಗುರು ಬಸವೇಶ್ವರ ರಥೋತ್ಸವ ವೇಳೆಯಲ್ಲಿ ಚಕ್ರದ ಅಚ್ಚು ಮರಿದು ರಥ ಮುಗುಚಿ ಬಿದ್ದಿತ್ತು. ರಥ ಎಳೆಯುವ ವೇಳೆ ಚಕ್ರದ ಅಚ್ಚು ಮುರಿದು 60 ಅಡಿ ಎತ್ತರದ ರಥ ನೆರೆದಿದ್ದ ಅಪಾರ ಭಕ್ತ ಸಾಗರದ ಮಧ್ಯೆ ಬಿದ್ದಿತ್ತು. ಬಳಿಕ ಮುಂದಿನ ವರ್ಷದ ಜಾತ್ರೆಯ ವೇಳೆಗೆ ಸರ್ಕಾರ ನೂತನ ರಥ ನಿರ್ಮಾಣಕ್ಕಾಗಿ 2 ಕೋಟಿ ರೂಪಾಯಿ ಅನುದಾನ ನೀಡಿತ್ತು. 2018 ಫೆಬ್ರುವರಿ 14 ರಂದು ರಥೋತ್ಸದಕ್ಕೆ ನೂತನ ರಥ ಸಿದ್ಧಪಡಿಸಲಾಗಿತ್ತು. ಪ್ರತಿ ವರ್ಷ ನಡೆಯುವ ಗುರು ಬಸವೇಶ್ವರ ರಥೋತ್ಸವದಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಾರೆ.

  • ಪೇದೆ ಡ್ಯೂಟಿಯಲ್ಲಿ, ಪತ್ನಿ ಪಿಎಸ್‍ಐ ತೆಕ್ಕೆಯಲ್ಲಿ- ಪಲ್ಲಂಗದಾಟದ ವೇಳೆಯೇ ಕ್ವಾರ್ಟರ್ಸ್‍ಗೆ ಬಿತ್ತು ಬೆಂಕಿ!

    ಪೇದೆ ಡ್ಯೂಟಿಯಲ್ಲಿ, ಪತ್ನಿ ಪಿಎಸ್‍ಐ ತೆಕ್ಕೆಯಲ್ಲಿ- ಪಲ್ಲಂಗದಾಟದ ವೇಳೆಯೇ ಕ್ವಾರ್ಟರ್ಸ್‍ಗೆ ಬಿತ್ತು ಬೆಂಕಿ!

    ಬಳ್ಳಾರಿ: ಪೊಲೀಸ್ ಪೇದೆ ಡ್ಯೂಟಿಯಲ್ಲಿದ್ದರೇ, ಅಕ್ರಮ ತಡೆಯಬೇಕಾದ ಪಿಎಸ್‍ಐ ಒಬ್ಬರು ಪೇದೆಯ ಪತ್ನಿಯೊಂದಿಗೆ ಪಲ್ಲಂಗದಾಟವಾಡಲು ಹೋಗಿ ಜೈಲು ಪಾಲಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಕಿರಣ ಸಾಮ್ರಾಟ್ ಬಳ್ಳಾರಿ ಪೊಲೀಸ್ ಇಲಾಖೆಯ ವೈಯರ್ ಲೆಸ್ ವಿಭಾಗದ ಪಿಎಸ್‍ಐಯಾಗಿದ್ದು, ಈತ ಪೊಲೀಸ್ ಪೇದೆಯೊಬ್ಬರ ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದನು. ಇಬ್ಬರು ಪೊಲೀಸ್ ಇಲಾಖೆಯ ಡಿಆರ್ ಕ್ವಾರ್ಟರ್ಸ್ ನ ಮನೆಯಲ್ಲಿ ಕುಡಿದು ಸಿಗರೇಟ್ ಸೇದಿ ಮನೆತುಂಬಾ ಬಿಸಾಕಿ ಪಲ್ಲಂಗದಾಟವಾಡುತ್ತಿದ್ದರಂತೆ. ಈ ವೇಳೆ ಕ್ವಾರ್ಟರ್ಸ್ ಗೆ ಬೆಂಕಿ ಬಿದ್ದಿದ್ದು, ಮನೆಯೆಲ್ಲಾ ಸುಟ್ಟು ಹೋಗಿದೆ.

    ಪಿಎಸ್‍ಐ ಕಿರಣ ಸಾಮ್ರಾಟ್ ಹಾಗೂ ಪೇದೆಯ ಪತ್ನಿಯ ಮಧ್ಯೆ ಹಲವಾರು ದಿನಗಳಿಂದ ಅನೈತಿಕ ಸಂಬಂಧವಿತ್ತು. ಇಬ್ಬರ ಮಧ್ಯೆ ಇತ್ತೀಚಿಗೆ ಸಣ್ಣ ಮಟ್ಟದ ಮನಸ್ತಾಪ ಸಹ ಏರ್ಪಟ್ಟಿತ್ತು. ಹೀಗಾಗಿ ಪಿಎಸ್‍ಐ ಕಿರಣ ಸಾಮ್ರಾಟರ ಮನೆಯಲ್ಲಿ ಎರಡು ದಿನಗಳ ಕಾಲ ಪೇದೆಯ ಪತ್ನಿ ವಾಸವಿದ್ದಳು. ಆಗ ಆಕೆಯನ್ನು ಸಮಾಧಾನಪಡಿಸಿದ ಪಿಎಸ್‍ಐ ಆಕೆಯೊಂದಿಗೆ ಕುಡಿದು ಸಿಗರೇಟ್ ಸೇದಿ ಮನೆ ತುಂಬಾ ಬಿಸಾಡಿದ್ದಾನೆ ಎಂದು ಹೇಳಲಾಗುತ್ತಿದೆ.

    ಈ ಹಿನ್ನೆಲೆಯಲ್ಲಿ ಕ್ವಾರ್ಟರ್ಸ್ ನಲ್ಲಿದ್ದ ಸೋಫಾಗೆ ಬೆಂಕಿ ಹೊತ್ತಿಕೊಂಡು ಮನೆಯಲ್ಲಿದ್ದ ವಸ್ತುಗಳೆಲ್ಲಾ ಬೆಂಕಿಗೆ ಆಹುತಿಯಾಗಿದೆ. ಅಲ್ಲದೇ ಬೆಂಕಿ ಅನಾಹುತದಿಂದ ಅಕ್ಕಪಕ್ಕದಲ್ಲಿದ್ದ ಇತರೆ ಅಧಿಕಾರಿಗಳ ಕುಟುಂಬದವರ ಆಪತ್ತಿಗೂ ಕಾರಣವಾಗಿದೆ. ಹೀಗಾಗಿ ಇಬ್ಬರ ಅನೈತಿಕ ಸಂಬಂಧದಿಂದ ಪೊಲೀಸ್ ಕ್ವಾರ್ಟರ್ಸ್ ಸುಟ್ಟು ಹೋದ ಪರಿಣಾಮ ಹಿರಿಯ ಅಧಿಕಾರಿಗಳು ಪಿಎಸ್‍ಐ ಕಿರಣ ಸಾಮ್ರಾಟ್ ಹಾಗೂ ಪೇದೆಯ ಪತ್ನಿ ವಿರುದ್ಧ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ.

  • ಕೇಳಿದ್ದು 30 ದಿನ, ಸಿಕ್ಕಿದ್ದು 45 ದಿನ- ಪೊಲೀಸ್ ಪೇದೆ ಬರೆದ ರಜೆ ಪತ್ರ ಫುಲ್ ವೈರಲ್

    ಕೇಳಿದ್ದು 30 ದಿನ, ಸಿಕ್ಕಿದ್ದು 45 ದಿನ- ಪೊಲೀಸ್ ಪೇದೆ ಬರೆದ ರಜೆ ಪತ್ರ ಫುಲ್ ವೈರಲ್

    ಲಕ್ನೋ: ಪೊಲೀಸರು ತಮ್ಮ ವೈಯಕ್ತಿಯ ಜೀವನದಿಂದ ದೂರವಿದ್ದು, ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಆದರೆ ಈಗ ಪೊಲೀಸ್ ಪೇದೆಯೊಬ್ಬರು ರಜೆ ಕೋರಿ ಅಧಿಕಾರಿಗಳಿಗೆ ಬರೆದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಪೊಲೀಸ್ ಕಾನ್ಸ್ ಟೇಬಲ್ ಸೋಮ್‍ ಸಿಂಗ್ ಎಂಬವರು ರಜೆಗಾಗಿ ಬರೆದ ಪತ್ರ ವೈರಲ್ ಆಗಿದೆ. ಸೋಮ್‍ಸಿಂಗ್ ತಮ್ಮ ವೈಯಕ್ತಿಕ ಜೀವನದಿಂದ ದೂರು ಇದ್ದು ಮರಳಿ ಕುಟುಂಬಕ್ಕೆ ಹೋಗಬೇಕೆಂದು ನಿರ್ಧರಿಸಿದ್ದರು. ಆದ್ದರಿಂದ ಅವರು ಒಂದು ತಿಂಗಳ ರಜೆಯನ್ನು ಕೋರಿ ಅರ್ಜಿಯನ್ನು ಸಲ್ಲಿಸಿದರು. ಆದರೆ ಅವರು ರಜೆಗಾಗಿ ಉಲ್ಲೇಖಿಸಿದ ಕಾರಣ ಅವರ ಅರ್ಜಿಯಲ್ಲಿ ಎಲ್ಲರ ಗಮನ ಸೆಳೆದಿದ್ದು, ಆ ಪತ್ರವೀಗ ವೈರಲ್ ಆಗಿದೆ.

    ಸೋಮ್ ಸಿಂಗ್ ಅವರು ಪತ್ರದಲ್ಲಿ `ಕುಟುಂಬ ವಿಸ್ತರಿಸಲು’ ಮತ್ತು ನನ್ನ ಕುಟುಂದವರ ಜೊತೆ ಕೆಲ ಕಾಲ ಸಮಯ ಕಳೆಯಬೇಕು ಆದ್ದರಿಂದ ನನಗೆ 30 ರಜೆ ಬೇಕು ಎಂದು ಉಲ್ಲೇಖಿಸಿದ್ದಾರೆ. ಸಿಂಗ್ ಅವರು ಜೂನ್ 23 ರಿಂದ ರಜೆ ತೆಗೆದುಕೊಳ್ಳಲು ಅನುಮತಿ ನೀಡಬೇಕೆಂದು ಕೋರಿದ್ದಾರೆ. ಇವರ ರಜೆ ಅರ್ಜಿಯನ್ನು ನೋಡಿದ ಅಧಿಕಾರಿಗಳು ಸಿಂಗ್ ಅವರಿಗೆ ಬೇರೆ ಕಾರಣ ಕೊಟ್ಟು ಮನವಿ ಮಾಡುವಂತೆ ಹೇಳಿದ್ದಾರೆ. ಆದರೆ ಸಿಂಗ್ ಇದನ್ನು ಒಪ್ಪದೇ ಅದೇ ಕಾರಣ ನೀಡಿದ್ದಾರೆ.

    ಅಧಿಕಾರಿಗಳು  ಸಿಂಗ್ ಅವರಿಗೆ ಜೂನ್ 23 ರಿಂದ 45 ದಿನಗಳ ರಜೆ ನೀಡಿದ್ದಾರೆ. ಅಂದರೆ ಸೋಮ್‍ ಸಿಂಗ್ 30 ದಿನ ರಜೆ ಕೇಳಿದರೆ ಅಧಿಕಾರಿಗಳು 10 ದಿನ ಅಧಿಕವಾಗಿ ಸೇರಿಸಿ ಒಟ್ಟು 45 ದಿನಗಳ ರಜೆಗೆ ಸಹಿ ಹಾಕಿದ್ದಾರೆ.

  • ಮೋದಿ ಹೊಗಳಲು ಹೋಗಿ ಅಖಿಲೇಶ್ ರನ್ನು ತೆಗಳಿದ: ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಪೇದೆಯಿಂದ ಎಡವಟ್ಟು

    ಮೋದಿ ಹೊಗಳಲು ಹೋಗಿ ಅಖಿಲೇಶ್ ರನ್ನು ತೆಗಳಿದ: ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಪೇದೆಯಿಂದ ಎಡವಟ್ಟು

    ಹುಬ್ಬಳ್ಳಿ: ಪೇದೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಕುಮಾರಸ್ವಾಮಿ ವಿರುದ್ಧ ಪೋಸ್ಟ್ ಹಾಕಿ ಅಮಾನತಾದ ಬೆನ್ನಲ್ಲೇ ಇದೀಗ ಮತ್ತೊಬ್ಬ ಪೇದೆ ಬಿಜೆಪಿ ಪರ ಹೇಳಿಕೆ ನೀಡಲು ಮುಂದಾಗಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ.

    ರವಿಕುಮಾರ್ ಕುರಿ ಸದ್ಯ ಎಡವಟ್ಟು ಮಾಡಿಕೊಂಡಿರುವ ಪೇದೆ. ರವಿಕುಮಾರ್ ಕುರಿ ಹುಬ್ಬಳ್ಳಿ ದಕ್ಷಿಣ ವಲಯ ಎಸಿಪಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರವಿಕುಮಾರ್ ಫೇಸ್‍ಬುಕ್ ನಲ್ಲಿ ಫೋಟೋ ಶೇರ್ ಮಾಡುವ ಮೂಲಕ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ಅವಹೇಳನ ಮಾಡಿದ್ದಾರೆ.

    ಪೇದೆ ರವಿಕುಮಾರ್ ಕುರಿ, ತಮ್ಮ ಫೇಸ್‍ಬುಕ್ ನಲ್ಲಿ ಅಖಿಲೇಶ್ ಯಾದವ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೋಲಿಕೆ ಮಾಡಿರುವ ಫೋಟೋ ಶೇರ್ ಮಾಡಿದ್ದಾರೆ. ಫೋಟೋ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಲು ಮುಂದಾಗಿದ್ದು, ಅಖಿಲೇಶ್ ಯಾದವ್ ಅವರಿಗೆ ಅವಮಾನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಈ ಹಿಂದೆಯೂ ರವಿಕುಮಾರ್ ಬಿಜೆಪಿಯನ್ನು ಬೆಂಬಲಿಸಿ ಹಾಗೂ ಹೊಗಳಿ ಅನೇಕ ಪೋಸ್ಟ್ ಗಳನ್ನು ಶೇರ್ ಮಾಡಿದ್ದಾರೆ.  ಇದನ್ನು ಓದಿ:  ಕುಮಾರಸ್ವಾಮಿಯವರೇ ರಾಜೀನಾಮೆ ಯಾವಾಗ?- ಎಫ್‍ಬಿಯಲ್ಲಿ ಪೋಸ್ಟ್ ಪ್ರಕಟಿಸಿದ ಪೇದೆ ಅಮಾನತು

    ಇತ್ತೀಚೆಗಷ್ಟೇ ಪೊಲೀಸ್  ಪೇದೆ ಅರುಣ್ ಡೊಳ್ಳಿನ್, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಹೀಗಾಗಿ ಅವರನ್ನು ಅಮಾನತು ಮಾಡಲಾಗಿತ್ತು. ಈ ಬೆನ್ನಲ್ಲೇ ಈಗ ಮತ್ತೊಬ್ಬ ಹುಬ್ಬಳ್ಳಿಯ ಪೇದೆ ಇಂತದ್ದೇ ಎಡವಟ್ಟು ಮಾಡಿಕೊಂಡಿದ್ದು, ಸಾರ್ವಜನಿಕರು ಪೇದೆ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ. ಒಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್  ಕಮೀಷನರೇಟ್ ಪೊಲೀಸರು ಬಿಜೆಪಿ ಕಾರ್ಯಕರ್ತರಾದರೇ ಎನ್ನುವ ಶಂಕೆ ಇದೀಗ ಜನಸಾಮಾನ್ಯರನ್ನು ಕಾಡುತ್ತಿದೆ.

  • ಕುಮಾರಸ್ವಾಮಿಯವರೇ ರಾಜೀನಾಮೆ ಯಾವಾಗ?- ಎಫ್‍ಬಿಯಲ್ಲಿ ಪೋಸ್ಟ್ ಪ್ರಕಟಿಸಿದ ಪೇದೆ ಅಮಾನತು

    ಕುಮಾರಸ್ವಾಮಿಯವರೇ ರಾಜೀನಾಮೆ ಯಾವಾಗ?- ಎಫ್‍ಬಿಯಲ್ಲಿ ಪೋಸ್ಟ್ ಪ್ರಕಟಿಸಿದ ಪೇದೆ ಅಮಾನತು

    ಹುಬ್ಬಳ್ಳಿ: ಕುಮಾರಸ್ವಾಮಿಯವರೇ ರಾಜೀನಾಮೆ ಯಾವಾಗ ಎಂದು ಪ್ರಶ್ನಿಸಿ ಫೇಸ್‍ಬುಕ್ ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದ ಪೊಲೀಸ್ ಪೇದೆಯನ್ನು ಇಲಾಖೆ ಅಮಾನತು ಮಾಡಿದೆ.

    ಶಹರ ಠಾಣೆಯ ಪೊಲೀಸ್ ಪೇದೆ ಅರುಣ್ ಡೊಳ್ಳಿನ್ ಫೇಸ್ ಬುಕ್‍ ನಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎಮ್.ಎನ್. ನಾಗರಾಜ್ ಅಮಾನತು ಮಾಡುವಂತೆ ಆದೇಶ ಹೊರಡಿಸಿದ್ದಾರೆ. ಜೊತೆಗೆ ಈ ಬಗ್ಗೆ ಇಲಾಖೆಗೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.

    ಬಿಜೆಪಿ ಶಿಕಾರಿಪುರ ಹೆಸರಿನಲ್ಲಿರುವ ಎಫ್‍ಬಿ ಖಾತೆಯೊಂದು ಕುಮಾರಸ್ವಾಮಿಯವರೇ ರಾಜೀನಾಮೆ ಯಾವಾಗ ಎಂದು ಬರೆದು ಒಂದು ಫೋಟೋ ಹಾಕಿ ಪೋಸ್ಟ್ ಪ್ರಕಟಿಸಿತ್ತು. ಈ ಪೋಸ್ಟ್ ಅನ್ನು ಅರುಣ್ ಡೊಳ್ಳಿನ್ ಶೇರ್ ಮಾಡಿದ್ದರು. ತನ್ನ ಖಾತೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡಿ ಜೆಡಿಎಸ್-ಕಾಂಗ್ರೆಸ್ ವಿರುದ್ಧ ಅಪಪ್ರಚಾರದ ಪೋಸ್ಟ್, ಕಾಂಗ್ರೆಸ್ ಪಕ್ಷ ಮಹಿಳಾ ಮುಖಂಡರ ವಿರುದ್ಧ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳುವ ಪೋಸ್ಟ್ ಗಳನ್ನು ಶೇರ್ ಮಾಡಿದ್ದರು.

    ಸರ್ಕಾರಿ ಸೇವೆಯಲ್ಲಿದ್ದವರು ಯಾವುದೇ ರಾಜಕೀಯ ಪಕ್ಷ, ಸಂಘಟನೆ ಮತ್ತು ಧರ್ಮದ ಪರ ಹಾಗೂ ವಿರುದ್ಧ ಕೆಲಸ ಮಾಡಬಾರದು ಎನ್ನುವ ನಿಯಮವಿದೆ. ಆದರೆ ಅರುಣ್ ಡೊಳ್ಳಿನ್ ಬಿಜೆಪಿ ಕಾರ್ಯಕರ್ತನಂತೆ ಪೋಸ್ಟ್ ಪ್ರಕಟಿಸಿದ್ದಕ್ಕೆ ಇಲಾಖೆಯಲ್ಲೇ ಅಪಸ್ವರ ಎದ್ದಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಆಯುಕ್ತ ಎಮ್.ಎನ್. ನಾಗರಾಜ್ ಅವರು ಅರುಣ್ ಡೊಳ್ಳಿನ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

  • ವಿಚ್ಛೇದನ ನೀಡೋದಕ್ಕೆ ಮುನ್ನವೇ 2ನೇ ಮದ್ವೆಯಾದ ಪೊಲೀಸ್ ಪೇದೆ!

    ವಿಚ್ಛೇದನ ನೀಡೋದಕ್ಕೆ ಮುನ್ನವೇ 2ನೇ ಮದ್ವೆಯಾದ ಪೊಲೀಸ್ ಪೇದೆ!

    ಚಾಮರಾಜನಗರ: ಪೊಲೀಸ್ ಪೇದೆಯೊಬ್ಬ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡುವುದಕ್ಕೆ ಮುನ್ನವೇ ಎರಡನೇ ಮದುವೆಯಾಗಿ ಮಗು ಆಗಿದ್ದು, ಮೊದಲ ಪತ್ನಿ ನ್ಯಾಯಕ್ಕಾಗಿ ಪೊಲೀಸ್ ಮತ್ತು ನ್ಯಾಯಾಲಯಕ್ಕೆ ಅಲೆಯುತ್ತಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

    ವಿನೂತ ಪೊಲೀಸ್ ನ ಮೊದಲ ಪತ್ನಿ, ತನ್ನ 9 ವರ್ಷದ ಮಗಳೊಂದಿಗೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳಿ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಇದಲ್ಲದೇ ನನಗೆ ನ್ಯಾಯ ಕೊಡಿ ಎಂದು ಗಂಡನ ಮನೆ ಮುಂದೆ ಹೋದರೆ ಪತಿಯ ಪೋಷಕರು ಹಾಗೂ ಪತಿ ಜೊತೆ ವಿನೂತ ಜಗಳವಾಡುತ್ತಾ ಇದ್ದಾರೆ. ಪ್ರತಿ ನಿತ್ಯವೂ ಸಹ ಇದೇ ರಗಳೆಯಾಗಿದೆ.

    ರಾಮನಗರ ಜಿಲ್ಲೆ ಸಾತನೂರು ಗ್ರಾಮದ ವಿನೂತ ಅವರಿಗೆ 11 ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದ ನಿವಾಸಿ ಮಹೇಶ್ ಜೊತೆ ಮದುವೆಯಾಗಿತ್ತು. ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರ ನಡುವೆ ಜಗಳವಾಗಿ ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದರು. ಆದರೆ ನ್ಯಾಯಾಲಯ ಇವರಿಗೆ ಇದೂವರೆಗೂ ವಿಚ್ಛೇದನ ನೀಡಿಲ್ಲ. ಇದರ ಮಧ್ಯೆ ಮಹೇಶ್ ಮತ್ತೊಬ್ಬಳೊಂದಿಗೆ ಮದುವೆಯಾಗಿ ಮಗು ಕೂಡ ಆಗಿದೆ.

    ಮದುವೆಯಾಗಿ ಮಗು ಆಗಿರುವ ಬಗ್ಗೆ ಪೊಲೀಸರಿಗೆ ದಾಖಲಾತಿ ಸಮೇತ ದೂರು ನೀಡಿದರೂ ಕ್ರಮ ಕೈಗೊಳ್ಳದೇ ಮಹೇಶ್ ನ ತನಿಖಾಧಿಕಾರಿಗಳು ರಕ್ಷಣೆ ಮಾಡುತ್ತಿದ್ದಾರೆ ಎಂದು ವಿನೂತ ಆರೋಪ ಮಾಡುತ್ತಿದ್ದಾರೆ.

    ಪತಿಯಿಂದ ಆಗಿರುವ ಅನ್ಯಾಯದ ಬಗ್ಗೆ ಕೇಳಲು ಗಂಡನ ಮನೆಯ ಬಳಿಗೆ ಹೋದರೆ ಮಹೇಶ್ ಅವರ ಕುಟುಂಬದವರು ಆವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದಾರೆ ಎಂದು ವಿನೂತ ದೂರಿದ್ದಾರೆ.