Tag: Police Constable

  • ಚಿತ್ರದುರ್ಗ | ರಸ್ತೆ ದಾಟುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್‌ಗೆ ಲಾರಿ ಡಿಕ್ಕಿ – ಗಂಭೀರ ಗಾಯ

    ಚಿತ್ರದುರ್ಗ | ರಸ್ತೆ ದಾಟುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್‌ಗೆ ಲಾರಿ ಡಿಕ್ಕಿ – ಗಂಭೀರ ಗಾಯ

    ಚಿತ್ರದುರ್ಗ: ರಸ್ತೆ ದಾಟುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್‌ಗೆ (Police Constable) ಲಾರಿ (Lorry) ಡಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಹಿರಿಯೂರು (Hiriyur) ತಾಲೂಕಿನ ಐಮಂಗಲ ಗ್ರಾಮದ ಬಳಿ ನಡೆದಿದೆ.

    ತರಬೇತಿಗಾಗಿ ಐಮಂಗಲ ಪೊಲೀಸ್ ತರಬೇತಿ ಶಾಲೆಗೆ ಆಗಮಿಸಿದ್ದ ಬೆಳಗಾವಿಯ ಪೊಲೀಸ್ ಕಾನ್ಸ್ಟೇಬಲ್‌ ಸಂಗಮೇಶ್ ನಾಯಕ್ (29) ರಸ್ತೆ ದಾಟುವ ವೇಳೆ ಲಾರಿ ಡಿಕ್ಕಿಯಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಸನಾತನ ಧರ್ಮಕ್ಕೆ ಅವಮಾನ ಸಹಿಸಲ್ಲ- ಸಿಜೆಐ ಗವಾಯಿ ಮೇಲೆ ಶೂ ಎಸೆಯಲು ಮುಂದಾದ ವಕೀಲ

    ಲಾರಿ ಡಿಕ್ಕಿಯ ರಭಸಕ್ಕೆ ಸಂಗಮೇಶ್ ಕಾಲು, ತಲೆ ಮತ್ತು ಮುಖಕ್ಕೆ ತೀವ್ರ ಪೆಟ್ಟುಗಳಾಗಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ವೈಭವದಿಂದ ನೆರವೇರಿದ ಅಮ್ಮನವರ ರಥೋತ್ಸವ

  • ಕಾನ್‌ಸ್ಟೆಬಲ್‌, ಸಹೋದರ ಸೇರಿ 7 ವರ್ಷಗಳಿಂದ ಚಿಕ್ಕಮ್ಮನ ಮೇಲೆ ಅತ್ಯಾಚಾರ ಆರೋಪ

    ಕಾನ್‌ಸ್ಟೆಬಲ್‌, ಸಹೋದರ ಸೇರಿ 7 ವರ್ಷಗಳಿಂದ ಚಿಕ್ಕಮ್ಮನ ಮೇಲೆ ಅತ್ಯಾಚಾರ ಆರೋಪ

    – ಬೆತ್ತಲೆ ದೇಹ ತೋರಿಸುವಂತೆ ಮಗಳಿಗೂ ಅಶ್ಲೀಲ ಮೆಸೇಜ್‌; ಸಂತ್ರಸ್ತೆ ಆರೋಪ

    ಯಾದಗಿರಿ: ಪೊಲೀಸ್‌ ಕಾನ್ಸ್‌ಟೆಬಲ್‌ವೊಬ್ಬ ತನ್ನ ಸೋದರನೊಂದಿಗೆ ಸೇರಿ ಕಳೆದ 7 ವರ್ಷಗಳಿಂದ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಮಹಿಳೆಯೊಬ್ಬರು ಯಾದಗಿರಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ (Yadgir Women Police Station) ದೂರು ದಾಖಲಿಸಿದ್ದಾರೆ.

    ಕಾನ್ಸ್‌ಟೆಬಲ್‌ ರಮೇಶ ಹಾಗೂ ಜೆಸ್ಕಾಂ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಲಕ್ಷ್ಮಣ್‌ ಸಹೋದರರ ವಿರುದ್ಧ ದೂರು ದಾಖಲಾಗಿದೆ. ಇದನ್ನೂ ಓದಿ: ಸಂತಾನಹರಣ ಚಿಕಿತ್ಸೆ ವೇಳೆ ತಾಯಿ ಸಾವು – ಅನಸ್ತೇಶಿಯಾ ನೀಡದೇ ಶಸ್ತ್ರಚಿಕಿತ್ಸೆ ಮಾಡಿದ್ದಾಗಿ ಕುಟುಂಬಸ್ಥರ ಆರೋಪ

    ಯಾದಗಿರಿ ಜಿಲ್ಲೆಯ ಗುರಮಠಕಲ್ ತಾಲೂಕಿನ ನಿವಾಸಿಯಾಗಿರುವ ಸಂತ್ರಸ್ತೆ, ಕಳೆದ 7 ವರ್ಷದಿಂದ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಇಬ್ಬರು ಸೋದರರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಇಬ್ಬರು ಆರೋಪಿಗಳಿಗೆ ಮಹಿಳೆ ಸಂಬಂಧದಲ್ಲಿ ಚಿಕ್ಕಮ್ಮ ಆಗಬೇಕು ಎನ್ನಲಾಗಿದೆ. ಇದನ್ನೂ ಓದಿ:  ಗಣೇಶ ವಿಸರ್ಜನೆ ವೇಳೆ ಕರೆಂಟ್ ಶಾಕ್ – ಯುವಕ ಬಲಿ, ಇಬ್ಬರ ಸ್ಥಿತಿ ಗಂಭೀರ

    ಮಗಳಿಗೂ ಅಶ್ಲೀಲ ಮೆಸೇಜ್‌
    ಇಬ್ಬರು ಸಹೋದರರು ಪ್ರಾಣ ಬೆದರಿಕೆ ಹಾಕಿ ಹಲವುಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಜೊತೆಗೆ ಜೊತೆಗೆ ನನ್ನ ಮಗಳು 14 ವರ್ಷದವಳಾಗಿದ್ದಾಗಿನಿಂದಲೂ ಅಶ್ಲೀಲವಾಗಿ ವಾಟ್ಸಪ್ ಮೆಸೇಜ್ ಕಳುಹಿಸ್ತಿದ್ದಾರೆ. ಬಟ್ಟೆ ಬಿಚ್ಚಿ ಬೆತ್ತಲೆ ದೇಹ ತೋರಿಸು ಅಂತ ಪೀಡಿಸುತ್ತಿದ್ದಾರೆ. ಹೀಗಾಗಿ ಇಬ್ಬರು ಸಹೋದರರಿಂದ ಮಾನಸಿಕ ಹಿಂಸೆ ಅನುಭಿಸುತ್ತಿದ್ದೇನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

  • ಕಳ್ಳನ ಜೊತೆಗೆ ಪೊಲೀಸಪ್ಪ ರೂಮ್ ಶೇರ್ – ಕರ್ತವ್ಯ ಲೋಪ; ಪೇದೆ ಸಸ್ಪೆಂಡ್

    ಕಳ್ಳನ ಜೊತೆಗೆ ಪೊಲೀಸಪ್ಪ ರೂಮ್ ಶೇರ್ – ಕರ್ತವ್ಯ ಲೋಪ; ಪೇದೆ ಸಸ್ಪೆಂಡ್

    – ಪೊಲೀಸ್ ಯೂನಿಫಾರ್ಮ್ ಧರಿಸಿ ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದ ಕಳ್ಳ

    ಬೆಂಗಳೂರು: ಕೈತುಂಬಾ ಸಂಬಳ ಇದ್ರೂ, ಕಳ್ಳನ ಜೊತೆ ರೂಮ್ ಶೇರ್ ಮಾಡಿ ಕರ್ತವ್ಯ ಲೋಪವೆಸಗಿದ್ದ ಪೊಲೀಸ್ ಪೇದೆಯನ್ನು ಕೆಲಸದಿಂದ ಅಮಾನತು ಮಾಡಿದ ಘಟನೆ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ (Govindapura Police Station) ನಡೆದಿದೆ.

    ಗೋವಿಂದಪುರ ಠಾಣೆಯ ಕಾನ್ಸ್ಟೇಬಲ್‌ (Police Constable) ಹೆಚ್.ಆರ್ ಸೋನಾರ್, ಕುಖ್ಯಾತ ಸಲೀಂ ಅಲಿಯಾಸ್ ಬಾಂಬೆ ಸಲೀಂ ಜೊತೆ ರೂಂ ಶೇರ್ ಮಾಡಿದ್ದ. ಖದೀಮ ಬಾಂಬೆ ಸಲೀಂನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದಾಗ ಪೇದೆಯ ಕಳ್ಳಾಟ ಬಯಲಾಗಿದೆ. ಇದನ್ನೂ ಓದಿ: Raichur| ಅಂಗನವಾಡಿ ಕೇಂದ್ರದ ಛಾವಣಿ ಮೇಲ್ಪದರ ಕುಸಿತ – ಶಿಕ್ಷಕಿಗೆ ಗಂಭೀರ ಗಾಯ

    ಸಲೀಂ ಮೊಬೈಲ್‌ನಲ್ಲಿ ಸೋನಾರ್‌ನ ಪೊಲೀಸ್ ಯೂನಿಫಾರ್ಮ್ ಧರಿಸಿದ್ದ ಫೋಟೊಗಳು ಪತ್ತೆಯಾಗಿವೆ. ಪೊಲೀಸ್ ಯೂನಿಫಾರ್ಮ್ ಹಾಕೊಂಡು ಪತ್ನಿಗೆ ಖದೀಮ ಸಲೀಂ ವಿಡಿಯೋ ಕಾಲ್ ಮಾಡಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: 25 ಲಕ್ಷ ವಂಚನೆ, ಸುಧಾಕರ್‌ ಹೆಸರು ಬರೆದಿಟ್ಟು ಚಾಲಕ ಸೂಸೈಡ್‌ – ಡೆತ್‌ನೋಟ್‌ನಲ್ಲಿ ಏನಿದೆ?

    ವಿಚಾರಣೆಯ ವೇಳೆ ಖದೀಮ ಸಲೀಂ, ಪೊಲೀಸ್ ಕಾನ್ಸ್ಟೇಬಲ್‌ ಸೋನಾರ್‌ನ ಮನೆಯಲ್ಲಿ ವಾಸವಿದ್ದ ವಿಚಾರ ಬಯಲಾಗಿದೆ. ಕಳ್ಳನ ಜೊತೆ ರೂಂ ಶೇರ್ ಮಾಡಿ ಕರ್ತವ್ಯ ಲೋಪವೆಸಗಿದ ಪೊಲೀಸ್ ಕಾನ್ಸ್ಟೇಬಲ್‌ ಸೋನಾರ್‌ನನ್ನು ಪೂರ್ವ ವಿಭಾಗ ಡಿಸಿಪಿ ದೇವರಾಜ್ ಕೆಲಸದಿಂದ ಅಮಾನತು ಮಾಡಿದ್ದಾರೆ.

    ಇದೀಗ ಪೊಲೀಸರು ಸಲೀಂನ ಜೊತೆ ಪೊಲೀಸ್ ಪೇದೆ ಬರೀ ಸ್ನೇಹ ಮಾತ್ರ ಇಟ್ಟುಕೊಂಡಿದ್ನಾ ಅಥವಾ ಬೇರೆ ಲಿಂಕ್ ಇದ್ಯಾ ಎಂದು ಪರಿಶೀಲನೆ ನಡೆಸುತ್ತಿದ್ದಾರೆ.

  • Bidar | ಲೋ ಬಿಪಿಯಿಂದ ಮಹಿಳಾ ಪೊಲೀಸ್ ಪೇದೆ ಸಾವು

    Bidar | ಲೋ ಬಿಪಿಯಿಂದ ಮಹಿಳಾ ಪೊಲೀಸ್ ಪೇದೆ ಸಾವು

    ಬೀದರ್: ಲೋ ಬಿಪಿಯಿಂದ (Low BP) ಮಹಿಳಾ ಪೊಲೀಸ್ ಪೇದೆ (Police Constable) ಸಾವನ್ನಪ್ಪಿದ ಘಟನೆ ಬೀದರ್‌ನಲ್ಲಿ (Bidar) ನಡೆದಿದೆ.

    ಮಹಿಳಾ ಪೊಲೀಸ್ ಪೇದೆ ಸರಿತಾ (28) ಲೋ ಬಿಪಿಯಿಂದ ಸಾವನ್ನಪ್ಪಿದ್ದಾರೆ. ಬೀದರ್‌ನ ಸಬ್ ಅರ್ಬನ್ ಪೊಲೀಸ್ ಠಾಣೆಯ ಪೊಲೀಸ್ ಪೇದೆಯಾಗಿದ್ದ ಸರಿತಾ ಹೆರಿಗೆ ಬಳಿಕ ಲೋ ಬಿಪಿಯಾಗಿ ಸಾವನ್ನಪ್ಪಿದ್ದಾರೆ. ಮೂಲತಃ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕೊಂಚಾವರಂ ಗ್ರಾಮದ ಪೊಲೀಸ್ ಪೇದೆಯಾಗಿದ್ದು, ಹಲವು ವರ್ಷಗಳಿಂದ ಬೀದರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಭೂಮಿಗೆ ಮರಳಿದ ಶುಕ್ಲಾಗೆ ಪತ್ನಿ, ಪುತ್ರನಿಂದ ಅಪ್ಪುಗೆಯ ಸ್ವಾಗತ

    ಒಂದು ವಾರದ ಹಿಂದೇ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದ ಸರಿತಾ ಹೆರಿಗೆ ಬಳಿಕ ಒಂದು ವಾರ ನಾರ್ಮಲ್ ಆಗಿಯೇ ಇದ್ದರು. ಆದರೆ ಬುಧವಾರ ತಡರಾತ್ರಿ ಏಕಾಏಕಿ ಲೋ ಬಿಪಿಯಾಗಿ ಮಹಿಳಾ ಪೊಲೀಸ್ ಪೇದೆ ಸಾವನ್ನಪ್ಪಿದ್ದು, ಠಾಣೆಯ ಪೊಲೀಸ್ ಸಿಬ್ಬಂದಿ ಭಾವುಕಾಗಿದ್ದಾರೆ. ಬೀದರ್‌ನ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಸರಿತಾ ಪತಿ ಕುಪೇಂದ್ರ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ಥೈಲ್ಯಾಂಡ್‌ನಲ್ಲಿ ಡೆವಿಲ್ ಸಾಂಗ್ ಶೂಟಿಂಗ್ – ದರ್ಶನ್ ಫೋಟೋ ರಿವೀಲ್

  • Hassan | ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪೊಲೀಸ್ ಕಾನ್ಸ್‌ಟೇಬಲ್ ನೇಣಿಗೆ ಶರಣು

    Hassan | ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪೊಲೀಸ್ ಕಾನ್ಸ್‌ಟೇಬಲ್ ನೇಣಿಗೆ ಶರಣು

    ಹಾಸನ: ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಹಿನ್ನೆಲೆ ನೇಣು ಬಿಗಿದುಕೊಂಡು ಪೊಲೀಸ್ ಕಾನ್ಸ್‌ಟೇಬಲ್ (Police Constable) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ (Hassan) ಹೊರವಲಯದ ಗೆಂಡೆಕಟ್ಟೆ ಫಾರೆಸ್ಟ್ ಬಳಿ ನಡೆದಿದೆ.

    ನಟೇಶ್ (38) ಆತ್ಮಹತ್ಯೆಗೆ ಶರಣಾದ ಪೊಲೀಸ್ ಕಾನ್ಸ್‌ಟೇಬಲ್. ಮೂಲತಃ ಅರಕಲಗೂಡು ತಾಲೂಕಿನ ಚಿಕ್ಕಬೊಮ್ಮನಹಳ್ಳಿ ಗ್ರಾಮದ ನಟೇಶ್, 2008ನೇ ಸಾಲಿನಲ್ಲಿ ನಾಗರಿಕ ಪೊಲೀಸ್ ಪೇದೆಯಾಗಿ ಆಯ್ಕೆಯಾಗಿದ್ದರು. ಅರಕಲಗೂಡು ಪೊಲೀಸ್ ಠಾಣೆಯಲ್ಲಿ ನಟೇಶ್ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ 3 ತಿಂಗಳಿನಿಂದ ಮೂಳೆ ಕ್ಯಾನ್ಸರ್ (Bone Cancer) ಖಾಯಿಲೆಯಿಂದ ಬಳಲುತ್ತಿದ್ದ ನಟೇಶ್ ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದನ್ನೂ ಓದಿ: ಸರ್ಕಾರಿ ಕಚೇರಿ ನವೀಕರಣಕ್ಕೂ ಅನುದಾನ ಕೊರತೆ – ಸಿಬ್ಬಂದಿಯೇ ದೇಣಿಗೆ ಸಂಗ್ರಹಿಸಿ ಕಚೇರಿ ದುರಸ್ತಿ

    ಕಳೆದ ಒಂದು ವಾರದಿಂದ ನಟೇಶ್ ಹಾಸನ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಬುಧವಾರ ಸಂಜೆ ಆಸ್ಪತ್ರೆಯಿಂದ ಕಾಣೆಯಾಗಿದ್ದ ನಟೇಶ್, ಗೆಂಡೆಕಟ್ಟೆ ಅರಣ್ಯ ಬಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಮುಖ್ಯಪೇದೆಯಾಗಿ ಮುಂಬಡ್ತಿ ಪಡೆದಿದ್ದ ನಟೇಶ್ ಹೊಳೆನರಸಿಪುರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಭಾರೀ ಮಳೆ – 5 ತಾಲೂಕಿನ ಶಾಲೆಗಳಿಗೆ ಇಂದು ರಜೆ ಘೋಷಣೆ

  • ಶೀಘ್ರದಲ್ಲೇ 8,000 ಪೊಲೀಸ್ ಪೇದೆಗಳ ಹುದ್ದೆ ಭರ್ತಿ – ಜಿ.ಪರಮೇಶ್ವರ್

    ಶೀಘ್ರದಲ್ಲೇ 8,000 ಪೊಲೀಸ್ ಪೇದೆಗಳ ಹುದ್ದೆ ಭರ್ತಿ – ಜಿ.ಪರಮೇಶ್ವರ್

    -ಈ ವರ್ಷ ನೀರಾವರಿಗೆ 22 ಸಾವಿರ ಕೋಟಿ ರೂ. ಮೀಸಲು

    ಕೊಪ್ಪಳ: ರಾಜ್ಯಾದ್ಯಂತ ಕಳೆದ 5 ವರ್ಷದಲ್ಲಿ 8 ಸಾವಿರ ಪೊಲೀಸ್ ಪೇದೆ ಹುದ್ದೆ ಖಾಲಿ ಆಗಿದ್ದು, ಶೀಘ್ರದಲ್ಲೇ ಭರ್ತಿ ಮಾಡುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ (G Parameshwar) ಹೇಳಿದರು.

    ಕೊಪ್ಪಳದ ಜಿಲ್ಲಾ ಕಾಂಗ್ರೆಸ್ (Congress) ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಸರ್ಕಾರ ಯಾವುದೇ ನೇಮಕಾತಿ ಮಾಡಿಲ್ಲ. ಹೀಗಾಗಿ ಒಂದಷ್ಟು ಕಡೆ ಸಿಬ್ಬಂದಿ ಕೊರತೆಯಿರುವ ಬಗ್ಗೆ ಮಾಹಿತಿ ಇದೆ. ಈ ಹಿಂದಿನ ಸರ್ಕಾರವಿದ್ದಾಗ ನಡೆದ ಪಿಎಸ್‌ಐ ಹಗರಣದಿಂದ ಯಾವುದೇ ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ನಡೆಯಲಿಲ್ಲ. ನಮ್ಮ ಸರ್ಕಾರ ಎಲ್ಲವನ್ನೂ ಸರಿಪಡಿಸಿ, ಈಗಾಗಲೇ 500 ಪಿಎಸ್‌ಐ (PSI) ಹುದ್ದೆಗೆ ನೇಮಕಾತಿ ಮಾಡಿದೆ. ಇನ್ನೂ 500 ಪಿಎಸ್‌ಐ ಹುದ್ದೆಗೆ ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಭರವಸೆ ನೀಡಿದರು.ಇದನ್ನೂ ಓದಿ: ಇದೇ ವಾರ ಮುಗಿಯಲಿದೆ ದರ್ಶನ್ ಡೆವಿಲ್ ಶೂಟಿಂಗ್ !

    ಜಿಲ್ಲಾ ನ್ಯಾಯಾಧೀಶರು ಕೊಪ್ಪಳ ಗಾಜಾಪಟ್ಟಿ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರು ಏನಾದರೂ ಹೇಳಿಕೊಳ್ಳಲಿ. ಅಕ್ರಮ ತಡೆಗೆ ಸರ್ಕಾರದಿಂದ ಎಲ್ಲ ರೀತಿಯ ಸೂಚನೆ ನೀಡಿದ್ದೇವೆ. ರಾಜ್ಯಕ್ಕೆ ಪ್ರತಿದಿನ ಕೋಟ್ಯಂತರ ರೂ. ಡ್ರಗ್ಸ್ ಬರುತ್ತಿದೆ. ಕರ್ನಾಟಕ ಡ್ರಗ್ಸ್ ಮುಕ್ತ ಮಾಡಲು ಸರ್ಕಾರ ಮುಂದಾಗಿದೆ. ಆನೆಗೊಂದಿ ಭಾಗದಲ್ಲಿ ಡ್ರಗ್ಸ್ ತಡೆಯುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದರೆ ಆನೆಗೊಂದಿ ಭಾಗದಲ್ಲಿ ಪ್ರವಾಸಿ ಪೊಲೀಸ್ ಠಾಣೆ ಮಾಡುತ್ತೇವೆ. ರಾಯರೆಡ್ಡಿ ಅವರು ಆನೆಗೊಂದಿ ಕರ್ನಾಟಕದ ಡ್ರಗ್ಸ್ ಹಬ್ ಆಗಿದೆ ಎಂಬ ಸಲಹೆ ಹಾಗೂ ದೂರಿನ ಹಿನ್ನೆಲೆ ತಡೆಗೆ ಕ್ರಮ ಕೈಗೊಳ್ಳಲಾಗುವುದು. ಪೊಲೀಸರು ಮುಕ್ತವಾಗಿ ಕೆಲಸ ಮಾಡಲು ಸೂಚಿಸಿದ್ದೇವೆ ಎಂದರು.

    ರಾಜ್ಯ ಸರ್ಕಾರ ಚುನಾವಣೆ ಪೂರ್ವ ನೀಡಿದ ಭರವಸೆ ಈಡೇರಿಸಿದೆ. ಐದೂ ಗ್ಯಾರಂಟಿ ಅನುಷ್ಠಾನ ಮಾಡಿದ್ದೇವೆ. ಇದರಿಂದ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿನ ಜನರು ಮಧ್ಯಮ ವರ್ಗಕ್ಕೆ ಸೇರಿದ್ದಾರೆ. ಇದಕ್ಕೆ ಗ್ಯಾರಂಟಿ ಯೋಜನೆ ಕಾರಣ. ಚುನಾವಣೆ ವೇಳೆ ನಾವು ಕಣ್ಣು ಮುಚ್ಚಿ ಗ್ಯಾರಂಟಿ ಜಾರಿ ಮಾಡಿಲ್ಲ. ಎಲ್ಲ ಪೂರ್ವ ನಿಯೋಜಿತ ಲೆಕ್ಕಾಚಾರದಿಂದಲೇ ಗ್ಯಾರಂಟಿ ಕೊಡಲಾಗಿದೆ. ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಗ್ಯಾರಂಟಿ ಯೋಜನೆ ತಲುಪುತ್ತಿವೆ ಎಂದರು.

    ಅಭಿವೃದ್ಧಿ ಆಗುತ್ತಿಲ್ಲ ಎಂಬ ಟೀಕೆ ಸರಿಯಲ್ಲ. ಈ ವರ್ಷ ನೀರಾವರಿಗೆ 22 ಸಾವಿರ ಕೋಟಿ ರೂ. ಮೀಸಲು ಇಟ್ಟಿದ್ದೇವೆ. ಅಭಿವೃದ್ಧಿ ಜೊತೆಗೆ ಗ್ಯಾರಂಟಿ ನೀಡುತ್ತಿದ್ದೇವೆ. ಕೃಷಿಗೆ ಎಲ್ಲ ಅಗತ್ಯ ಕೃಷಿ ಉಪಕರಣಗಳನ್ನು ನೀಡುತ್ತಿದ್ದೇವೆ. ಯಾವುದೇ ಅಭಿವೃದ್ಧಿ ಕೆಲಸ ನಿಲ್ಲಿಸಿಲ್ಲ. ಮುಂದಿನ 2027ಕ್ಕೆ ಎತ್ತಿನ ಹೊಳೆ ಯೋಜನೆ ಪೂರ್ಣಗೊಳಿಸಲು ಸಿಎಂ ಘೋಷಿಸಿದ್ದಾರೆ ಎಂದು ಮಾಹಿತಿ ನೀಡಿದರು.ಇದನ್ನೂ ಓದಿ: ಪೆರ್ಡೂರು ಅನಂತಪದ್ಮನಾಭನಿಗೆ ಮುಷ್ಟಿ ಕಾಣಿಕೆ ಅರ್ಪಿಸಿದ ರಕ್ಷಿತ್ ಶೆಟ್ಟಿ

  • ವಾಹನ ತಪಾಸಣೆ ವೇಳೆ ಲಾರಿ ಹರಿದು ಪೊಲೀಸ್ ಕಾನ್ಸ್‌ಟೇಬಲ್‌ ಸಾವು

    ವಾಹನ ತಪಾಸಣೆ ವೇಳೆ ಲಾರಿ ಹರಿದು ಪೊಲೀಸ್ ಕಾನ್ಸ್‌ಟೇಬಲ್‌ ಸಾವು

    ದಾವಣಗೆರೆ: ವಾಹನ ತಪಾಸಣೆ ವೇಳೆ ಪೊಲೀಸ್ ಕಾನ್ಸ್‌ಟೇಬಲ್‌(Police Constable) ಮೇಲೆ ಲಾರಿ ಹರಿದು ಸಾವನ್ನಪ್ಪಿರುವ ಘಟನೆ ದಾವಣಗೆರೆಯ(Davanagere) ಹೆಬ್ಬಾಳು ಟೋಲ್ ಗೇಟ್ ಬಳಿ ನಡೆದಿದೆ.

    ರಾಮಪ್ಪ ಪೂಜಾರ್(27) ಮೃತ ಡಿಎಆರ್ ಕಾನ್ಸ್‌ಟೇಬಲ್‌. ಹೆಬ್ಬಾಳು ಟೋಲ್ ಗೇಟ್(Hebbalu Toll Gate) ಬಳಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆಗೆ ಲಾರಿಯನ್ನು ತಪಾಸಣೆ ಮಾಡಲು ಹೋದ ರಾಮಪ್ಪ ಪೂಜಾರ್ ಮೇಲೆ ಚಾಲಕ ಲಾರಿ ಹರಿಸಿ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: Tumakuru | ಗಣಿ ಬಾಧಿತ ಪ್ರದೇಶಕ್ಕೆ 1,200 ಕೋಟಿ ರೂ. ಹಂಚಿಕೆ: ಪರಮೇಶ್ವರ್

    ಗಂಭೀರ ಗಾಯಗೊಂಡಿದ್ದ ಕಾನ್ಸ್‌ಟೇಬಲ್‌ ರಾಮಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬಳಿಕ ರಾಮಪ್ಪ ಅವರ ಮೃತದೇಹವನ್ನು ಎಸ್‌ಎಸ್ ಆಸ್ಪತ್ರೆಯ ಶವಗಾರಕ್ಕೆ ರವಾನಿಲಾಯಿತು. ಇದನ್ನೂ ಓದಿ: ಟ್ರಂಪ್‌ಗೆ ಕತಾರ್‌ನಿಂದ 3,400 ಕೋಟಿ ಮೌಲ್ಯದ ಐಷಾರಾಮಿ ವಿಮಾನ ಗಿಫ್ಟ್ – ವಿಶೇಷತೆ ಏನು?

    ವಿಷಯ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಶರಣಬಸವೇಶ್ವರ ಹಾಗೂ ಸಿಬ್ಬಂದಿ ಆಸ್ಪತ್ರೆಗೆ ಧಾವಿಸಿದರು. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೈಕ್‌ಗೆ ಲಾರಿ ಡಿಕ್ಕಿ – ಪೊಲೀಸ್ ಕಾನ್ಸ್‌ಟೇಬಲ್‌ ಸ್ಥಳದಲ್ಲೇ ಸಾವು

    ಬೈಕ್‌ಗೆ ಲಾರಿ ಡಿಕ್ಕಿ – ಪೊಲೀಸ್ ಕಾನ್ಸ್‌ಟೇಬಲ್‌ ಸ್ಥಳದಲ್ಲೇ ಸಾವು

    ಹಾಸನ: ಚಲಿಸುತ್ತಿದ್ದ ಬೈಕ್‌ಗೆ ಲಾರಿ ಡಿಕ್ಕಿಯಾದ ಪರಿಣಾಮ ಪೊಲೀಸ್ ಕಾನ್ಸ್‌ಟೇಬಲ್‌ (Police Constable) ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ (Hassan) ಹೊರವಲಯದ ಕೆಂಚನಹಳ್ಳಿ ಬಳಿ ನಡೆದಿದೆ.

    ಪ್ರಕಾಶ್(38) ಮೃತಪಟ್ಟ ಪೊಲೀಸ್ ಕಾನ್ಸ್‌ಟೇಬಲ್‌. ಇದನ್ನೂ ಓದಿ: ಸುಹಾಸ್ ಶೆಟ್ಟಿ ಬೆನ್ನಲ್ಲೇ ಮಂಗಳೂರಲ್ಲಿ ಮತ್ತೊಬ್ಬ ಹಿಂದೂ ಮುಖಂಡನ ಹತ್ಯೆಗೆ ಸ್ಕೆಚ್

    11ನೇ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಪೊಲೀಸ್ ಕಾನ್ಸ್‌ಟೇಬಲ್‌ ಪ್ರಕಾಶ್ ಅವರು ಹಾಸನ ನಗರದಿಂದ ಸರ್ಕಾರಿ ದ್ವಿಚಕ್ರ ವಾಹನದಲ್ಲಿ ಗಾಡೇನಹಳ್ಳಿಗೆ ಕರ್ತವ್ಯಕ್ಕೆ ತೆರಳುತ್ತಿದ್ದರು. ಈ ವೇಳೆ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಯುದ್ಧ ನಡೆದರೆ ಇಂಗ್ಲೆಂಡ್‌ಗೆ ಪಲಾಯನ – ಪಾಕ್‌ ಸಂಸದ

    ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ವಿಜಯಪುರ ಕಾನ್ಸ್‌ಟೇಬಲ್‌ ಭಾವುಕ ಪೋಸ್ಟ್‌ – ಆತನಿಂದ ರಜೆಗೆ ಯಾವ್ದೇ ಮನವಿ ಬಂದಿಲ್ಲ: ಎಸ್ಪಿ ಸ್ಪಷ್ಟನೆ

    ವಿಜಯಪುರ ಕಾನ್ಸ್‌ಟೇಬಲ್‌ ಭಾವುಕ ಪೋಸ್ಟ್‌ – ಆತನಿಂದ ರಜೆಗೆ ಯಾವ್ದೇ ಮನವಿ ಬಂದಿಲ್ಲ: ಎಸ್ಪಿ ಸ್ಪಷ್ಟನೆ

    ವಿಜಯಪುರ: ಗಾಂಧಿ ಚೌಕ್‌ ಠಾಣೆಯ ಪೊಲೀಸ್‌ ಕಾನ್ಸ್‌ಟೇಬಲ್‌ ಎ.ಎಸ್ ಬಂದುಗೋಳ ಅವರ ಪತ್ನಿಗೆ 3ನೇ ಹೆರಿಗೆ ಆಗಿದೆ ಅಂತ ತಿಳಿದುಬಂದಿದೆ. ಆದ್ರೆ ಬಂದುಗೋಳ ಅವರಿಂದ ರಜೆಗಾಗಿ ಯಾವುದೇ ಮನವಿ ಬಂದಿಲ್ಲ. ಇಲಾಖಾ ಸಿಬ್ಬಂದಿ ಗ್ರೂಪ್ ನಲ್ಲಿ ಈ ರೀತಿ ಪೋಸ್ಟ್ ಹಾಕಿದ್ದಾರೆ. ಘಟನೆ ಕುರಿತು ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಸ್ಪಷ್ಟನೆ ನೀಡಿದ್ದಾರೆ.

    ಅಲ್ಲದೇ ನವಜಾತ ಶಿಶು ಚಿಕಿತ್ಸೆಗೆ ರಜೆ ನೀಡಿಲ್ಲ ಎಂಬ ಪೊಲೀಸ್ ಕಾನ್‌ಸ್ಟೇಬಲ್‌ ಪೋಸ್ಟ್ ವೈರಲ್ ವಿಚಾರಕ್ಕೆ ಗಾಂಧಿ ಚೌಕ್ ಠಾಣಾ ಬರಹಗಾರರು ಮತ್ತೊಂದು ಪೋಸ್ಟ್‌ ಮೂಲಕ ಸ್ಪಷ್ಟನೆ ನೀಡಿದ್ದಾರೆ.

    ವಾಟ್ಸಪ್‌ ಸಂದೇಶದಲ್ಲಿ ಏನಿದೆ?
    ಕಾನ್‌ಸ್ಟೇಬಲ್‌ ಪೋಸ್ಟ್‌ಗೆ ವಾಟ್ಸಪ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಠಾಣಾ ಬರಹಗಾರ ಸುನೀಲ್‌ ಮೋಳೆ, ಆತ್ಮೀಯ ಸಹೋದರ ಸಿಬ್ಬಂದಿ ವರ್ಗದವರೇ ಹಾಗೂ ಅಧಿಕಾರಿಗಳೇ, ನಮ್ಮ ಠಾಣೆಯ ಸಹೋದರ ಸಿಬ್ಬಂದಿ ಅಕ್ಬರ್ ಬಂದುಗೋಳ ಇವರ ಮಗನ ಅಕಾಲಿಕ ಮರಣದ ಬಗ್ಗೆ ಎಲ್ಲರಿಗೂ ಕೂಡ ತುಂಬಾ ಖೇದವಿದೆ. ಆ ದೇವರು ಬಂದೂಗೋಳ ಇವರಿಗೂ ಇವರ ಕುಟುಂಬದವರಿಗೆ ಆ ಮಗುವಿನ ಅಗಲಿಕೆಯ ದುಃಖದ ನೋವನ್ನು ಭರಿಸುವ ಶಕ್ತಿಯನ್ನು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

    ನಾನು ಗಾಂಧಿ ಚೌಕ್ ಠಾಣೆಯಲ್ಲಿ ಕಳೆದ ಮೂರು ವರ್ಷಗಳಿಂದ ಬಾರ್ನೀಷಿ ಕೆಲಸವನ್ನು ಮಾಡುತ್ತಿದ್ದೇನೆ. ಸದರಿ ಸಹೋದರ ಸಿಬ್ಬಂದಿ ಬಂಧುಗೊಳ್ ಇವರು ನಮ್ಮ ಠಾಣೆಯಲ್ಲಿ ಜನರಲ್ ಡ್ಯೂಟಿ ಮಾಡುತ್ತಿದ್ದಾರೆ. ಇವರಿಗೆ ದಿನಾಂಕ 1.3.2025 ರಂದು ಬೆಳಗಾವಿ ಟಪಾಲ್‌ ಕರ್ತವ್ಯದ ಮೇಲೆ ಕಳುಹಿಸಲಾಗಿತ್ತು. ಅಲ್ಲಿಂದ ಮರಳಿ ಬರುವಾಗ ಅವರು ನಮ್ಮ ಠಾಣಾ ಬರಹಗಾರರಿಗೆ ಹಾಗೂ ನನಗೆ ಫೋನ್ ಮಾಡಿ ತನ್ನ ಮಗನಿಗೆ ಹುಷಾ‌ರಿರುವುದಿಲ್ಲ, ಆದ್ದರಿಂದ ತನಗೆ ಠಾಣೆಗೆ ಬರಲು ಆಗುವುದಿಲ್ಲ ಎಂದು ತಿಳಿಸಿದರು.

    ಅದಕ್ಕೆ ನಾವು ಆಯ್ತು ನೀವು ಹೋಗಿ ನಿಮ್ಮ ಮಗನ ಬಗ್ಗೆ ಕಾಳಜಿ ವಹಿಸಿ ನಾವು ಡ್ಯೂಟಿ ಅಡ್ಡಸ್ಟ್ ಮಾಡುತ್ತೇವೆ ಎಂದು ಹೇಳಿದ್ದೆವು. ನಂತರ ನಾವು ನಿನ್ನೆ ಸಂಜೆ ಸದರಿ ಬಂದುಗೋಳ ಇವರಿಗೆ ಫೋನ್ ಮಾಡಿ ರೋಲಕಾಲಿಗೆ ಬಂದಿಲ್ಲವಲ್ಲ ಎಂದು ಕೇಳಿದ್ದೆವು. ಅದಕ್ಕೆ ಅವರು ನನ್ನ ಮಗನಿಗೆ ಹುಷಾರಿಲ್ಲ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದೇನೆ ಎಂದು ಹೇಳಿದರು. ಆಗ ನಾವು ಆಯ್ತು ನೀವು ಮಗನನ್ನು ನೋಡಿಕೊಳ್ಳಿ ನಾವು ಡ್ಯೂಟಿ ಅಡ್ಡಸ್ಟ್ ಮಾಡುತ್ತೇವೆ ಎಂದು ಹೇಳಿದ್ದೆವು. ಅದರಂತೆ ನಾವು ಠಾಣಾ ದಿನಚರಿಯಲ್ಲಿ ಅವರನ್ನು ಕರ್ತವ್ಯದ ಮೇಲೆ ಇರುವಂತೆ ತೋರಿಸಿರುತ್ತೇವೆ. ಇಲ್ಲಿಯವರೆಗೂ ಸಹ ಇವರು ಯಾವುದೇ ರಜಾ ಚೀಟಿಯನ್ನು ಯಾರಿಗೂ ಕೊಟ್ಟಿರುವುದಿಲ್ಲ. ಯಾರಿಗೂ ರಜೆಯನ್ನು ಕೇಳಿರುವುದಿಲ್ಲ ಎಂದು ತಿಳಿಸಿದ್ದಾರೆ.

    ಪೊಲೀಸ್‌ ಕಾನ್‌ಸ್ಟೇಬಲ್‌ ಪೋಸ್ಟ್‌ ಏನಿತ್ತು?
    ವಿಜಯಪುರ ನಗರದ ಗಾಂಧಿಔಕ್ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಆಗಿರುವ ಎ.ಎಸ್ ಬಂದುಗೊಳ ಅವರು ಜಿಲ್ಲಾ ಪೊಲೀಸ್ ಸಿಬ್ಬಂದಿ ಗ್ರೂಪ್‌ನಲ್ಲಿ ಭಾವುಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. `ನನ್ನ ಮಗನಿಗೆ ಚಿಕಿತ್ಸೆ ನೀಡಲು ರಜೆ ಸಿಗಲಿಲ್ಲ, ಕಡೆಗೂ ನನ್ನ ಮಗ ಉಳಿಯಲಿಲ್ಲ… ನನಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು… ನನಗೆ ಬಹಳ ನೋವಾಗಿದೆ..’ ಅನ್ನೋ ಸಂದೇಶವನ್ನು ತನ್ನ ಮಗು ಐಸಿಯುನಲ್ಲಿರುವ ಫೋಟೋದೊಂದಿಗೆ ಹಂಚಿಕೊಂಡಿದ್ದರು.

    ಕಾನ್ಸ್ಟೇಬಲ್ ಎ.ಎಸ್ ಬಂದುಗೋಳ ಅವರ ನವಜಾತ ಶಿಶು ಅನಾರೋಗ್ಯದ ಕಾರಣ ಐಸಿಯುನಲ್ಲಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ. ಮಗು ಮೃತಪಟ್ಟ ಬಳಿಕ ಪೊಲೀಸ್ ಸಿಬ್ಬಂದಿ ಗ್ರೂಪ್‌ನಲ್ಲಿ ಈ ರೀತಿ ಮೆಸೇಜ್ ಹಾಕಿದ್ದಾರೆ. ಇನ್ನೂ ಈ ಘಟನೆಯನ್ನು ಡಿಜಿಪಿ, ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಮಾಧ್ಯಮಗಳಿಗೆ ಜೊಹೇದ್ ಕಿಂಗ್ ಎಂಬ ಹೆಸರಿನ ಇನ್‌ಸ್ಟಾಗ್ರಾಮ್‌ನಿಂದ ಟ್ಯಾಗ್ ಕೂಡ ಮಾಡಲಾಗಿತ್ತು.

  • ನನ್ನ ಮಗನಿಗೆ ಚಿಕಿತ್ಸೆ ನೀಡಲು ರಜೆ ಸಿಗಲಿಲ್ಲ, ಮಗ ಉಳಿಯಲಿಲ್ಲ – ವಿಜಯಪುರ ಕಾನ್ಸ್‌ಟೇಬಲ್‌ ಮನಕಲುಕುವ ಪೋಸ್ಟ್‌

    ನನ್ನ ಮಗನಿಗೆ ಚಿಕಿತ್ಸೆ ನೀಡಲು ರಜೆ ಸಿಗಲಿಲ್ಲ, ಮಗ ಉಳಿಯಲಿಲ್ಲ – ವಿಜಯಪುರ ಕಾನ್ಸ್‌ಟೇಬಲ್‌ ಮನಕಲುಕುವ ಪೋಸ್ಟ್‌

    ವಿಜಯಪುರ: ʻನನ್ನ ಮಗನಿಗೆ ಚಿಕಿತ್ಸೆ ನೀಡಲು ರಜೆ ಸಿಗಲಿಲ್ಲ, ಕಡೆಗೂ ‌ನನ್ನ ಮಗ ಉಳಿಯಲಿಲ್ಲ… ನನಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು… ನನಗೆ ಬಹಳ ನೋವಾಗಿದೆ..ʼ ಈ ರೀತಿ ಪೊಲೀಸ್‌ ಕಾನ್‌ಸ್ಟೇಬಲ್‌ವೊಬ್ಬರು‌ ವಾಟ್ಸಪ್‌ ಗ್ರೂಪ್‌ನಲ್ಲಿ ಸಂದೇಶ ಹಂಚಿಕೊಂಡಿರುವ ಘಟನೆ ನಡೆದಿದೆ.

    ವಿಜಯಪುರ ನಗರದ ಗಾಂಧಿಔಕ್ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್‌ ಆಗಿರುವ ಎ.ಎಸ್ ಬಂಡುಗೊಳ ಅವರು ಜಿಲ್ಲಾ ಪೊಲೀಸ್ ಸಿಬ್ಬಂದಿ ಗ್ರೂಪ್‌ನಲ್ಲಿ ಈ ರೀತಿ ಪೊಸ್ಟ್ ಹಾಕಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರೊ ಮಗುವಿನ ಫೋಟೋದೊಂದಿಗೆ ಮೆಸೇಜ್ ಹಾಕಿದ್ದಾರೆ.

    ಕಾನ್ಸ್‌ಟೇಬಲ್‌ ಎ.ಎಸ್ ಬಂಡುಗೋಳ ಅವರ ನವಜಾತ ಶಿಶು ಅನಾರೋಗ್ಯದ ಕಾರಣ ಐಸಿಯುನಲ್ಲಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ. ಮಗು ಮೃತಪಟ್ಟ ಬಳಿಕ ಪೊಲೀಸ್ ಸಿಬ್ಬಂದಿ ಗ್ರೂಪ್‌ನಲ್ಲಿ ಈ ರೀತಿ ಮೆಸೇಜ್ ಹಾಕಿದ್ದಾರೆ. ಇನ್ನೂ ಈ‌ ಘಟನೆಯನ್ನು ಡಿಜಿಪಿ, ಗೃಹ ಸಚಿವ ಜಿ.ಪರಮೇಶ್ವರ್‌ ಹಾಗೂ ಮಾಧ್ಯಮಗಳಿಗೆ ಜೊಹೇದ್ ಕಿಂಗ್ ಎಂಬ ಹೆಸರಿನ ಇನ್‌ಸ್ಟಾಗ್ರಾಮ್‌ನಿಂದ ಟ್ಯಾಗ್ ಕೂಡ ಮಾಡಲಾಗಿದೆ.

    ಸದ್ಯ ಈ ಕುರಿತು ಮಾಹಿತಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿಗಳು ಎ.ಎಸ್ ಬಂಡುಗೋಳ ಯಾವುದೇ ರಜೆ ಕೇಳಿಲ್ಲ. ಮೌಖಿಕವಾಗಿ ಹಾಗೂ ಲಿಖಿತವಾಗಿ ಗಾಂಧಿಚೌಕ್ ಪೊಲೀಸ್ ಠಾಣಾಧಿಕಾರಿಗಳ ಬಳಿ‌‌ ರಜೆ ಕೇಳಿಲ್ಲ. ಮೊನ್ನೆ ‌ಹಾಗೂ ನಿನ್ನೆ ಅವರು ಕರ್ತವ್ಯಕ್ಕೂ ಹಾಜರಾಗಿಲ್ಲ ಎಂದಿದ್ದಾರೆ.

    ಎ.ಎಸ್ ಬಂಡುಗೋಳ‌ ‌ಅವರ ಪತ್ನಿಗೆ ಇದು 3ನೇ ಹೆರಿಗೆ ಎಂದು ತಿಳಿದುಬಂದಿದ್ದು, ರಜೆಗಾಗಿ ಯಾವುದೇ ‌ಮನವಿ‌ ಮಾಡಿಲ್ಲ. ಇಲಾಖಾ‌ ಸಿಬ್ಬಂದಿ ಗ್ರೂಪ್ ನಲ್ಲಿ ಈ ರೀತಿ ಪೋಸ್ಟ್ ಹಾಕಿದ್ದಾರೆ. ಘಟನೆ ಕುರಿತು ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಸ್ಪಷ್ಟನೆ ನೀಡಿದ್ದಾರೆ.