Tag: Police Chikkamagaluru

  • ರೈಲು ಚಲಿಸುತ್ತಿರುವಾಗಲೇ ಟ್ರ್ಯಾಕ್ ತಳಭಾಗದಲ್ಲಿ ಭೂಮಿ ಕುಸಿತ!

    ರೈಲು ಚಲಿಸುತ್ತಿರುವಾಗಲೇ ಟ್ರ್ಯಾಕ್ ತಳಭಾಗದಲ್ಲಿ ಭೂಮಿ ಕುಸಿತ!

    ಚಿಕ್ಕಮಗಳೂರು: ತರೀಕೆರೆ ತಾಲೂಕಿನ ಹಳಿಯೂರ ಸಮೀಪ ರೈಲು ಚಲಿಸುತ್ತಿರುವಾಗಲೇ ಭೂ ಕುಸಿತವುಂಟಾಗಿದ್ದು, ಭಾರೀ ದುರಂತವೊಂದು ಕ್ಷಣಮಾತ್ರದಲ್ಲಿ ತಪ್ಪಿದೆ.

    ಭಾನುವಾರ ಸಂಜೆ ಹಳಿಯೂರ ಸಮೀಪ ರೈಲು ಚಲಿಸುತ್ತಿರುವಾಗಲೇ, ರೈಲ್ವೇ ಟ್ರ್ಯಾಕ್ ತಳಭಾಗದ ಭೂಮಿ ಏಕಾಏಕಿ ಕುಸಿತಗೊಂಡಿದೆ. ಭೂ ಕುಸಿತದಿಂದಾಗಿ ರೈಲಿನಲ್ಲಿದ್ದ ಪ್ರಯಾಣಿಕರು ಕೆಲ ಕಾಲ ಆತಂಕಗೊಂಡಿದ್ದಾರೆ. ಅದೃಷ್ಟವಶಾತ್ ಆಗಬಹುದಾಗಿದ್ದ ಭಾರಿ ದುರಂತವೊಂದು ಕೂದಲೆಳೆ ಅಂತರದಿಂದ ತಪ್ಪಿದೆ.

    ವಿಷಯ ತಿಳಿಯುತ್ತಿದ್ದಂತೆಯೇ ರೈಲ್ವೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv