Tag: police bus

  • ಪೊಲೀಸ್ ಬಸ್‌ಗೆ ಬೈಕ್ ಡಿಕ್ಕಿ – ಇಂಧನ ಟ್ಯಾಂಕ್ ಹೊತ್ತಿ, ಸುಟ್ಟು ಹೋದ ಸವಾರ

    ಪೊಲೀಸ್ ಬಸ್‌ಗೆ ಬೈಕ್ ಡಿಕ್ಕಿ – ಇಂಧನ ಟ್ಯಾಂಕ್ ಹೊತ್ತಿ, ಸುಟ್ಟು ಹೋದ ಸವಾರ

    ಪಾಟ್ನಾ: ಪೊಲೀಸ್ ಬಸ್‌ಗೆ (Police Bus) ಬೈಕ್ (Bike) ಡಿಕ್ಕಿ ಹೊಡೆದು ಮೂವರು ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ಬಿಹಾರದ (Bihar) ಚಾಪ್ರಾ-ಸಿವಾನ್ ಹೆದ್ದಾರಿಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಬೈಕ್‌ನಲ್ಲಿದ್ದ ಒಬ್ಬ ವ್ಯಕ್ತಿ ಪೊಲೀಸ್ ಬಸ್ ಅಡಿಯಲ್ಲಿ ಸಿಲುಕಿ ಜೀವಂತ ದಹನವಾಗಿದ್ದು (Burnt), ಘಟನೆ ಇನ್ನೂ ಭೀಕರವೆನಿಸಿಕೊಂಡಿದೆ.

    ವರದಿಗಳ ಪ್ರಕಾರ ಪೊಲೀಸ್ ಬಸ್‌ಗೆ ಬೈಕ್ ಡಿಕ್ಕಿ ಹೊಡೆದಿದ್ದರಿಂದ ಬೈಕ್‌ನಲ್ಲಿದ್ದ ಮೂವರೂ ಸಾವನ್ನಪ್ಪಿದ್ದಾರೆ. ಅದರಲ್ಲಿ ಒಬ್ಬ ಬಸ್ ಕೆಳಗೆ ಸಿಲುಕಿಕೊಂಡಿದ್ದಾನೆ. ಈ ವೇಳೆ ಬೈಕ್‌ನ ಇಂಧನ ಟ್ಯಾಂಕ್ (Fuel Tank) ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ಆ ಬೆಂಕಿ ಬೈಕ್ ಸವಾರನಿಗೂ ತಗುಲಿ, ಆತ ಸುಟ್ಟು ಕರಕಲಾಗಿದ್ದಾನೆ. ಇದನ್ನೂ ಓದಿ: ನೌಕಾನೆಲೆಯ ಲೇಬರ್ ಕಾಲೋನಿಯಲ್ಲಿ ಸಿಲಿಂಡರ್ ಸ್ಫೋಟ – ತಪ್ಪಿದ ಅನಾಹುತ

    ಘಟನೆ ಸಂಭವಿಸುತ್ತಲೇ ಬಸ್‌ನೊಳಗಿದ್ದ ಪೊಲೀಸರು ಕೆಳಗಿಳಿದು ಸುಟ್ಟು ಹೋಗುತ್ತಿದ್ದ ವ್ಯಕ್ತಿಯನ್ನು ದೂರದಿಂದ ವೀಕ್ಷಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಪೊಲೀಸ್ ಬಸ್ ಕೆಳಗೆ ಬೆಂಕಿಯಿರುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲೂ ಕಾಣಿಸಿಕೊಂಡಿದೆ.

    ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದ ರಾಜಕೀಯ ಐಕಾನ್ ಜಯಪ್ರಕಾಶ್ ನಾರಾಯಣ್ ಅವರ 120 ನೇ ಜನ್ಮ ದಿನದ ಆಚರಣೆಯಿಂದ ಬಸ್ ಹಿಂತಿರುಗುತ್ತಿತ್ತು. ಇದನ್ನೂ ಓದಿ: ಪೊಲೀಸ್ ಮನೆಗೇ ನುಗ್ಗಲು ಯತ್ನಿಸಿ, ಸಿಕ್ಕಿ ಬಿದ್ದು ಒದೆ ತಿಂದ ಕಳ್ಳರು

    Live Tv
    [brid partner=56869869 player=32851 video=960834 autoplay=true]

  • ಪೊಲೀಸ್ ಬಸ್ ಮೇಲೆ ಭಯೋತ್ಪಾದಕರ ದಾಳಿ – ಮೂವರು ಹುತಾತ್ಮ, 14 ಜನರಿಗೆ ಗಾಯ

    ಪೊಲೀಸ್ ಬಸ್ ಮೇಲೆ ಭಯೋತ್ಪಾದಕರ ದಾಳಿ – ಮೂವರು ಹುತಾತ್ಮ, 14 ಜನರಿಗೆ ಗಾಯ

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು ಶ್ರೀನಗರ ಬಳಿ ಪೊಲೀಸ್ ಬಸ್ ಮೇಲೆ ದಾಳಿ ನಡೆಸಿದ್ದಾರೆ. ಪರಿಣಾಮ ಮೂವರು  ಹುತಾತ್ಮರಾಗಿದ್ದು, 14 ಮಂದಿ ಭದ್ರತಾ ಸಿಬ್ಬಂದಿಗೆ ಗಾಯವಾಗಿದೆ.

    ಇಂದು ಸಂಜೆ ಶ್ರೀನಗರದ ಹೊರವಲಯದಲ್ಲಿರುವ ಜೆವಾನ್‍ನಲ್ಲಿರುವ ಪೊಲೀಸ್ ಶಿಬಿರದ ಬಳಿ ಇಬ್ಬರು ಭಯೋತ್ಪಾದಕರು ಪೊಲೀಸ್ ಬಸ್ ಮೇಲೆ ದಾಳಿ ಮಾಡಿದ್ದಾರೆ. ಈ ಪರಿಣಾಮ ಜಮ್ಮು ಮತ್ತು ಕಾಶ್ಮೀರದ ಮೂವರು ಸಶಸ್ತ್ರ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಕರೀನಾ, ಅಮೃತಾ ಅರೋರಾಗೆ ಕೊರೊನಾ ಪಾಸಿಟಿವ್

    ವಿವಿಧ ಭದ್ರತಾ ಪಡೆಗಳ ಹಲವಾರು ಶಿಬಿರಗಳನ್ನು ಹೊಂದಿರುವ ಅತ್ಯಂತ ಸುರಕ್ಷಿತ ಪ್ರದೇಶದಲ್ಲಿ ಭಯೋತ್ಪಾದಕರು ಬಸ್ ಮೇಲೆ ಭಾರೀ ಗುಂಡಿನ ದಾಳಿ ನಡೆಸಿದ್ದಾರೆ. ಸುದ್ದಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸಿಬ್ಬಂದಿಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ.

    ಶ್ರೀನಗರದ ಪಂಥಾ ಚೌಕ್ ಪ್ರದೇಶದ ಜೆವಾನ್ ಬಳಿ ಈ ದಾಳಿ ನಡೆದಿದೆ. ಉಗ್ರರ ಪತ್ತೆಗೆ ಶೋಧ ಕಾರ್ಯವನ್ನು ಆರಂಭಿಸಲಾಗಿದೆ. ಇದನ್ನೂ ಓದಿ: ಬಳ್ಳಾರಿ ಉಸ್ತುವಾರಿ ಬದಲಾಗದಿದ್ದರೆ ಜನವರಿಯಲ್ಲಿ ಸತ್ಯಾಗ್ರಹ ಆರಂಭಿಸುತ್ತೇನೆ: ಸೋಮಶೇಖರ್ ರೆಡ್ಡಿ

    ಜಮ್ಮು-ಕಾಶ್ಮೀರದ ಪೊಲೀಸರು ಟ್ವೀಟ್ ಮಾಡುವ ಮೂಲಕ ಈ ಕುರಿತು ಮಾಹಿತಿಯನ್ನು ತಿಳಿಸಿದ್ದಾರೆ.