Tag: Police Bengaluru

  • ಚಿಲುಮೆ ಅಕ್ರಮ ಪ್ರಕರಣ – ಪ್ರಮುಖ ಆರೋಪಿ ರವಿಕುಮಾರ್ ಬಂಧನ

    ಚಿಲುಮೆ ಅಕ್ರಮ ಪ್ರಕರಣ – ಪ್ರಮುಖ ಆರೋಪಿ ರವಿಕುಮಾರ್ ಬಂಧನ

    ಬೆಂಗಳೂರು: ಮತದಾರರ ಮಾಹಿತಿ ಕಳವು (Voter Data Theft) ಪ್ರಕರಣ ಸಂಬಂಧ ಪೊಲೀಸರ (Police) ತನಿಖೆ ತೀವ್ರಗೊಂಡಿದೆ. ಒಬ್ಬೊಬ್ಬರೇ ಆರೋಪಿಗಳು ಖಾಕಿ ಬಲೆಗೆ ಬೀಳುತ್ತಿದ್ದು, ಇದೀಗ ಪ್ರಕರಣದ ಪ್ರಮುಖ ಆರೋಪಿ ರವಿಕುಮಾರ್‌ನನ್ನು (Ravikumar) ಪೊಲೀಸರು ಬಂಧಿಸಿದ್ದಾರೆ.

    ಈಗಾಗಲೇ ನಾಲ್ವರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇದೀಗ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಹಲಸೂರು ಗೇಟ್ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರಿಂದ ರೇಣುಕಪ್ರಸಾದ್, ಧರ್ಮೇಶ್ ಬೆನ್ನಲ್ಲೇ ಕಂಪನಿ ನಿರ್ದೇಶಕರಾದ ಕೆಂಪೇಗೌಡ, ಐಶ್ವರ್ಯರನ್ನು ಪೊಲೀಸ್ರು ಬಂಧಿಸಿದ್ರು. ಇಂದು ಡಿಜಿಟಲ್ ಸಮೀಕ್ಷಾ ಆ್ಯಪ್ ಡೆವಲಪ್ ಮಾಡಿದ್ದ ಸಂಜೀವ್ ಶೆಟ್ಟಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಉಗ್ರರ ಅಡಗುತಾಣವಾಗ್ತಿದ್ಯಾ ಮಂಗಳೂರು – ಕರಾವಳಿ ಜಿಲ್ಲೆಯಾದ್ಯಂತ ಹೈ ಅಲರ್ಟ್

    ಡಿಜಿಟಲ್ ಸಮೀಕ್ಷಾ ಆ್ಯಪ್ ಶೋಧಿಸುವ ಕೆಲಸಕ್ಕೆ ಪೊಲೀಸರು ಮುಂದಾಗಿದ್ದಾರೆ. ಮತ್ತೊಂದು ಕಡೆ ವಿವಿಧ ತಂಡಗಳಾಗಿ ಪೊಲೀಸರು ಹಲವೆಡೆ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ಕಲೆಹಾಕ್ತಿದ್ದಾರೆ. ಇಲ್ಲಿವರೆಗೂ ಚಿಲುಮೆ ಸಂಸ್ಥೆಯಿಂದ ಯಾರಿಗೆಲ್ಲಾ ಲಾಭವಾಗಿದೆ, ಯಾರೆಲ್ಲಾ ರಾಜಕೀಯ ಮುಖಂಡರು, ಅಧಿಕಾರಿಗಳು ಇದಕ್ಕೆ ಕೈ ಜೋಡಿಸಿದ್ದಾರೆ ಅನ್ನೋದ್ರ ಮಾಹಿತಿಯನ್ನು ಪೊಲೀಸ್ರು ಹೆಕ್ಕುತ್ತಿದ್ದಾರೆ. ಏಳಕ್ಕೂ ಹೆಚ್ಚು ಕ್ಷೇತ್ರಗಳ ಮತದಾರರ ಮಾಹಿತಿ ಎಗರಿಸಿದ್ದ ಚಿಲುಮೆ, ಸಚಿವರು ಮತ್ತು ಶಾಸಕರಿಗೆ ಮಾರಿಕೊಂಡಿದೆ ಎನ್ನಲಾಗಿದೆ. ಇದನ್ನೂ ಓದಿ: ಕಾಡಾನೆ ದಾಳಿಗೆ ಮಹಿಳೆ ಬಲಿ – ಮೃತದೇಹ ನೋಡಲು ಬಂದ ಶಾಸಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ

    Live Tv
    [brid partner=56869869 player=32851 video=960834 autoplay=true]

  • ಬಸ್, ಕಾರು ಡಿಕ್ಕಿ – ಚಾಲಕ ಸ್ಥಳದಲ್ಲೇ ಸಾವು

    ಬಸ್, ಕಾರು ಡಿಕ್ಕಿ – ಚಾಲಕ ಸ್ಥಳದಲ್ಲೇ ಸಾವು

    ಹುಬ್ಬಳ್ಳಿ: ಖಾಸಗಿ ಬಸ್ ಹಾಗೂ ಕಾರು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.

    ಇಂದು ಮುಂಜಾನೆ ಶರ್ಮಾ ಟ್ರಾವೆಲ್ಸ್‍ಗೆ ಸೇರಿದ ಖಾಸಗಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಗರದ ಹೊರವಲಯದ ತಾರಿಹಾಳ ಬೈಪಾಸ್ ಬಳಿ ಈ ಭೀಕರ ರಸ್ತೆ ಅಪಘಾತ ನಡೆದಿದೆ. ಇದನ್ನೂ ಓದಿ:  ಪತ್ನಿ ಶೀಲ ಶಂಕಿಸಿ ಪೆಟ್ರೋಲ್ ಸುರಿದು ಕೊಂದಿದ್ದ ಪಾಪಿ ಪತಿ ಕೊನೆಗೆ ಶವವಾಗಿ ಪತ್ತೆ

    Hubballi accident

    ಖಾಸಗಿ ಬಸ್ ಮುಂಬೈಯಿಂದ ಬೆಂಗಳೂರಿಗೆ ತೆರಳುತ್ತಿದ್ದರೆ, ಕಾರು ಹುಬ್ಬಳ್ಳಿಯಿಂದ ಬೆಳಗಾವಿಗೆ ಹೊರಟಿತ್ತು. ಈ ಮಧ್ಯೆ ಹುಬ್ಬಳ್ಳಿಯ ಹೊರವಲಯದಲ್ಲಿ ಅಪಘಾತ ನಡೆದಿದೆ. ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದರು. ಚಾಲಕನನ್ನು ಹೊರತುಪಡಿಸಿ ಕಾರಿನಲ್ಲಿದ್ದ ಉಳಿದವರಿಗೆ ಗಂಭೀರ ಗಾಯಗಳಾಗಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಸಂಬಂಧಿಕರ ಮನೆಗೆ ಹೋಗಿ ವಾಪಸ್‌ ಬರ್ತಿದ್ದವ ಸೇರಿದ್ದು ಮಸಣ

    ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.