Tag: Police Arrest

  • ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ: ವ್ಯಕ್ತಿಯ ಬಂಧನ

    ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ: ವ್ಯಕ್ತಿಯ ಬಂಧನ

    ಕ್ಷಿಣ ಭಾರತದ ಹೆಸರಾಂತ ನಟಿ ರಶ್ಮಿಕಾ ಮಂದಣ್ಣಗೆ ಈ ಡೀಪ್‌ಫೇಕ್ ವಿಡಿಯೋ ಕಾಟ ನಿದ್ದೆಗೆಡಿಸಿತ್ತು. ಡೀಪ್‌ಫೇಕ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕಾಗಿ ಸಾಕಷ್ಟು ಜನರು ಒತ್ತಾಯಿಸಿದ್ದರು. ಒತ್ತಡ ಹೆಚ್ಚಾಗುತ್ತಿದ್ದಂತೆಯೇ ಪೊಲೀಸರು ಆಸಾಮಿಗಳಿಗೆ ಬಲೆ ಬೀಸಿದ್ದರು. ಕೊನೆಗೂ ವ್ಯಕ್ತಿಯೊಬ್ಬನ ಬಂಧನವಾಗಿದೆ. ರಶ್ಮಿಕಾ ಸೇರಿದಂತೆ ಹಲವರ ಡೀಪ್‌ಫೇಕ್ ವಿಡಿಯೋ ಮಾಡಿದ್ದ ಆಂಧ್ರ ಪ್ರದೇಶದ ವ್ಯಕ್ತಿಯನ್ನು ದೆಹಲಿ (Delhi) ಪೊಲೀಸರು ಬಂಧಿಸಿದ್ದಾರೆ.

    ಮೊನ್ನೆಯಷ್ಟೇ ರಶ್ಮಿಕಾ ಮಂದಣ್ಣ ಅವರ ಮತ್ತೊಂದು ಡೀಪ್‌ಫೇಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ತಿಂಗಳ ಹಿಂದೆಯಷ್ಟೇ ಇವರ ಡೀಪ್‌ಫೇಕ್ ವಿಡಿಯೋ ಸಾಕಷ್ಟು ಸದ್ದು ಮಾಡಿತ್ತು. ಸರಕಾರದ ಮಟ್ಟದಲ್ಲಿ ಚರ್ಚೆಗೂ ಕಾರಣವಾಗಿತ್ತು. ಆದರೂ, ಅದನ್ನು ತಡೆಯಲು ಸಾಧ್ಯವಾಗಿಲ್ಲ ಎನ್ನುವುದಕ್ಕೆ ಹರಿಬಿಟ್ಟ ಮತ್ತೊಂದು ವಿಡಿಯೋ ಸಾಕ್ಷಿಯಾಗಿತ್ತು.

    ತಿಂಗಳ ಹಿಂದೆಯಷ್ಟೇ ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್‌ಫೇಕ್ ವಿಡಿಯೋ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ರಶ್ಮಿಕಾ ಪರ ಅನೇಕರು ಮಾತನಾಡಿದ್ದರು. ದುರುಳರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಕೇಂದ್ರ ಸರಕಾರ ಕೂಡ ಇದನ್ನು ಗಂಭೀರವಾಗಿ ತೆಗೆದುಕೊಂಡು, ಡೀಪ್‌ಫೇಕ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವುದಾಗಿ ಹೇಳಿತ್ತು. ಆದರೂ, ಡೀಪ್‌ಫೇಕ್ ಕಾಟ ಮುಂದುವರೆದಿತ್ತು.

    ಡೀಪ್‌ನೆಕ್ ಬ್ಲಾಕ್ ಡ್ರೆಸ್‌ನಲ್ಲಿದ್ದ ಯುವತಿಯೊಬ್ಬರ ವಿಡಿಯೋವನ್ನು ಥೇಟ್ ರಶ್ಮಿಕಾ ಮಂದಣ್ಣ ಅವರಂತೆ ಮಾರ್ಫ್ ವಿಡಿಯೋ ಸೃಷ್ಟಿಸಿದ್ದರು. ವಿಡಿಯೋದಲ್ಲಿರುವುದು ರಶ್ಮಿಕಾ ಅಲ್ಲ, ಜರಾ ಪಟೇಲ್ ಎನ್ನುವುದು ಗೊತ್ತಾಗಿತ್ತು. ಡೀಪ್‌ಫೇಕ್ ತಂತ್ರಜ್ಞಾನ (Deepfake Technology) ಬಳಸಿ ರಶ್ಮಿಕಾ ಹೆಸರಿಗೆ ಮಸಿ ಬಳಿಯಲು ಕಿಡಿಗೇಡಿಗಳು ಯತ್ನಿಸಿದ್ದಕ್ಕೆ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

     

    ಸೂಪರ್ ಸ್ಟಾರ್, ನಟ ಅಮಿತಾಬ್ ಕೂಡ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ಬೆನ್ನಲ್ಲೇ ಈ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದೊಂದು ಅತ್ಯಂತ ಅಪಾಯಕಾರಿ ಕೃತ್ಯ. ಇಂತಹ ಮಾರ್ಫಿಂಗ್ ವಿಡಿಯೋಗಳ ನಿಯಂತ್ರಣ ಸಾಮಾಜಿಕ ಜಾಲತಾಣಗಳ (Social Media) ಹೊಣೆ. ಅಪ್‌ಲೋಡ್ ಆದ 36 ಗಂಟೆಗಳಲ್ಲಿ ಇವುಗಳನ್ನು ತೊಲಗಿಸದಿದ್ದರೆ ಅಂತಹ ಸಾಮಾಜಿಕ ಜಾಲತಾಣವನ್ನು ಕೋರ್ಟ್‌ಗೆ ಎಳೆಯಬಹುದು ಎಂದು ಸ್ಪಷ್ಟಪಡಿಸಿದೆ.

  • ಸಿಎಂ ಮನೆ ಭದ್ರತೆ ಕರ್ತವ್ಯದಲ್ಲಿದ್ದ ಪೊಲೀಸರಿಂದಲೇ ಗಾಂಜಾ ಮಾರಾಟ – ಅರೆಸ್ಟ್

    ಸಿಎಂ ಮನೆ ಭದ್ರತೆ ಕರ್ತವ್ಯದಲ್ಲಿದ್ದ ಪೊಲೀಸರಿಂದಲೇ ಗಾಂಜಾ ಮಾರಾಟ – ಅರೆಸ್ಟ್

    ಬೆಂಗಳೂರು: ಅಪರಾಧ ಕೃತ್ಯಗಳನ್ನು ನಿಯಂತ್ರಿಸುವುದು ಪೊಲೀಸ್ ಅಧಿಕಾರಿಗಳ ಕರ್ತವ್ಯ. ಆದರೆ ಎಷ್ಟೋ ಪ್ರಕರಣಗಳಲ್ಲಿ ಆರಕ್ಷರೇ ಅಪರಾಧ ಕೃತ್ಯಗಳನ್ನು ಮಾಡಿ ತಪ್ಪಿತಸ್ಥರ ಸ್ಥಾನದಲ್ಲಿ ನಿಂತಿದ್ದಾರೆ. ಅಂತಹದ್ದೊಂದು ಪ್ರಕರಣ ನಗರದಲ್ಲಿ ನಡೆದಿದೆ.

    ಹೌದು, ಗಾಂಜಾ ತರಿಸಿ ಮಾರಾಟ ಮಾಡುತ್ತಿದ್ದ ಇಬ್ಬರು ಪೊಲೀಸರು ಬಂಧನಕ್ಕೊಳಗಾಗಿದ್ದಾರೆ. ಶಿವಕುಮಾರ್ ಹಾಗೂ ಸಂತೋಷ್ ಎಂಬ ಪೇದೆಗಳು ಗಾಂಜಾ ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾರೆ. ಇವರು, ಗಾಂಜಾ ಪೆಡ್ಲರ್‌ಗಳ ಮೂಲಕ ಗಾಂಜಾ ತರಿಸಿಕೊಂಡು ಮಾರಾಟಕ್ಕೆ ಮಾಡುತ್ತಿದ್ದರು. ಇದನ್ನೂ ಓದಿ: ‘ಆಕ್ಟ್ -1978’ ಸಿನಿಮಾ ಪ್ರೇರಣೆ – ಬ್ಯಾಂಕ್ ಮುಂದೆ ಪ್ರತಿಭಟಿಸಿ ನ್ಯಾಯ ಪಡೆದ ಮಹಿಳೆ

    ಅಚ್ಚರಿದಾಯಕ ವಿಷಯವೆಂದರೆ, ಇವರು ಸಿಎಂ ಬೊಮ್ಮಾಯಿ ಮನೆಯ ಭದ್ರತೆಗೆ ನಿಯೋಜನೆಗೊಂಡಿದ್ದರು. ಇವರಿಬ್ಬರೂ ಕೊರಮಂಗಲ ಪೊಲೀಸ್ ಠಾಣಾ ಸಿಬ್ಬಂದಿಯಾಗಿದ್ದಾರೆ. ಮೋಸ್ಟ್ ವಾಂಟೆಡ್ ಪೆಡ್ಲರ್‌ಗಳಾದ ಅಖಿಲ್ ರಾಜ್ ಹಾಗೂ ಅಮ್ಜದ್ ಖಾನ್ ಬಳಿ ಗಾಂಜಾ ಖರೀದಿಸಿ ಮಾರಾಟ ಮಾಡುತ್ತಿದ್ದರು.

    ಪೆಡ್ಲರ್‌ಗಳಿಂದ ಗಾಂಜಾ ಪಡೆದು ಹಣ ಕೊಡದೇ ಹಲ್ಲೆಗೆ ಮುಂದಾಗಿದ್ದರು. ಮುಖ್ಯಮಂತ್ರಿಗಳ ಮನೆ ಇರುವ ಆರ್.ಟಿ. ನಗರದ 80 ಅಡಿ ರಸ್ತೆ ಬಳಿ ಡೀಲ್ ಮಾಡುತ್ತಿದ್ದರು. ಸಿಎಂ ಮನೆ ಬಳಿ ಗಸ್ತಿನಲ್ಲಿದ್ದ ಹೊಯ್ಸಳ ಸಿಬ್ಬಂದಿಗೆ ಈ ಬಗ್ಗೆ ಅನುಮಾನ ಬಂದು ವಿಚಾರಣೆ ನಡೆಸಿದ್ದಾರೆ. ಖಾಕಿ ತೊಟ್ಟವರೇ ಗಾಂಜಾ ಮಾರಾಟಕ್ಕಿಳಿದಿರುವುದನ್ನು ತಿಳಿದು ಪೊಲೀಸರು ಅಚ್ಚರಿಗೊಂಡಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನ ಟೈರ್ ಬ್ಲಾಸ್ಟ್- ಇಬ್ಬರು ಸಾವು, ಮತ್ತಿಬ್ಬರು ಗಂಭೀರ

    ಪೊಲೀಸರು ಹಾಗೂ ಗಾಂಜಾ ಪೆಡ್ಲರ್‌ಗಳನ್ನು ಬಂಧಿಸಿರುವ ಆರ್.ಟಿ.ನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ -ಎಲ್ಲ ಆರೋಪಿಗಳು ಅಂದರ್

    ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ -ಎಲ್ಲ ಆರೋಪಿಗಳು ಅಂದರ್

    ಮಂಗಳೂರು: ಸಹಪಾಠಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಐದು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಗುರುನಂದನ್ (19), ಆರ್ಯಾಪು ಗ್ರಾಮದ ಸುನಿಲ್ (19), ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಪ್ರಜ್ವಲ್ (19), ಬರಿಮಾರು ಗ್ರಾಮದ ಪ್ರಖ್ಯಾತ್ (19) ಹಾಗೂ ಕಿಶನ್ (19) ಬಂಧಿತ ಆರೋಪಿಗಳು. ಈ ಆರೋಪಿಗಳು ಪುತ್ತೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರು, ಸಂತ್ರಸ್ತೆ ದಲಿತ ಸಮುದಾಯಕ್ಕೆ ಸೇರಿದವಳಾಗಿದ್ದಾಳೆ. ಪುತ್ತೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಾಳೆ. ಫೆಬ್ರವರಿ ತಿಂಗಳಿನಲ್ಲಿ ವಿದ್ಯಾರ್ಥಿನಿ ಕಾಲೇಜು ಮುಗಿಸಿಕೊಂಡು ಮನೆಗೆ ಹೋಗಲು ಬಸ್ ನಿಲ್ದಾಣದಲ್ಲಿ ನಿಂತಿದ್ದಳು. ಈ ವೇಳೆ ಅಲ್ಲಿಗೆ ಬಂದ ಸಹಪಾಠಿಗಳು ನಿನ್ನ ಜೊತೆಗೆ ಮಾತನಾಡಬೇಕು ಎಂದು ಹೇಳಿ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ವಿದ್ಯಾರ್ಥಿಗಳು ತನಗೆ ಪರಿಚಿತರಾಗಿದ್ದರಿಂದ ಏನನ್ನೂ ಪ್ರಶ್ನಿಸದೇ ಸಂತ್ರಸ್ತೆ ಅವರೊಂದಿಗೆ ಹೋಗಿದ್ದಾಳೆ ಎಂದು ತಿಳಿಸಿದರು.

    ಕಾರು ಕಾಡಿನ ಕಡೆಗೆ ಹೊಗುತ್ತಿದ್ದಂತೆ ಭಯಗೊಂಡ ವಿದ್ಯಾರ್ಥಿನಿ, ಎಲ್ಲಿಗೆ ಹೋಗುತ್ತಿದ್ದೇವೆ ಎಂದು ಪ್ರಶ್ನಿಸಿದ್ದಾಳೆ. ಆಗ ಇಲ್ಲಿಯೇ ಸ್ವಲ್ಪ ದೂರ ಅಂತ ಹೇಳಿ ಯುವಕರು ನಿರ್ಜನ ಪ್ರದೇಶಕ್ಕೆ ಬಂದು ಕಾರು ನಿಲ್ಲಿಸಿದ್ದಾರೆ. ಬಳಿಕ ಆಕೆಗೆ ಮತ್ತು ಬರಿತ ಆಹಾರ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ದೃಶವನ್ನು ಕಾಮುಕರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದರು ಎಂದು ಮಾಹಿತಿ ನೀಡಿದರು.

    ಘಟನೆಯ ಬಗ್ಗೆ ಯಾರಿಗೂ ಹೇಳದಂತೆ ಸಂತ್ರಸ್ತೆಗೆ ಆರೋಪಿಗಳು ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ವಿದ್ಯಾರ್ಥಿನಿ ಯಾರ ಮುಂದೆಯೂ ಘಟನೆಯ ಬಗ್ಗೆ ಹೇಳಿಕೊಂಡಿರಲಿಲ್ಲ. ಅತ್ಯಾಚಾರ ಎಸಗುತ್ತಿರುವ ವಿಡಿಯೋ ಬೆಳಗ್ಗೆಯಿಂದ ವೈರಲ್ ಆಗಿದ್ದರಿಂದ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿದೆ ಎಂದರು.

    ದ್ವೇಷದಿಂದ ಬಯಲಾಯ್ತು ಕೃತ್ಯ:
    ಆರೋಪಿಗಳು ಫೆಬ್ರವರಿ ತಿಂಗಳಿನಲ್ಲಿಯೇ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಆದರೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ವಿಡಿಯೋ ವೈರಲ್ ಆಗಿದ್ದರಿಂದ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲು ಮುಖ್ಯ ಕಾರಣ ಆರೋಪಿಗಳ ಮಧ್ಯೆ ಮನಸ್ತಾಪ ಉಂಟಾಗಿದ್ದು ಎನ್ನಲಾಗಿದೆ.

    ಕಾಲೇಜಿನ ಚುನಾವಣೆ ವಿಚಾರದಲ್ಲಿ ನಾಲ್ವರು ಆರೋಪಿ ವಿದ್ಯಾರ್ಥಿಗಳ ಮಧ್ಯೆ ಮನಸ್ತಾಪ ಉಂಟಾಗಿತ್ತು. ಹೀಗಾಗಿ ಈ ದ್ವೇಷ ಸಾಧನೆ ಉದ್ದೇಶದಿಂದ ವಿಡಿಯೋವನ್ನು ವೈರಲ್ ಮಾಡಿದ್ದಾರೆ. ಅನಾಮಧೇಯ ವ್ಯಕ್ತಿಯ ಹೆಸರಿನಲ್ಲಿ ವಿಡಿಯೋ ಹರಿಬಿಟ್ಟು ಪ್ರಕರಣವನ್ನು ಆರೋಪಿ ವಿದ್ಯಾರ್ಥಿಗಳೇ ಒಪ್ಪಿಕೊಂಡಿದ್ದಾರೆ ಎಂದು ಬಿ.ಎಂ.ಲಕ್ಷ್ಮೀಪ್ರಸಾದ್ ತಿಳಿಸಿದರು.

  • ಯಾವುದೇ ತಪ್ಪು ಮಾಡದೇ ಇದ್ದರೂ 93ರ ವೃದ್ಧೆಯನ್ನ ಬಂಧಿಸಿದ ಪೊಲೀಸರು

    ಯಾವುದೇ ತಪ್ಪು ಮಾಡದೇ ಇದ್ದರೂ 93ರ ವೃದ್ಧೆಯನ್ನ ಬಂಧಿಸಿದ ಪೊಲೀಸರು

    ಲಂಡನ್: ಯಾವುದೇ ತಪ್ಪು ಮಾಡದೇ ಇದ್ದರೂ ಕೂಡ ಗ್ರೇಟ್ ಮ್ಯಾಂಚೆಸ್ಟರ್ ಪೊಲೀಸರು 93 ವರ್ಷದ ವೃದ್ಧೆಯನ್ನು ಬಂಧಿಸಿದ್ದಾರೆ. ಇದಕ್ಕೆ ಕಾರಣವೇನು ಎಂದು ಗೊತ್ತಾದರೆ ನಿಜಕ್ಕೂ ವಿಚಿತ್ರ ಎನ್ನಿಸುತ್ತೆ.

    ಹೌದು. ಯುಕೆ ನಿವಾಸಿ ಜೋಸಿ ಬಡ್ರ್ಸ್(93) ಯಾವುದೇ ಅಪರಾಧ ಮಾಡದೇ ಇದ್ದರೂ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಇದಕ್ಕೆ ಕಾರಣ ಕೇಳಿ ಸ್ವತಃ ಅಲ್ಲಿ ಪೊಲೀಸ್ ಅಧಿಕಾರಿಗಳೇ ದಂಗಾಗಿದ್ದಾರೆ. ಈ ವೃದ್ಧೆ ಜೀವನದಲ್ಲಿ ಇದುವರೆಗೆ ಯಾವುದೇ ಕಹಿ ಅನುಭವವನ್ನು ಹೊಂದಿಲ್ಲವಂತೆ. ಹೀಗಾಗಿ ಆಕೆಯ ಜೀವನದಲ್ಲಿ ಒಂದಾದರೂ ಕಹಿ ಅನುಭವನ್ನು ಹೊಂದುವ ಆಸೆ ವೃದ್ಧೆಗೆ ಇತ್ತು. ಈ ಹಿನ್ನೆಲೆಯಲ್ಲಿ ಈಗ ಮೊಮ್ಮಗಳು ಅಜ್ಜಿಯ ಕೋರಿಕೆಯನ್ನು ಇಡೇರಿಸಲು ಯುಕೆ ನ ಗ್ರೇಟ್ ಮ್ಯಾಂಚೆಸ್ಟರ್ ಪೊಲೀಸರಿಗೆ ಮನವಿ ಮಾಡಿದ್ದು, ಪೊಲೀಸರು ವೃದ್ಧೆಯನ್ನು ಬಂಧಿಸಿದ್ದಾರೆ.

    ಅಜ್ಜಿಯನ್ನು ಪೋಲೀಸರು ಬಂಧಿಸಿ ಅವರ ಆಸೆ ತೀರಿಸಿದ್ದಕ್ಕೆ ಮೊಮ್ಮಗಳು ಪಾಮ್ ಸ್ಮಿತ್ ಟ್ವಿಟ್ಟರ್ ನಲ್ಲಿ ಖಾಕಿ ಪಡೆಗೆ ಧನ್ಯವಾದ ಅರ್ಪಿಸಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.

    ಅಜ್ಜಿ ಅನಾರೋಗ್ಯಕ್ಕೆ ತುತ್ತಾಗಿದ್ದಾಗ ತನ್ನ ಈ ಆಸೆ ಬಗ್ಗೆ ಸ್ಮಿತ್ ಬಳಿ ಹೇಳಿದ್ದರು. ತನ್ನ ಅಜ್ಜಿಯ ಆರೋಗ್ಯವು ಏರುಪೇರು ಆಗುತಿತ್ತು. ತನ್ನ ಜೀವನದ ಉದ್ದಕ್ಕೂ ಚೆನ್ನಾಗಿದ್ದರಿಂದ ಯಾವುದಾದರು ಕಹಿ ಅನುಭವವನ್ನು ಹೊಂದಬೇಕೆಂದು ಎಂದು ಬಯಸಿದ್ದರು. ಈ ಹಿನ್ನಲೆಯಲ್ಲಿ ವಯಸ್ಸಾದರೂ ತನ್ನನ್ನು ಬಂಧಿಸಬೇಕೆಂದು ಮನವಿ ಮಾಡಿದ್ದರು.

    ಈ ಹಿನ್ನೆಲೆಯಲ್ಲಿ ಪೊಲೀಸರು 93 ವರ್ಷದ ವೃದ್ಧೆಯನ್ನು ಬಂಧಿಸಿದ್ದಾರೆ. ಈಗ ಆ ಅಜ್ಜಿ ಪೋಲೀಸರ ಬಂಧನದಿಂದ ಖುಷಿಪಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ ಈ ಬಗ್ಗೆ ಮ್ಯಾಂಚೆಸ್ಟರ್ ಪೊಲೀಸ್ ಅಧಿಕಾರಿ ಮಾತನಾಡಿ, ವೃದ್ಧೆಯ ಆಸೆಯನ್ನು ನಾವು ಈಡೇರಿಸುವಲ್ಲಿ ಯಶಸ್ವಿಯಾಗಿದ್ದೇವೆ. ಅವರ ಜೀವನದಲ್ಲಿ ನೆನಪಿಟ್ಟುಕೊಳ್ಳುವ ಒಂದು ದಿನವನ್ನು ನಾವು ನೀಡಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

  • ಚಿಕ್ಕಮ್ಮನ ಅವಸರಕ್ಕೆ ಲಾರಿ ಕೆಳಗೆ ಸಿಲುಕಿ 6 ವರ್ಷದ ಮಗು ಅಪ್ಪಚ್ಚಿ

    ಚಿಕ್ಕಮ್ಮನ ಅವಸರಕ್ಕೆ ಲಾರಿ ಕೆಳಗೆ ಸಿಲುಕಿ 6 ವರ್ಷದ ಮಗು ಅಪ್ಪಚ್ಚಿ

    – ಮಗು ಮೃತಪಟ್ಟಿದ್ದಕ್ಕೆ ಲಾರಿ ಚಾಲಕನಿಗೆ ಥಳಿತ
    – ಡೋರ್ ತೆರೆದ ಕಾರು ಚಾಲಕನ ಮೇಲೂ ಕೇಸ್

    ಬೆಂಗಳೂರು: ಅಪಘಾತವೆಸಗಿದ್ದ ಲಾರಿ ಚಾಲಕನಿಗೆ ಥಳಿಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಬ್ಬಗೋಡಿ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

    ರಾಕೇಶ್, ಈಶ್ವರಿ, ಆನಂದ್, ಪ್ರಮೋದ್, ಪ್ರಕಾಶ್ ಸೇರಿದಂತೆ ಆರು ಆರೋಪಿಗಳು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೆಬ್ಬಗೋಡಿ ಸಮೀಪದ ಅನಂತನಗರದಲ್ಲಿ ಮಾರ್ಚ್ 10ರಂದು ಸಂಜೆ ಸುಮಾರು 4.30ಕ್ಕೆ ಈ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಅರ್ಹಾನ್(6) ಬಾಲಕ ಮೃತಪಟ್ಟಿದ್ದನು.

    ಏನಿದು ಪ್ರಕರಣ?
    ಮೃತ ಅರ್ಹಾನ್ ಜೊತೆ ಚಿಕ್ಕಮ್ಮ ಈಶ್ವರಿ ದ್ವಿಚಕ್ರ ವಾಹನದಲ್ಲಿ ಹೆಬ್ಬಗೋಡಿ ಸಮೀಪದ ಅನಂತನಗರದಲ್ಲಿ ಹೋಗುತ್ತಿದ್ದಳು. ಈ ವೇಳೆ ಲಾರಿಯನ್ನು ಓವರ್ ಟೇಕ್ ಮಾಡಲು ಈಶ್ವರಿ ಮುಂದಾಗಿದ್ದಾಳೆ. ಈ ಸಂದರ್ಭದಲ್ಲಿ ಅಲ್ಲೇ ಪಕ್ಕದಲ್ಲಿ ಇದ್ದ ಕಾರಿನ ಡೋರ್ ಓಪನ್ ಆಗಿದ್ದರಿಂದ ಆಕೆ ರಸ್ತೆಗೆ ಬಿದ್ದಿದ್ದು, ಮಗು ಲಾರಿಗೆ ಸಿಲುಕಿ ಸಾವನ್ನಪ್ಪಿದೆ.

    ಮಗು ಮೃತಪಟ್ಟಿದ್ದರಿಂದ ಸಾರ್ವಜನಿಕರು ಆಕ್ರೋಶಗೊಂಡು ಲಾರಿ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯ ತೀವ್ರತೆಗೆ ಚಾಲಕನ ವಿಪರೀತ ರಕ್ತಸ್ತ್ರಾವವಾಗಿ ತಕ್ಷಣ ಆತನನ್ನು ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಲಾರಿ ಚಾಲಕ ರಾಧೇಶ್ಯಾಮ್ ಮೃತಪಟ್ಟಿದ್ದ. ಮೃತ ಚಾಲಕ ಉತ್ತರ ಪ್ರದೇಶ ಮೂಲದವನು ಎಂದು ತಿಳಿದು ಬಂದಿದೆ. ಈ ಬಗ್ಗೆ ಹೆಬ್ಬಗೋಡಿ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

    ಬಳಿಕ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದಾಗ ಅಪಘಾತದ ಸತ್ಯಾಸತ್ಯತೆ ತಿಳಿದಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ರಾಕೇಶ್ ಮತ್ತು ಈಶ್ವರಿ ಗಂಡ ಹೆಂಡತಿಯಾಗಿದ್ದು, ಪ್ರಮೋದ್ ಮತ್ತು ಪ್ರಕಾಶ್ ಕಾಲೇಜು ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.

    ಈ ಘಟನೆಯಲ್ಲಿ ಚಾಲಕನದ್ದು ಯಾವುದೇ ತಪ್ಪು ಇರಲಿಲ್ಲ. ಮಹಿಳೆಯೇ ಲಾರಿಯನ್ನು ಓವರ್ ಟೇಕ್ ಮಾಡುವ ಅವಸರದಲ್ಲಿ ಮುಂದೆ ನುಗ್ಗಿದ್ದಾಳೆ. ಮುಂದೆ ಇದ್ದ ಕಾರಿನ ಡೋರ್ ಓಪನ್ ಮಾಡಿದ್ದು ಅಪಘಾತವಾಗಲು ಪ್ರಮುಖ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಡೋರ್ ಓಪನ್ ಮಾಡಿದ ತಪ್ಪಿಗೆ ಕಾರಿನ ಚಾಲಕನ ಮೇಲೂ ಕೇಸ್ ಹಾಕಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    https://www.youtube.com/watch?v=j_RhzBNaWJM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮತ್ತು ಬರುವ ಪಾನೀಯ ಕುಡಿಸಿ ಅಪ್ರಾಪ್ತೆಯ ಮೇಲೆರಗಿದ ಕಾಮುಕರು – ವಿಡಿಯೋ ಮಾಡಿ ಅಪ್ಲೋಡ್

    ಮತ್ತು ಬರುವ ಪಾನೀಯ ಕುಡಿಸಿ ಅಪ್ರಾಪ್ತೆಯ ಮೇಲೆರಗಿದ ಕಾಮುಕರು – ವಿಡಿಯೋ ಮಾಡಿ ಅಪ್ಲೋಡ್

    ಲಕ್ನೋ: ಅಪ್ರಾಪ್ತ ಹುಡುಗಿಯನ್ನು ಐದು ಮಂದಿ ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಗಾಜೀಯಾಬಾದ್ ನಲ್ಲಿ ನಡೆದಿದೆ.

    ಈ ಘಟನೆ ಸೆಪ್ಟೆಂಬರ್ 25 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 16 ವರ್ಷದ ಸಂತ್ರಸ್ತೆ ತನ್ನ ಫ್ರೆಂಡ್ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧೀಕ್ಷಕ ಶ್ಲೋಕ್ ಕುಮಾರ್ ಹೇಳಿದ್ದಾರೆ.

    ಏನಿದು ಪ್ರಕರಣ?
    ಸೆಪ್ಟೆಂಬರ್ 25 ಸಂತ್ರಸ್ತೆ ತನ್ನ ಫ್ರೆಂಡ್ ಹುಟ್ಟುಹಬ್ಬದ ಪಾರ್ಟಿಗೆಂದು ಹೋಗಿದ್ದಾಳೆ. ಅಲ್ಲಿ ಐದು ಮಂದಿ ಕಾಮುಕರು ಸಂತ್ರಸ್ತೆಗೆ ಮತ್ತು ಬರುವ ಔಷಧಿ ಮಿಕ್ಸ್ ಮಾಡಿದ ಪಾನೀಯವನ್ನು ಕುಡಿಸಿದ್ದಾರೆ. ಇದರಿಂದ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಆಕೆ ಈ ಸ್ಥಿತಿಯಲ್ಲಿ ಇದ್ದಾಗ ಕಾಮುಕರು ಬಜರಿಯಾ ಮಾರುಕಟ್ಟೆ ರೈಲ್ವೆ ರಸ್ತೆಯಲ್ಲಿರುವ ಹೋಟೆಲಿಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಅಲ್ಲಿ ಐದು ಮಂದಿಯೂ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ.

    ಅಷ್ಟೇ ಅಲ್ಲದೇ ಆರೋಪಿಗಳು ಅತ್ಯಾಚಾರದ ದೃಶ್ಯವನ್ನು ವಿಡಿಯೋ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ. ಅತ್ಯಾಚಾರದ ಬಳಿಕ ಈ ವಿಚಾರವನ್ನು ಪೋಷಕರು ಅಥವಾ ಪೊಲೀಸರಿಗೆ ಹೇಳಿದರೆ ಮುಂದೆ ಉಂಟಾಗುವ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯನ್ನು ಕೂಡ ಹಾಕಿದ್ದಾರೆ ಎಂದು ಎಸ್‍ಪಿ ಹೇಳಿದ್ದಾರೆ.

    ಸಂತ್ರಸ್ತೆ ನಡೆದ ಘಟನೆಯ ಬಗ್ಗೆ ಪೋಷಕರಿಗೆ ವಿವರಿಸಿದ್ದಾಳೆ. ಬಳಿಕ ಪೋಷಕರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರೂಖ್, ಚಂದ್, ಶದಾಬ್, ರಹೀಸ್ ಮತ್ತು ಶಹೀದ್ ವಿರುದ್ಧ ಐಪಿಸಿ ಸೆಕ್ಷನ್ 375 (ಅತ್ಯಾಚಾರ) ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಆರೋಪಿಗಳಲ್ಲಿ ಒಬ್ಬನಾದ ಶಾರೂಖ್ ನನ್ನು ಬಂಧಿಸಲಾಗಿದೆ ಎಂದು ಶ್ಲೋಕ್ ಕುಮಾರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಎಂಗೆ ಮನವಿ ಕೊಡುವ ಮೊದಲೇ ಮಹಿಳೆ ಅರೆಸ್ಟ್

    ಸಿಎಂಗೆ ಮನವಿ ಕೊಡುವ ಮೊದಲೇ ಮಹಿಳೆ ಅರೆಸ್ಟ್

    ಕೊಪ್ಪಳ: ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಕೊಡುವ ಮೊದಲೇ ಮಹಿಳೆಯೊಬ್ಬರನ್ನು ಪೋಲಿಸರು ಬಂಧಿಸಿದ್ದಾರೆ.

    ಶೈಲಜಾ ಹುಳ್ಳಿ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನ್ನ ಕೆಲಸದ ನಿರಾಕರಣೆ ಹಿನ್ನಲೆಯಲ್ಲಿ ಇಂದು ಕೊಪ್ಪಳದ ವಿವಿಧ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶಕ್ಕೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಶೈಲಜಾ ಮನವಿ ಕೊಡಲು ಮುಂದಾಗಿದ್ದರು. ಆದರೆ ಸಿಎಂಗೆ ಮನವಿ ನೀಡುವ ಮೊದಲೇ ಶೈಲಜಾಳನ್ನು ಪೊಲೀಸರು ಬಂಧಿಸಿದ್ದಾರೆ.

    ಶೈಲಜಾ ಹುಳ್ಳಿ ಕೊಪ್ಪಳದ ಮೆಡಿಕಲ್ ಕಾಲೇಜ್‍ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಫೆಬ್ರುವರಿ 4 ರಂದು ಏಕಾಏಕಿ ಇವರನ್ನು ಸೇರಿದಂತೆ 18 ಜನರನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಇದರಿಂದ ಕೋಪಗೊಂಡ ಶೈಲಜಾ ಸ್ಟೋರ್ ಕೀಪರ್ ಸತ್ಯನಾರಾಯಣ್‍ಗೆ ಧರ್ಮದೇಟು ನೀಡಿದ್ದರು.

    ಕೆಲಸದಿಂದ ತಗೆಯಲು ಸತ್ಯನಾರಾಯಣನೇ ಕಾರಣ ಎಂದು ಶೈಲಜಾ ಚಪ್ಪಲಿ ಏಟು ನೀಡಿದ್ದರು. ನಂತರ ಮೆಡಿಕಲ್ ಕಾಲೇಜು ಆಡಳಿತ ಮಂಡಳಿಯಿಂದ ಶೈಲಜಾಗೆ ಕೆಲಸ ನೀಡಲು ನಿರಾಕರಣೆ ಮಾಡಿತ್ತು.

    ಸಮಾವೇಶದಲ್ಲಿ ಸುಮಾರು 1,497 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡುವುದರ ಮೂಲಕ ಚಾಲನೆ ನೀಡಲಿದ್ದಾರೆ.