Tag: poland

  • ಪೋಲೆಂಡ್, ಉಕ್ರೇನ್ ಪ್ರವಾಸ ಮುಗಿಸಿ ಪ್ರಧಾನಿ ಮೋದಿ ಭಾರತಕ್ಕೆ ವಾಪಸ್

    ಪೋಲೆಂಡ್, ಉಕ್ರೇನ್ ಪ್ರವಾಸ ಮುಗಿಸಿ ಪ್ರಧಾನಿ ಮೋದಿ ಭಾರತಕ್ಕೆ ವಾಪಸ್

    ನವದೆಹಲಿ: 2 ದಿನಗಳ ಉಕ್ರೇನ್ ಮತ್ತು ಪೋಲೆಂಡ್ ಪ್ರವಾಸ ಯಶಸ್ವಿಯಾಗಿ ಮುಗಿಸಿ ಪ್ರಧಾನಿ ಮೋದಿ (PM Narendra Modi) ಶನಿವಾರ (ಆ.24) ಮಧಾಹ್ನ ದೆಹಲಿಯ ಪಾಲಂ ವಿಮಾನ (Palam Airport) ನಿಲ್ದಾಣಕ್ಕೆ ಬಂದಿಳಿದರು.

    ಭಾರತದ ಪ್ರಧಾನಿಯೊಬ್ಬರು ಉಕ್ರೇನ್‌ಗೆ (Ukraine)ನೀಡಿದ ಹಾಗೂ 45 ವರ್ಷಗಳ ಬಳಿಕ ಪೋಲೆಂಡ್‌ಗೆ (Poland) ನೀಡಿದ ಭೇಟಿ ಇದಾಗಿತ್ತು.ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ: ಬೆಂಗಳೂರಿನ ಇಸ್ಕಾನ್ ಟೆಂಪಲ್‌ ಬಳಿ ಸಂಚಾರ ಮಾರ್ಗದಲ್ಲಿ ಬದಲಾವಣೆ

    ಪ್ರಧಾನಿ ಮೋದಿ ಉಕ್ರೇನ್ ಭೇಟಿ ನೀಡಿ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelensky) ಯವರನ್ನು ಭೇಟಿ ಮಾಡಿದರು. ಅವರ ಜೊತೆ ಮಾತುಕತೆ ನಡೆಸಿದರು. ದ್ವಿಪಕ್ಷೀಯ ವಿಚಾರದ ಕುರಿತು ಚರ್ಚಿಸಿದ ಅವರು, ಸಮುದಾಯ ಅಭಿವೃದ್ಧಿ ಯೋಜನೆಗಳು, ಔಷಧ ನಿಯಂತ್ರಣ ಮಾನದಂಡಗಳು, ಸಾಂಸ್ಕೃತಿಕ ವಿನಿಮಯ ಮತ್ತು ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸಲು ನಾಲ್ಕು ತಿಳುವಳಿಕಾ ಒಪ್ಪಂದಗಳಿಗೆ ಸಹಿ ಹಾಕಲಾಯಿತು.

    ಜಾಗತಿಕ ವಿಷಯಗಳ ಬಗ್ಗೆ ಕುರಿತು ಮಾತನಾಡಿ, ಉಕ್ರೇನ್ ಮತ್ತು ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷಗಳು ಸೇರಿದಂತೆ ಹಿತಾಸಕ್ತಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ಉಕ್ರೇನ್ ಮತ್ತು ರಷ್ಯಾ ಎರಡು ರಾಷ್ಟ್ರಗಳ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಪರಿಹರಿಸಲು ಮಾರ್ಗಗಳನ್ನು ಕಂಡುಕೊಳ್ಳಬೇಕು ಮತ್ತು ಶಾಂತಿಯನ್ನು ತರಲು ಅಗತ್ಯವಿರುವ ಎಲ್ಲಾ ಪ್ರಯತ್ನಗಳಲ್ಲಿ ಭಾರತ ಸಕ್ರೀಯ ಪಾತ್ರವನ್ನು ವಹಿಸಲು ಸಿದ್ಧವಾಗಿದೆ ಎಂದು ಮೋದಿ ಭರವಸೆ ನೀಡಿದರು.ಇದನ್ನೂ ಓದಿ: ತಮಿಳು ಸೂಪರ್ ಸ್ಟಾರ್ ಸಿನಿಮಾದಲ್ಲಿ ಕನ್ನಡದ ಸೂಪರ್ ಸ್ಟಾರ್ ಫಿಕ್ಸ್

    ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಕೊನೆಗೊಳಿಸುವ ಪ್ರಯತ್ನದಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದರು. ಕೀವ್‌ನಲ್ಲಿ (kyiv) ಮಾತಾನಾಡಿದ ಮೋದಿ ಝೆಲೆನ್ಸ್ಕಿಯವರಿಗೆ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದರು.

  • ನಮ್ಮ ಸಂಸ್ಕೃತಿಯಲ್ಲಿ ಮಾನವೀಯತೆಯೇ ಮೊದಲು, ಯುದ್ಧದ ಸಮಯವಲ್ಲ: ಪೋಲೆಂಡ್‍ನಲ್ಲಿ ಮೋದಿ ಶಾಂತಿ ಮಂತ್ರ

    ನಮ್ಮ ಸಂಸ್ಕೃತಿಯಲ್ಲಿ ಮಾನವೀಯತೆಯೇ ಮೊದಲು, ಯುದ್ಧದ ಸಮಯವಲ್ಲ: ಪೋಲೆಂಡ್‍ನಲ್ಲಿ ಮೋದಿ ಶಾಂತಿ ಮಂತ್ರ

    – 45 ವರ್ಷಗಳ ಬಳಿಕ ಭಾರತದ ಪ್ರಧಾನಿ ಪೋಲೆಂಡ್‍ಗೆ

    ವಾರ್ಸಾ: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಉಕ್ರೇನ್ (Ukraine) ಹಾಗೂ ಪೋಲೆಂಡ್ (Poland) ಪ್ರವಾಸದ ಮೊದಲ ಹಂತದಲ್ಲಿ ಪೋಲೆಂಡ್‍ಗೆ ಭೇಟಿ ನೀಡಿದ್ದಾರೆ.

    ವಾರ್ಸಾದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಅವರು ಮಾತನಾಡಿದ್ದಾರೆ. ಈ ವೇಳೆ, ಭಾರತವು ಭಗವಾನ್ ಬುದ್ಧನ ಪರಂಪರೆಯ ನಾಡು. ಆದ್ದರಿಂದ, ಭಾರತವು ಜಗತ್ತಿನ ಎಲ್ಲೆಡೆ ಶಾಶ್ವತ ಶಾಂತಿಯನ್ನು ಪ್ರತಿಪಾದಿಸಿಸುತ್ತದೆ. ಇದು ಯುದ್ಧದ ಯುಗವಲ್ಲ. ಭಾರತವು ಯಾವಾಗಲೂ ಸಂಘರ್ಷವನ್ನು ಪರಿಹರಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬಲವಾಗಿ ನಂಬುತ್ತದೆ. ನಾವು ಇಡೀ ಜಗತ್ತನ್ನು ಒಂದೇ ಕುಟುಂಬವೆಂದು ಪರಿಗಣಿಸಿದ್ದೇವೆ ಮತ್ತು ಇದು ಇಂದಿನ ಭಾರತದ ನೀತಿಗಳು ಮತ್ತು ನಿರ್ಧಾರಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ ಎಂದಿದ್ದಾರೆ.

    ಇಂದಿನ ಭಾರತವು ಎಲ್ಲರೊಂದಿಗೆ ಸಂಪರ್ಕ ಹೊಂದಲು ಬಯಸುತ್ತದೆ. ಈ ಮೂಲಕ ಎಲ್ಲರ ಅಭಿವೃದ್ಧಿ ಹಾಗೂ ಹಿತಾಸಕ್ತಿಗಳ ಬಗ್ಗೆ ಯೋಚಿಸುತ್ತದೆ. ಕೋವಿಡ್ ಬಂದಾಗ, ಭಾರತ ಮಾನವೀಯತೆಯೇ ಮೊದಲು ಎಂದು ಹೇಳಿತ್ತು. ನಾವು ವಿಶ್ವದ 150 ಕ್ಕೂ ಹೆಚ್ಚು ದೇಶಗಳಿಗೆ ಔಷಧಗಳು ಮತ್ತು ಲಸಿಕೆಗಳನ್ನು ಕಳುಹಿಸಿದ್ದೇವೆ. ಎಲ್ಲಿ ಭೂಕಂಪ ಅಥವಾ ಯಾವುದೇ ವಿಪತ್ತು ಸಂಭವಿಸಿದರೂ ಭಾರತಕ್ಕೆ ಮಾನವೀಯತೆ ಒಂದೇ ಮೊದಲ ಮಂತ್ರ ಎಂದು ಶಾಂತಿಯ ಸಂದೇಶ ಸಾರಿದ್ದಾರೆ.

    ಭಾರತ ಮತ್ತು ಫೋಲೆಂಡ್ ಬಹಳಷ್ಟು ಸಾಮ್ಯತೆಗಳನ್ನು ಹೊಂದಿವೆ. ಅವುಗಳಲ್ಲಿ ಒಂದು ಪ್ರಜಾಪ್ರಭುತ್ವವಾಗಿದೆ. ಭಾರತವು ಪ್ರಜಾಪ್ರಭುತ್ವದ ತಾಯಿ, ನಮ್ಮ ದೇಶದ ಜನರು ಪ್ರಜಾಪ್ರಭುತ್ವದಲ್ಲಿ ಹೆಚ್ಚಿನ ವಿಶ್ವಾಸ ಹೊಂದಿದ್ದಾರೆ ಮತ್ತು ಇದು ಇತ್ತೀಚಿನ ಲೋಕಸಭಾ ಚುನಾವಣೆಗಳಲ್ಲಿ ಅದು ಸ್ಪಷ್ಟವಾಗಿದೆ ಎಂದಿದ್ದಾರೆ.

    ಬಳಿಕ 2022 ರಲ್ಲಿ ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದಾಗ ಭಾರತೀಯ ವಿದ್ಯಾರ್ಥಿಗಳಿಗೆ ನೀಡಿದ ಬೆಂಬಲಕ್ಕಾಗಿ ಮೋದಿ ಧನ್ಯವಾದ ಅರ್ಪಿಸಿದರು. ಕಳೆದ 45 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಪೋಲೆಂಡ್‍ಗೆ ಭೇಟಿ ನೀಡಿರುವುದು ಇದಾಗಿದೆ.

  • ರೈಲಿನಲ್ಲಿ ಉಕ್ರೇನಿಗೆ ಮೋದಿ ಭೇಟಿ – ಐಷಾರಾಮಿ ರೈಲಿನ ವಿಶೇಷತೆ ಏನು?

    ರೈಲಿನಲ್ಲಿ ಉಕ್ರೇನಿಗೆ ಮೋದಿ ಭೇಟಿ – ಐಷಾರಾಮಿ ರೈಲಿನ ವಿಶೇಷತೆ ಏನು?

    ಕಿವ್‌: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಎರಡು ದಿನಗಳ ಕಾಲ ವಿದೇಶ ಪ್ರವಾಸ ಕೈಗೊಂಡಿದ್ದು, ಪೋಲೆಂಡ್‌ನಲ್ಲಿ (Poland) ಲ್ಯಾಂಡ್ ಆಗಿದ್ದಾರೆ. 40 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಪೋಲೆಂಡ್‌ಗೆ ಭೇಟಿ ನೀಡಿದ್ದಾರೆ. ಪೋಲೆಂಡ್ ಪ್ರವಾಸದ ಬಳಿಕ ಪ್ರಧಾನಿ ಮೋದಿ ಉಕ್ರೇನ್‌ಗೆ ಭೇಟಿ ನೀಡಲಿದ್ದಾರೆ. ರಷ್ಯಾ ಯುದ್ಧದ ಬಳಿಕ ಉಕ್ರೇನ್‌ಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.

    ಪೋಲೆಂಡ್‌ನಿಂದ ಪ್ರಧಾನಿ ಮೋದಿ ಆಗಸ್ಟ್ 23 ರಂದು ಐಷಾರಾಮಿ ‘ಟ್ರೇನ್ ಫೋರ್ಸ್ ಒನ್’ನಲ್ಲಿ ಉಕ್ರೇನ್‌ಗೆ ಪ್ರಯಾಣಿಸಲಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.ಇದನ್ನೂ ಓದಿ: ಟ್ರಂಪ್ ದೇಶಕ್ಕೆ ಡೇಂಜರಸ್, ನಾವು ಮೊದಲೇ ಸಿನೆಮಾ ನೋಡಿದ್ದೇವೆ: ಬರಾಕ್ ಒಬಾಮ

    ರೈಲಿನ ವಿಶೇಷತೆಗಳು:
    ಪೋಲೆಂಡ್‌ನಿಂದ ಪ್ರಧಾನಿ ಮೋದಿ ಆಗಸ್ಟ್ 23 ರಂದು ಉಕ್ರೇನ್ (Ukraine) ರಾಜಧಾನಿ ಕೀವ್‌ಗೆ (Kyiv) ‘ಟ್ರೇನ್ ಫೋರ್ಸ್ ಒನ್’ (Train Force One) ಐಶಾರಾಮಿ ರೈಲಿನಲ್ಲಿ ಪ್ರಯಾಣಿಸಲಿದ್ದಾರೆ. ಇದಕ್ಕೂ ಮುನ್ನ ಅಮೆರಿಕಾ ಅಧ್ಯಕ್ಷ ಜೋ ಬೈಡನ್ (Joe Biden) ಹಾಗೂ ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ (Emmanuel Macron) ಅವರು ಕೀವ್ ಭೇಟಿ ವೇಳೆ ಈ ರೈಲಿನಲ್ಲಿ ಪ್ರಯಾಣಿಸಿದ್ದರು. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ಅವರು ತಮ್ಮ ಅಂತರರಾಷ್ಟ್ರೀಯ ಪ್ರವಾಸಗಳಿಗಾಗಿ ಈ ರೈಲಿನಲ್ಲಿ ಪ್ರಯಾಣಿಸುತ್ತಾರೆ.

    ಈ ರೈಲು ಮರದ ಫಲಕದಿಂದ ಸಿದ್ಧಪಡಿಸಿದ ಕ್ಯಾಬಿನ್‌ಗಳನ್ನು ಹೊಂದಿದೆ. ಅತಿಥಿಗಳೊಂದಿಗೆ ಸಭೆ ಕೈಗೊಳ್ಳಲು ಟೇಬಲ್, ಸೋಫಾ, ಟಿವಿ ಹಾಗೂ ಅಚ್ಚುಕಟ್ಟಾದ ಮಲಗುವ ವ್ಯವಸ್ಥೆಯನ್ನು ಈ ರೈಲು ಒಳಗೊಂಡಿದೆ.

    2014ರಲ್ಲಿ ಮೂಲತಃ ಕ್ರೈಮಿಯಾದಲ್ಲಿ ಪ್ರವಾಸಿಗರಿಗಾಗಿ ಈ ರೈಲನ್ನು ನಿರ್ಮಿಸಲಾಯಿತು. ಯುದ್ಧದ ಸಂದರ್ಭದಲ್ಲಿ ರಷ್ಯಾದ ವಿದ್ಯುತ್ ಜಾಲಗಳು ಮತ್ತು ವಿದ್ಯುತ್ ಉತ್ಪಾದನಾ ಸೌಲಭ್ಯಗಳ ಮೇಲೆ ಗಮನಾರ್ಹ ಸಮಸ್ಯೆಯಿಂದಾಗಿ ಉಕ್ರೇನ್ ರೈಲುಗಳನ್ನು ವಿದ್ಯುತ್ ಇಂಜಿನ್‌ನಿಂದ ಡೀಸೆಲ್ ಇಂಜಿನ್‌ಗಳಾಗಿ ಪರಿವರ್ತನೆ ಮಾಡಲಾಗಿದೆ. ಈ ಪರಿವರ್ತನೆಯಿಂದಾಗಿ ಪೋಲೆಂಡ್ ಗಡಿಯಿಂದ ಕೀವ್‌ಗೆ ರೈಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ.ಇದನ್ನೂ ಓದಿ: ಪ್ರಧಾನಿ ಮೋದಿ ವಿದೇಶಿ ಪ್ರವಾಸ – ಪೋಲೆಂಡ್ ಮತ್ತು ಉಕ್ರೇನ್‌ಗೆ ಭೇಟಿ

    ಯುದ್ಧದ ಸಂದರ್ಭದಲ್ಲಿ ಹಾನಿಗೊಳಗಾದ ದೇಶದ ಮೂಲಕ ವಿಶ್ವ ನಾಯಕರು ಮತ್ತು ವಿಐಪಿಗಳನ್ನು ಸಾಗಿಸಲು ಈ ಐಷಾರಾಮಿ ರೈಲನ್ನು ಮರು ರೂಪಿಸಲಾಯಿತು. ರಷ್ಯಾ ಆಕ್ರಮಣದ ಸಮಯದಲ್ಲಿಯೂ ಲಕ್ಷಾಂತರ ಜನರನ್ನು, ಅನೇಕ ನಾಯಕರನ್ನು ಈ ರೈಲಿನ ಮೂಲಕ ಸ್ಥಳಾಂತರಿಸಲಾಗಿದೆ. ರಷ್ಯಾ ಆಕ್ರಮಣದ ಹೊರತಾಗಿಯೂ ದೇಶದ ಸಾರಿಗೆ ವ್ಯವಸ್ಥೆಯನ್ನು ಸುಗಮವಾಗಿ ನಿರ್ವಹಿಸುತ್ತಿರುವ ಹಿನ್ನಲೆಯಲ್ಲಿ ಈಗಲೂ ಈ ರೈಲು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

    ಜೂನ್‌ನಲ್ಲಿ ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯ (G7 Summit) ಸಂದರ್ಭದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಪ್ರಧಾನಿ ಮೋದಿ ಭೇಟಿಯಾಗಿದ್ದರು. ಅದಾದ ಬಳಿಕ ಆಗಸ್ಟ್ 23 ರಂದು ಉಕ್ರೇನ್ ಭೇಟಿ ನೀಡುವ ಮೂಲಕ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

  • ಪ್ರಧಾನಿ ಮೋದಿ ವಿದೇಶಿ ಪ್ರವಾಸ – ಪೋಲೆಂಡ್ ಮತ್ತು ಉಕ್ರೇನ್‌ಗೆ ಭೇಟಿ

    ಪ್ರಧಾನಿ ಮೋದಿ ವಿದೇಶಿ ಪ್ರವಾಸ – ಪೋಲೆಂಡ್ ಮತ್ತು ಉಕ್ರೇನ್‌ಗೆ ಭೇಟಿ

    – 40 ವರ್ಷಗಳ ಬಳಿಕ ಪೋಲೆಂಡ್‌ಗೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಎರಡು ದಿನಗಳ ವಿದೇಶ ಪ್ರವಾಸ ಕೈಗೊಂಡಿದ್ದು, ಇದರ ಭಾಗವಾಗಿ ಮೊದಲು ಅವರು ಪೋಲೆಂಡ್‌ಗೆ ತೆರಳಲಿದ್ದಾರೆ. 45 ವರ್ಷಗಳ ಬಳಿಕ ಪೋಲೆಂಡ್‌ಗೆ ಭಾರತದ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿದ್ದಾರೆ. ಪ್ರವಾಸದಲ್ಲಿ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಧಾನಿ ಡೊನಾಲ್ಡ್ ಟಸ್ಕ್ ಮತ್ತು ಅಧ್ಯಕ್ಷ ಆಂಡ್ರೆಜ್ ದುಡಾ ಅವರೊಂದಿಗೆ ಮೋದಿ ಮಾತುಕತೆ ನಡೆಸಲಿದ್ದಾರೆ.

    ತಮ್ಮ ನಿರ್ಗಮನಕ್ಕೂ ಪ್ರಧಾನಿ ಕಚೇರಿಯಿಂದ ಹೇಳಿಕೆ ಬಿಡುಗಡೆಯಾಗಿದ್ದು ಹೇಳಿಕೆಯಲ್ಲಿ, ನಾವು ನಮ್ಮ ರಾಜತಾಂತ್ರಿಕ ಸಂಬಂಧಗಳಿಗೆ 70 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಪೋಲೆಂಡ್‌ಗೆ ಭೇಟಿ ನೀಡುತ್ತಿದ್ದೇನೆ. ಮಧ್ಯ ಯೂರೋಪಿನಲ್ಲಿ ಪೋಲೆಂಡ್ ಪ್ರಮುಖ ಆರ್ಥಿಕ ಪಾಲುದಾರ ಮತ್ತು ಅಲ್ಲಿನ ಭಾರತೀಯ ಸಮುದಾಯದೊಂದಿಗೆ ಸಂವಹನ ನಡೆಸುವುದಾಗಿ ಹೇಳಿದ್ದಾರೆ.‌ ಇದನ್ನೂ ಓದಿ: ಇನ್ನು ಮುಂದೆ ಜಪಾನ್‌ಗೆ ಭಾರತದಿಂದ ಹಸಿರು ಅಮೋನಿಯಾ ರಫ್ತು

    ರೈಲಿನಲ್ಲಿ ಉಕ್ರೇನ್‌ ಭೇಟಿ
    ಪೋಲೆಂಡ್‌ನಿಂದ (Poland) ಪ್ರಧಾನಿ ಮೋದಿ ಆಗಸ್ಟ್ 23 ರಂದು ಐಷಾರಾಮಿ ‘ಟ್ರೇನ್ ಫೋರ್ಸ್ ಒನ್’ ನಲ್ಲಿ ಉಕ್ರೇನ್‌ಗೆ ಪ್ರಯಾಣಿಸಲಿದ್ದಾರೆ‌. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ರಷ್ಯಾ ಉಕ್ರೇನ್ ಯುದ್ಧದ ಬಳಿಕ ಪ್ರಧಾನಿ ಮೋದಿ ಉಕ್ರೇನ್‌ಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.

    ಪೋಲೆಂಡ್‌ನಿಂದ ನಾನು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್‌ಕಿಯವರ ಆಹ್ವಾನದ ಮೇರೆಗೆ ಉಕ್ರೇನ್‌ಗೆ ಭೇಟಿ ನೀಡಲಿದ್ದೇನೆ. ಇದು ಭಾರತದ ಪ್ರಧಾನಿಯೊಬ್ಬರು ಉಕ್ರೇನ್‌ಗೆ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದಾರೆ. ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ಕುರಿತು ಅಧ್ಯಕ್ಷ ಝೆಲೆನ್ಸ್‌ಕಿ ಅವರೊಂದಿಗೆ ಮಾತುಕತೆ ಅವಕಾಶವನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಅವರು ತಮ್ಮ ನಿರ್ಗಮನ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಸಾಕ್ಷ್ಯ ನೀಡಿದ್ರೆ ಝಾಕೀರ್‌ ನಾಯ್ಕ್‌ ಭಾರತಕ್ಕೆ ಹಸ್ತಾಂತರ – ಮಲೇಷ್ಯಾ ಪ್ರಧಾನಿ ಇಬ್ರಾಹಿಂ

    ಉಕ್ರೇನ್ ಅನ್ನು ‘ಸ್ನೇಹಿತ’ ಮತ್ತು ‘ಪಾಲುದಾರ’ ಎಂದು ಕರೆದಿರುವ ಮೋದಿ ಶಾಂತಿ ಮತ್ತು ಸ್ಥಿರತೆ ಶೀಘ್ರದಲ್ಲೇ ಮರಳಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಭಾರತ ಉಕ್ರೇನ್ ಸಂಬಂಧ ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

  • ಪೋಲೆಂಡ್‌ಗೆ ಕ್ಷಿಪಣಿ ಹಾರಿಸಿ ಉಕ್ರೇನ್ ಎಡವಟ್ಟು

    ಪೋಲೆಂಡ್‌ಗೆ ಕ್ಷಿಪಣಿ ಹಾರಿಸಿ ಉಕ್ರೇನ್ ಎಡವಟ್ಟು

    ಕೀವ್/ಮಾಸ್ಕೋ: ಉಕ್ರೇನ್ (Ukraine) ಗಡಿಗೆ ಕೇವಲ 5 ಕಿಮೀ ದೂರದಲ್ಲಿರುವ ಪೋಲೆಂಡ್‌ನ (Poland) ಪ್ರಜೊವೊಡೋವ್ ಎಂಬ ಹಳ್ಳಿಯಲ್ಲಿ ಕ್ಷಿಪಣಿಯೊಂದು ಅಪ್ಪಳಿಸಿದೆ.

    ಆರಂಭದಲ್ಲಿ ಇದು ರಷ್ಯಾ (Russia) ಪ್ರಯೋಗಿಸಿದ ಕ್ಷಿಪಣಿ ಎಂದು ಸುದ್ದಿಯಾಗಿತ್ತು. ಇಬ್ಬರು ನಾಗರಿಕರು ಮೃತಪಟ್ಟ ಹಿನ್ನೆಲೆಯಲ್ಲಿ ಪೋಲೆಂಡ್‌ನಲ್ಲಿ ಹೈ ಅಲರ್ಟ್ ಸೃಷ್ಟಿಯಾಗಿದ್ದು ಅಲ್ಲಿನ ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ (Investigation) ಇದು ಉಕ್ರೇನ್ ಪ್ರಯೋಗಿಸಿದ ಕ್ಷಿಪಣಿ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೋಲೆಂಡ್ ಸೇನಾ (Poland Army) ಅಧಿಕಾರಿಗಳು ತೆರಳಿದ್ದು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಧಗ ಧಗನೆ ಹೊತ್ತಿ ಉರಿದ ಜಮ್ಮು-ಕಾಶ್ಮೀರದ ಜಾಮಿಯಾ ಮಸೀದಿ

    ನಮ್ಮ ಕ್ಷಿಪಣಿ ದಾಳಿಯನ್ನು (Missile Attack) ತಡೆಯಲು ಉಕ್ರೇನ್ (Ukraine) ಹಾರಿಸಿದ ಏರ್ ಡಿಫೆನ್ಸ್ ಕ್ಷಿಪಣಿ ಎಂದು ರಷ್ಯಾ (Russia) ಹೇಳಿದೆ. ಉಕ್ರೇನ್ ಕ್ಷಿಪಣಿಯ ಫೋಟೋ ಲಭ್ಯವಾಗುತ್ತಿದ್ದಂತೆ ರಷ್ಯಾ ಪಾಶ್ಚಿಮಾತ್ಯ ಜಗತ್ತಿನ ಮೇಲೆ ಮುಗಿಬಿದ್ದಿದೆ. ಇದೆಲ್ಲಾ ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸುವ ತಂತ್ರ ಎಂದು ಕಿಡಿಕಾರಿದೆ. ಆದರೆ ಉಕ್ರೇನ್ ಮಾತ್ರ ಇದು ತಮ್ಮ ಕೆಲಸವಲ್ಲ. ಇದು ರಷ್ಯಾದ ಕೆಲಸ. ಸಾಮೂಹಿಕ ಭದ್ರತೆ ಮೇಲಿನ ದಾಳಿ ಎಂದೇ ವಾದಿಸಿದೆ. ಇದನ್ನೂ ಓದಿ: ಸಂಸದರ ಟ್ವೀಟ್‍ಗೆ ಸಿಮೀತವಾದ ಸುರತ್ಕಲ್ ಟೋಲ್ ರದ್ದತಿ – ಮುಂದುವರಿದ ಹಣ ಸಂಗ್ರಹ

    ರಷ್ಯಾ ಮತ್ತು ಉಕ್ರೇನ್ ನಡುವಿನ ಕದನ ತೀವ್ರಗೊಂಡಿದೆ. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜಿ-20 ಶೃಂಗಸಭೆ ಉದ್ದೇಶಿಸಿ ಮಾತನಾಡುವ ವೇಳೆಯೇ, ಆ ದೇಶದ ಮೇಲೆ ರಷ್ಯಾ ಕ್ಷಿಪಣಿಗಳ ಸುರಿಮಳೆಗೈದಿದೆ.

    Live Tv
    [brid partner=56869869 player=32851 video=960834 autoplay=true]

  • ಪೋಲೆಂಡ್ ಮೇಲೆ ರಷ್ಯಾ ಕ್ಷಿಪಣಿ ದಾಳಿ – ಇಬ್ಬರು ಸಾವಿನ ಬೆನ್ನಲ್ಲೇ ಅಮೆರಿಕ ತುರ್ತು ಸಭೆ

    ಪೋಲೆಂಡ್ ಮೇಲೆ ರಷ್ಯಾ ಕ್ಷಿಪಣಿ ದಾಳಿ – ಇಬ್ಬರು ಸಾವಿನ ಬೆನ್ನಲ್ಲೇ ಅಮೆರಿಕ ತುರ್ತು ಸಭೆ

    ವಾರ್ಸಾ: ಉಕ್ರೇನ್ ಮೇಲೆ ರಷ್ಯಾ (Russia) ಕ್ಷಿಪಣಿ ದಾಳಿ ನಡೆಸುತ್ತಿದ್ದ ವೇಳೆ ಎರಡು ಕ್ಷಿಪಣಿಗಳು ಪೂರ್ವ ಪೋಲೆಂಡ್ (Poland) ಭೂಪ್ರದೇಶದಲ್ಲಿ ಬಿದ್ದು ಇಬ್ಬರು ನಾಗರಿಕರು ಸಾವನ್ನಪ್ಪಿದ ಘಟನೆ ನಡೆದಿದೆ.

    ಉಕ್ರೇನ್‍ನ ಗಡಿಯಲ್ಲಿರುವ ಪೋಲೆಂಡ್ ದೇಶದ ಲುಬ್ಲಿನ್ ವೊವೊಡೆಶಿಪ್‍ನಲ್ಲಿರುವ ಪ್ರಜೆವೊಡೋವ್‍ನ ಜನನಿಬಿಡ ಪ್ರದೇಶದಲ್ಲಿ ಎರಡು ರಾಕೆಟ್‍ಗಳು ಬಿದ್ದಿವೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ, ಪೊಲೀಸರು ಮತ್ತು ಸೇನೆಯು ಘಟನಾ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿ ಹೇಳಿದೆ. ಉಕ್ರೇನ್ ಆಕ್ರಮಣದ ನಂತರ ರಷ್ಯಾದ ಶಸ್ತ್ರಾಸ್ತ್ರಗಳು ನ್ಯಾಟೋ ದೇಶದ ಮೇಲೆ ಬಂದಿರುವುದು ಇದೇ ಮೊದಲ ಬಾರಿಗೆ ಆಗಿದೆ.

    ಪೋಲೆಂಡ್‍ನಲ್ಲಿ ಇಬ್ಬರು ಸಾವನ್ನಪ್ಪಿದ ಬೆನ್ನಲ್ಲೆ ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) G7 ಹಾಗೂ ನ್ಯಾಟೋ ನಾಯಕರೊಂದಿಗೆ ತುರ್ತು ಸಭೆ ಕರೆದಿದ್ದಾರೆ. ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ 20 ಸಭೆಗಾಗಿ ಜಾಗತಿಕ ನಾಯಕರು ಬುಧವಾರ ಪೋಲೆಂಡ್‍ನಲ್ಲಿ ಸ್ಫೋಟಗಳ ನಂತರ ತುರ್ತು ಸಭೆ ನಡೆಸಿದರು. ಅಮೆರಿಕದ ಪೂರ್ಣ ಬೆಂಬಲದೊಂದಿಗೆ, ಪೋಲೆಂಡ್ ಸಹಕಾರದಲ್ಲಿ ಈ ಪ್ರಕರಣದ ತನಿಖೆ ನಡೆಯಲಿದೆ ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಹೆತ್ತ ಮಗುವನ್ನೇ ಮಾರಿದ ತಾಯಿ – ನಾಲ್ಕೂವರೆ ವರ್ಷದ ಬಳಿಕ ಮತ್ತೆ ತಂದೆಯನ್ನ ಸೇರಿದ ಬಾಲಕ

    ನ್ಯಾಟೊ ಸದಸ್ಯ ರಾಷ್ಟ್ರ ಪೋಲೆಂಡ್ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿರುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ವಿದ್ಯಮಾನಗಳಿಗೆ ಕಾರಣವಾಗಿದೆ. ಇಬ್ಬರು ನಾಗರಿಕರ ಸಾವಿಗೆ ಪೋಲೆಂಡ್ ತೀವ್ರ ಸಂತಾಪ ಸೂಚಿಸಿದೆ. ಪೋಲೆಂಡ್ ಅಧ್ಯಕ್ಷ ಅಂಡ್ರೇಜ್ ದುದಾ ಬುಧವಾರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ವಿವಾದಿತ ಬಸ್ ನಿಲ್ದಾಣಕ್ಕೆ ರಾತ್ರೋರಾತ್ರಿ ನಾಮಫಲಕ – ಸುತ್ತೂರು ಶ್ರೀಗಳ, ಮೋದಿ ಫೋಟೋ ಬಳಕೆ

    Live Tv
    [brid partner=56869869 player=32851 video=960834 autoplay=true]

  • ಪರಾವಲಂಬಿ, ಆಕ್ರಮಣಕಾರಿ, ಮನೆಗೆ ವಾಪಸ್ ಹೋಗು – ಪೋಲೆಂಡ್‍ನಲ್ಲಿ ಭಾರತೀಯನಿಗೆ ಜನಾಂಗೀಯ ನಿಂದನೆ

    ಪರಾವಲಂಬಿ, ಆಕ್ರಮಣಕಾರಿ, ಮನೆಗೆ ವಾಪಸ್ ಹೋಗು – ಪೋಲೆಂಡ್‍ನಲ್ಲಿ ಭಾರತೀಯನಿಗೆ ಜನಾಂಗೀಯ ನಿಂದನೆ

    ವಾಷಿಂಗ್ಟನ್: ಅಮೆರಿಕ ವ್ಯಕ್ತಿಯೋರ್ವ ಭಾರತ ಮೂಲಕ ವ್ಯಕ್ತಿಯ ಮೇಲೆ ಜನಾಂಗೀಯ ನಿಂದನೆ ಮಾಡಿರುವ ಘಟನೆ ಪೋಲೆಂಡ್‍ನ ರಾಜಧಾನಿ ವಾರ್ಸಾದಲ್ಲಿ ನಡೆದಿದೆ.

    ಭಾರತೀಯ ವ್ಯಕ್ತಿಗೆ ನಿಂದಿಸುತ್ತಿರುವ ವೀಡಿಯೋವನ್ನು ಸೆರೆ ಹಿಡಿದು ಅಮೆರಿಕ ವ್ಯಕ್ತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ವೀಡಿಯೋದಲ್ಲಿ ಭಾರತೀಯನಿಗೆ ಪ್ರಶ್ನೆಗಳನ್ನು ಕೇಳಿ ಕಿರುಕುಳ ನೀಡಿರುವುದನ್ನು ಕಾಣಬಹುದಾಗಿದೆ.

    ನನ್ನ ಅನುಮತಿ ಇಲ್ಲದೇ ಏಕೆ ವೀಡಿಯೋ ಮಾಡುತ್ತಿದ್ದೀರಾ, ವೀಡಿಯೋ ಮಾಡುವುದನ್ನು ನಿಲ್ಲಿಸಿ ಎಂದು ಹೇಳಿದರೂ ಭಾರತೀಯ ವ್ಯಕ್ತಿಯ ಬೆಂಬಿಡದೇ ವೀಡಿಯೋವನ್ನು ಸೆರೆ ಹಿಡಿಯುತ್ತಾ ಅವಾಚ್ಯ ಶಬ್ದದಿಂದ ನಿಂದಿಸಿದ್ದಾನೆ. ಇದನ್ನೂ ಓದಿ: ಗೋ ಮೂತ್ರದಲ್ಲಿ ಸ್ನಾನ ಮಾಡೋದು ನೀವೇ ಅಲ್ವಾ- ಅಮೆರಿಕದಲ್ಲಿ ಭಾರತೀಯರ ಮೇಲೆ ಜನಾಂಗೀಯ ನಿಂದನೆ

    ಅಮೆರಿಕದಲ್ಲಿ ನಿಮ್ಮಂತಹ ತುಂಬಾ ಜನ ಇದ್ದಾರೆ. ನೀವು ಪೋಲೆಂಡ್‍ನಲ್ಲಿ ಏಕೆ ಇದ್ದೀರಾ? ನೀವು ಪೋಲೆಂಡ್ ಅನ್ನು ಪಡೆದುಕೊಳ್ಳಬಹುದು ಎಂದು ಅಂದುಕೊಂಡಿದ್ದೀರಾ? ನಿಮಗೆ ನಿಮ್ಮದೇ ಆದ ದೇಶವಿದೆ. ನೀವು ಏಕೆ ಹಿಂತಿರುಗಬಾರದು? ಬಿಳಿಯರ ನಾಡಿಗೆ ಭಾರತೀಯರು ಏಕೆ ಬಂದಿದ್ದೀರಾ? ನಮ್ಮ ಪರಿಶ್ರಮದಿಂದ ನೀವು ಬದುಕುತ್ತಿದ್ದೀರಾ. ನೀವೇಕೆ ಪರಾವಲಂಬಿಯಾಗಿದ್ದೀರಿ? ನೀವು ಆಕ್ರಮಣಕಾರರು. ಮನೆಗೆ ಹೋಗು ಆಕ್ರಮಣಕಾರ. ನೀವು ಯೂರೋಪ್‍ನಲ್ಲಿ ಇರುವುದು ನಮಗೆ ಬೇಡ ಎಂದು ಅಮೆರಿಕದ ಪ್ರವಾಸಿ ಕಿಡಿಕಾರಿದ್ದಾನೆ.

    4 ನಿಮಿಷವಿರುವ ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ವೀಡಿಯೋದಲ್ಲಿ ಭಾರತೀಯ ವ್ಯಕ್ತಿಯ ಮೇಲೆ ಜನಾಂಗೀಯ ನಿಂದನೆ ಮತ್ತು ಅಶ್ಲೀಲ ಪದಗಳನ್ನು ಬಳಸಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ವೀಡಿಯೋದಲ್ಲಿರುವ ಅಮೆರಿಕದ ವ್ಯಕ್ತಿಯನ್ನು ಜಾನ್ ಮಿನಾಡಿಯೊ ಜೂನಿಯರ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಗೋ ಬ್ಯಾಕ್ ಇಂಡಿಯಾ, ನೀವು ನಮ್ಮ ದೇಶ ಹಾಳು ಮಾಡ್ತಿದ್ದೀರಾ – ಭಾರತೀಯ ಮಹಿಳೆಯರ ಮೇಲೆ ವಿದೇಶಿ ಮಹಿಳೆಯಿಂದ ಹಲ್ಲೆ

    ಕಳೆದ ವಾರ ಅಮೆರಿಕದಲ್ಲಿ ಭಾರತ ಮೂಲದ ವ್ಯಕ್ತಿ ಮೇಲೆ ಜನಾಂಗೀಯ ನಿಂದನೆ ನಡೆದ ಮತ್ತೊಂದು ಪ್ರಕರಣ ವರದಿಯಾಗಿತ್ತು. ಆದರೆ ಇದು ‘ದೇಶಬಾಂಧವ’ನಿಂದಲೇ ನಡೆದಿತ್ತು. ಸಿಖ್ ಧರ್ಮೀಯನೊಬ್ಬ ‘ಕೊಳಕು ಹಿಂದೂ’ ಮತ್ತು ‘ಅಸಹ್ಯಕರ ನಾಯಿ’ ಎಂದು ಭಾರತೀಯ – ಅಮೆರಿಕನ್‍ನನ್ನು ನಿಂದಿಸಿದ ಘಟನೆ ಕ್ಯಾಲಿಫೋರ್ನಿಯಾದಲ್ಲಿ ವರದಿಯಾಗಿತ್ತು. ಈ ಮುನ್ನ ಟೆಕ್ಸಾಸ್‍ನಲ್ಲಿ ಭಾರತ ಮೂಲದ ನಾಲ್ವರು ಮಹಿಳೆಯರ ಮೇಲೆ ಮೆಕ್ಸಿಕನ್- ಅಮೆರಿಕನ್ ಮಹಿಳೆಯೊಬ್ಬರು ಹಲ್ಲೆ ನಡೆಸಿದ್ದ ಸುದ್ದಿ ಭಾರಿ ಸದ್ದು ಮಾಡಿತ್ತು. ಇದೀಗ ಮತ್ತೆ ಅಮೆರಿಕದಲ್ಲಿ ಈ ಘಟನೆ ಜರುಗಿದೆ.

    Live Tv
    [brid partner=56869869 player=32851 video=960834 autoplay=true]

  • ಮಿಸ್ ವರ್ಲ್ಡ್ 2021: ಭಾರತೀಯ ಮೂಲದ ಶ್ರೀಸೈನಿ ರನ್ನರ್ ಅಪ್, ಕರೋಲಿನಾ ಬಿಲಾವ್ಸ್ಕಾಗೆ ‘ವಿಶ್ವ ಸುಂದರಿ’ ಕಿರೀಟ

    ಮಿಸ್ ವರ್ಲ್ಡ್ 2021: ಭಾರತೀಯ ಮೂಲದ ಶ್ರೀಸೈನಿ ರನ್ನರ್ ಅಪ್, ಕರೋಲಿನಾ ಬಿಲಾವ್ಸ್ಕಾಗೆ ‘ವಿಶ್ವ ಸುಂದರಿ’ ಕಿರೀಟ

    ಸುಂದರಿಯರ ಜಗತ್ತಿನ ಪ್ರತಿಷ್ಠಿತ ‘ಮಿಸ್ ವರ್ಲ್ಡ್ 2021’ರ ಕಿರೀಟ ಪೋಲೆಂಡ್ ನ ಕರೋಲಿನಾ ಬಿಲಾವ್ಸ್ಕಾ ಅವರ ಪಾಲಾಗಿದೆ. ಪೋರ್ಟೊರಿಕೊದ ಸ್ಯಾನ್ ಸುವಾನ್ ನಲ್ಲಿ ನಡೆದ 70ನೇ ಆವೃತ್ತಿಯ ಮಿಸ್ ವರ್ಲ್ಡ್ ಕಿರೀಟಕ್ಕಾಗಿ ಭಾರೀ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಕರೋಲಿನಾ ಆಯ್ಕೆಯಾಗಿ 2021ರ ವಿಶ್ವ ಸುಂದರಿಯಾಗಿ ಹೊರಹೊಮ್ಮಿದ್ದಾರೆ.

    ಕರೋಲಿನಾ ಎದುರು ಉತ್ತರ ಐರ್ಲೆಂಡ್, ಯುಎಸ್‍ಎ, ಇಂಡೋನೇಷ್ಯಾ ಸೇರಿದಂತೆ ಹಲವು ರಾಷ್ಟ್ರಗಳ ಸುಂದರಿಯರು ಸ್ಪರ್ಧೆಯಲ್ಲಿದ್ದರು. ಇವರೆಲ್ಲರನ್ನೂ ಸೋಲಿಸಿ ವಿಶ್ವ ಸುಂದರಿಯ ಕಿರೀಟವನ್ನು ಧರಿಸಿದ್ದಾರೆ ಪೊಲೆಂಡ್ ಸುಂದರಿ ಕರೋಲಿನಾ. ಇದನ್ನೂ ಓದಿ: ಜೇಮ್ಸ್ ಸಿನಿಮಾ ನೋಡೋಕೆ 10 ಅಲ್ಲ, 100 ಕಾರಣ

    2019ರ ವಿಶ್ವಸುಂದರಿ ಜುಮೈಕಾದ ಟೋನಿ ಆನ್ ಸಿಂಗ್ ಫೈನಲ್ ನಲ್ಲಿ ವಿಜೇತೆ ಕರೋಲಿನಾಗೆ ಕಿರೀಟ ತೊಡಿಸುವಾಗ ಇದು ಕನಸಾ ಅಥವಾ ನನಸಾ ಎನ್ನುವಂತೆ ನೋಡುತ್ತಿದ್ದರು ಕರೋಲಿನಾ. ಈ ಕಿರೀಟವನ್ನು ನಾನೇ ತೊಟ್ಟಿಕೊಂಡಿದ್ದೇನಾ ಎನ್ನುವಂತೆ ಹಲವು ಬಾರಿ ಅದನ್ನು ಸ್ಪರ್ಶಿಸಿ ಖಚಿತ ಪಡಿಸಿಕೊಂಡಿದ್ದು ವಿಶೇಷವಾಗಿತ್ತು.

    ಮೊದಲ ರನ್ನರ್ ಅಪ್ ಆಗಿ ಭಾರತೀಯ ಮೂಲದ ಶ್ರೀಸೈನಿ ಆಯ್ಕೆಯಾದರೆ, ಎರಡನೇ ರನ್ನರ್ ಅಪ್ ಆಗಿ ಕೋಟ್ ಡಿ ಐವೋರನ್ನ ಒಲಿವಿಯಾ ಯಾಸೆ ಸ್ಥಾನ ಪಡೆದಿದ್ದಾರೆ.

    View this post on Instagram

     

    A post shared by Miss World (@missworld)

     

    ಕರೋಲಿನಾ ಬಿಲಾವ್ಸ್ಕಾ?

    ಪೋಲೆಂಡ್ ನ ಈ ಚೆಲುವೆ ಮಾಡಲಿಂಗ್ ಕ್ಷೇತ್ರದಲ್ಲಿ ದೊಡ್ಡ ಹೆಸರು. ಅನೇಕ ಉತ್ಪನ್ನಗಳಿಗೆ ರಾಯಭಾರಿ ಕೂಡ ಇವರಾಗಿದ್ದಾರೆ. ಮಾಡೆಲಿಂಗ್ ಜತೆ ಜತೆಗೆ ಮ್ಯಾನೇಜ್ ಮೆಂಟ್ ಕೋರ್ಸ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸುತ್ತಿರುವ ಇವರಿಗೆ ಮಾಡೆಲಿಂಗ್ ಕ್ಷೇತ್ರದ ಮೇಲೆಯೇ ಸಂಶೋಧನೆ ಮಾಡುವ ಗುರಿಯನ್ನೂ ಹೊಂದಿದ್ದಾರೆ. ಇದನ್ನೂ ಓದಿ : ಮದಗಜ ಚಿತ್ರ ಖ್ಯಾತಿಯ ನಿರ್ದೇಶಕ ಮಹೇಶ್ ಕಂಡಂತೆ ‘ಜೇಮ್ಸ್’ ಸಿನಿಮಾ: ಸೆಲೆಬ್ರಿಟಿ ಫಸ್ಟ್ ರಿವ್ಯೂ

    ಯಾರೀಕೆ ಶ್ರೀಸೈನಿ ಸುಂದರಿ?

    2021ನೇ ಸಾಲಿನ ವಿಶ್ವಸುಂದರಿ ಸ್ಪರ್ಧೆಯಲ್ಲಿ ಕೂದಲೆಳೆ ಅಂತರದಲ್ಲಿ ವಿಶ್ವ ಸುಂದರಿ ಪಟ್ಟ ತಪ್ಪಿಸಿಕೊಂಡ ಶ್ರೀಸೈನಿ ಭಾರತೀಯ ಮೂಲದವರು. ಸದ್ಯ ಅಮೆರಿಕನ್ ಪ್ರಜೆ. ಈ ಸುಂದರಿಯು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾವನ್ನು ಪ್ರತಿನಿಧಿಸಿದ್ದರು.

    ಈ ಸ್ಪರ್ಧೆಯಲ್ಲಿ ಬ್ಯೂಟಿ ವಿತ್ ಎ ಪರ್ಪಸ್ ಸ್ಪರ್ಧೆಯಲ್ಲಿ ಗೆದ್ದಿರುವ ಶ್ರೈಸೈನಿ, ವಿಶ್ವ ಸುಂದರಿ ಪ್ರಶಸ್ತಿಗಾಗಿ ಟಾಪ್ ಆರರಲ್ಲಿ ಬಂದು, ನಂತರ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಅಮೆರಿಕನ್ ಕೂಡ ಇವರಾಗಿರುವುದು ವಿಶೇಷ.

    26ರ ಹರೆಯದ ಶ್ರೀಸೈನಿ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ. ತಮ್ಮ ತಂದೆಯ ಕಂಪೆನಿಯಲ್ಲಿಯೇ ಅವರು ಕೆಲಸ ಮಾಡುತ್ತಿದ್ದಾರೆ. ಓದಿನ ಜತೆ ಜತೆಗೆ ಸಂಗೀತ ಮತ್ತು ನೃತ್ಯದಲ್ಲಿಯೂ ಆಸಕ್ತಿ ಹೊಂದಿರುವ ಇವರು, ಕಾರು ಅಪಘಾತವೊಂದರಲ್ಲಿ ಬದುಕುಳಿದ ಪವಾಡ ಮಾಡಿದ್ದರು. ಇದನ್ನೂ ಓದಿ : ವಿಭಿನ್ನ, ವಿಶಿಷ್ಟ, ಭಾವನಾತ್ಮಕ ಡಿಪಿಗಳಲ್ಲಿ ಪುನೀತ್ ರಾಜ್ ಕುಮಾರ್

    ಭಾರತದ ಸುಂದರಿಗೆ 6ನೇ ಸ್ಥಾನ

    ಹೈದರಾಬಾದ್ ನಲ್ಲಿ ಜನಿಸಿರುವ, ವೃತ್ತಿಯಿಂದ ಹಣಕಾಸು ಮಾಹಿತಿ ವಿನಿಮಯ ವಿಶ್ಲೇಷಕರಾಗಿರುವ 23ರ ವಯಸ್ಸಿನ ಮಾನಸ ವಾರಣಾಸಿ ಈ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದಿಂದ ಸ್ಪರ್ಧಿಸಿದ್ದರು. ಇವರು ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

  • ಉಕ್ರೇನ್‌ನ ಭಾರತೀಯ ರಾಯಭಾರ ಕಚೇರಿ ಪೋಲೆಂಡ್‌ಗೆ ತಾತ್ಕಾಲಿಕ ಸ್ಥಳಾಂತರ

    ಉಕ್ರೇನ್‌ನ ಭಾರತೀಯ ರಾಯಭಾರ ಕಚೇರಿ ಪೋಲೆಂಡ್‌ಗೆ ತಾತ್ಕಾಲಿಕ ಸ್ಥಳಾಂತರ

    ನವದೆಹಲಿ: ಉಕ್ರೇನ್‌ನ ಭೀಕರ ಯುದ್ಧದ ಪರಿಸ್ಥಿತಿಯಲ್ಲಿ ಭಾರತ ತನ್ನ ರಾಯಭಾರ ಕಚೇರಿಯನ್ನು ಪೋಲೆಂಡ್‌ಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲು ನಿರ್ಧರಿಸಿದೆ.

    ಉಕ್ರೇನ್ ರಾಜಧಾನಿ ಕೀವ್ ಹಾಗೂ ಇತರ ಹಲವಾರು ಪ್ರಮುಖ ನಗರಗಳ ಮೇಲೆ ರಷ್ಯಾ ಭೀಕರವಾಗಿ ದಾಳಿ ನಡೆಸುತ್ತಿದ್ದು, ಅಲ್ಲಿನ ಭದ್ರತಾ ಪರಿಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಭಾರತ ತನ್ನ ರಾಯಭಾರ ಕಚೇರಿಯನ್ನು ಪೋಲೆಂಡ್‌ಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲು ನಿರ್ಧರಿಸಿದೆ. ಇದನ್ನೂ ಓದಿ: ಉಕ್ರೇನ್‍ನ ಮತ್ತೊಬ್ಬ ಮೇಯರ್ ಕಿಡ್ನಾಪ್ ಮಾಡಿದ ರಷ್ಯಾ

    ಯುದ್ಧದ ಹಿನ್ನೆಲೆಯಲ್ಲಿ ಉಕ್ರೇನ್‌ನ ಭದ್ರತೆ ಕ್ಷೀಣಿಸುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಉಕ್ರೇನ್‌ನಲ್ಲಿರುವ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಪೋಲೆಂಡ್‌ಗೆ ಸ್ಥಳಾಂತರಿಸಲಾಗುವುದು. ಉಕ್ರೇನ್‌ನ ಪರಿಸ್ಥಿತಿ ಸಮತೋಲನಕ್ಕೆ ಬಂದಂತೆ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ಧ – ಜೆರುಸಲೇಮ್‌ನಲ್ಲಿ ಸಂಧಾನಕ್ಕೆ ಬರಲು ಪುಟಿನ್‌ಗೆ ಝೆಲೆನ್ಸ್ಕಿ ಕರೆ

    ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ಉಕ್ರೇನ್‌ನ 1,300 ಸೈನಿಕರು ಸಾವನ್ನಪ್ಪಿದ್ದು, ರಷ್ಯಾ ನಾಗರಿಕ ಮೇಲೂ ದಾಳಿ ಮಾಡುತ್ತಿದೆ ಎಂದು ಉಕ್ರೇನ್ ಆರೋಪಿಸಿದೆ. ಇದೀಗ ರಷ್ಯಾ ಉಕ್ರೇನ್‌ನ ಇಬ್ಬರು ಮೇಯರ್‌ಗಳನ್ನು ಅಪಹರಿಸಿರುವುದಾಗಿ ವರದಿಯಾಗಿದೆ.

  • ‘ಆಪರೇಷನ್ ಗಂಗಾ’ ನೆನಪಿಗಾಗಿ ಮಗಳಿಗೆ ಗಂಗಾ ಅಂತ ಹೆಸರಿಡ್ತೀನಿ: ಉಕ್ರೇನ್‍ನಿಂದ ವಾಪಸಾದ ಭಾರತೀಯ

    ‘ಆಪರೇಷನ್ ಗಂಗಾ’ ನೆನಪಿಗಾಗಿ ಮಗಳಿಗೆ ಗಂಗಾ ಅಂತ ಹೆಸರಿಡ್ತೀನಿ: ಉಕ್ರೇನ್‍ನಿಂದ ವಾಪಸಾದ ಭಾರತೀಯ

    ವಾರ್ಸಾ: ಉಕ್ರೇನ್‍ನ ಕೀವ್‌ನಲ್ಲಿ ಸಿಲುಕಿದ್ದ ಕೇರಳದ ವ್ಯಕ್ತಿಯನ್ನು ಹಾಗೂ ಆತನ ಪತ್ನಿಯನ್ನು ʼಆಪರೇಷನ್ ಗಂಗಾʼದಡಿಯಲ್ಲಿ ಭಾರತ ರಕ್ಷಿಸಿದ್ದಕ್ಕೆ ತಮ್ಮ ಮಗುವಿಗೆ ಗಂಗಾ ಎಂಬ ಹೆಸರನ್ನು ಇಡಲು ನಿರ್ಧರಿಸಿದ್ದಾರೆ.

    ಅಭಿಜಿತ್ ಕೇರಳದ ನಿವಾಸಿ. ರಷ್ಯಾ ದಾಳಿಗೆ ಪುಟ್ಟ ರಾಷ್ಟ್ರ ಉಕ್ರೇನ್ ನಲುಗಿ ಹೋಗಿದೆ. ಅಲ್ಲಿನ ಕೀವ್ ನಗರದಲ್ಲಿ ಅಭಿಜಿತ್ ಪುಟ್ಟದಾದ ರೆಸ್ಟೋರೆಂಟ್‍ನ್ನು ಇಟ್ಟುಕೊಂಡಿದ್ದರು. ಆದರೆ ರಷ್ಯಾ ದಾಳಿಯಿಂದಾಗಿ ಅಭಿಜಿತ್ ಹಾಗೂ ಅವರ ಗರ್ಭಿಣಿ ಪತ್ನಿಯು ಉಕ್ರೇನ್‌ಲ್ಲಿ ಸಿಲುಕಿದ್ದರು. ನಂತರ ಅವರನ್ನು ರಕ್ಷಿಸಿ, ಸುರಕ್ಷಿತವಾಗಿ ಪೋಲೆಂಡಿಗೆ ಕರೆತರಲಾಯಿತು.

    ಈ ಬಗ್ಗೆ ಮಾತನಾಡಿದ ಅವರು, ದಾಳಿಯಿಂದ ಸುರಕ್ಷಿತವಾಗಿ ಪಾರಾದ ಬಗ್ಗೆ ಸಂತೋಷ ವ್ಯಕ್ತಪಡಿಸಿ, ನನ್ನ ಪತ್ನಿ ಒಂಬತ್ತು ತಿಂಗಳ ಗರ್ಭಿಣಿ. ಇದರಿಂದಾಗಿ ಪೋಲೆಂಡ್‍ನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾಳೆ. ಪತ್ನಿ ಹಾಗೂ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯಲ್ಲಿ ತಿಳಿಸಿದ್ದಾರೆ. ಮಾರ್ಚ್ 26ಕ್ಕೆ ಮಗು ಜನಿಸುವ ನಿರೀಕ್ಷೆಯಿದೆ ಎಂದರು.

    ಇದೇ ವೇಳೆ ಅವರು ಭಾರತ ಸರ್ಕಾರ ಪ್ರಾರಂಭಿಸಿದ ರಕ್ಷಣಾ ಕಾರ್ಯಾಚರಣೆಯ ಆಪರೇಷನ್ ಗಂಗಾ ಹೆಸರಿನ ನೆನಪಿಗಾಗಿ ನನ್ನ ಮಗುವಿಗೆ ಗಂಗಾ ಎಂದು ಹೆಸರಿಡುತ್ತೇನೆ ಎಂದಿದ್ದಾರೆ. ವೈದ್ಯಕೀಯ ಸುರಕ್ಷತೆಯ ಕಾರಣದಿಂದಾಗಿ ಪೋಲೆಂಡ್‍ನ ಆಸ್ಪತ್ರೆಯಲ್ಲಿ ಪತ್ನಿಯೂ ಇರಬೇಕಾದ ಕಾರಣದಿಂದಾಗಿ ಅವರನ್ನು ಬಿಟ್ಟು ತಾವೊಬ್ಬರೇ ಭಾರತಕ್ಕೆ ಬರುವುದಾಗಿ ತಿಳಿಸಿದರು. ಇದನ್ನೂ ಓದಿ: ನವೀನ್ ಮೃತದೇಹ ಪಡೆಯಲು ಎಲ್ಲ ಪ್ರಯತ್ನ: ಬಸವರಾಜ ಬೊಮ್ಮಾಯಿ

    ನಾನು ಉಕ್ರೇನ್‍ನಿಂದ ಪೋಲೆಂಡ್‍ಗೆ ಬರಲು ಒಂದು ಪೈಸೆ ಖರ್ಚು ಮಾಡಿಲ್ಲ. ಎಲ್ಲವನ್ನು ಭಾರತ ಸರ್ಕಾರವೇ ನೋಡಿಕೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೈಕೊಟ್ಟಿತೆ ನ್ಯಾಟೋ- ರಷ್ಯಾ ಬಾಂಬ್‌ ದಾಳಿ ತಡೆಗೆ ಉಕ್ರೇನ್‌ ಮನವಿ ತಿರಸ್ಕಾರ

    ಉಕ್ರೇನ್‍ನಲ್ಲಿ ಸಿಲುಕಿರುವ ಭಾರತದ ಪ್ರಜೆಗಳನ್ನು ರಕ್ಷಿಸಲು ಸರ್ಕಾರ ಆಪರೇಷನ್ ಗಂಗಾವನ್ನು ಪ್ರಾರಂಭಿಸಿದೆ. ಭಾರತದ ಏರ್ ಫೋರ್ಸ್‍ನವರು ಇದರಲ್ಲಿ ಪಾಲ್ಗೊಂಡು ಪ್ರಜೆಗಳನ್ನು ರಕ್ಷಿಸುವ ಕಾರ್ಯ ಚುರುಕುಗೊಳಿಸಿದ್ದಾರೆ.