Tag: Pokhran

  • Video | ರಾಜಸ್ಥಾನದ ಪೋಖ್ರಾನ್‌ ಮೇಲೆ ಪಾಕ್‌ ಬಳಸಿದ ಬೃಹತ್‌ ಮಿಸೈಲ್‌ ಉಡೀಸ್‌!

    Video | ರಾಜಸ್ಥಾನದ ಪೋಖ್ರಾನ್‌ ಮೇಲೆ ಪಾಕ್‌ ಬಳಸಿದ ಬೃಹತ್‌ ಮಿಸೈಲ್‌ ಉಡೀಸ್‌!

    ನವದೆಹಲಿ: ಭಾರತೀಯ ಸೇನಾ ದಾಳಿಗೆ ಕಕ್ಕಾಬಿಕ್ಕಿಯಾಗಿರುವ ಪಾಕಿಸ್ತಾನ ಅಮಾಯಕರನ್ನ ಗುರಿ ಮಾಡಿ ಮಿಸೈಲ್‌ ದಾಳಿ ನಡೆಸುತ್ತಿದೆ. ಆದ್ರೆ ಹೆಜ್ಜೆಹೆಜ್ಜೆಗೂ ಪಾಕ್‌ಗೆ ಹೆಡೆಮುರಿ ಕಟ್ಟುತ್ತಿದೆ. ಅದೇ ರೀತಿ ಶನಿವಾರ ಬೆಳಗ್ಗೆ ರಾಜಸ್ಥಾನದ ಪೋಖ್ರಾನ್ (Pokhran) ಗುರಿಯಾಗಿಸಿ ಪಾಕ್‌ ಹಾರಿಸಿದ ಬೃಹತ್‌ ಮಿಸೈಲ್‌ (Missle) ಅನ್ನು ಭಾರತ ಹೊಡೆದುರುಳಿಸಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುವ ಕುತೂಹಲ ಇದ್ದರೆ ವಿಡಿಯೋ ನೋಡಿ…

  • ನ್ಯೂಕ್ಲಿಯರ್ ಶಕ್ತಿ ‘ನೋ ಫಸ್ಟ್ ಯೂಸ್’ ನೀತಿ ಭವಿಷ್ಯದಲ್ಲಿ ಬದಲಾಗಬಹುದು: ರಾಜನಾಥ್ ಸಿಂಗ್

    ನ್ಯೂಕ್ಲಿಯರ್ ಶಕ್ತಿ ‘ನೋ ಫಸ್ಟ್ ಯೂಸ್’ ನೀತಿ ಭವಿಷ್ಯದಲ್ಲಿ ಬದಲಾಗಬಹುದು: ರಾಜನಾಥ್ ಸಿಂಗ್

    ನವದೆಹಲಿ: ಭಾರತ ಪರಮಾಣು ‘ಮೊದಲ ಬಳಕೆ ಇಲ್ಲ’ ಎಂಬ ಸಿದ್ಧಾಂತವನ್ನು ಪಾಲಿಸುತ್ತದೆ. ಆದರೆ ಇದು ಭವಿಷ್ಯದ ಸನ್ನಿವೇಶಗಳ ಮೇಲೆ ಅವಲಂಬಿಸಿದೆ. ಮುಂದೆ ಈ ಸಿದ್ಧಾಂತ ಬದಲಾಗಬಹುದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

    ಇಂದು ಮಾಜಿ ಪ್ರಧಾನಿ ಅಟಲ್ ಬಿಹಾರ್ ವಾಜಪೇಯಿ ಅವರ ಪುಣ್ಯ ಸ್ಮರಣೋತ್ಸವದ ದಿನವಾದ ಹಿನ್ನೆಲೆ ರಾಜನಾಥ್ ಸಿಂಗ್ ಪೋಖ್ರಾನ್‍ಗೆ ಭೇಟಿಕೊಟ್ಟಿದ್ದರು. ಈ ವೇಳೆ ಅವರು 1998ರಲ್ಲಿ ಭಾರತ ರಹಸ್ಯವಾಗಿ ಐದು ಪರಮಾಣು ಪರೀಕ್ಷೆಗಳನ್ನು ನಡೆಸಿದೆ ಎಂದು ತಿಳಿಸಿದರು.

    ಅಟಲ್ ಜಿ ಅವರ ಪರಮಾಣು ಶಕ್ತಿಯಿಂದ ವ್ಯವಹಾರ ಪರಿಹರಿಸುವ ನೀತಿಗೆ ಪೋಖ್ರಾನ್ ಸಾಕ್ಷಿಯಾಗಿದೆ. ಇಂದಿಗೂ ನಮ್ಮಲ್ಲಿ ಪರಮಾಣು ‘ನೋ ಫಸ್ಟ್ ಯೂಸ್’ ನೀತಿಯನ್ನು ಪಾಲಿಸಲಾಗುತ್ತಿದೆ. ಆದರೆ ಭವಿಷ್ಯದಲ್ಲಿ ಏನಾಗಬಹುದು ಎಂಬುದು ಮುಂದಿನ ಸನ್ನಿವೇಶದ ಮೇಲೆ ನಿರ್ಧರವಾಗುತ್ತದೆ ಎಂದು ರಾಜನಾಥ ಸಿಂಗ್ ಹೇಳಿದರು.

    ಪೋಖ್ರಾನ್‍ಗೆ ಭೇಟಿ ನೀಡುವ ಮೊದಲು ರಾಜನಾಥ್ ಸಿಂಗ್ ಅವರು ರಾಜಸ್ತಾನದ ಜೈಸಲ್ಮೇರ್ ಗೆ ಭೇಟಿಕೊಟ್ಟಿದ್ದರು. ಅಲ್ಲಿ 5ನೇ ಅಂತರಾಷ್ಟ್ರೀಯ ಆರ್ಮಿ ಸ್ಕೌಟ್ ಮಾಸ್ಟರ್ಸ್ ಸ್ಪರ್ಧೆಯ ಮುಕ್ತಾಯ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು ಇದು ಕಾಕತಾಳಿಯದಂತೆ ಆಗಿದೆ, ನಾನು ಅಂತರಾಷ್ಟ್ರೀಯ ಆರ್ಮಿ ಸ್ಕೌಟ್ ಮಾಸ್ಟರ್ಸ್ ಸ್ಪರ್ಧೆಗೆ ಬಂದೆ. ಆದರೆ ಇಂದೇ ಅಟಲ್ ಜಿ ಅವರ ಮೊದಲ ಪುಣ್ಯಸ್ಮರಣೆಯ ದಿನವಾಗಿದೆ. ಹೀಗಾಗಿ ಪೋಖ್ರಾನ್ ನಿಂದಲೇ ಅವರಿಗೆ ನಮನ ಸಲ್ಲಿಸಲು ನಿರ್ಧರಿಸಿದೆ ಎಂದರು.

    ಎದುರಾಳಿಗಳು ಪರಮಾಣು ಶಸ್ತ್ರಾಸ್ತ್ರ ದಾಳಿ ಮಾಡುವ ಮೊದಲು ಪರಮಾಣು ಶಸ್ತ್ರಾಸ್ತ್ರವನ್ನು ಬಳಸುವಂತಿಲ್ಲ ಎಂಬದೇ ‘ನೋ ಫಸ್ಟ್ ಯೂಸ್’ ನೀತಿಯಾಗಿದೆ. 1998ರಲ್ಲಿ ಪೋಖ್ರಾನ್-2 ಪರಮಾಣು ಪರೀಕ್ಷೆ ಬಳಿಕ ‘ನೋ ಫಸ್ಟ್ ಯೂಸ್’ ನೀತಿಯನ್ನು ಭಾರತ ಸ್ವೀಕರಿಸಿತ್ತು. ಈವರೆಗೂ ಭಾರತ ಈ ನೀತಿಯನ್ನು ಚಾಚುತಪ್ಪದೆ ಪಾಲಿಸಿಕೊಂಡು ಬಂದಿದೆ. ಇದುವರೆಗೂ ಕೇವಲ ಪ್ರತಿಕಾರಕ್ಕೆ ಮಾತ್ರ ಪರಮಾಣು ಬಳಸುವ ನೀತಿಯನ್ನು ಭಾರತ ಮುಂದುವರಿಸಿಕೊಂಡು ಬಂದಿದೆ.

  • ಪಾಕ್ ಗಡಿ ಬಳಿಯೇ ವಾಯುಪಡೆ ಶಕ್ತಿ ಪ್ರದರ್ಶನ – ಎಚ್ಚರಿಕೆ ಸಂದೇಶ ರವಾನಿಸಿದ ಭಾರತ – ವಿಡಿಯೋ ನೋಡಿ

    ಪಾಕ್ ಗಡಿ ಬಳಿಯೇ ವಾಯುಪಡೆ ಶಕ್ತಿ ಪ್ರದರ್ಶನ – ಎಚ್ಚರಿಕೆ ಸಂದೇಶ ರವಾನಿಸಿದ ಭಾರತ – ವಿಡಿಯೋ ನೋಡಿ

    ಪೋಖ್ರಾನ್: ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಇತ್ತ ಪಾಕಿಸ್ತಾನ ಗಡಿಯಲ್ಲಿ ಭಾರತೀಯ ವಾಯಸೇನೆ ತನ್ನ ಶಕ್ತಿ ಪ್ರದರ್ಶನ ಮಾಡಿದೆ.

    ಅಣ್ವಸ್ತ್ರ ಪರೀಕ್ಷಾರ್ಥ ಪ್ರಯೋಗ ನಡೆದಿದ್ದ ರಾಜಸ್ಥಾನ ರಾಜ್ಯದ ಪೋಖ್ರಾನ್ ಮರುಭೂಮಿಯಲ್ಲಿ ಯುದ್ಧ ವಿಮಾನಗಳು ಅಬ್ಬರಿಸಿವೆ. ನಿರ್ದೇಶಿತ ಕ್ಷಿಪಣಿ ಪ್ರಯೋಗ ಮೂಲಕ ಆರ್ಭಟಿಸಿದ್ದು, ಈ ಮೂಲಕ ವೈರಿ ಪಾಕಿಸ್ತಾನಕ್ಕೆ ಭಾರತ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದೆ.

    ಪಾಕಿಸ್ತಾನದ ಗಡಿಯಲ್ಲೇ ನಡೆದ ಪ್ರದರ್ಶನದಲ್ಲಿ ವಾಯುಸೇನೆಯ ಯುದ್ಧ ವಿಮಾನಗಳು, ಹೆಲಿಕಾಪ್ಟರ್ ಗಳು ಭಾಗವಹಿಸಿದ್ದವು. ಪ್ರಮುಖವಾಗಿ ತೇಜಸ್, ಹಾಂಕ್ ಎಂಕೆ-132, ನೆಲದಿಂದ ಆಕಾಶಕ್ಕೆ ಮತ್ತು ಆಗಸದಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿಯನ್ನು ಪ್ರಯೋಗಿಸಲಾಯಿತು. ಈ ವೇಳೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಸೇನಾ ಅಧಿಕಾರಿಗಳು ಹಾಗೂ ಐಎಎಫ್ ಗೌರವಾನ್ವಿತ ಸಮೂಹ ಕ್ಯಾಪ್ಟನ್, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಚಿನ್ ಭಾಗವಹಿಸಿದ್ದರು. ಈ ಪ್ರದರ್ಶನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

    ಇತ್ತ ಪುಲ್ವಾಮಾ ದಾಳಿ ವಿಚಾರದಲ್ಲಿ ಇಡೀ ದೇಶ ಒಂದಾಗಿದೆ. ಈ ವಿಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಂದೇ ಧ್ವನಿ ಹೊರಡಿಸಿವೆ. ಇಂದು ದೆಹಲಿಯಲ್ಲಿ ನಡೆದ ಸರ್ವ ಪಕ್ಷ ಸಭೆಯಲ್ಲಿ ಭಯೋತ್ಪಾದಕ ದಾಳಿಯನ್ನು ಸರ್ವಾನುಮತದಿಂದ ಖಂಡಿಸಿವೆ. ಭಯೋತ್ಪಾದನೆ ದಮನಕ್ಕಾಗಿ ಸರ್ಕಾರ ಕೈಗೊಳ್ಳುವ ನಿರ್ಧಾರಗಳಿಗೆ ಬೆಂಬಲ ಘೋಷಿಸಿವೆ. ಹುತಾತ್ಮರ ಕುಟುಂಬಗಳ ದು:ಖದಲ್ಲಿ ಭಾಗಿಯಾಗುವುದಾಗಿ ತಿಳಿಸಿವೆ.

    ಸರ್ವಪಕ್ಷ ಸಭೆ ಬಳಿಕ ಮಾತನಾಡಿದ ಗೃಹ ಸಚಿವ ರಾಜನಾಥ್ ಸಿಂಗ್, ಈ ದುರ್ಘಟನೆಗೆ ಕಾರಣರಾದವರೂ ಯಾರೇ ಆಗಿರಲಿ, ಅವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲು ಎಲ್ಲ ಪಕ್ಷಗಳೂ ಒಮ್ಮತ ತೀರ್ಮಾನಕ್ಕೆ ಬಂದಿವೆ ಎಂದು ತಿಳಿಸಿದರು. ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಮಾತನಾಡಿ, ಸರ್ಕಾರದ ಜೊತೆ ಭಿನ್ನಾಭಿಪ್ರಾಯ ಇರಬಹುದು. ಆದರೆ ದೇಶದ ಹಿತಾಸಕ್ತಿ, ಭದ್ರತೆ ವಿಚಾರದಲ್ಲಿ ಸರ್ಕಾರದ ಜೊತೆ ನಿಲ್ಲುತ್ತೇವೆ, ಸರ್ಕಾರಕ್ಕೆ ನಮ್ಮ ಬೆಂಬಲವಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv