ಬಾಲ್ಟಿಸ್ತಾನ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (Pakistan-Occupied Kashmir) ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದ ಡೈಮರ್ ಜಿಲ್ಲೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ಬಸ್ಸೊಂದು ಕಿರಿದಾದ ಪರ್ವತ ರಸ್ತೆಯಿಂದ ಬಿದ್ದು ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ. 21 ಮಂದಿ ಗಾಯಗೊಂಡಿದ್ದಾರೆ.
ಇಂದು ಬೆಳಗ್ಗೆ 6 ಗಂಟೆಗೆ ಪಿಒಕೆಯ (POK) ಡೈಮರ್‌ನಲ್ಲಿರುವ ಕಾರಕೋರಂ ಹೆದ್ದಾರಿಯ ಯಶೋಖಲ್ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಬಸ್ ಪಾಕಿಸ್ತಾನದ ರಾವಲ್ಪಿಂಡಿಯಿಂದ ಪಿಒಕೆಯ ಗಿಲ್ಗಿಟ್‌ಗೆ ತೆರಳುತ್ತಿತ್ತು. ಬಸ್‌ನಲ್ಲಿ 40 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಇದನ್ನೂ ಓದಿ: ಚೀನಾದಲ್ಲಿ ಹೆದ್ದಾರಿ ಕುಸಿತಕ್ಕೆ 48 ಬಲಿ
ರಕ್ಷಣಾ ತಂಡಗಳನ್ನು ಅಪಘಾತದ ಸ್ಥಳಕ್ಕೆ ರವಾನಿಸಲಾಗಿದೆ. ಗಾಯಗೊಂಡವರನ್ನು ಚಿಲಾಸ್‌ನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಗಾಯಗೊಂಡಿರುವ ಕನಿಷ್ಠ ಐವರು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದ್ದು, ಇಬ್ಬರನ್ನು ಗಿಲ್ಗಿಟ್‌ಗೆ ಸ್ಥಳಾಂತರಿಸಲಾಗಿದೆ.
ನವದೆಹಲಿ: ಭಯೋತ್ಪಾದಕರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಲ್ಲ. ಪಾಕಿಸ್ತಾನಕ್ಕೆ ನುಗ್ಗಿಯಾದರೂ ಸರಿ ಅವರನ್ನು ಕೊಲ್ಲುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು ಎಚ್ಚರಿಕೆ ನೀಡಿದ್ದಾರೆ.
ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಕ್ಷಣಾ ಸಚಿವರು, ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಪ್ರಯತ್ನಿಸಿದ ನಂತರ ಗಡಿಯಾಚೆ ಪಲಾಯನ ಮಾಡುವವರನ್ನು ನಿರ್ಮೂಲನೆ ಮಾಡಲು ಭಾರತವು ಪಾಕಿಸ್ತಾನದೊಳಗೆ (India- Pakistan) ಪ್ರವೇಶಿಸಲಿದೆ. ಯಾವುದೇ ಭಯೋತ್ಪಾದಕನನ್ನು ಬಿಡುವುದಿಲ್ಲ, ಮನೆಗೆ ನುಗ್ಗಿ ಅವನನ್ನು ಕೊಲ್ಲುತ್ತೇವೆ. ದೇಶದ ಶಾಂತಿ ಕದಡಲು ಯತ್ನಿಸಿದರೆ ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಏಳೆಂಟು ದಿನದಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ : ರಾಜನಾಥ್ ಸಿಂಗ್
ಭಾರತವು ತನ್ನ ನೆರೆಹೊರೆಯವರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಕಾಪಾಡಿಕೊಳ್ಳಲು ಬಯಸುತ್ತದೆ. ನಮ್ಮ ಇತಿಹಾಸವನ್ನು ನೋಡಿ. ನಾವು ಯಾವುದೇ ದೇಶದ ಮೇಲೆ ದಾಳಿ ಮಾಡಿಲ್ಲ ಅಥವಾ ಯಾವುದೇ ದೇಶದ ಭೂಪ್ರದೇಶದ ಒಂದು ಇಂಚು ಕೂಡ ಆಕ್ರಮಿಸಿಕೊಂಡಿಲ್ಲ. ಇದು ಭಾರತದ ಲಕ್ಷಣವಾಗಿದೆ. ಆದರೆ ಯಾರಾದರೂ ನಮ್ಮ ನೆಲದಲ್ಲಿ ಭಯೋತ್ಪಾದನೆಯನ್ನು ಹರಡುವ ಮೂಲಕ ಭಾರತವನ್ನು ಹೆದರಿಸಲು ಪ್ರಯತ್ನಿಸಿದರೆ, ಅವರನ್ನು ಯಾವುದೇ ಕಾರಣಕ್ಕೂ ಬಿಡಲ್ಲ ಎಂದು ಸಿಂಗ್ ಎಚ್ಚರಿಕೆ ನೀಡಿದರು.
ಇದೇ ವೇಳೆ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಪ್ರತಿಕ್ರಿಯಿಸಿ, ಪಿಒಕೆ ಜನರು ಭಾರತದೊಂದಿಗೆ ಇರಬೇಕೆಂದು ಒತ್ತಾಯಿಸುತ್ತಾರೆ. 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಕಾಶ್ಮೀರದಲ್ಲಿ ಸಹಜ ಸ್ಥಿತಿ ಮರಳಿದೆ ಮತ್ತು ಅಭಿವೃದ್ಧಿಯು ವೇಗವಾಗಿ ನಡೆಯುತ್ತಿದೆ ಎಂದು ಹೇಳಿದರು.
ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರ (POK) ಶೀಘ್ರವೇ ಭಾರತದೊಂದಿಗೆ ವಿಲೀನವಾಗುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಭರವಸೆ ವ್ಯಕ್ತಪಡಿಸಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಜನರು ತವರು ಭಾರತದೊಂದಿಗೆ ವಿಲೀನದ ಬೇಡಿಕೆಯನ್ನು ಎತ್ತುತ್ತಿದ್ದಾರೆ. ಪಿಒಕೆ ಜನರು ಭಾರತದೊಂದಿಗೆ ವಿಲೀನಗೊಳ್ಳುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಲೇಹ್‌ನಲ್ಲಿ ಸೈನಿಕರೊಂದಿಗೆ ಹೋಳಿ ಆಚರಿಸಿದ ರಾಜನಾಥ್ ಸಿಂಗ್
ಕಾಶ್ಮೀರದ ಬಗ್ಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಇತ್ತೀಚಿನ ಟೀಕೆಗಳ ಬಗ್ಗೆ ಮಾತನಾಡಿ, ಅವರು ಎಂದಾದರೂ ಕಾಶ್ಮೀರವನ್ನು ತೆಗೆದುಕೊಳ್ಳಬಹುದೇ? ಅವರು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಚಿಂತಿಸಬೇಕು. ಸುಮಾರು ಒಂದೂವರೆ ವರ್ಷಗಳ ಹಿಂದೆಯೇ, ನಾವು ದಾಳಿ ಮಾಡಿ ಆಕ್ರಮಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದೆ. ಏಕೆಂದರೆ ಅಲ್ಲಿ ಪರಿಸ್ಥಿತಿ ಬದಲಾಗುತ್ತಿದೆ. ಪಿಒಕೆ ಜನರೇ ಭಾರತದೊಂದಿಗೆ ವಿಲೀನಕ್ಕೆ ಒತ್ತಾಯಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಫೆಬ್ರವರಿಯಲ್ಲಿ, ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ರಾಜಕೀಯ ಕಾರ್ಯಕರ್ತ ಅಮ್ಜದ್ ಅಯೂಬ್ ಮಿರ್ಜಾ ಅವರು, ಪಿಒಕೆ ಯಲ್ಲಿರುವ ಜನರು ಪಾಕಿಸ್ತಾನದ ಆಕ್ರಮಣದಿಂದ ಬೇಸತ್ತಿದ್ದಾರೆ. ಅವರು ಈಗ ಭಾರತದೊಂದಿಗೆ ವಿಲೀನಕ್ಕೆ ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದ್ದರು.
ನವದೆಹಲಿ: ನೆಹರೂ ಅವರ ಪ್ರಮಾದವೇ ಕಾಶ್ಮೀರ-ಪಿಓಕೆ ಸಮಸ್ಯೆಯ ಮೂಲ ಬೇರು ಅಂತ ಲೋಕಸಭೆ (Loksabha), ರಾಜ್ಯಸಭೆಯಲ್ಲಿ (Rajya Sabha) ಕೇಂದ್ರ ಸಚಿವ ಅಮಿತ್ ಶಾ ಗುಡುಗಿದ್ದರು. ಅಮಿತ್ ಶಾ ಹೇಳಿಕೆಗೆ ರಾಹುಲ್ ಗಾಂಧಿ (Rahul Gandhi) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಂಸತ್ ಭವನದ ಬಳಿ ವಾಗ್ದಾಳಿ ನಡೆಸಿದ ಅವರು, ಪಂಡಿತ್ ನೆಹರೂ ಅವರು ಭಾರತಕ್ಕಾಗಿ ಪ್ರಾಣ ಅರ್ಪಿಸಿದ್ದಾರೆ. ಹಲವಾರು ವರ್ಷಗಳ ಕಾಲ ಜೈಲಿನಲ್ಲಿದ್ದರು. ಅಮಿತ್ ಶಾಗೆ (Amitshah) ಇತಿಹಾಸದ ಅರಿವೇ ಇಲ್ಲ. ಅವರು ಇತಿಹಾಸ ತಿಳಿದುಕೊಳ್ತಾರೆ ಅಂತ ನಾನು ನಿರೀಕ್ಷಿಸಲ್ಲ. ಯಾಕೆಂದರೆ ಅಮಿತ್ ಶಾಗೆ ಇತಿಹಾಸವನ್ನು ತಿರುಚೋದೇ ಅವರ ಕಾಯಕ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಕೂಡ ಅಮಿತ್ ಶಾ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ. ಅಮಿತ್ ಶಾ ಅವರಷ್ಟು ನೆಹರೂ ಅವರು ಜ್ಞಾನಿಯಾಗಿರಲಿಲ್ಲ ಅನ್ನಿಸುತ್ತೆ. ನೀವು ಏನೇ ಮಾಡಿದರೂ ಅದು ಸರಿಯೇ ಬಿಡಿ. ಹಾಗಾದರೆ ನೀವು ಪಿಓಕೆಯನ್ನು ಯಾವಾಗ ವಾಪಸ್ ತಗೋತೀರಾ..? ಅಂತ ಅಧೀರ್ ರಂಜನ್ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: Article 370 Verdict – ಇಂದಿನ ತೀರ್ಪು ಕೇವಲ ತೀರ್ಪಲ್ಲ, ಭರವಸೆಯ ದಾರಿದೀಪ: ಮೋದಿ ಸಂತಸ
ಕಾಶ್ಮೀರ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಕೂಡ ಅಮಿತ್ ಶಾ ಟೀಕೆಗೆ ಖಂಡಿಸಿದ್ದಾರೆ. ಜಮ್ಮು-ಕಾಶ್ಮೀರ ನರಕಕ್ಕೆ ಹೋಗಲಿ, ಬಿಜೆಪಿಗರು ಜನತೆಗೆ ಮೋಸ ಮಾಡಿದರು. ನೆಹರೂ ಅಂದರೆ ಯಾಕೆ ಬಿಜೆಪಿಗರು ಇಷ್ಟೊಂದು ವಿಷಕಾರುತ್ತಿದ್ದಾರೆ ಅಂತ ನನಗೆ ಗೊತ್ತಾಗ್ತಿಲ್ಲ. ನೆಹರೂ ಒಬ್ಬರೇ ಕಾರಣ ಅಲ್ಲ. ಆರ್ಟಿಕಲ್ 370 ಜಾರಿಗೆ ತರುವಾಗ ಸರ್ದಾರ್ ಪಟೇಲ್ ಇಲ್ಲಿದ್ದರು. ನೆಹರೂ ಅಮೆರಿಕದಲ್ಲಿದ್ದರು ಅಂದಿದ್ದಾರೆ.
ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರವೂ (POK) ನಮ್ಮದೇ. ಅದಕ್ಕೆ ಅಲ್ಲಿಯೂ 24 ಅಸೆಂಬ್ಲಿ ಸೀಟುಗಳನ್ನು (Assembly Seats) ರಿಸರ್ವ್ ಮಾಡಿದ್ದೇವೆ. ಪಿಓಕೆಯನ್ನು ಪಡೆಯುವುದೇ ನಮ್ಮ ಗುರಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಘೋಷಣೆ ಮಾಡಿದ್ದಾರೆ.
ಜಮ್ಮುಕಾಶ್ಮೀರದಲ್ಲಿ (Jammu Kashmir) ಆರ್ಟಿಕಲ್ 370 ರದ್ದು ಮಾಡಿದ್ದ ಕೇಂದ್ರ ಸರ್ಕಾರ ಈಗ ಅಲ್ಲಿ ಅಸೆಂಬ್ಲಿ ಏರ್ಪಾಡು ಮಾಡಲು ಮುಂದಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದ ಜಮ್ಮುಕಾಶ್ಮೀರ ಮೀಸಲಾತಿ ತಿದ್ದುಪಡಿ ಮಸೂದೆ ಮತ್ತು ಜಮ್ಮು ಕಾಶ್ಮೀರ ಮರುವರ್ಗೀಕರಣ ತಿದ್ದುಪಡಿ ಮಸೂದೆಗಳು ಪಾಸ್ ಆಗಿವೆ. ಇದನ್ನೂ ಓದಿ: ಬಿಜೆಪಿಯ 10 ಸಂಸದರಿಂದ ಸಂಸತ್ ಸ್ಥಾನಕ್ಕೆ ರಾಜೀನಾಮೆ
ಎರಡು ದಿನ ನಡೆದ ಚರ್ಚೆಗೆ ಉತ್ತರಿಸಿದ ಕೇಂದ್ರ ಮಂತ್ರಿ ಅಮಿತ್ ಶಾ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ನಮ್ಮ ಕೈ ತಪ್ಪಲು ನೆಹರು ನೀತಿಯೇ (Nehru Policy) ಕಾರಣ. ಕಾಶ್ಮೀರದಲ್ಲಿ ಮೋದಿ (Narendra Modi) ಸರ್ಕಾರ ಕೇವಲ ಉಗ್ರರನ್ನು ನಿರ್ಮೂಲನೆ ಮಾಡಿಲ್ಲ. ಇದು 70 ವರ್ಷಗಳಿಂದ ಧ್ವನಿ ಇಲ್ಲದ ಜನರ ಪ್ರಾತಿನಿಧ್ಯಕ್ಕೆ ಅವಕಾಶ ಕಲ್ಪಿಸುತ್ತದೆ. ತಮ್ಮ ಮನೆಗಳನ್ನು ತೊರೆದು ದೇಶದ ವಿವಿಧ ಮೂಲೆಗಳಲ್ಲಿ ನಿರಾಶ್ರಿತರಾಗಿ ಬದುಕಲು ಒತ್ತಾಯಿಸಲ್ಪಟ್ಟವರಿಗೆ ನ್ಯಾಯ ಒದಗಿಸುವ ಮಸೂದೆಗಳು ಇದಾಗಿದೆ. ಈಗ ಉಗ್ರರಿಗೆ ಹಣ ಕೊಡುವ ವ್ಯವಸ್ಥೆಗೆ ಕಡಿವಾಣ ಹಾಕಿದೆ ಎಂದರು. ಇದನ್ನೂ ಓದಿ: ಪ್ಯಾಕಿಂಗ್ ಆಹಾರ ಉತ್ಪನ್ನಗಳಿಂದ ಜೀರ್ಣಾಂಗಕ್ಕೆ ಹಾನಿ- ಏಮ್ಸ್ ವೈದ್ಯರಿಂದ ಹೊಸ ವರದಿ
#WATCH | Union HM Amit Shah speaks on The Jammu and Kashmir Reservation (Amendment) Bill, 2023 & The Jammu and Kashmir Reorganisation Bill, 2023
He says, “…Earlier there were 37 seats in Jammu, now there are 43. Earlier there were 46 in Kashmir, now there are 47 and in PoK,… pic.twitter.com/hYrAEgarVa
ಮಸೂದೆಯೂ ಕಾಶ್ಮೀರಿ ವಲಸಿಗರು, ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಿಂದ ಸ್ಥಳಾಂತರಗೊಂಡ ವ್ಯಕ್ತಿಗಳು ಮತ್ತು ಪರಿಶಿಷ್ಟ ಪಂಗಡಗಳ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಪ್ರಾತಿನಿಧ್ಯವನ್ನು ಒದಗಿಸಲು ಪ್ರಯತ್ನಿಸುತ್ತದೆ. ಇತರ ಮಸೂದೆಯು ಮೀಸಲಾತಿ ಕಾಯ್ದೆಯ ಸೆಕ್ಷನ್ 2 ಅನ್ನು ತಿದ್ದುಪಡಿ ಮಾಡಲಿದ್ದು, ದುರ್ಬಲ ಮತ್ತು ಹಿಂದುಳಿದ ವರ್ಗಗಳ (ಸಾಮಾಜಿಕ ಜಾತಿಗಳು) ನಾಮಕರಣವನ್ನು ಇತರ ಹಿಂದುಳಿದ ವರ್ಗಗಳಿಗೆ ಬದಲಾಯಿಸುತ್ತದೆ ಎಂದರು. ಇದನ್ನೂ ಓದಿ: ಪ್ಯಾಕಿಂಗ್ ಆಹಾರ ಉತ್ಪನ್ನಗಳಿಂದ ಜೀರ್ಣಾಂಗಕ್ಕೆ ಹಾನಿ- ಏಮ್ಸ್ ವೈದ್ಯರಿಂದ ಹೊಸ ವರದಿ
ಈ ಮಸೂದೆಯ ಪ್ರಕಾರ ಜಮ್ಮು ಕಾಶ್ಮೀರದಲ್ಲಿ ಅಸೆಂಬ್ಲಿ ಕ್ಷೇತ್ರಗಳ ಸಂಖ್ಯೆ 90ಕ್ಕೆ ಏರಿಕೆಯಾಗಲಿದೆ. ಕಾಶ್ಮೀರದಲ್ಲಿ 2 ಸ್ಥಾನಗಳನ್ನು ಕಾಶ್ಮೀರದಿಂದ ವಲಸೆ ಹೋದವರಿಗೆ, ಒಂದು ಸ್ಥಾನವನ್ನು ಪಾಕ್ ಆಕ್ರಮಿತ ಕಾಶ್ಮೀರದಿಂದ ಬಂದು ನೆಲೆಸಿರುವವರಿಗೆ ಮೀಸಲಿಡಲಾಗುತ್ತದೆ. ಮೋದಿ ಸರ್ಕಾರ ಬಂದ ಬಳಿಕ ಕಣಿವೆ ನಾಡಿನಲ್ಲಿ ಜನರ ಸಾವಿನಲ್ಲಿ 70% ರಷ್ಟು ಭದ್ರತಾ ಸಿಬ್ಬಂದಿಗಳ ಸಾವಿನಲ್ಲಿ 62%ರಷ್ಟು ಕಡಿಮೆಯಾಗಿದೆ ಎಂದು ಅಮಿತ್ ಶಾ ಸದನಕ್ಕೆ ವಿವರಿಸಿದರು. ಇದನ್ನೂ ಓದಿ: ಡಿ.13ಕ್ಕೂ ಮುನ್ನ ಸಂಸತ್ತಿನ ಮೇಲೆ ದಾಳಿ- ಮತ್ತೆ ಬೆದರಿಕೆ ವೀಡಿಯೋ ಹರಿಬಿಟ್ಟ ಪನ್ನುನ್
#WATCH | Union Home Minister Amit Shah says, “Two mistakes that happened due to the decision of (former PM) Pandit Jawaharlal Nehru due to which Kashmir had to suffer for many years. The first is to declare a ceasefire – when our army was winning, the ceasefire was imposed. If… pic.twitter.com/3TMm8fk5O1
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯಿಂದಾಗಿ 45,000 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಪರಿಸರ ವ್ಯವಸ್ಥೆಯನ್ನು ಕೊನೆಗೊಳಿಸುವುದು ನಮ್ಮ ಗಮನವಾಗಿದೆ. ಯಾರಿಗಾದರೂ ಅವರ ಹಕ್ಕುಗಳನ್ನು ನೀಡುವುದಕ್ಕೂ ಮತ್ತು ಇನ್ನೊಬ್ಬರಿಗೆ ಅವರ ಹಕ್ಕುಗಳನ್ನು ಘನತೆಯಿಂದ ನೀಡುವುದಕ್ಕೂ ವ್ಯತ್ಯಾಸವಿದೆ ಎಂದರು. ಇದನ್ನೂ ಓದಿ: ಚುನಾವಣೆಯಲ್ಲಿ ಸೋಲಿನ ಹೊಣೆ ಹೊತ್ತು ಕಮಲ್ ನಾಥ್ ರಾಜೀನಾಮೆ?
ಯಾರಿಗೆ ಅನ್ಯಾಯವಾಗಿದೆಯೋ, ಯಾರನ್ನು ಅವಮಾನಿಸಲಾಯಿತು ಮತ್ತು ನಿರ್ಲಕ್ಷಿಸಲ್ಪಟ್ಟಿದೆಯೋ ಅವರಿಗೆ ನ್ಯಾಯವನ್ನು ಒದಗಿಸುವುದು ಮತ್ತು ಹಕ್ಕುಗಳನ್ನು ಒದಗಿಸುವ ಮಸೂದೆ ಇದಾಗಿದೆ. ಯಾವುದೇ ಸಮಾಜದಲ್ಲಿ ವಂಚಿತರನ್ನು ಮುಂದೆ ತರಬೇಕು. ಅದು ಸಂವಿಧಾನದ ಮೂಲ ಪ್ರಜ್ಞೆಯಾಗಿದೆ. ಆದರೆ ಅವರ ಗೌರವವನ್ನು ಕಡಿಮೆ ಮಾಡದ ರೀತಿಯಲ್ಲಿ ಅವರನ್ನು ಮುಂದೆ ತರಬೇಕು ಎಂದು ಹೇಳಿದರು. ಇದನ್ನೂ ಓದಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಈಗ ವಿಶ್ವದ ಶಕ್ತಿಶಾಲಿ ಮಹಿಳೆ – ನಂ.1 ಸ್ಥಾನದಲ್ಲಿ ಯಾರಿದ್ದಾರೆ?
ಹೈದರಾಬಾದ್: `ಗಾಲ್ವಾನ್ ಸೇಸ್ ಹಾಯ್’ ಎಂದು ಟ್ವೀಟ್ (Galwan Tweet) ಮಾಡುವ ಮೂಲಕ ವಿವಾದ ಸೃಷ್ಟಿಸಿದ ರಿಚಾ ಚಡ್ಡಾ (Richa Chadha) ಅವರಿಗೆ ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಬೆಂಬಲ ಸೂಚಿಸಿದ್ದಾರೆ.
ರಿಚಾ ಹೇಳಿಕೆಗೆ ನಟ ಅಕ್ಷಯ ಕುಮಾರ್ (Akshay Kumar) ಆಕ್ರೋಶ ವ್ಯಕ್ತಪಡಿಸಿದಕ್ಕೆ ಪ್ರಕಾಶ್ ರಾಜ್ ಅವರು ಪ್ರತಿಕ್ರಿಯೆ ನೀಡಿದ್ದು, `ಅಕ್ಷಯ ಕುಮಾರ್… ನಿಮ್ಮಿಂದ ಇದನ್ನು ಅಪೇಕ್ಷಿಸಿರಲಿಲ್ಲ. ರಿಚಾ ಚಡ್ಡಾ ಹೇಳಿದ್ದು ದೇಶಕ್ಕೆ ನಿಮಗಿಂತ ಹೆಚ್ಚು ನಿಮಗಿಂತ ಹೆಚ್ಚು ಪ್ರಸ್ತುತ ಸರ್’ ಎನ್ನುವ ಮೂಲಕ ಕೆನಡಾ ಪ್ರಜೆ ಆಗಿರುವ ಅಕ್ಷಯ್ ಕಾಲೆಳೆದಿದ್ದಾರೆ. ಇದನ್ನೂ ಓದಿ: `ಗಾಲ್ವಾನ್ ಹಾಯ್’ ಎಂದ ನಟಿಗೆ ಚಳಿ ಬಿಡಿಸಿದ ಸಚಿವ – ಕಾನೂನು ಕ್ರಮಕ್ಕೆ ಚಿಂತನೆ
`ಪಾಕ್ ಆಕ್ರಮಿತ ಕಾಶ್ಮೀರ ವಶಕ್ಕೆ ಸೇನೆ ಸಿದ್ಧವಾಗಿದೆ’ ಎಂದು ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಹೇಳಿಕೆ ನೀಡಿದ್ದರು. ಅದನ್ನು ಅವಮಾನಿಸುವಂತೆ ರಿಚಾ ಟ್ವೀಟ್ ಮಾಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಯಿತು. ಅಕ್ಷಯ್ ಕುಮಾರ್ ಸೇರಿದಂತೆ ಹಲವರು ರಿಚಾ ನಡೆಯನ್ನು ಖಂಡಿಸಿದ್ದರು. ಇದರ ಬೆನ್ನಲ್ಲೇ ನಟಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು. ಇದರ ಹೊರತಾಗಿಯೂ ಮಧ್ಯಪ್ರದೇಶದ ಗೃಹ ಸಚಿವರು ರಿಚಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ನಿಮ್ಮ ವಿರುದ್ಧ ದೂರುಗಳು ಕೇಳಿಬಂದಿದೆ. ಆದ್ದರಿಂದ ಸೂಕ್ತ ಕ್ರಮಕ್ಕಾಗಿ ಕಾನೂನು ತಜ್ಞರ ಅಭಿಪ್ರಾಯ ತೆಗೆದುಕೊಳ್ಳುತ್ತಿದ್ದೇವೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಶನಿವಾರ ಹೇಳಿದ್ದಾರೆ. ಈ ಬೆನ್ನಲ್ಲೇ ನಟ ಪ್ರಕಾಶ್ ರಾಜ್ ಬೆಂಬಲ ಚಡ್ಡಾ ಹೇಳಿಕೆ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಭೋಪಾಲ್: `ಗಾಲ್ವಾನ್ ಹಾಯ್’ ಎಂದು ಟ್ವೀಟ್ ಮಾಡುವ ಮೂಲಕ ಭಾರತೀಯ ಸೇನೆಗೆ (Indian Army) ಅಪಮಾನ ಮಾಡಿದ್ದಾರೆಂದು ಟೀಕೆಗೆ ಗುರಿಯಾಗಿರುವ ನಟಿ ರಿಚಾ ಚಡ್ಡಾಗೆ (Richa Chadha) ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ (Narottam Mishra) ಚಳಿ ಬಿಡಿಸಿದ್ದಾರೆ. ಅಲ್ಲದೇ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರ ವಶಕ್ಕೆ ಸೇನೆ ಸಿದ್ಧವಾಗಿದೆ ಎಂದು ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ (General Dwivedi) ಹೇಳಿಕೆ ನೀಡಿದ್ದರು. ಅದನ್ನು ಅವಮಾನಿಸುವಂತೆ ರಿಚಾ ಟ್ವೀಟ್ ಮಾಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಯಿತು. ಅಕ್ಷಯ್ ಕುಮಾರ್ ಸೇರಿದಂತೆ ಹಲವರು ರಿಚಾ ನಡೆಯನ್ನು ಖಂಡಿಸಿದ್ದರು. ಇದರ ಬೆನ್ನಲ್ಲೇ ನಟಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು. ಇದರ ಹೊರತಾಗಿಯೂ ಮಿಶ್ರಾ ಅವರು ರಿಚಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ರಿಚಾ ಜೀ ಅದು ಸಿನಿಮಾ (Cinema) ಅಲ್ಲ, ಸೈನ್ಯ. ಕೆಲವೊಮ್ಮೆ ಮೈನಸ್ 30 ರಿಂದ 45 ಡಿಗ್ರಿ ಸೆಲ್ಸಿಯಸ್ ಇರುತ್ತೆ. ಇನ್ನೂಮ್ಮೆ 45 ಡಿಗ್ರಿ ತಾಪಮಾನ ಇರುತ್ತೆ, ನಿಮಗೆ ಸಾಮರ್ಥ್ಯವಿದ್ದರೆ ಅಲ್ಲಿ ಉಳಿಯಲು ಪ್ರಯತ್ನಿಸಿ. ಆಗ ನಿಮಗೆ ರೀಲ್ ಲೈಫ್ – ರಿಯಲ್ ಲೈಫ್‌ಗೂ ವ್ಯತ್ಯಾಸ ತಿಳಿಯುತ್ತದೆ. ಸೈನಿಕರ ಶ್ರಮ ಮತ್ತು ತ್ಯಾಗ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ. ಈ ವೀಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಶ್ರೀನಗರ: ಭಾರತ ಗಿಲ್ಗಿಟ್, ಬಾಲ್ಟಿಸ್ತಾನ್ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಸಂಪೂರ್ಣ ಭಾಗವನ್ನು ಮರಳಿ ಪಡೆದಾಗಲೇ ನಮ್ಮ ಸಂಕಲ್ಪ ಪೂರ್ಣಗೊಳ್ಳುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹೇಳಿಕೆ ನೀಡಿದ್ದಾರೆ. ಈ ಮೂಲಕ ಪಾಕ್ ಆಕ್ರಮಿತ ಕಾಶ್ಮೀರವನ್ನು (POK) ವಶಪಡಿಸಿಕೊಳ್ಳುವ ಸುಳಿವು ನೀಡಿದ್ದಾರೆ.
ಇಂದು ಬುದ್ಗಾಮ್‌ನಲ್ಲಿ ಭಾರತೀಯ ಸೇನೆ ಆಯೋಜಿಸಿದ್ದ 76ನೇ ಪದಾತಿ ದಳದ ದಿನದ ಅಂಗವಾಗಿ ಶೌರ್ಯ ದಿವಸ್ ಕಾರ್ಯಕ್ರಮದಲ್ಲಿ ರಾಜನಾಥ್ ಸಿಂಗ್ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ಸಂಪೂರ್ಣ ಜಮ್ಮು ಮತ್ತು ಕಾಶ್ಮೀರವನ್ನು ಮರಳಿ ಪಡೆದಾಗಲೇ ನಮ್ಮ ಸಂಕಲ್ಪ ಪೂರ್ಣಗೊಳ್ಳುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಶೀಘ್ರವೇ ಸರ್ಕಾರ ಕ್ರಮ ಕೈಗೊಳ್ಳದಿದ್ರೆ ಕಾಶ್ಮೀರದಲ್ಲಿ ಹಿಂದೂಗಳೇ ಇರುವುದಿಲ್ಲ: ಫಾರೂಕ್ ಅಬ್ದುಲ್ಲಾ
ದಾಳಿಕೋರರ ಕ್ರೂರ ದಾಳಿಯಿಂದ ಈ ಭೂಮಿಯನ್ನು ಮುಕ್ತಗೊಳಿಸಲು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಎಲ್ಲಾ ಹುತಾತ್ಮರ ಮುಂದೆ ನಾನು ತಲೆಬಾಗುತ್ತೇನೆ. ಭಾರತ ವಿಭಜನೆಯಾದ ನಂತರ ಪಾಕಿಸ್ತಾನ ತನ್ನ ನಿಜವಾದ ಬಣ್ಣವನ್ನು ತೋರಿಸಿದೆ. ಪಾಕಿಸ್ತಾನ ಇಷ್ಟೊಂದು ಕೆಳಮಟ್ಟಕ್ಕೆ ಇಳಿದು ಜಮ್ಮು ಮತ್ತು ಕಾಶ್ಮೀರದ ಮೇಲೆ ದಾಳಿ ಮಾಡುತ್ತದೆ ಎಂದು ನಾವು ಊಹಿಸಿರಲಿಲ್ಲ ಎಂದರು. ಇದನ್ನೂ ಓದಿ: ಈ ಹಿಂದೆ ಪಠ್ಯಪುಸ್ತಕಗಳಲ್ಲಿ ಟಿಪ್ಪು ವೈಭವೀಕರಣ ಇತ್ತು ಈಗ ಇಲ್ಲ: ಬಿ.ಸಿ ನಾಗೇಶ್
ಪಾಕಿಸ್ತಾನ ತನ್ನ ಆಕ್ರಮಿತ ಕಾಶ್ಮೀರದಲ್ಲಿ ಜನರ ಮೇಲೆ ದೌರ್ಜನ್ಯ ಎಸಗುತ್ತಿರುವುದರ ವಿರುದ್ಧ ವಾಗ್ದಾಳಿ ನಡೆಸಿದ ರಾಜನಾಥ್ ಸಿಂಗ್, ಇದರ ಪರಿಣಾಮವನ್ನು ಪಾಕಿಸ್ತಾನ ಎದುರಿಸಬೇಕಾಗುತ್ತದೆ. ನಾವು ಈಗಾಗಲೇ ಜಮ್ಮು ಮತ್ತು ಕಾಶ್ಮೀರ, ಹಾಗೂ ಲಡಾಕ್‌ನಲ್ಲಿ ನಮ್ಮ ಅಭಿವೃದ್ಧಿಯ ಪ್ರಯಾಣವನ್ನು ಪ್ರಾರಂಭಿಸಿದ್ದೇವೆ. ಇನ್ನು ಗಿಲ್ಗಿಟ್ ಹಾಗೂ ಬಾಲ್ಟಿಸ್ತಾನ್ ತಲುಪಿ, ಅಲ್ಲಿ ನಮ್ಮ ಗುರಿಯನ್ನು ಸಾಧಿಸಿ ತೋರಿಸುತ್ತೇವೆ ಎಂದು ಹೇಳಿದರು.
Live Tv
[brid partner=56869869 player=32851 video=960834 autoplay=true]
ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ಭಾರತದ ಅವಿಭಾಜ್ಯ ಅಂಗವಾಗಿಯೇ ಇರುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.
ಜಮ್ಮುವಿನಲ್ಲಿ ನಡೆದ ‘ಕಾರ್ಗಿಲ್ ವಿಜಯ್ ದಿವಸ್’ ಕಾರ್ಯಕ್ರಮಕ್ಕೆ ರಾಜನಾಥ್ ಸಿಂಗ್ ಆಗಮಿಸಿದ್ದರು. ಈ ವೇಳೆ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಿಒಕೆ ಕುರಿತು ಸಂಸತ್ತಿನಲ್ಲಿ ಅಂಗೀಕರಿಸಿದ ನಿರ್ಣಯಕ್ಕೆ ನಾವು ಬದ್ಧರಾಗಿದ್ದೇವೆ. ಪಿಒಕೆ ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಅದು ಯಾವಾಗಲೂ ಉಳಿಯುತ್ತದೆ. ಬಾಬಾ ಅಮರನಾಥ(ಶಿವನ ರೂಪ) ಮತ್ತು ಶಾರದಾ ಆರ್ಶಿವಾದ ಭಾರತದ ಮೇಲೆ ಇರಲು ಯಾವ ಶಕ್ತಿ ನಮ್ಮನ್ನು ನಿಯಂತ್ರಣ ಮಾಡಲು ಸಾಧ್ಯ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಯಕ್ಷಗಾನದ ಭಾಗವತಿಕೆ ಮೂಲಕ ರಾಷ್ಟ್ರಪತಿಗೆ ಸ್ವಾಗತ ಕೋರಿದ ಬಾಲೆ
ಸಮರ್ಥ ಮತ್ತು ಆತ್ಮವಿಶ್ವಾಸದ ನವ ಭಾರತದ ಮೇಲೆ ದುಷ್ಟಕಣ್ಣುಗಳನ್ನು ಹಾಕುವ ಯಾರಿಗಾದರೂ ಸೂಕ್ತವಾದ ಪ್ರತ್ಯುತ್ತರವನ್ನು ನೀಡಲು ಸಜ್ಜಾಗುತ್ತಿದೆ. ಭಾರತವನ್ನು ಜಾಗತಿಕ ಮಹಾಶಕ್ತಿಯನ್ನಾಗಿ ಮಾಡುವುದು ಮಡಿದ ನಮ್ಮ ವೀರರಿಗೆ ಸೂಕ್ತವಾದ ಗೌರವವಾಗಿದೆ ಎಂದು ಕರೆ ಕೊಟ್ಟರು.
ಭಾನುವಾರ ಜಮ್ಮುವಿನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ರಾಜನಾಥ್ ಸಿಂಗ್ ಅವರು ಭಾಗಿಯಾಗಿದ್ದು, ಸ್ವಾತಂತ್ರ್ಯದ ನಂತರ ದೇಶ ಸೇವೆಯಲ್ಲಿ ಪ್ರಾಣವನ್ನು ಅರ್ಪಿಸಿದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದನ್ನೂ ಓದಿ: ಬಿಗಿ ಭದ್ರತೆ ನಡೆದ ಮೊದಲ ಅಗ್ನಿಪಥ್ ಏರ್‌ಫೋರ್ಸ್ ನೇಮಕಾತಿ ಪರೀಕ್ಷೆ
Live Tv
[brid partner=56869869 player=32851 video=960834 autoplay=true]
ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರಕ್ಕೆ (POK) ಅಮೆರಿಕದ ಕಾಂಗ್ರೆಸ್ ಸದಸ್ಯೆ ಇಲ್ಹಾನ್ ಓಮರ್ ಭೇಟಿಯನ್ನು ಭಾರತ ಖಂಡಿಸಿದೆ.
ಯುಎಸ್ ಕಾಂಗ್ರೆಸ್ ಸದಸ್ಯೆ ಓಮರ್ ಏ.20ರಿಂದಲೇ ಪಾಕಿಸ್ತಾನಕ್ಕೆ ನಾಲ್ಕು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಹಾಲಿ ಪ್ರಧಾನಿ ಶೆಹಬಾಜ್ ಶರೀಫ್ ಅವರನ್ನು ಭೇಟಿಯಾಗಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಓಮರ್ ಭೇಟಿ ಕುರಿತ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ಸಚಿವಾಲಯದ ವಕ್ತಾರರು, ಇದು ಖಂಡನೀಯ ಎಂದಿದ್ದಾರೆ. ಇದನ್ನೂ ಓದಿ: ಮುಂಬೈ ವಿಎಸ್ ಚೆನ್ನೈ ನಡುವಿನ ಪಂದ್ಯ ಭಾರತ-ಪಾಕ್ ಕಾದಾಟವಿದ್ದಂತೆ: ಭಜ್ಜಿ
ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ವಿಚಾರಗಳಲ್ಲಿ ಅವರು ರಾಜಕೀಯ ಮಾಡಬಹುದು. ಅದು ಅವರ ವ್ಯವಹಾರವೂ ಆಗಬಹುದು. ಆದರೆ ನಮ್ಮ ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸುವುದು ಖಂಡನೀಯ ಎಂದು ತಿಳಿಸಿದ್ದಾರೆ.
ಅಮೆರಿಕ ಕಾಂಗ್ರೆಸ್ ಸದಸ್ಯೆ ಏ.20ರಿಂದ 24ರವರೆಗೆ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ರಾಜಕೀಯ ನಾಯಕರೊಂದಿಗೆ ಸಭೆಯನ್ನೂ ನಡೆಸಲಿದ್ದಾರೆ. ಪಾಕಿಸ್ತಾನದ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಾಮರ್ಥ್ಯದ ಬಗ್ಗೆ ತಿಳಿದುಕೊಳ್ಳಲು ಅವರು ಲಾಹೋರ್ ಮತ್ತು ʼಆಜಾದ್ ಜಮ್ಮು ಮತ್ತು ಕಾಶ್ಮೀರʼಕ್ಕೆ ಭೇಟಿ ನೀಡಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ. ಇದನ್ನೂ ಓದಿ: ಇಂಗ್ಲೆಂಡ್ ರಾಣಿ ಎಲಿಜಬೆತ್‍ರ 2 ವರ್ಷದವರಿದ್ದಾಗಿನ ಫೋಟೋ ವೈರಲ್
ಭಾರತ ವಿರೋಧಿ ನಿಲುವಿಗೆ ಹೆಸರುವಾಸಿಯಾದ ಶಾಸಕರೊಂದಿಗೆ ಕಾಶ್ಮೀರವನ್ನು ಬೆಳೆಸಿದ್ದೇನೆ. ಜಮ್ಮು ಮತ್ತು ಕಾಶ್ಮೀರ ಸಮಸ್ಯೆ ಶಾಂತಿಯುತ ಪರಿಹಾರದ ಪ್ರಾಮುಖ್ಯತೆ ಕುರಿತು ಒತ್ತಿ ಹೇಳಲಾಗಿದೆ ಎಂದು ಷರೀಫ್ ತಿಳಿಸಿದ್ದಾರೆ.
ಅವಿಶ್ವಾಸ ನಿರ್ಣಯದ ಮೂಲಕ ತಮ್ಮನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸುವಲ್ಲಿ ಅಮೆರಿಕ ಕೈವಾಡವಿದೆ ಎಂದು ಇಮ್ರಾನ್ ಖಾನ್ ಗಂಭೀರ ಆರೋಪ ಮಾಡಿದ್ದರು. ಹೊಸ ಪ್ರಧಾನಿ ಬಂದ ನಂತರ ಪಾಕಿಸ್ತಾನಕ್ಕೆ ಓಮರ್ ಭೇಟಿ ನೀಡಿರುವುದು ಯುಎಸ್ ಮತ್ತು ಪಾಕಿಸ್ತಾನ ಸಂಬಂಧವನ್ನು ಮತ್ತೆ ಗಟ್ಟಿಗೊಳಿಸುವ ಸೂಚನೆ ನೀಡುತ್ತಿದೆ.