Tag: POK

  • ಪಿಓಕೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ – ವಿಶ್ವಸಂಸ್ಥೆಯಲ್ಲಿ ಪಾಕ್ ಕುಟುಕಿದ ಭಾರತ

    ಪಿಓಕೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ – ವಿಶ್ವಸಂಸ್ಥೆಯಲ್ಲಿ ಪಾಕ್ ಕುಟುಕಿದ ಭಾರತ

    ನವದೆಹಲಿ: ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶದಲ್ಲಿ ಸೇನೆಯ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆಯುತ್ತಿದ್ದು, ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ (Human Rights Violation) ಎಂದು ಭಾರತ (India) ಖಂಡಿಸಿದೆ. ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ (Parvathaneni Harish), ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (POK) ಕ್ರೌರ್ಯವನ್ನು ಕೊನೆಗೊಳಿಸಬೇಕೆಂದು ಕರೆ ನೀಡಿದರು.

    80ನೇ ವಿಶ್ವಸಂಸ್ಥೆಯ ದಿನದಂದು ಆಯೋಜಿಸಲಾದ ಮುಕ್ತ ಚರ್ಚೆಯ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಉದ್ದೇಶಿಸಿ ಮಾತನಾಡಿದ ಹರೀಶ್, ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳಲ್ಲಿ ನಡೆಯುತ್ತಿರುವ ಗಂಭೀರ ಮತ್ತು ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಕೊನೆಗೊಳಿಸಬೇಕೆಂದು ನಾವು ಪಾಕಿಸ್ತಾನವನ್ನು ಒತ್ತಾಯಿಸುತ್ತೇವೆ. ಪಾಕಿಸ್ತಾನದ ಮಿಲಿಟರಿ ಆಕ್ರಮಣ, ದಬ್ಬಾಳಿಕೆ, ಕ್ರೂರತೆ ಮತ್ತು ಸಂಪನ್ಮೂಲಗಳ ಅಕ್ರಮ ಶೋಷಣೆಯ ವಿರುದ್ಧ ಜನಸಂಖ್ಯೆಯು ಬಹಿರಂಗ ದಂಗೆಯಲ್ಲಿ ತೊಡಗಿದೆ ಎಂದರು. ಇದನ್ನೂ ಓದಿ: ಶಬರಿಮಲೆಯಲ್ಲಿ ಚಿನ್ನ ನಾಪತ್ತೆ ಪ್ರಕರಣಕ್ಕೆ ಬೆಂಗಳೂರು ಲಿಂಕ್‌ – ಬಳ್ಳಾರಿಯಲ್ಲಿ ಚಿನ್ನ ಮಾರಾಟ ಮಾಡಿರೋ ಶಂಕೆ

    ಜಮ್ಮು ಮತ್ತು ಕಾಶ್ಮೀರವು ಯಾವಾಗಲೂ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿ ಉಳಿಯುತ್ತದೆ ಮತ್ತು ಇಲ್ಲಿನ ಜನರು ತಮ್ಮ ಮೂಲಭೂತ ಹಕ್ಕುಗಳನ್ನು ಆನಂದಿಸುತ್ತಾರೆ. ಅಂತಹ ಸ್ವಾತಂತ್ರ‍್ಯಗಳು ಪಾಕಿಸ್ತಾನದಲ್ಲಿ ಪರಕೀಯ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರು | ಸಿಲಿಂಡರ್‌ ಸ್ಫೋಟ – ಮನೆಯೇ ನೆಲಸಮ, ಓರ್ವ ಸಾವು

    ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಮತ್ತು ಯಾವಾಗಲೂ ಇರುತ್ತದೆ. ಜಮ್ಮು ಮತ್ತು ಕಾಶ್ಮೀರದ ಜನರು ಭಾರತದ ಕಾಲ-ಪರೀಕ್ಷಿತ ಪ್ರಜಾಪ್ರಭುತ್ವ ಸಂಪ್ರದಾಯಗಳು ಮತ್ತು ಸಾಂವಿಧಾನಿಕ ಚೌಕಟ್ಟಿನ ಅನುಸಾರವಾಗಿ ತಮ್ಮ ಮೂಲಭೂತ ಹಕ್ಕುಗಳನ್ನು ಚಲಾಯಿಸುತ್ತಾರೆ. ಇವು ಪಾಕಿಸ್ತಾನಕ್ಕೆ ಅನ್ಯವಾದ ಪರಿಕಲ್ಪನೆಗಳು ಎಂದು ನಮಗೆ ತಿಳಿದಿದೆ ಎಂದರು. ಇದನ್ನೂ ಓದಿ: ‌ಒಳ ಉಡುಪಿನಲ್ಲಿಟ್ಟುಕೊಂಡು ಚಿನ್ನ ಸಾಗಾಟ – ದೆಹಲಿ ಏರ್‌ಪೋರ್ಟ್‌ನಲ್ಲಿ ಮಹಿಳೆಯಿಂದ 1 ಕೆಜಿ ಗೋಲ್ಡ್‌ ಬಿಸ್ಕೆಟ್ ವಶಕ್ಕೆ

    ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನಿ ಸೇನೆ ಗುಂಡು ಹಾರಿಸಿದ ನಂತರ ಹಲವಾರು ನಾಗರಿಕರು ಸಾವನ್ನಪ್ಪಿದರು. ಜನರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾದ ನಂತರ ಅಶಾಂತಿ ಭುಗಿಲೆದ್ದಿತು. ಜಂಟಿ ಅವಾಮಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದವು. ಮಾರುಕಟ್ಟೆಗಳು, ಅಂಗಡಿಗಳು ಮತ್ತು ಸಾರಿಗೆ ಸೇವೆಗಳು ಹಲವಾರು ದಿನಗಳವರೆಗೆ ಈ ಪ್ರದೇಶದಾದ್ಯಂತ ಮುಚ್ಚಲ್ಪಟ್ಟವು. ಇದನ್ನೂ ಓದಿ: ಪರೀಕ್ಷೆಯಲ್ಲಿ ಕಳಪೆ ಅಂಕ ಬಂತೆಂದು MBBS ವಿದ್ಯಾರ್ಥಿನಿ ಆತ್ಮಹತ್ಯೆ

  • ಪಾಕ್‌ ವಿರುದ್ಧ ಸಿಡಿದೆದ್ದ ಪಿಒಕೆ – ಏನಿದು ವಿವಾದ?

    ಪಾಕ್‌ ವಿರುದ್ಧ ಸಿಡಿದೆದ್ದ ಪಿಒಕೆ – ಏನಿದು ವಿವಾದ?

    ಪಾಕಿಸ್ತಾನ (Pakistan) ಸರ್ಕಾರ ಪಿಒಕೆ (PoK) ಜನರ ವಿರುದ್ಧ ಮಾಡುತ್ತಿರುವ ತಾರತಮ್ಯದ ಬಗ್ಗೆ ಸಿಡಿದೆದ್ದಿದ್ದಾರೆ. ಇದೇ ತಿಂಗಳ ಆರಂಭದಲ್ಲಿ (ಅಕ್ಟೋಬರ್) ಪಿಒಕೆ v/s ಪಾಕ್‌ ನಡುವೆ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಕನಿಷ್ಠ 10 ಜನ ಸಾವನ್ನಪ್ಪಿ, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಆದರೆ ಪಾಕ್‌ ಮಾತ್ರ ಇದು ವಿದೇಶದ (ಭಾರತದ) ಕುತಂತ್ರ ಎಂದು ಆರೋಪಿಸಿತ್ತು. ಏನಿದು ಪಾಕ್‌ – ಪಿಒಕೆ ವಿವಾದ? ಭಾರತದ ಕಡೆ ಪಾಕ್‌ ಬೊಟ್ಟು ಮಾಡ್ತಿರೋದು ಯಾಕೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ‌

    ಪಿಒಕೆಯಲ್ಲಿ ಸ್ವಾತಂತ್ರ್ಯದ ಕೂಗು
    ಮೂಲಭೂತ ಹಕ್ಕುಗಳನ್ನು ಹತ್ತಿಕ್ಕುತ್ತಿರುವ ಪಾಕ್‌ ಸರ್ಕಾರದ ವಿರುದ್ಧ ಜಂಟಿ ಅವಾಮಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಗಳಿಂದ ಪಿಒಕೆ ನಲುಗಿದೆ. ಪ್ರತಿಭಟನೆಗಳಿಂದಾಗಿ ಮಾರುಕಟ್ಟೆಗಳು, ಅಂಗಡಿಗಳು ಮತ್ತು ಸ್ಥಳೀಯ ವ್ಯವಹಾರಗಳು ಸ್ಥಗಿತಗೊಂಡಿವೆ. ಪಿಒಕೆಯಲ್ಲಿ ಸ್ವಾತಂತ್ರ್ಯದ ಕೂಗು ಹೆಚ್ಚಾಗಿ ಕೇಳಿ ಬರುತ್ತಿದೆ.

    ಪಿಒಕೆ ಪ್ರಧಾನಿ ಪಾಕ್‌ನ ಕೈಗೊಂಬೆ!
    1947-48ರ ಭಾರತ – ಪಾಕ್‌ನಡುವಿನ ಯುದ್ಧ ಮತ್ತು ಕದನ ವಿರಾಮದ ಬಳಿಕ ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳು ಪಾಕಿಸ್ತಾನದ ವಶದಲ್ಲಿಯೇ ಉಳಿದವು. ಪಿಒಕೆ 13,300 ಚದರ ಕಿಲೋಮೀಟರ್‌ ಭೂ ಪ್ರದೇಶ ಹೊಂದಿದ್ದು ಸುಮಾರು 52 ಲಕ್ಷ ಜನರು ಇಲ್ಲಿ ನೆಲೆಸಿದ್ದಾರೆ. ಪಿಒಕೆ ನಾಮಮಾತ್ರವಾಗಿ ಸ್ವಾಯತ್ತ ಪ್ರದೇಶವಾಗಿದ್ದರೂ, ಇದನ್ನು ಪಾಕಿಸ್ತಾನ ನಿಯಂತ್ರಿಸುತ್ತಿದೆ.

    ಪಾಕಿಸ್ತಾನದ ವಶದಲ್ಲಿರುವ ಕಾಶ್ಮೀರದ ಜಾಗವನ್ನು ಭಾರತ ಪಾಕ್‌ ಆಕ್ರಮಿತ ಕಾಶ್ಮೀರ ಎಂದು ಕರೆದರೆ ಪಾಕಿಸ್ತಾನ ಅದಕ್ಕೆ ಅಜಾದ್‌ ಕಾಶ್ಮೀರ ಎಂಬ ಹೆಸರನ್ನು ಇಟ್ಟಿದೆ. ಇಲ್ಲಿ ಪ್ರತ್ಯೇಕ ಸರ್ಕಾರವಿದ್ದು ಅಧ್ಯಕ್ಷ, ಪ್ರಧಾನ ಮಂತ್ರಿ ಇದ್ದಾರೆ. ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಇದೆ. ಅಜಾದ್‌ ಕಾಶ್ಮೀರ ಸ್ವಾಯತ್ತ ಪ್ರದೇಶವಾಗಿರುವ ಕಾರಣ ಪಾಕಿಸ್ತಾನ ಸಂಸತ್ತಿನಲ್ಲಿ ಇದಕ್ಕೆ ಪ್ರತಿನಿಧಿಯಿಲ್ಲ. ಆಜಾದ್ ಕಾಶ್ಮೀರ ಶಾಸಕಾಂಗ ಸಭೆ 53 ಮಂದಿ ಸದಸ್ಯರನ್ನು ಹೊಂದಿದ್ದು, ಪಾಕಿಸ್ತಾನದ ಕಾಶ್ಮೀರ ವ್ಯವಹಾರ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಸಚಿವಾಲಯ ಪಾಕ್‌ ಸರ್ಕಾರ ಮತ್ತು ಪಿಒಕೆ ಜೊತೆ ಕೊಂಡಿಯಾಗಿ ಕೆಲಸ ಮಾಡುತ್ತಿದೆ. ಇಲ್ಲಿನ ಪ್ರಧಾನಿ ಮತ್ತು ಅಧ್ಯಕ್ಷರು ಪಾಕ್‌ ಸರ್ಕಾರದ ಕೈಗೊಂಬೆಗಳಾಗಿದ್ದಾರೆ.

    ಪಿಒಕೆ ಜನರ ಬೇಡಿಕೆ ಏನು?
    ಉಚಿತ ಶಿಕ್ಷಣ, ಆರೋಗ್ಯ , ಅಭಿವೃದ್ಧಿ ಸೇರಿದಂತೆ ಇತರ ಬೇಡಿಕೆಗಗಳನ್ನು ಪಿಒಕೆ ಜನ ಸರ್ಕಾರಕ್ಕೆ ಸತತ ಬೇಡಿಕೆ ಇಡುತ್ತಾ ಬಂದಿದ್ದಾರೆ. ಇದೇ ರೀತಿ ಮೇ 2023 ರಿಂದಲೂ ಸರ್ಕಾರಕ್ಕೆ ಈ ಬಗ್ಗೆ ಗಮನ ಕೊಡುವಂತೆ ಪಿಒಕೆ ಜನ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ ಅಲ್ಲಿನ ಸರ್ಕಾರ ನಿರಂತರವಾಗಿ ಜನರ ಮನವಿಯನ್ನು ನಿರ್ಲಕ್ಷಿಸುತ್ತಲೇ ಬಂದಿದೆ. ಇದೇ ಕಾರಣಕ್ಕೆ ಇತ್ತೀಚೆಗೆ ಇದು ಹಿಂಸಾತ್ಮಕ ಪ್ರತಿಭಟನೆಯ ರೂಪ ಪಡೆದುಕೊಂಡಿತು.

    ಬಜೆಟ್‌ನಿಂದ ಪಿಒಕೆ ನಿರ್ಲಕ್ಷಿಸಲ್ಪಟ್ಟಿದೆ – ಇದು ಸಾರ್ವಜನಿಕ ಅಸಮಾಧಾನ ಉಂಟುಮಾಡಿದೆ. ಮೊದಲು ಹೆಚ್ಚುತ್ತಿರುವ ವಿದ್ಯುತ್ ಬಿಲ್‌ ವಿಚಾರವಾಗಿ ಜನ ಬೀದಿಗಿಳಿದಿದ್ದರು. ಇದರ ಜೊತೆಗೆ ಬಡತನ, ಆಹಾರ ಪದಾರ್ಥಗಳ ಕಳ್ಳಸಾಗಣೆ ಮತ್ತು ಸಬ್ಸಿಡಿ ಗೋದಿ ಹಿಟ್ಟಿನ ತೀವ್ರ ಕೊರತೆಯಿಂದ ಈ ಕಿಚ್ಚು ಹೆಚ್ಚಾಗಿತ್ತು.

    ಈ ಪ್ರತಿಭಟನೆಯನ್ನು ಹತ್ತಿಕ್ಕಲು ಪಾಕ್‌ ತನ್ನ ಸೇನೆಯನ್ನು ಬಳಸಿ ಬಲಪ್ರಯೋಗ ಮಾಡಿತ್ತು. ಇದನ್ನು ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ ಸಹ ಖಂಡಿಸಿತ್ತು. ಹಲವಾರು ಸುತ್ತಿನ ವಿಫಲ ಮಾತುಕತೆಗಳ ನಂತರ, ಪಾಕ್‌ ಸರ್ಕಾರ ಅಕ್ಟೋಬರ್ 4 ರಂದು ಪ್ರತಿಭಟನಾಕಾರ ಕೆಲವು ಬೇಡಿಕೆ ಇಡೇರಿಕೆಗೆ ಒಪ್ಪಿಕೊಂಡಿತ್ತು.

    ಪಿಒಕೆ ಹೋರಾಟಕ್ಕೆ ಮಣಿದ ಪಾಕ್‌
    ಪಾಕ್‌ ಸರ್ಕಾರ ಪ್ರತಿಭಟನೆಯ ತೀವ್ರತೆಗೆ ಸೋತು ಹೋರಾಟದ ನೇತೃತ್ವ ವಹಿಸಿದ್ದ ಅವಾಮಿ ಕ್ರಿಯಾ ಸಮಿತಿ ಜೊತೆ 25 ಬೇಡಿಕಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಒಪ್ಪಂದದಲ್ಲಿ ಹಿಂಸಾಚಾರದಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ, ಹೋರಾಟಗಾರ ಮೇಲೆ ದೌರ್ಜನ್ಯ ಎಸಗಿದವರ ಮೇಲೆ ಭಯೋತ್ಪಾದನೆ ಪ್ರಕರಣ ದಾಖಲು ಮಾಡುವುದು, ಪಿಒಕೆಯ ಮೀರಾಪುರದಲ್ಲಿ ವಿಮಾನ ನಿಲ್ದಾಣ ನಿರ್ಮಿಸಿ ಮೂಲಸೌಕರ್ಯಕ್ಕೆ 3000 ಕೋಟಿ ರೂ. ನೀಡುವಂತಹ ಬೇಡಿಕೆಗಳು ಸೇರಿವೆ. ಇದರ ಜೊತೆ ಪಿಒಕೆಯಲ್ಲಿ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್‌ ಸೇರಿದಂತೆ ಉಚಿತ ಚಿಕಿತ್ಸೆಗಾಗಿ 15 ದಿನಗಳ ಒಳಗಾಗಿ ಆರೋಗ್ಯ ಕಾರ್ಡ್‌ ವಿತರಣೆ, ವಿದ್ಯುತ್‌ ಪೂರೈಕೆ ಉತ್ತಮಪಡಿಸಲು ಅನುದಾನ ನೀಡುವುದಾಗಿ ಪಾಕ್‌ ಸರ್ಕಾರ ಒಪ್ಪಿಕೊಂಡಿದೆ.

    ಭಾರತದ ಮೇಲೆ ಪಾಕ್‌ ಬೊಟ್ಟು ಮಾಡಿದ್ದು ಯಾಕೆ?
    ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳ ಕೆಲವು ಭಾಗಗಳನ್ನು ಪಾಕಿಸ್ತಾನ 1947-48ರ ಅವಧಿಯಲ್ಲಿ ಅಕ್ರಮವಾಗಿ ಆಕ್ರಮಿಸಿಕೊಂಡಿದೆ. ಈ ಪ್ರದೇಶದಿಂದ ತಕ್ಷಣವೇ ಪಾಕ್‌ ಹಿಂದೆ ಸರಿಯ ಬೇಕು ಎಂದು ಭಾರತ ನಿರಂತರ ಒತ್ತಡ ಹೇರುತ್ತಲೇ ಬಂದಿದೆ. ಆದರೆ ಪಾಕಿಸ್ತಾನ ಮಾತ್ರ ಅವೆಲ್ಲ ತನ್ನದೇ ಜಾಗ ಎಂದು ವಾದಿಸುತ್ತಿದೆ. ಇದೇ ಕಾರಣಕ್ಕೆ ಅಲ್ಲಿನ ಸ್ಥಳೀಯರನ್ನು ಭಾರತ ಎತ್ತಿ ಕಟ್ಟಿ ಸರ್ಕಾರದ ವಿರುದ್ಧ ಆಯುಧಗಳನ್ನಾಗಿ ನಿರ್ಮಾಣ ಮಾಡುತ್ತಿದೆ ಎಂಬುದು ಪಾಕ್‌ನ ವಾದ.

    ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದೇನು?
    ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಈ ಪ್ರತಿಭಟನೆಯನ್ನು ವಿದೇಶಿ ಪಿತೂರಿ ಎಂದು ಆರೋಪಿಸಿದ್ದರು. ಅಲ್ಲದೇ ಎಲ್ಲಾ ಪಿತೂರಿಗಳು ಮತ್ತು ವದಂತಿಗಳು ಈಗ ಸಮಾಧಿಯಾಗಿವೆ. ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸಲಾಗಿದೆ ಎಂದು ಹೇಳಿದ್ದರು.

    ಪಾಕ್‌ ಪ್ರಧಾನಿ ಹೇಳಿದಂತೆ ಇದು ವಿದೇಶಿ ಪಿತೂರಿಯೇ ಆಗಿದ್ದರೆ ಪಿಒಕೆ ಜನರ 38 ಬೇಡಿಕೆಗಳಲ್ಲಿ 25ನ್ನು ಪೂರೈಸಲು ಪಾಕ್‌ ಸರ್ಕಾರ ಏಕೆ ಒಪ್ಪಿಕೊಂಡಿತು? ಎಂಬ ಚರ್ಚೆಯನ್ನು ಹುಟ್ಟುಹಾಕಿತ್ತು. ಇದು ಜನರ ಪ್ರತಿಭಟನೆಯ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ರವಲ್ಲದೇ ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂಬುದು ಜಗತ್ತಿಗೆ ಅರಿವಾಗಿತ್ತು.

    ಪಿಒಕೆ ಜನರ ವಿರುದ್ಧ ಪಾಕ್ ದಬ್ಬಾಳಿಕೆ‌ ಖಂಡಿಸಿದ್ದ ಭಾರತ
    ಪಾಕಿಸ್ತಾನವು ಇತ್ತೀಚೆಗೆ ಪಿಒಕೆಯಲ್ಲಿ ನಡೆದ ಪ್ರತಿಭಟನೆಗಳ ವಿಚಾರವಾಗಿ ಪಾಕ್‌ ಸರ್ಕಾರವನ್ನು ತೀವ್ರವಾಗಿ ಟೀಕಿಸಿತ್ತು. ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ಹಲವಾರು ಪ್ರದೇಶಗಳಲ್ಲಿ ನಡೆದ ಪ್ರತಿಭಟನೆಗಳಲ್ಲಿ ಪಾಕ್‌ ಪಡೆಗಳು ಅಮಾಯಕ ನಾಗರಿಕರ ಮೇಲೆ ದೌರ್ಜನ್ಯ ನಡೆಸಿದೆ. ಈ ಪ್ರದೇಶಗಳಿಂದ ಪಾಕ್‌ ಸರ್ಕಾರ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಲೂಟಿ ಮಾಡಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಟೀಕಿಸಿದ್ದರು.

    ಆಪರೇಷನ್‌ ಸಿಂದೂರ
    ಈ ವರ್ಷ ಮೇ 7ರಿಂದ 10ರ ವರೆಗೆ ಪಾಕಿಸ್ತಾನದೊಂದಿಗಿನ ಸಂಘರ್ಷದ ಸಮಯದಲ್ಲಿ ಭಾರತಕ್ಕೆ ಪಿಒಕೆಯನ್ನು ವಶಪಡಿಸಿಕೊಳ್ಳಲು ಅವಕಾಶವಿತ್ತು. ಆದರೆ ಭಾರತ ಹಾಗೆ ಮಾಡಲಿಲ್ಲ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು. ಇನ್ನೂ ಆಪರೇಷನ್ ಸಿಂದೂರ ನಂತರ ಪಾಕಿಸ್ತಾನದೊಂದಿಗಿನ ಮುಂದಿನ ಮಾತುಕತೆ ಭಯೋತ್ಪಾದನೆ ಮತ್ತು ಪಿಒಕೆ ವಿಷಯಗಳಿಗೆ ಸೀಮಿತವಾಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದರು.

  • ಪಾಕ್‌ ಸರ್ಕಾರದ ವಿರುದ್ಧ ಪಿಓಕೆಯಲ್ಲಿ ಭಾರೀ ಪ್ರತಿಭಟನೆ – ಷರೀಫ್‌, ಅಸಿಮ್ ಮುನೀರ್‌ಗೆ ಪುಕ ಪುಕ

    ಪಾಕ್‌ ಸರ್ಕಾರದ ವಿರುದ್ಧ ಪಿಓಕೆಯಲ್ಲಿ ಭಾರೀ ಪ್ರತಿಭಟನೆ – ಷರೀಫ್‌, ಅಸಿಮ್ ಮುನೀರ್‌ಗೆ ಪುಕ ಪುಕ

    – ಹಣದುಬ್ಬರ ತಡೆ, ಇಂಧನ ವೆಚ್ಚ ಕಡಿಮೆ ಮಾಡಲು ಕ್ರಮ ಕೈಗೊಳ್ಳುವಂತೆ ಆಗ್ರಹ

    ಇಸ್ಲಾಮಾಬಾದ್: ಬಲೂಚಿಸ್ತಾನ ಪ್ರತ್ಯೇಕತೆಗಾಗಿ ನಿರಂತರ ಹೋರಾಟಗಳು ನಡೆಯುತ್ತಿರುವ ಪಾಕಿಸ್ತಾನಕ್ಕೆ ಈಗ ಮತ್ತೊಂದು ತಲೆನೋವು ಎದುರಾಗಿದೆ. ಅವಾಮಿ ಕ್ರಿಯಾ ಸಮಿತಿ (Awami Action Committee) ಸೋಮವಾರ ಪ್ರತಿಭಟನೆಗೆ ಕರೆ ನೀಡಿದ್ದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಇತ್ತೀಚಿನ ಇತಿಹಾಸದಲ್ಲಿಯೇ ಅತಿದೊಡ್ಡ ಪ್ರತಿಭಟನೆಗಳಲ್ಲಿ ಒಂದಕ್ಕೆ ಸಾಕ್ಷಿಯಾಗುತ್ತಿದೆ.

    ʻಶಟ್ಟರ್‌ ಡೌನ್‌ & ವ್ಹೀಲ್‌ ಜಾಮ್‌ʼ (shutter-down and wheel-jam) ಅಂದ್ರೆ ಅಂಗಡಿ ಮುಂಗಟ್ಟು, ವಾಹನ ಸಂಚಾರಗಳನ್ನ ಬಂದ್‌ ಮಾಡುವಂತೆ ಕರೆ ನೀಡಿದ ಬಳಿಕ ಪ್ರತಿಭಟನೆ ಭುಗಿಲೆದ್ದಿದೆ. ಪ್ರತಿಭಟನೆಯ ತೀವ್ರತೆ ಹೆಚ್ಚಾಗ್ತಿದ್ದಂತೆ ಪಾಕ್‌ ಸರ್ಕಾರ ಪ್ರದೇಶದ ಸುತ್ತ ಭದ್ರತಾ ಪಡೆಗಳನ್ನ ನಿಯೋಜಿಸಿದೆ. ಜೊತೆಗೆ ಹೆಚ್ಚುವರಿ 1,000 ಪೊಲೀಸರನ್ನ ನಿಯೋಜನೆ ಮಾಡಿದೆ. ಮಧ್ಯರಾತ್ರಿಯಿಂದಲೇ ಇಂಟರ್‌ನೆಟ್‌ ಸೇವೆಯನ್ನ ಸ್ಥಗಿತಗೊಳಿಸಿದೆ. ಇದನ್ನೂ ಓದಿ: ಅಮೆರಿಕದ ಹೆಚ್‌-1ಬಿ ವೀಸಾಗೆ ಟಕ್ಕರ್‌ ಕೊಡಲು ಬರ್ತಿದೆ ಚೀನಾದ ಕೆ-ವೀಸಾ; ಭಾರತೀಯರಿಗೆ ಲಾಭ?

    ಪಿಓಕೆಯಲ್ಲಿ ಪ್ರತಿಭಟನಾಕಾರರ ಬೇಡಿಕೆಗಳೇನು?
    ಪಾಕಿಸ್ತಾನದಲ್ಲಿ ನೆಲೆಸಿರುವ ಕಾಶ್ಮೀರಿ ನಿರಾಶ್ರಿತರಿಗೆ ಮೀಸಲಾಗಿರುವ 12 ವಿಧಾನಸಭಾ ಸ್ಥಾನಗಳನ್ನ ರದ್ದುಗೊಳಿಸಬೇಕು. ಜಲವಿದ್ಯುತ್ ಒಪ್ಪಂದಗಳ ಮರು ಮಾತುಕತೆ ನಡೆಸಬೇಕು ಜೊತೆಗೆ ಹೆಚ್ಚುತ್ತಿರುವ ಹಣದುಬ್ಬರ ಹೊರೆಯನ್ನ ಕಡಿಮೆ ಮಾಡಲು ತಕ್ಷಣವೇ ಹಿಟ್ಟು (ಗೋದಿ ಹಿಟ್ಟು) ಸಬ್ಸಿಡಿಗಳನ್ನ ಒದಗಿಸಬೇಕು. ಅಲ್ಲದೇ ಇಂಧನ ವೆಚ್ಚ ಕಡಿಮೆ ಮಾಡಲು ಸ್ಥಳೀಯ ಉತ್ಪಾದನಾ ದರಗಳೊಂದಿಗೆ ವಿದ್ಯುತ್‌ ಸುಂಕವನ್ನು ಸಮೀಕರಿಸಬೇಕು. ಜೊತೆಗೆ ಪಾಕ್‌ ಸರ್ಕಾರ ಈ ಹಿಂದೆಯೇ ಭರವಸೆ ನೀಡಿದ್ದ ಹಲವು ಬೇಡಿಕೆಗಳನ್ನ ಈಡೇರಿಸಬೇಕು ಅನ್ನೋದು ಪ್ರತಿಭಟನಾಕಾರರ ಒತ್ತಾಯ.

    ಈ ಕುರಿತು ಮಾತನಾಡಿರುವ ಎಎಸಿಯ ಪ್ರಮುಖ ನಾಯಕ ಶೌಕತ್ ನವಾಜ್ ಮಿರ್, ಯಾವುದೇ ಸಂಸ್ಥೆಯ ವಿರುದ್ಧ ನಮ್ಮ ಪ್ರತಿಭಟನೆ ಇಲ್ಲ. 70 ವರ್ಷಗಳಿಗಿಂತಲೂ ಹೆಚ್ಚು ಕಾಲ ನಿರಾಕರಿಸಲ್ಪಟ್ಟ ಜನ್ನ ಜನಗಳ ಹಕ್ಕುಗಳಿಗಾಗಿ ಈ ಹೋರಾಟ ಎಂದು ಹೇಳಿದ್ದಾರೆ. ಇದನ್ನೂ ಓದಿ: ಡ್ರಗ್ಸ್‌ ಗ್ಯಾಂಗ್‌ನಿಂದ ಅರ್ಜೆಂಟೀನಾದ 3 ಯುವತಿಯರ ಬರ್ಬರ ಹತ್ಯೆ

    Shehbaz Sharif

    ಷರೀಫ್‌, ಅಸಿಮ್‌ ಮುನೀರ್‌ಗೆ ಪುಕ ಪುಕ
    ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಭುಗಿಲೆದ್ದಿರುವ ಈ ಪ್ರತಿಭಟನೆಗೆ ಯುಎಸ್, ಯುಕೆ ಮತ್ತು ಯುರೋಪ್‌ನಾದ್ಯಂತ ಇತರ ದೇಶಗಳಲ್ಲಿ ನೆಲೆಸಿರುವ ಪಿಒಕೆ ವಲಸಿಗರು ಕೈ ಜೋಡಿಸುವ ಸಾಧ್ಯತೆಗಳಿವೆ. ಹೀಗಾಗಿ ಇದು ವ್ಯಾಪಕವಾಗಿ ಬೆಳೆಬಹುದು ಅನ್ನೋ ಕಳವಳ ಪಾಕ್‌ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಪಾಕ್‌ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಬೆನ್ನಲ್ಲೇ ಸೂಕ್ಷ್ಮ ಪ್ರದೇಶಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ. ಇದನ್ನೂ ಓದಿ: ಸುಂಕ ಸುಂಕ ಸುಂಕ; ಔಷಧಗಳ ಆಮದಿನ ಮೇಲೆ 100% ಸುಂಕ ಘೋಷಿಸಿದ ಟ್ರಂಪ್‌ – ಭಾರತಕ್ಕೇನು ಎಫೆಕ್ಟ್‌?

  • ಪಾಕ್‌ ಹುಟ್ಟಡಗಿಸಲು ಐಎಎಫ್‌ ಬಳಸಿದ್ದು 50ಕ್ಕಿಂತಲೂ ಕಡಿಮೆ ಶಸ್ತ್ರಾಸ್ತ್ರ: ವಾಯುಪಡೆಯ ಉಪಮುಖ್ಯಸ್ಥ ಮಾಹಿತಿ

    ಪಾಕ್‌ ಹುಟ್ಟಡಗಿಸಲು ಐಎಎಫ್‌ ಬಳಸಿದ್ದು 50ಕ್ಕಿಂತಲೂ ಕಡಿಮೆ ಶಸ್ತ್ರಾಸ್ತ್ರ: ವಾಯುಪಡೆಯ ಉಪಮುಖ್ಯಸ್ಥ ಮಾಹಿತಿ

    – ಆಪರೇಷನ್ ಸಿಂಧೂರ ಯಶೋಗಾಥೆಯ ಮತ್ತಷ್ಟು ಸ್ಫೋಟಕ ವಿಚಾರ ಬಹಿರಂಗ

    ನವದೆಹಲಿ: ಪಹಲ್ಗಾಮ್‌ ದಾಳಿಗೆ (Pahalgam Terror Attack) ಪ್ರತೀಕಾರವಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (PoK) ದಲ್ಲಿನ ಉಗ್ರರ ಅಡಗು ತಾಣಗಳ ಮೇಲೆ ಭಾರತ ನಡೆಸಿ ದಾಳಿಯ 3 ತಿಂಗಳ ಬಳಿಕ ವಾಯುಪಡೆಯ ಉಪ ಮುಖ್ಯಸ್ಥರು ʻಆಪರೇಷನ್‌ ಸಿಂಧೂರʼ (Operation Sindoor) ಎಕ್ಸ್‌ಕ್ಲೂಸಿವ್‌ ದೃಶ್ಯಗಳನ್ನ ಹಂಚಿಕೊಂಡಿದ್ದಾರೆ ಜೊತೆಗೆ, ಇದುವರೆಗೆ ಕೇಳಿರದ ಒಂದಷ್ಟು ಮಾಹಿತಿಗಳನ್ನ ಹಂಚಿಕೊಂಡರು.

    ಖಾಸಗಿ ವಾಹಿನಿಯೊಂದರ ಕಾನ್‌ಕ್ಲೈವ್‌ನಲ್ಲಿ ಮಾತನಾಡಿದ ಏರ್ ಮಾರ್ಷಲ್ ನರ್ಮದೇಶ್ವರ ತಿವಾರಿ, ಪಾಕಿಸ್ತಾನವನ್ನು ಕದನ ವಿರಾಮಕ್ಕೆ ತರಲು ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತೀಯ ವಾಯುಪಡೆ (IAF) 50ಕ್ಕಿಂತ ಕಡಿಮೆ ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿಗಳನ್ನು ಹಾರಿಸಿತು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಆಪರೇಷನ್‌ ಸಿಂಧೂರ ಯಶಸ್ಸಿನ ಹಿಂದೆ ಬೆಂಗಳೂರಿನ ತಂತ್ರಜ್ಞಾನವಿದೆ: ಮೋದಿ ಅಭಿನಂದನೆ

    ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ಮಾಡಲು ಐಎಎಫ್‌ ಹೆಚ್ಚಿನ ಸಂಖ್ಯೆಯ ಗುರಿಗಳನ್ನು ನಿಗದಿಪಡಿಸಿತ್ತು. ಅಂತಿಮವಾಗಿ ಪ್ರಮುಖ ತಾಣಗಳನ್ನು ಪಟ್ಟಿ ಮಾಡಿ 9ಕ್ಕೆ ಇಳಿಸಲಾಗಿತು. ಆದ್ರೆ 50 ಕ್ಕಿಂತಲೂ ಕಡಿಮೆ ಶಸ್ತ್ರಾಸ್ತ್ರಗಳಲ್ಲಿ, ಭಾರತೀಯ ರಕ್ಷಣಾ ಪಡೆಗಳು ಸಂಘರ್ಷ ನಿರ್ಮೂಲನೆ ಮಾಡಿ ಪ್ರಾಬಲ್ಯ ಸಾಧಿಸಲು ಸಾಧ್ಯವಾಯಿತು. ಹಿಂದೆಂದೂ ಈ ರೀತಿ ನಡೆದೇ ಇಲ್ಲ ಎಂಬುದೇ ನಮಗೆ ದೊಡ್ಡ ಸಾಧನೆ ಎಂದು ಬಣ್ಣಿಸಿದರು. ಇದನ್ನೂ ಓದಿ: ಆಪರೇಷನ್‌ ಸಿಂಧೂರದಲ್ಲಿ ಭಾರತ ಪರಾಕ್ರಮ – ಪಾಕ್‌ನ 6 ಯುದ್ಧ ವಿಮಾನಗಳು ಉಡೀಸ್‌; ವಾಯುಪಡೆ ಮುಖ್ಯಸ್ಥ

    ಮೊದಲು ನಾವು ಉಗ್ರರ ಅಡಗು ತಾಣಗಳನ್ನು ಮಾತ್ರ ಗುರಿಯಾಗಿಸಿ ದಾಳಿ ನಡೆಸಿದ್ದವು. ಆದ್ರೆ ಮೇ 9, 10ರ ರಾತ್ರಿ ಮುಖ್ಯ ದಾಳಿ ನಡೆಸಿದಾಗ ತೀಕ್ಷ್ಣ ಪ್ರತಿಕ್ರಿಯೆ ಕೊಡಲೇಬೇಕೆಂದು ನಿರ್ಧರಿಸಿದೆವು. ಹಾಗಾಗಿ ಪಾಕ್‌ ಮೇಲೆ ಪ್ಯಾನಲ್‌ ಫ್ರಂಟ್‌ ಅಟ್ಯಾಕ್‌ ಮಾಡಿದೆವು. ಪ್ರತಿಯೊಂದು ಶಸ್ತ್ರಾಸ್ತ್ರವನ್ನು ಗಣನೆಗೆ ತೆಗೆದುಕೊಂಡಿದ್ದೇವೆ. 1971ರ ಯುದ್ಧದ ಸಮಯದಲ್ಲೂ ಮಾದಲಾರದಂತಹ ದಾಳಿಯನ್ನ ನಾವು ಮಾಡಿದ್ದೇವೆ. ಪಾಕ್‌ನ ಸಾಮರ್ಥ್ಯಕ್ಕೆ ದೊಡ್ಡ ಹೊಡೆತ ಕೊಟ್ಟಿದ್ದೇವೆ. ಪಾಕಿಸ್ತಾನದ ಸಾಮರ್ಥ್ಯವನ್ನು ಬಹಿರಂಗಪಡಿಸುವುದು ಸಹ ಈ ದಾಳಿಯ ಹಿಂದಿನ ಉದ್ದೇಶವಾಗಿತ್ತು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

    ಆಪರೇಷನ್‌ ಸಿಂಧೂರ ನಡೆಸಿದ್ದು ಏಕೆ?
    ಏಪ್ರಿಲ್‌ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭೀಕರ ಭಯೋತ್ಪಾದಕ ದಾಳಿ ನಡೆದಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯ ಭಾರತೀಯ ರಕ್ಷಣಾ ಪಡೆಗಳು ಮೇ 7ರ ಬೆಳಗ್ಗಿನ ಜಾವ ಪಾಕ್‌ ಮತ್ತು ಪಿಒಕೆಯಲ್ಲಿನ ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿದ್ದವು. ಈ ದಾಳಿಯಲ್ಲಿ ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮಸೂದ್ ಅಜರ್‌ ಕುಟುಂಬದ 10 ಸದಸ್ಯರು ಮತ್ತು ನಾಲ್ವರು ಆಪ್ತ ಸಹಾಯಕರು ಸೇರಿದಂತೆ 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಆಪರೇಷನ್‌ ಸಿಂಧೂರಕ್ಕೆ ಜೈಶ್‌ ನೆಲೆಗಳು ಉಡೀಸ್‌ – ಪುನರ್‌ ನಿರ್ಮಾಣಕ್ಕೆ ನಿಧಿ ಕೋರಿದ ಉಗ್ರ ಸಂಘಟನೆ 

  • ಕಾಂಗ್ರೆಸ್‌ ಪಿಒಕೆಯನ್ನ ಪಾಕ್‌ಗೆ ಬಿಟ್ಟುಕೊಟ್ಟಿದೆ, ನಾವು ವಾಪಸ್‌ ಪಡೆಯುತ್ತೇವೆ: ಅಮಿತ್‌ ಶಾ

    ಕಾಂಗ್ರೆಸ್‌ ಪಿಒಕೆಯನ್ನ ಪಾಕ್‌ಗೆ ಬಿಟ್ಟುಕೊಟ್ಟಿದೆ, ನಾವು ವಾಪಸ್‌ ಪಡೆಯುತ್ತೇವೆ: ಅಮಿತ್‌ ಶಾ

    ನವದೆಹಲಿ: ಕಾಂಗ್ರೆಸ್‌ ಪಿಒಕೆಯನ್ನು (ಪಾಕ್‌ ಆಕ್ರಮಿತ ಕಾಶ್ಮೀರ) ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿದೆ. ಅದನ್ನು ನಾವು ಮರಳಿ ಪಡೆಯುತ್ತೇವೆ ಎಂದು ವಿಪಕ್ಷಗಳಿಗೆ ಕೇಂದ್ರ ಸಚಿವ ಅಮಿತ್‌ ಶಾ (Amit Shah) ಖಡಕ್‌ ಸಂದೇಶ ರವಾನಿಸಿದ್ದಾರೆ.

    ರಾಜ್ಯಸಭೆಯಲ್ಲಿ ಆಪರೇಷನ್ ಸಿಂಧೂರ ಕುರಿತ ವಿಶೇಷ ಚರ್ಚೆಯಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ಉಗ್ರರನ್ನು ಬೇಟೆಯಾಡಿದ ಆಪರೇಷನ್ ಮಹಾದೇವ್ ಬಗ್ಗೆ ವಿವರ ನೀಡಿದ್ದಾರೆ. ಇದನ್ನೂ ಓದಿ: ಪಾಕ್ ಭಯೋತ್ಪಾದನೆಗೆ ಶಾಶ್ವತ ಬೆಂಬಲ ತ್ಯಜಿಸುವವರೆಗೆ ಸಿಂಧೂ ಜಲ ಒಪ್ಪಂದ ಅಮಾನತು: ಜೈಶಂಕರ್

    ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರಾಣ ಕಳೆದುಕೊಂಡವರ ಸಂಬಂಧಿಕರಿಂದ ನನಗೆ ಬಹಳಷ್ಟು ಕರೆಗಳು ಬಂದವು. ಅವರು ಈ ಭಯೋತ್ಪಾದಕರ ತಲೆಗೆ ಗುಂಡು ಹಾರಿಸಿ ಕೊಲ್ಲುವಂತೆ ನನ್ನನ್ನು ವಿನಂತಿಸಿದ್ದರು. ನಮ್ಮ ಅಧಿಕಾರಿಗಳು ಅವರ ತಲೆಗೆ ಗುಂಡು ಹಾರಿಸಿ ಕೊಂದಿದ್ದಾರೆಂದು ತಿಳಿಸಿದ್ದಾರೆ.

    ಆಪರೇಷನ್ ಮಹಾದೇವ್‌ನಲ್ಲಿ ಹತ್ಯೆಗೀಡಾದ 3 ಭಯೋತ್ಪಾದಕರ ಗುರುತು ಪತ್ತೆಯಾಗಿದೆ. ಪಹಲ್ಗಾಮ್ ದಾಳಿಯಲ್ಲಿ ಲಷ್ಕರ್-ಎ-ತೈಬಾದ ಕೈವಾಡವನ್ನು ದೃಢಪಡಿಸಿದೆ ಎಂದು ಅಮಿತ್‌ ಶಾ ವಿವರಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ದಾಳಿ ಹೊಣೆಯನ್ನ ಟಿಆರ್‌ಎಫ್ 2 ಬಾರಿ ಹೊತ್ತುಕೊಂಡಿದೆ: ವಿಶ್ವಸಂಸ್ಥೆ

    ಸ್ಥಳದಲ್ಲಿ ವಶಪಡಿಸಿಕೊಂಡ ಗುಂಡುಗಳ ಕವಚಗಳು ಪಹಲ್ಗಾಮ್‌ನಲ್ಲಿ ಪತ್ತೆಯಾದ ಕವಚಗಳೊಂದಿಗೆ ಶೇ.99 ರಷ್ಟು ಹೊಂದಿಕೆಯಾಗುತ್ತವೆ ಎಂದು ಹೇಳಿದ್ದಾರೆ. ಕಾಶ್ಮೀರ ಭಯೋತ್ಪಾದನೆಯಿಂದ ಮುಕ್ತವಾಗಲಿದೆ ಎಂಬ ಬಲವಾದ ಸಂದೇಶವನ್ನು ನಾನು ನೀಡಲು ಬಯಸುತ್ತೇನೆ ಎಂದಿದ್ದಾರೆ.

    ಗೃಹ ಸಚಿವರ ಭಾಷಣಕ್ಕೂ ಮುನ್ನ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಪ್ರಧಾನಿ ನರೇಂದ್ರ ಮೋದಿ ಸದನದಲ್ಲಿ ಉಪಸ್ಥಿತರಿಲ್ಲ, ಚರ್ಚೆಗೆ ಉತ್ತರಿಸುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು. ನಂತರ ಪಕ್ಷವು ಸಚಿವರ ಪ್ರತಿಕ್ರಿಯೆಯನ್ನು ನಿರ್ಲಕ್ಷಿಸಿ ಸಭಾತ್ಯಾಗ ಮಾಡಿತು.

  • `ಆಪರೇಷನ್ ಸಿಂಧೂರ’ದಲ್ಲಿ ನಿರ್ನಾಮವಾದ ಉಗ್ರರ ಲಾಂಚ್ ಪ್ಯಾಡ್ ಮರುನಿರ್ಮಾಣ ಮಾಡುತ್ತಿದೆ ಪಾಕ್‌

    `ಆಪರೇಷನ್ ಸಿಂಧೂರ’ದಲ್ಲಿ ನಿರ್ನಾಮವಾದ ಉಗ್ರರ ಲಾಂಚ್ ಪ್ಯಾಡ್ ಮರುನಿರ್ಮಾಣ ಮಾಡುತ್ತಿದೆ ಪಾಕ್‌

    ನವದೆಹಲಿ: ಆಪರೇಷನ್‌ ಸಿಂಧೂರದಲ್ಲಿ (Operation Sindoor) ನಾಶವಾದ ಉಗ್ರರ ನೆಲೆಗಳನ್ನು ಪಾಕಿಸ್ತಾನ (Pakistan) ಮತ್ತೆ ಮರುನಿರ್ಮಾಣಮಾಡುತ್ತಿದೆ ಎಂದು ವರದಿಯಾಗಿದೆ.

    ಕಣ್ಗಾವಲು ವ್ಯವಸ್ಥೆ, ಲಾಂಚ್‌ ಪ್ಯಾಡ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ನಿಯಂತ್ರಣ ರೇಖೆಯ (LoC) ಉದ್ದಕ್ಕೂ ದಟ್ಟ ಅರಣ್ಯ ಪ್ರದೇಶಗಳಲ್ಲಿ ಸಣ್ಣ ಮತ್ತು ಹೈಟೆಕ್ ಅಡಗುತಾಣಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಪಾಕಿಸ್ತಾನ ಸೇನೆ, ಗೂಢಚಾರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಮತ್ತು ಸರ್ಕಾರದ ಬೆಂಬಲದೊಂದಿಗೆ ಈ ಕೆಲಸ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪಾಕ್‌ ಪ್ರಧಾನಿ ನಿದ್ದೆಗೆಡಿಸಿದ ʻಆಪರೇಷನ್‌ ಸಿಂಧೂರʼ – ಶೆಹಬಾಜ್‌ಗೆ ಮಧ್ಯರಾತ್ರಿ ಕರೆ ಮಾಡಿದ್ಯಾರು?

    ಮುಖ್ಯವಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಮತ್ತು ಅದರ ಸಮೀಪದ ಪ್ರದೇಶಗಳಲ್ಲಿ ಉಗ್ರರ ತಾಣಗಳನ್ನು ಪುನರ್ನಿರ್ಮಿಸಲು ಪ್ರಯತ್ನಗಳು ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

    ಪಹಲ್ಗಾಮ್ ಬಳಿಯ ಬೈಸರನ್‌ನಲ್ಲಿ ಏಪ್ರಿಲ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 25 ಭಾರತೀಯರು ಮತ್ತು ಒಬ್ಬ ನೇಪಾಳಿ ಪ್ರಜೆ ಸಾವನ್ನಪ್ಪಿದ್ದರು. ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಇದು ಒಂದಾಗಿತ್ತು. ಇದಕ್ಕೆ ಪ್ರತೀಕಾರವಾಗಿ ಭಾರತ ಪಾಕ್‌ ಮೇಲೆ ದಾಳಿ ನಡೆಸಿತ್ತು. ದಾಳಿಯಲ್ಲಿ 9 ಉಗ್ರರ ನೆಲೆಗಳನ್ನು ಧ್ವಂಸ ಮಾಡಿ, 100ಕ್ಕೂ ಹೆಚ್ಚು ಉಗ್ರರನ್ನು ಹತ್ಯೆಗೈದಿತ್ತು. ಈ ಕಾರ್ಯಾಚರಣೆಗೆ ʻಆಪರೇಷನ್‌ ಸಿಂಧೂರʼ ಎಂದು ಹೆಸರಿಡಲಾಗಿತ್ತು. ಇದನ್ನೂ ಓದಿ: ‘ಆಪರೇಷನ್‌ ಸಿಂಧೂರ’ದಲ್ಲಿ ಶೌರ್ಯ ಮೆರೆದ BSF ಯೋಧ – ಗೌರವಿಸಿದ ಸೇನಾ ಮುಖ್ಯಸ್ಥ

  • ಕಾಶ್ಮೀರದಲ್ಲಿ ಪಿಒಕೆ ಮೂಲದ ಉಗ್ರನ ಭೂಮಿ ವಶ

    ಕಾಶ್ಮೀರದಲ್ಲಿ ಪಿಒಕೆ ಮೂಲದ ಉಗ್ರನ ಭೂಮಿ ವಶ

    ಶ್ರೀನಗರ: ಕಾಶ್ಮೀರದ (Jammu and Kashmir) ರಾಂಬನ್ ಜಿಲ್ಲೆಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ (PoK) ಕಾರ್ಯನಿರ್ವಹಿಸುತ್ತಿದ್ದ ಉಗ್ರನಿಗೆ ಸೇರಿದ್ದ ಭೂಮಿಯನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಧರಮ್‌ಕುಂಡ್‌ನ ಸುಂಬರ್ ಗ್ರಾಮದಲ್ಲಿ ಪಿಒಕೆಯಲ್ಲಿರುವ ಉಗ್ರ ಅಲಿ ಮೊಹಮ್ಮದ್ ಅಲಿಯಾಸ್ ಇಬ್ರಾಹಿಂ ಶೇಖ್ ಒಡೆತನದ ಕೃಷಿ ಭೂಮಿಯನ್ನು ಜಪ್ತಿ ಮಾಡಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಕ್ರಮಕೈಗೊಳ್ಳಲಾಗಿದೆ. ಉಗ್ರರನ್ನು ಮಟ್ಟಹಾಕುವಲ್ಲಿ ಇದು ಮಹತ್ವದ ನಡೆಯಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್‌ಗೆ ಆಪರೇಷನ್ ಸಿಂಧೂರದ ಸೂಕ್ಷ್ಮ ಮಾಹಿತಿ ಹಂಚಿಕೆ – ಪಂಜಾಬ್ ವ್ಯಕ್ತಿ ಅರೆಸ್ಟ್

    ಜಪ್ತಿ ಮಾಡಲಾದ ಆಸ್ತಿಯನ್ನು ಕಂದಾಯ ದಾಖಲೆಗಳಲ್ಲಿ ಸರಿಯಾಗಿ ಗುರುತಿಸಲಾಗಿದೆ. ಅದರ ಮಾರಾಟ ಅಥವಾ ವರ್ಗಾವಣೆಯನ್ನು ನಿಷೇಧಿಸುವ ನೋಟಿಸ್‌ಗಳನ್ನು ನೀಡಲಾಗಿದೆ. 2024ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಾಷ್ಟ್ರದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಬೆದರಿಕೆ ಹಾಕುವ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದನ್ನು ಮುಂದುವರೆಸುತ್ತೇವೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ರಾಜಸ್ಥಾನದ ಮೂವರು ಸಚಿವರಿದ್ದ ಹೋಟೆಲ್‌ಗೆ ಬಾಂಬ್ ಬೆದರಿಕೆ ಸಂದೇಶ

  • ರಾಹುಲ್‌ ಗಾಂಧಿ ಪ್ರಧಾನಿಯಾದ ದಿನ ಪಿಒಕೆ ಭಾರತದ ಭಾಗವಾಗಲಿದೆ: ʻಕೈʼ ಸಂಸದ ಪ್ರಮೋದ್ ತಿವಾರಿ

    ರಾಹುಲ್‌ ಗಾಂಧಿ ಪ್ರಧಾನಿಯಾದ ದಿನ ಪಿಒಕೆ ಭಾರತದ ಭಾಗವಾಗಲಿದೆ: ʻಕೈʼ ಸಂಸದ ಪ್ರಮೋದ್ ತಿವಾರಿ

    ನವದೆಹಲಿ: ರಾಹುಲ್ ಗಾಂಧಿಯವರು (Rahul Gandhi) ಪ್ರಧಾನಿಯಾದ ದಿನವೇ ಪಿಒಕೆ ಭಾರತದ ಭಾಗವಾಗಲಿದೆ ಎಂದು ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಹೇಳಿದ್ದಾರೆ. ಈ ಮೂಲಕ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರ ಹೇಳಿಕೆಯನ್ನು ಅವರು ಬೆಂಬಲಿಸಿದ್ದಾರೆ.

    ರಾಹುಲ್ ಗಾಂಧಿಯವರು ಧೈರ್ಯಶಾಲಿ, ದೃಢ ನಿಶ್ಚಯದ ನಾಯಕ, ಆ ನಂಬಿಕೆ ನನ್ನಲ್ಲಿ ಇದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ‘ಭಾರತ್ ಜೋಡೋ ಯಾತ್ರೆ’ಯ ಮೂಲಕ ಅವರು ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದ್ದಾರೆ. ರಾಷ್ಟ್ರದ ಬಗ್ಗೆ ಅವರ ಬದ್ಧತೆ ಗಮನಾರ್ಹವಾದದ್ದು ಎಂದು ಬಣ್ಣಿಸಿದ್ದಾರೆ.

    ರಾಹುಲ್‌ ಅವರು ಈ ದೇಶವನ್ನು ಮುನ್ನಡೆಸುವ ದಿನ ಪಿಒಕೆ ವಿಮೋಚನೆಗೊಂಡು ಭಾರತದ ಭಾಗವಾಗುತ್ತದೆ. ಇದು ಸಂಭವಿಸುತ್ತದೆ ಎಂದು ನಾನು ಸಂಪೂರ್ಣವಾಗಿ ನಂಬುತ್ತೇನೆ ಎಂದು ಅವರು ಒತ್ತಿ ಹೇಳಿದ್ದಾರೆ.

    ಹೈದರಾಬಾದಿನ ನಿಜಾಮ್‌ಪೇಟೆಯಲ್ಲಿ ನಡೆದ ಕಾಂಗ್ರೆಸ್‌ನ ‘ಜೈ ಹಿಂದ್ ಯಾತ್ರೆ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರು ಪಾಕಿಸ್ತಾನದ ವಿರುದ್ಧದ ಮಿಲಿಟರಿ ಕಾರ್ಯಾಚರಣೆ ಸಮಯದಲ್ಲಿ ಮೋದಿ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ್ದರು. ಕದನ ವಿರಾಮ ಘೋಷಿಸುವ ಮೊದಲು ಸರ್ವಪಕ್ಷ ಸಭೆಯನ್ನು ಏಕೆ ಕರೆಯಲಿಲ್ಲ? ದಾಳಿಗೆ ಮೊದಲು ಒಂದು ಸಭೆ ನಡೆಸಲಾಗಿತ್ತು. ಅವುಗಳನ್ನು ಕೊನೆಗೊಳಿಸುವ ಮೊದಲು ಏಕೆ ಕರೆಯಲಿಲ್ಲ? ಎಂದು ರೆಡ್ಡಿ ಪ್ರಶ್ನಿಸಿದ್ದರು. ಅಲ್ಲದೇ ರಾಹುಲ್‌ ಗಾಂಧಿ ಪ್ರಧಾನಿಯಾದರೆ ಪಾಕ್‌ ಆಕ್ರಮಿತ ಕಾಶ್ಮೀರ ಭಾರತದ ಭಾಗ ಆಗಲಿದೆ ಎಂದಿದ್ದರು. ಇದರ ಬೆನ್ನಲ್ಲೇ ತಿವಾರಿಯವರು ಹೇಳಿಕೆ ನೀಡಿದ್ದಾರೆ.

  • ಸೇನಾ ಮುಖ್ಯಸ್ಥರಿಗೆ ಧೀಕ್ಷೆ ನೀಡಿ ಪಿಒಕೆ ಗುರುದಕ್ಷಿಣೆಯಾಗಿ ಕೇಳಿದ ಸ್ವಾಮೀಜಿ

    ಸೇನಾ ಮುಖ್ಯಸ್ಥರಿಗೆ ಧೀಕ್ಷೆ ನೀಡಿ ಪಿಒಕೆ ಗುರುದಕ್ಷಿಣೆಯಾಗಿ ಕೇಳಿದ ಸ್ವಾಮೀಜಿ

    ಲಕ್ನೋ: ಪದ್ಮವಿಭೂಷಣ ಪುರಸ್ಕೃತ ರಾಮಭದ್ರಾಚಾರ್ಯ ಸ್ವಾಮೀಜಿಯವರು (Rambhadracharya Swamiji) ಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ (General Upendra Dwivedi) ಅವರಿಗೆ ದೀಕ್ಷೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ʻಗುರುದಕ್ಷಿಣೆ’ ರೂಪದಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು (PoK) ಕೊಡುವಂತೆ ಅವರು ಕೇಳಿದ್ದಾರೆ.

    ಜನರಲ್ ಉಪೇಂದ್ರ ದ್ವಿವೇದಿ ಮತ್ತು ಅವರ ಪತ್ನಿ ಸುನಿತಾ ದ್ವಿವೇದಿ ಬುಧವಾರ ಆಶ್ರಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಉಪೇಂದ್ರ ಅವರಿಗೆ ಅತ್ಯಂತ ಶಕ್ತಿಶಾಲಿ ಮತ್ತು ಪವಿತ್ರವಾದ ರಾಮಮಂತ್ರದ ದೀಕ್ಷೆ ನೀಡಲಾಯಿತು. ಈ ಮಂತ್ರವನ್ನು ಮಾತೆ ಸೀತೆಯಿಂದ ಹನುಮಂತ ಪಡೆದಿದ್ದ ಎಂದು ಸ್ವಾಮೀಜಿ ವಿವರಿಸಿದ್ದಾರೆ.

    ದೀಕ್ಷೆಯು ಹಿಂದೂ ಧರ್ಮದ ಒಂದು ಧಾರ್ಮಿಕ ಪ್ರಕ್ರಿಯೆ. ದೀಕ್ಷೆ ಕೊಡುವವರನ್ನು ಗುರುವಾಗಿಯೂ, ತೆಗೆದುಕೊಳ್ಳುವವರನ್ನು ಶಿಷ್ಯರನ್ನಾಗಿಯೂ ಪರಸ್ಪರರು ಸ್ವೀಕರಿಸುತ್ತಾರೆ. ದೀಕ್ಷೆ ಪಡೆದ ದ್ವಿವೇದಿ ಅವರು ಗುರುದಕ್ಷಿಣೆಯಾಗಿ ಏನನ್ನು ನೀಡಬೇಕು ಎಂದು ಕೇಳಿದರು. ಅದಕ್ಕೆ ಪಿಒಕೆಯನ್ನು ಗುರುದಕ್ಷಿಣೆಯಾಗಿ ಪಡೆಯಲು ಬಯಸುತ್ತೇನೆ ಎಂದು ಹೇಳಿದೆ ಎಂದಿದ್ದಾರೆ.

    ದ್ವಿವೇದಿಯವರಿಗೆ ದೀಕ್ಷೆ ನೀಡಿದ್ದಕ್ಕೆ ನನಗೆ ಹೆಮ್ಮೆಯಿದೆ. ದೇಶಕ್ಕೆ ಶಸ್ತ್ರದಷ್ಟೇ ಶಾಸ್ತ್ರ ಮತ್ತು ಸದಾಚಾರವೂ ಮುಖ್ಯ ಎಂದು ಅವರು ಹೇಳಿಕೊಂಡಿದ್ದಾರೆ.

  • ಪಿಒಕೆ ನಮ್ಮದೇ, ಅಲ್ಲಿನ ಜನ ಅವರಾಗಿಯೇ ಭಾರತಕ್ಕೆ ಬರುತ್ತಾರೆ: ರಾಜನಾಥ್ ಸಿಂಗ್

    ಪಿಒಕೆ ನಮ್ಮದೇ, ಅಲ್ಲಿನ ಜನ ಅವರಾಗಿಯೇ ಭಾರತಕ್ಕೆ ಬರುತ್ತಾರೆ: ರಾಜನಾಥ್ ಸಿಂಗ್

    – ಏಕಭಾರತ, ಶ್ರೇಷ್ಠ ಭಾರತವೇ ನಮ್ಮ ಗುರಿ

    ನವದೆಹಲಿ: ಪಾಕ್‌ ಆಕ್ರಮಿತ ಕಾಶ್ಮೀರ (PoK) ನಮ್ಮದು. ಅಲ್ಲಿನ ನಮ್ಮ ಸಹೋದರರು ಅವರಾಗಿಯೇ ಬಂದು ಭಾರತಕ್ಕೆ ಸೇರಿಕೊಳ್ಳುತ್ತಾರೆ ಎಂಬ ನಂಬಿಕೆ ನಮಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹೇಳಿದ್ದಾರೆ.

    ಭಾರತೀಯ ಕೈಗಾರಿಕಾ ಒಕ್ಕೂಟದ ವಾರ್ಷಿಕ ವ್ಯವಹಾರ ಶೃಂಗಸಭೆಯಲ್ಲಿ ಅವರು ಮಾತನಾಡಿದರು. ಈ ವೇಳೆ, ಪಾಕಿಸ್ತಾನದೊಂದಿಗಿನ (Pakistan) ಭವಿಷ್ಯದ ಮಾತುಕತೆಗಳು ಭಯೋತ್ಪಾದನೆ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ಮೇಲೆ ಮಾತ್ರ ಆಗಿರುತ್ತದೆ. ಇನ್ನೂ ಪಿಓಕೆ ಜನರು ಭೌಗೋಳಿಕವಾಗಿ ಮತ್ತು ರಾಜಕೀಯವಾಗಿ ಬೇರ್ಪಟ್ಟಿದ್ದರೂ, ಅವರು ಭಾರತದ ಭಾಗವಾಗಿದ್ದಾರೆ. ಅವರು ಒಂದು ದಿನ ಸ್ವಯಂಪ್ರೇರಣೆಯಿಂದ ಭಾರತದ ಮುಖ್ಯವಾಹಿನಿಗೆ ಮರಳಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಮಂಗಳೂರಲ್ಲಿ ಸಾಲು ಸಾಲು ಹತ್ಯೆ ಬೆನ್ನಲ್ಲೇ ಇಬ್ಬರು ಐಪಿಎಸ್‌ ಅಧಿಕಾರಿಗಳ ಎತ್ತಂಗಡಿ

    ಏಕ ಭಾರತ್ ಶ್ರೇಷ್ಠ ಭಾರತ್ ಎಂಬ ಸಂಕಲ್ಪಕ್ಕೆ ನಾವು ಬದ್ಧರಾಗಿದ್ದೇವೆ. ಪಿಒಜೆಕೆಯಲ್ಲಿನ ಬಹುತೇಕ ಜನ ಭಾರತದೊಂದಿಗೆ ಸೇರಲು ಬಯಸಿದ್ದಾರೆ. ಬೆರಳೆಣಿಕೆಯಷ್ಟು ಜನರು ಮಾತ್ರ ದಾರಿ ತಪ್ಪಿದ್ದಾರೆ. ಭಾರತ ಯಾವಾಗಲೂ ಪ್ರೀತಿ, ಏಕತೆ ಮತ್ತು ಸತ್ಯದ ಮಾರ್ಗವನ್ನು ಅನುಸರಿಸುತ್ತದೆ ಎಂದಿದ್ದಾರೆ.

    ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯ ವಿಚಾರವಾಗಿ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಉತ್ಪಾದಕ ಮತ್ತು ರಫ್ತುದಾರನಾಗಿ ಹೊರಹೊಮ್ಮಿದೆ. ನಮಗೆ ಈ ಸಾಮರ್ಥ್ಯ ಇಲ್ಲದೇ ಇದ್ದಿದ್ದರೆ, ಪಾಕ್‌ನಲ್ಲಿ ಅಡಗಿದ್ದ ಉಗ್ರರನ್ನು ಭಾರತೀಯ ಪಡೆಗಳು ಹತ್ತಿಕ್ಕಲು ಆಗುತ್ತಿರಲಿಲ್ಲ. ನಮ್ಮ ದೇಶ ಫೈಟರ್ ಜೆಟ್‌ಗಳು ಮತ್ತು ಕ್ಷಿಪಣಿ ವ್ಯವಸ್ಥೆಗಳನ್ನು ತಯಾರಿಸುವುದಲ್ಲದೆ, ನವ ಯುಗದ ಯುದ್ಧ ತಂತ್ರಜ್ಞಾನಕ್ಕೂ ತಯಾರಿ ನಡೆಸುತ್ತಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

    ಜಾಗತಿಕ ಅಸ್ಥಿರತೆ ಮತ್ತು ಆರ್ಥಿಕ ನಿಧಾನಗತಿಯ ಹೊರತಾಗಿಯೂ ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಉಳಿದಿದೆ ಮತ್ತು ಮೋದಿಯವರ ನಾಯಕತ್ವದಲ್ಲಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ಅವರು ಇದೇ ವೇಳೆ ನುಡಿದಿದ್ದಾರೆ. ಇದನ್ನೂ ಓದಿ: ದೆಹಲಿ ಸಿಎಂ ಆಗಿ 100 ದಿನ ಪೂರೈಸಿದ ರೇಖಾ ಗುಪ್ತಾ – ಇನ್ನೂ ಸಿಗದ ಅಧಿಕೃತ ನಿವಾಸ!