Tag: Poison food

  • ವಿಷಾಹಾರ ಸೇವಿಸಿ ಯೋಧನ ಇಬ್ಬರು ಮಕ್ಕಳು ಸಾವು, ಪತ್ನಿ ಅಸ್ವಸ್ಥ

    ವಿಷಾಹಾರ ಸೇವಿಸಿ ಯೋಧನ ಇಬ್ಬರು ಮಕ್ಕಳು ಸಾವು, ಪತ್ನಿ ಅಸ್ವಸ್ಥ

    ಬೆಳಗಾವಿ(ಚಿಕ್ಕೋಡಿ): ವಿಷಾಹಾರ ಸೇವಿಸಿ ಭಾರತೀಯ ಸೇನೆಯ ಯೋಧರೊಬ್ಬರ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಪತ್ನಿ ತೀವ್ರ ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ರಾಯಭಾಗದ ಚಿಂಚಲಿ ಪಟ್ಟಣದಲ್ಲಿ ನಡೆದಿದೆ.

    ಚಿಂಚಲಿ ಪಟ್ಟಣದ ಯೋಧ ಹನುಮಂತ ಕುಂಬಾರ ಅವರ ಮಕ್ಕಳಾದ ಐಶ್ವರ್ಯ(4) ಮತ್ತು ಜಯಶ್ರೀ(6) ವಿಷಾಹಾರ ಸೇವಿಸಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಪತ್ನಿ ಕವಿತಾ ಅಸ್ವಸ್ಥಗೊಂಡಿದ್ದಾರೆ. ಗುವಾಹಟಿಯಲ್ಲಿ ಹನುಮಂತ ಕುಂಬಾರ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದು, ಊರಿನಲ್ಲಿ ಪತ್ನಿ ಕವಿತ ಹಾಗೂ ಇಬ್ಬರು ಮಕ್ಕಳು ವಾಸವಾಗಿದ್ದರು. ಆದಾಯಕ್ಕಾಗಿ ಕಾಳಿನ ವ್ಯಾಪಾರ ಮಾಡುತ್ತಿದ್ದರು. ಆದರೆ ಮಂಗಳವಾರ ರಾತ್ರಿ ವ್ಯಾಪಾರಕ್ಕೆ ತಂದಿಟ್ಟಿದ್ದ ಕಾಳಿಗೆ ಕ್ರಿಮಿಕೀಟಗಳು ಬರಬಾರದೆಂದು ಅದರ ಸುತ್ತ ಕ್ರೀಮಿನಾಶಕ ಹೊಡೆಯುತ್ತಿದ್ದ ವೇಳೆ ಅದರ ಅಂಶ ಗಾಳಿಗೆ ಮಕ್ಕಳು ಹಾಗೂ ತಾಯಿ ಬಾಯಿಗೆ ಸೇರಿತ್ತು ಎನ್ನಲಾಗಿದೆ.

    ಆದರೆ ಈ ಬಗ್ಗೆ ಅರಿವಿಲ್ಲದೆ ರಾತ್ರಿ ತಾಯಿ ಹಾಗೂ ಮಕ್ಕಳಿಬ್ಬರೂ ಊಟ ಮಾಡಿ, ಕೇಕ್ ತಿಂದು ಮಲಗಿದ್ದಾರೆ. ಬೆಳಗಾಗುವಷ್ಟರಲ್ಲಿ ಮಕ್ಕಳಿಬ್ಬರು ಸಾವನ್ನಪ್ಪಿದ್ದು, ತಾಯಿ ಅಸ್ವಸ್ಥಗೊಂಡಿದ್ದಾರೆ. ಈ ಬಗ್ಗೆ ತಿಳಿದು ಅಕ್ಕಪಕ್ಕದ ಮನೆಯವರು ತಕ್ಷಣ ತಾಯಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಆದರೆ ಈ ಸಾವಿನ ಸುತ್ತ ಹಲವು ಶಂಕೆಗಳು ವ್ಯಕ್ತವಾಗುತ್ತಿದೆ.

  • 44 ಗಂಟೆ ತಡವಾಗಿ ಬಂದ್ರು – ನಾ ಬಂದು ಏನ್ಮಾಡಬೇಕಿತ್ತೆಂದು ಆರೋಗ್ಯ ಸಚಿವರ ಉಡಾಫೆ

    44 ಗಂಟೆ ತಡವಾಗಿ ಬಂದ್ರು – ನಾ ಬಂದು ಏನ್ಮಾಡಬೇಕಿತ್ತೆಂದು ಆರೋಗ್ಯ ಸಚಿವರ ಉಡಾಫೆ

    – ಪ್ರಸಾದ ವಿಷ ವಿಚಾರ ಗೊತ್ತಾಗಿದ್ದೇ ನಿನ್ನೆ ಸಂಜೆಯಂತೆ!
    – ಆರೋಗ್ಯ ಸಚಿವರಿಗೇ ಮಾಹಿತಿ ಕೊರತೆಯ ಅನಾರೋಗ್ಯ!
    – ಸಿಎಂ ಬಂದಿರುವಾಗ ನಾ ಬಂದು ಇನ್ನೇನಾಗಬೇಕಿದೆ?

    ಮೈಸೂರು: ಕೇಳ್ರಪ್ಪೋ ಕೇಳಿ…., ಸುಳ್ವಾಡಿ ಗ್ರಾಮದಲ್ಲಿ ಮಾರಮ್ಮ ದೇಗುಲದ ವಿಷ ಪ್ರಸಾದ ಸೇವನೆ ವಿಷಯ ನಮ್ಮ ಘನತೆವತ್ತ ಆರೋಗ್ಯ ಸಚಿವ ಶಿವಾನಂದ ಪಾಟೀಲರಿಗೆ ಗೊತ್ತಾಗಿದ್ದೇ ನಿನ್ನೆ ಸಂಜೆಯಂತೆ. ಶುಕ್ರವಾರ ಮಧ್ಯಾಹ್ನ ನಡೆದ ಘಟನೆ ಆರೋಗ್ಯ ಸಚಿವ ಶಿವಾನಂದ ಪಾಟೀಲರ ಗಮನಕ್ಕೆ ಬಂದಿದ್ದು ನಿನ್ನೆ ಸಂಜೆ 4 ಗಂಟೆಗಂತೆ. ಈ ಮೂಲಕ ಸಚಿವರು ರಾಜ್ಯವೇ ಬೆಚ್ಚಿಬಿದ್ದ ಪ್ರಕರಣ ತಮ್ಮ ಗಮನಕ್ಕೆ ತಡವಾಗಿ ಬಂತು ಎಂದು ಅಜ್ಞಾನದ ಪ್ರದರ್ಶನ ಮಾಡಿದ್ದಾರೆ. ಜೊತೆಗೆ ನಾನು ಬಂದು ಏನು ಮಾಡೋದಿತ್ತು ಎಂಬ ಉಡಾಫೆಯನ್ನೂ ಪ್ರದರ್ಶಿಸಿದ್ದಾರೆ.

    ಇಂದು ಬೆಳಗ್ಗೆ ಮೈಸೂರಿಗೆ ಬಂದ ಸಚಿವರು ಮಾಧ್ಯಮಗಳ ಜೊತೆ ಮಾತನಾಡುತ್ತಾ, 44 ಗಂಟೆ ತಡವಾಗಿ ಬಂದಿದ್ದಕ್ಕೆ ತಮ್ಮನ್ನು ತಾವೇ ಸಮರ್ಥಿಸಿಕೊಂಡರು. 13 ಜನರ ಸಾವಿನ ಪ್ರಕರಣದ ಬಗ್ಗೆ ಸಚಿವರ ಅಜ್ಞಾನ ಎಷ್ಟಿತ್ತೆಂದರೆ, ನನಗೆ ವಿಷಯ ಗೊತ್ತಾಗಿದ್ದೇ ನಿನ್ನೆ ಸಂಜೆ 4 ಗಂಟೆಗೆ. ನಾನಿರೋದು ವಿಜಯಪುರದಲ್ಲಿ. ಅಲ್ಲಿಂದ ಇಲ್ಲಿಗೆ ಬರೋಕೆ ಟೈಂ ಆಗುತ್ತೆ. ಮುಖ್ಯಮಂತ್ರಿಗಳೇ ಬಂದಿದ್ದಾರೆ ತಾನೇ…? ನಾ ಬಂದು ಇನ್ನೇನು ಆಗಬೇಕಿದೆ. ನನಗಿಂತ ದೊಡ್ಡವರೇ ಬಂದಿದ್ದರಲ್ಲ ಬಿಡಿ ಎಂದು ರಾಜ್ಯಕ್ಕೆ ರಾಜ್ಯವೇ ಮರುಗಿದ ಪ್ರಕರಣಕ್ಕೆ ಉಢಾಫೆ ಉತ್ತರ ನೀಡಿದರು.

    ಮಾರಮ್ಮ ದೇವಿಯ ಪ್ರಸಾದದಲ್ಲಿ ವಿಷ ಸೇರಿತ್ತು ಎಂಬುದನ್ನು ಖಚಿತ ಮಾಡಿಕೊಳ್ಳುವ ವಿಚಾರದಲ್ಲಿ ವಿಳಂಬವಾಯಿತು. ಹೀಗಾಗಿ ಅಸ್ವಸ್ಥರಿಗೆ ಚಿಕಿತ್ಸೆ ನೀಡಲು ಮೈಸೂರಿಗೆ ಸ್ಥಳಾಂತರ ಮಾಡುವಾಗ ತಡವಾಗಿದ್ದು ಸತ್ಯ ಎಂದು ಒಪ್ಪಿಕೊಂಡರು. ಕೆ.ಆರ್. ಆಸ್ಪತ್ರೆಗೆ ಪುಟ್ಟರಂಗಶೆಟ್ಟಿ, ಸಂಸದ ಧೃವನಾರಾಯಣ್ ಜೊತೆ ಭೇಟಿ ನೀಡಿದ ಆರೋಗ್ಯ ಸಚಿವರಾದ ಶಿವಾನಂದ್ ಪಾಟೀಲ್, ಅಪೋಲೋ ಆಸ್ಪತ್ರೆಯಲ್ಲಿ 6 ಮಂದಿ ಪರಿಸ್ಥಿತಿ ಗಂಭೀರವಾಗಿದೆ ಎಂದರು.

    ಅಜ್ಞಾನ ದರ್ಶನದ ನಡುವೆಯೂ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡ ಸಚಿವರು, ನಾನು ಬಂದ ಮೇಲೆ ಹಲವು ವಿಚಾರಗಳನ್ನು ಸರಿಪಡಿಸಿದ್ದೇನೆ. 400 ಅಂಬ್ಯುಲೆನ್ಸ್ ಖರೀದಿ ಮಾಡಿದ್ದೇವೆ. 360 ವೈದ್ಯರನ್ನ ನೇಮಿಸಿಕೊಂಡಿದ್ದೇವೆ. ಇನ್ನೂ 1000 ಹುದ್ದೆ ಕೊರತೆ ಇದ್ದು, ಅವೆಲ್ಲವನ್ನು ತುಂಬುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ.

    ಇಡೀ ರಾಜ್ಯವೇ ಮಾರಮ್ಮ ದೇವಿಯ ಪ್ರಸಾದಕ್ಕೆ ವಿಷ ಹಾಕಿದ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದರೂ ಅವರ ಗಮನಕ್ಕೆ ಬಂದಿರಲಿಲ್ಲ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದಕ್ಕೆ ಸಚಿವರೇ ಉತ್ತರ ನೀಡಬೇಕು. ಘಟನೆಯ ತೀವ್ರತೆ ಅರಿತು ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಲು ಚೆನ್ನೈಗೆ ತೆರಳಿದ್ದ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ನೇರವಾಗಿ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಅಧಿಕಾರಿಗಳ ಸಭೆ ನಡೆಸಿದ್ದ ಸಿಎಂ ಕುಮಾರಸ್ವಾಮಿ ಅವರು ಅಲ್ಲಿಂದಲೇ ನೇರವಾಗಿ ವಿಶೇಷ ವಿಮಾನದ ಮೂಲಕ ಮೈಸೂರಿಗೆ ಧಾವಿಸಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದವರ ಆರೋಗ್ಯ ವಿಚಾರಿಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಧರ್ಮಸೇನ, ಸಚಿವ ಜಿ.ಟಿ.ದೇವೇಗೌಡ, ಸಂಸದ ಧೃವನಾರಾಯಣ, ಪ್ರತಾಪ್ ಸಿಂಹ ಸೇರಿದಂತೆ ಸ್ಥಳೀಯ ಶಾಸಕರೆಲ್ಲಾ ಆಸ್ಪತ್ರೆಗೆ ಆಗಮಿಸಿ ಎಲ್ಲರ ಯೋಗ ಕ್ಷೇಮ ವಿಚಾರಿಸಿದ್ದರು.

    ಆದರೆ ಸರ್ಕಾರದ ಆರೋಗ್ಯ ಇಲಾಖೆಯನ್ನು ಮುನ್ನಡೆಸಬೇಕಾದ ಶಿವಾನಂದ ಪಾಟೀಲರು ನನಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸಿದ್ದು ಮಾತ್ರ ವಿಪರ್ಯಾಸ. 44 ಗಂಟೆ ತಡವಾಗಿ ಬಂದರೂ ತಾನು ಮಾಡಿದ್ದೇ ಸರಿ ಎಂದ ಸಚಿವ ಶಿವಾನಂದ ಪಾಟೀಲರ ಉಡಾಫೆ ಉತ್ತರಕ್ಕೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಸಿವು ತಾಳಲಾಗದೇ ಮನೆಯಂಗಳದಲ್ಲಿ ಎದ್ದು ಬಿದ್ದು ಒದ್ದಾಡಿ ಚಿರತೆ ಸಾವು: ವಿಡಿಯೋ ನೋಡಿ

    ಹಸಿವು ತಾಳಲಾಗದೇ ಮನೆಯಂಗಳದಲ್ಲಿ ಎದ್ದು ಬಿದ್ದು ಒದ್ದಾಡಿ ಚಿರತೆ ಸಾವು: ವಿಡಿಯೋ ನೋಡಿ

    ಉಡುಪಿ: ಹೆಣ್ಣು ಚಿರತೆಯೊಂದು ಮನೆಯಂಗಳದಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಎರ್ಲಪ್ಪಾಡಿಯಲ್ಲಿ ನಡೆದಿದೆ. ಈ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ.

    ತಾಲೂಕಿನ ಎರ್ಲಪ್ಪಾಡಿ ಗ್ರಾಮದ ಕಾಂತರಗೋಡಿಯ ವಿಲಿಎಂ ಎಂಬವರ ಮನೆಯ ಅಂಗಳಕ್ಕೆ ದೊಡ್ಡ ಗಾತ್ರದ ಹೆಣ್ಣು ಚಿರತೆಯೊಂದು ಏಕಾಏಕಿ ಬಂದಿದೆ. ಆದರೆ ಚಿರತೆಗೆ ಇರಬೇಕಾದ ಘರ್ಜನೆ ಮಾತ್ರ ಮನೆಗೆ ಬಂದ ಚಿರತೆಗೆ ಇರಲಿಲ್ಲ. ಬದಲಾಗಿ ಚಿರತೆ ತಲೆ ಸುತ್ತು ಬಂದವರಂತೆ ಬೀಳುತ್ತಿತ್ತು. ಮತ್ತೆ ಏಳಲು ಪ್ರಯತ್ನ ಮಾಡಿ ಮತ್ತೆ ಮತ್ತೆ ಬೀಳುತ್ತಿತ್ತು. ಸುಮಾರು 10 ರಿಂದ 15 ನಿಮಿಷಗಳ ಕಾಲ ಎಲ್ಲರ ಕಣ್ಣಮುಂದೆಯೇ ಒದ್ದಾಡಿ, ಕೊನೆಗೆ ಸತ್ತುಹೋಗಿದೆ.

    ಕೂಡಲೇ ವಿಲಿಯಂ ಅವರು ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಬರುಷ್ಟರಲ್ಲಿ ಚಿರತೆ ಸಾವನ್ನಪ್ಪಿದೆ. ಅರಣ್ಯ ಇಲಾಖೆ ಚಿರತೆಯ ಮೃತದೇಹವನ್ನು ಪರೀಕ್ಷೆ ಮಾಡಿದ್ದು, ಚಿರತೆ ಹೊಟ್ಟೆಯಲ್ಲಿ ಹುಲ್ಲು ಕಂಡುಬಂದಿದೆ. ತೀವ್ರ ಹಸಿವಿನಿಂದ ಚಿರತೆ ಬಳಲುತ್ತಿದ್ದು, ಹಸಿವು ತಾಳಲಾರದೆ ಹುಲ್ಲನ್ನು ತಿಂದಿರಬಹುದು. ಜೊತೆಗೆ ಹಸಿವು ಜೋರಾಗಿ ಸತ್ತಿರಬಹುದು ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

    ಇನ್ನೂ ಕಾರ್ಕಳ ತಾಲೂಕಿನ ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮತ್ತೊಂದು ಗಂಡು ಚಿರತೆಯ ಮೃತದೇಹ ಪತ್ತೆಯಾಗಿದೆ. ಎರಡು ಚಿರತೆಗಳು ಒಟ್ಟೊಟ್ಟಿಗೆ ಸತ್ತಿರುವುದರಿಂದ ವಿಷಾಹಾರವನ್ನು ತಿಂದಿರಬಹುದು ಎಂಬ ಶಂಕೆಯಿದೆ. ಅಂತಿಮ ಮರಣೋತ್ತರ ವರದಿ ಬಂದ ಮೇಲೆ ಚಿರತೆಗಳ ಸಾವಿಗೆ ನಿಖರ ಕಾರಣ ತಿಳಿಯಬಹುದು ಎಂದು ಅರಣ್ಯಾಧಿಕಾರಿಗಳ ಹೇಳಿದ್ದಾರೆ.

    ಬೆಳೆ ನಾಶ ಮಾಡಲು ಬರುವ ಕಾಡು ಹಂದಿಗಳಿಗೆ ಹಳ್ಳಿಕಡೆ ವಿಷಾಹಾರ ಇಡಲಾಗುತ್ತದೆ. ಈ ಎರಡು ಚಿರತೆಗಳು ವಿಷಾಹಾರ ಸೇವನೆ ಮಾಡಿರಬಹುದು ಎಂಬ ಸಂಶಯ ಇದೆ. ವಿಷಾಹಾರ ತಿಂದು ಎರ್ಲಪ್ಪಾಡಿವರೆಗೆ ಚಿರತೆ ಬಂದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಎರಡು ಜೊತೆಗೆ ಓಡಾಡುತ್ತಿದ್ದ ಚಿರತೆಗಳು ಒಂದೇ ಕಡೆ ವಿಷ ತಿಂದು ಸತ್ತಿರಬಹುದು ಎಂದು ಹೇಳಲಾಗುತ್ತಿದೆ.

    https://www.youtube.com/watch?v=kNIncCNQCuU