Tag: poilice

  • ಧಗ ಧಗ ಉರಿಯುವ ಬೆಂಕಿ ಮೈ ಆವರಿಸಿದ್ದರೂ ರಸ್ತೆಗೆ ಓಡಿದ ದಂಪತಿ

    ಧಗ ಧಗ ಉರಿಯುವ ಬೆಂಕಿ ಮೈ ಆವರಿಸಿದ್ದರೂ ರಸ್ತೆಗೆ ಓಡಿದ ದಂಪತಿ

    ಕೊಲ್ಕತ್ತಾ: ದಂಪತಿ ಮೈಗೆ ಬೆಂಕಿ ಹೊತ್ತಿಕೊಂಡಿದ್ದರೂ, ರಸ್ತೆ ತುಂಬಾ ಚಿರುತ್ತಾ ಓಡಿರುವ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ.

    ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ದಂಪತಿ ಅಪಾರ್ಟ್‍ಮೆಂಟ್‍ನಿಂದ ಬೀದಿಗೆ ಓಡಿ ಬಂದಿದ್ದಾರೆ. ರಸ್ತೆಯಲ್ಲಿ ಕಿರುಚಾಡುತ್ತಿದ್ದ ಆ ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಪತ್ನಿ ಅಡುಗೆ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಆಕಸ್ಮಿಕವಾಗಿ ಆಕೆಗೆ ಬೆಂಕಿ ಹೊತ್ತಿಕೊಂಡಿದೆ. ಆಕೆಯನ್ನ ಗಂಡ ರಕ್ಷಿಸಲು ಹೋದಾಗ, ಆತನಿಗೆ ಕೂಡ ಬೆಂಕಿ ಆವರಿಸಿದೆ ಎನ್ನಲಾಗಿದೆ. ಹೀಗಾಗಿ, ತಮ್ಮ ಪ್ರಾಣ ಉಳಿಸಿಕೊಳ್ಳಲು ಕಟ್ಟಡದಿಂದ ಹೊರ ಬಂದಿದ್ದು, ಯಾರಾದರೂ ಬೆಂಕಿ ನಂದಿಸಲಿ ಎಂದು ಕಿರುಚಾಡಿದ್ದಾರೆ. ಆದರೆ, ಆ ದಿನ ನಡೆದಿದ್ದು ಏನೆಂಬ ಬಗ್ಗೆ ದಂಪತಿಗೆ ಪ್ರಜ್ಞೆ ಬಂದ ನಂತರ ಗೊತ್ತಾಗಲಿದೆ. ಇದನ್ನೂ ಓದಿ:  190 ವರ್ಷದ ಆಮೆ- ಗಿನ್ನಿಸ್ ಪುಟಕ್ಕೆ ಸೇರ್ಪಡೆ

    ಸ್ಥಳೀಯರು ಮತ್ತು ನೆರೆಹೊರೆಯವರು ತಕ್ಷಣ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು ಮತ್ತು ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಪೊಲೀಸರು ಈ ಕುರಿತಾಗಿ ಪ್ರಕರಣವನ್ನು ದಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಾನು ಅವನ ಬಗ್ಗೆ ಯೋಚಿಸಿದ್ರೆ, ಅವನಿಗೆ ನನ್ನ ಬಗ್ಗೆಯೇ ಚಿಂತೆ ಜಾಸ್ತಿ: ನಾಗಾರ್ಜುನ್

  • ಕೆಲ್ಸ ಹುಡುಕಿಕೊಂಡು ಮಂಗ್ಳೂರಿನಿಂದ ಬೆಂಗ್ಳೂರಿಗೆ ಬಂದಿದ್ದ ಯುವತಿಗೆ ಲೈಂಗಿಕ ಕಿರುಕುಳ: ಆರೋಪಿ ಅರೆಸ್ಟ್

    ಕೆಲ್ಸ ಹುಡುಕಿಕೊಂಡು ಮಂಗ್ಳೂರಿನಿಂದ ಬೆಂಗ್ಳೂರಿಗೆ ಬಂದಿದ್ದ ಯುವತಿಗೆ ಲೈಂಗಿಕ ಕಿರುಕುಳ: ಆರೋಪಿ ಅರೆಸ್ಟ್

    ಬೆಂಗಳೂರು: ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ವ್ಯಕ್ತಿಯನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

    ಹಬೀಬ್ ಗಣಿ ಬಂಧಿತ ಆರೋಪಿ. ಮೊಬೈಲ್ ಕರೆಯನ್ನು ಆಧಾರಿಸಿ ಪೊಲೀಸರು ಈಗ ಆರೋಪಿಯನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಮಂಗಳೂರು ಮೂಲದ ಯುವತಿಯೊಬ್ಬರು ಬಿಕಾಂ ಮುಗಿಸಿ ಬ್ಯಾಂಕ್ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದರು. ಕಳೆದ ಸೋಮವಾರ ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ ಹುದ್ದೆಗಾಗಿ ಖಾಸಗಿ ಬ್ಯಾಂಕ್‍ವೊಂದರಲ್ಲಿ ಸಂದರ್ಶನವನ್ನು ಅಟೆಂಡ್ ಮಾಡಿದ್ದರು. ನಾಲ್ಕು ಸುತ್ತಿನ ಸಂದರ್ಶನದಲ್ಲಿ ಪಾಸ್ ಆಗಿದ್ದ ಯುವತಿ ಐದನೇ ಸುತ್ತು ಮುಗಿದ ಬಳಿಕ ಫಲಿತಾಂಶಕ್ಕಾಗಿ ಕಾಯುತ್ತಿದ್ದರು.

    ಈ ವೇಳೆ ಯುವತಿಗೆ ಅಪರಿಚಿತ ನಂಬರ್‍ನಿಂದ ಕರೆ ಬಂದಿತ್ತು. ನಾನು ಬ್ಯಾಂಕ್‍ನ ಹೆಚ್‍ಆರ್, ನನ್ನ ಹಸರು ರೋಹನ್ ಎಂದು ಪರಿಚಯಿಸಿಕೊಂಡ ವ್ಯಕ್ತಿ ಏನೋ ಮುಖ್ಯವಾದ ವಿಷಯ ಚರ್ಚಿಸಬೇಕು ಎಂದು ಹೇಳಿ ಯುವತಿಯನ್ನು ಬ್ಯಾಂಕಿನಿಂದ ಹೊಬರುವಂತೆ ಹೇಳಿದ್ದ. ಯುವತಿ ಹೊರಹೋದ ನಂತರ ಆ ವ್ಯಕ್ತಿ, ಅಂತಿಮ ಸುತ್ತಿನ ಇಂಟರ್ವ್ಯೂನಲ್ಲಿ ಫೇಲ್ ಆಗಿರುವುದಾಗಿ ಯುವತಿಗೆ ತಿಳಿಸಿದ್ದ.

    ಫೇಲ್ ಆಗಿದ್ದರೂ ನೀವು ಕೆಲಸಕ್ಕೆ ಸೇರಬಹುದು ಎಂದು ಯುವತಿಗೆ ಅಮಿಷವೊಡ್ಡಿದ್ದ. ಈ ಬಗ್ಗೆ ಚರ್ಚೆ ಮಾಡುವುದಿದೆ ಮನೆಗೆ ಬನ್ನಿ ಎಂದು ಕರೆದಿದ್ದ. ಇದಕ್ಕೆ ಯುವತಿ ನಿರಾಕರಿಸಿದ್ದಕ್ಕೆ ಇಲ್ಲಿ ತುಂಬಾ ಟ್ರಾಫಿಕ್ ಇದೆ. ನಿಮ್ಮ ಧ್ವನಿ ಕೇಳಿಸುತ್ತಿಲ್ಲ. ಕಾರು ಹತ್ತಿ ಎಂದು ಕರೆದಿದ್ದ. ಆದ್ರೆ ಕಾರು ಹತ್ತಲು ಯುವತಿ ನಿರಾಕರಿಸಿದ್ದು, ಈ ವೇಳೆ ಆತ ನಡುರಸ್ತೆಯಲ್ಲೇ ಯವತಿಯನ್ನ ಎಳೆದು ಕಾರಿನಲ್ಲಿ ಕೂರಿಸಲು ಮುಂದಾದ. ಆತನಿಂದ ತಪ್ಪಿಸಿಕೊಂಡು ಯುವತಿ ಕಚೇರಿಯೊಳಗೆ ತೆರಳಿದ್ರು. ಕಚೇರಿಯಲ್ಲಿ ವಿಚಾರಿಸಿದಾಗ ಆ ಹೆಸರಿನ ವ್ಯಕ್ತಿ ಕೆಲಸದಲ್ಲಿ ಇಲ್ಲ ಎಂಬುದು ಪತ್ತೆಯಾಗಿತ್ತು. ಈ ಬಗ್ಗೆ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.