Tag: Poha Cake

  • ಅವಲಕ್ಕಿಯಿಂದ ಮಾಡಿ ನಮ್ಕೀನ್ ಕೇಕ್

    ಅವಲಕ್ಕಿಯಿಂದ ಮಾಡಿ ನಮ್ಕೀನ್ ಕೇಕ್

    ವಲಕ್ಕಿ ದೇಸೀ ಆಹಾರ. ಇದಕ್ಕೆ ಪಾಶ್ಚಿಮಾತ್ಯ ಟ್ವಿಸ್ಟ್ ನೀಡಿ ಕೇಕ್ ಮಾಡೋದು ಹೇಗೆ ಗೊತ್ತಾ? ಈ ಕೇಕ್ ಸಿಹಿಯಾಗಿಲ್ಲ. ಬದಲಾಗಿ ಲಘುವಾಗಿ ಖಾರ ಹಾಗೂ ಉಪ್ಪೆನಿಸುವುದರಿಂದ ಇದನ್ನು ನೀವು ನಮ್ಕೀನ್ ಕೇಕ್ ಎಂತಲೂ ಕರೆಯಬಹುದು. ಅವಲಕ್ಕಿಯಿಂದ ಕೇಕ್ ಹೇಗೆ ಮಾಡೋದು ಎಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಅವಲಕ್ಕಿ – 350 ಗ್ರಾಂ
    ಬ್ರೆಡ್ – 6 ಸ್ಲೈಸ್
    ಅಕ್ಕಿ ಹಿಟ್ಟು – 400 ಗ್ರಾಂ
    ಹಸಿರು ಮೆಣಸಿನಕಾಯಿ – 3
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಅರ್ಧ ಟೀಸ್ಪೂನ್
    ರೆಡ್ ಚಿಲ್ಲಿ ಫ್ಲೇಕ್ಸ್ – 1 ಟೀಸ್ಪೂನ್
    ಈರುಳ್ಳಿ – 1 ಕಪ್
    ಚಾಟ್ ಮಸಾಲಾ – 1 ಟೀಸ್ಪೂನ್
    ಮೊಸರು – 5 ಟೀಸ್ಪೂನ್ ಇದನ್ನೂ ಓದಿ: ಮುಂಬೈ ಸ್ಟ್ರೀಟ್ ಸೈಡ್ ಸ್ಟೈಲ್‌ನಲ್ಲಿ ಗೆಣಸು ಮನೆಯಲ್ಲೇ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಪೋಹಾವನ್ನು ನೀರಿನಲ್ಲಿ ನೆನೆಸಿ, ತೊಳೆದು, ಒಂದು ಬಟ್ಟಲಿಗೆ ವರ್ಗಾಯಿಸಿ.
    * ಬ್ರೆಡ್ ಸ್ಲೈಸ್‌ಗಳನ್ನು ತೆಗೆದುಕೊಂಡು, ಅದರ ಬದಿಗಳನ್ನು ಕತ್ತರಿಸಿ.
    * ನಂತರ ಅದನ್ನು ನೀರಿನಲ್ಲಿ ನೆನೆಸಿ, ಅವಲಕ್ಕಿಯನ್ನು ಬಟ್ಟಲಿಗೆ ತುಂಡುಗಳಾಗಿ ಮಾಡಿ ಸೇರಿಸಿ.
    * ಅದಕ್ಕೆ ಅಕ್ಕಿ ಹಿಟ್ಟು, ಹಸಿರು ಮೆಣಸಿನಕಾಯಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ರೆಡ್ ಚಿಲ್ಲಿ ಫ್ಲೇಕ್ಸ್, ಹೆಚ್ಚಿದ ಈರುಳ್ಳಿ, ಚಾಟ್ ಮಸಾಲಾ, ಜೀರಿಗೆ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು ಹಾಗೂ ಮೊಸರು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ಒಂದು ಟ್ರೇ ತೆಗೆದುಕೊಂಡು ಅದರಲ್ಲಿ ಸ್ವಲ್ಪ ಎಣ್ಣೆಯನ್ನು ಗ್ರೀಸ್ ಮಾಡಿ. ಈಗ ಮಿಶ್ರಣವನ್ನು ಅದರಲ್ಲಿ ಸುರಿದು ರೆಫ್ರಿಜರೇಟರ್‌ನಲ್ಲಿ 10 ನಿಮಿಷ ಸೆಟ್ ಆಗಲು ಬಿಡಿ.
    * ಈಗ ಅದನ್ನು ಚೌಕಾಕಾರವಾಗಿ ಕತ್ತರಿಸಿಕೊಳ್ಳಿ.
    * ಈಗ ಶ್ಯಾಲೋ ಫ್ರೈಗೆ ಪ್ಯಾನ್ ಅನ್ನು ತೆಗೆದುಕೊಂಡು ಅದರಲ್ಲಿ ಅವಲಕ್ಕಿ ಕ್ಯೂಬ್‌ಗಳನ್ನು ಹಾಕಿ ಬೇಯಿಸಿಕೊಳ್ಳಿ.
    * ಸುತ್ತಲೂ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಅದನ್ನು ಟಿಶ್ಯೂ ಪೇಪರ್ ಮೇಲೆ ಹರಡಿ.
    * ಇದೀಗ ಅವಲಕ್ಕಿಯಿಂದ ಮಾಡಿದ ನಮ್ಕೀನ್ ಕೇಕ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಈರುಳ್ಳಿ, ಮೊಟ್ಟೆಯ ಸಿಂಪಲ್ ಪಕೋಡಾ ರೆಸಿಪಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]