Tag: Pogaru Film

  • ‘ಪೊಗರು’ ಚಿತ್ರದಲ್ಲಿ ಧ್ರುವ ಜೊತೆ ನಟಿಸಿದ್ದ ಬಾಡಿ ಬಿಲ್ಡರ್ ಜೋ ಲಿಂಡ್ನರ್

    ‘ಪೊಗರು’ ಚಿತ್ರದಲ್ಲಿ ಧ್ರುವ ಜೊತೆ ನಟಿಸಿದ್ದ ಬಾಡಿ ಬಿಲ್ಡರ್ ಜೋ ಲಿಂಡ್ನರ್

    ಬಾಡಿ ಬಿಲ್ಡಿಂಗ್‌ನಲ್ಲಿ ವಿಶ್ವ ವಿಖ್ಯಾತಿ ಪಡೆದಿದ್ದ ಜೋ ಲಿಂಡ್ನರ್ (Jo Lindner) ಅವರು ವಿಧಿವಶರಾಗಿದ್ದಾರೆ. ಫಿಟ್‌ನೆಸ್ & ಬಾಡಿ ಬಿಲ್ಡಿಂಗ್ ಕಡೆ ಅತಿಯಾದ ಕಾಳಜಿ ನೀಡುವವರಿಗೆ ಈ ಮೂಲಕ ಶಾಕಿಂಗ್ ಸುದ್ದಿ ಸಿಕ್ಕಿದೆ. 30 ವರ್ಷದ ವಯಸ್ಸಿನ ಜೋ ಲಿಂಡ್ನರ್ ಏಕಾಏಕಿ ಮರಣ ಹೊಂದಿರೋದು ಹಲವು ಅನುಮಾನಕ್ಕೆ ಕಾರಣ ಆಗಿದೆ. ಇದನ್ನೂ ಓದಿ:ಆಂಧ್ರದಲ್ಲಿ ಮದ್ಯಪ್ರಿಯರಿಗೆ ನಟ ಪವನ್ ಕಲ್ಯಾಣ್ ಬಂಪರ್ ಆಫರ್

    ‘ಪೊಗರು’ (Pogaru Kannada Film) ಸಿನಿಮಾದಲ್ಲಿ ಜೋ ಲಿಂಡ್ನರ್ (Jo Lindner) ಅವರು ನಟಿಸಿದ್ದರು. ಈ ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ಧ್ರುವ ಸರ್ಜಾ ಜೊತೆ ಅಖಾಡದಲ್ಲಿ ಗುದ್ದಾಡಿದ್ದರು. ಧ್ರುವ ಜೊತೆ ಮಸ್ತ್ ಆಗಿ ಸೆಣಸಾಡಿದ್ದರು. ಪೊಗರು ಧ್ರುವ ಸರ್ಜಾ (Dhruva Sarja) ಜೊತೆ ಫೈಟ್ ಮಾಡಿದ್ದ ಜೋ ಲಿಂಡ್ನರ್ ಇದೀಗ ನಿಧನರಾಗಿದ್ದಾರೆ.

    ಬಾಡಿ ಬಿಲ್ಡಿಂಗ್, ಫಿಟ್‌ನೆಸ್ ಕಡೆ ಹೆಚ್ಚಿನ ಗಮನ ನೀಡುತ್ತಿದ್ದ ಜೋ ಲಿಂಡ್ನರ್ ಅವರಿಗೆ ಇನ್ಸ್ಟಾಗ್ರಾಂ ಖಾತೆಯಲ್ಲಿ 87 ಲಕ್ಷಕ್ಕೂ ಹೆಚ್ಚಿನ ಫಾಲೋವರ್ಸ್ ಇದ್ದು, ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ರು. ಯೂಟ್ಯೂಬರ್ ಆಗಿ ಕೂಡ ಗುರುತಿಸಿಕೊಂಡಿದ್ದರು. ಇದೀಗ ಜೋ ಲಿಂಡ್ನರ್ ನಿಧನಕ್ಕೆ ಆಪ್ತರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

    ನಂದಕಿಶೋರ್‌ ನಿರ್ದೇಶನದ ‘ಪೊಗರು’ ಸಿನಿಮಾ 2021ರಲ್ಲಿ ತೆರೆಕಂಡಿತ್ತು. ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ (Rashmika Mandanna) ಜೋಡಿಯ ಪೊಗರು ಸಿನಿಮಾ ಚಿತ್ರಮಂದಿರದಲ್ಲಿ ಮೋಡಿ ಮಾಡಿತ್ತು. ಇನ್ನೂ ರಶ್ಮಿಕಾ ನಟನೆಯ ಕನ್ನಡದ ಕಡೆಯ ಸಿನಿಮಾ ಇದಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪೊಗರು ಸಿನಿಮಾ ಪ್ರದರ್ಶನ ನಿಲ್ಲಿಸಿ: ಶೋಭಾ ಕರಂದ್ಲಾಜೆ

    ಪೊಗರು ಸಿನಿಮಾ ಪ್ರದರ್ಶನ ನಿಲ್ಲಿಸಿ: ಶೋಭಾ ಕರಂದ್ಲಾಜೆ

    ಬೆಂಗಳೂರು: ಬ್ರಾಹ್ಮಣ ಸಮುದಾಯಕ್ಕೆ ನೋವುಂಟು ಮಾಡಿರುವುದರಿಂದಾಗಿ ಪೊಗರು ಸಿನಿಮಾ ಪ್ರದರ್ಶನವನ್ನು ನಿಲ್ಲಿಸಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಚಿತ್ರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾಡಿರುವ ಅವರು, ಕೆಲವರಿಗೆ ಯಾವುದೋ ಸಮಾಜಕ್ಕೆ ಅಪಮಾನ ಮಾಡುವ ಮೂಲಕ ತಮಗೆ ಪ್ರಚಾರ ಮತ್ತು ಹಣ ಸಂಪಾದನೆ ಮಾಡಬಹುದು ಎಂದು ಅಂದು ಕೊಂಡಿದ್ದಾರೆ. ಇದು ವಿಕೃತ ಮಾನಸಿಕತೆ. ಸಿನಿಮಾ ನಿರ್ಮಾಣ ಮಾಡುವಾಗಲೇ ಈ ರೀತಿಯ ದೃಶ್ಯಗಳಿಂದ ಹೆಚ್ಚು ಪ್ರಚಾರ ಪಡೆಯಬಹುದು ಎಂಬುದು ಅವರ ಮನಸ್ಸಿನಲ್ಲಿದೆ ಇದನ್ನು ಮೊದಲು ಹೊಗಲಾಡಿಸಬೇಕು. ಚಿತ್ರದ ಕೆಲವು ವಿವಾದಾತ್ಮಕ ದೃಶ್ಯಗಳನ್ನು ಮೊದಲು ಸೆನ್ಸಾರ್ ಮಾಡಿ ನಂತರ ಸಿನಿಮಾ ಪ್ರದರ್ಶನ ಮಾಡಲಿ ಎಂದು ಗುಡುಗಿದ್ದಾರೆ.

    https://twitter.com/ShobhaBJP/status/1364159215695130624

    ಹಿಂದೂ ಧರ್ಮದಲ್ಲಿ ಯಾವುದೇ ಜಾತಿಯನ್ನು ಟೀಕಿಸಿದರೂ ನಾವು ಏನೂ ಮಾಡುವುದಿಲ್ಲ. ಹಿಂದೂಗಳು ಶಾಂತಿ ಪ್ರಿಯರು ಎಂಬ ಭಾವನೆ ಇದೆ ಇದು ನಮ್ಮ ದೌರ್ಬಲ್ಯವಲ್ಲ. ವಿಕೃತ ಮನಸ್ಸಿನವರು ಕೂಡಲೇ ಹಿಂದೂ ಧರ್ಮಕ್ಕೆ ಮಾಡಿರುವ ಅಪಮಾನದಿಂದ ಎಚ್ಚೆತ್ತುಕೊಳ್ಳಬೇಕು ಎಂದು ಎಚ್ಚರಿಕೆ ಕೊಟ್ಟರು.

    ಧರ್ಮದ ವಿಚಾರ ಬಂದಾಗ ರಾಜಕೀಯ ಬಿಟ್ಟು ಮಾತನಾಡುತ್ತಿದ್ದೇನೆ. ಹಿಂದೂ ಧರ್ಮವನ್ನು ಹೊರತು ಪಡಿಸಿ ಬೇರೆ ಧರ್ಮದ ಕುರಿತು ಸಿನಿಮಾಗಳಲ್ಲಿ ಅಪಮಾನ ಮಾಡಿದ್ದರು ನಾನು ಪ್ರಶ್ನಿಸುತ್ತಿದ್ದೆ ಎಂದು ಹೇಳಿದರು.

  • ರಾಜ್ಯಾದ್ಯಂತ ಪೊಗರು ಅಬ್ಬರ – 1 ಸಾವಿರ ಥಿಯೇಟರ್‌ಗಳಲ್ಲಿ ಬಿಡುಗಡೆ

    ರಾಜ್ಯಾದ್ಯಂತ ಪೊಗರು ಅಬ್ಬರ – 1 ಸಾವಿರ ಥಿಯೇಟರ್‌ಗಳಲ್ಲಿ ಬಿಡುಗಡೆ

    – ಕನ್ನಡ, ತೆಲುಗು, ತಮಿಳಲ್ಲಿ ಪ್ರದರ್ಶನ
    – ಬೆಳಗ್ಗೆ 5 ಗಂಟೆಯಿಂದಲೇ ಶೋ

    ಬೆಂಗಳೂರು: ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಪೊಗರು ಇಂದು ರಿಲೀಸ್‌ ಆಗಿದೆ. ಏಕಕಾಲದಲ್ಲಿ ಕನ್ನಡ, ತಮಿಳು, ತೆಲುಗಿನಲ್ಲಿ ರಿಲೀಸ್ ಆಗಿದ್ದು ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಪೊಗರು ಸಿನಿಮಾ ಬೆಂಗಳೂರಿನಲ್ಲಿ ಬೆಳ್ಳಗ್ಗೆಯೇ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಬರೋಬ್ಬರಿ ಮೂರು ವರ್ಷಗಳ ನಂತರ ಸಿಲ್ವರ್ ಸ್ಕ್ರೀನ್ ಮೇಲೆ ಧ್ರುವ ಕಾಣಿಸಿಕೊಳ್ಳುತ್ತಿದ್ದಾರೆ.

    ಒಟ್ಟು 1 ಸಾವಿರಕ್ಕೂ ಹೆಚ್ಚು ಚಿತ್ರ ಮಂದಿರದಲ್ಲಿ ತೆರೆ ಕಾಣಲಿರುವ ಪೊಗರು ಈಗಾಗಲೇ ಬೆಂಗಳೂರಿನ 33 ಚಿತ್ರಮಂದಿರಗಳಲ್ಲಿ ಬೆಳಗ್ಗೆ 6:45ಕ್ಕೆ ಶೋ ಆರಂಭವಾಗಿದೆ. ಸಿದ್ದೇಶ್ವರ, ಶ್ರೀನಿವಾಸ, ಲಕ್ಷ್ಮಿ, ಪ್ರಸನ್ನ ಥಿಯೇಟರ್ ನಲ್ಲಿ ಮುಂಜಾನೆ ಶೋ ಆರಂಭವಾಗಿದೆ. ಮೊದಲ ಶೋಗೆ ಥಿಯೇಟರ್‌ಗೆ ಬಂದ ಅಭಿಮಾನಿಗಳು ಧ್ರುವ ಸರ್ಜಾ ಕಟೌಟ್‍ಗೆ ಹೂ, ಹಾಲಿನ ಅಭಿಷೇಕ ಮಾಡಿದ್ದಾರೆ.

    ಆ್ಯಕ್ಷನ್ ಜೊತೆಗೆ ಫ್ಯಾಮಿಲಿ‌ ಸೆಂಟಿಮೆಂಟ್ ಕಥೆಯನ್ನು ಹೊಂದಿರುವ ಪೊಗರು ಸಿನಿಮಾ 300 ಚಿತ್ರಮಂದಿರಗಳಲ್ಲಿ ಬೆಳಗ್ಗೆ ಶೋ ಆರಂಭವಾಗಲಿದೆ.

     

    ಇದೇ ಮೊದಲ ಬಾರಿಗೆ ಧ್ರುವ ಸರ್ಜಾ ಜೊತೆ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ನಂದಕಿಶೋರ್ ನಿರ್ದೇಶನದ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್, ತಾರಾ ಅನುರಾಧ, ರವಿಶಂಕರ್, ಪವಿತ್ರ ಲೋಕೇಶ್, ಡಾಲಿ ಧನಂಜಯ, ಚಿಕ್ಕಣ್ಣ, ದಿವಂಗತ ಬುಲೆಟ್ ಪ್ರಕಾಶ್ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ.

  • ಕಾಲಿವುಡ್‍ಗೆ ಬಹದ್ಧೂರ್ ಹುಡುಗನ ಅದ್ಧೂರಿ ಎಂಟ್ರಿ

    ಕಾಲಿವುಡ್‍ಗೆ ಬಹದ್ಧೂರ್ ಹುಡುಗನ ಅದ್ಧೂರಿ ಎಂಟ್ರಿ

    ಬೆಂಗಳೂರು: ನಟ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಕಿಕ್ಕೇರಿಸುತ್ತಿದ್ದು, ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹೊಸ ವರ್ಷದ ಆರಂಭದಲ್ಲಿಯೇ ಚಿತ್ರ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿದೆ. ಇದೇ ಸಂದರ್ಭದಲ್ಲಿ ಧೃವಾ ಸರ್ಜಾ ತಮಿಳಿಗೆ ಕಾಲಿಡಲಿದ್ದಾರೆ ಎಂಬ ಸುದ್ದಿ ಸಹ ವೈರಲ್ ಆಗಿದೆ.

    ಅರೇ ಇದೇನಪ್ಪಾ ಇದ್ದಕ್ಕಿದ್ದಂತೆ ಧೃವ ಸರ್ಜಾ ತಮಿಳು ಇಂಡಸ್ಟ್ರಿಗೆ ಕಾಲಿಟ್ರಾ, ಯಾವ ಸಿನಿಮಾ ಎಂದು ಯೋಚಿಸಬೇಡಿ. ಸ್ಯಾಂಡಲ್‍ವುಡ್‍ನಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿರುವ ಪೊಗರು ಸಿನಿಮಾ ತಮಿಳಿಗೆ ಡಬ್ ಆಗುತ್ತಿದೆ. ಈ ಮೂಲಕ ತಮಿಳಿನಲ್ಲೂ ಧೃವ ಸರ್ಜಾ ಘರ್ಜಿಸಲಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ತಿಳಿಸಿರುವ ಧೃವ, ತಮಿಳು ಶೀರ್ಷಿಕೆಯನ್ನು ಬಹಿರಂಗಪಡಿಸಿದ್ದಾರೆ.

    ತಮಿಳಿನಲ್ಲಿ ಸೆಮ್ಮಾ ತಿಮಿರು ಎಂದು ಟೈಟಲ್ ಇಡಲಾಗಿದ್ದು, ಇದರಿಂದ ಅಭಿಮಾನಿಗಳ ಖುಷಿ ಇಮ್ಮಡಿಯಾಗಿದೆ. ಈಗಾಗಲೇ ತೆಲುಗಿಗೆ ಡಬ್ ಆಗುತ್ತಿದ್ದು, ಹಿಂದಿ ಡಬ್ಬಿಂಗ್ ಹಕ್ಕುಗಳು ಸಹ 7.2 ಕೋಟಿ.ರೂ.ಗೆ ಮಾರಾಟ ಆಗಿವೆ. ಹೀಗಾಗಿ ಬಹುಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ ಎಂದೇ ಹೇಳಬಹುದು. ಇದರಿಂದಾಗಿ ಧೃವ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

    ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಇಷ್ಟೊತ್ತಿಗೆ ತೆರೆ ಕಾಣಬೇಕಿತ್ತು. ಆದರೆ ಕೊರೊನಾ ಹಿನ್ನೆಲೆ ಸಿನಿಮಾ ಕೆಲಸಗಳು ಸ್ಥಗಿತಗೊಂಡಿದ್ದರಿಂದ ಬಿಡುಗಡೆ ತಡವಾಗಿದೆ. ನಂದಕಿಶೋರ್ ನಿರ್ದೇಶನ ಸಿನಿಮಾಗಿದ್ದು, ಧೃವ ಸರ್ಜಾಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಈಗಾಗಲೇ ತೆಲುಗು, ತಮಿಳು ಬಳಿಕ ಇದೀಗ ಬಾಲಿವುಡ್‍ಗೂ ಕಾಲಿಟ್ಟಿದ್ದಾರೆ. ಹೀಗಾಗಿ ಸಿನಿಮಾ ಯಶಸ್ಸು ಕಾಣಲಿದೆ ಎಂಬುದು ಸಿನಿಮಾ ತಂಡದ ವಿಶ್ವಾಸ ಹೀಗಾಗಿ ತಮಿಳು, ತೆಲುಗಿನಲ್ಲೂ ಸಿನಿಮಾ ಡಬ್ ಮಾಡಲಾಗುತ್ತಿದೆ.

    ಹಾಡುಗಳ ಮೂಲಕ ಸಖತ್ ಸದ್ದು ಮಾಡಿರುವ ಪೊಗರು ಸಿನಿಮಾ ಹೇಗಿರಲಿದೆ ಎಂಬುದು ಅಭಿಮಾನಿಗಳ ಕುತೂಹಲವಾಗಿದೆ. ಸಿನಿಮಾದ ಕರಾಬು ಹಾಡು ಸ್ಯಾಂಡಲ್‍ವುಡ್‍ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಚಿತ್ರಕ್ಕಾಗಿ ಧೃವ ಸರ್ಜಾ ಸಹ ಭಾರೀ ವರ್ಕೌಟ್ ಮಾಡಿದ್ದು, ಚಿತ್ರ ಹೇಗೆ ಮೂಡಿ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.