Tag: Poetry

  • ಪಠ್ಯದಲ್ಲಿರುವ ತಮ್ಮ ಕವಿತೆ ವಾಪಸ್ ಪಡೆದ ಮತ್ತೊಬ್ಬ ಸಾಹಿತಿ

    ಪಠ್ಯದಲ್ಲಿರುವ ತಮ್ಮ ಕವಿತೆ ವಾಪಸ್ ಪಡೆದ ಮತ್ತೊಬ್ಬ ಸಾಹಿತಿ

    ಬೆಳಗಾವಿ: ಪಠ್ಯ ಪುಸ್ತಕದ ಪರಿಷ್ಕರಣೆಗೆ ಸಂಬಂಧಿಸಿ ಇತ್ತೀಚೆಗೆ ಭಾರೀ ಚರ್ಚೆಯಾಗುತ್ತಿದೆ. ಈ ಹಿನ್ನೆಲೆ ಕನ್ನಡದ ಹಲವು ಸಾಹಿತಿಗಳು, ಕವಿಗಳು ತಮ್ಮ ವಿಷಯಗಳನ್ನು ಪಠ್ಯದಿಂದ ತೆಗೆದು ಹಾಕುವಂತೆ  ಸರ್ಕಾರಕ್ಕೆ ಪತ್ರ ಬರೆಯುತ್ತಿದ್ದಾರೆ. ಈಗ ಬೆಳಗಾವಿ ಕವಿ, ಲೇಖಕ ಹಾಗೂ ಹಿರಿಯ ಪತ್ರಕರ್ತ ಡಾ.ಸರಜೂ ಕಾಟ್ಕರ್ ಅವರು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಪತ್ರ ಬರೆದಿದ್ದಾರೆ.

    9ನೇ ತರಗತಿ ಕನ್ನಡ ತೃತೀಯ ಭಾಷಾ ವಿಷಯದ ಪುಸ್ತಕದಲ್ಲಿ ಅಳವಡಿಸಲಾಗಿರುವ ‘ಶಬ್ದಗಳು’ ಕವಿತೆಗೆ ನೀಡಿರುವ ಒಪ್ಪಿಗೆಯನ್ನು ಹಿಂಪಡೆಯುವುದಾಗಿ ಸರಜೂ ಕಾಟ್ಕರ್ ಅವರು ಬಿ.ಸಿ.ನಾಗೇಶ್ ಅವರಿಗೆ ಪತ್ರ ಬರೆಯುವ ಮೂಲಕ ತಿಳಿಸಿದ್ದಾರೆ.

    TEXTBOOK

    ಪತ್ರದಲ್ಲಿ ಏನಿದೆ?
    ಈಗಿನ ಪಠ್ಯ ಪುಸ್ತಕ ಪುನರ್ ರಚನಾ ಸಮಿತಿ ಮತ್ತು ಅದರ ನಿಲುವುಗಳ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ವಿದ್ಯಾರ್ಥಿಗಳಲ್ಲಿ, ಶೈಕ್ಷಣಿಕ ಕ್ಷೇತ್ರದಲ್ಲಿ ಪಾಲಕರಲ್ಲಿ ಹಾಗೂ ಇಡೀ ಜನ ಸಮೂಹದಲ್ಲಿ ಒಂದು ರೀತಿಯ ಗೊಂದಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಪಠ್ಯ ಪುಸ್ತಕದ ಪರಿಷ್ಕರಣೆ- ಅನುಮತಿ ಹಿಂತೆಗೆದುಕೊಂಡ ಮತ್ತಿಬ್ಬರು ಸಾಹಿತಿಗಳು

    ಈ ಹಿಂದೆ 9ನೇ ತರಗತಿಯ ಕನ್ನಡ ತೃತೀಯ ಭಾಷೆ ಪಠ್ಯಪುಸ್ತಕದಲ್ಲಿ ನಾನು ರಚಿಸಿದ ‘ಶಬ್ದಗಳು’ ಎಂಬ ಕವಿತೆಯನ್ನು ಅಳವಡಿಸಿಕೊಳ್ಳಲಾಗಿತ್ತು. ನನ್ನ ನಂಬಿಕೆ ಮತ್ತು ಇಷ್ಟು ವರ್ಷಗಳ ಕಾಲದ ಬದ್ಧತೆಯ ಕಾರಣಕ್ಕಾಗಿ ನನ್ನ ಕವಿತೆಗೆ ಈ ಹಿಂದೆ ಕೊಟ್ಟಿರುವ ಒಪ್ಪಿಗೆಯನ್ನು ಹಿಂದೆ ಪಡೆಯುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.

  • ಇಂಡಿಯಾ ಬುಕ್ ಆಫ್ ರೆಕಾರ್ಡ್‍ನಲ್ಲಿ ಕಿರಿಯ ಕವಯಿತ್ರಿ ದಾಖಲೆಗೆ ಅಮನ ಸೇರ್ಪಡೆ

    ಇಂಡಿಯಾ ಬುಕ್ ಆಫ್ ರೆಕಾರ್ಡ್‍ನಲ್ಲಿ ಕಿರಿಯ ಕವಯಿತ್ರಿ ದಾಖಲೆಗೆ ಅಮನ ಸೇರ್ಪಡೆ

    – ಏಷ್ಯಾ ಬುಕ್ ಆಫ್ ರೆಕಾರ್ಡ್‍ನಲ್ಲಿ ಗ್ರ್ಯಾಂಡ್ ಮಾಸ್ಟರ್

    ಬೆಂಗಳೂರು: ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್‍ನಲ್ಲಿ  ಕಿರಿಯ ಕವಯಿತ್ರಿ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್‍ನಲ್ಲಿ  ಗ್ರ್ಯಾಂಡ್ ಮಾಸ್ಟರ್  ಆಗಿ ಕುಮಾರಿ ಅಮನ ದಾಖಲೆ ಬರೆದಿದ್ದಾಳೆ. ಈಕೆ ಪ್ರಸ್ತುತ ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ಸ್ ಸ್ಕೂಲ್ ನಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದಾಳೆ.

    2008ರ ಜೂನ್ 20ರಂದು ಜನಿಸಿರುವ ಅಮನಾಳಿಗೆ ಚಿಕ್ಕ ವಯಸ್ಸಿನಿಂದಲೇ ಕವಿತೆಗಳನ್ನು ಬರೆಯುತ್ತಿರುವುದಕ್ಕೆ ಗ್ರ್ಯಾಂಡ್ ಮಾಸ್ಟರ್ ಎಂದು ಹೆಸರಿಸಲಾಗಿದೆ. ಈ ಮೂಲಕ ಅತ್ಯಂತ ಕಿರಿಯ ಕವಯಿತ್ರಿ ಎಂಬ ದಾಖಲೆಯನ್ನು ಅಮನ ಮಾಡಿದ್ದಾಳೆ. ಈಕೆಯ 61 ಕವನಗಳನ್ನು ಪುಸ್ತಕದಲ್ಲಿ ಪ್ರಕಟಿಸಲಾಗಿದೆ ‘ಎಕೋಸ್ ಆಫ್ ಸೋಲ್ಫುಲ್ ಪದ್ಯಗಳು’ (ISBN: 978-93-90490-90-5) ಸಪ್ನಾ ಬುಕ್ ಹೌಸ್ (ಪಿ) ಲಿಮಿಟೆಡ್‍ರವರಿಂದ ನವೆಂಬರ್ 2020ಕ್ಕೆ ಪ್ರಕಟಿಸಿದ್ದು, ಆಗ ಅವಳ ವಯಸ್ಸು 12 ವರ್ಷ. 2021ರ ಜುಲೈ 26 ರಂದು ಇದನ್ನು ಇಂಡಿಯಾ ಬುಕ್ ಆಫ್ ರೆಕಾ​ರ್ಡ್ಸ್ ನಲ್ಲಿ ಕಿರಿಯ ಕವಿಯತ್ರಿ ಎಂದು ದೃಢಪಡಿಸಲಾಗಿದೆ.

    ಇಲ್ಲಿಯವರೆಗೆ ಅವಳು 275ಕ್ಕೂ ಹೆಚ್ಚು ಕವಿತೆಗಳನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಬರೆದಿದ್ದಾಳೆ. ಆಕೆಯ 2ನೇ ಪುಸ್ತಕ ಪ್ರಕಟವಾಗುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಒಟ್ಟಿನಲ್ಲಿ ಕರ್ನಾಟಕದ ವಿದ್ಯಾರ್ಥಿನಿಯೊಬ್ಬಳು ಭಾರತದ ಬುಕ್ ಆಫ್ ರೆಕಾರ್ಡ್‍ನಲ್ಲಿ ಪ್ರವೇಶ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದನ್ನೂ ಓದಿ: ಲೇಡಿಸ್ ಬೀಚ್‍ನಲ್ಲಿ ಮೂರು ದಿನದಿಂದ ಆಹಾರವಿಲ್ಲದೆ ಸಿಲುಕಿಕೊಂಡಿದ್ದ ಮೀನುಗಾರನ ರಕ್ಷಣೆ

  • ಹೆಣ್ತನದ ಘನತೆ, ಇವಳ ಬಗ್ಗೆ ಬರೆಯಲು ಅಕ್ಷರಗಳ ಕೊರತೆ – ವೈಷ್ಣವಿಯನ್ನು ಹಾಡಿ ಹೊಗಳಿದ ಚಕ್ರವರ್ತಿ

    ಹೆಣ್ತನದ ಘನತೆ, ಇವಳ ಬಗ್ಗೆ ಬರೆಯಲು ಅಕ್ಷರಗಳ ಕೊರತೆ – ವೈಷ್ಣವಿಯನ್ನು ಹಾಡಿ ಹೊಗಳಿದ ಚಕ್ರವರ್ತಿ

    ಬಿಗ್‍ಬಾಸ್ ಮನೆಯಲ್ಲಿ ಎಲ್ಲಾ ಸದಸ್ಯರಿಗಿಂತ ಬಹಳ ಡಿಫರೆಂಟ್ ಸ್ಪರ್ಧಿ ಎಂದರೆ ವೈಷ್ಣವಿ ಗೌಡ. ರೇಷ್ಮೆ ಸೀರೆಯುಟ್ಟು ಸಾಂಪ್ರದಾಯಿಕವಾಗಿ ದೊಡ್ಮನೆಗೆ ಎಂಟ್ರಿ ಕೊಟ್ಟ ವೈಷ್ಣವಿ ಮನೆಯ ಎಲ್ಲಾ ಸ್ಪರ್ಧಿಗಳಿಗೆ ಹೋಲಿಸಿದರೆ, ಬಹಳ ಸಾಫ್ಟ್ ಹಾಗೂ ಕಾಮ್ ಆಗಿರುತ್ತಾರೆ. ಏನೇ ಮಾತನಾಡಬೇಕಾದರೂ 10 ಬಾರಿ ಯೋಚಿಸಿ ಮಾತನಾಡುತ್ತಾರೆ. ತಮ್ಮ ನಯಾ, ನಾಜುಕಿನ ನಡುವಳಿಕೆಯ ಮೂಲಕವೇ ಕನ್ನಡಿಗರ ಮನಗೆದ್ದಿರುವ ವೈಷ್ಣವಿ ದೊಡ್ಮನೆಯ ಎಲ್ಲಾ ಸ್ಪರ್ಧಿಗಳ ಉತ್ತಮ ಬಾಂಧವ್ಯ ಹಾಗೂ ಪ್ರೀತಿಯನ್ನು ಹೊಂದಿದ್ದಾರೆ.

    ಸದ್ಯ ಚಕ್ರವರ್ತಿ ಚಂದ್ರಚೂಡ್‍ರವರು ವೈಷ್ಣವಿಯ ವ್ಯಕ್ತಿತ್ವ ಕುರಿತಂತೆ ಕವಿತೆಯೊಂದನ್ನು ಬರೆದಿದ್ದು, ಮನೆಯ ಸದಸ್ಯರ ಮುಂದೆ ವೈಷ್ಣವಿಯನ್ನು ಹಾಡಿಹೊಗಳಿದ್ದಾರೆ. ಆನೆ ಮತ್ತು ಇರುವೆಯ ಕಥೆಯಂತವಳು, ನವಿಲು ಮತ್ತು ನಾಗರ ಹಾವು ಎರಡು ಒಟ್ಟಿಗೆ ಕುಣಿದಂತವಳು, ಒಳಗೆ ಕುದಿಯುವ ಕೆಂಡ, ಒಲಿದರೆ ಮಾತ್ರ ಅರಳುವ ಕೆಂಡ ಸಂಪಿಗೆ, ನೆನಪಿಸುತ್ತಾಳೆ ಹೆಣ್ಣು ನೇಸರನ ಧ್ಯಾನ, ಮಾತು ಆಡುತ್ತಾಳೆ ಹಾಗಾಗೇ ಬೋಧಿ ವೃಕ್ಷದ ಮೌನ. ಈ ಅರಮನೆಯ ಅನ್ನಪೂರ್ಣೆ, ಯಾರೆತ್ತ ಮಗಳೋ ಇವಳು ಶ್ವೇತ ವರ್ಣಿಕೆ, ಇವಳ ಮುಡಿಯಲ್ಲಿದೆ ಅನುಬಂಧದ ಗರಿ, ಇವಳು ಮನಸ್ಸಿಟ್ಟರೆ ಮಾತ್ರ ಆ ಸಂಬಂಧಕ್ಕೊಂದು ಗುರಿ, ಸನ್ನಿಧಿ ಎಂದರೆ ಓಡಾಡುವ ರೇಷ್ಮೆ ಸೀರೆ, ಸಮ್ಮತಿ ಇದ್ದರಷ್ಟೇ ಬಾನಂಗಳದಿಂದ ಜಾರುವ ಮಿನುಗು ತಾರೆ, ಇವಳಿನ್ನೂ ಧರಿಸಿಲ್ಲ ರುದ್ರಾಕ್ಷಿ, ಬಂಧವೊಂದು ಅನುಗಾಲದಿ ಕಾಯುತ್ತಿದೆ, ಅದುವೇ ಅಗ್ನಿ ಸಾಕ್ಷಿ. ನನ್ನ ಪಾಲಿಗಿದು ಹೆಣ್ಣುತನದ ಘನತೆ, ಎಂದೂ ಬತ್ತದಿರಲಿ ಇವಳ ಸಂಯಮದ ಒರತೆ, ಇವಳ ಬಗ್ಗೆ ಬರೆಯಲು ನನ್ನಂತವನಿಗೂ ಅಕ್ಷರಗಳ ಕೊರತೆ ಎಂದಿದ್ದಾರೆ.

    ವೈಷ್ಣವಿ ವ್ಯಕ್ತಿತ್ವವನ್ನು ಪದಗಳ ಮೂಲಕ ಚಕ್ರವರ್ತಿ ಬಣ್ಣಿಸಿದ್ದನ್ನು ಕೇಳಿ ಮನೆಯ ಎಲ್ಲಾ ಸ್ಪರ್ಧಿಗಳು, ವಾರೆವ್ಹಾ, ಸೂಪರ್, ಸಖತ್ ಆಗಿ ಬರೆದಿದ್ದೀರಾ ಎಂದು ಚಪ್ಪಾಳೆ ತಟ್ಟಿದ್ದಾರೆ. ಇದನ್ನೂ ಓದಿ:ಸುದೀಪ್ ಸರ್, ನೀವು ನನ್ನನ್ನು ಸ್ತ್ರೀ ನಿಂದಕನಂತೆ ಬಿಂಬಿಸಿದ್ದೀರಿ: ಚಕ್ರವರ್ತಿ ಬೇಸರ