Tag: Podcast

  • ನಾನು ಕೂಡ ಸಾಮಾನ್ಯ ಮನುಷ್ಯ, ದೇವರಲ್ಲ: ಪಾಡ್‌ಕಾಸ್ಟ್‌ನಲ್ಲಿ ಮೋದಿ ಮಾತು

    ನಾನು ಕೂಡ ಸಾಮಾನ್ಯ ಮನುಷ್ಯ, ದೇವರಲ್ಲ: ಪಾಡ್‌ಕಾಸ್ಟ್‌ನಲ್ಲಿ ಮೋದಿ ಮಾತು

    ನವದೆಹಲಿ: ತಪ್ಪುಗಳು ಆಗುತ್ತವೆ. ನಾನು ಕೂಡ ಕೆಲವು ತಪ್ಪುಗಳನ್ನು ಮಾಡಬಹುದು. ನಾನು ಕೂಡ ಮನುಷ್ಯನೇ, ದೇವರಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.

    ಝೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ (Nikhil Kamath) ಅವರ ಪೀಪಲ್ ಬೈ ಡಬ್ಲ್ಯೂಟಿಎಫ್ ಸರಣಿಯಲ್ಲಿ ಪಾಡ್‌ಕ್ಯಾಸ್ಟ್‌ಗೆ ಪದಾರ್ಪಣೆ ಮಾಡಿ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಇದನ್ನೂ ಓದಿ: ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗಳಿಗೆ ಬಾಂಬ್ ಬೆದರಿಕೆ – ವಿದ್ಯಾರ್ಥಿ ಅರೆಸ್ಟ್

    ಸರ್, ನನ್ನ ಹಿಂದಿ ಚೆನ್ನಾಗಿಲ್ಲದಿದ್ದರೆ ದಯವಿಟ್ಟು ಕ್ಷಮಿಸಿ. ನಾನು ದಕ್ಷಿಣ ಭಾರತೀಯ. ನಾನು ಹೆಚ್ಚಾಗಿ ಬೆಂಗಳೂರಿನಲ್ಲಿ ಬೆಳೆದೆ. ನನ್ನ ತಾಯಿಯ ನಗರ ಮೈಸೂರು. ಅಲ್ಲಿ ಜನರು ಹೆಚ್ಚಾಗಿ ಕನ್ನಡ ಮಾತನಾಡುತ್ತಾರೆ. ನನ್ನ ತಂದೆ ಮಂಗಳೂರು ಬಳಿ ಇದ್ದರು. ನಾನು ಶಾಲೆಯಲ್ಲಿ ಹಿಂದಿ ಕಲಿತಿದ್ದೇನೆ. ಆದರೆ, ನನಗೆ ಭಾಷೆಯಲ್ಲಿ ನಿರರ್ಗಳತೆ ಇಲ್ಲ ಎಂದು ಕಾಮತ್, ಪ್ರಧಾನಿ ಮೋದಿಗೆ ಆರಂಭದಲ್ಲಿ ಮನವಿ ಮಾಡಿಕೊಂಡರು. ಅದಕ್ಕೆ ಪ್ರತಿಕ್ರಿಯಿಸಿದ ಮೋದಿ, ತೊಂದರೆಯಿಲ್ಲ ಮ್ಯಾನೇಜ್‌ ಮಾಡಬಹುದು ಎಂದು ತಿಳಿಸಿದರು.

    ಎರಡು ಗಂಟೆಗಳ ಪಾಡ್‌ಕ್ಯಾಸ್ಟ್‌ನಲ್ಲಿ ಪ್ರಧಾನಿಯವರು ತಮ್ಮ ಬಾಲ್ಯ, ಶಿಕ್ಷಣ, ರಾಜಕೀಯ ಪ್ರವೇಶ, ಹಿನ್ನಡೆಗಳು, ಒತ್ತಡವನ್ನು ನಿಭಾಯಿಸುವುದು ಮತ್ತು ನೀತಿ ನಿರ್ವಹಣೆ ಸೇರಿದಂತೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ದೆಹಲಿಯಲ್ಲಿ ದಟ್ಟ ಮಂಜು – 100ಕ್ಕೂ ಅಧಿಕ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ

    ನಾನು ನನ್ನ ಕುಟುಂಬದ ಎಲ್ಲ ಸದಸ್ಯರ ಬಟ್ಟೆಗಳನ್ನು ಒಗೆಯುತ್ತಿದ್ದೆ. ಅದಕ್ಕಾಗಿಯೇ ನನಗೆ ಕೊಳಕ್ಕೆ ಹೋಗಲು ಅವಕಾಶ ಸಿಗುತ್ತಿತ್ತು ಎಂದು ತಮ್ಮ ಬಾಲ್ಯದ ಕುರಿತು ಮೋದಿ ಮಾತನಾಡಿದ್ದಾರೆ.

  • ನಟನೆ ಬಿಟ್ಟು ಹೊಸ ಕೆಲಸ ಒಪ್ಪಿಕೊಂಡ ಸಮಂತಾ

    ನಟನೆ ಬಿಟ್ಟು ಹೊಸ ಕೆಲಸ ಒಪ್ಪಿಕೊಂಡ ಸಮಂತಾ

    ಮೊನ್ನೆಯಷ್ಟೇ ಅಭಿಮಾನಿಗಳಿಗೆ ವಿಡಿಯೋ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದರು ನಟಿ ಸಮಂತಾ (Samantha). ಸದ್ಯದಲ್ಲೇ ಕೆಲಸಕ್ಕೆ ಮರಳುವುದಾಗಿ ಹೇಳಿದ್ದರು. ಯಾವ ಸಿನಿಮಾವನ್ನು ಸಮಂತಾ ಒಪ್ಪಿಕೊಂಡಿದ್ದಾರೆ ಎನ್ನುವ ಹುಡುಕಾಟ ಕೂಡ ಶುರುವಾಗಿತ್ತು. ಆದರೆ, ಸದ್ಯಕ್ಕೆ ಅವರು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಆದರೆ, ಹೊಸ ಕೆಲಸವನ್ನು (New Job) ಅವರು ಒಪ್ಪಿಕೊಂಡಿದ್ದು ಬಹಿರಂಗವಾಗಿದೆ.

    ಹಲವು ವರ್ಷಗಳಿಂದ ಅವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವಿಚಾರ ಗೊತ್ತೇ ಇದೆ. ಅನೇಕರು ನಾನಾ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ಸಮಾಧಾನ ನೀಡುವ ನಿಟ್ಟಿನಲ್ಲಿ ಪಾಡ್ ಕಾಸ್ಟ್ (Podcast) ಶುರು ಮಾಡಲಿದ್ದಾರಂತೆ ಸಮಸ್ಯೆ. ಆರೋಗ್ಯದ (Health) ಕುರಿತಂತೆ ಅದರಲ್ಲಿ ಮಾಹಿತಿಯನ್ನು ಅವರು ನೀಡಲಿದ್ದಾರೆ.

    ವಿವಾದ, ಅನಾರೋಗ್ಯ, ಯಶಸ್ಸು ಎಲ್ಲವೂ ಅನುಭವಿಸಿರುವ ಜೀವ ಸಮಂತಾ. ನಾಗಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಸಮಂತಾ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಎಲ್ಲಾ ವಿಚಾರಕ್ಕೂ ಸಮಂತಾ ಕಡೆಯೇ ಬೆಟ್ಟು ಮಾಡಿ ತೋರಿಸುತ್ತಿದ್ದರು. ಸಹವಾಸವೇ ಬೇಡ ಅಂತ ವೃತ್ತಿರಂಗದಲ್ಲಿ ಬ್ಯುಸಿಯಾದರು. ‘ಪುಷ್ಪ’ (Pushpa) ಚಿತ್ರದಲ್ಲಿ ಸೊಂಟ ಬಳುಕಿಸಿದ ಮೇಲೆ ಸಮಂತಾ ಲಕ್ ಬದಲಾಯ್ತು.

    ಆದರೆ ಯಶೋದ (Yashoda) ಮತ್ತು ಖುಷಿ (Kushi) ಸಿನಿಮಾ ಆದ್ಮೇಲೆ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿರಲಿಲ್ಲ. ಎರಡೂ ಹೀನಾಯವಾಗಿ ಸೋತ ಚಿತ್ರಗಳು. ಸೋಲಿನ ಹೊಡೆತಕ್ಕೆ ಅನಾರೋಗ್ಯದ ಆಘಾತ ಎರಡನ್ನೂ ಸಹಿಕೊಳ್ಳೋಕೆ ಸ್ಯಾಮ್‌ಗೆ 6 ತಿಂಗಳು ಹಿಡಿಯಿತು. ಇದೀಗ ಮತ್ತೆ ಕೆಲಸಕ್ಕೆ ಮರಳಿದ್ದಾರೆ.

     

    ಸದ್ಯ ಸಮಂತಾಗೆ ಟಾಲಿವುಡ್ ಮಾತ್ರವಲ್ಲ ಬಾಲಿವುಡ್‌ನಿಂದಲೂ ಬಂಪರ್ ಅವಕಾಶಗಳು ಅರಸಿ ಬರುತ್ತಿವೆ. ಹಾಗಾಗಿ ಸಮಂತಾ ಸಿನಿಮಾ ಮತ್ತು ಲುಕ್ ಹೇಗಿರಲಿದೆ ಎಂಬ ಚರ್ಚೆ ಕೂಡ ನಡೆದಿದೆ. ಹೊಸ ಕೆಲಸ ಅವರನ್ನು ಕೈ ಹಿಡಿಯಲಿ ಎನ್ನುತ್ತಿದ್ದಾರೆ ಸ್ಯಾಮ್ ಫ್ಯಾನ್ಸ್.