Tag: PNG

  • ಸಿಎನ್‍ಜಿ, ಪೈಪ್ಡ್ ಗ್ಯಾಸ್ ಬೆಲೆ ತಲಾ 3 ರೂ. ಏರಿಕೆ

    ಸಿಎನ್‍ಜಿ, ಪೈಪ್ಡ್ ಗ್ಯಾಸ್ ಬೆಲೆ ತಲಾ 3 ರೂ. ಏರಿಕೆ

    ನವದೆಹಲಿ: ವಾಹನಗಳಿಗೆ ಬಳಸುವ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‍ಜಿ) ಮತ್ತು ಕೊಳವೆ ಮೂಲಕ ಮನೆಗಳಿಗೆ ಪೂರೈಕೆಯಾಗುವ ಅಡುಗೆ ಅನಿಲ (ಪಿಎನ್‍ಜಿ) ದರ ಇದೀಗ ಮತ್ತಷ್ಟು ದುಬಾರಿಯಾಗಿದೆ. ಇಂದು ಪ್ರತಿ ಕೆ.ಜಿಗೆ ತಲಾ 3 ರೂ. ಏರಿಕೆ ಮಾಡಲಾಗಿದೆ.

     

    ವಿದ್ಯುತ್ ಉತ್ಪಾದನೆ, ರಸಗೊಬ್ಬರ ತಯಾರಿಕೆ ಹಾಗೂ ವಾಹನಗಳ ಸಂಚಾರಕ್ಕೆ ಸಿಎನ್‍ಜಿಯಾಗಿ ಪರಿವರ್ತಿಸಲಾಗುವ ನೈಸರ್ಗಿಕ ಅನಿಲ ದರವು 3 ರೂ. ಏರಿಕೆ ಕಂಡು ದೆಹಲಿಯಲ್ಲಿ ಕೆ.ಜಿಗೆ 78.61ಕ್ಕೆ ತಲುಪಿದೆ. ಈ ಮೂಲಕ 2021ರ ಮಾರ್ಚ್ ಬಳಿಕ 14ನೇ ಬಾರಿ ಸಿಎನ್‍ಜಿ ಗ್ಯಾಸ್ ದರ ಏರಿಕೆ ಕಂಡಂತಾಗಿದೆ. ಇದನ್ನೂ ಓದಿ: ‘ಆದಿ ಪುರುಷ್’ ಬೆನ್ನಿಗೆ ನಿಂತ ರಾಜ್ ಠಾಕ್ರೆ ಸೇನೆ: ನಿಜವಾದ ರಾವನನ್ನು ಬಿಜೆಪಿ ನೋಡಿದ್ಯಾ?

     

    ಸಿಎನ್‍ಜಿ ಜೊತೆ ಪಿಎನ್‍ಜಿ ದರ ಕೂಡ 3 ರೂ. ಏರಿಕೆ ಕಂಡು ದೆಹಲಿಯಲ್ಲಿ 53.59 ರೂ.ಗೆ ತಲುಪಿದೆ. ಈ ಮೂಲಕ 2021ರ ಆಗಸ್ಟ್ ಬಳಿಕ ಸತತ 10ನೇ ಬಾರಿ ಏರಿಕೆ ಕಂಡಂತಾಗಿದೆ. ಈ ಬಗ್ಗೆ ಚಿಲ್ಲರೆ ವ್ಯಾಪಾರ ಮಾಡುವ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (IGL) ಹೊಸ ದರವನ್ನು ಪ್ರಕಟಿಸಿದೆ. ಇದನ್ನೂ ಓದಿ: 20 ವರ್ಷಗಳ ಹಿಂದೆ ಮದರಸಾದಲ್ಲಿ ಹಿಂದೂಗಳು ಪೂಜೆ ಮಾಡಿದ ವೀಡಿಯೋ ವೈರಲ್

    Live Tv
    [brid partner=56869869 player=32851 video=960834 autoplay=true]

  • CNG, PNG ದರ ಮತ್ತಷ್ಟು ದುಬಾರಿ: ಎಲ್ಲಿ ಎಷ್ಟು ದರ..?

    CNG, PNG ದರ ಮತ್ತಷ್ಟು ದುಬಾರಿ: ಎಲ್ಲಿ ಎಷ್ಟು ದರ..?

    ನವದೆಹಲಿ: ಕಳೆದ 10 ದಿನಗಳಿಂದಲೂ ಪೆಟ್ರೋಲ್, ಡೀಸೆಲ್ ದರ ಸತತವಾಗಿ ಏರಿಕೆಯಾಗುತ್ತಿದೆ. ಇದರೊಂದಿಗೆ ಯುಗಾದಿ ಹಬ್ಬಕ್ಕೂ ಮುನ್ನವೇ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ 250 ರೂ.ನಷ್ಟು ಏರಿಕೆಯಾಗಿದೆ.

    ಇದೀಗ ಕಳೆದ ವಾರವಷ್ಟೇ ಏರಿಕೆಯಾಗಿದ್ದ ಸಿಎನ್‌ಜಿ (ವಾಹನಗಳಿಗೆ ಬಳಸುವ ಸಂಕುಚಿತ ನೈಸರ್ಗಿಕ ಅನಿಲ) ಮತ್ತು ಪಿಎನ್‌ಜಿ (ಕೊಳವೆ ಮೂಲಕ ಮನೆಗಳಿಗೆ ಪೂರೈಕೆಯಾಗುವ ಅಡುಗೆ ಅನಿಲ) ದರ ಇದೀಗ ಮತ್ತಷ್ಟು ದುಬಾರಿಯಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬೆನ್ನಲ್ಲೇ ಇಂಧನ ದರ ಏರಿಕೆಯ ಬಿಸಿ ಮತ್ತಷ್ಟು ತಟ್ಟಿದೆ. ಇದನ್ನೂ ಓದಿ: ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಆಯ್ತು ಈಗ ಸಿಎನ್‌ಜಿ, ಪಿಎನ್‌ಜಿ ದರದಲ್ಲೂ ಏರಿಕೆ 

    price

    ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಕಳೆದ ಎರಡು ವಾರಗಳಲ್ಲಿ 12ನೇ ಬಾರಿಗೆ ಭಾರತದಾದ್ಯಂತ ಇಂಧನ ಬೆಲೆಯನ್ನು ಹೆಚ್ಚಿಸಿವೆ. ಅಂತೆಯೇ ಸಿಎನ್‌ಜಿ ಹಾಗೂ ಪಿಎನ್‌ಜಿ ಅನಿಲ ದರವು 40 ಪೈಸೆ ಹೆಚ್ಚಳ ಕಂಡಿದೆ. ಇದನ್ನೂ ಓದಿ: ಏಷ್ಯಾದ ಅತೀ ದೊಡ್ಡ ಬಯೋ-ಸಿಎನ್‍ಜಿ ಸ್ಥಾವರ ಉದ್ಘಾಟಿಸಿದ ಮೋದಿ

    ಸಿಎನ್‌ಜಿ ಅನಿಲ ದರವು ಪ್ರತಿ ಕೆಜಿಗೆ ದೆಹಲಿಯಲ್ಲಿ 64.11 ರೂ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲೂ 66-.68 ರೂ., ಮುಜಾಫರ್ ನಗರ, ಮೀರತ್ ಮತ್ತು ಶಿಮ್ಲಾದಲ್ಲಿ 71.36, ಗುರುಗ್ರಾಮ್‌ನಲ್ಲಿ 72.45 ರೂ., ರೇವರಿ 74.55 ರೂ., ಕರ್ನಾಲ್ ಹಾಗೂ ಕೈಥಾಲ್‌ನಲ್ಲಿ 72.78 ರೂ., ಕಾನ್‌ಪುರ, ಹಮೀರ್‌ಪುರ್ ಹಾಗೂ ಫತೇಪುರ್ ನಲ್ಲಿ 75.90 ರೂ., ಅಜ್ಮೀರ್, ಪಾಲಿ ಹಾಗೂ ರಾಜ್‌ಸಮಂದ್‌ನಲ್ಲಿ 74.39 ರೂ.ಗೆ ಮಾರಾಟವಾಗುತ್ತಿರುವುದು ಕಂಡುಬಂದಿದೆ.

  • ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಆಯ್ತು ಈಗ ಸಿಎನ್‌ಜಿ, ಪಿಎನ್‌ಜಿ ದರದಲ್ಲೂ ಏರಿಕೆ

    ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಆಯ್ತು ಈಗ ಸಿಎನ್‌ಜಿ, ಪಿಎನ್‌ಜಿ ದರದಲ್ಲೂ ಏರಿಕೆ

    ನವದೆಹಲಿ: ಪೆಟ್ರೋಲ್‌, ಡೀಸೆಲ್‌, ಗೃಹ ಬಳಕೆಯ ಎಲ್‌ಪಿಜಿ ದರ ಏರಿಕೆ ಬೆನ್ನಲ್ಲೇ ಸಿಎನ್‌ಜಿ ಮತ್ತು ಕೊಳವೆ ಮೂಲಕ ಮನೆಗಳಿಗೆ ಪೂರೈಕೆಯಾಗುವ ಅಡುಗೆ ಅನಿಲ (ಪಿಎನ್‌ಜಿ) ದರದಲ್ಲೂ ಏರಿಕೆ ಮಾಡಲಾಗಿದೆ. ಇದರಿಂದ ಜನರಿಗೆ ಬೆಲೆ ಏರಿಕೆಯ ಬಿಸಿ ಮತ್ತಷ್ಟು ತಟ್ಟಿದೆ.

    ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಿಎನ್‌ಜಿ ದರ ಪ್ರತಿ ಕೆ.ಜಿ.ಗೆ 1 ರೂ. ಹೆಚ್ಚಳವಾಗಿದೆ. ದೆಹಲಿಯಲ್ಲಿ ಸಿಎನ್‌ಜಿ ಬೆಲೆಯನ್ನು 58.01 ರಿಂದ 59.01 ಕ್ಕೆ ಹೆಚ್ಚಿಸಲಾಗಿದೆ ಎಂದು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್‌ನ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಬಸ್ಸಿನಲ್ಲೇ ಎಣ್ಣೆ ಹೊಡೆದ ಶಾಲಾ ಹೆಣ್ಮಕ್ಳು: ವಿಡಿಯೋ ವೈರಲ್

    ಅಡುಗೆ ಉದ್ದೇಶಗಳಿಗಾಗಿ ಕುಟುಂಬಗಳು ಪಡೆಯುವ ಪ್ರತಿ ಕ್ಯೂಬಿಕ್‌ ಮೀಟರ್‌ ಪಿಎನ್‌ಜಿ ದರ 36.61 ರೂಪಾಯಿ ತಲುಪಿದೆ. ಕಳೆದ ಎರಡು ದಿನಗಳಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ದರ ತಲಾ 1.60 ರೂಪಾಯಿಯಷ್ಟು ಏರಿಕೆಯಾಗಿದೆ. ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್‌ ದರ 50 ರೂಪಾಯಿ ಹೆಚ್ಚಳವಾಗಿದೆ.

    ಜಾಗತಿಕವಾಗಿ ನೈಸರ್ಗಿಕ ಅನಿಲ ದರದಲ್ಲಿ ಏರಿಕೆಯಾಗಿರುವುದರಿಂದ ಈ ತಿಂಗಳು ಮೂರನೇ ಬಾರಿಗೆ ಸಿಎನ್‌ಜಿ ದರ ಹೆಚ್ಚಳ ಕಂಡಿದೆ. ಕಳೆದ ಎರಡು ಬಾರಿಯ ದರ ಏರಿಕೆಯಲ್ಲಿ ಪ್ರತಿ ಕೆಜಿ ಸಿಎನ್‌ಜಿಗೆ ಒಟ್ಟು 50 ಪೈಸೆ ಹೆಚ್ಚಳವಾಗಿದೆ. ಈ ವರ್ಷ ಪ್ರತಿ ಕೆ.ಜಿ.ಗೆ ಒಟ್ಟು 5.50ರಷ್ಟು ಏರಿಕೆಯಾಗಿದೆ. ಇದನ್ನೂ ಓದಿ: ಅಲ್ಪಸಂಖ್ಯಾತರ ಶಾದಿ ಮಹಲ್ ಯೋಜನೆ ರದ್ದು: ಬೊಮ್ಮಾಯಿ

    ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಬೆಲೆ ಏರಿಕೆಯ ವಿಷಯ ಸದ್ದು ಮಾಡಿತ್ತು. ಅಧಿಕ ಹಣದುಬ್ಬರ ಮತ್ತು ಸರಕುಗಳ ಬೆಲೆ ಏರಿಕೆಯ ಮೂಲಕ ಸಾಮಾನ್ಯ ಜನರಿಗೆ ಹೆಚ್ಚಿನ ಹೊರೆ ಹೊರಿಸಲಾಗಿದೆ ಎಂದು ಪ್ರತಿಪಕ್ಷಗಳು ಪ್ರತಿಭಟಿಸಿದವು. ಇದನ್ನೂ ಓದಿ: ನನಗೆ ವಯಸ್ಸಾಯ್ತು ಅಂತ ಕಾಲೆಳೆಯುತ್ತಾರೆ ಅದಕ್ಕೆ ವಾರಕ್ಕೊಮ್ಮೆ ಶೇವ್ ಮಾಡಿಸ್ತೀನಿ: ಸಿದ್ದರಾಮಯ್ಯ