Tag: PMO Office

  • ನನ್ನ ಹೆಂಡ್ತಿ ಅಟ್ಯಾಕ್ ಮಾಡಿದ್ದಾಳೆ ಕಾಪಾಡಿ – ಪ್ರಧಾನಿಗೆ ಟ್ವೀಟ್ ಮಾಡಿದ ಬೆಂಗಳೂರು ಟೆಕ್ಕಿ

    ನನ್ನ ಹೆಂಡ್ತಿ ಅಟ್ಯಾಕ್ ಮಾಡಿದ್ದಾಳೆ ಕಾಪಾಡಿ – ಪ್ರಧಾನಿಗೆ ಟ್ವೀಟ್ ಮಾಡಿದ ಬೆಂಗಳೂರು ಟೆಕ್ಕಿ

    ಬೆಂಗಳೂರು: ನನ್ನ ಹೆಂಡತಿ (Wife) ಚಾಕುವಿನಿಂದ (Knife) ನನ್ನ ಮೇಲೆ ದಾಳಿ ನಡೆಸಿದ್ದಾಳೆ. ನನ್ನನ್ನು ಕಾಪಾಡಿ ಎಂದು ಬೆಂಗಳೂರಿನ (Bengaluru) ಯದುನಂದನ್ ಆಚಾರ್ಯ ಪ್ರಧಾನಿ ಕಾರ್ಯಾಲಯದ (PMO Office) ಮೊರೆ ಹೋಗಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನನ್ನ ಮೇಲೆ ದಾಳಿ ಆಗಿದೆ. ಆದ್ರೆ ಬಹುಷಃ ನನಗೆ ಯಾರು ಹೆಲ್ಪ್ ಮಾಡಲ್ಲ. ಯಾಕಂದ್ರೆ ನಾನೊಬ್ಬ ಪುರುಷ. ನನ್ನ ಹೆಂಡತಿ ನನ್ನನ್ನು ಚಾಕುವಿನಿಂದ ಇರಿದಿದ್ದಾಳೆ. ಇದೇನಾ ನಾರಿ ಶಕ್ತಿ? ನನ್ನ ಕೈಯಲ್ಲಿ ರಕ್ತ ಬರ್ತಿದೆ. ನನ್ನ ಪತ್ನಿ ವಿರುದ್ಧ ಗೃಹ ಹಿಂಸೆ ಕೇಸ್ ದಾಖಲಿಸ್ತೀರಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕತ್ರಿನಾ ಕೈಫ್‌ಗೆ ಬೌಲಿಂಗ್‌ ಮಾಡಿದ ಹರ್ಭಜನ್‌ ಸಿಂಗ್‌ʼ

    ಈ ಟ್ವೀಟ್‌ ಅನ್ನು ಪಿಎಂಒ, ಕೇಂದ್ರ ಮಂತ್ರಿ ಕಿರಣ್ ರಿಜಿಜು ಹಾಗೂ ಬೆಂಗಳೂರು ಪೊಲೀಸ್ ಕಮೀಷನರ್‌ಗೆ (Bangaluru Police Commissioner) ಟ್ಯಾಗ್ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಕಮೀಷನರ್, ಏನಾಯ್ತು ಎಂದು ಠಾಣೆಗೆ ಬಂದು ದೂರು ನೀಡಿ ಎಂದು ಪ್ರತಿಕ್ರಿಯಿಸಿದ್ದಾರೆ. ನೊಂದ ಪತಿಯರು ಯದುನಂದನ್ ಬೆಂಬಲಿಸಿ ಸಾಕಷ್ಟು ಟ್ವೀಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಟ್ರ್ಯಾಕ್ಟರ್ ಪಲ್ಟಿಯಾಗಿ ಮಕ್ಕಳು ಸೇರಿದಂತೆ 24 ಮಂದಿ ಸಾವು

    ಟ್ರ್ಯಾಕ್ಟರ್ ಪಲ್ಟಿಯಾಗಿ ಮಕ್ಕಳು ಸೇರಿದಂತೆ 24 ಮಂದಿ ಸಾವು

    ಲಕ್ನೋ: ಟ್ರ್ಯಾಕ್ಟರ್ ಟ್ರಾಲಿ (Tractor Trolley) ಪಲ್ಟಿಯಾಗಿ 11 ಜನ ಮಕ್ಕಳು ಸೇರಿದಂತೆ 24 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ( Uttar Pradesh) ಕಾನ್ಪುರದಲ್ಲಿ (Kanpur) ನಡೆದಿದೆ.

    ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿ ಉನ್ನಾವೋದಿಂದ (Unnao) ಹಿಂತಿರುಗುತ್ತಿತ್ತು. ಈ ವೇಳೆ ಕಾನ್ಪುರ ಜಿಲ್ಲೆಯ ಘಟಂಪುರ (Ghatampur) ಪ್ರದೇಶದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಮೋದಿ ವಿರುದ್ಧ ಹೋಗ್ತಾರಲ್ಲ ಇದು ಚೈಲ್ಡಿಶ್ ತನ, ರಾಹುಲ್ ಗಾಂಧಿ ಫನ್ನಿಬಾಯ್ : ರೇಣುಕಾಚಾರ್ಯ ವ್ಯಂಗ್ಯ

    ಈ ಸಂಬಂಧ ಪ್ರಧಾನ ಮಂತ್ರಿ (PMO) ಕಾರ್ಯಾಲಯ ಟ್ವೀಟ್ ಮಾಡಿದ್ದು, ಕಾನ್ಪುರದಲ್ಲಿ ಸಂಭವಿಸಿದ ಟ್ರಾಕ್ಟರ್-ಟ್ರಾಲಿ ಅಪಘಾತದಿಂದ ಕಂಗಾಲಾಗಿದ್ದೇವೆ. ಘಟನೆಯಲ್ಲಿ ಮೃತಪಟ್ಟವರ ನೆನಪುಗಳು ನಮ್ಮ ಮತ್ತು ಅವರ ಆತ್ಮೀಯರೊಂದಿಗೆ ಸದಾ ಇರುತ್ತದೆ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥನೆ ಸಲ್ಲಿಸುತ್ತೇವೆ. ಸ್ಥಳೀಯ ಪೊಲೀಸರು ಸಂತ್ರಸ್ತರಿಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತಿದ್ದಾರೆ. ಮೃತರ ಕುಟುಂಬಕ್ಕೆ ಪಿಎಂಎನ್‍ಆರ್‍ಎಫ್‍ನಿಂದ 2 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುವುದು ಮತ್ತು ಘಟನೆಯಲ್ಲಿ ಗಾಯಗೊಂಡವರಿಗೆ 50,000 ನೀಡಲಾಗುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: ಕೇರಳದ ಹಿರಿಯ ಸಿಪಿಐಎಂ ನಾಯಕ ಕೊಡಿಯೇರಿ ಬಾಲಕೃಷ್ಣನ್ ನಿಧನ

    Live Tv
    [brid partner=56869869 player=32851 video=960834 autoplay=true]