Tag: PML-N

  • ಪಾಕಿಸ್ತಾನದಲ್ಲಿ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ನವಾಜ್‌ ಷರೀಫ್‌ ಪುತ್ರಿ ಆಯ್ಕೆ

    ಪಾಕಿಸ್ತಾನದಲ್ಲಿ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ನವಾಜ್‌ ಷರೀಫ್‌ ಪುತ್ರಿ ಆಯ್ಕೆ

    ಲಾಹೋರ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ (Nawaz Sharif) ಅವರ ಪುತ್ರಿಯೂ ಆಗಿರುವ ಪಿಎಂಎಲ್-ಎನ್ ನಾಯಕಿ ಮರ್ಯಮ್‌ ನವಾಜ್‌ (Maryam Nawaz) ಪಾಕಿಸ್ತಾನ ಪಂಜಾಬ್‌ ಪ್ರಾಂತ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

    12 ಕೋಟಿ ಜನ ನೆಲೆಸಿರುವ ಪಂಜಾಬ್‌ ಪ್ರಾಂತ್ಯದಲ್ಲಿ ನಡೆದ ಚುನಾವಣೆಯಲ್ಲಿ ಇಮ್ರಾನ್‌ ಖಾನ್‌ ಅವರ ಪಿಟಿಐ ಬೆಂಬಲಿತ ಪಕ್ಷದ ಬಸುನ್ನಿ ಇತ್ತೆಹಾದ್‌ ಕೌನ್ಸಿಲ್‌ (SIC)ನ ನಾಯಕ ರಾಣಾ ಅಫ್ತಾಬ್‌ ವಿರುದ್ಧ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (PML-N) ಪಕ್ಷದ ಮರ್ಯಮ್‌ (50) ಜಯಗಳಿಸಿದ್ದಾರೆ.

    ಪಂಜಾಬ್‌ ಅಸೆಂಬ್ಲಿ ಚುನಾವಣೆಗೆ ಹೋಗುವ ಮುನ್ನ ಮರ್ಯಮ್‌ ತನ್ನ ಜತಿ ಉಮ್ರಾದಲ್ಲಿರುವ ತನ್ನ ತಾಯಿಯ ಸಮಾಧಿಗೆ ಭೇಟಿ ನೀಡಿದ್ದರು. ಈ ಸಂದೇಶವನ್ನು ಎಕ್ಸ್‌ ಖಾತೆಯಲ್ಲೂ ಹಂಚಿಕೊಳ್ಳಲಾಗಿದೆ. ಇದನ್ನೂ ಓದಿ: ಕ್ರೀಡಾಂಗಣದಲ್ಲಿ ಸಾರ್ವಜನಿಕವಾಗಿ ಇಬ್ಬರ ತಲೆಗೆ 15 ಬಾರಿ ಗುಂಡಿಟ್ಟು ಮರಣದಂಡನೆ

    ಮರ್ಯಮ್‌ ನವಾಜ್‌ ಯಾರು?
    50 ವರ್ಷ ವಯಸ್ಸಿನ ಮರ್ಯಮ್‌ ಪಾಕಿಸ್ತಾನದಲ್ಲಿ 3 ಬಾರಿ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರ ಪುತ್ರಿ. 1992ರಲ್ಲಿ, ಅವರು ಸಫರ್ ಅವನ್ ಎಂಬವರೊಂದಿಗೆ ವಿವಾಹವಾದರು, ದಂಪತಿಗೆ ಈಗ ಮೂವರು ಮಕ್ಕಳಿದ್ದಾರೆ. ಸಫರ್ ಆ ಸಮಯದಲ್ಲಿ ಪಾಕಿಸ್ತಾನದ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಬಳಿಕ ನವಾಜ್ ಷರೀಫ್‌ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರದಲ್ಲಿದ್ದಾಗ ಭದ್ರತಾ ಅಧಿಕಾರಿಯಾಗಿದ್ದರು. ಆರಂಭದಿಂದಲೇ ತನ್ನನ್ನು ಸಮಾಜಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಮರ್ಯಮ್‌ 2012ರಲ್ಲಿ ಅವರು ರಾಜಕೀಯಕ್ಕೆ ಪ್ರವೇಶಿಸಿದ್ದರು.

    2013ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಚುನಾವಣಾ ಪ್ರಚಾರದ ಉಸ್ತುವಾರಿ ವಹಿಸಿದ್ದರು. 2024ರ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ, ಅವರು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಮತ್ತು ಪಂಜಾಬ್‌ನ ಪ್ರಾಂತೀಯ ಅಸೆಂಬ್ಲಿಗೆ ಮೊದಲ ಬಾರಿಗೆ ಚುನಾಯಿತರಾಗಿದ್ದಾರೆ. ಇದನ್ನೂ ಓದಿ: ಕಾಶ್ಮೀರ ಸುರಕ್ಷಿತವಾಗಿದೆ, ನಾನು ಸ್ವತಂತ್ರಳಾಗಿದ್ದೇನೆ – ಬ್ರಿಟನ್ ಸಂಸತ್‌ನಲ್ಲಿ ಕಾಶ್ಮೀರದ ಪತ್ರಕರ್ತೆ ಶ್ಲಾಘನೆ

  • ಪಾಕ್‌ ಚುನಾವಣೆ; ಪಿಎಂಎಲ್‌-ಎನ್‌ ಅತಿ ದೊಡ್ಡ ಪಕ್ಷ?- ಸಮ್ಮಿಶ್ರ ಸರ್ಕಾರ ರಚನೆಗೆ ಮುಂದಾದ ಮಾಜಿ ಪ್ರಧಾನಿ

    ಪಾಕ್‌ ಚುನಾವಣೆ; ಪಿಎಂಎಲ್‌-ಎನ್‌ ಅತಿ ದೊಡ್ಡ ಪಕ್ಷ?- ಸಮ್ಮಿಶ್ರ ಸರ್ಕಾರ ರಚನೆಗೆ ಮುಂದಾದ ಮಾಜಿ ಪ್ರಧಾನಿ

    ಇಸ್ಲಾಮಾಬಾದ್‌: ಪಾಕಿಸ್ತಾನದ ನ್ಯಾಷನಲ್‌ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಪಾಕ್‌ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರ ಪಿಎಂಎಲ್‌ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಷರೀಫ್‌ ಸಮ್ಮಿಶ್ರ ಸರ್ಕಾರ ರಚನೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

    ಪಾಕ್‌ ನ್ಯಾಷನಲ್‌ ಅಸೆಂಬ್ಲಿ ಚುನಾವಣೆಯ ಮತ ಎಣಿಕೆ ಇಂದು (ಶುಕ್ರವಾರ) ನಡೆಯಿತು. ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಗೆಲುವಿನ ನಗೆ ಬೀರಿದ್ದಾರೆ. ತಮ್ಮ ರಾಜಕೀಯ ಪಕ್ಷವು ಮತಗಳಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸಮ್ಮಿಶ್ರ ಸರ್ಕಾರವನ್ನು ರಚಿಸುವ ಬಗ್ಗೆ ಚರ್ಚಿಸುವುದಾಗಿ ಅವರು ತಿಳಿಸಿದ್ದಾರೆ.

    ಷರೀಫ್ ತಮ್ಮ ಪಕ್ಷ ಎಷ್ಟು ಸ್ಥಾನಗಳನ್ನು ಗೆದ್ದಿದೆ ಎಂಬುದನ್ನು ಬಹಿರಂಗಪಡಿಸಿಲ್ಲ. ಅಸೆಂಬ್ಲಿಯ 265 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಇನ್ನೂ ಕೆಲವು ಸ್ಥಾನಗಳಲ್ಲಿ ಎಣಿಕೆ ನಡೆಯುತ್ತಿದೆ.

    ಚುನಾವಣಾ ಸಮಿತಿಯು ಪ್ರಕಟಿಸಿದ ಎಣಿಕೆಯಲ್ಲಿ, ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (PML-N) 61 ಸ್ಥಾನಗಳನ್ನು ಗೆದ್ದಿದೆ ಎಂದು ತೋರಿಸಿದೆ. ಇದು ಸರ್ಕಾರ ರಚನೆಗೆ ಹಕ್ಕು ಸಾಧಿಸಲು ಬೇಕಾದ 133 ಸ್ಥಾನಗಳಿಗಿಂತ ಕಡಿಮೆಯಾಗಿದೆ.

    ತಮ್ಮ ಪಕ್ಷಕ್ಕೆ ಅಗತ್ಯವಿರುವ ಸ್ಥಾನಗಳು ಬಂದಿಲ್ಲ. ಆದರೆ ಸಮ್ಮಿಶ್ರ ಸರ್ಕಾರ ರಚಿಸುವ ಕುರಿತು ಚರ್ಚಿಸಲು ನಮ್ಮ ಪ್ರತಿನಿಧಿಗಳು, ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಸೇರಿದಂತೆ ಇತರ ಪಕ್ಷಗಳ ನಾಯಕರನ್ನು ಭೇಟಿಯಾಗಲಿದ್ದಾರೆ ಎಂದು ಷರೀಫ್ ತಿಳಿಸಿದ್ದಾರೆ.

    ಪಾಕ್‌ ನ್ಯಾಷನಲ್‌ ಅಸೆಂಬ್ಲಿಯ 266 ಸ್ಥಾನಗಳ (ಮೀಸಲು ಕ್ಷೇತ್ರಗಳನ್ನು ಬಿಟ್ಟು) ಪೈಕಿ ಸದ್ಯ 265 ರಲ್ಲಿ ಚುನಾವಣೆ ನಡೆದಿದೆ. ಅಧಿಕಾರದ ಗದ್ದುಗೆ ಏರಲು ಯಾವುದೇ ಪಕ್ಷ 133 ಸ್ಥಾನಗಳನ್ನು ಗೆಲ್ಲಬೇಕಿದೆ.