Tag: Pmay

  • ಪಿಎಂ ಆವಾಸ್ ಯೋಜನೆಯ ಹಣ ಪಡೆದು 4 ಮಹಿಳೆಯರು ಪ್ರೇಮಿಗಳೊಂದಿಗೆ ಪಲಾಯನ

    ಪಿಎಂ ಆವಾಸ್ ಯೋಜನೆಯ ಹಣ ಪಡೆದು 4 ಮಹಿಳೆಯರು ಪ್ರೇಮಿಗಳೊಂದಿಗೆ ಪಲಾಯನ

    ಲಕ್ನೋ: ಪ್ರಧಾನ ಮಂತಿ ಆವಾಸ್ ಯೋಜನೆಯ (PMAY) ಅಡಿಯಲ್ಲಿ ಹಣವನ್ನು (Money) ಪಡೆದ ನಾಲ್ವರು ವಿವಾಹಿತ ಮಹಿಳೆಯರು (Women) ತಮ್ಮ ಪತಿಯರನ್ನು ಬಿಟ್ಟು ಪ್ರೇಮಿಗಳೊಂದಿಗೆ (Lovers) ಓಡಿಹೋಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.

    ಪಿಎಂಎವೈ ಯೋಜನೆ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ಇದು ಬಡವರಿಗೆ ನಗರ ವಸತಿ ಕೊರತೆಯನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಆರ್ಥಿಕವಾಗಿ ದುರ್ಬಲರಾದವರು, ಕಡಿಮೆ ಹಾಗೂ ಮಧ್ಯಮ ಆದಾಯದ ಗುಂಪುಗಳಿಗೆ ಸೇರಿದವರಿಗೆ ಈ ಯೋಜನೆ ನಗದು ರೂಪದಲ್ಲಿ ಸಹಾಯ ಮಾಡುತ್ತದೆ. ಇದನ್ನು ಬಳಸಿಕೊಂಡು ಜನರು ಮನೆಗಳನ್ನು ಹೊಂದಬಹುದಾಗಿದೆ.

    ಪಿಎಂಎವೈ ಅಡಿಯಲ್ಲಿ ಕುಟುಂಬದ ಒಬ್ಬ ಮಹಿಳಾ ಸದಸ್ಯೆ ಮನೆಯ ಮಾಲಕಿ ಅಥವಾ ಸಹ-ಮಾಲಕಿಯಾಗಿರುವುದು ಕಡ್ಡಾಯವಾಗಿದೆ. ವರದಿಗಳ ಪ್ರಕಾರ ಈ ಯೋಜನೆಯ ಫಲಾನುಭವಿಗಳಾದ ನಾಲ್ವರು ಮಹಿಳೆಯರು ತಮ್ಮ ಖಾತೆಗೆ 50,000 ರೂ. ಅನುದಾನ ಬಂದ ತಕ್ಷಣವೇ ತಮ್ಮ ಪತಿಯರನ್ನು ತೊರೆದು ಓಡಿ ಹೋಗಿದ್ದಾರೆ.

    ಈ ಘಟನೆಯ ಪರಿಣಾಮವಾಗಿ ಮಹಿಳೆಯರ ಗಂಡಂದಿರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಒಂದೆಡೆ ಮನೆಯ ನಿರ್ಮಾಣದ ಕಾಮಗಾರಿ ಇನ್ನೂ ಪ್ರಾರಂಭವಾಗದ ಕಾರಣ ಜಿಲ್ಲಾ ನಗರಾಭಿವೃದ್ಧಿ ಸಂಸ್ಥೆ (DUDA) ಎಚ್ಚರಿಕೆಯನ್ನು ನೀಡುವ ಭೀತಿಯಲ್ಲಿದ್ದರೆ, ಇನ್ನೊಂದೆಡೆ ತಮ್ಮ ಪತ್ನಿಯರ ಖಾತೆಗಳಿಗೆ ಮುಂದಿನ ಕಂತಿನ ಹಣ ವರ್ಗಾವಣೆಯಾಗುವ ಆತಂಕದಲ್ಲಿದ್ದಾರೆ.

    ಇದೀಗ ಗೊಂದಲದಲ್ಲಿರುವ ಪತಿಯರು ಏನು ಮಾಡಬೇಕೆಂದು ತೋಚದೇ ಓಡಿ ಹೋಗಿರುವ ಪತ್ನಿಯರ ಖಾತೆಗೆ ವರ್ಗಾವಣೆಯಾಗಬಹುದಾದ ಮುಂದಿನ ಕಂತನ್ನು ಕಳುಹಿಸದಂತೆ ಡಿಯುಡಿಎಯ ಯೋಜನಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರು ಚಿತ್ರೋತ್ಸವಕ್ಕೆ ರೂ. 4.49 ಕೋಟಿ ಮೀಸಲು : ಆರ್.ಅಶೋಕ್

    ನಗರ ಪಂಚಾಯಿತಿ ಬೆಲ್ಹಾರ, ಬಂಕಿ, ಜೈದ್‌ಪುರ ಹಾಗೂ ಸಿದೌರ್‌ನ ನಾಲ್ವರು ಮಹಿಳೆಯರು ಯೋಜನೆಯ ಮೊದಲ ಕಂತಿನ ಹಣವನ್ನು ಪಡೆದಿದ್ದು, ಬಳಿಕ ತಮ್ಮ ಪ್ರೇಮಿಗಳೊಂದಿಗೆ ಓಡಿಹೋಗಿದ್ದಾರೆ. ಫಲಾನುಭವಿಗಳ ಮನೆಗಳ ನಿರ್ಮಾಣ ಕಾಮಗಾರಿ ಆರಂಭವಾಗದೇ ಹೋಗಿರುವ ಹಿನ್ನೆಲೆ ಈ ವಿಚಿತ್ರ ಪ್ರಕರಣ ಅಧಿಕಾರಿಗಳ ಗಮನಕ್ಕೆ ಬಂದಿದೆ.

    ಕುಟುಂಬಗಳಿಗೆ ಹಣ ವರ್ಗಾವಣೆಯಾಗಿದ್ದರೂ ಮನೆ ನಿರ್ಮಾಣ ಇನ್ನೂ ಪ್ರಾರಂಭವಾಗಿಲ್ಲ ಎಂಬ ಕಾರಣಕ್ಕೆ ದುಡಾದ ಯೋಜನಾಧಿಕಾರಿ ಸೌರಭ್ ತ್ರಿಪಾಠಿ ನೋಟಿಸ್ ಕಳುಹಿಸಿ ತಕ್ಷಣವೇ ಮನೆ ನಿರ್ಮಾಣ ಕಾಮಗಾರಿ ಪ್ರಾರಂಭಿಸುವಂತೆ ಆದೇಶ ನೀಡಿದ್ದರು. ಕೊನೆಗೆ ಓಡಿಹೋದ ಮಹಿಳೆಯರ ಪತಿಯರು ಸರ್ಕಾರಿ ಕಚೇರಿಗೆ ತೆರಳಿ ನಡೆದಿರುವ ಘಟನೆಯನ್ನು ವಿವರಿಸಿದ್ದಾರೆ ಹಾಗೂ 2ನೇ ಕಂತು ಜಮಾ ಮಾಡದಂತೆ ಕೇಳಿಕೊಂಡಿದ್ದಾರೆ.

    ಇದೀಗ ಓಡಿಹೋಗಿರುವ ಮಹಿಳೆಯರಿಂದ ಹಣವನ್ನು ವಸೂಲಿ ಮಾಡುವುದು ಹೇಗೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ. ಆದರೂ ಪ್ರತಿ ಫಲಾನುಭವಿಗಳಿಂದಲೂ ಹಣವನ್ನು ಹಿಂಪಡೆಯಲು ಇಲಾಖೆ ಪ್ರಯತ್ನಿಸುತ್ತಿದೆ ಎಂದು ತ್ರಿಪಾಠಿ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತವನ್ನೂ ಟಾರ್ಗೆಟ್‌ ಮಾಡಿದೆ ಚೀನಾದ ಬೇಹುಗಾರಿಕಾ ಬಲೂನ್‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Budget 2023: ಮನೆ ಕಟ್ಟೋರಿಗೆ ಗುಡ್‌ ನ್ಯೂಸ್‌ – ಪ್ರಧಾನಮಂತ್ರಿ ಆವಾಸ್ ಯೋಜನೆಗಾಗಿ 79,000 ಕೋಟಿ ಅನುದಾನ

    Budget 2023: ಮನೆ ಕಟ್ಟೋರಿಗೆ ಗುಡ್‌ ನ್ಯೂಸ್‌ – ಪ್ರಧಾನಮಂತ್ರಿ ಆವಾಸ್ ಯೋಜನೆಗಾಗಿ 79,000 ಕೋಟಿ ಅನುದಾನ

    ನವದೆಹಲಿ: ಮನೆ ಕಟ್ಟೋರಿಗೆ ಕೇಂದ್ರ ಸರ್ಕಾರ ಬಜೆಟ್ ಮೂಲಕ ಗುಡ್‌ನ್ಯೂಸ್ ಕೊಟ್ಟಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಗಾಗಿ (Pradhan Mantri Awas Yojana) 79 ಸಾವಿರ ಕೋಟಿ ಅನುದಾನ ಘೋಷಿಸಿದೆ.

    ಬುಧವಾರ 2023-24ನೇ ಸಾಲಿನ ಬಜೆಟ್‌ (Union Budget 2023) ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು, ಪ್ರಧಾನಮಂತ್ರಿ ಆವಾಸ್ ಯೋಜನೆಗಾಗಿ (PMAY) 79 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. ಇದು ಕಳೆದ ವರ್ಷದ ಅನುದಾನಕ್ಕೆ ಹೋಲಿಸಿದರೆ ಶೇಕಡಾ 66ರಷ್ಟು ಹೆಚ್ಚು. ಈ ಯೋಜನೆಯಡಿ 80 ಲಕ್ಷ ಮಂದಿಗೆ ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Union Budget 2023: ಎಲ್ಲಾ ರಾಜ್ಯಗಳಲ್ಲೂ ʼಯೂನಿಟಿ ಮಾಲ್‌ʼ

    ಕಳೆದ ಬಜೆಟ್‌ನಲ್ಲಿ ಎಲ್ಲರಿಗೂ ಮನೆ ಎಂದು ನಿರ್ಮಲಾ ಸೀತಾರಾಮನ್‌ ಅವರು ಹೇಳಿದ್ದರು. ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ 84 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು ಕಳೆದ ವರ್ಷದ ಬಜೆಟ್‌ನಲ್ಲಿ ಸಚಿವರು 48,000 ಕೋಟಿ ಮೀಸಲಿಟ್ಟಿದ್ದರು. ಪ್ರಸ್ತುತ ಬಜೆಟ್‌ನಲ್ಲಿ ಈ ಯೋಜನೆಗಾಗಿ ಸುಮಾರು ಶೇ.65 ಹೆಚ್ಚಿನ ಹಣವನ್ನು ಮೀಸಲಿಡಲಾಗಿದೆ. ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‍ನಲ್ಲಿ ಬಂಪರ್ – ಏನಿದು ಯೋಜನೆ? ಯಾರಿಗೆಲ್ಲ ಲಾಭ?

    ಪ್ರಧಾನಮಂತ್ರಿ ಆವಾಸ್ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಇದು ಸಮಾಜದ ದುರ್ಬಲ ವರ್ಗಗಳಿಗೆ (EWS/LIG and MIG) ಕೈಗೆಟುಕುವ ದರದಲ್ಲಿ ವಸತಿ ಒದಗಿಸುವ ಗುರಿ ಹೊಂದಿದೆ. ಇದನ್ನು 2015 ರಲ್ಲಿ ಪ್ರಾರಂಭಿಸಲಾಯಿತು. ಇದನ್ನೂ ಓದಿ: ಜಾತ್ರೆಯಲ್ಲಿ ಬಾಂಬೆ, ಕೋಲ್ಕತ್ತಾ ತೋರಿಸುವ ರೀತಿ ಬಜೆಟ್: ಸಿದ್ದರಾಮಯ್ಯ ವಾಗ್ದಾಳಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 5.21 ಲಕ್ಷ ಮನೆ ಉದ್ಘಾಟನೆ, ಬಡವರ ಸಬಲೀಕರಣಕ್ಕಾಗಿ ಬಿಜೆಪಿ ಕೆಲಸ: ಮೋದಿ

    5.21 ಲಕ್ಷ ಮನೆ ಉದ್ಘಾಟನೆ, ಬಡವರ ಸಬಲೀಕರಣಕ್ಕಾಗಿ ಬಿಜೆಪಿ ಕೆಲಸ: ಮೋದಿ

    ನವದೆಹಲಿ: ಕೇಂದ್ರದ ಬಿಜೆಪಿ ಸರ್ಕಾರವಿರಲಿ, ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿರಲಿ, ಪಕ್ಷವು ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಎಂಬ ಮಂತ್ರದೊಂದಿಗೆ ನಡೆದುಕೊಳ್ಳುತ್ತಿದೆ. ಎಲ್ಲರೂ ಬಡವರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

    ಗ್ರಹ ಪ್ರವೇಶ ಕಾರ್ಯಕ್ರಮದ ಅಡಿಯಲ್ಲಿ ಮಧ್ಯಪ್ರದೇಶದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಿಗಾಗಿ ನಿರ್ಮಾಣವಾಗಿದ್ದ 5.21 ಲಕ್ಷ ಮನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ವೀಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ಉಪಸ್ಥಿತರಿದ್ದರು. ಇದನ್ನೂ ಓದಿ: ಪರವಾನಿಗೆ ಇಲ್ಲದೆ ಬಂದೂಕುಗಳನ್ನು ಹೊಂದಲು ಕೊಡವರಿಗೆ ಅವಕಾಶ- ರಾಜ್ಯಕ್ಕೆ ಸುಪ್ರೀಂ ನೋಟಿಸ್‌

    ಕೆಲವು ರಾಜಕೀಯ ಪಕ್ಷಗಳು ಬಡತನವನ್ನು ತೊಡೆದುಹಾಕಲು ಸಾಕಷ್ಟು ಘೋಷಣೆಗಳನ್ನು ಎತ್ತಿದವು. ಆದರೆ ಬಡವರ ಸಬಲೀಕರಣಕ್ಕಾಗಿ ಸಾಕಷ್ಟು ಮಾಡಲಾಗಿಲ್ಲ. ಬಡವರು ಸಬಲೀಕರಣಗೊಂಡಾಗ ಬಡತನದ ವಿರುದ್ಧ ಹೋರಾಡುವ ಧೈರ್ಯವನ್ನು ನೀಡುತ್ತದೆ ಅಂತ ನಾನು ನಂಬುತ್ತೇನೆ. ಪ್ರಾಮಾಣಿಕ ಸರ್ಕಾರದ ಪ್ರಯತ್ನಗಳು ಸಶಕ್ತ ಬಡವರ ಜೊತೆ ಸೇರಿಕೊಂಡಾಗ, ಬಡತನ ನಿರ್ಮೂಲನೆ ಆಗುತ್ತದೆ ಎಂದು ಹೇಳಿದರು.

    ಹಿಂದಿನ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಳೆದ ಸರ್ಕಾರ ನನಗಿಂತ ಹಿಂದಿನ ಸರ್ಕಾರ ತಮ್ಮ ಅಧಿಕಾರಾವಧಿಯಲ್ಲಿ ಬಡವರಿಗೆ ಕೆಲವೇ ಲಕ್ಷ ಮನೆಗಳನ್ನು ನಿರ್ಮಿಸಿದೆ. ನಮ್ಮ ಸರ್ಕಾರ ಬಡವರಿಗೆ ಸುಮಾರು 2.5 ಕೋಟಿ ಮನೆಗಳನ್ನು ನೀಡಿದೆ. ಇವುಗಳಲ್ಲಿ 2 ಕೋಟಿ ಮನೆಗಳನ್ನು ಹಳ್ಳಿಗಳಲ್ಲಿ ನಿರ್ಮಿಸಲಾಗಿದೆ. ಎರಡು ವರ್ಷಗಳು, ಕೊರೊನಾವೈರಸ್‍ನಿಂದಾಗಿ ಅಡೆತಡೆಗಳ ಹೊರತಾಗಿಯೂ, ಕೆಲಸವು ನಿಧಾನವಾಗಲಿಲ್ಲ ಎಂದರು. ಇದನ್ನೂ ಓದಿ: ಭೂಮಾಫಿಯಾಗೆ ಆರ್.ಅಶೋಕ್ ರಕ್ಷಣೆ: ಆಪ್ ಆರೋಪ

    ಅನೇಕ ಮಹಿಳೆಯರಿಗೆ ಮನೆಗಳ ಮಾಲೀಕತ್ವದ ಹಕ್ಕು ನೀಡಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಸುಮಾರು 2 ಕೋಟಿ ಮನೆಗಳ ಮಾಲೀಕತ್ವದ ಹಕ್ಕುಗಳನ್ನು ಮಹಿಳೆಯರೂ ಹೊಂದಿದ್ದಾರೆ. ಈ ಹಕ್ಕು ಮನೆಯಲ್ಲಿ ಇತರ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಬಲಪಡಿಸಿದೆ. ಇದು ಪ್ರಪಂಚದಾದ್ಯಂತದ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನದ ವಿಷಯವಾಗಿದೆ ಎಂದು ನುಡಿದರು.