Tag: PM

  • ಸಮೀಕ್ಷೆಗಳ ಪ್ರಕಾರ ಮೋದಿಯೇ ಮುಂದಿನ ಪ್ರಧಾನಿ- ಕೈ ಹಿಡಿದ, ಕೈ ಕೊಟ್ಟ ರಾಜ್ಯಗಳು ಯಾವುವು?

    ಸಮೀಕ್ಷೆಗಳ ಪ್ರಕಾರ ಮೋದಿಯೇ ಮುಂದಿನ ಪ್ರಧಾನಿ- ಕೈ ಹಿಡಿದ, ಕೈ ಕೊಟ್ಟ ರಾಜ್ಯಗಳು ಯಾವುವು?

    ಬೆಂಗಳೂರು: ಬಹುತೇಕ ಎಲ್ಲಾ ಸಮೀಕ್ಷೆಗಳು ಮೋದಿಯೇ ಮುಂದಿನ ಪ್ರಧಾನಿ ಎಂದು ಹೇಳಿವೆ. ಹಾಗಾದ್ರೆ ಮೋದಿಯನ್ನ ಯಾವೆಲ್ಲ ರಾಜ್ಯಗಳು ಕೈಹಿಡಿದಿವೆ. ಹಾಗೆಯೇ ಯಾವ ಕಾರಣಕ್ಕೆ ಜನ ಮತ್ತೊಮ್ಮೆ ಮೋದಿಯನ್ನ ಆಯ್ಕೆ ಮಾಡಿದ್ರು ಅನ್ನೋ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

    2019ರ ಲೋಕಸಭಾ ಚುನಾವಣಾ ಹಬ್ಬಕ್ಕೆ ತೆರೆಬಿದ್ದಿದ್ದು, ದೇಶದ ಮುಂದಿನ ಚುಕ್ಕಾಣಿ ಯಾರ ಕೈಗೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಈ ಸಂಬಂಧ ಫಲಿತಾಂಶ ಪೂರ್ವ ಎಕ್ಸಿಟ್ ಪೋಲ್ ಸರ್ವೆಯಿಂದ ಬಿಜೆಪಿಗೆ ಕೊಂಚ ಭರವಸೆ ಮೂಡಿದ್ದು, ಹೆಚ್ಚಿನ ಸರ್ವೆಗಳು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗ್ತಾರೆ ಎಂಬ ಭವಿಷ್ಯ ನುಡಿದಿದೆ.

    ಮೋದಿ ಕೈ ಹಿಡಿದ ರಾಜ್ಯಗಳು!
    ಸಮೀಕ್ಷೆಯ ಪ್ರಕಾರ ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಗುಜರಾತ್, ಕರ್ನಾಟಕ, ರಾಜಸ್ಥಾನ, ಪಶ್ಚಿಮ ಬಂಗಾಳ, ಬಿಹಾರ, ಮಧ್ಯಪ್ರದೇಶ, ಒಡಿಶಾ, ದೆಹಲಿ ರಾಜ್ಯಗಳು ಈ ಬಾರಿ ಮೋದಿ ಕೈ ಹಿಡಿಯುವ ಸಾಧ್ಯತೆ ಇದೆ.

    ಪ್ರಧಾನಿಗೆ ಕೈಕೊಟ್ಟ ರಾಜ್ಯಗಳು!
    ಬಿಜೆಪಿ ಪ್ರಾಬಲ್ಯವಿದ್ದ ಉತ್ತರಪ್ರದೇಶ ಈ ಬಾರಿ ಮೋದಿಗೆ ಕೈಕೊಡಲಿದೆ. ಪ್ರಾದೇಶಿಕ ಪ್ರಾಬಲ್ಯವಿರುವ ಕೇರಳ, ತಮಿಳುನಾಡು ಕೂಡ ಬಿಜೆಪಿಗೆ ಕೈಕೊಡಲಿದೆ ಎಂಬುದಾಗಿ ತಿಳಿದುಬಂದಿದೆ.

    ಬಹುಪರಾಕ್ ಯಾಕೆ?:
    ಮೊದಲಿಗೆ ಆಡಳಿತ ವಿರೋಧಿ ಅಲೆ ಇಲ್ಲದೇ ಇದ್ದದ್ದು, ಸರ್ಜಿಕಲ್ ಸ್ಟ್ರೈಕ್, ಏರ್‍ಸ್ಟ್ರೈಕ್, ಭ್ರಷ್ಟಾಚಾರ ನಿಯಂತ್ರಣ, ಕಪ್ಪು ಹಣ ನಿಯಂತ್ರಣ, ಜನ್‍ಧನ್, ಉಜ್ವಲ, ಆಯುಷ್ಮಾನ್ ಭಾರತದಂತಹ ಜನಪರ ಯೋಜನೆಗಳು, ಸಣ್ಣ ರೈತರಿಗೆ ಆರ್ಥಿಕ ನೆರವಿನ ಭರವಸೆ, ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗಕ್ಕೆ ಮೀಸಲಾತಿ ನೀಡಿದ್ದು ಮೋದಿಯನ್ನ ಕೈಹಿಡಿದಿದೆ.

    ಮೋದಿ ಬೆಂಬಲಕ್ಕೆ ಧಾವಿಸಬಹುದಾದ ಪಕ್ಷಗಳು?
    ಟಿಆರ್‍ಡಿಎಸ್, ವೈಎಸ್‍ಆರ್‍ಸಿಪಿ, ಬಿಜೆಪಿ ಮೋದಿ ಬೆಂಬಲಕ್ಕೆ ಧಾವಿಸುವ ಸಾಧ್ಯತೆ ಇದೆ. ಒಟ್ಟಾರೆ, ಲೋಕಸಭಾ ಫಲಿತಾಂಶಕ್ಕೆ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದ್ದು, ಸ್ಪಷ್ಟ ಫಲಿತಾಂಶಕ್ಕೆ ಇನ್ನು ಮೂರು ದಿನ ಕಾಯಬೇಕಿದೆ.

  • ಆಧ್ಯಾತ್ಮದತ್ತ ಮೋದಿ ಚಿತ್ತ- ಕೇದಾರನಾಥದಲ್ಲಿ ಪ್ರಧಾನಿಯಿಂದ ಪೂಜೆ

    ಆಧ್ಯಾತ್ಮದತ್ತ ಮೋದಿ ಚಿತ್ತ- ಕೇದಾರನಾಥದಲ್ಲಿ ಪ್ರಧಾನಿಯಿಂದ ಪೂಜೆ

    ಡೆಹ್ರಾಡೂನ್: ಅಧಿಕಾರ ಯುದ್ಧ, ಲೋಕಸಭಾ ಚುನಾವಣೆಯ ಅಬ್ಬರದ ಪ್ರಚಾರವೆಲ್ಲ ಮುಗಿದ ಬಳಿಕ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಆಧ್ಯಾತ್ಮದತ್ತ ತನ್ನ ಚಿತ್ತ ಹರಿಸಿದ್ದಾರೆ.

    ಉತ್ತರಾಖಂಡ್ ರಾಜ್ಯದ ಕೇದಾರನಾಥದಲ್ಲಿ ಮೋದಿ ಪೂಜೆ ನಡೆಸುದ್ದಾರೆ. ಭೂಮಿಯಿಂದ 11, 755 ಅಡಿ ಎತ್ತರದಲ್ಲಿರುವ ಈ ಪವಿತ್ರ ಭೂಮಿ ಶಿವನ ಪೂಜಾ ಸ್ಥಾನವಾಗಿದೆ. ಈ ಸ್ಥಳದಲ್ಲಿ ಇಂದು ಪ್ರಧಾನಿಯವರು ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದಾರೆ. ಬದರಿನಾಥಕ್ಕೂ ಭೇಟಿ ನೀಡುವ ಸಾಧ್ಯತೆಗಳಿವೆ.

    ದೀಪಾವಳಿ ಹಬ್ಬದ ಹೊತ್ತಲ್ಲಿ ಅಂದರೆ ಕಳೆದ ವರ್ಷದ ನವೆಂಬರ್‍ನಲ್ಲಿ ಮೋದಿ ಕೇದಾರನಾಥದಲ್ಲಿ ಪೂಜೆ ಸಲ್ಲಿಸಿದ್ದರು. 2017ರಲ್ಲಿ ಚಳಿಗಾಲದ ಮುಗಿದು ದೇವಸ್ಥಾನದ ಬಾಗಿಲು ತೆರೆದ ಬೆನ್ನಲ್ಲೇ ಮೇ ತಿಂಗಳಲ್ಲೂ ದೇವಸ್ಥಾನದ ಬಾಗಿಲು ಮುಚ್ಚುವುದಕ್ಕೂ ಮೊದಲು ಅಕ್ಟೋಬರ್‍ನಲ್ಲಿ ಮೋದಿ ಕೇದಾರನಾಥನ ದರ್ಶನ ಪಡೆದಿದ್ದರು. ಇಂದು ಪ್ರಧಾನಿ ಮೋದಿ ಕೇದಾರನಾಥದಲ್ಲಿ ತಂಗಲಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.

    ಕಳೆದ 2 ತಿಂಗಳಿಂದ ನಿರಂತರವಾಗಿ ಚುನಾವಣಾ ಪ್ರಚಾರದಲ್ಲಿ ಪ್ರಧಾನಿಯವರು ತೊಡಗಿಕೊಂಡಿದ್ದರು. ನಾಳೆ ಅಂತಿಮ ಹಂತದ ಮತದಾನ ನಡೆಯಲಿದ್ದು, ಬಹಿರಂಗ ಪ್ರಚಾರಕ್ಕೆ ಶುಕ್ರವಾರ ತೆರೆಬಿದ್ದಿದೆ. ಈ ಹಿನ್ನೆಲೆಯಲ್ಲಿ ಮೋದಿಯವರು ಸಂಪೂರ್ಣವಾಗಿ ರಿಲ್ಯಾಕ್ಸ್ ಮೂಡಿಗೆ ತೆರಳಿದ್ದು, ಧ್ಯಾನ ಮಾಡಲು ಉತ್ತರಾಖಂಡದ ಕೇದರನಾಥ್‍ಗೆ ಭೇಟಿ ನೀಡಿದ್ದಾರೆ. ನಾಳೆ ಮಧ್ಯಾಹ್ನದ ಬಳಿಕ ಪ್ರಧಾನಿಯವರು ದೆಹಲಿಗೆ ಆಗಮಿಸಲಿದ್ದಾರೆ ಎನ್ನಲಾಗಿದೆ.

    ಮೇ 9ರ ಬಳಿಕ ದರ್ಶನಕ್ಕಾಗಿ ಕೇದಾರನಾಥ ದೇವಾಲಯವನ್ನು ದರ್ಶನಕ್ಕಾಗಿ ತೆರೆಯಲಾಗಿದ್ದು, ಪ್ರಧಾನಿಯಾದ ಬಳಿಕ ಮೋದಿಯವರು 4ನೇ ಬಾರಿಗೆ ಕೇದರನಾಥಕ್ಕೆ ಭೇಟಿ ನೀಡಿದ್ದಾರೆ.

  • ನಾಳೆಯಿಂದ ಮೋದಿಗೆ ಅಸಲಿ ಅಗ್ನಿ ಪರೀಕ್ಷೆ – ಮಹಾಘಟಬಂಧನ್‍ಗೆ ತಡೆ ಹಾಕ್ತಾರಾ ಪ್ರಧಾನಿ?

    ನಾಳೆಯಿಂದ ಮೋದಿಗೆ ಅಸಲಿ ಅಗ್ನಿ ಪರೀಕ್ಷೆ – ಮಹಾಘಟಬಂಧನ್‍ಗೆ ತಡೆ ಹಾಕ್ತಾರಾ ಪ್ರಧಾನಿ?

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗ್ತಾರಾ, ಪೂರ್ಣ ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತಾ ಎಂಬ ಈ ಪ್ರಶ್ನೆಗೆ ಲೋಕಸಭಾ ಚುನಾವಣೆಯಲ್ಲಿ ಬಾಕಿ ಉಳಿದಿರುವ ನಾಲ್ಕು ಹಂತಗಳು ಉತ್ತರ ನೀಡಲಿವೆ.

    ಈಗಾಗ್ಲೇ ಮೂರು ಹಂತಗಳಲ್ಲಿ ಒಟ್ಟು 543 ಕ್ಷೇತ್ರಗಳಲ್ಲಿ 302 ಕ್ಷೇತ್ರಗಳಿಗೆ ಮತದಾನ ಪೂರ್ಣಗೊಂಡಿದೆ. 230 ಲೋಕಸಭಾ ಕ್ಷೇತ್ರಗಳಿಗಷ್ಟೇ ಮತದಾನ ಬಾಕಿಯಿದೆ. ನಾಳೆ ಲೋಕಸಭೆಯ ಐದನೇ ಹಂತದ ಮತದಾನ ನಡೆಯಲಿದೆ.

    ಬಿಜೆಪಿ ಬಾಹುಳ್ಯದ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಸೋಮವಾರದಿಂದ ಲೋಕ ಕದನಕ್ಕೆ ಚಾಲನೆ ಸಿಗಲಿದ್ದು ಒಡಿಶಾ, ಮಹಾರಾಷ್ಟ್ರದಲ್ಲಿ ಮತದಾನ ಮುಕ್ತಾಯವಾಗಲಿದೆ. ಬಿಹಾರ-5, ಜಾರ್ಖಂಡ್-3, ಮಧ್ಯಪ್ರದೇಶ, ಒಡಿಶಾ-6, ಪಶ್ಚಿಮ ಬಂಗಾಳ, ಮಹಾರಾಷ್ಟ್ರ -17, ರಾಜಸ್ಥಾನ, ಉತ್ತರಪ್ರದೇಶ-ತಲಾ 13 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

    ನಾಳೆಯಿಂದ ಮತದಾನ ಆಗುತ್ತಿರುವ ಕ್ಷೇತ್ರಗಳನ್ನು ಕಳೆದ ಬಾರಿ ಬಿಜೆಪಿ ಗೆದ್ದುಕೊಂಡಿತ್ತು. ಮತ್ತೆ ಅಧಿಕಾರಕ್ಕೆ ಬರಬೇಕಾದ್ರೆ ಈ ಕ್ಷೇತ್ರಗಳನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮೋದಿಯವರು ಮಹಾಘಟಬಂಧನ್ ಗೆ ತಡೆ ಹಾಕ್ತಾರಾ ಎಂಬುದನ್ನು ಕಾದುನೋಡಬೇಕಿದೆ.

  • ಬಿಎಸ್‍ವೈ ವಿರುದ್ಧ ಮತ್ತೆ ಸಿಎಂ ಬಾಂಬ್!

    ಬಿಎಸ್‍ವೈ ವಿರುದ್ಧ ಮತ್ತೆ ಸಿಎಂ ಬಾಂಬ್!

    – ಕಮಿಷನ್ ಸರ್ಕಾರ ಎಂದ ಮೋದಿಗೆ ಹೆಚ್‍ಡಿಕೆ ಟಾಂಗ್

    ಬಳ್ಳಾರಿ: ಬಿಜೆಪಿ ರಾಜಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಕೇಂದ್ರ ನಾಯಕರಿಗೆ 1800 ಕೋಟಿ ರೂಪಾಯಿ ಹಣ ನೀಡಿದ್ದಾರೆ ಅನ್ನೋ ಡೈರಿಯನ್ನ ಇತ್ತೀಚಿಗೆ ಕಾಂಗ್ರೆಸ್ ಬಿಡುಗಡೆ ಮಾಡಿ ಬಹುದೊಡ್ಡ ಆರೋಪ ಮಾಡಿತ್ತು. ಆ ಡೈರಿ ನಕಲಿ ಎಂದು ಪ್ರೂವ್ ಕೂಡ ಆಯ್ತು. ಆದ್ರೆ ಇದೀಗ ಸಿಎಂ ಕುಮಾರಸ್ವಾಮಿ ಅವರು ಬಿಎಸ್‍ವೈ ವಿರುದ್ಧ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.

    ಬಿಎಸ್ ವೈ ಕೇಂದ್ರ ಬಿಜೆಪಿ ನಾಯಕರಿಗೆ ಹಣ ರವಾನಿಸಿದ್ದು ನಿಜ. ಆ ದಾಖಲೆಗಳು ಚೆಕ್ ಮೂಲಕ ಪಡೆದ ಹಣದ ಮಾಹಿತಿ ನನ್ನ ಬಳಿಯಿದೆ. ಬಿಎಸ್‍ವೈ ಚೆಕ್ ಮೂಲಕ ಪಡೆದ ಕಮೀಷನ್ ದಾಖಲೆಗಳು ನನ್ನ ಬಳಿಯಿವೆ. ಪ್ರಧಾನಿ ನರೇಂದ್ರ ಮೋದಿಗೆ ದಾಖಲೆಗಳು ಬೇಕಾದ್ರೆ ನಾನು ನೀಡುವೆ ಎಂದು ಸಿಎಂ ಹೇಳಿದ್ದಾರೆ.

    ಚಿತ್ರದುರ್ಗದ ಪರಿವರ್ತನಾ ಸಮಾವೇಶದಲ್ಲಿ ಮಾತನಾಡಿದ ಸಂದರ್ಭದಲ್ಲಿ, ಭದ್ರಾ ಮೇಲ್ದಂಡೆ ಯೋಜನೆಗೆ 12 ವರ್ಷಗಳ ಹಿಂದೆ ನಾನು ಸಿಎಂ ಆಗಿದ್ದ ವೇಳೆ ಪ್ರಾರಂಭಿಕ ಒಪ್ಪಿಗೆ ನೀಡಿದ್ದೆ. ಆದ್ರೆ 500 ಕೋಟಿ ಯೋಜನೆಯ ಟೆಂಡರನ್ನು 900 ಕೋಟಿಗೆ ದ್ವಿಗುಣಗೊಳಿಸಿ ಗುತ್ತಿಗೆದಾರರಿಂದ ಬಿಎಸ್‍ವೈ ಸಿಎಂ ಆಗಿದ್ದ ವೇಳೆ, ಚೆಕ್ ಮೂಲಕ ಲಂಚ ಪಡೆದಿದ್ದಾರೆ. ಆ ದಾಖಲೆಗಳು ಕೂಡ ನನ್ನ ಬಳಿಯಿವೆ. ನಮ್ಮದು ಕಮಿಷನ್ ಸರ್ಕಾರ ಅನ್ನೋ ಮೋದಿಗೆ ಆ ದಾಖಲೆಗಳನ್ನ ನೀಡಲು ನಾನು ಸಿದ್ಧವೆಂದು ಹೇಳಿದ್ದಾರೆ. ಈ ಮೂಲಕ ಕೇಂದ್ರ ಬಿಜೆಪಿ ನಾಯಕರಿಗೆ ಬಿಎಸ್ ವೈ ಹಣ ರವಾನಿಸಿರುವುದು ನಿಜ ಎಂದು ಸಿಎಂ ಕುಮಾರಸ್ವಾಮಿ ಆರೋಪಿಸುತ್ತಿದ್ದಾರೆ.

  • ಮಂಡ್ಯ ಲೋಕ ಕಣದಲ್ಲಿ ಟ್ವಿಸ್ಟ್- ಸಕ್ಕರೆ ನಾಡಿನಲ್ಲಿ ಬದಲಾಗುತ್ತಾ ರಾಜಕೀಯ ಸಮೀಕರಣ?

    ಮಂಡ್ಯ ಲೋಕ ಕಣದಲ್ಲಿ ಟ್ವಿಸ್ಟ್- ಸಕ್ಕರೆ ನಾಡಿನಲ್ಲಿ ಬದಲಾಗುತ್ತಾ ರಾಜಕೀಯ ಸಮೀಕರಣ?

    ಮಂಡ್ಯ: ಲೋಕ ರಾಜಕೀಯಕ್ಕೆ ಮೆಗಾ ಟ್ವಿಸ್ಟ್ ಸಿಕ್ಕಿದ್ದು, ಸಕ್ಕರೆ ನಾಡಿನಲ್ಲಿ ರಾಜಕೀಯ ಸಮೀಕರಣ ಬದಲಾಗುತ್ತಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಮೂಡಿದೆ.

    ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗಲ್ಲ ಎಂದು ಹೇಳಿದ್ದರು. ಆದ್ರೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಭೇಟಿ ನೀಡಿ ಬಳಿಕ ಸಮಾವೇಶದಲ್ಲಿ ಆಡಿದ ಮಾತು ಇದೀಗ ಬೇರೆಯದ್ದೇ ಸುಳಿವು ನೀಡುತ್ತಿದೆ.


    ಸುಮಲತಾಗೆ ಬೆಂಬಲ ನೀಡುವುದಾಗಿ ಪ್ರಧಾನಿಯವರು ಬಹಿರಂಗ ಹೇಳಿದ್ದರ ಪರಿಣಾಮದಿಂದಾಗಿ ಸಕ್ಕರೆ ನಾಡಿನ ರಾಜಕೀಯ ಸಮೀಕರಣ ಬದಲಾಗುತ್ತಾ ಅನ್ನೋ ಅನುಮಾನ ರಾಜಕೀಯ ವಲಯದಲ್ಲಿ ಮೂಡಿದೆ. ಒಂದು ವೇಳೆ ಚುನಾವಣೆಯಲ್ಲಿ ಸುಮಲತಾ ಗೆದ್ರೆ ಬಿಜೆಪಿಗೆ ಹೋಗಬಹುದು ಎಂಬ ಭೀತಿಯಿಂದ ಸುಮಲತಾಗೆ ವೋಟ್ ಹಾಕಬೇಕು ಅಂದುಕೊಂಡವರು ಉಲ್ಟಾ ಹೊಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.

    ಬಿಜೆಪಿ ವಿರೋಧಿಗಳು ಹಾಗೂ ಮುಸ್ಲಿಮರು ಸುಮಲತಾರಿಂದ ಸಂಪೂರ್ಣವಾಗಿ ದೂರ ಉಳಿಯುವ ಸಾಧ್ಯತೆಗಳಿವೆ. ಈ ಮೂಲಕ ಮೋದಿ ಕೈಯಾರೆ ಸುಮಲತಾ ಗೆಲುವನ್ನು ತಪ್ಪಿಸುತ್ತಿದ್ದಾರಾ ಎಂಬ ಪ್ರಶ್ನೆಯೂ ಮೂಡಿದ್ದು, ಮೋದಿ ಹಾಗೂ ಬಿಜೆಪಿ ವಿರೋಧಿ ಮತಗಳು ನಿಖಿಲ್‍ಗೆ ಬೀಳುವ ಲಕ್ಷಣಗಳು ಕಂಡುಬರುತ್ತಿದೆ. ಒಟ್ಟಿನಲ್ಲಿ ಮತದಾನಕ್ಕೆ ಇನ್ನೇನು 8 ದಿನ ಬಾಕಿ ಇರುವಾಗಲೇ ಮಂಡ್ಯ ಪಾಲಿಟಿಕ್ಸ್ ಮೆಗಾ ಟ್ವಿಸ್ಟ್ ಪಡೆದುಕೊಂಡಿದೆ.

    ಮೋದಿ ಹೇಳಿದ್ದೇನು?
    ಚಿತ್ರದುರ್ಗದ ನಂತರ ಮೈಸೂರಿಗೆ ಭೇಟಿ ನೀಡಿದ ಪ್ರಧಾನಿಯವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ, ಅಂಬರೀಶ್ ಹೆಸರನ್ನು ಪ್ರಸ್ತಾಪ ಮಾಡಿದ್ದರು. ಮಾಜಿ ಸಚಿವ, ನಟ ಅಂಬರೀಶ್ ಕನ್ನಡ ನಾಡಿನ ಜನರ ಹೃದಯದಲ್ಲಿದ್ದಾರೆ. ಅಂಬರೀಶ್ ಅವರು ಸುಮಲತಾ ಜೊತೆ ಸೇರಿಕೊಂಡು ಈ ಸಂಸ್ಕೃತಿ ಸೇವೆ ಮಾಡಿದ್ದಾರೆ. ಹೀಗಾಗಿ ಅವರಿಗೆ ಆಶೀರ್ವಾದ ಮಾಡಿ ನನಗೆ ಶಕ್ತಿ ತುಂಬಿ ಎಂದು ಹೇಳಿದ್ದರು.

    ಸುಮಲತಾ ಹೇಳಿದ್ದೇನು?
    ಮೋದಿ ಮಾತಿಗೆ ಪ್ರತಿಕ್ರಿಯಿಸಿದ್ದ ಸುಮಲತಾ, ಪ್ರಧಾನಿ ಮೋದಿ ಅವರು ಅಂಬರೀಶ್ ಅವರನ್ನ ನೆನಪು ಮಾಡಿಕೊಂಡಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು. ನನಗೆ ಹೇಳಲು ಪದಗಳೇ ಬರುತ್ತಿಲ್ಲ. ಮೋದಿ ಅವರಿಗೆ “ಹಾರ್ಟ್ ಫೆಲ್ಟ್ ಥ್ಯಾಂಕ್ಸ್”. ಇದು ಹೆಮ್ಮೆ ಪಡುವಂತ ವಿಚಾರ. ಇದಕ್ಕೆ ಕಾರಣ ಅಂಬರೀಶ್ ಅವರ ಸಾಧನೆ. ಮೋದಿ ಈ ಮಾತಿನಿಂದ ನಮ್ಮ ಕಾರ್ಯಕರ್ತರಲ್ಲಿ ಇನ್ನಷ್ಟು ಸ್ಫೂರ್ತಿ ಬರುತ್ತದೆ ಎಂದು ಅಭಿನಂದಿಸಿದ್ದರು.

  • ಲೋಕಸಭಾ ಚುನಾವಣಾ ಸರ್ವೆಯೇ ಐಟಿ ದಾಳಿಗೆ ಕಾರಣ!

    ಲೋಕಸಭಾ ಚುನಾವಣಾ ಸರ್ವೆಯೇ ಐಟಿ ದಾಳಿಗೆ ಕಾರಣ!

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಿಂದ ಭಯಕ್ಕೆ ಬಿದ್ರಾ ಅನ್ನೋ ಅನುಮಾನವೊಂದು ಮೂಡಿದೆ. ಯಾಕಂದ್ರೆ ಐಟಿ ದಾಳಿ ಮಾಡ್ಲಿಲ್ಲ ಅಂದ್ರೆ `ರಾಜಕೀಯ’ ಕಷ್ಟ ಎಂದು `ಚೌಕಿದಾರ್’ ಜೋಡಿಗೆ ಮುನ್ಸೂಚನೆಯೊಂದು ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಚುನಾವಣೆ ಹೊತ್ತಲ್ಲೇ ದೋಸ್ತಿಗಳಿಗೆ ಐಟಿ ದಾಳಿಯ ಶಾಕ್ ಕೊಟ್ರಾ ಅನ್ನೋ ಪ್ರಶ್ನೆ ಎದ್ದಿದೆ.

    ಮುನ್ಸೂಚನೆ ಏನು..?
    ಲೋಕಸಭಾ ಚುನಾವಣಾ ಸರ್ವೆಯೊಂದು ನಡೆದಿದೆ. ಇದರಿಂದ `ಚೌಕಿದಾರ್’ ಜೋಡಿ ಬೆಚ್ಚಿಬಿದ್ದಿದೆ. ಕಾಂಗ್ರೆಸ್-ಜೆಡಿಎಸ್ ದೋಸ್ತಿಯಿಂದಾಗಿ ಹಳೆಯ ಸೀಟುಗಳನ್ನೂ ಉಳಿಸಿಕೊಳ್ಳುವುದು ಕಷ್ಟವಾಗಲಿದೆ. ಟಾರ್ಗೆಟ್ 25 ರೀಚ್ ಆಗುವುದಿರಲಿ, 17 ಸ್ಥಾನಗಳಲ್ಲಿ ಮತ್ತೆ ಗೆಲ್ಲುವುದೇ ಕಷ್ಟವಾಗುತ್ತದೆ. ಇದರಿಂದ ಕಾಂಗ್ರೆಸ್-ಜೆಡಿಎಸ್ ಲೋಕಸಭಾ ಮೈತ್ರಿಯಿಂದ ಬಿಜೆಪಿಗೆ ಭಾರೀ ನಷ್ಟ ಎಂಬ ಮುನ್ಸೂಚನೆ ಸಿಕ್ಕಿರುವುದಾಗಿ ಮಾಹಿತಿ ಲಭಿಸಿದೆ. ಇದನ್ನೂ ಓದಿ: ‘ಲೋಕ ಸಮರ’ಕ್ಕೆ ಐಟಿ ಈಟಿ-ಐಟಿ ದಾಳಿ ನಡೆದಿದ್ದೇಲ್ಲಿ?

    ಈ ಸರ್ವೆಯ ವರದಿ ಫೆಬ್ರವರಿ ಕೊನೆಯ ವಾರದಲ್ಲಿ ಪ್ರಧಾನಿ ಮೋದಿ ಹಾಗೂ ಅಧ್ಯಕ್ಷ ಶಾ ಕೈ ಸೇರಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದೋಸ್ತಿಗಳ ಶಕ್ತಿ ಕುಗ್ಗಿಸಲು `ಐಟಿ ಅಸ್ತ್ರ’ ಬಳಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಮೊದಲ ಹಂತದಲ್ಲಿ ಮತದಾನ ನಡೆಯೋ ಕಡೆಗಳಲ್ಲಿ ಗುರುವಾರದಿಂದ ಐಟಿ ಶೋಧ ನಡೆಯುತ್ತಿದೆ. ಸಿಎಂ ಕುಮಾರಸ್ವಾಮಿ, ರೇವಣ್ಣ, ಡಿಕೆಶಿಯನ್ನೇ ಗುರಿಯಾಗಿಟ್ಟುಕೊಂಡು ಹುಡುಕಾಟ ನಡೆಸಲಾಗಿದೆ. 2ನೇ ಹಂತದ ಮತದಾನ ನಡೆಯೋ ಶಿವಮೊಗ್ಗದಲ್ಲೂ ಶೋಧ ನಡೆಯಲಿದ್ದು, ಚುನಾವಣೆ ಮುಗಿಯೋದಕ್ಕೂ ಮೊದಲು ಮತ್ತೊಮ್ಮೆ ಐಟಿ ದಾಳಿ ನಡೆಯುತ್ತಾ ಅನ್ನೋ ಪ್ರಶ್ನೆ ಎದುರಾಗಿದೆ.

  • ಲೋಕಸಭಾ ಚುನಾವಣೆ- ಈ ಬಾರಿ ಎನ್‍ಡಿಎಗೆ 8 ಸೀಟುಗಳ ಕೊರತೆ..?

    ಲೋಕಸಭಾ ಚುನಾವಣೆ- ಈ ಬಾರಿ ಎನ್‍ಡಿಎಗೆ 8 ಸೀಟುಗಳ ಕೊರತೆ..?

    ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬರುವುದು ಡೌಟ್ ಎನ್ನಲಾಗುತ್ತಿದೆ. ಯಾಕಂದ್ರೆ 2014ರಲ್ಲಿ 282 ಸ್ಥಾನ ಗೆದ್ದಿದ್ದ ಬಿಜೆಪಿಗೆ ಈ ಬಾರಿ 220 ಸ್ಥಾನಗಳು ಸಿಗುವ ಸಾಧ್ಯತೆಗಳಿವೆ ಎಂಬುದಾಗಿ ಸಮೀಕ್ಷೆಗಳು ತಿಳಿಸಿವೆ.

    2014ಕ್ಕೆ ಹೋಲಿಸಿದ್ರೆ 62 ಸ್ಥಾನಗಳು ಖೋತಾವಾಗಲಿದ್ದು ಬಹುಮತಕ್ಕೆ 52 ಸ್ಥಾನಗಳ ಕೊರತೆ ಉಂಟಾಗುತ್ತದೆ. ಸದ್ಯ ಲೋಕಸಭೆಯಲ್ಲಿ 305 ಸ್ಥಾನ ಹೊಂದಿರುವ ಎನ್‍ಡಿಎಗೆ 8 ಸೀಟುಗಳ ಕೊರತೆ ಉಂಟಾಗುವ ಸಾಧ್ಯತೆ ಇದೆ.

    300ರ ಗಡಿ ದಾಟಲು ಮೋದಿ ಮೂರು ದೈತ್ಯ ಪ್ರಾದೇಶಿಕ ಪಕ್ಷಗಳು ಕೈ ಹಿಡಿದರೆ ಬಲಿಷ್ಠ ಸರ್ಕಾರ ರಚನೆಗೆ ಲೆಕ್ಕಾಚಾರ ನಡೆದಿದೆ. ಹೀಗಾಗಿ ಒಡಿಶಾ ಸಿಎಂ ನವೀನ್ ಪಟ್ನಾಯಕ್, ಜಗನ್, ತೆಲಂಗಾಣ ಸಿಎಂ ಕೆಸಿಆರ್ ನತ್ತ  ಮೋದಿ ಚಿತ್ತ ನೆಟ್ಟಿದೆ. ಬಿಜೆಡಿ, ಟಿಆರ್ ಎಸ್, ವೈಎಸ್‍ಆರ್ ಕಾಂಗ್ರೆಸ್ ಬರೋಬ್ಬರಿ 36 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿದ್ದು, ಆಗ ಎನ್‍ಡಿಎ ಬಲಾಬಲ 264+36 = 300 ಸೀಟುಗಳ ಗಡಿದಾಟುವ ನಿರೀಕ್ಷೆ ಇದೆ ಎಂಬುದಾಗಿ ಮೂಲಗಳು ತಿಳಿಸಿವೆ.

    ನಡೆಯುತ್ತಾ ಮೂರರ ಮ್ಯಾಜಿಕ್..?
    ಆಂಧ್ರಪ್ರದೇಶ – ಯುವಜನ ಶ್ರಮಿಕ ರಿತು ಕಾಂಗ್ರೆಸ್ (ವೈಎಸ್‍ಆರ್) – 11( ಗೆಲ್ಲುವ ಸ್ಥಾನ)
    ತೆಲಂಗಾಣ – ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ ಎಸ್) – 16 (ಗೆಲ್ಲುವ ಸ್ಥಾನ)
    ಓಡಿಶಾ – ಬಿಜು ಜನತಾ ದಳ (ಬಿಜೆಡಿ) – 09(ಗೆಲ್ಲುವ ಸ್ಥಾನ)

    ವೈಎಸ್‍ಆರ್‍ಪಿ+ಟಿಆರ್ ಎಸ್+ಬಿಜೆಡಿ – 36
    ಎನ್‍ಡಿಎ ಗೆಲ್ಲಬಹುದಾದ ಸ್ಥಾನಗಳು- 264
    ಒಟ್ಟು – 300


    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಾಲಮನ್ನಾ ಮಾಡದ ಸರ್ಕಾರದ ವಿರುದ್ಧ ಮೋದಿ ಕಿಡಿ – ಬಳ್ಳಾರಿಯಲ್ಲಿ ಅನ್ನದಾತನಿಗೆ ನೋಟಿಸ್ ಮೇಲೆ ನೋಟಿಸ್

    ಸಾಲಮನ್ನಾ ಮಾಡದ ಸರ್ಕಾರದ ವಿರುದ್ಧ ಮೋದಿ ಕಿಡಿ – ಬಳ್ಳಾರಿಯಲ್ಲಿ ಅನ್ನದಾತನಿಗೆ ನೋಟಿಸ್ ಮೇಲೆ ನೋಟಿಸ್

    ಬಳ್ಳಾರಿ: ಬುಧವಾರವಷ್ಟೇ ಕಲಬುರಗಿಯಲ್ಲಿ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಿಎಂ ಕುಮಾರಸ್ವಾಮಿ ಸರ್ಕಾರ ರೈತರ ಸಾಲ ಮನ್ನಾ ಮಾತು ಕೊಟ್ಟು ಮೋಸ ಮಾಡಿದೆ ಅಂತ ಗಂಭೀರ ಆರೋಪ ಮಾಡಿದ್ದರು. ಇತ್ತ, ಬಳ್ಳಾರಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಂದೇ ದಿನ ಮೂರು ನೋಟಿಸ್ ಕೊಟ್ಟಿದ್ದು ರೈತರು ಕಂಗಾಲಾಗಿದ್ದಾರೆ.

    ಸೋಮಸಮುದ್ರದ 150ಕ್ಕೂ ಹೆಚ್ಚು ರೈತರಿಗೆ ಬಡ್ಡಿ ಸಮೇತ ಬೆಳೆ ಸಾಲ ಕಟ್ಟುವಂತೆ ಸೂಚಿಸಿದೆ. ಒಂದು ಕಡೆ ರೈತರಿಗೆ ಬ್ಯಾಂಕುಗಳು ಸಾಲ ಬಾಕಿ ಪಾವತಿ ನೋಟಿಸ್ ನೀಡಬಾರದು ಎಂದು ಸರ್ಕಾರ ಹೇಳಿದ್ದರೆ ಇತ್ತ ಬ್ಯಾಂಕುಗಳು ಮಾತ್ರ ನೋಟಿಸ್ ಕೊಡುತ್ತಲೇ ಇವೆ. ಹೀಗಾಗಿ ಅನ್ನದಾತರಿಗೆ ಏನ್ ಮಾಡೋದು ಅನ್ನೋ ಚಿಂತೆ ಕಾಡ್ತಿದೆ.

    ಬಳ್ಳಾರಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಈ ಬಾರಿ ಭೀಕರ ಬರ ಪರಿಸ್ಥಿತಿ ಆವರಿಸಿದೆ. ಬೆಳೆ ಬೆಳೆಯದಿದ್ದರೂ ರೈತರು ಪಡೆದಿರುವ ಬೆಳೆ ಸಾಲವನ್ನ ಬಡ್ಡಿ ಸಮೇತ ಕಟ್ಟುವಂತೆ ಎಸ್ ಬಿಐ ಬ್ಯಾಂಕ್ ನೋಟಿಸ್ ನೀಡುತ್ತಿದೆ ಎಂದು ರೈತ ಹುಲಗಪ್ಪ ಕಣ್ಣೀರು ಹಾಕಿದ್ದಾರೆ.

    ಒಂದೇ ದಿನಕ್ಕೆ 2-3 ನೋಟಿಸ್..!
    ಸೋಮಸಮುದ್ರ ಗ್ರಾಮದ ಸುಮಾರು 150 ರೈತರಿಗೆ ಎಸ್‍ಬಿಐ ಬ್ಯಾಂಕ್ ಬೆಳೆಸಾಲವನ್ನ ಬಡ್ಡಿ ಸಮೇತ ಕಟ್ಟುವಂತೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ ಸಮಯಾವಕಾಶ ಸಹ ಕೊಡದೇ ಒಂದೇ ದಿನಕ್ಕೆ ಎರಡು ಮೂರು ನೋಟಿಸ್ ಜಾರಿ ಮಾಡಿರುವುದು ರೈತರನ್ನ ಕಂಗಾಲಾಗಿಸಿದೆ.

    ಬರಪೀಡಿತ ಪ್ರದೇಶಗಳ ರೈತರಿಗೆ ಸಾಲ ಕಟ್ಟುವಂತೆ ನೋಟೀಸ್ ಜಾರಿ ಮಾಡಬಾರದು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದ್ರೆ ಬ್ಯಾಂಕ್ ಅಧಿಕಾರಿಗಳು ಮಾತ್ರ ಸರ್ಕಾರದ ಆದೇಶಕ್ಕೆ ಕ್ಯಾರೆ ಎನ್ನದೆ ರೈತರಿಗೆ ಬಡ್ಡಿ ಅಷ್ಟೇ ಅಲ್ಲ ಬೆಳೆ ಸಾಲವನ್ನು ಸಹ ಕಟ್ಟುವಂತೆ ನೋಟಿಸ್ ಜಾರಿ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಜಿಕಲ್ ಬೆನ್ನಲ್ಲೇ ಮೋದಿಯಿಂದ ಕರ್ನಾಟಕದಲ್ಲಿ ಪೊಲಿಟಿಕಲ್ ಸ್ಟ್ರೈಕ್..!

    ಸರ್ಜಿಕಲ್ ಬೆನ್ನಲ್ಲೇ ಮೋದಿಯಿಂದ ಕರ್ನಾಟಕದಲ್ಲಿ ಪೊಲಿಟಿಕಲ್ ಸ್ಟ್ರೈಕ್..!

    – ಮಾಹಿತಿ ತಿಳಿಯುತ್ತಿದ್ದಂತೆ ಸಿಎಂರಿಂದ ಶಾಸಕರ ದಿಢೀರ್ ಭೇಟಿ

    ಬೆಂಗಳೂರು: ಸರ್ಜಿಕಲ್ ಸ್ಟ್ರೈಕ್ ಬೆನ್ನಲ್ಲೇ ಪ್ರಧಾನಿ ಮೋದಿಯಿಂದ ಪೊಲಿಟಿಕಲ್ ಸ್ಟ್ರೈಕ್ ನಡೆದಿದ್ದು, ಈ ಮೂಲಕ ಪ್ರಧಾನಿಯವರು ಖರ್ಗೆ ಜೊತೆ ಮೈತ್ರಿ ಸರ್ಕಾರಕ್ಕೂ ಖೆಡ್ಡಾ ತೋಡೋಕೆ ಮುಂದಾಗಿದ್ದಾರೆಯಾ ಎಂಬ ಪ್ರಶ್ನೆ ಇದೀಗ ಎದ್ದಿದೆ.

    ಹೌದು. ಪ್ರಧಾನಿಯವರೇ ಸದ್ದಿಲ್ಲದೇ ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಬಿಜೆಪಿಗೆ ಉಮೇಶ್ ಜಾಧವ್ ಅವರು ಸೇರ್ಪಡೆಯಾದ ಬೆನ್ನಲ್ಲೇ ಬಿಜೆಪಿ `ಮೌನ ಆಪರೇಷನ್’ ನಡೆಸಿದ್ದು, ನಾಳೆ ಆಪರೇಷನ್ ಕಮಲದ ಬ್ಲೂ ಪ್ರಿಂಟ್ ಕೂಡ ಸಿದ್ಧವಾಗಿತ್ತು. ಹೀಗಾಗಿ ರಾಜ್ಯ ರಾಜಕಾರಣದಲ್ಲಿ ನಾಳೆ ಒಂದಷ್ಟು ಬೆಳವಣಿಗೆಗಳು ನಡೆಯುವುದಿತ್ತು. ಈ ಮಾಹಿತಿ ಸರ್ಕಾರಕ್ಕೆ ಲಭ್ಯವಾಗುತ್ತಿದ್ದಂತೆ ಸಿಎಂ ಕುಮಾರಸ್ವಾಮಿ ಅವರೇ ಅತೃಪ್ತ ಶಾಸಕರ ಜೊತೆ ಮಾತನಾಡಿ ಭಿನ್ನಮತ ಶಮನಕ್ಕೆ ಮುಂದಾಗಿದ್ದಾರೆ.

    ಏನಿದು ಆಪರೇಷನ್ ಬ್ಲೂಪ್ರಿಂಟ್..?
    ಮೂವರು ಕಾಂಗ್ರೆಸ್ ಶಾಸಕರು ನಾಳೆ ರಾಜೀನಾಮೆ ನೀಡಲು ಸಿದ್ಧರಾಗಿದ್ದರು. ಈ ಮೂವರು ಕೂಡ ಉಮೇಶ್ ಜಾಧವ್ ಅವರ ಜೊತೆಗೆ ರಾಜೀನಾಮೆ ನೀಡುವವರಿದ್ದರು. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಬಳ್ಳಾರಿ ಶಾಸಕ ನಾಗೇಂದ್ರ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಕೂಡ ರಾಜೀನಾಮೆ ನೀಡಲು ಪ್ಲಾನ್ ಮಾಡಿದ್ದರು. ಈ ಶಾಸಕರನ್ನು ಸೆಳೆಯಲು ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಆಫರ್ ಕೂಡ ಕೊಟ್ಟಿತ್ತು.

    ರಮೇಶ್ ಜಾರಕಿಹೊಳಿಯವರಿಗೆ ಚಿಕ್ಕೋಡಿಯಿಂದ ಟಿಕೆಟ್ ನೀಡುವ ಭರವಸೆ ಕೊಟ್ರೆ, ಬಳ್ಳಾರಿಯಿಂದ ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್ ಅವರಿಗೆ ಟಿಕೆಟ್ ನೀಡುವುದಾಗಿ ಬಿಜೆಪಿ ಹೇಳಿತ್ತು. ಇದಕ್ಕೆ ಮೂವರು ಶಾಸಕರು ಕೂಡ ಒಪ್ಪಿಗೆ ಸೂಚಿಸಿದ್ದು, ಈ ಮಾತುಕತೆ ಹಿನ್ನೆಲೆಯಲ್ಲಿ ನಾಳೆ ರಾಜೀನಾಮೆ ನೀಡುವ ತೀರ್ಮಾನಕ್ಕೆ ಮುಂದಾಗಿದ್ದರು.

    ಸಿಎಂ ಮನವೊಲಿಕೆ:
    ಈ ಮಾಹಿತಿ ತಿಳಿಯುತಿದ್ದಂತೆಯೇ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಯವರು ಸ್ವತಃ ತಾವೇ ಕಾರ್ಯಾಚರಣೆಗೆ ಇಳಿದಿದ್ದಾರೆ. ಹೀಗಾಗಿ ಕೂಡಲೇ ಸಿಎಂ ಅವರು ದಿಢೀರ್ ಆಗಿ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮೂವರು ಶಾಸಕರನ್ನು ಸಿಎಂ ಮನವೊಲಿಸಿದ್ದಾರೆ. ಲೋಕಸಭಾ ಚುನಾವಣೆ ಕಳೆಯುವವರೆಗೆ ತಾಳ್ಮೆಯಿಂದ ಇರಿ ಎಂದು ಹೇಳಿದ್ದಾರೆ ಎನ್ನಲಾಗಿದೆ.

    ಸಿಎಂ ಮಾತಿಗೆ ಬೆಲೆ ಕೊಟ್ಟು ಶಾಸಕರು ಸುಮ್ಮನಾಗ್ತಾರಾ ಅಥವಾ ಮತ್ತೆ ರಾಜ್ಯದಲ್ಲಿ ಆಪರೇಷನ್ ಕಮಲದ ಅಸಲಿ ಆಟ ಶುರುವಾಗುತ್ತಾ ಎನ್ನುವ ಪ್ರಶ್ನೆ ಎದ್ದಿದ್ದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದರಾಮಯ್ಯ ಮನೆ ಬಾಗಿಲಲ್ಲಿ ಸಿಎಂ ಭಿಕ್ಷುಕ ರೀತಿ ನಿಂತಿದ್ದಾರೆ- ಆರ್. ಅಶೋಕ್

    ಸಿದ್ದರಾಮಯ್ಯ ಮನೆ ಬಾಗಿಲಲ್ಲಿ ಸಿಎಂ ಭಿಕ್ಷುಕ ರೀತಿ ನಿಂತಿದ್ದಾರೆ- ಆರ್. ಅಶೋಕ್

    ಕಲಬುರಗಿ: ಕಾಂಗ್ರೆಸ್ ತೊರೆದು ಉಮೇಶ್ ಜಾಧವ್ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದು ಫಸ್ಟ್ ವಿಕೆಟ್. ಇನ್ನೂ ವಿಕೆಟ್ ಗಳು ಬೀಳುತ್ತವೆ. ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಯವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಬಾಗಿಲಲ್ಲಿ ಭಿಕ್ಷುಕನ ರೀತಿಯಲ್ಲಿ ನಿಂತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ವಾಗ್ದಾಳಿ ನಡೆಸಿದ್ರು.

    ನಗರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕುಮಾರಸ್ವಾಮಿಯವರನ್ನು ನೋಡಿದಾಗ ಯಾರಿಗಾದರೂ ಅವರು ಮುಖ್ಯಮಂತ್ರಿ ಎಂದು ಅನಿಸುತ್ತಿದೆಯಾ ಎಂದು ಪ್ರಶ್ನಿಸಿದ್ರು.

    ನಾಚಿಕೆಯಾಗಬೇಕು ನಿಮಗೆ. ಏರ್ ಸ್ಟ್ರೈಕ್ ಆಗಿದ್ದಕ್ಕೆ ಸಂಭ್ರಮಾಚರಣೆ ಮಾಡುತ್ತಿದ್ರೆ, ಕುಮಾರಸ್ವಾಮಿ ಅವರು ಒಂದು ಸಮುದಾಯಕ್ಕೆ ಅವಮಾನವಾಗುತ್ತೆ ಎಂದು ಹೇಳತ್ತಾರೆ. ದಾಳಿಯಲ್ಲಿ ಸತ್ತ ಉಗ್ರರ ಲೆಕ್ಕ ಕೇಳುವವರು ಪಾಕಿಸ್ತಾನದ ನೆಲೆದಲ್ಲಿ ಬಿಡಬೇಕು ಎಂದು ಸಿಎಂ ವಿರುದ್ಧ ಗರಂ ಆದ್ರು.

    ಮೋದಿ ಅವರ ಎರಡನೆಯ ಸಮಾವೇಶ ಕಲಬುರಗಿಯಲ್ಲಿ ನಡೆಯುತ್ತಿದೆ. ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣವರು ಜನರಿಂದ ನಾವು ಅಧಿಕಾರಕ್ಕೆ ಬಂದಿಲ್ಲ. ಮಾಟ ಮಂತ್ರದಿಂದ ಅಧಿಕಾರಕ್ಕೆ ಬಂದಿದ್ದೀವಿ ಎಂದು ಹೇಳುತ್ತಾರೆ. ಇನ್ನು ಕೆಲವರು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸಾಕ್ಷ್ಯ ಕೇಳ್ತಾರೆ. ಇವರೆಲ್ಲರನ್ನೂ ಪಾಕಿಸ್ತಾನಕ್ಕೆ ಬಿಸಾಡಿ ಬರಬೇಕು ಎಂದು ಅಶೋಕ್ ಕಿಡಿಕಾರಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv