Tag: PM

  • ಕೋವಿಡ್‍ನ 2ನೇ ಡೋಸ್ ಲಸಿಕೆ ಪಡೆದ ಪ್ರಧಾನಿ ಮೋದಿ

    ಕೋವಿಡ್‍ನ 2ನೇ ಡೋಸ್ ಲಸಿಕೆ ಪಡೆದ ಪ್ರಧಾನಿ ಮೋದಿ

    ನವದೆಹಲಿ: ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ತಡೆಗೆ ಲಸಿಕೆ ಹಾಕಿಸಿಕೊಳ್ಳಲಾಗುತ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಎರಡನೇ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ.

    2ನೇ ಡೋಸ್ ಲಸಿಕೆ ಹಾಕಿಸಿಕೊಂಡ ಪ್ರಧಾನಿ, ಯಾರೆಲ್ಲ ಲಸಿಕೆ ಪಡೆದುಕೊಳ್ಳಲಿ ಅವರೆಲ್ಲರೂ ಲಸಿಕೆ ಪಡೆದುಕೊಳ್ಳಿ ಎಂದು ಈ ಬಾರಿಯೂ ಕರೆ ನೀಡಿದ್ದಾರೆ.

    https://twitter.com/narendramodi/status/1379974475278557187

    ಈ ಸಂಬಂಧ ಟ್ವೀಟ್ ಮಾಡಿರುವ ಮೋದಿ, ಇಂದು ಏಮ್ಸ್ ಆಸ್ಪತ್ರೆಯಲ್ಲಿ ಎರಡನೇ ಡೋಸ್ ಕೊರೊನಾ ಲಸಿಕೆಯನ್ನು ಪಡೆದುಕೊಂಡಿದ್ದೇನೆ. ನಮ್ಮಲ್ಲಿರುವ ಕೆಲ ವಿಧಾನಗಳಲ್ಲಿ ಸದ್ಯ ಲಸಿಕೆ ಪಡೆದುಕೊಳ್ಳುವುದೇ ಕೊರೊನಾ ಬರದಂತೆ ತಡೆಗಟ್ಟಲು ಇರುವ ಮಾರ್ಗವಾಗಿದೆ. ಹೀಗಾಗಿ ಯಾರೆಲ್ಲ ಲಸಿಕೆ ಪಡೆದುಕೊಳ್ಳಲು ಅರ್ಹರಿದ್ದೀರೋ ಅವರೆಲ್ಲರೂ ಶೀಘ್ರವೇ ಲಸಿಕೆ ಹಾಕಿಸಿಕೊಳ್ಳಿ ಎಂದು ತಿಳಿಸಿದ್ದಾರೆ.

    ಮೊದಲ ಡೋಸ್ ಅನ್ನು ಪ್ರಧಾನಿ ಮಾರ್ಚ್ 1 ರಂದು ಪಡೆದಿದ್ದರು. ದೆಹಲಿಯ ಆಲ್ ಇಂಡಿಯಾ ಇನ್ಸ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಲ್ಲಿ ಮೋದಿ, ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿದ ಕೊವಾಕ್ಸಿನ್ ಲಸಿಕೆ ಪಡೆದಿದ್ದರು. ಈ ಸಂಬಂಧ ಟ್ವೀಟ್ ಮಾಡಿದ್ದ ಪ್ರಧಾನಿ, ಏಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ -19 ಲಸಿಕೆ ತೆಗೆದುಕೊಂಡಿದ್ದೇನೆ ಎಂದು ತಿಳಿಸಿದ್ದರು.

    ತಾವು ಕೊರೊನಾ ವೈರಸ್ ಲಸಿಕೆ ತೆಗೆದುಕೊಂಡ ನಂತರ ಭಾರತವನ್ನು ಕೋವಿಡ್ ಮುಕ್ತ ದೇಶವನ್ನಾಗಿ ಮಾಡಲು ಎಲ್ಲರೂ ಲಸಿಕೆ ಪಡೆದುಕೊಳ್ಳುವಂತೆ ಮೋದಿ ಮನವಿ ಮಾಡಿದ್ದರು. ಈ ಮೂಲಕ ಎಲ್ಲರೂ ಒಟ್ಟಾಗಿ ನಾವು ಭಾರತವನ್ನು ಕೊರೊನಾದಿಂದ ಮುಕ್ತಗೊಳಿಸೋಣ ಎಂದು ಕರೆ ನೀಡಿದ್ದರು.

  • ಭಾರತದ ಬಗ್ಗೆ ನಮ್ಮವರೇ ವ್ಯಂಗ್ಯವಾಡ್ತಿದ್ದಾರೆ: ಮೋದಿ

    ಭಾರತದ ಬಗ್ಗೆ ನಮ್ಮವರೇ ವ್ಯಂಗ್ಯವಾಡ್ತಿದ್ದಾರೆ: ಮೋದಿ

    ನವದೆಹಲಿ: ದೇಶ ಸಾಕಷ್ಟು ಸವಾಲುಗಳನ್ನು ಎದುರಿಸಿದೆ. ಆದರೆ ಆ ಸವಾಲುಗಳನ್ನು ಎದುರಿಸಿ ಮುನ್ನುಗುತ್ತಿದ್ದೇವೆ. ಹೊಸ ದಶಕದಲ್ಲಿ ಹೊಸ ಆಶಾವಾದ, ಆತ್ಮ ವಿಶ್ವಾಸ ಸೃಷ್ಟಿಯಾಗಿದೆ. ಭಾರತದ ಬಗ್ಗೆ ನಮ್ಮವರೇ ವ್ಯಂಗ್ಯವಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

    ಇಂದು ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರಪತಿ ಭಾಷಣ ಕೇಳಬೇಕಿತ್ತು. ಆದರೆ ಭಾಷಣವೂ ಕೇಳದ ಸಾಕಷ್ಟು ಚರ್ಚೆ ಮಾಡಲಾಗಿದೆ. ಇದು ರಾಷ್ಟ್ರಪತಿ ಭಾಷಣದ ಶಕ್ತಿ. ರಾಷ್ಟ್ರಪತಿ ಭಾಷಣ ಹೊಸ ವಿಶ್ವಾಸ ಮೂಡಿಸಿದೆ. ದೇಶ ಸ್ವಾತಂತ್ರ್ಯಗೊಂಡು 75 ವರ್ಷ ಆಗುತ್ತಿದೆ. ದೇಶದ ಭವಿಷ್ಯಕ್ಕಾಗಿ ನಾವು ಸಿದ್ಧವಾಗುತ್ತಿದೆ. ದೇಶ ಕನಸುಗಳನ್ನು ಈಡೇರಿಸಲು ತಯಾರಿಗುತ್ತಿದ್ದೇವೆ. ಇಡೀ ವಿಶ್ವ ಇಂದು ಭಾರತವನ್ನು ನೋಡುತ್ತಿವೆ. ಭಾರತದ ಮೇಲೆ ವಿಶ್ವಾಸ ಇಟ್ಟಿವೆ ಎಂದರು.

    ಭಾರತ ಅವಕಾಶಗಳ ನೆಲ. ಹೊಸ ದಶಕ ದುರಂತದ ಮಧ್ಯೆ ಆರಂಭವಾಗಿದೆ. ಇಡೀ ಮನುಕುಲ ಸಂಕಷ್ಟದಲ್ಲಿ ಸಿಲುಕಿದೆ. 2047ರ ವೇಳೆ ಗೆ ದೇಶವನ್ನು ಎಲ್ಲಿಗೆ ಕೊಂಡೊಯ್ಯುತ್ತೇವೆ ಎಂಬ ಬಗ್ಗೆ ಯೋಚನೆ ಮಾಡಬೇಕು. ಸಿಗುವ ಅವಕಾಶಗಳನ್ನು ನಾವು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

    ಭಾರತದ ಆತ್ಮ ನಿರ್ಭರದ ಹಾದಿಯಲ್ಲಿ ಸಾಗಿದೆ. ಕೊರೊನಾ ವಿರುದ್ಧದ ಗೆಲುವು ಸರ್ಕಾರಕ್ಕೆ ಸಂಬಂಧಿಸಿದ್ದಲ್ಲ, ಅದು ಜನರ ಗೆಲುವು. ಭಾರತ ತನ್ನ ಪ್ರಜೆಗಳನ್ನು ರಕ್ಷಣೆ ಮಾಡಿದೆ. ಭಾರತದ ಬಗ್ಗೆ ನಮ್ಮವರೇ ವ್ಯಂಗ್ಯವಾಡುತ್ತಿದ್ದಾರೆ. ಕೊರೊನಾ ವೇಳೆ ದೀಪ ಬೆಳಗಿಸಿದ್ದರ ಬಗ್ಗೆ ವ್ಯಂಗ್ಯವಾಡಿದ್ದಾರೆ. ಇದರಿಂದ ದೇಶದ ಜನರ ಮನೋಬಲ ಕುಸಿಯುತ್ತದೆ ಎಂದು ಗರಂ ಆದರು.

    ಪ್ರಜಾಪ್ರಭುತ್ವದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿದೆ. ಧರ್ಮ, ದ್ವೇಷ, ಬೆದರಿಕೆ ತಂತ್ರಗಳಎಂಬ ಮಾತುಗಳ ಪ್ರಯೋಗ ಆಗಿದೆ. 24 ಗಂಟೆಯೂ ಇದನ್ನೇ ಕೇಳುತ್ತಿದ್ದರೆ ಅದೇ ಭಾಸವಾಗುತ್ತದೆ. ನಮ್ಮ ಪ್ರಜಾತಂತ್ರ ರಾಷ್ಟ್ರೀಯ ಸಂರ್ಸತೆ ಅಲ್ಲ, ಮಾನವ ಸಂಸ್ಥೆ ಎಂದು ಬಣ್ಣಿಸಿದರು.

    ಕಡಿಮೆ ಸಮಯದಲ್ಲಿ ವ್ಯಾಕ್ಸಿನ್ ಕಂಡುಹಿಡಿಯಲಾಗಿದೆ. ಇದಕ್ಕೆ ಇಡೀ ದೇಶ ಹೆಮ್ಮೆ ಪಡಬೇಕು. ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಭಾರತದಲ್ಲಿ ನಡೆಯುತ್ತಿದೆ. ಇದು ಭಾರತದ ಸಾಮಾಥ್ರ್ಯವನ್ನು ತೋರಿಸುತ್ತದೆ. ಆರಂಭದಲ್ಲಿ ಕೊರೊನಾ ವ್ಯಾಕ್ಸಿನ್ ಇರಲಿಲ್ಲ. ಯಾವ ಮಾತ್ರೆ ಬಳಸಬೇಕು ಎಂದು ಗೊತ್ತಿರಲಿಲ್ಲ. ಆಗ ಇಡೀ ವಿಶ್ವ ಭಾರತದತ್ತ ನೋಡಿತ್ತು. ಸಂಕಷ್ಟ ಸಂದರ್ಭದಲ್ಲೂ ನಾವು ಹಲವು ದೇಶಗಳಿಗೆ ಔಷಧಿ ಸರಬರಾಜು ಮಾಡಿದ್ದೇವೆ. ಕೊರೊನಾ ಭಾರತದ ಫೆಡರಲ್ ವ್ಯವಸ್ಥೆ ತಾಕತ್ತು ತೋರಿಸಿದೆ. ಸಂಕಷ್ಟ ಸಮಯದಲ್ಲಿ ರಾಜ್ಯ ಸರ್ಕಾರಗಳು ಕೇಂದ್ರದೊಂದಿಗೆ ಕೆಲಸ ಮಾಡಿದೆ. ಈ ಹಿನ್ನೆಲೆ ಎಲ್ಲ ರಾಜ್ಯ ಸರ್ಕಾರಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ಸುಭಾಷ್ ಚಂದ್ರ ಬೋಸ್ 125 ಜನ್ಮ ದಿನ ಆಚರಿಸುತ್ತಿದ್ದೇವೆ. ಆದರೆ ಅವರ ವಿಚಾರ ಮತ್ತು ಆದರ್ಶಗಳನ್ನು ಮರೆತಿದ್ದೇವೆ. ಕೆಲವು ವಾಕ್ಯಗಳನ್ನು ಹಿಡದುಕೊಂಡು ನಾವು ಹೊರಟಿದ್ದೇವೆ. ಭಾರತ ವಿಶ್ವದ ದೊಡ್ಡ ಪ್ರಜಾಪ್ರಭುತ್ವ ಎಂದು ಕೊಚ್ಚಿಕೊಳ್ಳುತ್ತೇವೆ. ಆದರೆ ಭಾರತ ಪ್ರಜಾಪ್ರಭುತ್ವದ ತಾಯಿ ಎನ್ನುವುದು ಮರೆತಿದ್ದೇವೆ ಎಂದು ತಿಳಿಸಿದರು.

  • ಪುತ್ತೂರಿನ ರಾಕೇಶ್ ಕೃಷ್ಣ, ಬೆಂಗ್ಳೂರಿನ ವೀರ್ ಕಶ್ಯಪ್‍ಗೆ ‘ರಾಷ್ಟ್ರೀಯ ಬಾಲ ಪುರಸ್ಕಾರ’ ಪ್ರಶಸ್ತಿ

    ಪುತ್ತೂರಿನ ರಾಕೇಶ್ ಕೃಷ್ಣ, ಬೆಂಗ್ಳೂರಿನ ವೀರ್ ಕಶ್ಯಪ್‍ಗೆ ‘ರಾಷ್ಟ್ರೀಯ ಬಾಲ ಪುರಸ್ಕಾರ’ ಪ್ರಶಸ್ತಿ

    ನವದೆಹಲಿ: ಕರ್ನಾಟಕ ರಾಜ್ಯದ ಇಬ್ಬರು ಮಕ್ಕಳು ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೇಂದ್ರ ಸರ್ಕಾರ ನೀಡುವ 2021ನೇ ಸಾಲಿನ ‘ಪ್ರಧಾನಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರ’ ಪ್ರಶಸ್ತಿಗೆ ಒಟ್ಟು 32 ಮಕ್ಕಳು ಆಯ್ಕೆಯಾಗಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ರಾಕೇಶ್ ಕೃಷ್ಣ ಹಾಗೂ ಬೆಂಗಳೂರಿನ ವೀರ್ ಕಶ್ಯಪ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರಿಬ್ಬರಿಗೂ ಆವಿಸ್ಕಾರ ವಲಯದಲ್ಲಿ ಪುರಸ್ಕಾರ ಲಭಿಸಿದೆ.

    ವೀರ್ ಕಶ್ಯಪ್ ಅವರು ಕೊರೊನಾ ವೈರಸ್ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಹಾವು-ಏಣಿ ಮಾದರಿಯ ‘ಕೊರೊನಾ ಯುಗ’ ಎಂಬ ವಿಶಿಷ್ಠ ಆಟ ಕಂಡುಹಿಡಿದಿದ್ದರು.

    ಸರ್ಕಾರ ಪ್ರತೀ ವರ್ಷ ಬಾಲ ಪ್ರತಿಭೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿಯ ಪದಕ 1 ಲಕ್ಷ ನಗದು ಒಳಗೊಂಡಿದೆ. ವಿಜೇತರೊಂದಿಗೆ ಪ್ರಧಾನಿ ಮೋದಿ ಇಂದು ಮಧ್ಯಾಹ್ನ 12 ಗಂಟೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.

  • ದೇಹದ ಅಂಗಾಂಗ ಮಾರಿ ವಿದ್ಯುತ್ ಬಿಲ್ ಕಟ್ಕೊಳ್ಳಿ- ಮೋದಿಗೆ ಪತ್ರ ಬರೆದು ಯುವಕ ಆತ್ಮಹತ್ಯೆ

    ದೇಹದ ಅಂಗಾಂಗ ಮಾರಿ ವಿದ್ಯುತ್ ಬಿಲ್ ಕಟ್ಕೊಳ್ಳಿ- ಮೋದಿಗೆ ಪತ್ರ ಬರೆದು ಯುವಕ ಆತ್ಮಹತ್ಯೆ

    ಭೋಪಾಲ್: ಯುವಕನೊಬ್ಬ ತನ್ನ ಸಾವಿಗೆ ಕ್ಷುಲ್ಲಕ ಕಾರಣ ಕೊಟ್ಟು ಒಂದು ಪತ್ರದ ಮೂಲಕ ಸುದ್ದಿಯಾಗಿದ್ದಾನೆ. ಕಿರಾಣಿ ಅಂಗಡಿ ನಡೆಸುತ್ತಿದ್ದ ಈತ ವಿದ್ಯುತ್ ಬಿಲ್ ಕಟ್ಟಲಾಗದೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಮಧ್ಯಪ್ರದೇಶ ಛತರ್‍ಪುರದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಮುನೇಂದ್ರ ರಾಜ್‍ಪುತ್ ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಕೊರೊನಾ ಸಂಕಷ್ಟದ ಸಮಯದಲ್ಲಿ ವ್ಯಾಪಾರದಲ್ಲಿ ಕಂಡು ಬಂದ ನಷ್ಟದಿಂದಾಗಿ ಕಳೆದ ಕೆಲ ದಿನಗಳಿಂದ ವಿದ್ಯುತ್ ಬಿಲ್ ಕಟ್ಟಿರಲಿಲ್ಲ. ಇದರಿಂದ ಕಟ್ಟದೆ ಇರುವ ವಿದ್ಯುತ್ ಬಿಲ್‍ನ ಮೊತ್ತ 80,000 ಸಾವಿರ ರೂಪಾಯಿಗೆ ಏರಿತ್ತು. ಹಾಗಾಗಿ ಅಧಿಕಾರಿಗಳು ಬಂದು ವಿದ್ಯುತ್ ನಿಲುಗಡೆಗೊಳಿಸಿದ್ದರು. ಇದರಿಂದ ಯುವಕನ ಅಂಗಡಿ ಮುಚ್ಚಲ್ಪಟ್ಟಿತ್ತು.

    ತನ್ನ ಅಂಗಡಿ ಮುಚ್ಚಿದಿದ್ದರಿಂದ ಅವಮಾನವನ್ನು ಸಹಿಸಲಾಗದೆ ಯುವಕ ಮೋದಿಯವರಿಗೆ ಏಳು ಪುಟಗಳ ಡೇತ್ ನೋಟ್ ಬರೆದಿಟ್ಟು ಕಾರ್ಖಾನೆ ಪಕ್ಕದಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈತ ಡೇತ್ ನೋಟ್‍ನಲ್ಲಿ ತಿಳಿಸಿರುವಂತೆ ಮೋದಿಯವರೇ ನಾನು ನಿಮ್ಮ ಮೇಲೆ ಅಪಾರವಾದ ಪ್ರೀತಿ ಹಾಗೂ ಗೌರವನ್ನು ಹೊಂದಿದ್ದೇನೆ. ಆದರೆ ಆಡಳಿತದಲ್ಲಿರುವ ಕೆಳಹಂತದ ಅಧಿಕಾರಿಗಳು ಬಡವರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ನಾನು ವಿದ್ಯುತ್ ನಿಗಮ ನೀಡುತ್ತಿದ್ದ ಹಿಂಸೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ದೇಹದ ಅಂಗಾಂಗಗಳನ್ನು ಮಾರಾಟ ಮಾಡಿ ಅವರ ಬಿಲ್ ಪೂರೈಸಿಕೊಳ್ಳುವಂತೆ ಪತ್ರದಲ್ಲಿ ಬರೆದುಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ಯುವಕನ ಸಹೋದರ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ವೀಡಿಯೋ: ಮಾಸ್ಕ್ ಬೇಡವೆಂದ ಪ್ರಧಾನಿ ಮೋದಿಯನ್ನು ಟ್ರೋಲ್ ಮಾಡಿದ ಆಪ್

    ವೀಡಿಯೋ: ಮಾಸ್ಕ್ ಬೇಡವೆಂದ ಪ್ರಧಾನಿ ಮೋದಿಯನ್ನು ಟ್ರೋಲ್ ಮಾಡಿದ ಆಪ್

    ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಒಂದನ್ನು ಹಾಕುವ ಮೂಲಕ ಪ್ರಧಾನಿ ನರೇಂದ್ರ ಮೋದಿಯನ್ನು ಆಮ್ ಆದ್ಮಿ ಪಕ್ಷದವರು ಟ್ರೋಲ್ ಮಾಡಿದ್ದಾರೆ.

    ವೀಡಿಯೋ ಟ್ವೀಟ್ ಮಾಡಿರುವ ಎಎಪಿ, ಮೋದಿಯಂತೆ ಮಾಡಬೇಡಿ ಮಾಸ್ಕ್ ಧರಿಸಿ ಎಂಬ ಸಂದೇಶ ರವಾನಿಸಿದ್ದಾರೆ. ಈ ವೀಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಮೋದಿ ಪರ ಹಾಗೂ ವಿರೋಧ ಕಾಮೆಂಟ್ ಗಳು ಬರುತ್ತಿವೆ.

    ವೀಡಿಯೋದಲ್ಲಿ ಕರಕುಶಲ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿರುವ ಸ್ಟಾಲ್ ಗೆ ಮೋದಿ ಬಂದಿದ್ದಾರೆ. ಮೋದಿ ಸ್ಟಾಲ್ ಗೆ ಎಂಟ್ರಿ ಕೊಡುತ್ತಿದ್ದಂತೆಯೇ ಅವರು ಮಾಸ್ಕ್ ಧರಿಸದೇ ಇರುವುದನ್ನು ಮನಗಂಡ ಸ್ಟಾಲ್ ನವರು ಮಾಸ್ಕ್ ನೀಡಿದ್ದಾರೆ. ಈ ವೇಳೆ ಪ್ರಧಾನಿ ಬೇಡ ಬೇಡ ಎಂದು ಹೇಳಿ ಮುಂದೆ ಸಾಗಿದ್ದಾರೆ. ಇದನ್ನು ಸ್ಟಾಲ್ ನವರು ತಮ್ಮ ಮೊಬೈಲ್ ನಲ್ಲಿ ವೀಡಿಯೋ ಮಾಡಿಕೊಂಡಿದ್ದಾರೆ. ನಂತರ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

    ಈ ವೀಡಿಯೋವನ್ನು ಎಎಪಿ ಪಕ್ಷದವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಪ್ರಧಾನಿಯನ್ನು ಅಪಹಾಸ್ಯ ಮಾಡುವ ಮೂಲಕ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಿದ್ದಾರೆ.

  • ಅಟಲ್ ಸುರಂಗ ಮಾರ್ಗ ಲೋಕಾರ್ಪಣೆ ಮಾಡಿದ್ರು ಪ್ರಧಾನಿ ಮೋದಿ

    ಅಟಲ್ ಸುರಂಗ ಮಾರ್ಗ ಲೋಕಾರ್ಪಣೆ ಮಾಡಿದ್ರು ಪ್ರಧಾನಿ ಮೋದಿ

    ಶಿಮ್ಲಾ: ವಿಶ್ವದ ಅತೀ ಎತ್ತರ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ 9.2 ಕಿ.ಮೀ ಉದ್ದದ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದ್ದಾರೆ.

    ಇಂದು ಬೆಳಗ್ಗೆ ಚಂಡೀಗಢ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿಯವರು, ಬೆಳಗ್ಗೆ 10.15ರ ಸುಮಾರಿಗೆ ಹಿಮಾಚಲಪ್ರದೇಶದ ರೋಹ್ಟಂಗ್ ನಲ್ಲಿರುವ ಸುರಂಗ ಮಾರ್ಗವನ್ನು ಉದ್ಘಾಟನೆ ಮಾಡಿದರು. ಪ್ರಧಾನಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತಿತರ ಗಣ್ಯರು ಈ ವೇಳೆ ಸಾಥ್ ನೀಡಿದರು. ಮನಾಲಿ- ಲೇಹ್ ನಡುವೆ ಈ ಸುರಂಗ ಮಾರ್ಗ ಇದಾಗಿದ್ದು, ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೊರೊನಾ ಮುನ್ನೆಚ್ಚರಿಕೆಯಾಗಿ ವೇದಿಕೆಯ ಸುತ್ತಮುತ್ತ ಸ್ಯಾನಿಟೈಸ್ ಮಾಡಲಾಗಿತ್ತು. ಅಲ್ಲದೆ ಸ್ಥಳದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

    ಮನಾಲಿಯ ದಕ್ಷಿಣ ತುದಿಯಲ್ಲಿರುವ ಈ ಅಟಲ್ ಸುರಂಗ ಹೆದ್ದಾರಿಯೂ ವಿಶ್ವದಲ್ಲಿಯೇ ಅತಿ ಉದ್ದದ ಹೆದ್ದಾರಿ ಮಾರ್ಗವಾಗಿದ್ದು, 9.02 ಕಿ.ಮೀ ಉದ್ದದ ಈ ಸುರಂಗ ಮನಾಲಿಯಿಂದ ಲಹೌಲ್ ಸ್ಪಿತಿ ಕಣಿಯನ್ನು ವರ್ಷವಿಡೀ ಸಂಪರ್ಕಿಸಲಿದೆ. ಇದಕ್ಕೂ ಮುನ್ನ ಭಾರೀ ಹಿಮಪಾತದ ಕಾರಣ 6 ತಿಂಗಳುಗಳ ಕಾಲ ಮಾತ್ರ ಕಣಿವೆಯ ಸಂಪರ್ಕ ಕಡಿತವಾಗುತ್ತಿತ್ತು. ಈ ಸುರಂಗ ಮಾರ್ಗವು ಮನಾಲಿ ಮತ್ತು ಲೆಹ್ ನಡುವಿನ ಅಂತರವನ್ನು 46 ಕಿ.ಮೀ. ತಗ್ಗಿಸಲಿದ್ದು, 4ರಿಂದ 5 ಗಂಟೆಗಳ ಸಮಯ ಉಳಿತಾಯವಾಗಲಿದೆ.

    ಹಿಮಾಲಯದ ಪಿರ್ ಪಂಜಾಲ್ ಶ್ರೇಣಿಯಲ್ಲಿ ಅತ್ಯಾಧುನಿಕ ವಿಶೇಷಣ (ಅಲ್ಟ್ರಾ ಮಾಡರ್ನ್ ಸ್ಪೆಸಿಫಿಕೇಷನ್ಸ್) ಗಳೊಂದಿಗೆ ನಿರ್ಮಿಸಲಾಗಿದ್ದು, ಇದನ್ನು ಸಮುದ್ರ ಮಟ್ಟದಿಂದ ಸರಾಸರಿ 3,000 ಮೀಟರ್ (10,000 ಅಡಿ) ಎತ್ತರದಲ್ಲಿ ನಿರ್ಮಿಸಲಾಗಿದೆ. ಅಟಲ್ ಸುರಂಗದ ದಕ್ಷಿಣ ಭಾಗದಲ್ಲಿ ಮನಾಲಿಯಿಂದ 25 ಕಿ.ಮೀ. ದೂರದಲ್ಲಿ, 3,060 ಮೀಟರ್ ಎತ್ತರದಲ್ಲಿದೆ. ಉತ್ತರದ ಭಾಗದ ಸುರಂಗವು ಲಹೌಲ್ ಕಣಿವೆಯ ಸಿಸ್ಸು, ತೆಲಿಂಗ್ ಗ್ರಾಮದ ಬಳಿಯಿದ್ದು, 3,071 ಮೀಟರ್ ಎತ್ತರದಲ್ಲಿದೆ. ಇದು ಕುದುರೆಯ ಲಾಳದ ಆಕಾರದಲ್ಲಿರುವ, ದ್ವಿಪಥ ಮಾರ್ಗದ ಸುರಂಗವಾಗಿದ್ದು, 8 ಮೀಟರ್ ರಸ್ತೆ ಮಾರ್ಗವನ್ನು ಒಳಗೊಂಡಿದೆ.

    ಸುರಂಗದಲ್ಲಿ 5.525 ಮೀಟರ್ ಎತ್ತರದವರೆಗಿನ ವಾಹನಗಳ ಓಡಾಟಕ್ಕೆ ಅವಕಾಶವಿದೆ. ಸುರಂಗ 10.5 ಮೀಟರ್ ಅಗಲವಿದ್ದು, ಮುಖ್ಯ ಸುರಂಗದಲ್ಲಿ 3.6 x 2.25 ಮೀಟರ್ ಅಗ್ನಿನಿರೋಧಕ ತುರ್ತು ನಿರ್ಗಮನದ ಸುರಂಗವನ್ನೂ ಒಳಗೊಂಡಿದೆ. ಈ ಮಾರ್ಗದಲ್ಲಿ ನಿತ್ಯ 3,000 ಕಾರುಗಳು ಮತ್ತು 1,500 ಟ್ರಕ್ ಗಳು ಗರಿಷ್ಠ ಗಂಟೆಗೆ 80 ಕಿ.ಮೀ. ವೇಗದಲ್ಲಿ ಸಂಚಾರ ನಡೆಸಲು ಅವಕಾಶವಿರುವಂತೆ ನಿರ್ಮಾಣ ಮಾಡಲಾಗಿದೆ.

    ಸುರಂಗ ಮಾರ್ಗವೂ ಸುಸಜ್ಜಿತ ಎಲೆಕ್ಟ್ರೋ ಮೆಕ್ಯಾನಿಕಲ್ ವ್ಯವಸ್ಥೆ ಹೊಂದಿದ್ದು, ಇದರಲ್ಲಿ ಸೆಮಿ ಟ್ರಾನ್ಸ್ ವರ್ಸ್ ವಾತಾಯಣ ವ್ಯವಸ್ಥೆ, ಎಸ್.ಸಿ.ಎ.ಡಿ.ಎ. ನಿಯಂತ್ರಿತ ಅಗ್ನಿಶಾಮಕ ಹೋರಾಟ ವ್ಯವಸ್ಥೆ, ಪ್ರಕಾಶಮಾನ ಬೆಳಕು ಮತ್ತು ಸಿಸಿಟಿವಿ ನಿಗಾ ವ್ಯವಸ್ಥೆಯೂ ಸೇರಿದೆ.

    ಅಟಲ್ ಸುರಂಗ ವೈಶಿಷ್ಟ್ಯಗಳು:
    ಸುರಂಗದ ಎರಡೂ ಬದಿಗಳಲ್ಲಿ ಪ್ರವೇಶ ನಿರ್ಬಂಧ. ತುರ್ತು ಸಂವಹನಕ್ಕಾಗಿ ಪ್ರತಿ 150 ಮೀಟರಿಗೊಂದರಂತೆ ದೂರವಾಣಿ ಸಂಪರ್ಕ ಸೇವೆ. ಪ್ರತಿ 60 ಮೀಟರಿಗೊಂದರಂತೆ ಅಗ್ನಿಶಾಮಕ ವ್ಯವಸ್ಥೆ. ಪ್ರತಿ 250 ಮೀಟರ್ ಗೆ ಒಂದರಂತೆ ಸಿಸಿಟಿವಿ ಕ್ಯಾಮೆರಾಗಳೊಂದಿಗೆ ಘಟನೆಯ ಸ್ವಯಂ ಪತ್ತೆ ವ್ಯವಸ್ಥೆ. ಪ್ರತಿ 1 ಕಿ.ಮೀನಲ್ಲಿ ವಾಯು ಗುಣಮಟ್ಟದ ನಿಗಾ. ಪ್ರತಿ 25 ಮೀಟರ್ ನಲ್ಲಿ ಸ್ಥಳಾಂತರಿಸಬಹುದಾದ ದೀಪ/ನಿರ್ಗಮನ ಚಿಹ್ನೆಗಳು. ಸುರಂಗದುದ್ದಕ್ಕೂ ಬೆಳಕಿನ ವ್ಯವಸ್ಥೆ. ಪ್ರತಿ 50 ಮೀಟರ್ ನಲ್ಲಿ ಫೈರ್ ರೇಟೆಡ್ ಡ್ಯಾಂಪರ್ ಗಳು. ಪ್ರತಿ 60 ಮೀಟರ್ ಗೆ ಒಂದು ಕ್ಯಾಮೆರಾ ಹೊಂದಿದೆ.

    2000ರ ಜೂನ್ 03 ರಂದು ದಿವಂಗತ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಸುರಂಗ ಮಾರ್ಗ ನಿರ್ಮಿಸುವ ಯೋಜನೆ ಮಾಡಲಾಗಿತ್ತು. ಇದರಂತೆ 2002ರ ಮೇ 26ರಂದು ಸುರಂಗದ ದಕ್ಷಿಣ ಭಾಗದ ಪ್ರವೇಶ ರಸ್ತೆಗೆ ಅಡಿಪಾಯ ಹಾಕಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ 2019ರ ಡಿಸೆಂಬರ್ 24ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರೋಹ್ಟಂಗ್ ಸುರಂಗಕ್ಕೆ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಹೆಸರು ನೀಡಿ ಅವರಿಗೆ ಗೌರವ ಸಲ್ಲಿಸಲು ನಿರ್ಧರಿಸಲಾಯಿತು.

  • ಪರೀಕ್ಷಾ ಪೆ ಚರ್ಚಾ- ಪ್ರಧಾನಿ ಜೊತೆ ಬಾಗಲಕೋಟೆ ಕುವರಿ ಸಂವಾದ

    ಪರೀಕ್ಷಾ ಪೆ ಚರ್ಚಾ- ಪ್ರಧಾನಿ ಜೊತೆ ಬಾಗಲಕೋಟೆ ಕುವರಿ ಸಂವಾದ

    ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗಿನ ಪರೀಕ್ಷಾ ಪೆ ಚರ್ಚಾ ಸಂವಾದಕ್ಕೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ತಾರಿವಾಳ ಗ್ರಾಮದ ಬಾಲಕಿ ಆಯ್ಕೆಯಾಗಿದ್ದಾಳೆ.

    ಜಂಬಲದಿನ್ನಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಆಗಿರುವ ತಾರಿವಾಳ ಗ್ರಾಮದ ಪೂರ್ಣಿಮಾ ರೇವಣಸಿದ್ದಪ್ಪ ನಾಶಿ ದೆಹಲಿಯಲ್ಲಿ ಪ್ರಧಾನಿ ಮೋದಿ ಜೊತೆ ನಡೆಯಲಿರುವ ಸಂವಾದಕ್ಕೆ ಸೆಲೆಕ್ಟ್ ಆಗಿದ್ದಾಳೆ.

    ಆನ್ ಲೈನ್ ನಲ್ಲಿ ಪೂರ್ಣಿಮಾ ಎಕ್ಸಾಮಿಂಗ್ ಎಕ್ಸಾಂ ವಿಷಯದ ಬಗ್ಗೆ ಪೂರ್ಣಿಮಾ ಪ್ರಬಂಧ ಬರೆದಿದ್ದಳು. ಇದೀಗ ಪ್ರಧಾನಿ ಮೋದಿ ಅವರ ಜೊತೆ ಜನವರಿ 20ರಂದು ದೆಹಲಿಯಲ್ಲಿ ನಡೆಯುವ ಸಂವಾದಕ್ಕೆ ಆಯ್ಕೆಯಾಗಿದ್ದಾಳೆ. ಈ ಮೂಲಕ ಚಿಕ್ಕ ಗ್ರಾಮದ ಸರ್ಕಾರಿ ಶಾಲೆಯ ಬಾಲಕಿ ಪ್ರಧಾನಿ ಜೊತೆ ಸಂವಾದದಲ್ಲಿ ಭಾಗವಹಿಸುವ ಅವಕಾಶ ದೊರೆತಂತಾಗಿದೆ.

    ಜನವರಿ 16 ರಂದು ವರದಿ ಮಾಡಿಕೊಳ್ಳುವಂತೆ ಕರ್ನಾಟಕ ಸಮಗ್ರ ಶಿಕ್ಷಣ ಅಧಿಕಾರಿ ಬಾಲಕಿ ಶಾಲೆಯ ಮುಖ್ಯಗುರುಗಳಿಗೆ ಮಾಹಿತಿ ರವಾನಿಸಿದ್ದಾರೆ. ಬಾಲಕಿ ಬಗ್ಗೆ ಮಾಹಿತಿ ತುಂಬಿ ಇ-ಮೇಲ್ ಮಾಡುವಂತೆ ಸೂಚಿಸಿದ್ದಾರೆ. ಪ್ರಧಾನಿ ಮೋದಿ ಜೊತೆ ಸಂವಾದದಲ್ಲಿ ಭಾಗವಹಿಸುತ್ತಿರುವ ಪೂರ್ಣಿಮಾ ಪೋಷಕರು, ಶಾಲಾ ಶಿಕ್ಷಕರು ಹಾಗೂ ಗ್ರಾಮಸ್ಥರಲ್ಲಿ ಹರ್ಷ ಉಂಟು ಮಾಡಿದೆ.

  • ನಾಳೆ ತುಮಕೂರಿಗೆ ಮೋದಿ – ರೈತರಿಂದ ವಿರೋಧ

    ನಾಳೆ ತುಮಕೂರಿಗೆ ಮೋದಿ – ರೈತರಿಂದ ವಿರೋಧ

    ಬೆಂಗಳೂರು: ಕಿಸಾನ್ ಸಮ್ಮಾನ್ ಯೋಜನೆ ಅನುಷ್ಠಾನ ಹಾಗೂ ಕೃಷಿ ಕರ್ಮಣ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಗುರುವಾರ ಆಗಮಿಸಲಿರುವ ಪ್ರಧಾನಿ ಮೋದಿಗೆ ತುಮಕೂರಿನಲ್ಲಿ ರೈತರ ವಿರೋಧದ ಬಿಸಿ ತಟ್ಟಲಿದೆ.

    ಡಾ ಸ್ವಾಮಿನಾಥನ್ ವರದಿ ಅನುಷ್ಠಾನಕ್ಕೆ ವಿಳಂಬ ನೀತಿ ಅನುಸರಿಸುತ್ತಿರುವ ಮೋದಿ ಸರ್ಕಾರದ ನಡೆ ಖಂಡಿಸಿ ನಾಳೆಯ ಪ್ರಧಾನಿ ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಕಪ್ಪುಬಟ್ಟೆ ಧರಿಸಿ ಪ್ರತಿಭಟನೆಗೆ ನಿರ್ಧರಿಸಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕೋಡಿಹಳ್ಳಿ, ಪ್ರಧಾನಿ ಮೋದಿ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಘೋಷಿದಂತೆ ರೈತ ಪರ ಕಾರ್ಯಕ್ರಮವನ್ನು ಮಾಡಿಲ್ಲ. ಕಾರ್ಪೋರೇಟ್ ಕುಳಗಳ ಪರಮಿಡಿಯುವ ಮೋದಿ ಮನಸು ರೈತರಿಗಾಗಿ ಎಂದೂ ಮಿಡಿದಿಲ್ಲ. ರೈತ ಪರ ಕಾರ್ಯಕ್ರಮ, ರೈತ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆಯ ಭರವಸೆ ಯಾವುದು ಅನುಷ್ಠಾನವಾಗಿಲ್ಲ ಅಂತ  ಕಿಡಿಕಾರಿದ್ರು.

    ನಾಳೆ ಮೋದಿ ಕಾರ್ಯಕ್ರಮದಲ್ಲಿ ಜೈಕಾರವಾಗಲಿ ದಿಕ್ಕಾರವಾಗಲಿ ನಾವು ಕೂಗಲ್ಲ. ಸುಮಾರು 500 ಮಂದಿ ರೈತರು ಡಿಸಿ ಕಚೇರಿಯಿಂದ ಜಾಥಾ ಹೊರಟು ಕಪ್ಪು ಬಟ್ಟೆ ಧರಿಸಿ ನಮ್ಮ ಮನವಿಯನ್ನು ಶಾಂತಿಯುತವಾಗಿ ಪ್ರಧಾನಿಗೆ ತಲುಪಿಸುತ್ತೇವೆ. ಪೊಲೀಸರು ನಮ್ಮ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದ್ರು ನಾವು ಧೃತಿಗೆಡಲ್ಲ ಎಂದು ತಿಳಿಸಿದರು.

  • ಹಿ ಇಸ್ ನಥಿಂಗ್ ಬಟ್ ಹಿಟ್ಲರ್, ದೇಶವನ್ನ ಉದ್ಧಾರ ಮಾಡಲು ಬಂದಿರುವ ಪ್ರಧಾನಿ ಮೋದಿಯಲ್ಲ: ಎಚ್‍ಡಿಕೆ

    ಹಿ ಇಸ್ ನಥಿಂಗ್ ಬಟ್ ಹಿಟ್ಲರ್, ದೇಶವನ್ನ ಉದ್ಧಾರ ಮಾಡಲು ಬಂದಿರುವ ಪ್ರಧಾನಿ ಮೋದಿಯಲ್ಲ: ಎಚ್‍ಡಿಕೆ

    ರಾಮನಗರ: ಅಡಾಲ್ಫ್ ಹಿಟ್ಲರ್ ನ ಮಾತು ಕೇಳಿದ್ದೀರಾ, ಅಂದು ಹಿಟ್ಲರ್ ಹೇಳಿದ್ದ ಮಾತುಗಳನ್ನೇ ರಾಮ್‍ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ಹಿ ಇಸ್ ನಥಿಂಗ್ ಬಟ್ ಹಿಟ್ಲರ್, ದೇಶವನ್ನು ಉದ್ಧಾರ ಮಾಡಲಿಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲ. ಕೇಂದ್ರದಲ್ಲಿ ಮೆಜಾರಿಟಿ ಇದೆ ಎಂದು ಅವರು ದೇಶವನ್ನು ಎಲ್ಲಿಗೆ ತೆಗೆದುಕೊಂಡು ಹೋಗ್ತಿದ್ದಾರೆ ಎಂದು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿಯವರು ರಾಮನಗರದಲ್ಲಿ ತಿಳಿಸಿದ್ದಾರೆ.

    ಸ್ವಕ್ಷೇತ್ರ ಚನ್ನಪಟ್ಟಣಕ್ಕೆ ಆಗಮಿಸಿದ್ದ ಅವರು ಹಲವು ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದರು.

    ಪೌರತ್ವ ಕಾಯ್ದೆ ತಿದ್ದುಪಡಿ ವಿಚಾರವಾಗಿ ಈ ಹಿಂದೆಯೇ ವಾಜಪೇಯಿರವರು 2003ರಲ್ಲಿ ಆಡಳಿತ ನಡೆಸುವ ವೇಳೆ ಬಿಲ್‍ವೊಂದನ್ನು ತಂದಿದ್ದರು. ಅದರ ಮುಂದುವರಿದ ಭಾಗವಾಗಿ ಇದೀಗ ಎನ್‍ಆರ್ ಸಿ, ಸಿಎಎ, ಸಿಎಬಿ ತರುತ್ತಿದ್ದಾರೆ.

    ಮುಸ್ಲಿಮರನ್ನು ದೇಶದಿಂದ ಹೊರ ಹಾಕಲು ಈ ಕೆಲಸ ಮಾಡಲಾಗುತ್ತಿದೆ. ಈ ಬಗ್ಗೆ ಹಿಂದೂ ಸಮಾಜದವರು ಕೇಕೆ ಹಾಕಿ ನಗುವುದಲ್ಲ, ಮುಂದಿನ ದಿನ ನಿಮ್ಮ ಮನೆ ಮುಂದೆಯೂ ಮೋದಿ, ಅಮಿತ್ ಶಾ ಬರ್ತಾರೆ ಎಂದು ತಿಳಿಸಿದರು. ವಂಶಾವಳಿ, ಗುರುತು, ಪೂರ್ವಿಕರ ಮಾಹಿತಿಯನ್ನು ನಾನು ಕೊಡಬೇಕು ನಮ್ಮಪ್ಪನೂ ಕೊಡಬೇಕು, ಎಲ್ಲರೂ ಕೊಡಬೇಕಾಗುತ್ತೆ. ಆದರೆ ಎರಡ್ಮೂರು ತಲೆ ಮಾರಿನ ಮಾಹಿತಿ ಎಲ್ಲಿಂದ ತರುವುದು, ಎಲ್ಲಿಂದ ಅವರಿಗೆ ಕೊಡ್ತೀರಿ ಎಂದು ಪ್ರಶ್ನಿಸಿದರು.

    ಈ ಹಿಂದೆ ಜರ್ಮನಿಯ ಅಡಾಲ್ಫ್ ಹಿಟ್ಲರ್ ಯಾವ ರೀತಿ ಅಧಿಕಾರ ನಡೆಸುತ್ತಾ ಮಾತನಾಡುತ್ತಿದ್ದನೋ ಅದೇ ರೀತಿ ರಾಮ್ ಲೀಲಾ ಮೈದಾನದಲ್ಲಿ ಅದೇ ಹಿಟ್ಲರ್ ನ  ಮಾತುಗಳನ್ನು ಮೋದಿ ಪುನರುಚ್ಚರಿಸಿದ್ದಾರೆ ಎಂದು ತಿಳಿಸಿದರು.

    ಮಂಗಳೂರು ಗಲಭೆಯಲ್ಲಿ ಸತ್ತವರ ಕುಟುಂಬಕ್ಕೆ ಯಾಕೆ 10 ಲಕ್ಷ ಪರಿಹಾರ ಹೇಳಿದ್ರಿ ಸಿಎಂ ರವರೇ. ಅವರು ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಪೊಲೀಸರ ವಿರುದ್ಧ ಹಲ್ಲೆ ಮಾಡಲು ಹೋದವರು ನಮಗೆ ಖಚಿತ ಮಾಹಿತಿ ಇದೆ ಎಂದು ಹೇಳುತ್ತೀರಿ. ಪರಿಹಾರವನ್ನು ಯಾಕೆ ಕೊಟ್ರಿ ಜೀವದ ಜೊತೆ ಚೆಲ್ಲಾಟವಾಡಲಿಕ್ಕೆ ಸರ್ಕಾರ ನಡೆಸ್ತಿದ್ದೀರಾ ಎಂದು ಪ್ರಶ್ನಿಸಿದರು. ಗಲಭೆ ವಿಚಾರವಾಗಿ 10 ನಿಮಿಷದಲ್ಲಿ ಕಾಟಾಚಾರದ ಮೀಟಿಂಗ್ ಮಾಡ್ತೀರಿ. ರಾಜ್ಯದ ಸಿಎಂ ಆಗಿರುವ ನೀವು ಒಂದು ಸಮಾಜದ ಸಿಎಂ ಅಲ್ಲ ನೀವು ಎಂದು ತಿಳಿಸಿದರು.

  • ಜಿಡಿಪಿ ದರ ಶೇ.4.5ಕ್ಕೆ ಕುಸಿತ- 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಕನಸು ಕಂಡ ಮೋದಿ ಸರ್ಕಾರಕ್ಕೆ ಶಾಕ್

    ಜಿಡಿಪಿ ದರ ಶೇ.4.5ಕ್ಕೆ ಕುಸಿತ- 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಕನಸು ಕಂಡ ಮೋದಿ ಸರ್ಕಾರಕ್ಕೆ ಶಾಕ್

    ನವದೆಹಲಿ: 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಮಾಡುತ್ತೇವೆ ಎನ್ನುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಶಾಕ್ ಮೇಲೆ ಶಾಕ್ ಆಗುತ್ತಿದೆ. ಇವತ್ತು ಪ್ರಕಟವಾಗಿರುವ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಜುಲೈ-ಸೆಪ್ಟೆಂಬರ್‍ನ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ದರ ಶೇ.4.5ಕ್ಕೆ ಕುಸಿದಿದೆ.

    ಪ್ರಸ್ತುತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಶೇ.4.5 ನಷ್ಟಿದೆ. ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ.5ರಷ್ಟಿತ್ತು. ಆದರೆ, ಈ ತ್ರೈಮಾಸಿಕದಲ್ಲಿ ಶೇ.0.5ರಷ್ಟು ಜಿಡಿಪಿ ಕುಸಿದಿದೆ. ಕಳೆದ 6 ವರ್ಷಗಳಲ್ಲೇ ಅತ್ಯಂತ ಗಂಭೀರವಾಗಿ ಪಾತಾಳಕ್ಕಿಳಿದಿದ್ದು ಆತಂಕ ಹೆಚ್ಚಿಸಿದೆ.

    ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.7ರಷ್ಟು ಜಿಡಿಪಿ ದರ ದಾಖಲಾಗಿತ್ತು. ಕಲ್ಲಿದ್ದಲು, ಗಣಿ, ವಿದ್ಯುತ್, ಸಿಮೆಂಟ್, ಸೇವಾ ವಲಯದಲ್ಲಿ ಕ್ಷೇತ್ರಗಳು ಗರಿಷ್ಠ ಇಳಿಮುಖವಾಗಿವೆ. ಕಳೆದ 2 ವರ್ಷಗಳಿಂದ ಸತತವಾಗಿಯೇ ಜಿಡಿಪಿ ದರ ಕುಸಿಯುತ್ತಲೇ ಇದೆ. ದೇಶದ ಆರ್ಥಿಕತೆ ಶೇ.5ಕ್ಕಿಂತ ಕುಸಿದಿರುವುದು 2013ರ ಜನವರಿ-ಮಾಚ್ ನಂತರ ಇದೇ ಮೊದಲು.

    2013ರ ಜನವರಿಯಿಂದ ಮಾರ್ಚ್ ಅವಧಿಯ ತೃತೀಯ ತ್ರೈಮಾಸಿಕದಲ್ಲಿ ಜಿಡಿಪಿ ಶೇ.4.3ರಷ್ಟಿತ್ತು. ಕೇಂದ್ರದಲ್ಲಿ ಎರಡನೇ ಅವರಿಗೆ ಮೋದಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದಾಗ ಆರ್ಥಿಕ ಉತ್ತೇಜನಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೆಲ ಸೂತ್ರಗಳನ್ನು ಪ್ರಕಟಿಸಿದ್ದರು. ಆದರೂ ಆರ್ಥಿಕತೆ ಕುಗ್ಗುತ್ತಲೇ ಹೋಗುತ್ತಿದೆ. ಮೊನ್ನೆಯಷ್ಟೇ ರಾಜ್ಯಸಭೆಯಲ್ಲಿ ಮಾತನಾಡಿದ್ದ ನಿರ್ಮಲಾ ಸೀತಾರಾಮನ್ ಅವರು, ದೇಶದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ನಿಜ. ಆದರೆ ಆರ್ಥಿಕ ಹಿಂಜರಿತವಾಗಿಲ್ಲ ಎಂದಿದ್ದರು.

    ಜಿಡಿಪಿ ಕುಸಿತದ ಬಗ್ಗೆ ಅನೇಕ ಅರ್ಥಶಾಸ್ತ್ರಜ್ಞರು, ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ. ಜಿಡಿಪಿ ವರದಿ ಪ್ರಕಟವಾಗುತ್ತಿದ್ದಂತೆ ನೆಟ್ಟಿಗರು ತಮ್ಮದೆ ರೀತಿಯಲ್ಲಿ ಕಮೆಂಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ವಾರ್ಷಿಕ ಜಿಡಿಪಿ ದರ ಎಷ್ಟಿತ್ತು?
    2014-15 – 7.4 %
    2015-16 – 8 %
    2016-17 – 8.1 %
    2017-18 – 7.2 %
    2018-19 – 6.9 %
    2019-20 – 5 %(ಮೊದಲ ತ್ರೈಮಾಸಿಕ)
    2019-20 – 4.5% (ಎರಡನೇ ತ್ರೈಮಾಸಿಕ)

    https://twitter.com/AtharSky92/status/1200397500059803650