Tag: PM

  • ಪ್ರಧಾನಿ ಮೋದಿ ಈಗ ಬಂದಿಲ್ಲ, ಮುಂದೆ ಬರ್ತಾರೆ: ಪೇಜಾವರ ಶ್ರೀ

    ಪ್ರಧಾನಿ ಮೋದಿ ಈಗ ಬಂದಿಲ್ಲ, ಮುಂದೆ ಬರ್ತಾರೆ: ಪೇಜಾವರ ಶ್ರೀ

    ಉಡುಪಿ: ಚುನಾವಣೆ ಹಿನ್ನೆಲೆಯಲ್ಲಿ ನಗರಕ್ಕೆ ಪ್ರಚಾರ ಭಾಷಣ ಮಾಡಲು ಆಗಮಿಸಲಿರುವ ಮೋದಿ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ ಎನ್ನುವ ಮಾಹಿತಿ ಆರಂಭದಲ್ಲಿ ಲಭ್ಯವಾಗಿತ್ತು. ಆದರೆ ಕೊನೆಯಲ್ಲಿ ಈ ಕಾರ್ಯಕ್ರಮ ರದ್ದಾಗಿದ್ದು ಮುಂದೆ ಮೋದಿ ಕೃಷ್ಣ ಮಠಕ್ಕೆ ಯಾವಾಗ ಭೇಟಿ ನೀಡಲಿದ್ದಾರೆ ಎನ್ನುವ ವಿಚಾರವನ್ನು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಗಳು ತಿಳಿಸಿದ್ದಾರೆ.

    ಉಡುಪಿಗೆ ಬಂದಾಗ ಮಠಕ್ಕೆ ಬರಬೇಕೆಂದು ಪತ್ರ ಬರೆದಿದ್ದೆ. ಈ ಪತ್ರಕ್ಕೆ ಮೋದಿಯವರ ಆಪ್ತ ಕಾರ್ಯದರ್ಶಿಯವರು ನಮ್ಮ ಕಾರ್ಯದರ್ಶಿಗೆ ಕರೆ ಮಾಡಿ, ರಾಜಕೀಯ ಸಮಾವೇಶದ ನಡುವೆ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮೋದಿ ತಿಳಿಸಿದ್ದಾರೆ. ಮುಂದೊಂದು ದಿನ ಧಾರ್ಮಿಕ ಕಾರ್ಯಕ್ರಮವನ್ನೇ ನಿಗದಿಪಡಿಸಿ. ಈ ಕಾರ್ಯಕ್ರಮಕ್ಕೆ ಪ್ರಧಾನಿ ಆಗಮಿಸಲಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ ಎಂದು ಪೇಜಾವರ ಶ್ರೀ ಹೇಳಿದರು.

    ನಮ್ಮ ಪರ್ಯಾಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಲಾಗಿತ್ತು. ಪರ್ಯಾಯ ಸಂದರ್ಭದಲ್ಲೂ ಕೃಷ್ಣಮಠಕ್ಕೆ ಬಂದಿರಲಿಲ್ಲ. ಪ್ರಧಾನಿ ಬರಲಿಲ್ಲವೆಂದು ನಮಗೆ ಬೇಸರವಿಲ್ಲ. ಚುನಾವಣೆ ಸಂದರ್ಭ ದೇವರ ಅನುಗ್ರಹವಾಗುತ್ತದೆ ಉಡುಪಿಯವರೆಗೆ ಬಂದವರು ಈ ಬಾರಿಯಾದರೂ ಮಠಕ್ಕೆ ಬರುವಂತೆ ಪತ್ರ ಬರೆದಿದ್ದೆ ಎಂದು ತಿಳಿಸಿದರು.

    ಪ್ರಣಬ್ ಮುಖರ್ಜಿ ಕರೆಯದೆ ಮಠಕ್ಕೆ ಬಂದಿದ್ದರು. ಏನೇ ಆಗಲಿ ಮಂತ್ರಿಗಳು ಬರುತ್ತಾರೆ ಹೋಗುತ್ತಾರೆ. ಜನರ ಕೆಲಸ ಆಗದಿದ್ದರೆ ನಮಗೆ ಬೇಸರವಾಗುತ್ತದೆ. ಮಠಕ್ಕೆ ಬಂದಿಲ್ಲವೆಂದು ಬೇಸರಪಟ್ಟುಕೊಳ್ಳುವುದಿಲ್ಲ ಎಂದು ಹೇಳಿದರು.

  • ನಾನು ಪಕ್ಕ ಲೋಕಲ್, ಬಿಜೆಪಿಯಲ್ಲಿ ನಾಯಕರು ಇಲ್ವಾ: ಸಿಎಂ ಪ್ರಶ್ನೆ

    ನಾನು ಪಕ್ಕ ಲೋಕಲ್, ಬಿಜೆಪಿಯಲ್ಲಿ ನಾಯಕರು ಇಲ್ವಾ: ಸಿಎಂ ಪ್ರಶ್ನೆ

    ಬೆಂಗಳೂರು: ನಾನು ಪಕ್ಕ ಲೋಕಲ್ ಕರ್ನಾಟಕ ಬಿಜೆಪಿಯಲ್ಲಿ ನಾಯಕರು ಇಲ್ವಾ ಎಂದು ಸಿಎಂ ಸಿದ್ದರಾಮಯ್ಯನವರು ರಾಜ್ಯ ಬಿಜೆಪಿಯನ್ನು ಪ್ರಶ್ನೆ ಮಾಡಿದ್ದಾರೆ.

    ಪ್ರಚಾರಕ್ಕೆಂದು ಮೋದಿ, ಯೋಗಿ ಅವರನ್ನು ಆಮದು ಮಾಡುತ್ತಿದೆ. ಸಿಎಂ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ ಅವರನ್ನೇ ಬಿಜೆಪಿ ಡಮ್ಮಿ ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಬರುತ್ತಾರೆ ಹೋಗುತ್ತಾರೆ. ಆದರೆ ಇಲ್ಲಿ ಸಿದ್ದರಾಮಯ್ಯ ವರ್ಸಸ್ ಬಿಎಸ್‍ವೈ ನಡುವೆ ಫೈಟ್ ಇದ್ದು ಯಾರು ಜಯಗಳಿಸುತ್ತಾರೆ ಎನ್ನುವುದು ನಿಮಗೆ ಗೊತ್ತಿದೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    2008 ರಿಂದ 2012 ರ ವರೆಗೆ ಗಣಿ ಲೂಟಿ ಮಾಡಿದ ರೆಡ್ಡಿ ಬ್ರದರ್ಸ್ ಬಿಎಸ್‍ವೈರನ್ನ ಕೈಗೊಂಬೆ ಮಾಡಿಕೊಂಡಿದ್ದರು. ಬಳ್ಳಾರಿ ರಿಪಬ್ಲಿಕ್ ಮಾಡಿದ್ದರು. ಶಾಸಕರನ್ನ ಆಪರೇಷನ್ ಕಮಲದ ಮೂಲಕ ಖರೀದಿ ಮಾಡಿ ರೆಸಾರ್ಟ್‍ನಲ್ಲಿಟ್ಟಿದ್ದರು. ಇದರಿಂದಾಗಿ ಕರ್ನಾಟಕಕ್ಕೆ ಭ್ರಷ್ಟ ರಾಜ್ಯ ಎಂಬ ಹಣೆಪಟ್ಟಿ ಬಂದಿತ್ತು. ಈಗ ಮತ್ತೆ ಕರ್ನಾಟಕದಲ್ಲಿ ಲೂಟಿ ಮಾಡಲು ಬರುತ್ತಿದ್ದಾರೆಂದು ಆರೋಪಿಸಿ ಸಿಎಂ ಟ್ವೀಟ್ ಮಾಡಿದ್ದಾರೆ.

  • ರಾಹುಲ್ ಬಾರದ ಕೃಷ್ಣಮಠಕ್ಕೆ ಮೋದಿ ಭೇಟಿ – ಮೇ 1 ರಂದು ಉಡುಪಿಗೆ ಪ್ರಧಾನಿ

    ರಾಹುಲ್ ಬಾರದ ಕೃಷ್ಣಮಠಕ್ಕೆ ಮೋದಿ ಭೇಟಿ – ಮೇ 1 ರಂದು ಉಡುಪಿಗೆ ಪ್ರಧಾನಿ

    ಉಡುಪಿ: ಪ್ರಧಾನಿ ನರೇಂದ್ರ ಮೋದಿ ಮೇ 1 ರಂದು ಉಡುಪಿಗೆ ಆಗಮಿಸಲಿದ್ದಾರೆ. ಪ್ರಧಾನಿಯಾದ ನಂತರ ಮೊದಲ ಬಾರಿಗೆ ಉಡುಪಿಗೆ ಬರುತ್ತಿರುವ ಮೋದಿ, ಮೊದಲು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ಮುಖ್ಯಪ್ರಾಣ ದೇವರ ದರ್ಶನಗೈಯ್ಯಲಿದ್ದಾರೆ.

    ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ ಪರ್ಯಾಯ ಪಲಿಮಾರುಶ್ರೀ, ಮತ್ತು ಪೇಜಾವರ ಶ್ರೀಗಳ ಆಶೀರ್ವಾದ ಪಡೆದು ಮಾತುಕತೆ ಮಾಡಲಿದ್ದಾರೆ. ನಂತರ ಎಂಜಿಎಂ ಕಾಲೇಜಿನ ಮೈದಾನದ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ 1 ಲಕ್ಷ ಜನ ಸೇರುವ ನಿರೀಕ್ಷೆಯಿದ್ದು, 20 ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರು ಮತ್ತು ಮತದಾರರನ್ನು ಸೆಳೆಯುವ ಉದ್ದೇಶವನ್ನು ಬಿಜೆಪಿ ಇಟ್ಟುಕೊಂಡಿದೆ.

    ಉಡುಪಿಯಲ್ಲಿ ಈ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾಹಿತಿ ನೀಡಿದ್ದಾರೆ. ತಿಂಗಳ ಹಿಂದೆ ಜನಾಶೀರ್ವಾದ ಯಾತ್ರೆ ಮಾಡಿದ್ದ ರಾಹುಲ್ ಗಾಂಧಿ ಮತ್ತು ಸಿಎಂ ಸಿದ್ದರಾಮಯ್ಯ ಉಡುಪಿಗೆ ಬಂದ್ರೂ ಮಠದಿಂದ ದೂರವಿದ್ದರು. ಕಾಪು ತಾಲೂಕಿಗೆ ಭೇಟಿ ಕೊಟ್ಟಿದ್ದ ರಾಹುಲ್ ಗಾಂಧಿ, ಕೃಷ್ಣಮಠಕ್ಕೆ ಬಂದಿರಲಿಲ್ಲ. ರಾಹುಲ್ ಭೇಟಿಯನ್ನು ಸಿಎಂ ಸಿದ್ದರಾಮಯ್ಯ ತಪ್ಪಿಸಿದ್ದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಠಕ್ಕೆ ಈ ಹಿಂದೆಯೇ ಬಂದಿದ್ದಾರೆ. ಈ ಬಾರಿ ಮೋದಿ ಮಠಕ್ಕೆ ಭೇಟಿ ನೀಡಿ ಗೆಲುವಿನ ಚುನಾವಣಾ ಪ್ರಚಾರಕ್ಕೆ ಇಲ್ಲಿಂದಲೇ ಚಾಲನೆ ಕೊಡಲಿದ್ದಾರೆ ಎಂದರು.

     

    ಮೊಗವೀರ ಮುಖಂಡ ಯಶ್ ಪಾಲ್ ಸುವರ್ಣ ಮಾತನಾಡಿ, ಈ ಬಾರಿ ಧರ್ಮದ ಮತ್ತು ಅಧರ್ಮದ ನಡುವಿನ ಯುದ್ಧ. ನಾವು ಧರ್ಮದ ಪರವಾಗಿದ್ದೇವೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಅಧರ್ಮದ ಪರವಾಗಿದ್ದಾರೆ. ಉಡುಪಿಗೆ ಆರು ಬಾರಿ ಬಂದರೂ ಮಠಕ್ಕೆ ಬಾರದ ಸಿದ್ದರಾಮಯ್ಯ ನೇತೃತ್ವದ ಪಕ್ಷಕ್ಕೆ ರಾಜ್ಯದಲ್ಲೇ ಗೆಲುವು ಸಿಗುವುದಿಲ್ಲ ಎಂದರು.

    ಈ ಮೂಲಕ ಕಾಂಗ್ರೆಸ್ ಗೆ ಟಾಂಗ್ ಕೊಡಲು ಬಿಜೆಪಿ ಸಿದ್ಧತೆ ಮಾಡಿದೆ. ಮಠದ ಭಕ್ತರ, ಕರಾವಳಿಯ ಮತದಾರರ ಸೆಳೆಯಲು ಬಿಜೆಪಿ ಪ್ಲಾನ್ ರೂಪಿಸಿದೆ. ತಿಂಗಳ ಹಿಂದೆ ಕೃಷ್ಣಮಠಕ್ಕೆ ಅಮಿತ್ ಶಾ ಬಂದಿದ್ದರು. ಸಿದ್ದರಾಮಯ್ಯ, ರಾಹುಲ್ ಗಾಂಧಿ ಉಡುಪಿಗೆ ಬಂದಿದ್ದರೂ ಕೃಷ್ಣಮಠಕ್ಕೆ ಭೇಟಿ ನೀಡದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯ ಮಠ ಭೇಟಿ ಬಿಜೆಪಿಗೆ ಪ್ಲಸ್ ಆಗಬಹುದು ಅಭಿಪ್ರಾಯ ರಾಜಕೀಯ ವಲಯದಲ್ಲಿ ಕೇಳಿಬಂದಿದೆ.

  • ಅಮೆರಿಕದಲ್ಲಿ ಪಾಕ್ ಪ್ರಧಾನಿಯ ಕೋಟ್ ತೆಗೆದು ತಪಾಸಣೆ

    ಅಮೆರಿಕದಲ್ಲಿ ಪಾಕ್ ಪ್ರಧಾನಿಯ ಕೋಟ್ ತೆಗೆದು ತಪಾಸಣೆ

    ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಶಹೀದ್ ಖಾಕಾನ್ ಅಬ್ಬಾಸಿ ಅವರನ್ನು ಅಮೆರಿಕದ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಕೋಟ್ ತೆಗೆದು ತಪಾಸಣೆ ನಡೆಸಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಪ್ರಧಾನಿ ಶಾಹಿದ್ ಅಬ್ಬಾಸಿಯವರನ್ನು ನ್ಯೂಯಾರ್ಕ್ ನಲ್ಲಿರುವ ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣದಲ್ಲಿ ಕೋಟು ತೆಗೆಸಿ ತಪಾಸಣೆ ಮಾಡುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸುದ್ದಿ ಪ್ರಕಟಗೊಂಡ ಬಳಿಕ ಪಾಕ್ ಮಾಧ್ಯಮಗಳು ಅಮೆರಿಕವನ್ನು ತರಾಟೆಗೆ ತೆಗೆದುಕೊಂಡಿದ್ದು, ಪ್ರಧಾನಿ ಅಬ್ಬಾಸಿ ಅವರನ್ನು ಅಮೆರಿಕ ಸರ್ಕಾರ ಅವಮಾನಿಸಿದೆ ಎಂದು ಬರೆದುಕೊಂಡಿವೆ.

    ಆಗಿದ್ದು ಏನು?
    ಕಳೆದ ವಾರದಂದು ಅಬ್ಬಾಸಿ ತಮ್ಮ ಸಹೋದರಿಯನ್ನು ಭೇಟಿ ಮಾಡಲು ಅಮೆರಿಕಗೆ ಭೇಟಿ ನೀಡಿದ್ದರು. ಖಾಸಗಿ ವಿಮಾನದಲ್ಲಿ ಪ್ರಯಾಣಿಸಿದ್ದ ಅಬ್ಬಾಸಿಯನ್ನು ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಕೋಟ್ ತೆಗೆದು ತಪಾಸಣೆ ನಡೆಸಿದ್ದರು. ಅಬ್ಬಾಸಿ ಕೋಟನ್ನು ಹೆಗಲಿಗೆ ಹಾಕಿಕೊಂಡು ಒಂದು ಕೈಯಲ್ಲಿ ಸೂಟ್‍ಕೇಸ್ ಹಿಡಿದು ತಪಾಸಣೆಗೆ ಒಳಪಟ್ಟಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ವಿಶೇಷ ಏನೆಂದರೆ ಈ ಭೇಟಿ ವೇಳೆ ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಕೂಡಾ ಅಬ್ಬಾಸಿ ಭೇಟಿ ಮಾಡಿದ್ದರು.

    ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ಪಾಕಿಸ್ತಾನ ಮತ್ತು ಅಮೆರಿಕ ನಡುವಿನ ಸಂಬಂಧ ಹದಗೆಟ್ಟಿದೆ. ಪಾಕ್ ಉಗ್ರರಿಗೆ ಬೆಂಬಲ ನೀಡುತ್ತಿದೆ ಎಂದು ಟ್ರಂಪ್ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿ ನವಾಜ್ ಶರೀಫ್ ಪ್ರಧಾನಿ ಹುದ್ದೆಯನ್ನು ತೊರೆದ ಬಳಿಕ ಅವರ ಸಹೋದರ ಅಬ್ಬಾಸಿ ಅಧಿಕಾರಕ್ಕೇರಿದ್ದರು.

  • ರಾಹುಲ್ ಗಾಂಧಿ ಪ್ರಧಾನಿ ಆಗೋದನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ – ಸಿಎಂ

    ರಾಹುಲ್ ಗಾಂಧಿ ಪ್ರಧಾನಿ ಆಗೋದನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ – ಸಿಎಂ

    ನವದೆಹಲಿ: ರಾಹುಲ್ ಗಾಂಧಿ ಪ್ರಧಾನಿ ಆಗೋದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಅಂತ ಅಖಿಲ ಭಾರತೀಯ ಕಾಂಗ್ರೆಸ್ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡಿದ್ದಾರೆ.

    ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಧಿವೇಶನದಲ್ಲಿ ಮಾತನಾಡಿದ ಸಿಎಂ, ರಾಹುಲ್ ಯುವಕರು, ದೂರದೃಷ್ಟಿಯುಳ್ಳವರು. ಮೇಲಾಗಿ ರಾಹುಲ್ ಗಾಂಧಿ ಪ್ರಜಾಪ್ರಭುತ್ವವಾದಿ. ಅವರು ಪ್ರಧಾನಿ ಆಗೋದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ರು.

    ನಮ್ಮದು ನುಡಿದಂತೆ ನಡೆದ ಸರ್ಕಾರ. ಅನ್ನಭಾಗ್ಯ ಯೋಜನೆ ಜನರ ಬಳಿ ತಲುಪಿದೆ. ಯೋಜನೆ ಮೂಲಕ ಹಸಿವು ಮುಕ್ತ ರಾಜ್ಯ ಮಾಡುತ್ತಿದ್ದೇವೆ. ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ನಮ್ಮದು ಕರ್ನಾಟಕ ಮಾಡೆಲ್ ಸರ್ಕಾರ ಎಂದರು.

    ಬೇರೆಯವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅಂತಿದ್ರೆ ನಾವು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಜಾರಿಗೆ ತಂದಿದ್ದೇವೆ. ಲೋಕಸಭಾ ಚುನಾವಣೆಗೆ ಕರ್ನಾಟಕ ವಿಧಾನಸಭಾ ಚುನಾವಣೆ ದಿಕ್ಸೂಚಿಯಾಗಲಿದೆ ಅಂತ ಹೇಳಿದ್ರು.

  • ರಸ್ತೆ ಅಪಘಾತದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗಳೊಂದಿಗೆ ಬಿಜೆಪಿ ಶಾಸಕ ದುರ್ಮರಣ- ಮೋದಿ ಸಂತಾಪ

    ರಸ್ತೆ ಅಪಘಾತದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗಳೊಂದಿಗೆ ಬಿಜೆಪಿ ಶಾಸಕ ದುರ್ಮರಣ- ಮೋದಿ ಸಂತಾಪ

    ಲಕ್ನೋ: ಉತ್ತರ ಪ್ರದೇಶದ ಸೀತಾಪುರ್ ನಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಬಿಜ್ನೋರ್ ನೂರ್ಪುರ್ ಕ್ಷೇತ್ರದ ಬಿಜೆಪಿ ಶಾಸಕರೊಬ್ಬರು ಮೃತಪಟ್ಟ ಘಟನೆ ಬುಧವಾರ ನಡೆದಿದೆ.

    ಕಾರು ಮತ್ತು ಟ್ರಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಶಾಸಕ ಲೋಕೇಂದ್ರ ಸಿಂಗ್(41) ಮೃತಪಟ್ಟಿದ್ದಾರೆ. ಅಲ್ಲದೇ ಘಟನೆಯಲ್ಲಿ ಶಾಸಕರ ಇಬ್ಬರು ಭದ್ರತಾ ಸಿಬ್ಬಂದಿಗಳು ಕೂಡ ದುರ್ಮರಣಕ್ಕೀಡಾಗಿದ್ದಾರೆ. ಘಟನೆಯಲ್ಲಿ ಟ್ರಕ್ ಚಾಲಕ ಸಹ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ಬಿಜ್ನೋರ್ ಜಿಲ್ಲೆಯ ಧಾಂಪುರ್ ನಿವಾಸಿಯಾಗಿರೋ ಶಾಸಕ ಸಿಂಗ್ ಅವರು 2012ನೇ ಇಸವಿಯಲ್ಲಿ ನೂರ್ಪುರ್ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಆಯ್ಕೆಯಾಗಿದ್ದರು. ಆ ಬಳಿಕ ಮತ್ತೆ 2017ರಲ್ಲಿ ಚುನಾವಣೆಯಲ್ಲಿ ಗೆದ್ದಿದ್ದರು. ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಲೋಕೇಂದ್ರ ಸಿಂಗ್ ಅಗಲಿದ್ದಾರೆ.

    ಶಾಸಕರ ಅಕಾಲಿಕ ಮರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಸಿಂಗ್ ಅವರ ಸಮಾಜ ಸೇವೆ ಹಾಗೂ ಉತ್ತರಪ್ರದೇಶದಲ್ಲಿ ಬಿಜೆಪಿಯ ಬೆಳವಣಿಗೆಯಲ್ಲಿ ಅವರು ವಹಿಸಿದ್ದ ಪಾತ್ರವನ್ನ ಎಂದಿಗೂ ಸ್ಮರಿಸುತ್ತೇವೆ ಅಂತ ಮೋದಿ ಟ್ವೀಟ್ ಮಾಡಿದ್ದಾರೆ.

  • ನಾಳೆ ಸಾಂಸ್ಕೃತಿಕ ನಗರಿಗೆ ಪ್ರಧಾನಿ ಆಗಮನ – ಆದ್ರೆ ಮೋದಿ ಕಾರ್ಯಕ್ರಮಕ್ಕೆ ಸಿಎಂಗಿಲ್ಲ ಆಹ್ವಾನ

    ನಾಳೆ ಸಾಂಸ್ಕೃತಿಕ ನಗರಿಗೆ ಪ್ರಧಾನಿ ಆಗಮನ – ಆದ್ರೆ ಮೋದಿ ಕಾರ್ಯಕ್ರಮಕ್ಕೆ ಸಿಎಂಗಿಲ್ಲ ಆಹ್ವಾನ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನಾಳೆ ಮೈಸೂರಿಗೆ ಆಗಮಿಸುತ್ತಿದ್ದು, ಸೋಮವಾರ ನಡೆಯಲಿರೋ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಆದ್ರೆ ಈ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿಲ್ಲ. ಹೀಗಾಗಿ ಪ್ರಧಾನಿ ಹಾಗೂ ಸಿಎಂ ನಡುವಿನ ಸಮರ ಮುಂದುವರೆದಿದ್ಯಾ ಎಂಬ ಪ್ರಶ್ನೆ ಮೂಡಿದೆ.

    ಮೈಸೂರಿನಲ್ಲಿ ಫೆಬ್ರವರಿ 19ರಂದು ಹಮ್ ಸಫರ್ ರೈಲು ಸೇರಿದಂತೆ ವಿವಿಧ ರೈಲ್ವೆ ಯೋಜನೆಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ. ಸರ್ಕಾರಿ ಕಾರ್ಯಕ್ರಮಲ್ಲಿ ಪ್ರಧಾನಿ ಮೋದಿ ಭಾಗವಹಿಸುತ್ತಿದ್ರೂ ಸಿಎಂ ಸಿದ್ದರಾಮಯ್ಯಗೆ ಇನ್ನೂ ಆಹ್ವಾನ ನೀಡಿಲ್ಲ.

    ಕೇಂದ್ರ ಸರ್ಕಾರದ ಆಧೀನದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಸಿಎಂ ತವರಲ್ಲೇ ಅವರಿಗೆ ಆಹ್ವಾನ ನೀಡಿಲ್ಲ. ಕಡೇ ಕ್ಷಣದಲ್ಲಿ ರೈಲ್ವೇ ಇಲಾಖೆಯಿಂದ ಸಿದ್ದರಾಮಯ್ಯಗೆ ಆಹ್ವಾನ ನೀಡ್ತಾರಾ ಎಂದು ಕಾದು ನೋಡಬೇಕಿದೆ.

    ಆದ್ರೆ ಮೋದಿ ಮೈಸೂರಿಗೆ ಬಂದಾಗ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಡಲು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಮೋದಿ ಸರ್ಕಾರಿ ಕಾರ್ಯಕ್ರಮಕ್ಕೆ ಆಗಮಿಸುತ್ತಿರೋದ್ರಿಂದ ಪ್ರೋಟೋಕಾಲ್ ಪ್ರಕಾರ ಸಿದ್ದರಾಮಯ್ಯ ಅವರೇ ಮೋದಿಯನ್ನ ಸ್ವತಃ ಬರಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗ್ತಿದೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮೋದಿಯನ್ನ ಸಿಎಂ ಬರಮಾಡಿಕೊಳ್ಳಲಿದ್ದಾರೆ.

    ಮೋದಿ ಅಧಿಕೃತ ಸರ್ಕಾರಿ ಕಾರ್ಯಕ್ರಮದ ಬಗ್ಗೆ ಸಿಎಂ ಕಚೇರಿಗೆ ಮಾಹಿತಿ ರವಾನೆಯಾಗಿದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 18ರಂದು ಭಾನುವಾರ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಇರಲಿದ್ದು, ಇಬ್ಬರು ದಿಗ್ಗಜರ ಮುಖಾಮುಖಿ ಭೇಟಿ ಕುತೂಹಲ ಮೂಡಿಸಿದೆ.

    https://www.youtube.com/watch?v=2MWLOA-Aw5I

  • ಮೀನೂಟ ತಿಂದುಬಂದ ಸಿಎಂ, ಉಪವಾಸದಲ್ಲೇ ಧರ್ಮಸ್ಥಳಕ್ಕೆ ಬಂದ ಮೋದಿ!

    ಮೀನೂಟ ತಿಂದುಬಂದ ಸಿಎಂ, ಉಪವಾಸದಲ್ಲೇ ಧರ್ಮಸ್ಥಳಕ್ಕೆ ಬಂದ ಮೋದಿ!

    ಮಂಗಳೂರು/ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮೋದಿ ಭೇಟಿಯ ಬೆನ್ನಲ್ಲೇ ಇದೀಗ ಕರಾವಳಿ ಕರ್ನಾಟಕ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಶುರುವಾಗಿದೆ.

    ಹೌದು. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಆದ್ರೆ ಅವರು ಮೀನು ಊಟ ಸೇವಿಸಿ ಬಳಿಕ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದರು ಎಂದು ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆದ್ರೆ ಈ ಕುರಿತು ಸಿಎಂ ಪ್ರತಿಕ್ರಿಯಿಸಿ, ದೇವರು ಮಾಂಸಾಹಾರ ತಿಂದು ಬರಬೇಡ ಅಂತ ಎಲ್ಲೂ ಹೇಳಿಲ್ಲ ಎಂದು ಬೇಡರ ಕಣ್ಣಪ್ಪನ ಉದಾಹರಣೆ ಕೊಟ್ಟು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು.

    ಇದೀಗ ಇಂದು ಪ್ರಧಾನಿ ನರೇಂದ್ರ ಮೋದಿಯವರು ಕೂಡ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಆದ್ರೆ ಅವರು ಪೂಜೆ ಮುಗಿಯುವವರೆಗೆ ಉಪವಾಸವಿದ್ದರು. ಅಲ್ಲದೇ ಪೂಜೆಯ ವೇಳೆ ಪಂಚೆ, ಶಲ್ಯ ಧರಿಸಿದ್ದರು. ಪೂಜೆಯ ಬಳಿಕ ಫಲಹಾರ ಸೇವಿಸಿ ಅಲ್ಲಿಂದ ಉಜಿರೆಯಲ್ಲಿ ನಡೆಯುತ್ತಿರೋ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ, ಮೋದಿ ಧರ್ಮಸ್ಥಳ ಭೇಟಿಯ ಪರ-ವಿರೋಧಗಳು ಇದೀಗ ಆರಂಭವಾಗಿದೆ.

    ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮೋದಿ ಹಾಗೂ ಸಿಎಂ ದೇವಸ್ಥಾನಕ್ಕೆ ಭೇಟಿ ನೀಡಿರುವ ರೀತಿಯ ಕುರಿತು ತೀವ್ರ ಚರ್ಚೆಗಳಾಗುತ್ತಿವೆ. ಉಪವಾಸ ಮಾಡಿ ದರ್ಶನ ಪಡೆದ ಮೋದಿ ಹಾಗು ಮೀನೂಟ ಸೇವಿಸಿ ದೇವಾಲಯದೊಳಗೆ ಪ್ರವೇಸಿದ ಸಿಎಂ, ಇವರಲ್ಲಿ ಯಾರು ಸಂಸ್ಕಾರವಂತರು ಎಂಬುವುದರ ಕುರಿತು ಭಾರೀ ಚರ್ಚೆಗಳಾಗುತ್ತಿವೆ.

    ಇನ್ನು ಈ ಸಂಬಂಧ ಬೆಂಗಳೂರಿನ ಎಲ್‍ಎಎಲ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರವಿಂದ ಲಿಂಬಾವಳಿ, ಪ್ರಧಾನಿ ಮೋದಿ ನಿಜವಾದ ಜನಸೇವಕ. ಅವರು ಧರ್ಮಸ್ಥಳ ಮಂಜುನಾಥನ ದರ್ಶನಕ್ಕಾಗಿ ದೆಹಲಿಯಿಂದಲೇ ಏನೂ ತಿನ್ನದೆ ಉಪವಾಸ ಬಂದಿದ್ರು. ಧರ್ಮಸ್ಥಳದ ಮಂಜುನಾಥಸ್ವಾಮಿ ದರ್ಶನವಾದ ಬಳಿಕವೇ ಪ್ರಧಾನಿ ಮೋದಿಯವರು ಉಪಹಾರ ಸೇವಿಸಿದ್ರು. ರಾಜ್ಯದ ಮುಖ್ಯಮಂತ್ರಿಗಳು ಏನು ಮಾಡಿದ್ರು ಅಂತ ನಿಮಗೆಲ್ಲಾ ತಿಳಿದಿದೆ. ಇದು ನಮ್ಮ ಪ್ರಧಾನಿ ಹಾಗೂ ರಾಜ್ಯದ ಮುಖ್ಯಮಂತ್ರಿಗಿರುವ ವ್ಯತ್ಯಾಸ ಅಂತ ಹೇಳಿದ್ದಾರೆ.

  • ಪ್ರಧಾನಿ ಮೋದಿ ಸ್ವಾಗತಕ್ಕೆ ಇನ್ಮುಂದೆ ಹೂಗುಚ್ಛ ನೀಡುವಂತಿಲ್ಲ- ಈ ವಸ್ತುಗಳನ್ನ ಮಾತ್ರ ನೀಡ್ಬಹುದು

    ಪ್ರಧಾನಿ ಮೋದಿ ಸ್ವಾಗತಕ್ಕೆ ಇನ್ಮುಂದೆ ಹೂಗುಚ್ಛ ನೀಡುವಂತಿಲ್ಲ- ಈ ವಸ್ತುಗಳನ್ನ ಮಾತ್ರ ನೀಡ್ಬಹುದು

     

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾರತದ ವಿವಿಧ ರಾಜ್ಯಗಳ ಪ್ರವಾಸದಲ್ಲಿ ತೊಡಗಿದಾಗ ಅವರನ್ನ ಸ್ವಾಗತಿಸಲು ಹೂಗುಚ್ಛ ಬಳಸದಂತೆ ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ.

    ಹೂಗುಚ್ಛದ ಬದಲು ಪ್ರಧಾನಿ ಮೋದಿಗೆ ಒಂದು ಹೂ ಜೊತೆಗೆ ಖಾದಿ ಕರವಸ್ತ್ರ ಅಥವಾ ಪುಸ್ತಕ ನೀಡಿ ಅವರನ್ನು ಸ್ವಾಗತಿಸಬಹುದು ಎಂದು ಹೇಳಿದೆ. ಈ ಸೂಚನೆಯನ್ನು ಎಲ್ಲಾ ರಾಜ್ಯಗಳು ಹಾಗು ಕೇಂದ್ರಾಡಳಿತ ಪ್ರದೇಶಗಳು ಪಾಲಿಸಬೇಕು ಎಂದು ಹೇಳಿದೆ. ಈ ಸೂಚನೆಯನ್ನು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ.

    ಜೂನ್ 17ರಂದು ಕೇರಳದಲ್ಲಿ ಪಿಎನ್ ಪಣಿಕ್ಕರ್ ನ್ಯಾಷನಲ್ ರೀಡಿಂಗ್ ಡೇ ಗೆ ಚಾಲನೆ ನೀಡಿ ಮಾತನಾಡಿದ್ದ ಪ್ರಧಾನಿ ಮೋದಿ, ಜನರು ಸ್ವಾಗತ ಕೋರಲು ಹೂಗುಚ್ಛದ ಬದಲು ಪುಸ್ತಕ ನೀಡಬೇಕೆಂದು ಕೇಳಿಕೊಳ್ಳುತ್ತೇನೆ. ಇದರಿಂದ ದೊಡ್ಡ ಬದಲಾವಣೆಯಾಗಬಹುದು ಎಂದು ಹೇಳಿದ್ದರು. ಅಲ್ಲದೆ ಸಾಕ್ಷರತೆಯ ವಿಷಯದಲ್ಲಿ ಕೇರಳ ಇಡೀ ದೇಶಕ್ಕೆ ಸ್ಫೂರ್ತಿಯಾಗಿದೆ. ಓದುವುದಕ್ಕಿಂತ ದೊಡ್ಡ ಖುಷಿ ಬೇರೊಂದಿಲ್ಲ. ಹಾಗೂ ಜ್ಞಾನಕ್ಕಿಂತ ಮಿಗಿಲಾದ ಶಕ್ತಿ ಮತ್ತೊಂದಿಲ್ಲ ಎಂದು ಹೇಳಿದ್ದರು.

    ಜೂನ್ 25ರ ಮನ್ ಕೀ ಬಾತ್ ಕಾರ್ಯಕ್ರಮದಲ್ಲೂ ಕೂಡ ಮೋದಿ ಹೂಗುಚ್ಛಗಳ ಕೊಡುಕೊಳುಗೆಯನ್ನು ನಿಲ್ಲಿಸಿ ಖಾದಿ ಉತ್ಪನ್ನಗಳನ್ನು ಉಡುಗೊರೆಯಾಗಿ ನೀಡುವಂತೆ ಹೇಳಿದ್ದರು. ಒಂದು ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗುವ ಅವಕಾಶ ನನಗೆ ಸಿಕ್ಕಿತ್ತು. ಅವರು ಹೂಗುಚ್ಛಗಳ ಬದಲಾಗಿ ಪುಸ್ತಕವನ್ನ ಉಡುಗೊರೆಯಾಗಿ ನೀಡ್ತೀವಿ ಅಂದ್ರು. ನನಗದು ಇಷ್ಟವಾಯಿತು ಎಂದು ಮೋದಿ ಹೇಳಿದ್ದರು.

  • ಮೋದಿಗೆ ನೆದರ್ಲ್ಯಾಂಡ್ಸ್ ಪ್ರಧಾನಿ ಕೊಟ್ಟ ಗಿಫ್ಟ್ ಏನು ಗೊತ್ತಾ?

    ಮೋದಿಗೆ ನೆದರ್ಲ್ಯಾಂಡ್ಸ್ ಪ್ರಧಾನಿ ಕೊಟ್ಟ ಗಿಫ್ಟ್ ಏನು ಗೊತ್ತಾ?

    ನವದೆಹಲಿ: ಪ್ರಧಾನಿ ಮೋದಿ ಮೂರು ದೇಶಗಳ ಪ್ರವಾಸ ಮುಗಿಸಿ ಬುಧವಾರದಂದು ಭಾರತಕ್ಕೆ ವಾಪಸ್ಸಾಗಿದ್ದಾರೆ.

    ಮೋದಿ ಭಾರತಕ್ಕೆ ಮರಳುವಾಗ ಒಂದು ಸೈಕಲ್ ಕೂಡ ಜೊತೆಯಲ್ಲಿ ತಂದಿದ್ದಾರೆ. ನೆದರ್ಲ್ಯಾಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆ ಮೋದಿಗೆ ಈ ಸೈಕಲ್ ಉಡುಗೊರೆಯಾಗಿ ನೀಡಿದ್ದಾರೆ. ಹೊಸ ಸೈಕಲ್‍ನೊಂದಿಗೆ ತೆಗೆಸಿಕೊಂಡಿರೋ ಫೋಟೋವನ್ನ ಮೋದಿ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದು ಮಾರ್ಕ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

    ತಿಳಿ ನೀಲಿ ಬಣ್ಣದ ಈ ಬಟಾವಸ್ ಸೈಕಲ್‍ನಲ್ಲಿ ಮುಂಭಾಗದಲ್ಲಿರುವ ಎಲ್‍ಇಡಿ ದೀಪವಿದ್ದು, ಇದನ್ನು ಬೆಳಗಿಸಲು ನೆರವಾಗುವಂತೆ ಡೈನಮೋ ಅಳವಡಿಸಲಾಗಿದೆ.

    ನೆದರ್ಲ್ಯಾಂಡ್ಸ್ ನಲ್ಲಿ ಹೆಚ್ಚಾಗಿ ಜನ ಸಾರಿಗೆಗೆ ಸೈಕಲ್ ಬಳಸುತ್ತಾರೆ. ಅಂಕಿ ಅಂಶದ ಪ್ರಕಾರ ಶೇ. 36ರಷ್ಟು ಜನ ಸೈಕಲ್ ಬಳಸಲು ಇಷ್ಟಪಡುತ್ತಾರೆ ಎಂದು ವರದಿಯಾಗಿದೆ. ಅಲ್ಲದೆ ಸ್ವತಃ ಅಲ್ಲಿನ ಪ್ರಧಾನಿ ಮಾರ್ಕ್ ಕೂಡ ಕಚೇರಿಗೆ ಹೋಗಲು ಸೈಕಲ್ ಬಳಸುತ್ತಾರೆಂದು ವರದಿಯಾಗಿದೆ.

    ಮೋದಿ ಪೋರ್ಚುಗಲ್, ಅಮೆರಿಕ ಹಾಗೂ ನೆದರ್ಲ್ಯಾಂಡ್ಸ್ ಗೆ ಭೇಟಿ ನೀಡಿ ಇಂದು ವಾಪಸ್ಸಾಗಿದ್ದಾರೆ. ಇದೇ ಮೊದಲ ಬಾರಿಗೆ ವೈಟ್‍ಹೌಸ್‍ಗೆ ಭೇಟಿ ನೀಡಿದ ಮೋದಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗಾಗಿ ಸುಂದರ ಕೆತ್ತನೆಯುಳ್ಳ ಮರದ ಪೆಟ್ಟಿಗೆಯನ್ನ ಉಡುಗೊರೆಯಾಗಿ ನೀಡಿದ್ರು. ಹಾಗೆ ಮೆಲಾನಿಯಾ ಟ್ರಂಪ್‍ಗಾಗಿ ಕಾಶ್ಮೀರಿ ಶಾಲ್, ಹಿಮಾಚಲ ಪ್ರದೇಶದ ಬೆಳ್ಳಿ ಬ್ರೇಸ್‍ಲೆಟ್, ಟೀ ಹಾಗೂ ಜೇನುತುಪ್ಪವನ್ನ ಉಡುಗೊರೆಯಗಿ ನೀಡಿದ್ದಾರೆ.